ನಾನು ಮೆಚ್ಚಿದ ವಾಟ್ಸಪ್

Saturday, January 18, 2020

ಇಂದಿನ ಇತಿಹಾಸ History Today ಜನವರಿ 18

2020: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಾದ್ಯಂತ ಎಲ್ಲ ಸ್ಥಳೀಯ ಪೂರ್ವ ಪಾವತಿ (ಪ್ರಿಪೆಯ್ಡ್) ಮೊಬೈಲ್ಗಳಲ್ಲಿ ಕ್ಷಿಪ್ರ ಮಾಹಿತಿ ಸೇವೆ (ಎಸ್ ಎಂಎಸ್) ಮತ್ತು ಧ್ವನಿ ಕರೆ (ವಾಯ್ಸ್ ಕಾಲ್) ಸವಲತ್ತುಗಳನ್ನು 2020 ಜನವರಿ 18ರ ಶನಿವಾರ  ಪುನಃಸ್ಥಾಪನೆ ಮಾಡಲಾಯಿತು  ಎಂದು ಸರ್ಕಾರಿ ವಕ್ತಾರ ರೋಹಿತ್ ಕಂಸಲ್ ಅವರು ಜಮ್ಮುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಕಾಶ್ಮೀರದ ಕೆಲವು ಪ್ರದೇಶಗಳಿಗೆ ಪೋಸ್ಟ್ ಪೆಯ್ಡ್ ಮೊಬೈಲ್ ಬಳಕೆದಾರರಿಗೆ ೨ಜಿ ಮೊಬೈಲ್ ಡಾಟಾ ವಿಸ್ತರಿಸಲಾಗಿದೆ ಎಂದೂ ಅವರು ನುಡಿದರು. ಎಚ್ಚರಿಕೆಯ ಪುನರ್ ಪರಿಶೀಲನೆ ಬಳಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪ್ರಿನ್ಸಿಪಲ್ ಕಾರ್ಯದರ್ಶಿಯೂ ಆಗಿರುವ ಕಂಸಲ್ ಹೇಳಿದರು.  ಜಮ್ಮು, ಕುಪ್ವಾರ, ಕಾಶ್ಮೀರ ವಿಭಾಗದ ಬಂಡಿಪೋರಾದ ಒಟ್ಟು ೧೦ ಜಿಲ್ಲೆಗಳ ಶ್ವೇತ ಪಟ್ಟಿಯ (ವೈಟ್ ಲಿಸ್ಟೆಡ್) 153  ವೆಬ್ಸೈಟ್ ಸಂಪರ್ಕ ಪಡೆಯಲು ಪೋಸ್ಟ್ ಪೆಯ್ಡ್ ಮೊಬೈಲ್ಗಳಲ್ಲಿ ಜಿ ಮೊಬೈಲ್ ಡಾಟಾಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಡಗಮ್, ಗಂದೇರ್ ಬಲ್, ಬಾರಾಮುಲ್ಲಾ, ಶ್ರೀನಗರ, ಕುಲಗಮ್, ಅನಂತನಾಗ್, ಶೋಪಿಯಾನ್ ಮತ್ತು ಪುಲ್ವಾಮದಲ್ಲಿ ಮೊಬೈಲ್ ಇಂಟರ್ ನೆಟ್ ಅಮಾನತಿನಲ್ಲಿ ಇರುತ್ತದೆ ಎಂದು ಕಂಸಲ್ ವಿವರಿಸಿದರು. ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಪುನರ್ ಪರಿಶೀಲನೆ ಮಾಡುವಂತೆ ಸುಪ್ರೀಂಕೋರ್ಟ್  ಆದೇಶ ನೀಡಿದ ಕೆಲ ದಿನಗಳ ಬಳಿಕ ಆಡಳಿತವು ಜಮ್ಮು ಪ್ರದೇಶದ ಭಾಗಗಳಲ್ಲಿ ಅಗತ್ಯ ಸೇವೆ ಒದಗಿಸುತ್ತಿರುವ ಸಂಸ್ಥೆಗಳಲ್ಲಿ ಮೊಬೈಲ್ ಇಂಟರ್ ನೆಟ್ ಮತ್ತು ಬ್ರಾಡ್ ಬ್ಯಾಂಡ್ ಸವಲತ್ತು ಕಲ್ಪಿಸಿತ್ತು.  (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2020: ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತೀಯ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುತ್ತದೆ ಎಂಬುದನ್ನು ಸಾಬೀತುಪಡಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ  2020 ಜನವರಿ 18ರ ಶನಿವಾರ ಇಲ್ಲಿ ಸವಾಲು ಎಸೆದ ಕೇಂದ್ರ ಗೃಹ ಸಚಿವ ಅಮಿತ್ ಶಾ, ’ಯಾರು ಎಷ್ಟೇ ವಿರೋಧಿಸಿದರೂ ಕಾಯ್ದೆಯನ್ನು ಜಾರಿಗೊಳಿಸಿಯೇ ಸಿದ್ಧಎಂದು ಘೋಷಿಸಿದರು. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ಕಾಯ್ದೆಯನ್ನು ಆಮೂಲಾಗ್ರ ಓದಿ ಎಂದು ರಾಹುಲ್ ಗಾಂಧಿ ಅವರಿಗೆ ಸೂಚಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಿರೋಧಿಸುವವರನ್ನುದಲಿತ ವಿರೋಧಿಗಳುಎಂಬುದಾಗಿ ಬಣ್ಣಿಸಿದ  ಶಾ, ’ರಾಹುಲ್ ಗಾಂಧಿಯವರು ಆಪಾದಿಸಿರುವಂತೆ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುವ ಒಂದೇ ಒಂದು ವಿಧಿ ಕೂಡಾ ಇಲ್ಲ ಎಂದು ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ನುಡಿದರು. ‘ನಾನು ರಾಹುಲ್ ಗಾಂಧಿ ಅವರಿಗೆ ಸವಾಲು ಎಸೆಯುತ್ತೇನೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಪೂರ್ಣವಾಗಿ ಓದಿ. ಭಾರತೀಯ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವ ಒಂದೇ ಒಂದು ವಿಧಿ ಲಭಿಸಿದರೆ... ನಮ್ಮ ಪ್ರಹ್ಲಾದ ಜೋಶಿಯವರು (ಸಂಸದೀಯ ವ್ಯವಹಾರಗಳ ಸಚಿವ) ನಿಮ್ಮೊಂದಿಗೆ ಚರ್ಚಿಸಲು ಸಿದ್ಧರಿದ್ದಾರೆಎಂದು ಶಾ ಹೇಳಿದರು. ಕಾಂಗ್ರೆಸ್ ಪಕ್ಷವು ಧರ್ಮದ ನೆಲೆಯಲ್ಲಿ ರಾಷ್ಟ್ರವನ್ನು ವಿಭಜಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಆಪಾದಿಸಿದರು. ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜನತಾದಳ (ಜಾತ್ಯತೀತ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಸಮಾಜವಾದಿ ಪಕ್ಷ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಮೂಲಕ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಾ ಕೇಂದ್ರ ಸರ್ಕಾರದ ಮಹತ್ವದ ಕಾರ್ಯಗಳನ್ನು ವಿರೋಧಿಸುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ದೂರಿದರು.  (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2020: ನವದೆಹಲಿ: ’ನಿರ್ಭಯಾ ಪ್ರಕರಣಎಂದೇ ಪರಿಚಿತವಾಗಿರುವ ದೆಹಲಿಯ ೨೩ರ ಹರೆಯದ ಫಿಸಿಯೋಥೆರಪಿ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಅಪರಾಧಿ ಅತ್ಯಾಚಾರಿಗಳನ್ನು ಕ್ಷಮಿಸುವಂತೆ  ಸಲಹೆ ಮಾಡಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರನ್ನು ಮೃತ ಯುವತಿಯ ತಾಯಿ ಆಶಾದೇವಿ ಅವರು  2020 ಜನವರಿ 18ರ ಶನಿವಾರ ಕಟುವಾಗಿ ತರಾಟೆಗೆ ತೆಗೆದುಕೊಂಡರು.  ನನಗೆ ಇಂತಹ ಸಲಹೆ ನೀಡಲು ಇಂದಿರಾ ಜೈಸಿಂಗ್ ಯಾರು? ಅಪರಾಧಿಗಳನ್ನು ಗಲ್ಲಿಗೆ ಏರಿಸಬೇಕು ಎಂದು ಇಡೀ ದೇಶವೇ ಬಯಸುತ್ತಿದೆ.  ಇಂತಹ ಸಲಹೆ ನೀಡಲು ಇಂದಿರಾ ಜೈಸಿಂಗ್ ಅವರಿಗೆ ಇಷ್ಟು ಧೈರ್ಯ ಹೇಗೆ ಬಂತು ಎಂಬ ನನಗೆ  ಅರ್ಥವಾಗುತ್ತಿಲ್ಲ. ಇದನ್ನು ನಂಬಲೂ ಆಗುತ್ತಿಲ್ಲ. ಸುಪ್ರೀಂಕೋರ್ಟಿನಲ್ಲಿ ಕಳೆದ ಹಲವಾರು ವರ್ಷಗಳಲ್ಲಿ ಬಹಳಷ್ಟು ಸಲ ನಾನು ಅವರನ್ನು ಭೇಟಿ ಮಾಡಿದ್ದೇನೆ.  ಒಂದು ಬಾರಿ ಕೂಡಾ ಆಕೆ ನನ್ನ ಯೋಗಕ್ಷೇಮ ವಿಚಾರಿಸಿಲ್ಲ. ಇಂದು ಈಕೆ ಅಪರಾಧಿಗಳ ಪರವಾಗಿ ಮಾತನಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ಅತ್ಯಾಚಾರಿಗಳನ್ನು ಬೆಂಬಲಿಸುವ ಮೂಲಕ ಜೀವನೋಪಾಯ ಕಂಡುಕೊಂಡಿದ್ದಾರೆ.  ಹೀಗಾಗಿಯೇ ಅತ್ಯಾಚಾರ ಘಟನೆಗಳು ನಿಲ್ಲುತ್ತಿಲ್ಲಎಂದು ಆಶಾದೇವಿ ಹೇಳಿದರು. ಟ್ವಿಟ್ಟರ್ ಮೂಲಕ ಆಶಾದೇವಿ ಅವರಿಗೆ ಅತ್ಯಾಚಾರಿ ಹಂತಕರನ್ನು ಕ್ಷಮಿಸುವಂತೆ ಮನವಿ ಮಾಡಿದ್ದ ಜೈಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಉದಾಹರಣೆಯನ್ನು ಉಲ್ಲೇಖಿಸಿದ್ದರು. ತಮ್ಮ ಪತಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕಿ ನಳಿನಿಯನ್ನು ಗಲ್ಲಿಗೆ ಏರಿಸಬೇಕೆಂದು ತಾವು ಬಯಸುವುದಿಲ್ಲ ಎಂದು ಸೋನಿಯಾಗಾಂಧಿ ಹೇಳಿದ್ದರು. ‘ಆಶಾದೇವಿ ಅವರ ನೋವನ್ನು ನಾನು ಸಂಪೂರ್ಣವಾಗಿ ಗುರುತಿಸುತ್ತೇನೆ. ಆದರೆ ನಳಿನಿಯನ್ನು ಕ್ಷಮಿಸಿ ಆಕೆಯನ್ನು ಗಲ್ಲಿಗೇರಿಸಲು ತಾನು ಬಯಸುವುದಿಲ್ಲ ಎಂಬುದಾಗಿ ಹೇಳಿದ ಸೋನಿಯಾ ಗಾಂಧಿಯವರ ಮಾದರಿಯನ್ನು ಆಶಾದೇವಿ ಅವರು ಅನುಸರಿಸಬೇಕು ಎಂದು ನಾನು ಆಗ್ರಹಿಸುತ್ತೇನೆಎಂದು ಇಂದಿರಾ ಜೈಸಿಂಗ್ ಟ್ವೀಟ್ ಮಾಡಿದ್ದರು. ‘ನಾವು ನಿಮ್ಮ ಜೊತೆಗೆ ಇದ್ದೇವೆ. ಆದರೆ ಮರಣದಂಡನೆಗೆ ವಿರುದ್ಧವಾಗಿದ್ದೇವೆಎಂದು ಜೈಸಿಂಗ್ ಟ್ವೀಟ್ನಲ್ಲಿ ತಿಳಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2020 ; ನವದೆಹಲಿ: ಮಹಾರಾಷ್ಟ್ರದ ರಾಯಗಡದ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ 2020 ಜನವರಿ 18ರ ಶನಿವಾರ ಸಂಭವಿಸಿದ ಅಪಘಾತ ಒಂದರಲ್ಲಿ ಖ್ಯಾತ ಬಾಲಿವುಡ್ ಚಿತ್ರ ನಟಿ ಶಬಾನಾ ಆಜ್ಮಿ ಗಂಭೀರವಾಗಿ ಗಾಯಗೊಂಡರು.  ಅವರ ಕಾರಿನ ಚಾಲಕ ಕೂಡಾ ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿದವು.  ಶಬಾನಾ ಆಜ್ಮಿ ಅವರ ಪತಿ ಜಾವೇದ್ ಅಖ್ತರ್ ಅವರು ಅಪಘಾತಕ್ಕೆ ಈಡಾದ ಕಾರಿನ ಹಿಂದಿನಿಂದಲೇ ಬರುತ್ತಿದ್ದ ಆಡಿ ಕಾರಿನಲ್ಲಿದ್ದರು ಎನ್ನಲಾಗಿದ್ದು ಅವರಿಗೆ ಯಾವುದೇ ಗಾಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.  ಮುಂಬೈಯಿಂದ ಸುಮಾರು ೬೦ ಕಿಮೀ ದೂರದ ಖಾಲಾಪುರದಲ್ಲಿ ಮಧ್ಯಾಹ್ನ .೩೦ರ ವೇಳೆಗೆ ಅಪಘಾತ ಸಂಭವಿಸಿದೆ. ಅಪಘಾತದ ಹೊತ್ತಿನಲ್ಲಿ ಕಾರು ಮುಂಬೈಯತ್ತ ಸಾಗುತ್ತಿತ್ತು. ೬೯ರ ಹರೆಯದ ನಟಿ ಶಬಾನಾ ಆಜ್ಮಿ ಅವರು ಪಯಣಿಸುತ್ತಿದ್ದ  ಟಾಟಾ ಸಫಾರಿ ಎಸ್ಯುವಿ ಕಾರು ಟ್ರಕ್ ಒಂದಕ್ಕೆ ಹಿಂದಿನಿಂದ ಗುದ್ದಿದ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ವರದಿ ಹೇಳಿತು. ಕಾರಿನಲ್ಲಿ ಚಾಲಕನ ಪಕ್ಕದ ಆಸನದಲ್ಲಿ ಕುಳಿತಿದ್ದ ಶಬಾನಾ ಆಜ್ಮಿ ಅವರನ್ನು ಇತರರ ನೆರವಿನಿಂದ ಹೊರತರಲಾಯಿತು. ಆಗ ಅವರ ಮುಖ ಮತ್ತು ಕಣ್ಣುಗಳು ಊದಿಕೊಂಡಿದ್ದವು. ಕತ್ತು ಮತ್ತು ಗಲ್ಲಕ್ಕೂ ಗಾಯಗಳಾಗಿದ್ದವು ಎಂದು ವರದಿಗಳು ಹೇಳಿದವು. ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎಸ್ಯುವಿ ಸಂಪೂರ್ಣ ಹಾನಿಯಾಗಿದೆ. ಕಾರಿನ ಬಾನೆಟ್ ಸಂಪೂರ್ಣವಾಗಿ ಪುಡಿಯಾಗಿರುವುದನ್ನು ರೇಡಿಯೇಟರ್ ಮತ್ತು ಬಾನೆಟ್ ಸಂಪೂರ್ಣ ಧ್ವಂಸಗೊಂಡಿರುವುದನ್ನು ಚಿತ್ರಗಳು ತೋರಿಸಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ) 



No comments:

Post a Comment