ನಾನು ಮೆಚ್ಚಿದ ವಾಟ್ಸಪ್

Sunday, January 12, 2020

ಇಂದಿನ ಇತಿಹಾಸ History Today ಜನವರಿ 12

2020: ನವದೆಹಲಿ: ಐಎನ್ಎಸ್ ವಿಕ್ರಮಾದಿತ್ಯ ವಿಮಾನ ವಾಹಕ ನೌಕೆಯಲ್ಲಿ ಹಗುರ ಯುದ್ಧ ವಿಮಾನದ (ಎಲ್ಸಿಎ) ನೌಕಾ ಆವೃತ್ತಿಯ ಮೂಲಮಾದರಿಯು ತನ್ನ ಚೊಚ್ಚಲ ಲ್ಯಾಂಡಿಂಗ್ ಮಾಡಿದ ಒಂದು ದಿನದ ಬಳಿಕ,  2020 ಜನವರಿ 12ರ ಭಾನುವಾರ ಈ ತಂತ್ರಜ್ಞಾನ ಪ್ರದರ್ಶಕ ವಿಮಾನವು ಭಾರತದ ಏಕೈಕ ವಿಮಾನವಾಹಕ ನೌಕೆಯಿಂದ ಮೊದಲ ಬಾರಿಗೆ ಗಗನಕ್ಕೆ ಹಾರಿತು ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದರುತನ್ನದೇ ಆದ ಡೆಕ್ ಆಧಾರಿತ ಸಮರ ವಿಮಾನಗಳ ಅಭಿವೃದ್ಧಿ ನಿಟ್ಟಿನಲ್ಲಿ   ಸಾಧನೆಯ ಭಾರತದ ಪಾಲಿಗೆ ಮಹತ್ವದ ಹೆಜ್ಜೆಯಾಗಿದೆ. "ಅಭಿವೃದ್ಧಿಶೀಲ  ಎಲ್ಸಿಎ (ಎನ್) ಎಂಕೆ ವಿಕ್ರಮಾದಿತ್ಯದಿಂದ ಮೊದಲ ಸ್ಕೀ ಜಂಪ್ ಟೇಕ್-ಆಫ್ನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ" ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿತು. ವಿಕ್ರಮಾದಿತ್ಯ ವಿಮಾನ ವಾಹಕವನ್ನು ಪ್ರಸ್ತುತ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿದೆ.  ಮುಂದಿನ ಎಂಟು ರಿಂದ ೧೦ ದಿನಗಳಲ್ಲಿ ಎಲ್ಸಿಎ (ನೌಕಾಪಡೆ ಆವೃತ್ತಿಯು) ೨೦ ಲ್ಯಾಂಡಿಂಗ್ ಮತ್ತು ಟೇಕ್ಆಫ್ಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಇದು ಟೇಕಾಫ್ ಮಾಡಲು ಸ್ಕೀ ಜಂಪ್ನ್ನು ಬಳಸುತ್ತದೆ.  ಹಗುರ ಯುದ್ಧ ವಿಮಾನದ ನೌಕಾ ಆವೃತ್ತಿಯು ಶನಿವಾರ ಮೊತ್ತ ಮೊದಲ ಬಾರಿಗೆ ಐಎನ್ಎಸ್ ವಿಕ್ರಮಾದಿತ್ಯ ವಿಮಾನವಾಹಕ ನೌಕೆಯಲ್ಲಿ ಇಳಿದಿತ್ತು. ವಿಶ್ವದಲ್ಲಿ ಅಮೆರಿಕ, ಇಂಗ್ಲೆಂಡ್, ರಷ್ಯಾ, ಫ್ರಾನ್ಸ್ ಮತ್ತು ಚೀನಾ - ಐದು ರಾಷ್ಟ್ರಗಳು ಮಾತ್ರವೇ ಡೆಕ್ ಮಾದರಿಯ ವಿಮಾನವಾಹಕ ನೌಕೆಗಳನ್ನು ನಿರ್ಮಿಸಿವೆ. ಇದೀಗ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಕೋಲ್ಕತ್ತಾ: ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಕೊಲ್ಕತ್ತಾ ಪೋರ್ಟ್ ಟ್ರಸ್ಟರನ್ನು ಭಾರತೀಯ ಜನ ಸಂಘದ (ಈಗಿನ ಭಾರತೀಯ ಜನತಾ ಪಕ್ಷಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಪೋರ್ಟ್ ಎಂಬುದಾಗಿ  2020 ಜನವರಿ 12ರ ಭಾನುವಾರ  ಮರುನಾಮಕರಣ ಮಾಡಿದರು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಮೂಲತಃ ಕೋಲ್ಕತ್ತದವರೇ ಆಗಿದ್ದಾರೆ.  ಈದಿನ  ಕೋಲ್ಕತ್ತಾ ಪೋರ್ಟ್ ಟ್ರಸ್ಟಿನ  ೧೫೦ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರು ಮಹತ್ವದ ನಿರ್ಧಾರವನ್ನು ಘೋಷಿಸಿದರು. ಡಾ. ಮುಖರ್ಜಿ ಅವರು ದಂತಕಥೆಯಾಗಿದ್ದು, ಅವರು ಅಭಿವೃದ್ಧಿಯ ನಾಯಕರಾಗಿದ್ದರು ಮತ್ತುಏಕ ರಾಷ್ಟ್ರ, ಏಕ ಸಂವಿಧಾನಕಲ್ಪನೆಗಾಗಿ ಮುಂಚೂಣಿಯಲ್ಲಿ ಹೋರಾಡಿದವರು. ಕಾರಣದಿಂದಲೇ ದೇಶದ ಬಹುಮುಖ್ಯ ಬಂದರಿಗೆ ಅವರ ಹೆಸರನ್ನಿಡಲಾಗಿದೆ ಎಂದು ಪ್ರಧಾನಿ ಹೇಳಿದರು. ಬಂದರನ್ನು ಪೂರ್ವ ಭಾರತದ ಗೇಟ್ ವೇ ಎಂದು ಕರೆಯಲಾಗುತ್ತದೆಕೋಲ್ಕತ್ತ ಪೋರ್ಟ್ ಟ್ರಸ್ಟ್ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳಲಿಲ್ಲಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಮತ್ತೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಧರಣಿಯಲ್ಲಿ ಪಾಲ್ಗೊಂಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಕೋಲ್ಕತ:  ಪೌರತ್ವ ತಿದ್ದುಪಡಿ ಕಾಯ್ದೆಯು ನಿಮ್ಮ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಬದಲಾಗಿ ಪೌರತ್ವ ನೀಡುತ್ತದೆ  ಎಂದು ಪ್ರಧಾನಿ  ನರೇಂದ್ರ  ಮೋದಿ 2020 ಜನವರಿ 12ರ ಭಾನುವಾರ  ಪುನರುಚ್ಚರಿಸಿದರು. ಕೋಲ್ಕತದ ರಾಮಕೃಷ್ಣ ಮಿಷನ್ ಮುಖ್ಯಕಚೇರಿ ಬೇಲೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ  ಪ್ರಧಾನಿ ಮಾತನಾಡಿದರು. ಪೌರತ್ವ ತಿದ್ದುಪಡಿ  ಕಾಯ್ದೆಯನ್ನು ರಾತ್ರಿ ಹಗಲಾಗುವುದರೊಳಗೆ ಜಾರಿಗೆ ತರಲಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ, ಚರ್ಚೆ ನಡೆಸಿ ಸದಸ್ಯರ ಅಂಗೀಕಾರ ಸಿಕ್ಕಿದ ಮೇಲೆಯೇ ಜಾರಿಯಾಗಿದ್ದು. ಇದರ ಬಗ್ಗೆ ಯುವಕರಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸಲಾಗುತ್ತಿದೆ. ಯುವಜನತೆಗೆ ಇದನ್ನು ಅರ್ಥ ಮಾಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಸಿಎಎಯಿಂದಾಗಿ ಜನರಿಗೆ ಈಗ  ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನಗಳ ಧಾರ್ಮಿಕ ಅಲ್ಪಸಂಖ್ಯಾತರು ಎದುರಿಸುತ್ತಿರುವ ಕಿರುಕುಳದ ಬಗ್ಗೆ ಅರಿವಾಗುತ್ತಿದೆ. ಹೀಗಿರುವಾಗ ವಿರೋಧ ಪಕ್ಷಗಳ ನಾಯಕರು ರಾಜಕೀಯ ಲಾಭಕ್ಕಾಗಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಮಹಾತ್ಮಾ ಗಾಂಧಿ ಮತ್ತು ಇತರ ನಾಯಕರು ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗುವ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಬೇಕೆಂದೇ ಪ್ರತಿಪಾದಿಸಿದ್ದರು ಎಂದು ತಿಳಿಸಿದರು. ಕಾಯ್ದೆಯನ್ನು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಆದರೆ, ಇದರಲ್ಲಿ ರಾಜಕೀಯ ಆಟವನ್ನು ಆಡುತ್ತಿರುವವರು ಅರ್ಥ ಮಾಡಿಕೊಳ್ಳುವುದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಿದ್ದಾರೆ. ಕಾಯ್ದೆ ಬಗ್ಗೆ ಎಲ್ಲೆಡೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೆಂಗಳೂರು:  ಬೆಂಗಳೂರಿನ ಖಾಸಗಿ ಟೆಕ್ ಪಾರ್ಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಜರ್ನಲ್ ಸಿಧು ಸಿಂಗ್ನನ್ನು ಸಿಸಿಬಿ ಪೊಲೀಸರು ಬಂಧಿಸಿದರು.  ಪಂಜಾಬ್ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಬಹುದೊಡ್ಡ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು ಖಲಿಸ್ತಾನದ ಪ್ರತ್ಯೇಕತಾವಾದಿ ಜರ್ನಲ್ ಸಿಂಗ್ ಸಿಧುನನ್ನು ಬಂಧಿಸಿದರು. ಆಂತರಿಕ ಭದ್ರತಾ ವಿಭಾಗ ೨೦೧೯ರ ಫೆಬ್ರವರಿಯಲ್ಲಿ ಸಿಂಗ್ ಸಿಧು ವಿರುದ್ಧ ದೂರು ದಾಖಲಿಸಿದ ನಂತರ, ತಲೆಮರೆಸಿಕೊಂಡಿದ್ದ ಸಿಧು ಕಳೆದ ತಿಂಗಳುಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಮತ್ತು ಬಾಗಮನೆ ಟೆಕ್ ಪಾರ್ಕ್ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಸಂಪಿಗೆ ಹಳ್ಳಿಯ  ರಾಧಾಕೃಷ್ಣ ಪಿಜಿಯಲ್ಲಿ ವಾಸಿಸುತ್ತಿದ್ದ ಈತನನ್ನು ಬಂಧಿಸಿ, ಪಂಜಾಬ್ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಮೂಲತಃ ಇಂಜಿನಿಯರಿಂಗ್ ಪದವೀಧರನಾಗಿದ್ದ ಸಿಧು, ತೆಲಂಗಾಣದ ಹೈದರಾಬಾದಿನ ನಿವಾಸಿ.  ಸಿಧು ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹಾಗೂ ಸಿಖ್ ಧರ್ಮದವರಿಗೆ ಪ್ರತ್ಯೇಕ ರಾಷ್ಟ್ರ ಬೇಕೆಂದು ಹೋರಾಟ ನಡೆಸುತ್ತಿದ್ದ. ತೆಲಂಗಾಣ ನಿವಾಸಿಯಾಗಿದ್ದರೂ ಪ್ರತ್ಯೇಕ ಖಲಿಸ್ತಾನ ಹೋರಾಟದ ಮೂಲಕ ಗುರುತಿಸಿಕೊಂಡಿದ್ದ ಮತ್ತು ಪಂಜಾಬಿನಲ್ಲಿ ಉಗ್ರ ಚಟುವಟಿಕೆಯಲ್ಲಿಯೂ ಭಾಗಿಯಾಗಿದ್ದ. ಸಿಖ್ ಧರ್ಮವನ್ನು ವಿರೋಧಿಸುವವರ ವಿರುದ್ಧ ಹೋರಾಟ ನಡೆಸುವ ಮೂಲಕ ಗುರುತಿಸಿಕೊಂಡಿದ್ದ. ಪಂಜಾಬ್ ಮೊಹಾಲಿಯಲ್ಲಿ ಸಿಧು ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಆಂತರಿಕ ಭದ್ರತಾ ವಿಭಾಗವು ಪ್ರಕರಣ ದಾಖಲಿಸಿದ ನಂತರ, ಪಂಜಾಬ್ ಪೊಲೀಸರು ಸಿಧುಗಾಗಿ ಹುಡುಕಾಟ ನಡೆಸಿದ್ದರು ನಂತರ, ಬೆಂಗಳೂರಿಗೆ ಬಂದಿದ್ದ ಸಿಧು, ಪಾಕಿಸ್ತಾನ ಐಎಸ್ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದ ಹಾಗೂ ಐಸಿಸ್ ಏಜೆಂಟ್ ನಿಹಾಲ್ ಸಿಂಗ್ನೊಂದಿಗೆ ಸ್ನೇಹ ಬೆಳೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

2020: ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಹೋರಾಟದ ಸಂದರ್ಭವನ್ನು ಬಳಸಿಕೊಂಡು, ಹೋರಾಟದಲ್ಲಿ ಇದ್ದವರನ್ನು ಆಯ್ದು, ಜಿಹಾದಿ ಗ್ಯಾಂಗ್ ಐಸಿಸ್ಗೆ ನೇಮಿಸಿ, ರಾಜ್ಯಾದ್ಯಂತ ಸರಣಿ ವಿಧ್ವಂಸಕ ಕೃತ್ಯಗಳಲ್ಲಿ ಬಳಸಲು ನಡೆದಿದ್ದ ಸಂಚನ್ನು ಸಿಸಿಬಿ ಪೊಲೀಸರು ಭೇದಿಸಿದರು. ಪೌರತ್ವ ಕಾಯ್ದೆ ಪ್ರತಿಭಟನೆಯನ್ನು ಬಳಸಿಕೊಂಡು ಉಗ್ರರನ್ನು ನೇಮಕ ಮಾಡಲು ಸಂಚು ರೂಪಿಸಿದ್ದ ಪಾತಕಿಯನ್ನು  ಮೆಹಬೂಬ್ ಪಾಷ ಎಂಬುದಾಗಿ ಸಿಸಿಬಿ ಪೊಲೀಸರು ಗುರುತಿಸಿದ್ದಾರೆ. ಅಲ್ಪಸಂಖ್ಯಾತರನ್ನು ಜಿಹಾದ್ ಹೋರಾಟದತ್ತ ಸೆಳೆಯಲು ಮೆಹಬೂಬ್ ಸಂಚು ರೂಪಿಸಿದ್ದ ಹಾಗೂ ಬೆಂಗಳೂರಿನಲ್ಲಿರುವ ಜಿಹಾದಿ ತಂಡದ ನಾಯಕನಾಗಿಯೂ ಕೆಲಸ ಮಾಡುತ್ತಿದ್ದ ಎಂಬುದಾಗಿ ಪೊಲೀಸರು ಪತ್ತೆ ಹಚ್ಚಿದರು. ಇದೇ ಕಾರಣಕ್ಕೆ ಸಂಬಂಧಿಸಿದಂತೆ, ಮೂರು ದಿನಗಳ ಹಿಂದೆ ಪೊಲೀಸರು ಜಿಹಾದಿ ತಂಡದ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ಆರಂಭಿಸಿದ್ದರುತನಿಖೆ ನಡೆಸುತ್ತಿದ್ದ ವೇಳೆಯಲ್ಲಿ ಸಿಎಎ ಪ್ರತಿಭಟನೆಯನ್ನು ಜಿಹಾದಿ ಸಂಘಟನೆಗೆ ನೇಮಕ ಮಾಡಿಕೊಳ್ಳಲು ಹೂಡಿದ್ದ ಸಂಚಿನ  ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದ್ದು, ಪೌರತ್ವ ಕಾಯ್ದೆ ಗಲಾಟೆ ವೇಳೆ ವಿಧ್ವಂಸಕ ಕೃತ್ಯ ನಡೆಸಲು ರೂಪಿಸಿದ್ದ ಸಂಚನ್ನು ಬಯಲಿಗೆಳೆದಿದೆ. ತನ್ಮೂಲಕ ಮುಂದಾಗಬಹುದಾಗಿದ್ದ ಅನಾಹುತವನ್ನು ತಪ್ಪಿಸುವಲ್ಲಿ ಸಿಸಿಬಿ ಪೊಲಿಸರು ಯಶಸ್ವಿಯಾದರು. ರಾಜ್ಯ ಸೇರಿದಂತೆ, ದಕ್ಷಿಣ ಭಾರತದಲ್ಲಿ ಜಿಹಾದಿ ಉಗ್ರರನ್ನು ನೇಮಕ ಮಾಡಲು ಸಂಚು ನಡೆದಿತ್ತು. ತಂಡದ ನಾಯಕ ಮೆಹಬೂಬ್ ಪಾಷ, ಜಿಹಾದಿ ತಂಡಕ್ಕೆ ಸದಸ್ಯರ ನೇಮಕ, ಶಸ್ತ್ರಾಸ್ತ್ರ ಪೂರೈಕೆ ಹಾಗೂ ಇನ್ನುಳಿದ ವಿಧ್ವಂಸಕ ಕೃತ್ಯಗಳಿಗೆ ಈತ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಕೋಚಿ (ಕೇರಳ): ಕೋಚಿಯ ೧೭ ಅಂತಸ್ತಿನ ಗೋಲ್ಡನ್ ಕಯಲೋರಂ ಕಟ್ಟಡವು 2020 ಜನವರಿ 12ರ ಭಾನುವಾರ ಕುಸಿದು ಬೀಳುವುದರೊಂದಿಗೆ ನಾಲ್ಕು ಐಷಾರಾಮಿ ಜಲಾಭಿಮುಖಿ ಗಗನಚುಂಬಿ ಕಟ್ಟಡಗಳು ಮರಡು ನಕ್ಷೆಯಿಂದ ಅಳಿಸಿಹಾಕಲ್ಪಟ್ಟವು. ಇದರೊಂದಿಗೆ ಅಕ್ರಮ ಕಟ್ಟಡಗಳ ೧೩ ವರ್ಷಗಳ ಯುಗ ಅಂತ್ಯಗೊಂಡಿತು. ಕರಾವಳಿ ನಿಯಂತ್ರಣ ವಲಯದ ಮಾನದಂಡಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ನಾಲ್ಕು ಕಟ್ಟಡಗಳಲ್ಲಿ ಕೊನೆಯದಾದ ೫೫ ಮೀಟರ್ ಎತ್ತರದಗೋಲ್ಡನ್ ಕಯಲೋರಂಕಟ್ಟಡವನ್ನು ಮಧ್ಯಾಹ್ನ .೩೦ ಗಂಟೆಯ ವೇಳೆಗೆ ನಿಯಂತ್ರಿತ ಸ್ಫೋಟಕ ಮೂಲಕ  ನೆಲಸಮಗೊಳಿಸಲಾಯಿತು. ಅದಕ್ಕೂ ಮುನ್ನ ಭಾನುವಾರ ಬೆಳಗ್ಗೆ ೫೫ ಮೀಟರ್ ಎತ್ತರದ ಜೈನ್ ಕೋರಲ್ ಕೋವ್ ಕಟ್ಟಡವನ್ನು ನೆಲಸಮ ಮಾಡಲಾಯಿತು.  ಹೋಲಿ ಫೇಯ್ತ್ ಮತ್ತು ಆಲ್ಫಾ ಸೆರೇನ್ ಕಟ್ಟಡ ಸಮುಚ್ಚಯಗಳನ್ನು ಶನಿವಾರ ನಿಯಂತ್ರಿತ ಸ್ಫೋಟಕ ಬಳಸಿ ಧ್ವಂಸಗೊಳಿಸಲಾಗಿತ್ತು. ಸುಪ್ರೀಂ ಕೋರ್ಟ್ ನೇಮಿಸಿದ್ದ ಮೂರು ಸದಸ್ಯರ ಸಮಿತಿಯು, ಕಟ್ಟಡಗಳ ನಿರ್ಮಾಣದಲ್ಲಿ ಕರಾವಳಿ ನಿಯಂತ್ರಣ ವಲಯದ ಮಾನದಂಡಗಳನ್ನು ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಿದ ಬಳಿಕ ನಾಲ್ಕೂ ಕಟ್ಟಡ ಸಮುಚ್ಚಯಗಳನ್ನು ನೆಲಸಮಗೊಳಿಸುವಂತೆ ಸುಪ್ರೀಂಕೋರ್ಟ್ ೨೦೧೯ ಸೆಪ್ಟೆಂಬರ್ನಲ್ಲಿ ಆದೇಶ ನೀಡಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜನವರಿ12  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)



No comments:

Post a Comment