2020:
ವಾಷಿಂಗ್ಟನ್: ಅಮೆರಿಕ ವು ಡ್ರೋಣ್ ದಾಳಿ ನಡೆಸಿ ತನ್ನ ಜನರಲ್ ಕಮಾಂಡರ್ ಖಾಸಿಂ ಸೊಲೈಮಾನಿ ಅವರನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಇರಾಕ್‌ನ ಎರಡು ವಾಯುನೆಲೆಗಳಲ್ಲಿ ಮೈತ್ರಿ ಪಡೆಗಳ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆಸಿ 80 ಮಂದಿ ಅಮೆರಿಕನ್ ಭಯೋತ್ಪಾದಕರನ್ನು (ಅಮೆರಿಕ ಯೋಧರನ್ನು) ಕೊಂದಿರುವುದಾಗಿ ಇರಾನ್ 2020 ಜನವರಿ 08ರ ಬುಧವಾರ ಪ್ರತಿಪಾದಿಸಿತು. ಆದರೆ ದಾಳಿಯಲ್ಲಿ ಯಾರೂ ಸತ್ತಿಲ್ಲ ಎಂದು ಅಮೆರಿಕ ಪ್ರತಿಕ್ರಿಯಿಸಿತು.ಮೈತ್ರಿಪಡೆಗಳ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದ ಇರಾನ್ ಕ್ರಮಕಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ’ಆಲ್ ಇಸ್ ವೆಲ್’ ಎಂದು ಶಾಂತ ಪ್ರತಿಕ್ರಿಯೆ ನೀಡಿದರು. ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಟೆಲಿವಿಷನ್ ಭಾಷಣ ಮಾಡಿದ ಅವರು ಇರಾನ್
ವಿರುದ್ಧ ದಿಗ್ಭಂಧನ ಸಾಧ್ಯತೆಯನ್ನು ಪ್ರಕಟಿಸಿದರಾದರೂ ತತ್
ಕ್ಷಣ ಸೇನಾ ಕಾರ್ಯಾಚರಣೆಯ ಸಾಧ್ಯತೆ ಇಲ್ಲ
ಎಂಬ ಸುಳಿವು ನೀಡಿದರು. ಇರಾಕ್ನಲ್ಲಿರುವ ಅಮೆರಿಕ ಪಡೆಗಳನ್ನು ಗುರಿಯಾಗಿಸಿಕೊಂಡು ೧೫ ಕ್ಷಿಪಣಿ ದಾಳಿಗಳನ್ನು ನಡೆಸಲಾಗಿದ್ದು, ೮೦ಕ್ಕೂ ಅಧಿಕ ಅಮೆರಿಕನ್ ಟೆರರಿಸ್ಟ್ (ಸೈನಿಕರು)ಗಳು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸ್ಟೇಟ್ ಟಿಲಿವಿಷನ್ ವರದಿ ಮಾಡಿತ್ತು.ಇರಾನ್ ದಾಳಿಯಲ್ಲಿ ಎಷ್ಟು ಸಾವು ಹಾಗೂ ನಷ್ಟ ಸಂಭವಿಸಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮೂಲಕ ತಿಳಿಸಿದರು. ೨೦೧೮ರ ಡಿಸೆಂಬರಿನಲ್ಲಿ ಇರಾಕಿನಲ್ಲಿರುವ ಐನ್ ಅಲ್ ಅಸ್ಸಾದ್ ವಾಯು ನೆಲೆಗೆ ಟ್ರಂಪ್ ಭೇಟಿ ನೀಡಿದ್ದಾಗ ಕೂಡಾ ’ಅಲ್ ಇಸ್ ವೆಲ್’ ಎಂದು ಟ್ರಂಪ್ ಶುಭ ಕೋರಿದ್ದರು ಎಂದು ವರದಿ ವಿವರಿಸಿದೆ.ಅಮೆರಿಕ್ಕೆ ಇಸ್ರೇಲ್ ಬೆಂಬಲ: ಈ ಮಧ್ಯೆ, ತನ್ನ ತಂಟೆಗೆ ಬಂದರೆ ’ಅದ್ಭುತ ಹೊಡೆತ’ ಕೊಡುತ್ತೇವೆ’ ಎಂಬುದಾಗಿ ಹೇಳುವ ಮೂಲಕ ಇಸ್ರೇಲ್ ಕೂಡಾ ಬುಧವಾರ ಇರಾನಿಗೆ ಸವಾಲು ಹಾಕಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತೀಯ ಮಜ್ದೂರ್ ಸಂಘವನ್ನು ಹೊರತು ಪಡಿಸಿ, ಕೇಂದ್ರೀಯ ಕಾರ್ಮಿಕ ಸಂಘಟನೆಗಳಿಗೆ ಸೇರಿದ ೧೦ ಕಾರ್ಮಿಕ ಸಂಘಗಳು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಲು ಕರೆ ನೀಡಿದ್ದ ’ಭಾರತ ಬಂದ್’ 2020 ಜನವರಿ 08ರ ಬುಧವಾರ ಪಶ್ಮಿಮ ಬಂಗಾಳದಲ್ಲಿ ಹಿಂಸೆಗೆ ತಿರುಗಿದ್ದು, ಉಳಿದೆಲ್ಲ ಕಡೆ ಬಹುತೇಕ ಶಾಂತವಾಗಿತ್ತು. ಕೋಲ್ಕತ್ತದಲ್ಲಿ ಪೊಲೀಸರು ೫೫ ಮಂದಿಯನ್ನು ಬಂಧಿಸಿದರು. ಎಡಪಕ್ಷಗಳ ’ಭಾರತ ಬಂದ್’ನ್ನು ಅಗ್ಗದ ರಾಜಕೀಯ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದರು. ಆದರೆ ಎಡಪಕ್ಷಗಳು ಎತ್ತಿರುವ ವಿಷಯವನ್ನು ಬೆಂಬಲಿಸುವುದಾಗಿ ಹೇಳಿದರು. ಸಹಸ್ರಾರು ಮಂದಿ ಕಾರ್ಮಿಕರು ಕೆಂಪುಧ್ವಜಗಳೊಂದಿಗೆ ದೇಶದ ವಿವಿಧೆಡೆಗಳಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದು, ಬಹುತೇಕ ಬ್ಯಾಂಕ್ ವಹಿವಾಟು ಸ್ತಬ್ಧಗೊಂಡಿತ್ತು. ಪಶ್ಚಿಮ ಬಂಗಾಳದ ಹಲವಡೆಗಳಲ್ಲಿ ಘರ್ಷಣೆ, ಬೆಂಕಿ ಹಚ್ಚುವಿಕ ಮತ್ತು ಸರ್ಕಾರಿ ಆಸ್ತಿ ಹಾನಿಯ ಘಟನೆಗಳು ಘಟಿಸಿದ ಬಗ್ಗೆ ವರದಿಗಳು ಬಂದವು. ಪಶ್ಚಿಮ ಬಂಗಾಳದ ಬರ್ಸಾತ್, ಜಾಧವಪುರ, ಬೆಹಲಾ, ಹೌರಾ ಮತ್ತು ಕೋಲ್ಕತ್ತಾದ ಕೆಲವು ಭಾಗಗಳಲ್ಲಿ ಬಂದ್ ಬೆಂಬಲಗರು ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸಿ, ಖಾಸಗಿ ಮತ್ತು ಸರ್ಕಾರಿ ವಾಹನಗಳನ್ನು ಧ್ವಂಸಗೊಳಿಸಿದರು. ಮಾಲ್ಡಾ ಜಿಲ್ಲೆಯ ಸುಜಾಪುರ ಪ್ರದೇಶದಲ್ಲಿ ಪ್ರತಿಭಟನಕಾರರು ರಸ್ತೆಯಲ್ಲಿ ಪಿಕೆಟಿಂಗ್ ನಡೆಸಿ ಟೈರುಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಸರ್ಕಾರಿ ಬಸ್ಸುಗಳು ಮತ್ತು ಪೊಲೀಸ್ ವಾಹನಗಳೂ ಸೇರಿದಂತೆ ಇತರ ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದಾಗ ಪ್ರತಿಭಟನಕಾರರು ಕಲ್ಲು ತೂರಾಟ ಮತ್ತು ಕಚ್ಚಾ ಬಾಂಬ್ ಎಸೆದರು. ಅವರನ್ನು ನಿಯಂತ್ರಿಸಲು ಮೊದಲು ಲಾಠಿ ಪ್ರಹಾರ ನಡೆಸಿದ ಪೊಲೀಸರು ಬಳಿಕ ಆಶ್ರುವಾಯು ಶೆಲ್ ಮತ್ತು ರಬ್ಬರ್ ಬುಲ್ಲೆಟ್ಗಳನ್ನು ಪ್ರಯೋಗಿಸಿದರು ಎಂದು ಅಧಿಕಾರಿಗಳು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

ಟೆಹರಾನ್: ಟೆಹರಾನ್ ಹೊರವಲಯದಲ್ಲಿ ಉಕ್ರೇನಿ ಬೋಯಿಂಗ್ ೭೩೭ ವಿಮಾನವು 2020 ಜನವರಿ 08ರ ಬುಧವಾರ ಪತನಗೊಂಡಿದ್ದು ೯ ಮಂದಿ ಸಿಬ್ಬಂದಿ ಮತ್ತು ೧೬೭ ಪ್ರಯಾಣಿಕರು ಸೇರಿ ಎಲ್ಲ ೧೭೬ ಮಂದಿ ಕೂಡಾ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿದವು.
ಇರಾನಿನ ಟೆಹರಾನ್ ವಿಮಾನ ನಿಲ್ದಾಣದಿಂದ ಬಾನಿಗೇರಿದ ಕೆಲವೇ ನಿಮಿಷಗಳಲ್ಲಿ ವಿಮಾನ ಪತನಗೊಂಡಿದೆ. ಆಕಾಶದಲ್ಲಿಯೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಅದು ಪತನಗೊಂಡಿತು ಎಂದು ವರದಿಗಳು ತಿಳಿಸಿದೆ. ವಿಮಾನ ದುರಂತಕ್ಕೆ ತಾಂತ್ರಿಕ ತೊಂದರೆ ಕಾರಣವಾಗಿರಬಹುದು ಎಂದು ಭಾವಿಸಲಾಯಿತು.
ಆದರೆ, ೨೦೧೬ ರಲ್ಲಿ ನಿರ್ಮಿಸಲಾದ ಬೋಯಿಂಗ್ ೭೩೭ ವಿಮಾವನ್ನು ದುರಂತಕ್ಕೆ ಕೇವಲ ಎರಡು ದಿನಗಳ ಮುನ್ನ ಪರಿಶೀಲಿಸಲಾಗಿತ್ತು ಎಂದು ಎಂದು ಕಂಪೆನಿ ತಿಳಿಸಿದೆ. "ಈ ವಿಮಾನವನ್ನು ೨೦೧೬ ರಲ್ಲಿ ನಿರ್ಮಿಸಲಾಯಿತು, ಇದನ್ನು ವಿಮಾನಯಾನ ಸಂಸ್ಥೆಯು ನೇರವಾಗಿ (ಬೋಯಿಂಗ್) ಕಾರ್ಖಾನೆಯಿಂದ ಸ್ವೀಕರಿಸಿದೆ. ೨೦೨೦ ರ ಜನವರಿ ೬ ರಂದು ವಿಮಾನವು ತನ್ನ ಕೊನೆಯ ಯೋಜಿತ ತಾಂತ್ರಿಕ ಪರಿಶೀಶೀಲನೆಗೆ ಒಳಗಾಗಿತ್ತು’ ಎಂದು ಉಕ್ರೇನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿತು.
ಬೋಯಿಂಗ್ ೭೩೭ ಉಕ್ರೇನಿಯನ್ ರಾಜಧಾನಿ ಕೀವ್ಗೆ ತೆರಳುವ ಮುನ್ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ ಎಂದು ಅರೆ-ಅಧಿಕೃತ ಸುದ್ದಿ ಸಂಸ್ಥೆ ತಿಳಿಸಿದೆ. ಇದು ವಿಮಾನ ನಿಲ್ದಾಣದಿಂದ ವಾಯವ್ಯಕ್ಕೆ ೪೫ ಕಿಲೋಮೀಟರ್ (೩೦ ಮೈಲಿ) ದೂರದಲ್ಲಿರುವ ಶಹರಿಯಾರ್ ಕೌಂಟಿಯ ಖಲಾಜ್ ಅಬಾದ್ನಲ್ಲಿನ ಕೃಷಿಭೂಮಿಗೆ ಅಪ್ಪಳಿಸಿತು ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.ಪಿಎಸ್ -೭೫೨ ವಿಮಾನದಲ್ಲಿ "ಪ್ರಯಾಣಿಕರು ಜೀವಂತವಾಗಿರುವುದು ಅಸಾಧ್ಯ" ಎಂದು ರೆಡ್ ಕ್ರೆಸೆಂಟ್ ಮುಖ್ಯಸ್ಥ ಮೊರ್ಟೆಜಾ ಸಲೀಮಿ ಅರೆ-ಅಧಿಕೃತ ಸುದ್ದಿ ಸಂಸ್ಥೆಗೆ ತಿಳಿಸಿದರು. "ಸಾವನ್ನಪ್ಪಿದ ೧೭೬ ಜನರಲ್ಲಿ ಒಂಬತ್ತು ಮಂದಿ ವಿಮಾನ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರು" ಎಂದು ಟೆಹ್ರಾನ್ ಪ್ರಾಂತ್ಯದ ಉಪ ಗವರ್ನರ್ ಮೊಹಮ್ಮದ್ ತಘಿಜಾದೆ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್
ಮಾಡಿರಿ )
2020:
ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದ (ಜೆಎನ್ಯು) ಆವರಣದಲ್ಲಿ ಭಾನುವಾರ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಮತ್ತು ಖಾಸಗಿ ಆಸ್ತಿಗಳನ್ನು ಹಾನಿ ಪಡಿಸಿದ ಮುಸುಕುಧಾರೀ ದಾಳಿಕೋರರ ಪೈಕಿ ಕೆಲವರ ಗುರುತುಗಳನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಸರ್ಕಾರಿ ಮೂಲಗಳು
2020 ಜನವರಿ 08ರ ಬುಧವಾರ ತಿಳಿಸಿದವು.
ಇದೇ ವೇಳೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ವಿಶ್ವವಿದ್ಯಾಯದ ಉಪಕುಲಪತಿ ಜಗದೀಶ ಕುಮಾರ್ ಅವರಿಗೆ ಆದಷ್ಟೂ ಶೀಘ್ರ ವಿಶ್ವವಿದ್ಯಾಲಯವು ಮಾಮೂಲಿಯಾಗಿ ಕಾರ್ಯ
ನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನೂ ಮಾಡುವಂತೆ ಸೂಚಿಸಿದೆ.’ಭೂತಕಾಲವನ್ನು ಹಿಂದಕ್ಕೆ ಬಿಟ್ಟು, ಆವರಣಗಳಿಗೆ ಮರಳಿ’ ಎಂದು ಜಗದೀಶ ಕುಮಾರ್ ಅವರು ಮಂಗಳವಾರ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದರು. ಆದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದಾಳಿ ತಡೆಯಲಾಗದ್ದಕ್ಕಾಗಿ ಜಗದೀಶ್ ಕುಮಾರ್ ಅವರನ್ನು ಟೀಕಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್
ಮಾಡಿರಿ)
No comments:
Post a Comment