2020: ಪಟ್ನಾ:
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಅಭಿಯಾನ ‘ಜಲ್-ಜೀವನ್-ಹರಿಯಾಲಿ’
(ಹಸಿರು ಜಲಜೀವನ) ಅಂಗವಾಗಿ ಅವರು
2020 ಜನವರಿ 19ರ ಭಾನುವಾರ
ಬಕ್ಸಾರ್
ನಿಂದ ಜಾರ್ಖಂಡ್ ರಾಜ್ಯದ ಗಡಿಭಾಗ ದಲ್ಲಿನ ಭಾಗಲ್ಪುರದವರೆಗೆ ಗಂಗಾನದಿಯ ತೀರದುದ್ದಕ್ಕೂ ಸುಮಾರು ೧೮,೩೪೦ ಕಿಲೋ
ಮೀಟರ್ ಉದ್ದಕ್ಕೆ ನಿರ್ಮಿಸಲಾದ ಬೃಹತ್ ಮಾನವ ಸರಪಳಿ ಹೊಸ ದಾಖಲೆ ಸೃಷ್ಟಿಸಿತು. ಸುಮಾರು ೪.೨೭ ಕೋಟಿ ಜನರು
ಈ ಮಾನವ ಸರಪಳಿ ನಿರ್ಮಾಣದಲ್ಲಿ ಕೈಜೋಡಿಸಿದ್ದರು ಮತ್ತು ಇವರೆಲ್ಲರ ಸಹಕಾರದಿಂದ ೧೮.೩೪ಸಾವಿರ ಕಿಲೋ
ಮೀಟರ್ ಉದ್ದದ ಈ ಮಾನವ ಸರಪಳಿ
ನಿರ್ಮಾಣವಾಗುವ ಮೂಲಕ ಈ ಹಿಂದಿನ ದಾಖಲೆಯನ್ನು
ಇದು ಅಳಿಸಿ ಹಾಕಿದೆ ಎಂಬ ಮಾಹಿತಿಯನ್ನು ಬಿಹಾರ ಸರಕಾರದ ಮುಖ್ಯಕಾರ್ಯದರ್ಶಿ ದೀಪಕ್ ಕುಮಾರ್ ಅವರು ನೀಡಿದರು. ೨೦೧೭ರಲ್ಲಿ ನಡೆಸಲಾಗಿದ್ದ ಮಾನವ ಸರಪಳಿ ೧೧,೨೮೫ ಕಿಲೋ
ಮೀಟರ್ ಉದ್ದ ನಿರ್ಮಾಣಗೊಂಡಿತ್ತು. ೨೦೧೮ರಲ್ಲಿ
ವರದಕ್ಷಿಣೆ ಹಾಗೂ ಬಾಲ್ಯವಿವಾಹ ಪದ್ದತಿಗಳನ್ನು ವಿರೋಧಿಸಿ ನಿರ್ಮಾಣಗೊಂಡಿದ್ದ ಮಾನವ ಸರಪಳಿ೧೩,೬೬೦ ಕಿಲೋಮೀಟರ್ ಉದ್ದಕ್ಕೆ ನಿರ್ಮಾಣಗೊಂಡಿತ್ತು. ಈ ಬಾರಿ ಇದಕ್ಕಿಂತ
೨೦% ಅಧಿಕ ಉದ್ದದ ಅಂದರೆ ೧೬,೨೦೦ ಕಿಲೋ
ಮೀಟರ್ ಉದ್ದದ ಮಾನವ ಸರಪಳಿಯನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ೪೫ ಲಕ್ಷ ಜನರು
ಇದರಲ್ಲಿ ಭಾಗವಹಿಸಿದರೆ ವಾರ್ಡ್ ಮಟ್ಟಗಳಲ್ಲಿ ಒಂದು ಕೊಟಿ ೧೩ ಲಕ್ಷದ ೪೪
ಸಾವಿರ ಜನರು ಒಟ್ಟಾಗುವ ಮೂಲಕ ಈ ಬೃಹತ್ ಮಾನವ
ಸರಪಳಿ ನಿರ್ಮಾಣಗೊಂಡಿತು. ಇನ್ನು ೫೭ ಲಕ್ಷ ವಿದ್ಯಾರ್ಥಿಗಳು
ಹಾಗೂ ೭೬ ಸಾವಿರ ಬೋಧಕ
ಸಿಬ್ಬಂದಿಯೂ ಸಹ ಈ ಬೃಹತ್
ಮಾನವ ಸರಪಳಿಯ ಭಾಗವಾಗಿದ್ದರು ಎಂಬ ಮಾಹಿತಿ ಲಭ್ಯವಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ಚೆನೈ:
ತಿದ್ದುಪಡಿಗೊಂಡಿರುವ ಪೌರತ್ವ ಕಾಯ್ದೆಯು ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂಬ ಟೀಕೆಯನ್ನು ಅಲ್ಲಗಳೆಯಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಜನವರಿ 19ರ ಭಾನುವಾರ ಪಾಕಿಸ್ತಾನಿ ಸಂಜಾತ ಗಾಯಕ ಅದ್ನಾನ್ ಸಮಿ ಅವರಿಗೆ ಭಾರತೀಯ ಪೌರತ್ವ ಒದಗಿಸಿರುವುದು ಮತ್ತು ಬಾಂಗ್ಲಾದೇಶದಿಂದ ಗಡೀಪಾರು ಆಗಿರುವ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರು ನವದೆಹಲಿಯಲ್ಲಿ ವಾಸ್ತವ್ಯ ಅನುಮತಿ ಅಡಿಯಲ್ಲಿ ವಾಸವಾಗಿರುವುದನ್ನು ಉದಾಹರಣೆಗಳಾಗಿ ಉಲ್ಲೇಖಿಸಿದರು. ಬಿಜೆಪಿಯು ಕೈಗೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ರಾಷ್ಟ್ರವ್ಯಾಪಿ ಜನ ಜಾಗೃತಿ ಅಭಿಯಾನದ
ಅಡಿಯಲ್ಲಿ ಸಂಘಟಿಸಲಾಗಿದ್ದ ಸಭೆಯಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಲು ಸಚಿವರು ಇನ್ನಷ್ಟು ಅಂಕಿಸಂಖ್ಯೆಗಳನ್ನೂ ಒದಗಿಸಿದರು. ‘ಮುನ್ನೂರ ತೊಂಬತ್ತೊಂದು (೩೯೧) ಮುಸ್ಲಿಮರು ಮತ್ತು ೧೫೯೫ ಪಾಕಿಸ್ತಾನಿ ವಲಸಿಗರಿಗೆ ೨೦೧೬ರಿಂದ ೨೦೧೮ರ ಅವಧಿಯಲ್ಲಿ ಭಾರತದ ಪೌರತ್ವ ನೀಡಲಾಗಿದೆ.
೨೦೧೬ರಲ್ಲಿ ಇದೇ ಅವಧಿಯಲ್ಲಿ ಅದ್ನಾನ್ ಸಮಿ ಅವರಿಗೆ ಭಾರತದ ಪೌರತ್ವ ನೀಡಲಾಯಿತು. ಇದು ಒಂದು ಉದಾಹರಣೆ. ತಸ್ಲೀಮಾ ನಸ್ರೀನ್ ಪ್ರಕರಣ ಇನ್ನೊಂದು ಉದಾಹರಣೆ. ಇದು ನಮ್ಮ ವಿರುದ್ಧದ ಎಲ್ಲ ಆಪಾದನೆಗಳೂ ತಪ್ಪು ಎಂಬುದನ್ನು ಸಾಬೀತು ಪಡಿಸುತ್ತದೆ’ ಎಂದು
ಸೀತಾರಾಮನ್ ಹೇಳಿದರು. ಲಾಹೋರಿನಲ್ಲಿ
ಜನಿಸಿದ ಅದ್ನಾನ್ ಸಮಿ ಅವರು ೨೦೦೧ರ ಮಾರ್ಚ್ ೧೩ರಂದು ಭಾರತಕ್ಕೆ ಮೊತ್ತ ಮೊದಲಿಗೆ ಪ್ರವಾಸೀ ವೀಸಾದಲ್ಲಿ ಆಗಮಿಸಿದ್ದರು. ಈ ವೀಸಾ ಒಂದು
ವರ್ಷದ ಅವಧಿಗೆ ಸಿಂಧುವಾಗಿತ್ತು. ಅವರಿಗೆ ೨೦೧೦ರ ಮೇ ೨೭ರಂದು ನೀಡಲಾಗಿದ್ದ
ಪಾಕಿಸ್ತಾನಿ ಪಾಸ್ ಪೋರ್ಟ್ ಅವಧಿ ೨೦೧೫ರ ಮೇ ೨೬ಕ್ಕೆ ಮುಕ್ತಾಯವಾಗಿತ್ತು.
ಆ ಬಳಿಕ ಅವರ ಪಾಸ್ ಪೋರ್ಟ್ನ್ನು ಪಾಕಿಸ್ತಾನಿ ಸರ್ಕಾರ ನವೀಕರಿಸಲಿಲ್ಲ. ಹೀಗಾಗಿ ಸಮಿ ಅವರು ಮಾನವೀಯ ನೆಲೆಯಲ್ಲಿ ಭಾರತದಲ್ಲಿನ ತಮ್ಮ ವಾಸ್ತವ್ಯವನ್ನು ಸಕ್ರಮಗೊಳಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು. ೨೦೧೬ರ ಜನವರಿ ೧ರಂದು ಕಟ್ಟಕಡೆಗೆ ಕೇಂದ್ರ ಗೃಹ ಸಚಿವಾಲಯವು ಅವರಿಗೆ ಭಾರತೀಯ ಪೌರತ್ವವನ್ನು ಒದಗಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ತಿರುವನಂತಪುರಂ:
ತನ್ನ ಗಮನಕ್ಕೆ ತಾರದೆಯೇ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರಿಂದ ವ್ಯಗ್ರರಾಗಿರುವ ಕೇರಳದ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಅವರು ಬೆಳವಣಿಗೆ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ಮೂಲಗಳು ಅವರು
2020 ಜನವರಿ 19ರ ಭಾನುವಾರ
ಹೇಳಿದವು. ಪೌರತ್ವ ತಿದ್ದುಪಡಿ
ಕಾಯ್ದೆಯ ಅನುಷ್ಠಾನ ವಿಚಾರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆಗೆ ಘರ್ಷಣೆಗೆ ಇಳಿದಿರುವ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಅವರು ’ತಮಗೆ ನಿರ್ಧಾರದ ಬಗ್ಗೆ ತಿಳಿಸದೇ ಇರುವುದು ಅಸಮರ್ಪಕ’ ಎಂದು ಹೇಳಿದ್ದಾರೆ ಎಂದು ವರದಿ ಹೇಳಿತು. ರಾಜ್ಯ ಸರ್ಕಾರವು ಸಿಎಎ ವಿರುದ್ಧ ತಮಗೆ ತಿಳಿಸದೇ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯಪಾಲರ ಕಚೇರಿಯು ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ರಾಜ್ಯಪಾಲರು ಇದಕ್ಕೆ ಮುನ್ನ ರಾಜ್ಯಕ್ಕೆ ಸುಪ್ರೀಂಕೋರ್ಟ್ಗೆ ಹೋಗುವ ಹಕ್ಕಿದೆ
ಎಂದು ಹೇಳಿದ್ದರು. ಆದರೆ ತಮ್ಮನ್ನು ಕತ್ತಲೆಯಲ್ಲಿ ಇಡುವುದು ಅಸಮರ್ಪಕ ಎಂದು ರಾಜ್ಯಪಾಲರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ನವದೆಹಲಿ:
ಮೂರು ರಾಷ್ಟ್ರಗಳಿಂದ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ತ್ವರಿತವಾಗಿ
ಭಾರತದ ಪೌರತ್ವ ಒದಗಿಸುವ ನೂತನ ಕಾಯ್ದೆಯ ಅಗತ್ಯ ಏನಿತ್ತು ಎಂಬುದಾಗಿ ಪ್ರಶ್ನಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ’ಕಾಯ್ದೆಯ ಪರಿಣಾಮವಾಗಿ ಭಾರತದಲ್ಲಿನ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು
ಅವರು 2020 ಜನವರಿ 19ರ ಭಾನುವಾರ ಹೇಳಿದರು. ಬಾಂಗ್ಲಾದೇಶದಲ್ಲಿ
ಸಾಕಷ್ಟು ಅಸಮಾಧಾನವನ್ನು ಹುಟ್ಟಿಸಿರುವ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಗಲ್ಫ್ ನ್ಯೂಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹಸೀನಾ ಅವರು ಇದೇ ಮೊದಲ ಬಾರಿಗೆ ಬಹಿರಂಗ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ ಬಳಿಕ ಮೂರು ಮಂದಿ ಬಾಂಗ್ಲಾದೇಶೀ ಸಚಿವರು ತಮ್ಮ ಭಾರತ ಭೇಟಿಯನ್ನು ರದ್ದು ಪಡಿಸಿದ್ದರು. ‘(ಭಾರತ
ಸರ್ಕಾರವು) ಏಕೆ ಅದನ್ನು (ಪೌರತ್ವ ತಿದ್ದುಪಡಿ ಕಾಯ್ದೆ) ಮಾಡಿತು ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಅದು (ಪೌರತ್ವ ತಿದ್ದುಪಡಿ ಕಾಯ್ದೆ) ಅಗತ್ಯವಿರಲಿಲ್ಲ’ ಎಂದು
ಹಸೀನಾ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಸಂದರ್ಶನ ಕಾಲದಲ್ಲಿ
ಹೇಳಿದರು. ‘ಭಾರತದಿಂದ ಮರುವಲಸೆಯೇನೂ ದಾಖಲಾಗಿಲ’
ಎಂದು ಹಸೀನಾ ನುಡಿದರು. ’ಇಲ್ಲ, ಭಾರತದಿಂದ ಮರುವಲಸೆಯೇನೂ ಇಲ್ಲ. ಆದರೆ ಭಾರತದಲ್ಲಿ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು
ಅವರು
ಹೇಳಿದರು.
(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ನವದೆಹಲಿ:
ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ನಿಷೇಧಕ್ಕೆ (ಇಂಟರ್ನೆಟ್ ಬ್ಯಾನ್) ಸಂಬಂಧಿಸಿದಂತೆ ತಾನು ನೀಡಿದ ಹೇಳಿಕೆಗಾಗಿ ಅವರು
2020 ಜನವರಿ 19ರ ಭಾನುವಾರ
ಕಾಶ್ಮೀರಿಗಳ
ಕ್ಷಮೆ ಯಾಚಿಸಿದ ನೀತಿ ಆಯೋಗದ ಸದಸ್ಯ ವಿ ಕೆ ಸಾರಸ್ವತ್
ಅವರು ’ಅದನ್ನು ಸಂದರ್ಭವನ್ನು ಮೀರಿ ಉಲ್ಲೇಖಿಸಲಾಗಿದೆ’ ಎಂದು
ಹೇಳಿದರು. ಜಮ್ಮು ಮತ್ತು
ಕಾಶ್ಮೀರದಲ್ಲಿ ಇಂಟರ್‌ನೆಟ್‌ನ್ನು ಕೇವಲ ’ಕೊಳಕು ಚಿತ್ರಗಳನ್ನು’ ವೀಕ್ಷಿಸಲು
ಬಳಸಲಾಗುತ್ತದೆ ಎಂದು ಸಾರಸ್ವತ್ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು. ‘ಸಂದರ್ಭವನ್ನು ಮೀರಿ ನನ್ನನ್ನು ಉಲ್ಲೇಖಿಸಲಾಗಿದೆ. ಈ ತಪ್ಪು ಉಲ್ಲೇಖವು
ಕಾಶ್ಮೀರದ ಜನರ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದರೆ, ನಾನು ಅವರ ಕ್ಷಮೆ ಯಾಚಿಸುತ್ತೇನೆ ಮತ್ತು ಇದು ನಾನು ಕಾಶ್ಮೀರಿಗಳ ಇಂಟರ್ ನೆಟ್ ಬಳಕೆ ಹಕ್ಕಿಗೆ ವಿರುದ್ಧವಾಗಿದ್ದೇನೆ ಎಂಬ ಭಾವನೆ ಮೂಡಿಸುವುದನ್ನು ಇಚ್ಛಿಸುವುದಿಲ್ಲ’ ಎಂದು
ಅವರು ತಮ್ಮ ಹಿಂದಿನ ಹೇಳಿಕೆಗೆ ಸ್ಪಷ್ಟನೆ ನೀಡಿದರು. ಅಹಮದಾಬಾದಿನ ಧೀರೂಭಾಯಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆಯಲ್ಲಿ ಅವರು
2020 ಜನವರಿ 18ರ ಶನಿವಾರ
ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸಾರಸ್ವತ್ ಅವರು ’ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಸರ್ಕಾರದ ಕ್ರಮವನ್ನು ಅನುಸರಿಸಿ ಇಂಟರ್ನೆಟ್ ನಿಷೇಧಿಸಿದ್ದರಿಂದ ಪ್ರದೇಶದ ಜನರಿಂದ ’ಕೊಳಕು
ಚಿತ್ರ’ಗಳ
ವೀಕ್ಷಣೆಗೆ ಕತ್ತರಿ ಬಿದ್ದಿರುವುದರ ಹೊರತಾಗಿ ಕಾಶ್ಮೀರ ಕಣಿವೆಯಲ್ಲಿ ವ್ಯವಹಾರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗಿಲ್ಲ’ ಎಂದು
ಹೇಳಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2020: ಲಂಡನ್:
ಪ್ರತಿಷ್ಠಿತ ಬ್ರಿಟನ್ ರಾಜಮನೆತನದ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಪತ್ನಿ ಮೇಘನ್ ಅರಮನೆಯ ಜವಾಬ್ದಾರಿಗಳನ್ನು ಅವರು
2020 ಜನವರಿ 19ರ ಭಾನುವಾರ
ಅಧಿಕೃತವಾಗಿ ತೊರೆದರು. ಪ್ರಿನ್ಸ್ ಹ್ಯಾರಿ ಮತ್ತು
ಮೇಘನ್ ಇನ್ನು ಮುಂದೆ ಅವರ ಕೆಲಸಗಳಿಗೆ ಸಾರ್ವಜನಿಕ ಹಣವನ್ನು ಬಳಸುವುದಿಲ್ಲ ಎಂದು ಬಕಿಂಗ್ ಹ್ಯಾಮ್ ಅರಮನೆಯ ಅಧಿಕೃತ ಘೋಷಣೆ ತಿಳಿಸಿತು. ಅದಲ್ಲದೆ
ಮುಂದಿನ ವಸಂತ ಋತುವಿನಿಂದಲೇ ಅರಮನೆಯಲ್ಲಿ ಹೊಸ ವ್ಯವಸ್ಥೆಗಳು ಜಾರಿಯಾಗಲಿದೆ ಎಂದು ಅದು ಪ್ರಕಟಿಸಿತು. ಹತ್ತು ದಿನಗಳ
ಹಿಂದಷ್ಟೇ ಪ್ರಿನ್ಸ್ ಹ್ಯಾರಿ ದಂಪತಿ ತಾವು ಅರಮನೆ ಐಷಾರಾಮಿ ಜೀವನವನ್ನು ತೊರೆಯುವುದಾಗಿ ಘೋಷಿಸಿದ್ದರು. ರಾಜಮನೆತನದ ಗೌರವಗಳಾದ ರಾಜ ಮತ್ತು ರಾಣಿ ಪದವಿ ತಮಗೆ ಬೇಡ ಎಂದು ಹ್ಯಾರಿ ಮತ್ತು ಮೇಘನ್ ಹೇಳಿದ್ದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)
No comments:
Post a Comment