ನಾನು ಮೆಚ್ಚಿದ ವಾಟ್ಸಪ್

Friday, January 10, 2020

ಇಂದಿನ ಇತಿಹಾಸ History Today ಜನವರಿ 10

2020: ನವದೆಹಲಿ: ಅಂತರ್ಜಾಲ (ಇಂಟರ್ ನೆಟ್) ಸಂಪರ್ಕ ಪಡೆಯುವ ಹಕ್ಕು ಭಾರತೀಯ ಸಂವಿಧಾನದ ೧೯ನೇ ಪರಿಚ್ಛೇದದ ಅಡಿಯಲ್ಲಿ ಮೂಲಭೂತ ಹಕ್ಕು ಎಂಬುದಾಗಿ ಮಹತ್ವದ ತೀರ್ಪೊಂದನ್ನು  2020 ಜನವರಿ 10ರ ಶುಕ್ರವಾರ ನೀಡಿದ ಸುಪ್ರೀಂಕೋರ್ಟ್,  ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಿಸಲಾಗಿರುವ ಎಲ್ಲ ನಿರ್ಬಂಧಕ ಆಜ್ಞೆಗಳನ್ನು ಒಂದು ವಾರದ ಒಳಗಾಗಿ ಪುನರ್ ಪರಿಶೀಲನೆ ಮಾಡುವಂತೆ  ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತಕ್ಕೆ ನಿರ್ದೇಶನ ನೀಡಿತು.  ಅಂತರ್ಜಾಲದ ಮೇಲೆ ವಿಧಿಸಲಾಗುವ ನಿರ್ಬಂಧಗಳು ಸಂವಿಧಾನದ ೧೯() ಪರಿಚ್ಛೇದ ಅಡಿಯಲ್ಲಿನ ನಿಯಮಗಳಿಗೆ ಅನುಗುಣವಾಗಿರಬೇಕು. ೧೯ನೇ ಪರಿಚ್ಛೇದದ ಅನ್ವಯ ಭಾರತದ ಪ್ರಜೆಗಳಿಗೆ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಅಂತರ್ಜಾಲ ಬಳಕೆಯ ಸ್ವಾತಂತ್ರ್ಯವೂ ಸೇರುತ್ತz’ ಎಂದು ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು ಹೇಳಿತು. ನ್ಯಾಯಮೂರ್ತಿಗಳಾದ  ಆರ್. ಸುಭಾಷ್ ರೆಡ್ಡಿ ಮತ್ತು ಬಿ.ಆರ್. ಗವಾಯಿ ಅವರು ಪೀಠದ ಇತರ ಸದಸ್ಯರಾಗಿದ್ದರು. ಪ್ರದೇಶದಲ್ಲಿ ಅಂತರ್ಜಾಲ ಸ್ಥಗಿತಗೊಳಿಸಿರುವುದು ಸೇರಿದಂತೆ ಎಲ್ಲ ನಿರ್ಬಂಧಕಾಜ್ಞೆಗಳನ್ನು ಒಂದು ವಾರದ ಒಳಗಾಗಿ ಪುನರ್ ಪರಿಶೀಲಿಸಿ ಪ್ರಕಟಿಸಬೇಕು ಎಂದು ಹೇಳಿದ ಪೀಠ, ಆಸ್ಪತ್ರೆಗಳಂತಹ ಎಲ್ಲ ಅಗತ್ಯ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಮತ್ತು ಶಿಕ್ಷಣ ಕೇಂದ್ರಗಳಲ್ಲಿ ತುರ್ತಾಗಿ ಇಂಟರ್ ನೆಟ್ ಸೇವೆ ಪುನಃಸ್ಥಾಪನೆ ಮಾಡುವಂತೆ ನಿರ್ದೇಶನ ನೀಡಿತು. (ವಿವರಗಳಿಗೆ ಇಲ್ಲಿ   ಕ್ಲಿಕ್ ಮಾಡಿರಿ)

2020: ಬೆಂಗಳೂರು
: ೨೦೧೮ನೇ ಸಾಲಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಕರಾಳ ರಾತ್ರಿಸಿನಿಮಾ 
ಆಯ್ಕೆಯಾಯಿತು.   ರಾಮನ ಸವಾರಿಮತ್ತುಒಂದಲ್ಲಾ ಎರಡಲ್ಲಾಚಲನಚಿತ್ರಗಳು  ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾದವು.  ರಿಷಬ್ ಶೆಟ್ಟಿ ನಿರ್ದೇಶನಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುಸಿನಿಮಾ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಗೆ, ’ಸಂತಕವಿ ಕನಕದಾಸ ರಾಮಧಾನ್ಯಸಿನಿಮಾ ವಿಶೇಷ ಸಾಮಾಜಿಕ ಕಾಳಜಿಯ ಪ್ರಶಸ್ತಿಗೆ ಹಾಗೂ ಅತ್ಯುತ್ತಮ ಮಕ್ಕಳ ಚಿತ್ರವಾಗಿಹೂ ಬಳ್ಳಿಆಯ್ಕೆಯಾದವು. ಅತ್ಯುತ್ತಮ ನಟನಾಗಿ ರಾಘವೇಂದ್ರ ರಾಜಕುಮಾರ್, ಅತ್ಯುತ್ತಮ ನಟಿಯಾಗಿ ಮೇಘನಾ ರಾಜ್ ಮತ್ತು ಅತ್ಯುತ್ತಮ ಪೋಷಕ ನಟರಾಗಿ ಬಾಲಾಜಿ ಮನೋಹರ್ ಹಾಗೂ ಅತ್ಯುತ್ತಮ ಪೋಷಕ ನಟಿಯಾಗಿ ವೀಣಾ ಸುಂದರ್ ಆಯ್ಕೆಯಾದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ೨೦೧೮ ನೆ ಕ್ಯಾಲೆಂಡರ್ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು 2020 ಜನವರಿ 10ರ ಶುಕ್ರವಾರ  ಪ್ರಕಟಿಸಿದರು. ಆಯ್ಕೆ ಸಮಿತಿಗಳ ಅಧ್ಯಕ್ಷರುಗಳಾದ ಜೋಸೈಮನ್, ವಸಂತಕುಮಾರ್ ಪಾಟೀಲ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್ ಎನ್. ಸಿದ್ದರಾಮಪ್ಪ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)
2020: ನವದೆಹಲಿ: ಕಳೆದ  2020  ಜನವರಿ 5ರ ಭಾನುವಾರ ಜವಹರಲಾಲ್  ನೆಹರೂ ವಿಶ್ವ ವಿದ್ಯಾಲಯದ  ಆವರಣದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಂಟು ಮಂದಿ ಶಂಕಿತರ ಪಟ್ಟಿಯನ್ನು 2020 ಜನವರಿ 10ರ ಶುಕ್ರವಾರ  ಬಿಡುಗಡೆಗೊಳಿಸಿದರು. ಜನವರಿ 5ರ  ರವಿವಾರ ಮಧ್ಯಾಹ್ನ ಪೆರಿಯಾರ್ ಹಾಸ್ಟೆಲ್ ನಲ್ಲಿ ನಡೆದಿದ್ದ ಘರ್ಷಣೆಗೆ ಸಂಬಂಧಿಸಿದ ಶಂಕಿತರ ಪಟ್ಟಿ ಇದಾಗಿದೆ.  ಇವರಲ್ಲಿ ಜೆ.ಎನ್.ಯು. ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥೆ ಐಶೆ ಘೋಷ್ ಅವರ ಹೆಸರೂ ಸೇರಿದೆ. ಘರ್ಷಣೆಯಲ್ಲಿ ಮುಸುಕುಧಾರಿ ವ್ಯಕ್ತಿಗಳಿಂದ ಹಲ್ಲೆಗೊಳಗಾಗಿದ್ದ ಐಶೆ ಘೋಷ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಪೋಲಿಸರು ಗುರುತಿಸಿರುವ ಶಂಕಿತರಲ್ಲಿ ಹೆಚ್ಚಿನವರು ಎಡಪಂಥೀಯ ಸಂಘಟನೆಗಳಿಗೆ ಸೇರಿದವರಾಗಿದವರಾಗಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಸಿಪಿ (ಕ್ರೈಂ) ಜಾಯ್ ತಿರ್ಕೆ ಅವರು ಶಂಕಿತರ ಹೆಸರು ಮತ್ತು ಅವರ ಭಾವಚಿತ್ರಗಳನ್ನು ಬಹಿರಂಗಗೊಳಿಸಿದ್ದಾರೆ. ಆದರೆ ಹಿಂಸಾಚಾರಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಕಲೆಹಾಕಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಘರ್ಷಣೆ ಸಂಭವಿಸುವುದಕ್ಕೂ ಒಂದು ದಿನ ಮೊದಲೇ ಸರ್ವರ್ ಕೊಠಡಿಯನ್ನು ಹಾನಿಗೊಳಿಸಿ ಪುಡಿಗೈಯಲಾಗಿತ್ತು ಎಂಬ ಮಾಹಿತಿಯನ್ನು ತಿರ್ಕೆ ಅವರು ಇದೆ ಸಂದರ್ಭದಲ್ಲಿ ನೀಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ನೂತನ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿವಿಧ 
ಸೆರೆಮನೆಗಳಲ್ಲಿ  ಬಂಧಿಸಿ  ಇಡಲಾಗಿರುವ ೨೬ ಮಂದಿಯ ವಿರುದ್ಧದ ಕಠಿಣ ಸಾರ್ವಜನಿಕ ಸುರಕ್ಷಾ ಕಾಯ್ದೆಯನ್ನು ಆಡಳಿತವು  2020 ಜನವರಿ 09ರ ಶುಕ್ರವಾರ ರದ್ದು ಪಡಿಸಿತು.  ಪ್ರದೇಶದ ಪರಿಸ್ಥಿತಿಯನ್ನು ಸಹಜಗೊಳಿಸುವ ನಿಟ್ಟಿನಲ್ಲಿ ಕೇಂದ್ರಾಡಳಿತವು ನಡೆಸಿರುವ ಯತ್ನ ಇದು ಎಂದು ಭಾವಿಸಲಾಯಿತು. ೨೦೧೮ರ ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ವ್ಯಕ್ತಿಗಳನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. ಕಳೆದ ಡಿಸೆಂಬರಿನಲಿ ಒಬ್ಬ ರಾಜ್ಯ ಸಚಿವ ಮತ್ತು ಮೂವರು ಮಾಜಿ ಶಾಸಕರು ಸೇರಿದಂತೆ ಐವರು ರಾಜಕಾರಣಿಗಳನ್ನು ರಾಜ್ಯ ಆಡಳಿತವು ಬಿಡುಗಡೆ ಮಾಡಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)
  


No comments:

Post a Comment