ನಾನು ಮೆಚ್ಚಿದ ವಾಟ್ಸಪ್

Saturday, January 11, 2020

ಇಂದಿನ ಇತಿಹಾಸ History Today ಜನವರಿ 11

2020: ಕೋಚಿ/ ನವದೆಹಲಿ: ಸುಪ್ರೀಂಕೋರ್ಟ್ ಆದೇಶದ ನಾಲ್ಕು ತಿಂಗಳುಗಳ ಬಳಿಕ ಕೇರಳದ ಕೋಚಿಯಲ್ಲಿ ಜಲಾಭಿಮುಖವಾಗಿ ತಲೆಎತ್ತಿ ನಿಂತಿದ್ದ ಒಟ್ಟು ೧೫೮ ಫ್ಲ್ಯಾಟ್ಗಳಿದ್ದ ಎರಡು ಕಟ್ಟಡಗಳನ್ನು ನಿಯಂತ್ರಿತ ಸ್ಫೋಟದ ಮೂಲಕ ಕ್ಷಣಮಾತ್ರದಲ್ಲಿ ನೆಲಸಮ ಗೊಳಿಸುವುದರೊಂದಿಗೆ ತೀವ್ರ ವಿವಾದಕ್ಕೆ ಗುರಿಯಾಗಿದ್ದ ಮರಡು ಫ್ಲ್ಯಾಟ್ಗಳು 2020 ಜನವರಿ 11ರ ಶನಿವಾರ ನೆನಪಿನ ಅಂಗಳಕ್ಕೆ ಸರಿದವು.  ಬಹುಅಂತಸ್ತಿನ ನಾಲ್ಕು ಕಟ್ಟಡಗಳ ಪೈಕಿ ಎಚ್ ೨೦ ಹೋಲಿ ಫೈತ್ ಮತ್ತು ಆಲ್ಫಾ ಸೆರೇನ್ ಹೆಸರಿನ ಕಟ್ಟಡಗಳು ಶನಿವಾರ ಇಸ್ಪೇಟು ಎಲೆಗಳಿಂದ ನಿರ್ಮಿಸಿದ ಕಟ್ಟಡದಂತೆ ದಪದಪನೆ ಕೆಳಕ್ಕುರುಳಿ, ಇಡೀ ಪ್ರದೇಶದಲ್ಲಿ ದೂಳಿನ ಕಾರ್ಮೋಡ ಆವರಿಸಿತು.  ಸುಪ್ರೀಂಕೋರ್ಟ್ ಆದೇಶದಂತೆ ಜಲಾಭಿಮುಖಿ ಅಪಾರ್ಟ್ಮೆಂಟ್ಗಳ ನೆಲಸಮ ಕಾರ್ಯಾಚರಣೆಯನ್ನು  ಈದಿ ನ ಆರಂಭಿಸಿದ ಆಡಳಿತವು ಬೆಳಗ್ಗೆ ೧೧ ಗಂಟೆಗೆ ಎಚ್೨೦ ಹೋಲಿಫೈತ್ ಹೆಸರಿನ ಕಟ್ಟಡವನ್ನು ನಿಯಂತ್ರಿತ ಸ್ಫೋಟದ ಮೂಲಕ ಕೆಲವೇ ಕ್ಷಣಗಳಲ್ಲಿ ಧರೆಗೆ ಉರುಳಿಸಿತು. ಮೊದಲ ಕಟ್ಟಡ ದೂಳೀಪಟವಾದ ಬೆನ್ನಲ್ಲೇ ಆಲ್ಫಾ ಸೆರೇನ್ ಹೆಸರಿನ ಇನ್ನೊಂದು ಕಟ್ಟಡವನ್ನು ಉರುಳಿಸಲಾಯಿತು. ಉಳಿದ ಜೈನ್ ಕೋರಲ್ ಕೇವ್ ಮತ್ತು ಗೋಲ್ಡನ್ ಕಯಲೋರಂ ಹೆಸರಿನ ಅಪಾರ್ಟ್ಮೆಂಟ್ಗಳ ನೆಲಸಮ ಕಾರ್ಯಾಚರಣೆಯನ್ನು 2020 ಜನವರಿ 11ರ ಭಾನುವಾರ ಕೈಗೆತ್ತಿಕೊಳ್ಳಲಾಗುವುದು. ವಸತಿ ಹಾಗೂ ವಾಣಿಜ್ಯ ಕಟ್ಟಡಗಳು ಸೇರಿದಂತೆ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯಾಚರಣೆಯಲ್ಲಿ ಭಾರತದಲ್ಲೇ ಅತ್ಯಂತ ಬೃಹತ್ ಪ್ರಮಾಣದ ನೆಲಸಮ ಕಾರ್ಯಾಚರಣೆ ಇದಾಗಿತ್ತು (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ಬೆಂಗಳೂರು: ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಸಂಶೋಧಕ, ಕನ್ನಡ ಹೋರಾಟಗಾರ ಡಾ. ಎಂ.ಚಿದಾನಂದಮೂರ್ತಿ ಅವರು 2020 ಜನವರಿ 11ರ  ಶನಿವಾರ ಮುಂಜಾನೆ :೪೫ ಸಮಯದಲ್ಲಿ ವಿಧಿವಶರಾದರು. ಚಿ.ಮೂ. ಎಂಬುದಾಗಿಯೇ ಅವರು ಜನಪ್ರಿಯರಾಗಿದ್ದರು. ಇಂದು ಬೆಳಗ್ಗೆ ಗಂಟೆಯ ನಂತರ ವಿಜಯನಗರದ ಆರ್ ಪಿಸಿ ಲೇಔಟಿನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಚಿದಾನಂದಮೂರ್ತಿ ೧೯೩೧ ಮೇ ೧೦ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಹಿರೆಕೊಗಳೂರಿ ನಲ್ಲಿ ಜನಿಸಿದ್ದರು. ಅವರಿಗೆ ೮೮ ವರ್ಷ ವಯಸ್ಸಾಗಿತ್ತು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಈದಿನ  ಕೊನೆಯುಸಿರೆಳೆದರು. ಸಾಹಿತ್ಯ, ಸಂಶೋಧನೆ ಮತ್ತು ಇತಿಹಾಸ ಕ್ಷೇತ್ರದಲ್ಲಿ  ಸೇವೆ ಸಲ್ಲಿಸಿರುವ ಚಿದಾನಂದಮೂರ್ತಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿದ್ದವು.  ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಹೋರಾಟ ಮಾಡಿದವರಲ್ಲಿ ಚಿ.ಮೂ ಪ್ರಮುಖರು. ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಚಿದಾನಂದಮೂರ್ತಿ ನಿರಂತರ ಹೋರಾಟ ಮಾಡಿದ್ದರು. ಸಂಶೋಧಕರಾಗಿ ಹಲವು ಸಾಧನೆಗಳನ್ನು ಮಾಡಿದ್ದಾರೆ.  ಪ್ರಾಧ್ಯಾಪಕರಾಗಿಯೂ ಚಿಮೂ  ಸೇವೆ ಸಲ್ಲಿಸಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ದುಬೈ: ಭಾರಿ ಚರ್ಚೆಗೆ ಗ್ರಾಸವಾಗಿದ್ದ ಉಕ್ರೇನ್ ಇಂಟರ್ ನ್ಯಾಷನಲ್ ಏರ್ಲೈನ್ಸ್ ಬೋಯಿಂಗ್ ವಿಮಾನ ಪತನಗೊಳ್ಳಲು ತಾನೇ ಕಾರಣ ಎಂದು ಇರಾನ್  2020 ಜನವರಿ 11ರ ಶನಿವಾರ ಒಪ್ಪಿಕೊಂಡಿತು.  ಆದರೆ ಇದು ಮಾನವ ತಪ್ಪು ಗ್ರಹಿಕೆಯಿಂದ ಆದ ದುರಂತವೇ ಹೊರತು ಉದ್ದೇಶಪೂರ್ವಕ ಅಲ್ಲ ಇರಾನ್ ಪ್ರತಿಪಾದಿಸಿತು. ಕ್ರೂಸ್ ಕ್ಷಿಪಣಿ ಎಂಬುದಾಗಿ ತಪ್ಪಾಗಿ ಗ್ರಹಿಸಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬುದಾಗಿ ಇರಾನ್ ತಪ್ಪೊಪ್ಪಿಕೊಂಡ ಬೆನ್ನಲ್ಲೇ ಉಕ್ರೇನ್ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಮತ್ತು ಪರಿಹಾರ ನೀಡುವಂತೆಇರಾನನ್ನು ಆಗ್ರಹಿಸಿತು. ವಿಮಾನ ಪತನಕ್ಕೆ ಸಂಬಂಧಿಸಿದಂತೆ ತನಿಖೆಗೆ ಮಿಲಿಟರಿ ನ್ಯಾಯಾಂಗ ಇಲಾಖೆಗೆ ಆದೇಶ ನೀಡಲಾಗಿತ್ತು. ಇರಾನ್ ವಿದೇಶಾಂಗ ಸಚಿವ ಜಾವೇದ್ ಜರೀಫ್ ಅವರು ಟ್ವೀಟ್ ಮಾಡಿ, ಸೇನೆ ಕೈಗೊಂಡ ಆಂತರಿಕ ತನಿಖೆಯಲ್ಲಿ ಅಮೆರಿಕದ ದುಸ್ಸಾಹಸದಿಂದ ಉಂಟಾದ ಬಿಕ್ಕಟ್ಟಿನ ಸಮಯದಲ್ಲಿ ಮಾನವ ದೋಷದಿಂದಾಗಿ ವಿಪತ್ತು ಸಂಭವಿಸಿರುವುದು ಬೆಳಕಿಗೆ ಬಂದಿದೆ. ದುರಂತದಲ್ಲಿ ಮೃತರಾದವರ ಮತ್ತು ಸಂಬಂಧಿಸಿದ ರಾಷ್ಟ್ರಗಳಿಗೆ ತೀವ್ರ ವಿಷಾದ ಸೂಚಿಸುತ್ತಾ ಕ್ಷಮೆ ಕೋರುತ್ತೇವೆ ಎಂದು ಟ್ವೀಟ್ ಮಾಡಿದರು. ‘ಕ್ರೂಸ್ ಕ್ಷಿಪಣಿ ಎಂಬುದಾಗಿ ತಪ್ಪಾಗಿ ಭಾವಿಸಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಲಾಗಿತ್ತುಎಂದು ಹಿರಿಯ ರೆವಲ್ಯೂಷನರಿ ಗಾಡ್ಸ್ ಕಮಾಂಡರ್ ಹೇಳಿದ್ದನ್ನು ಕೂಡಾ ಇರಾನಿನ ಸರ್ಕಾರಿ ಸ್ವಾಮ್ಯದ ಟೆಲಿವಿಷನ್ ಶನಿವಾರ ವರದಿ ಮಾಡಿತು. ವಿಮಾನವನ್ನು ಸಮೀಪವಲಯ ಸಾಮರ್ಥ್ಯದ ಕ್ಷಿಪಣಿ ಮೂಲಕ ಹೊಡೆದುರುಳಿಸಲಾಯಿತು ಎಂದು ಏರೋಸ್ಪೇಸ್ ವಿಭಾಗದ ಮುಖ್ಯಸ್ಥ ಅಮೀರಾಲಿ ಹಾಜಿದಾದೇಹ್ ಹೇಳಿದರು. ‘ನಾನು ಸಾಯಲು ಬಯಸುತ್ತೇನೆಯೇ ಹೊರತು ಇಂತಹ ದುರಂತವನ್ನು ನೋಡಲು ಅಲ್ಲಎಂದು ಅಮೀರಾಲಿ ನುಡಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಬಗ್ಗೆ ಚರ್ಚಿಸಲು ದೆಹಲಿಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಆಹ್ವಾನಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು  2020 ಜನವರಿ 11ಶನಿವಾರ ಇಲ್ಲಿ ಪ್ರಕಟಿಸಿದರು. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಸಿಎಎ ಮತ್ತು ಎನ್ಆರ್ಸಿ ವಿಷಯವಾಗಿ ನಡೆದ ತೀವ್ರ ಪ್ರತಿಭಟನೆಗಳ ಮಧ್ಯೆ, ರಾಜಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ೧೫ ನಿಮಿಷಗಳ ಕಾಲ ಮಾತುಕತೆ ನಡೆಸಿದ ಮಮತಾ ಬ್ಯಾನರ್ಜಿ, ರಾಜ್ಯಕ್ಕೆ ಬಿಡುಗಡೆ ಮಾಡಲು ಬಾಕಿ ಇರುವ ೩೮,೦೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆಯೂ ಆಗ್ರಹಿಸಿದರು. ‘ನೀವು ನಮ್ಮ ಅತಿಥಿ, ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರ ನೋಂದಣಿಗೆ (ಎನ್ಆರ್ಸಿ) ನಾವು ವಿರೋಧವಾಗಿದ್ದೇವೆ ಎಂಬುದನ್ನು ಇಲ್ಲಿ ಪ್ರಸ್ತಾಪಿಸಬಹುದೇ ಎಂದು ನನಗೆ ಗೊತ್ತಿಲ್ಲ. ಇವು ಜನರನ್ನು ವಿಭಜಿಸುತ್ತವೆ. ದಯವಿಟ್ಟು ಮರುಪರಿಶೀಲನೆ ಮಾಡಿಎಂಬುದಾಗಿ ನಾನು ಹೇಳಿದ್ದೇನೆಎಂದು ಬ್ಯಾನರ್ಜಿ ನುಡಿದರು. ’ಅವರು (ಮೋದಿ) ವಿಷಯದ ಬಗ್ಗೆ ಚರ್ಚಿಸಲು ದೆಹಲಿಗೆ ಬನ್ನಿ ಎಂದು ಆಹ್ವಾನಿಸಿದರುಎಂದು ಮಮತಾ ಹೇಳಿದರು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಬಾಕಿ ಹಣ ಬಿಡುಗಡೆ ಮಾಡುವಂತೆಯೂ ನಾನು ಕೋರಿದೆ. ದೆಹಲಿಗೆ ಹಿಂದಿರುಗಿದ ಬಳಿಕ ಪರಿಶೀಲಿಸುವುದಾಗಿ ಪ್ರಧಾನಿ ಭರವಸೆ ಕೊಟ್ಟರು ಎಂದೂ ಮುಖ್ಯಮಂತ್ರಿ  ನುಡಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ಮುಂಬೈ: ಮುಂಬೈಗೆ ಸಮೀಪದ ತಾರಾಪುರದಲ್ಲಿನ ರಾಸಾಯನಿಕ ವಲಯದ ರಸಗೊಬ್ಬರ ಕಾರ್ಖಾನೆ ಒಂದರಲ್ಲಿ 2020 ಜನವರಿ 11ರ  ಶನಿವಾರ ಸಂಜೆ ತಡವಾಗಿ ಸ್ಫೋಟ ಸಂಭವಿಸಿದ್ದು, ಕನಿಷ್ಠ ಮಂದಿ ಸಾವನ್ನಪ್ಪಿದ್ದಾರೆ ಎಂದು ಭೀತಿ ಪಡಲಾಯಿತು.  ಘಟನೆಯಲ್ಲಿ ಕನಿಷ್ಠ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಖಾನೆಯಲ್ಲಿ ಉತ್ಪಾದನಾ ಕಾರ್ಯ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿತು ಎನ್ನಲಾಯಿತು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜನವರಿ11  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment