ನಾನು ಮೆಚ್ಚಿದ ವಾಟ್ಸಪ್

Thursday, January 30, 2020

ಇಂದಿನ ಇತಿಹಾಸ History Today ಜನವರಿ 30

2020: ನವದೆಹಲಿ: ದಕ್ಷಿಣ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಬಳಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರ ನೋಂದಣಿ ವಿರೋಧಿ ಪ್ರತಿಭಟನಾಕಾರರ ಮೇಲೆ ವ್ಯಕ್ತಿಯೊಬ್ಬ ಪಿಸ್ತೂಲು ಝಳಪಿಸುತ್ತಾ ಗುಂಡು ಹಾರಿಸಿದ ಘಟನೆ  2020 ಜನವರಿ 30ರ ಗುರುವಾರ ಘಟಿಸಿದ್ದು, ವಿದಾರ್ಥಿಯೊಬ್ಬ ಗುಂಡೇಟಿನಿಂದ ಗಾಯಗೊಂಡ ಎಂದು ವರದಿಗಳು ತಿಳಿಸಿದವು.  ಗುಂಡು ಹಾರಿಸಿದ ವ್ಯಕ್ತಿಯನ್ನು ಉತ್ತರ ಪ್ರದೇಶದ ಜೇವಾರ್ ಜಿಲ್ಲೆಯ ೩೧ರ ಹರೆಯದ ಗೋಪಾಲ್ ಎಂಬುದಾಗಿ ಗುರುತಿಸಲಾಯಿತು.  ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. "ಪಿಸ್ತೂಲು ಝಳಪಿಸುತ್ತ ಬಂದ ಯುವಕಯೇ ಲೋ ಆಜಾದಿ, ಆವೋ ಮೈ ಶೂಟ್ ಕರೂಂಗಾ (ಇದೋ ತೆಗೆದುಕೊಳ್ಳಿ ಸ್ವಾತಂತ್ರ್ಯ, ಬನ್ನಿ ನಾನು ನಿಮ್ಮ ಮೇಲೆ ಗುಂಡು ಹಾರಿಸುತ್ತೇನೆಎಂದು ಘೋಷಣೆ ಕೂಗುತ್ತಾ ಪ್ರತಿಭಟನಕಾರರತ್ತ ಗುಂಡು ಹಾರಿಸಿದ ಎಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದ ಪ್ರತ್ಯಕ್ಷದರ್ಶಿ ವಿದ್ಯಾರ್ಥಿಯೊಬ್ಬರು  ಹೇಳಿದರು. ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಗುಂಡು ಹಾರಿಸಿದ ಘಟನೆಯ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಗುಂಡು ಹಾರಿಸಿದ ವ್ಯಕ್ತಿಜೈ ಶ್ರೀ ರಾಮ್ಘೋಷಣೆ ಕೂಗುತ್ತಿರುವುದು ಮತ್ತು ಪ್ರತಿಭಟನಾಕಾರರು ಭಾರತದಲ್ಲಿ ಉಳಿಯಲು ಬಯಸಿದರೆವಂದೇ ಮಾತರಂಜಪಿಸಬೇಕುಎಂದು ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದ್ದು ದಾಖಲಾಗಿದೆ. ಗುಂಡೇಟಿನಿಂದ ಗಾಯಗೊಂಡ ವಿದ್ಯಾರ್ಥಿಯನ್ನು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಶಾದಾಬ್ ಫರೂಕ್ ಎಂಬುದಾಗಿ ಗುರುತಿಸಲಾಗಿದ್ದು ಅವರ ಕೈಗೆ ಗುಂಡು ತಗುಲಿದೆ. ಘಟನೆಯ ಬೆನ್ನಲ್ಲೆ ಗಾಯಾಳುವನ್ನು ಜಾಮಿಯಾ ನಗರದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸೇರಿಸಿ ಬಳಿಕ ಏಮ್ಸ್ಗೆ ಸ್ಥಳಾಂತರಿಸಲಾಯಿತು. ಗಾಯಾಳುವಿನ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿದವು.  ವಿಶ್ವವಿದ್ಯಾಲಯದ ಆವರಣದಿಂದ ಮಧ್ಯ ದೆಹಲಿಯ ಜಂತರ್ ಮಂತರ್ಗೆ ಪ್ರತಿಭಟನಾ ಮೆರವಣಿಗೆ ಹೋಗುತ್ತಿದ್ದಾಗ ಘಟನೆ ಘಟಿಸಿತು. ಘಟನೆ ನಡೆದಾಗ ಅಲ್ಲಿದ್ದ ಪೊಲೀಸರು ಘಟನೆಯನ್ನು ನೋಡುತ್ತಾ ಮೂಕ ಪ್ರೇಕ್ಷಕರಾಗಿ ನಿಂತಿದ್ದರು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಪಾದಿಸಿದರು. ಗುಂಡು ಹಾರಾಟದ ಘಟನೆಯ ಬಳಿಕ, ಹೆಚ್ಚಿನ ಪ್ರತಿಭಟನೆಗಳಾಗಬಹುದು ಎಂಬ ಹಿನ್ನೆಲೆಯಲ್ಲಿ ದೆಹಲಿಯ ಮೂರು ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಾದ ಜಾಮಾ ಮಸೀದಿ, ಐಟಿಒ ಮತ್ತು ದೆಹಲಿ ಗೇಟ್ ದ್ವಾರಗಳನ್ನು ಅಧಿಕಾರಿಗಳು ಮುಚ್ಚಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನ ಪೀಠವು 2020 ಜನವರಿ 30ರ ಗುರುವಾರ ತಿರಸ್ಕರಿಸಿತು. ತನ್ನ ಕೊಠಡಿಯಲ್ಲೇ ಅರ್ಜಿಯನ್ನು ಆಲಿಸಿದ ಬಳಿಕ ಗಲ್ಲು ಶಿಕ್ಷೆಯಿಂದ ಪಾರುಮಾಡುವಂತೆ ಕೋರಿರುವ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿ ಪೀಠವು ಅರ್ಜಿಯನ್ನು ವಜಾಗೊಳಿಸಿತು. ಮರಣದಂಡನೆಗೆ ತಡೆಯಾಜ್ಞೆ ನೀಡುವಂತೆ ಮಾಡಿದ ಅಕ್ಷಯ್ ಮನವಿಯಲ್ಲೂ ಯಾವುದೇ ಅರ್ಹತೆ ಇಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು. ನಾಲ್ಕೂ ಮಂದಿ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ಈಗಾಗಲೇ ಫೆಬ್ರುವರಿ ೧ರ ದಿನಾಂಕವನ್ನು ನಿಗದಿ ಪಡಿಸಿ  ಡೆತ್ ವಾರಂಟ್ ಹೊರಡಿಸಲಾಗಿದೆದೆಹಲಿ ಕೋರ್ಟ್ ನಿರ್ದೇಶನ:   ಬೆಳವಣಿಗೆಯ ಮಧ್ಯೆ, ದೆಹಲಿಯ ವಿಚಾರಣಾ ನ್ಯಾಯಾಲಯವು ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡುವಂತೆ ನಿರ್ಭಯಾ ಪ್ರಕರಣದ ಶಿಕ್ಷಿತ ಅಪರಾಧಿಗಳು ಸಲ್ಲಿಸಿದ ಮನವಿಗೆ ಉತ್ತರ ನೀಡುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ  2020 ಜನವರಿ 30ರ ಗುರುವಾರ  ಆಜ್ಞಾಪಿಸಿತು. ವಿಶೇಷ ನ್ಯಾಯಾಧೀಶ ಎಕೆ ಜೈನ್ ಅವರು ಜನವರಿ ೩೧ರ  ಶುಕ್ರವಾರ ಬೆಳಗ್ಗೆ ೧೦ ಗಂಟೆ ಒಳಗಾಗಿ ತಮ್ಮ ಉತ್ತರವನ್ನು ಸಲ್ಲಿಸುವಂತೆ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ:  ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರ ಮೇಲೆ ಅಪ್ರಾಪ್ತ ವಯಸ್ಕನೆಂದು ಹೇಳಲಾಗುತ್ತಿರುವ ಶಸ್ತ್ರಧಾರಿ ವ್ಯಕ್ತಿ ಗುಂಡು ಹಾರಿಸಿದ ಘಟನೆಯ ಬೆನ್ನಲ್ಲೆ 2020 ಜನವರಿ 30ರ ಗುರುವಾರ ದೆಹಲಿ ಪೊಲೀಸ್ ಕಮೀಷನರ್ ಜೊತೆಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾಅಪರಾಧಿಯನ್ನು ಬಿಡುವುದಿಲ್ಲಎಂದು ಹೇಳಿದರು. ‘ನಾನು ದೆಹಲಿ ಪೊಲೀಸ್ ಕಮೀಷನರ್ ಜೊತೆಗೆ ಶೂಟಿಂಗ್ ಘಟನೆಯ (ಜಾಮಿಯಾ ಪ್ರದೇಶದಲ್ಲಿ) ಬಗ್ಗೆ ಮಾತನಾಡಿದ್ದೇನೆ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಅವರಿಗೆ ಸೂಚಿಸಿದ್ದೇನೆ. ಇಂತಹ ಯಾವುದೇ ಘಟನೆಯನ್ನು ಕೇಂದ್ರ ಸರ್ಕಾರವು ಸಹಿಸುವುದಿಲ್ಲ, ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅಪರಾಧಿಯನ್ನು ಬಿಟ್ಟು ಬಿಡಲಾಗುವುದಿಲ್ಲಎಂದು ಶಾ ಹಿಂದಿಯಲ್ಲಿ ಟ್ವೀಟ್ ಮಾಡಿದರು. ಮಧ್ಯೆ, ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಕಾನೂನು ಮತ್ತು ಸುವ್ಯವಸ್ಥೆ ನಶಿಸುತ್ತಿರುವ ಬಗ್ಗೆ ಕಾಳಜಿ ವಹಿಸುವಂತೆ ಗೃಹ ಸಚಿವರನ್ನು ಒತ್ತಾಯಿಸಿದರು.  ‘ದೆಹಲಿಯಲ್ಲಿ ಏನಾಗುತ್ತಿದೆ? ಕಾನೂನು ಮತ್ತು ಸುವ್ಯವಸ್ಥೆ ನಶಿಸುತ್ತಿದೆ. ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ದಯವಿಟ್ಟು ಕಾಳಜಿ ವಹಿಸಿಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ:  ಚೀನಾದ ವುಹಾನ್ ನಗರದಿಂದ ಭಾರತಕ್ಕೆ ವಾಪಸಾಗಿರುವ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾವೈರಸ್ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ದೃಢ ಪಡಿಸಿತು. ಇದರೊಂದಿಗೆ ಕೇರಳದಲ್ಲಿ ಭಾರತದ ಮೊದಲ ಕೊರೋನಾವೈರಸ್ ಪ್ರಕರಣ ಪತ್ತೆಯಾಯಿತು.  ವುಹಾನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳಿಗೆ ನೂತನ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವ ಬಗ್ಗೆ ಕೇರಳದಿಂದ ವರದಿಯಾಗಿದೆ. ರೋಗಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಖಾತರಿಯಾಗಿದ್ದು ಆಕೆಯನ್ನು ಆಸ್ಪತ್ರೆಯಲ್ಲಿ ಏಕಾಂಗಿವಾಸದಲ್ಲಿ ಇರಿಸಲಾಗಿದೆ ಎಂದು ಅರೋಗ್ಯ ಸಚಿವಾಲಯ ಹೇಳಿತು. ವಿದ್ಯಾರ್ಥಿನಿಯ ಆರೋಗ್ಯ ಸ್ಥಿರವಾಗಿದ್ದು, ಆಕೆಯ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಕೇರಳ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ರಾಜ್ಯ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು ಮಧ್ಯಾಹ್ನ ಗಂಟೆಗೆ ತುರ್ತು ಸಭೆ ಕರೆದಿದ್ದರು. ರಾಜ್ಯದ ಎಲ್ಲ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜಿನಲ್ಲಿಏಕಾಂಗಿ ವಾಸ ವಾರ್ಡ್ಗಳನ್ನು ಸಜ್ಜುಗೊಳಿಸಲಾಗಿದೆ. ದೇಶದ ಪ್ರಪ್ರಥಮ ಕೊರೋನಾವೈರಸ್ ಕೇರಳದಲ್ಲಿ ಪತೆಯಾದ ಬಳಿಕ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಯಿತು. ಕೇರಳದಲ್ಲಿ ಒಟ್ಟು ೮೦೬ ಜನರನ್ನು ತೀವ್ರ ನಿಗಾದಲ್ಲಿ ಇರಿಸಲಾಯಿತು ಈ ಮಧ್ಯೆ, ದೆಹಲಿಯ ರಾಮಮನೋಹರ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಗೆ ದಾಖಲಾಗಿದ್ದ ಮೂವರು ರೋಗಿಗಳನ್ನು ಗುರುವಾರ ಕೊರೋನಾವೈರಸ್ ಸೋಂಕು ಇಲ್ಲವೆಂದು ಖಚಿತವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮೂರೂ ಮಂದಿಯ ಮೇಲೆ  ಅವರು ಉಸಿರಾಟದ ಸಮಸ್ಯೆ ಬಗ್ಗೆ ದೂರಿದ ಬಳಿಕ ಸೋಮವಾರದಿಮದ ವೈದ್ಯಕೀಯ ಚಿಕಿತ್ಸೆಗಾಗಿ ತೀವ್ರ ನಿಗಾ ಇಡಲಾಗಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)


ಇಂದಿನ ಇತಿಹಾಸ  History Today ಜನವರಿ30  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment