ನಾನು ಮೆಚ್ಚಿದ ವಾಟ್ಸಪ್

Friday, January 17, 2020

ಇಂದಿನ ಇತಿಹಾಸ History Today ಜನವರಿ 17

2020: ನವದೆಹಲಿ: ೨೦೧೨ರ ಡಿಸೆಂಬರ್ ತಿಂಗಳ ರಾತ್ರಿ ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ನಡೆದ ೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿನಿರ್ಭಯಾಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಧಿಸಲಾಗಿರುವ ಮರಣದಂಡನೆಯ ಜಾರಿಗಾಗಿ ದೆಹಲಿಯ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಅವರು 2020 ಜನವರಿ  17ರ ಶುಕ್ರವಾರ ಹೊಸದಾಗಿಡೆತ್ ವಾರಂಟ್ಜಾರಿಗೊಳಿಸಿದ್ದು, ಅಪರಾಧಿಗಳನ್ನು ಗಲ್ಲಿಗೇರಿಸಲು ಫೆಬ್ರುವರಿ ೧ರ ದಿನಾಂಕವನ್ನು ನಿಗದಿ ಪಡಿಸಲಾಯಿತು. ಈ ಹಿಂದೆ ಜನವರಿ ೨೨ರಂದು ಬೆಳಗ್ಗೆ ಗಂಟೆಗೆ ಗಲ್ಲು ಶಿಕ್ಷೆ ಜಾರಿಗೊಳಿಸುವಂತೆ ತಿಂಗಳ ಆದಿಯಲ್ಲಿಬ್ಲ್ಯಾಕ್ ವಾರಂಟ್ಜಾರಿಗೊಳಿಸಿದ್ದ ನ್ಯಾಯಾಧೀಶರುನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಮುಖೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕೃತವಾಗಿರುವ ಬಗ್ಗೆ ತಿಳಿಸಿದ ಬಳಿಕ ಶುಕ್ರವಾರ ಹೊಸದಾಗಿಡೆತ್ ವಾರಂಟ್ಎಂದೇ ಪರಿಗಣಿಸಲಾಗುವಬ್ಲ್ಯಾಕ್ ವಾರಂಟ್ಜಾರಿಗೊಳಿಸಿದರು. ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಅವರು ನೂತನ ವಾರಂಟ್ಗೆ ಸಹಿ ಹಾಕುವುದಕ್ಕೆ ಕೆಲವೇ ನಿಮಿಷಗಳ ಮುನ್ನ ನಡೆದ ವಿಚಾರಣೆ ವೇಳೆಯಲ್ಲಿ ಅಪರಾಧಿಗಳು ಸಲ್ಲಿಸಿದ ಇನ್ನೆರಡು ಮೇಲ್ಮನವಿಗಳು ಉನ್ನತ ನ್ಯಾಯಾಲಯಗಳಲ್ಲಿ ಈಗಲೂ ವಿಚಾರಣೆಗಾಗಿ ಬಾಕಿ ಉಳಿದಿವೆ ಎಂದು ವಕೀಲರು ತಿಳಿಸಿದರು. ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತ ಸುಪ್ರೀಂಕೋರ್ಟಿನಲ್ಲಿ ವಿಶೇಷ ಅರ್ಜಿಯನ್ನು (ಸ್ಪೆಷಲ್ ಲೀವ್ ಪಿಟಿಷನ್- ಎಸ್ ಎಲ್ ಪಿ) ಸಲ್ಲಿಸಿ ಅಪರಾಧ ಸಂಭವಿಸಿದ ಸಮಯದಲ್ಲಿ ತಾನು ಅಪ್ರಾಪ್ತ ವಯಸ್ಕನಾಗಿದ್ದುದಾಗಿ ಪ್ರತಿಪಾದಿಸಿದ್ದಾನೆ. ಪವನ್ ಗುಪ್ತ ಇದೇ ಪ್ರತಿಪಾದನೆಯನ್ನು ದೆಹಲಿ ಹೈಕೋರ್ಟಿನ ಮುಂದೆಯೂ ಮಾಡಿದ್ದು, ಹೈಕೋರ್ಟ್ ಆತನ ಅರ್ಜಿಯನ್ನು ವಜಾಗೊಳಿಸಿದ್ದಲ್ಲದೆ ಅದನ್ನು ದಾಖಲಿಸಿದ ವಕೀಲರಿಗೆ ೨೫,೦೦೦ ರೂಪಾಯಿಗಳ ದಂಡವನ್ನೂ ವಿಧಿಸಿತ್ತು. ಅರೋರಾ ಅವರು ವಕೀಲರು ಮಾಡಿದ ಮನವಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮರಣದಂಡನೆ ಜಾರಿಗೆ ನೂತನ ದಿನಾಕವನ್ನು ಘೋಷಿಸಿದರು. ‘ನಾನು ಫೆಬ್ರುವರಿ ೧ರಂದು ಬೆಳಗ್ಗೆ ಗಂಟೆಗಾಗಿ ಹೊಸ ಡೆತ್ ವಾರಂಟ್ ಜಾರಿಗೊಳಿಸುತ್ತಿದ್ದೇನೆಎಂದು ಒಂದು ವಾಕ್ಯದ ಆದೇಶದಲ್ಲಿ ಅವರು ತಿಳಿಸಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

ಬೆಂಗಳೂರು: ಭಾರತದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನೂತನ ಸ್ವದೇಶಿ ನಿರ್ಮಿತ ಉಪಗ್ರಹ ಜಿಸ್ಯಾಟ್ -೩೦ಯನ್ನು ಫ್ರೆಂಚ್ ಗಯಾನದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಫ್ರೆಂಚ್ ಗಯಾನದ ಕೌರು ಉಡಾವಣಾ ನೆಲೆಯಿಂದ ‘ಎರಿಯಾನ್-೫ ವಿಎ-೨೫೧ ರಾಕೆಟ್ ಮೂಲಕ 2020 ಜನವರಿ 17ರ ಶುಕ್ರವಾರ ಮುಂಜಾನೆ ಉಡಾವಣೆ ಮಾಡಲಾಯಿತು. ದೂರದರ್ಶನ ಪ್ರಸಾರ, ಟಿಲಿಕಮ್ಯುನಿಕೇಶನ್ಸ್, ಡಿಟಿಎಚ್ ಮತ್ತು ಇತರ ಪ್ರಸಾರ ಕ್ಷೇತ್ರಗಳ ಗುಣಮಟ್ಟ ಹೆಚ್ಚಿಸಲು ಈ ಉಪಗ್ರಹ ನೆರವಾಗಲಿದೆ. ಶುಕ್ರವಾರ ನಸುಕಿನ ೨.೩೫ರ ಸಮಯದಲ್ಲಿ ಯಶಸ್ವಿ ಉಡಾವಣೆ ಮಾಡಲಾಗಿದ್ದು, ಇಸ್ರೋದ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಯಿತು. ಏರಿಯಾನ್ ಸ್ಪೇಸ್ ನ ಏರಿಯಾನ್- ೫ ವಾಹನವು ಜಿಸ್ಯಾಟ್ -೩೦ ಜತೆಗೆ ಯೂಟೆಲ್ ಸ್ಯಾಟ್ ಕನೆಕ್ಟ್ ಎಂಬ ಮತ್ತೊಂದು ಉಪಗ್ರಹವನ್ನು ಹೊತ್ತು ಕಕ್ಷೆ ಸಾಗಿತು.  ಏರಿಯಾನ್ ೫ ವಾಹನವು ೩೮ ನಿಮಿಷಗಳಲ್ಲಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತು.

2020: ನವದೆಹಲಿ: ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿಂತೆ ಯಾವುದೇ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ಮಹಾತ್ಮ ಗಾಂಧಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಈ ವಿಚಾರದಲ್ಲಿ ಯಾವುದೇ ಆದೇಶ ನೀಡಲು ನಿರಾಕರಿಸಿತು. ಅಲ್ಲದೇ ಮಹಾತ್ಮ ಗಾಂಧಿ ಭಾರತ ರತ್ನ ಪ್ರಶಸ್ತಿಗಿಂತ ಮೇರು ವ್ಯಕ್ತಿತ್ವ ಹೊಂದಿದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿತು. ಮಹಾತ್ಮ ಗಾಂಧಿಯವರನ್ನು ರಾಷ್ಟ್ರಪಿತ ಎಂದು ಪರಿಗಣಿಸಲಾಗಿದೆ. ದೇಶದ ಜನರು ಅತೀ ಹೆಚ್ಚಿನ ಗೌರವವನ್ನು ನೀಡಿದ್ದಾರೆ. ಹೀಗಾಗಿ ಯಾವುದೇ ಸಾಮಾನ್ಯ ಪ್ರಶಸ್ತಿ ಮೂಲಕ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸುಪ್ರೀಂ ಹೇಳಿತು. ಈ ಹಿಂದೆಯೂ ಮಹಾತ್ಮ ಗಾಂಧಿಗೆ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ ಗೆ ಹಲವಾರು ಪಿಐಎಲ್ ಸಲ್ಲಿಕೆಯಾಗಿತ್ತು. ಆದರೆ ಅವೆಲ್ಲವೂ ತಿರಸ್ಕೃತಗೊಂಡಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

2020: ನವದೆಹಲಿ: ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೂವರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿದ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಿ ರಾಜತಾಂತ್ರಿಕ ಕಚೇರಿಯ ಹಿರಿಯ ಅಧಿಕಾರಿಯೊಬ್ಬರನ್ನು 2020 ಜನವರಿ 17ರ ಶುಕ್ರವಾರ ಕರೆಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ ಪ್ರಬಲ ಪ್ರತಿಭಟನೆಯನ್ನು ದಾಖಲಿಸಿತು. ಇಂತಹ ಘಟನೆಗಳ ಬಗ್ಗೆ ಅಧಿಕಾರಿಯ ಬಳಿ ಭಾರತವು ಗಂಭೀರ ಕಳವಳವನ್ನು ವ್ಯಕ್ತ ಪಡಿಸಿತು ಎಂದು ತನ್ನ ಗುರುತು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ನುಡಿದರು. ಕಾಶ್ಮೀರ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯ ಹದಗೆಟ್ಟಿರುವ ಸಂದರ್ಭದಲ್ಲೇ ಘಟನೆ ಘಟಿಸಿದೆ. ವರದಿಗಳ ಪ್ರಕಾರ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತದಲ್ಲಿನ ಥಾರಾಪರ್ಕರ್ ಜಿಲ್ಲೆಯ ಉಮರ್ ಗ್ರಾಮಕ್ಕೆ ಸೇರಿದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಶಾಂತಿ ಮೇಘವಾಡ್ ಮತ್ತು ಸರ್ಮಿ ಮೇಘವಾಡ್ ಎಂಬ ಇಬ್ಬರು ಅಪ್ರಾಪ್ತ ಬಾಲಕಿಯರನ್ನು  ಜನವರಿ ೧೪ರಂದು ಅಪಹರಿಸಲಾಗಿತ್ತುಇನ್ನೊಂದು ಘಟನೆಯಲ್ಲಿ ಸಿಂಧ್ ಜಾಕೋಬಾಬಾದ್ ಜಿಲ್ಲೆಯಿಂದ ಮೆಹಕ್ ಎಂಬ ಹೆಸರಿನ ಇನ್ನೊಬ್ಬ ಅಪ್ರಾಪ್ತ ವಯಸ್ಸಿನ ಹಿಂದೂ ಬಾಲಕಿಯನ್ನು ಜನವರಿ ೧೫ರಂದು ಅಪಹರಿಸಲಾಗಿತ್ತು. (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

2020: ಲಕ್ನೋ: ಪರೋಲ್ ಮೇಲೆ ಹೊರಬಂದು ನಿಗೂಢವಾಗಿ ನಾಪತ್ತೆಯಾಗಿದ್ದ ೧೯೯೩ರ ಮುಂಬೈ ಸರಣಿ ಬಾಂಬ್ ಸ್ಫೋಟ  ಪ್ರಕರಣದ ಅಪರಾಧಿ ಜಲೀಸ್ ಅನ್ಸಾರಿ ಅಲಿಯಾಸ್ಬಾಂಬ್ ಡಾಕ್ಟರ್ನನ್ನು 2020 ಜನವರಿ  17ರ ಶುಕ್ರವಾರ  ಕಾನ್ಪುರದಲ್ಲಿ ಬಂಧಿಸಲಾಯಿತು.
ಡಾಕ್ಟರ್ ಬಾಂಬ್ಕುಖ್ಯಾತಿಯ ಅನ್ಸಾರಿ ಮಸೀದಿಯಿಂದ ಹೊರಟು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವೇಳೆ ಉತ್ತರಪ್ರದೇಶದ ವಿಶೇಷ ಪೊಲೀಸ್ ತಂಡವು ಬಂಧಿಸಿರುವುದಾಗಿ ವರದಿ ತಿಳಿಸಿತು. ವೈದ್ಯನಾಗಿದ್ದ ಜಲೀಸ್ ಅನ್ಸಾರಿ ಬಾಂಬ್ ತಯಾರಿಕಾ ತಜ್ಞನಾಗಿದ್ದ. ಹಿನ್ನೆಲೆಯಲ್ಲಿ ಅನ್ಸಾರಿಡಾ. ಬಾಂಬ್ಎಂದೇ ಕುಖ್ಯಾತಿ ಪಡೆದಿದ್ದ. ೨೧ ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಅನ್ಸಾರಿ ಮುಂಬೈಯ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ.  ಏತನ್ಮಧ್ಯೆ  2020 ಜನವರಿ  16ರ ಗುರುವಾರ ಬೆಳಗ್ಗೆಯಿಂದ ಅನ್ಸಾರಿ ಮನೆಯಿಂದ ನಿಗೂಢವಾಗಿ ಕಣ್ಮರೆಯಾಗಿರುವುದಾಗಿ ಕುಟುಂಬದ ಸದಸ್ಯರು ಮುಂಬೈನ ಅಗ್ರಿಪಾಡಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಜಲೀಸ್ ಅನ್ಸಾರಿ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ದೇಶಾದ್ಯಂತ ಸಂಭವಿಸಿದ ೫೦ ಬಾಂಬ್ ಸ್ಫೋಟದ ಪ್ರಕರಣಗಳು ಅನ್ಸಾರಿ ವಿರುದ್ಧ ದಾಖಲಾಗಿದ್ದವು ಎಂದು ವರದಿ ವಿವರಿಸಿತ್ತು.  (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)
2020: ಚೆನ್ನೈ: ತಮಿಳುನಾಡಿನ ಮದುರೈ ಜಿಲ್ಲೆಯ ಅಳಂಗನಲ್ಲೂರು ಪಂಚಾಯತ್ ಪಟ್ಟಣದಲ್ಲಿ ನಡೆದ ಜಲ್ಲಿಕಟ್ಟು ಗೂಳಿ ಪಳಗಿಸುವ ಆಟದಲ್ಲಿ 2020 ಜನವರಿ  17ರ ಶುಕ್ರವಾರ  ೨೬ರ ಹರೆಯದ ವ್ಯಕ್ತಿಯೊಬ್ಬ ಗೂಳಿ ತಿವಿತಕ್ಕೆ ಒಳಗಾಗಿ ಸಾವನ್ನಪ್ಪಿದ.  ಮೃತನನ್ನು ಶ್ರೀಧರ್ ಎಂಬುದಾಗಿ ಗುರುತಿಸಲಾಗಿದ್ದು, ಈತ ಸ್ಥಳದಲ್ಲೇ ಸಾವನ್ನಪ್ಪಿದ. ಈತನ ಹೊರತಾಗಿ ಇತರ ೨೯ ಮಂದಿ ಗಾಯಗೊಂಡರು.  ರಾಜ್ಯದ ಮಹತ್ವದ ಜಲ್ಲಿಕಟ್ಟು ಉತ್ಸವ ಕೇಂದ್ರಗಳಲ್ಲಿ ಒಂದಾದ ಅಳಂಗನಲ್ಲೂರು ಜಲ್ಲಿಕಟ್ಟು ಉತ್ಸವದಲ್ಲಿ ಪಾಲ್ಗೊಳ್ಳಲು ೭೦೦ ಗೂಳಿಗಳು ಮತ್ತು ೮೦೦ ಮಂದಿ ಪಳಗಿಸುವವರ ಹೆಸರುಗಳು ದಾಖಲಾಗಿದ್ದವು. ಪೊಂಗಲ್ (ಮಕರ ಸಂಕ್ರಾಂತಿ) ಬಳಿಕ ರಾಜ್ಯದಲ್ಲಿ ನಡೆಯುವ ಮಹತ್ವದ ಉತ್ಸವ ಇದಾಗಿದ್ದು ಜನವರಿ ೩೧ರವರೆಗೆ ಮುಂದುವರೆಯುತ್ತದೆ.  ಬುಧವಾರ ಕೂಡಾ ಮದುರೈ ನಗರದಲ್ಲಿ ನಡೆದ ಜಲ್ಲಿಕಟ್ಟು ಗೂಳಿ ಪಳಗಿಸುವ ಸ್ಪರ್ಧೆಯಲ್ಲಿ ೩೨ ಮಂದಿ ಗಾಯಗೊಂಡಿದ್ದರು. ೨೦೦೦ ಗೂಳಿಗಳು ಸ್ಪರ್ಧೆಗೆ ನೋಂದಣಿಯಾಗಿದ್ದವು. (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)
2020: ಚಂಡೀಘಡ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪಂಜಾಬ್ ವಿಧಾನಸಭೆಯು 2020 ಜನವರಿ  17ರ ಶುಕ್ರವಾರ  ಧ್ವನಿಮತದ ಮೂಲಕ ನಿರ್ಣಯವನ್ನು ಅಂಗೀಕರಿಸಿತು. ಇದರೊಂದಿಗೆ ಪಂಜಾಬ್ ಕೇಂದ್ರ ಶಾಸನವನ್ನು ವಿರೋಧಿಸಿ ನಿರ್ಣಯ ಕೈಗೊಂಡ ಎರಡನೆ ರಾಜ್ಯ ಎನಿಸಿತು.  ಸದನವು ನಿರ್ಣಯ ಅಂಗೀಕರಿಸಿದ ಸ್ವಲ್ಪ ಹೊತ್ತಿನಲೇ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ತಮ್ಮ ಸರ್ಕಾರವು ಕೇರಳದಂತೆ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರುವುದು ಎಂದು ಪ್ರಕಟಿಸಿದರು. ಕೇರಳ ವಿಧಾನಸಭೆಯು ಇದಕ್ಕೆ ಮುನ್ನ ವಿವಾದಾತ್ಮಕ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನಿರ್ಣಯ ಅಂಗೀಕರಿಸಿತ್ತು. ಮೂಲಕ ಕೇಂದ್ರ ಶಾಸನವನ್ನು ವಿರೋಧಿಸಿದ ಮೊದಲ ರಾಜ್ಯ ಎನಿಸಿತ್ತು. ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕಾರಣವಾದ ಶಾಸನವನ್ನು ರದ್ದು ಪಡಿಸುವಂತೆ ನಿರ್ಣಯ ಕೇಂದ್ರವನ್ನು ಆಗ್ರಹಿಸಿತ್ತು. ಬಿಜೆಪಿಯ ರಾಜಗೋಪಾಲ್ ಅವರನ್ನು ಹೊರತುಪಡಿಸಿ ಸದನದ ಎಲ್ಲ ಶಾಸಕರೂ ನಿರ್ಣಯವನ್ನು ಬೆಂಬಲಿಸಿದ್ದರು. ಶಾಸನವನ್ನು ವಿರೋಧಿಸುತ್ತಿರುವ ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಶಾಸನವನ್ನು ಜಾರಿಗೊಳಿಸಲು ಕೇಂದ್ರವು ಅದಕ್ಕೆ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಶುಕ್ರವಾರ ಹೇಳಿದರು. ‘ಕೇರಳದಂತೆ ನಮ್ಮ ಸರ್ಕಾರ ಕೂಡಾ ವಿಷಯದಲ್ಲಿ ಸುಪ್ರೀಂಕೋರ್ಟನ್ನು ಸಂಪರ್ಕಿಸಲಿದೆಎಂದು ಅಮರೀಂದರ್ ಸಿಂಗ್ ಅವರು ರಾಜ್ಯ ವಿಧಾನಸಭೆಯ ಹೊರಗೆ ಮಾತನಾಡುತ್ತಾ ತಿಳಿಸಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

 ಇಂದಿನ ಇತಿಹಾಸ  History Today ಜನವರಿ17  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)

No comments:

Post a Comment