ನಾನು ಮೆಚ್ಚಿದ ವಾಟ್ಸಪ್

Sunday, January 5, 2020

ಇಂದಿನ ಇತಿಹಾಸ History Today ಜನವರಿ 05

ಇಂದಿನ ಇತಿಹಾಸ  History Today ಜನವರಿ 05
2020:ನವದೆಹಲಿಪಾಕಿಸ್ತಾನದಲ್ಲಿನ ಗುರುದ್ವಾರ ನಂಕಾನ ಸಾಹಿಬ್ನಲ್ಲಿ ನಡೆದ ವಿಧ್ವಂಸಕ ಕೃತ್ಯಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಒಂದು ದಿನದ ಬಳಿಕ  2020 ಜನವರಿ 05ರ ಭಾನುವಾರ ಪಾಕಿಸ್ತಾನದ ಪೇಶಾವರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ೨೫ರ ಹರೆಯದ ಅಲ್ಪಸಂಖ್ಯಾತ ಸಿಖ್ ಸಮುದಾಯದ  ವ್ಯಕ್ತಿಯನ್ನು ಹತ್ಯೆಗೈದ ಘಟನೆ ಘಟಿಸಿದೆಹತ್ಯೆ ಘಟನೆಯನ್ನು ಭಾರತ ಪ್ರಬಲವಾಗಿ ಖಂಡಿಸಿತು.  ಹತನಾಗಿರುವ ವ್ಯಕ್ತಿಯನ್ನು ಪಾಕಿಸ್ತಾನದ ಮೊತ್ತ ಮೊದಲ ಸಿಖ್ ಸುದ್ದಿ ಆಂಕರ್ ಹರ್ಮೀತ್ ಸಿಂಗ್ ಅವರ ಸಹೋದರ ರವೀಂದರ್ ಸಿಂಗ್ ಎಂಬುದಾಗಿ ಗುರುತಿಸಲಾಯಿತು. ರವೀಂದರ್ ಸಿಂಗ್ ಅವರನ್ನು ಅಪರಿಚಿತ ವ್ಯಕ್ತಿಗಳು ಪೇಶಾವರದಲ್ಲಿ ಕೊಲೆ ಮಾಡಿದ್ದಾರೆಹತ ವ್ಯಕ್ತಿಯ ಶವ ಭಾನುವಾರ ಚಮಕಾನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಪೇಶಾವರದ ಎಸ್ ಎಸ್ ಪಿ (ಕಾರ್ಯಾಚರಣೆತಿಳಿಸಿದರು. ‘ಗುರಿ ಇಟ್ಟುಕೊಂಡು’ ನಡೆಸಲಾಗಿರುವ ರವೀಂದರ್ ಸಿಂಗ್ ಹತ್ಯೆಯನ್ನು ಭಾರತ ಪ್ರಬಲವಾಗಿ ಖಂಡಿಸಿತು.  ’ಪಾಕಿಸ್ತಾನವು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಮತ್ತು ಅಪರಾಧಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ತತ್ ಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಗ್ರಹಿಸಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ವಾಷಿಂಗ್ಟನ್: ಇರಾನಿನ ಉನ್ನತ ಕಮಾಂಡರ್ ಸೊಲೈಮಾನಿ ಹತ್ಯೆಗೆ ಅತ್ಯುಗ್ರ ಪ್ರತೀಕಾರ  ಕೈಗೊಳ್ಳುವುದಾಗಿ   ಇರಾನ್ ಹಾಕಿರುವ ಬೆದರಿಕೆಗೆ  2020 ಜನವರಿ 04ರ ಶನಿವಾರ ತಡರಾತ್ರಿಯಲಿ ಎದಿರೇಟು ನೀಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಸಿಬ್ಬಂದಿ, ಸೊತ್ತುಗಳ ಮೇಲೆ ದಾಳಿ ನಡೆದರೆ, ’ಸುಂದರವಾದ ಹೊಚ್ಚ ಹೊಸ ಸೇನಾ ಉಪಕರಣವನ್ನು ಯಾವ ಹಿಂಜರಿಕೆಯೂ ಇಲ್ಲದೆ ಇರಾನ್ ವಿರುದ್ಧ ಅಮೆರಿಕ ಬಳಸಲಿದೆಎಂದು ಎಚ್ಚರಿಕೆ ನೀಡಿದರು. ಅಮೆರಿಕದ ಸಿಬ್ಬಂದಿ, ಸೊತ್ತಿನ ಮೇಲೆ ಇಸ್ಲಾಮಿಕ್ ರಿಪಬ್ಲಿಕ್ ದಾಳಿ ನಡೆಸಿದರೆ ಅಮೆರಿಕವು ಇರಾನಿನ ೫೨ ನಿವೇಶನಗಳ ಮೇಲೆ ಅತ್ಯಂತ ಕ್ಷಿಪ್ರವಾಗಿ ಅತಿ ಪ್ರಬಲ ದಾಳಿ ನಡೆಸುವುದು ಎಂಬುದಾಗಿ ಟ್ವೀಟ್ ಮಾಡಿದ ಸ್ವಲ್ಪ ಹೊತ್ತಿನ ಬಳಿಕ ಟ್ರಂಪ್ ಅವರು ಇನ್ನೊಂದು ಟ್ವೀಟಿನಲ್ಲಿ ಇರಾನ್ ವಿರುದ್ಧ ದಾಳಿಗೆ ಅಮೆರಿಕದಸುಂದರವಾದ ಹೊಚ್ಚ ಹೊಸ ಸೇನಾ ಉಪಕರಣವನ್ನು ಯಾವ ಹಿಂಜರಿಕೆಯೂ ಇಲ್ಲದೆ ಪ್ರಯೋಗಿಸಲಿದೆಎಂದು ತಿಳಿಸಿದರು.  ಇರಾಕಿನಲ್ಲಿ ಡ್ರೋಣ್ ದಾಳಿ ನಡೆಸಿ ಇರಾನಿನ ಉನ್ನತ ಕಮಾಂಡರ್ ಸೊಲೈಮಾನಿ ಅವರನ್ನು ಕೊಂದ ತನ್ನ ಕ್ರಮವನ್ನು ಟ್ವೀಟ್ ಮೂಲಕ ಪ್ರಬಲವಾಗಿ ಸಮರ್ಥಿಸಿದ ಟ್ರಂಪ್, ೫೨ ಸಂಖ್ಯೆಯು ಟೆಹರಾನಿನ ಅಮೆರಿಕದ ರಾಜತಾಂತ್ರಿಕ ಕಚೇರಿಯಲ್ಲಿ ೧೯೭೯ರ ಕೊನೆಯಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದ್ದ ಅಮೆರಿನ್ನರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ‘ಅಮೆರಿಕವು ದಾಳಿಗೆ ಗುರುತಿಸಿರುವ ೫೨ ತಾಣಗಳ ಪೈಕಿ ಕೆಲವು ತಾಣಗಳು ಇರಾನಿಗೆ ಮತ್ತು ಅದರ ಸಂಸ್ಕೃತಿಗೆ ಅತ್ಯಂತ ಮಹತ್ವದ ಉನ್ನತ ಮಟ್ಟದ ತಾಣಗಳಾಗಿವೆ. ಮತ್ತು ತಾಣಗಳ ಮೇಲೆ ಅತ್ಯಂತ ಕ್ಷಿಪ್ರಗತಿಯಲ್ಲಿ ಅತಿ ಕಠಿಣವಾಗಿ ದಾಳಿಗಳು ನಡೆಯಲಿವೆ. ಏಕೆಂದರೆ ಅಮೆರಿಕ ಇನ್ನಷ್ಟು ಬೆದರಿಕೆಗಳನ್ನು ಬಯಸುವುದಿಲ್ಲಎಂದು ಟ್ರಂಪ್ ನುಡಿದರು. ಇರಾನಿನ ಎರಡನೇ ಪ್ರಬಲ ವ್ಯಕ್ತಿ ಎಂಬುದಾಗಿ ಬಣ್ಣಿಸಲಾದ ಸೊಲೈಮಾನಿ ಹತ್ಯೆಯ ಬಳಿಕ, ಇರಾಕಿ ಗಡಿಯುದ್ದಕ್ಕೂ  ಕ್ಪಿಪಣಿಗಳನ್ನು ತಂದು ನಿಲ್ಲಿಸುವುದರ ಜೊತೆಗೆ ಇರಾಕಿ ಪಡೆಗಳಿಗೆ ಬೆದರಿಕೆ ಒಡ್ಡುವ ಮೂಲಕ ಅಮೆರಿಕದ ನೆಲೆಗಳ ಮೇಲೆ  ಇರಾನ್ ಪರ ಬಣಗಳು ಒತ್ತಡ ಹೆಚ್ಚಿಸಿದ ಬಳಿಕ ಟ್ರಂಪ್ ಅವರು ಟ್ವೀಟ್ಟರ್ ಮೂಲಕ ಇರಾನಿಗೆ ತಮ್ಮ ಎಚ್ಚರಿಕೆಯನ್ನು ನೀಡಿದರು(ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ 2020 ಜನವರಿ 05ರ ಭಾನುವಾರ ಸಂಜೆ ಹಿಂಸಾಚಾರ ಭುಗಿಲೆದ್ದಿದ್ದು, ಮುಸುಕುಧಾರಿ ವ್ಯಕ್ತಿಗಳು ವಿಶ್ವವಿದ್ಯಾಲಯದ ಆವರಣಕ್ಕೆ ಶಸ್ತ್ರಾಸ್ತ್ರಗಳೊಂದಿಗೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಬೋಧಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಆಪಾದಿಸಿದರು. ಆಕೆ ಮಾಧ್ಯಮಗಳಿಗೆ ನೀಡಿದ ಸಂಕ್ಷಿಪ್ತ ವಿಡಿಯೋ ಒಂದರಲ್ಲಿ ಘೋಷ್ ಅವರ ಮುಖದಲ್ಲಿ ರಕ್ತದ ಕಲೆ ಇದ್ದು ದಾಳಿಯ ವಿವರ ನೀಡುವಾಗ ಅವರು ಬಿಕ್ಕಳಿಸಿದ್ದು ಕಾಣುತ್ತಿದೆ ಎಂದು ವರದಿಗಳು ಹೇಳಿವೆ. ಘೋಷ್ ಅವರು ಎಸ್ಎಫ್ (ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ) ಸಂಘಟನೆಗೆ ಸೇರಿದವರಾಗಿದ್ದು, ಸಂಘಟನೆಯು ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷಕ್ಕೆ ಸಂಯೋಜಿತವಾಗಿರುವ ವಿದ್ಯಾರ್ಥಿ ಸಂಘಟನೆಯಾಗಿದೆ. ಹಲ್ಲೆಯ ಬಳಿಕ ಅವರಿಗೆ ರಕ್ತಸ್ರಾವವಾಗುತಿದ್ದ ದೃಶ್ಯ ವಿಡಿಯೋದಲ್ಲಿ ಇದೆ. ದಾಳಿ ನಡೆಸಿದವರು ಯಾರೆಂಬುದು ತಮಗೆ ಗೊತ್ತಿಲ್ಲ ಎಂದು ಘೋಷ್ ಹೇಳಿದರು. ಇನ್ನೊಂದು ವಿಡಿಯೋ ದೃಶ್ಯಾವಳಿಯಲ್ಲಿ ಕೆಲವು ವಿದ್ಯಾರ್ಥಿಗಳುಎಬಿವಿಪಿ ಗೋ ಬ್ಯಾಕ್ಎಂಬುದಾಗಿ ಘೋಷಣೆ ಕೂಗುವ ದೃಶ್ಯವಿದೆ. ಸುಮಾರು ೫೦ ಮಂದಿ ಅಪರಿಚಿತ ಮುಸುಕುಧಾರಿಗಳು ವಿಶ್ವವಿದ್ಯಾಲಯ ಆವರಣ ಪ್ರವೇಶಿಸಿ ದಾಂಧಲೆ ನಡೆಸಿದರು. ಜನರ ಮೇಲೆ ದಾಳಿ ನಡೆಸಿದ್ದಲ್ಲದೆ ಅಲ್ಲಿ ನಿಂತಿದ್ದ ಕಾರುಗಳ ಮೇಲೂ ದಾಳಿ ನಡೆಸಿದರು ಎಂದು ಆಪಾದಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
2020: ನವದೆಹಲಿ
: ಟಾಟಾ ಸನ್ಸ್ ಸಮೂಹದ ಕಾರ್ಯಕಾರಿ ಅಧ್ಯಕ್ಷರಾಗಿ ರಾಷ್ಟ್ರೀಯ ಕಂಪೆನಿ 
ಕಾನೂನು   ಮೇಲ್ಮನವಿ ನ್ಯಾಯಮಂಡಳಿಯಿಂದ (ಎನ್ಸಿಎಲ್ ಎಟಿ) ಪುನಃಸ್ಥಾಪನೆಗೊಂಡಿರುವ ಸೈರಸ್ ಮಿಸ್ತ್ರಿ ಅವರುಟಾಟಾ ಸನ್ಸ್ ಸಮೂಹಕ್ಕೆ ಮರಳುವ ಇಚ್ಛೆ ನನಗೆ ಇಲ್ಲಎಂದು 2020 ಜನವರಿ 05ರ ಭಾನುವಾರ  ಪ್ರಕಟಿಸಿದರು. ’ಟಾಟಾ ಅವರ ಪೂರ್ವಾಗ್ರಹ ವರ್ತನೆಯನ್ನು ಎನ್ಸಿಎಲ್ಎಟಿ ಗುರುತಿಸಿರುವುದಕ್ಕಾಗಿ ನಾನು ಅದಕ್ಕೆ ವಿನೀತನಾಗಿದ್ದೇನೆಎಂದು ಅವರು ಹೇಳಿದರು. ‘ತನ್ನ ಮುಂದಿದ್ದ ದಾಖಲೆಗಳ ರಾಶಿಯ ವಿಮರ್ಶೆಯ ಬಳಿಕ ನನ್ನನ್ನು ಅಕ್ರಮವಾಗಿ ಕಿತ್ತು ಹಾಕಿದ್ದನ್ನು ಮತ್ತು ಟಾಟಾ ಮತ್ತು ಇತರ ಟ್ರಸ್ತಿಗಳ ದಮಕಾರೀ ಮತ್ತು ಪೂರ್ವಾಗ್ರಹದ ವರ್ತನೆಯನ್ನು ಗುರುತಿಸಿದ ಎನ್ಸಿಎಲ್ಎಟಿಯ ಅದೇಶಕ್ಕೆ ನಾನು ಅತ್ಯಂತ ವಿನೀತನಾಗಿದ್ದೇನೆಎಂದು ಮಿಸ್ತ್ರಿ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿತು. ಸೈರಸ್ ಮಿಸ್ತ್ರಿ ಅವರನ್ನು ಎನ್ಸಿಎಲ್ಎಟಿಯು ಡಿಸೆಂಬರ್ ೧೮ರಂದು ಟಾಟಾ ಸನ್ಸ್ ಸಮೂಹದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಪುನಃಸ್ಥಾಪನೆ ಮಾಡಿ ಆದೇಶ ನೀಡಿತ್ತು. ಮಿಸ್ತ್ರ್ರಿ ಅವರನ್ನು ಸಮೂಹದಿಂದ ಮೂರು ವರ್ಷಗಳ ಹಿಂದೆ ವಜಾಗೊಳಿಸಲಾಗಿತ್ತು. ’ಮಿಸ್ತ್ರಿ  ವಿರುದ್ಧದ ರತನ್ ಟಾಟಾ ಅವರ ಕ್ರಮಗಳು ದಮನಕಾರಿಯಾಗಿದ್ದವು ಮತ್ತು ನೂತನ ಅಧ್ಯಕ್ಷನ ನೇಮಕಾತಿಯು ಅಕ್ರಮಎಂದು ನ್ಯಾಯಮಂಡಳಿಯು ತನ್ನ ಆದೇಶದಲ್ಲಿ ತಿಳಿಸಿತ್ತು. ಟಾಟಾ ಕನಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮಿಸ್ತ್ರಿ ಪರವಾಗಿ ಎನ್ಸಿಎಲ್ಎಟಿ ನೀಡಿದ ಆದೇಶದ ವಿರುದ್ಧ ಶುಕ್ರವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.  (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಇರಾನಿನ ಸೇನಾ ಕಮಾಂಡರ್ ಕಾಸಿಂ ಸೊಲೈಮಾನಿ ಹತ್ಯೆಯ ಬಳಿಕ ಹೆಚ್ಚುತ್ತಿರುವ ಅಮೆರಿಕ -ಇರಾನ್ ಪ್ರಕ್ಷುಬ್ಧತೆಯ ಮಧ್ಯೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು 2020 ಜನವರಿ 05ರ ಭಾನುವಾರ  ಇರಾನಿನ ವಿದೇಶಾಂಗ ವ್ಯವಹಾರಗಳ ಸಚಿವ ಜಾವೇದ್ ಝರೀಫ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಮಾತನಾಡಿದರು.   ಪ್ರದೇಶದ ಪ್ರಕ್ಷುಬ್ಧತೆಯ ಬಗ್ಗೆ ಭಾರತವು ಅತೀವ ಕಳಕಳಿ ಹೊಂದಿದೆ ಎಂದು ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವರಿಗೆ ತಿಳಿಸಿದರು. ಬೆಳವಣಿಗೆಗಳು ಅತ್ಯಂತ ಗಂಭೀರ ತಿರುವು ಪಡೆದುಕೊಂಡಿವೆ ಎಂದು ಸಂದರ್ಭದಲ್ಲಿ ಜೈಶಂಕರ್ ಹೇಳಿದರು. ’ಈಗಷ್ಟೇ ಇರಾನಿನ ವಿದೇಶಾಂಗ ಸಚಿವ ಝರೀಪ್ ಅವರ ಜೊತೆಗೆ ಸಂಭಾಷಣೆ ಮುಗಿಸಿದೆ. ಬೆಳವಣಿಗೆಗಳು ಅತ್ಯಂತ ಗಂಭೀರ ತಿರುವು ಪಡೆದಿವೆ, ಭಾರತವು ಪ್ರಕ್ಷುಬ್ದತೆಯ ಬಗ್ಗೆ ಆಳವಾದ ಕಳಕಳಿ ಹೊಂದಿದೆ. ನಾವು ಪರಸ್ಪರ ಸಂಪರ್ಕದಲ್ಲಿ ಇರಲು ಒಪ್ಪಿದ್ದೇವೆಎಂದು ಜೈಶಂಕರ್ ಟ್ವೀಟ್ ಮಾಡಿದರು. ಸೊಲೈಮಾನಿ ಹತ್ಯೆಯ ಕೆಲವು ದಿನಗಳ ಬಳಿಕ ಉಭಯ ನಾಯಕರು ಮಧ್ಯೆ ಸಂಭಾಷಣೆ ನಡೆಯಿತು. ಇರಾನ್- ಅಮೆರಿಕ ಬಿಕ್ಕಟ್ಟು ತೀವ್ರಗೊಂಡು ಸಮರಕ್ಕೆ ತಿರುಗಿದರೆ ಅದು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ. ತೈಲಬೆಲೆ ಹೆಚ್ಚಳ, ಪಶ್ಚಿಮ ಏಷ್ಯಾದಲ್ಲಿ ನೆಲೆಸಿದ ಭಾರತೀಯರಿಂದ ಹಣದ ಹರಿವಿಗೆ ತಡೆ, ಪಶ್ಚಿಮ ಏಷ್ಯಾದಲ್ಲಿ ಇರುವ ಸುಮಾರು ೮೦ ಲಕ್ಷ ಭಾರತೀಯರಿಂದ ಉದ್ಯೋಗ ನಷ್ಟದ ಭೀತಿ ಮನೆ ಮಾಡಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್ಮಾಡಿರಿ)



No comments:

Post a Comment