Showing posts with label Temple. Show all posts
Showing posts with label Temple. Show all posts

Wednesday, January 7, 2026

PARYAYA: ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?

 ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?

ನೆಲದಲ್ಲಿ ಅಥವಾ ಕೆಳಗೆ ಕುಳಿತುಕೊಳ್ಳುವ ಅಭ್ಯಾಸವನ್ನು ಕೈಬಿಟ್ಟದ್ದೇ ಮೊಣಕಾಲು  ಅಥವಾ ಮಂಡಿ ನೋವು ಸೇರಿದಂತೆ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣ. ಅದರಲ್ಲೂ ಬಸ್ಕಿ ತೆಗೆಯುವುದು, ಕೂತು-ಏಳುವ ಅಭ್ಯಾಸ ಕಡಿಮೆ ಮಾಡಿಕೊಂಡದ್ದು ಇತ್ಯಾದಿ ಕೂಡಾ ನರಸಂಬಂಧಿ ಸಮಸ್ಯೆಗಳಿಗೆ ಮೂಲ

ಮಹಿಳೆಯರು ಹಿಂದೆ ನೆಲದಲ್ಲಿ ಕುಳಿತೇ ಅಡುಗೆ ಮಾಡುತ್ತಿದ್ದರು. ಈಗ ಅಡುಗೆ ಮನೆಯ ವಿನ್ಯಾಸವೇ ಬದಲಿಯಾಗಿದೆ. ನಿಂತುಕೊಂಡು ಅಡುಗೆ ಮಾಡುವುದೇ ಆರಾಮ ಎಂಬ ಭಾವನೆ ಇದೆ. ಇದರೊಂದಿಗೆ ಅತ್ತಿತ್ತ ಓಡಾಡುವ ಅಭ್ಯಾಸವೂ ಕಡಿಮೆ.

ಮನೆಯ ಹೊರಗೆ ಬಿಡಿ ಮನೆಯ ಒಳಗೂ ಬರಿಗಾಲಲ್ಲಿ ನಡೆಯುವ ಕ್ರಮ ಕ್ರಮೇಣ ಮಾಯವಾಗುತ್ತಿದೆ. ನಡೆದಾಡುವುದೇ ಕಡಿಮೆ, ಕಡಿಮೆ ನಡೆದಾಡುವುದರ ಜೊತೆ ಮನೆಯ ಹೊರಗೆ, ಒಳಗೆ ಚಪ್ಪಲಿಗೆ ಮುಕ್ತ ಪ್ರವೇಶ. ಪರಿಣಾಮ ಪಾದಗಳಿಗೆ ಭೂಮಿಯ ಸ್ಪರ್ಶವೇ ಇಲ್ಲ.

ಇದರಿಂದ ಆಗುವ ದೊಡ್ಡ ನಷ್ಟ- ಭೂಮಿಯ ಅಯಸ್ಕಾಂತ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಿಕೆ. ಈ ಅಯಸ್ಕಾಂತ ಶಕ್ತಿ ಅಥವಾ ಮ್ಯಾಗ್ನೆಟ್‌ ಪವರ್‌ ದೇಹ ಸ್ವಾಸ್ಥ್ಯಕ್ಕೆ ಬಲುಮುಖ್ಯ.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಮತ್ತು ಕಂಪಾನಿಯೋ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ʼಫೂಟ್‌ ಪಲ್ಸ್‌ʼ ಥೆರೆಪಿ ಶಿಬಿರದ ಸಂದರ್ಭದಲ್ಲಿ ಥೆರೆಪಿ ತಜ್ಞ ಕಾರ್ತಿಕ್‌ ಹೇಳಿದ ಸೂತ್ರಗಳಲ್ಲಿ ಇವೂ ಸೇರಿವೆ.

ಅವರ ಮಾತುಗಳ ವಿಡಿಯೋ ಇಲ್ಲಿದೆ. ಚಿತ್ರ ಕ್ಲಿಕ್‌ ಮಾಡಿ ನೋಡಿ. Youtube Video link: https://youtu.be/TlSSjnHtgJA

ರಂಗೋಲಿ ಸ್ಪರ್ಧೆ

ಹೇಳಬೇಕಾದ ಇನ್ನೊಂದು ಸುದ್ದಿ ಇಲ್ಲಿದೆ. ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಜನವರಿ ೧೫ರಂದು ಬರಲಿರುವ ಮಕರ ಸಂಕ್ರಾಂತಿಯ ಪ್ರಯುಕ್ತ ಮಹಿಳೆಯರಿಗೆ ʼರಂಗೋಲಿʼ ಸ್ಪರ್ಧೆಯನ್ನು ೨೦೨೫ ಜನವರಿ ೧೧ರ ಭಾನುವಾರ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ಬೆಳಗ್ಗೆ ೧೦.೩೦ರಿಂದ ೧೨ರ ನಡುವಣ ಅವಧಿಯಲ್ಲಿ ನಡೆಯಲಿದೆ. ಪಾಲ್ಗೊಳ್ಳಬಯಸುವವರು ಮಮತಾ (೮೮೬೭೯೬೭೮೮೮) ಅಥವಾ ಸ್ವಾತಿ (೮೧೦೫೬೮೫೮೯೯) ಅವರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.


PARYAYA: ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?:   ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ? ನೆ ಲದಲ್ಲಿ ಅಥವಾ ಕೆಳಗೆ ಕುಳಿತುಕೊಳ್ಳುವ ಅಭ್ಯಾಸವನ್ನು ಕೈಬಿಟ್ಟದ್ದೇ ಮೊಣಕಾಲು   ಅಥವಾ ಮಂಡಿ ನೋವು ಸೇರಿದಂತೆ ನಮ್ಮ ಹಲವಾರ...

Monday, January 5, 2026

PARYAYA: ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?

ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?

ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರವು ೨೦೨೬ ಜನವರಿ ೩ರಿಂದ ಆರಂಭಗೊಂಡಿದೆ.

ಪ್ರತಿದಿನ ಬೆಳಗ್ಗೆ ೯.೩೦ಕ್ಕೆ ಆರಂಭವಾಗಿ ಸಂಜೆ ೫ ಗಂಟೆಯವರೆಗೆ ನಡೆಯುವ ಈ ಶಿಬಿರವು ಜನವರಿ ೧೨ರವರೆಗೂ ನಡೆಯಲಿದೆ.


ಪ್ರತಿದಿನ ೩೦ ನಿಮಿಷಗಳ ಅವಧಿಯ ಚಿಕಿತ್ಸೆ ಪಡೆಯುವುದರಿಂದ ರಕ್ತ ಪರಿಚಲನೆ, ಮಾಂಸಖಂಡಗಳ ಸೆಳೆತ ಮತ್ತು ನರಗಳ ಯಾವುದೇ ಸರಳ ಮತ್ತು ದೀರ್ಘಕಾಲದ ಸಮಸ್ಯೆಗಳಿಗೆ ಔಷಧ ರಹಿತ ಹಾಗೂ ಅಡ್ಡ ಪರಿಣಾಮ ಇಲ್ಲದ ಪರಿಹಾರ ಲಭಿಸುತ್ತದೆ.

ಮಧುಮೇಹ, ಮಧುಮೇಹದಿಂದ ಬರುವ ಪಾದ ಉರಿಯೂತ, ಸಂಧಿವಾತ, ಕುತ್ತಿಗೆ ನೋವು ಇತ್ಯಾದಿ ಸಮಸ್ಯೆಗಳಿಗೂ ಈ ಚಿಕಿತ್ಸೆಯಲ್ಲಿ ಪರಿಹಾರ ಲಭ್ಯವಿದೆ. ಬಹುಮುಖ್ಯವಾಗಿ ಫಿಸಿಯೋಥೆರೆಪಿ ಅಗತ್ಯ ಉಳ್ಳವರಿಗೆ ಇದು ಅತ್ಯುತ್ತಮ ಎನ್ನುತ್ತಾರೆ ಈ ಚಿಕಿತ್ಸಾ ತಜ್ಞ ಕಾರ್ತಿಕ್.‌

ಚಿಕಿತ್ಸೆ ಬಗ್ಗೆ ಅವರೇನು ಹೇಳುತ್ತಾರೆ ? ಇಲ್ಲಿ 👇 ನೋಡಿ.


ಇದನ್ನೂ ನೋಡಿ:
PARYAYA: ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?:   ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು? ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇ...

Thursday, January 1, 2026

PARYAYA: ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರ

 ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಹಾಗೂ ಕಂಪಾನಿಯೋ ಇವರ ಸಹಯೋಗದೊಂದಿಗೆ  "ಉಚಿತ ಫುಟ್ ಪಲ್ಸ್ ಥೆರಪಿ " ಶಿಬಿರವನ್ನು ದೇವಾಲಯ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ರಕ್ತ ಪರಿಚಲನೆ, ಮಾಂಸಖಂಡಗಳ ಸೆಳೆತ, ಮತ್ತು ನರಗಳ ಯಾವುದೇ ಸರಳ ಮತ್ತು ದೀರ್ಘ ಕಾಲದ ಸಮಸ್ಯೆಗಳಿಗೆ ಔಷಧ ರಹಿತ ಹಾಗೂ ಅಡ್ಡ ಪರಿಣಾಮ ಇಲ್ಲದೆ ಚಿಕತ್ಸೆ ಸಲಹೆಗಳನ್ನು ನೀಡಲಾಗುವುದು.

ಶಿಬಿರವು ದಿನಾಂಕ 03-01-2026 ರಿಂದ 12-01-2026 ರವರೆಗೆಬೆಳಗ್ಗೆ 9.30 ರಿಂದ ಸಂಜೆ 05:00 ಗಂಟೆಯ ತನಕ ನಡೆಯುತ್ತದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಪ್ರಕಟಣೆ ತಿಳಿಸಿದೆ.

ಆಸಕ್ತರು ವಿವರಗಳಿಗೆ ಮೇಲಿನ ಚಿತ್ರ ಕ್ಲಿಕ್‌ ಮಾಡಿನೋಡಬಹುದು ಅಥವಾ ಕಾರ್ತಿಕ್‌  (ಮೊಬೈಲ್‌ ನಂಬರ್‌ 9901612625) ಅವರನ್ನು ಸಂಪರ್ಕಿಸಬಹುದು.

PARYAYA: ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರ:   ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಹಾಗೂ ಕಂಪಾನಿ...

Saturday, May 12, 2018

ಮುಕ್ತಿನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೊದಲ ವಿಶ್ವ ನಾಯಕ ನರೇಂದ್ರ ಮೋದಿ


ಮುಕ್ತಿನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ
ಮೊದಲ ವಿಶ್ವ ನಾಯಕ ನರೇಂದ್ರ ಮೋದಿ

ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಗಳು ಮತ್ತು ಬೌದ್ಧರಿಗೆ ಪವಿತ್ರವಾದ ನೇಪಾಳದ ಮುಕ್ತಿನಾಥ ದೇವಾಲಯದಲ್ಲಿ 2018 ಮೇ 12ರ ಶನಿವಾರ ಪ್ರಾರ್ಥನೆ ಸಲ್ಲಿಸುವ ಮೂಲಕ ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೊತ್ತ ಮೊದಲ ವಿಶ್ವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೋದಿ ಅವರು ಬಾಗ್ಮತಿ ನದಿದಂಡೆಯಲ್ಲಿರುವ ಪಶುಪತಿ ನಾಥದೇವಾಲಯದಲ್ಲೂ ಪ್ರಾರ್ಥನೆ ಸಲ್ಲಿಸಿದರು. ಪಶುಪತಿನಾಥ ದೇವಾಲಯವು ನೇಪಾಳದಲ್ಲಿನ ಅತ್ಯಂತ ಹಳೆಯ ಹಾಗೂ ಪವಿತ್ರ ದೇವಾಲಯ.


ಪಶುಪತಿನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ, ಮೋದಿಯವರು ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಸಹಿ ಮಾಡಿದರು. ಅವರಿಗೆ ದೇವಾಲಯದ ಕಿರು ಪ್ರತಿಕೃತಿಯನ್ನು ಕೊಡುಗೆಯಾಗಿ ನೀಡಲಾಯಿತು.
ನೇಪಾಳ ಪ್ರವಾಸದ ಎರಡನೇ ದಿನ ಮುಸ್ತಾಂಗ್ ಜಿಲ್ಲೆಯಿಂದ ವಾಯಮಾರ್ಗ ಮೂಲಕವಾಗಿ ಮುಕ್ತಿನಾಥಕ್ಕೆ ತೆರಳಿದ ಮೋದಿ ಅವರು  12172 ಅಡಿ ಎತ್ತರದಲ್ಲಿರುವ ಪವಿತ್ರ ಮುಕ್ತಿನಾಥ ದರ್ಶನ ಪಡೆದರು. ತನ್ಮೂಲಕ ಭಾರತ ಮತ್ತು ನೇಪಾಳದ ನಡುವಿನ ಪ್ರಾಚೀನ ಸಾಂಸ್ಕೃತಿಕ ಬಾಂಧವ್ಯಕ್ಕೆ ಸುಭದ್ರ ಬೆಸುಗೆ ಹಾಕಿದರು.

Monday, January 22, 2018

‘ವಿಟ್ಲಾಯನ’ ವೈಭವ, ಕಣ್ತುಂಬಿಕೊಳ್ಳಿ ‘ವಿಟ್ಲ ತೇರು’ ಸಂಭ್ರಮ! Vittla Sri Panchalingeshwara Car Festival !



ವಿಟ್ಲಾಯನವೈಭವ, ಕಣ್ತುಂಬಿಕೊಳ್ಳಿವಿಟ್ಲ ತೇರುಸಂಭ್ರಮ!
Vittla Sri Panchalingeshwara Car Festival !
ವಿಟ್ಲ: ಹೌದು. ಇದಕ್ಕೆವಿಟ್ಲಾಯನ’ ಎಂದೇ ಹೆಸರು. ಅಂದರೆ ವಿಟ್ಲ ಜಾತ್ರೆ. ಪಂಚಲಿಂಗೇಶ್ವರನ ವರ್ಷಾವಧಿ ಜಾತ್ರಾ ಮಹೋತ್ಸವ ಪ್ರತಿವರ್ಷ ಮಕರ ಸಂಕ್ರಮಣದಿನವಾದ ಜನವರಿ 14ರಂದು ‘ಗರುಡಾರೋಹಣ’ದೊಂದಿಗೆ ಆರಂಭವಾಗಿ ಜನವರಿ 22ರಂದು ಮುಕ್ತಾಯವಾಗುತ್ತದೆ.

https://youtu.be/JRsaTMrHMZY
ಹಿಂದಿನಿಂದಲೇ ವಿಟ್ಲದ ಆಸುಪಾಸಿನ ಮಂದಿಗೆಲ್ಲ ಸಡಗರ ಸಂಭ್ರಮದ ದಿನಗಳಿವು. ಈಗಂತೂ ದೇವಸ್ಥಾನದ ಜೀರ್ಣೋದ್ಧಾರ ನೆರವೇರಿದ ಬಳಿಕ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಇನ್ನೂ ಹೆಚ್ಚಿದೆ.
ದಕ್ಷಿಣ ಕನ್ನಡ, ಕೇರಳ ಶೈಲಿಯ ವಿಶಿಷ್ಠ ದೇವಾಲಯಗಳಲ್ಲಿ ಒಂದಾಗಿರುವ ಪಂಚಲಿಂಗೇಶ್ವರ ದೇವಸ್ಥಾನ ದಕ್ಷಿಣ ಭಾರತದಲ್ಲೇ ಅತ್ಯಂತ ವಿಶಾಲವಾದಗಜಪೃಷ್ಠ ಗರ್ಭಗುಡಿಇರುವಂತಹ ದೇವಸ್ಥಾನ. ದೇಗುಲದ ಗರ್ಭಗುಡಿಯ ಹಿಂಭಾಗ ಆನೆಯ ಪೃಷ್ಠದ ಆಕಾರದಲ್ಲಿ ಇರುವುದೇ ಇದಕ್ಕೆ ಹೆಸರು ಬರಲು ಕಾರಣ.
ಪಂಚಲಿಂಗೇಶ್ವರನಿಗೆ ವರ್ಷ ಭಕ್ತರು ಕಾಣಿಕೆಯ ರೂಪದಲ್ಲಿ ಹೊಸ ದೋಣಿಯೊಂದನ್ನು ಅರ್ಪಿಸಿದ್ದರಿಂದ ವರ್ಷ ದೇವರ ತೆಪ್ಪೋತ್ಸವಕ್ಕೂ ವಿಶೇಷ ಕಳೆ ಮೂಡಿತ್ತು.
2018 ಜನವರಿ 21 ರಾತ್ರಿ ಪಂಚಲಿಂಗೇಶ್ವರನ ಸಡಗರದ ತೇರು (ರಥೋತ್ಸವ). ರಥೋತ್ಸವದ ಸಂಭ್ರಮ, ಬೆಡಿ (ಸಿಡಿಮದ್ದು) ಗೌಜಿಯನ್ನು ಕಣ್ತುಂಬಿಕೊಳ್ಳಲು ಬರುವ ಮಂದಿ ಕಡಿಮೆ ಏನಲ್ಲ.
ವಿಟ್ಲಾಯನದ ಸಂಭ್ರಮದ ಕೆಲವು ಝಲಕ್ ಗಳು, ವಿಡಿಯೋಗಳು ಇಲ್ಲಿವೆ. ಬನ್ನಿ ಕಣ್ತುಂಬಿಕೊಳ್ಳಿ.


ವಿಡಿಯೋಗಳನ್ನು ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ:
https://youtu.be/JRsaTMrHMZY



https://youtu.be/g4d4ZuaWsWE
https://youtu.be/ydkg9r7-7ac

(ಫೊಟೋ, ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ಆ್ಯಪ್)