ನಾನು ಮೆಚ್ಚಿದ ವಾಟ್ಸಪ್

Saturday, June 27, 2020

ಇಂದಿನ ಇತಿಹಾಸ History Today ಜೂನ್ 27

ಇಂದಿನ ಇತಿಹಾಸ  History Today ಜೂನ್  27  

2020: ನವದೆಹಲಿ: ಬೆಳೆ ನಾಶ ಮಾಡುವ ಮಿಡತೆಗಳ ಭಾರೀ ದಂಡು ರಾಷ್ಟ್ರದ ರಾಜಧಾನಿಗೆ ಗಡಿಯಲ್ಲಿರುವ ಗುರುಗ್ರಾಮದಿಂದ 2020 ಜೂನ್ 27ರ ಶನಿವಾರ ಮಧ್ಯಾಹ್ನ ದೆಹಲಿಗೆ ಲಗ್ಗೆ ಹಾಕಿದ್ದು, ದಕ್ಷಿಣ ದೆಹಲಿಯ ಛತ್ತಾರಪುರದಲ್ಲಿ ಹೊಲಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಿವೆ. ಮಿಡತೆ ಓಡಿಸಲು ಜನರು ಜೋರಾಗಿ ಸಂಗೀತ ನುಡಿಸಿದ್ದಲ್ಲದೆ, ಪಾತ್ರೆಗಳನ್ನು ಬಡಿದು ಸದ್ದು ಮಾಡಿದರು. ಮರುಭೂಮಿಯ ಮಿಡತೆ ದಂಡು ಶನಿವಾರ ಬೆಳಗ್ಗೆ ಗುರುಗ್ರಾಮಕ್ಕೆ ತಲುಪಿದ್ದು, ಅಲ್ಲಿನ ನಿವಾಸಿಗಳು ಭಾರೀ ಪ್ರಮಾಣದಲ್ಲಿ ಮಿಡತೆಗಳು ಮನೆಗಳ ಸುತ್ತ ಮುತ್ತ ಮತ್ತು ಆಕಾಶದಲ್ಲಿ ಮುತ್ತಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರು. ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ರಾಷ್ಟ್ರೀಯ ರಾಜಧಾನಿಯ ದಕ್ಷಿಣ ಮತ್ತು ಪಶ್ಚಿಮ ಜಿಲ್ಲೆಗಳ ಆಡಳಿತಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಸರ್ಕಾರ ಕರೆದ ತುರ್ತು ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರ ಪ್ರಕಾರ ದಕ್ಷಿಣ ದೆಹಲಿಯ ಅಸೋಲ ಭಟ್ಟಿ ಪ್ರದೇಶದಕ್ಕೆ ಕೂಡಾ ಮಿಡತೆ ದಂಡು ತಲುಪಿದೆ ಎಂಬ ವರ್ತಮಾನ ಸಚಿವರಿಗೆ ಬಂದಿದೆ. ಎಲ್ಲ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳಿಗೆ ದೆಹಲಿಯಲ್ಲಿ ಸಂಭಾವ್ಯ ಮಿಡತೆ ದಾಳಿಯನ್ನು ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಕೃಷಿ ಇಲಾಖೆಗೆ ಸೂಚಿಸಲಾಗಿದೆ ಎಂದು ಅಧಿಕಾರಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪೂರ್ವ ಲಡಾಕ್‌ನಲ್ಲಿ ಭಾರತದ ವಿರುದ್ಧ ಆಕ್ರಮಣಕಾರಿ ಸೇನಾ ನಡವಳಿಕೆಯನ್ನು ಆಶ್ರಯಿಸಿದ್ದಕ್ಕಾಗಿ ಚೀನಾವು "ಭಾರೀ ಬೆಲೆ ತೆರಬೇಕಾಗುತ್ತದೆ, ಏಕೆಂದರೆ ಇದು ದೇಶವನ್ನು ಜಾಗತಿಕವಾಗಿ ಪ್ರತ್ಯೇಕಿಸುತ್ತದೆ ಎಂದು ಕಾರ್ಯತಂತ್ರದ ವ್ಯವಹಾರ ತಜ್ಞರು 2020 ಜೂನ್ 27ರ ಶನಿವಾರ ಹೇಳಿದರು. ಪೂರ್ವ ಲಡಾಖ್ ಮತ್ತು ದಕ್ಷಿಣ ಚೀನಾದಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಚೀನಾದ ದುರಾಡಳಿತದ ಆರ್ಥಿಕ ವೆಚ್ಚವು "ಬೃಹತ್" ಆಗಿರುತ್ತದೆ, ಏಕೆಂದರೆ ಇಡೀ ಪ್ರಪಂಚವು ಕೊರೋನವೈರಸ್ ವಿರುದ್ಧ ಹೋರಾಡುತ್ತಿರುವಾಗ ಬೀಜಿಂಗ್‌ನನೈಜ ಮುಖವನ್ನು ಅದುಅನಾವರಣಗೊಳಿಸಿದೆ ಎಂದು ಅವರು ನುಡಿದರು. ತಜ್ಞರು ಅಮೆರಿಕ ಜೊತೆಗಿನ ಚೀನಾದ g ಸಮರ, ಆಸ್ಟ್ರೇಲಿಯಾ ಜೊತೆಗಿನ ವ್ಯಾಪಾರ ಸಂಬಂಧಿತ ಜಗಳ ಮತ್ತು ಹಾಂಕಾಂಗಿನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನೂ ಉಲ್ಲೇಖಿಸಿದರು. "ಪೂರ್ವ ಲಡಾಖ್‌ನಲ್ಲಿ ಆಕ್ರಮಣಕಾರಿ ಸೇನಾ ನಡವಳಿಕೆಯನ್ನು ಆಶ್ರಯಿಸುವ ಮೂಲಕ ಚೀನಾ ದೊಡ್ಡ ತಪ್ಪು ಮಾಡಿದೆ. ಜಗತ್ತು ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ ಚೀನಾ ಜಾಗತಿಕವಾಗಿ ತನ್ನನ್ನು ತಾನು ಅನಾವರಣಗೊಳಿಸಿಕೊಂಡಿದೆ ಎಂದು ನಿವೃತ್ತ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥ  ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಹೇಳಿದರು. "ಚೀನಾ ತೆರಬೇಕಾದ ಬೆಲೆ ದೊಡ್ಡದಾಗಿದೆ. ಇದು ಭಾರವಾಗಿರುತ್ತದೆ. ಜೂನ್ ೧೫ ರಂದು ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರನ್ನು ಕೊಂದದ್ದಕ್ಕಾಗಿ ಇದು ಹಲವಾರು ದಶಕಗಳವರೆಗೆ ಅದು ಬೆಲೆ ತೆರಬೇಕಾಗುತ್ತದೆ.  ಭಾರತ ಮತ್ತು ಇತರೆಡೆಗಳಲ್ಲಿ ಚೀನಾ ತನ್ನ ಸದ್ಭಾವನೆಯನ್ನು ಕಳೆದುಕೊಂಡಿದೆ ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಪುಣೆ/ ಮುಂಬೈ: ರಾಷ್ಟ್ರೀಯ ಭದ್ರತೆಯ ವಿಚಾರಗಳನ್ನು ರಾಜಕೀಯಗೊಳಿಸಬಾರದು ಮತ್ತು ಚೀನಾವು ಭಾರೀ ಪ್ರಮಾಣದ ಭೂಮಿಯನ್ನು ಅತಿಕ್ರಿಮಿಸಿದ ೧೯೬೨ರ ಯುದ್ಧದ ಬಳಿಕ ಏನಾಯಿತು ಎಂದು ಪ್ರತಿಯೊಬ್ಬರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬುದಾಗಿ ಹೇಳುವ ಮೂಲಕ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು 2020 ಜೂನ್ 27ರ ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚಾಟಿ ಬೀಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ನೆಲವನ್ನು ಚೀನೀ ದಾಳಿಗೆ ಒಪ್ಪಿಸಿದ್ದಾರೆ ಎಂಬ ರಾಹುಲ್ ಗಾಂಧಿ ಆಪಾದನೆ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರವಾಗಿ ಪವಾರ್ ಅವರಿಂದ ಕಠಿಣ ಮಾತುಗಳು ಬಂದಿವೆ.  ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರv-ಚೀನಾ ಪಡೆಗಳ ಮಧ್ಯೆ ಜೂನ್ ೧೫ರಂದು ನಡೆದ ಹಿಂಸಾತ್ಮಕ ಘರ್ಷಣೆ ನಡೆದಂದಿನಿಂದ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದ ವಿರುದ್ಧ ತೀವ್ರ ದಾಳಿ ನಡೆಸುತ್ತಿದೆ. ಲಡಾಖ್‌ನಲ್ಲಿ ಚೀನಾವು ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದೆಯೇ ಎಂಬುದಾಗಿ ಪ್ರಧಾನಿ ಮೋದಿ ಅವರು ಸ್ಪಷ್ಟ ಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿದೆ.  ೧೯೬೨ರ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ನೆರೆ ರಾಷ್ಟ್ರವೊಂದು ಭಾರತೀಯ ನೆಲದ ಮೇಲೆ ಹಕ್ಕು ಪ್ರತಿಪಾದಿಸಿರುವ ಇಂತಹುದೊಂದು ಘಟನೆ ಘಟಿಸಿದೆ ಎಂದು ಎನ್‌ಸಿಪಿ ಅಧ್ಯಕ್ಷರು ಹೇಳಿದರು. ೧೯೬೨ರಲ್ಲಿ ಚೀನಾವು ೪೫,೦೦೦ ಚದರ ಕಿಮೀಗಳಷ್ಟು ಭಾರತೀಯ ನೆಲವನ್ನು ಆಕ್ರಮಿಸಿದ್ದಾಗ ಏನಾಯಿತು ಎಂಬುದನ್ನ ನಾವು ಮರೆಯಲಾಗದು. ಇಂತಹ ಆಪಾದನೆಗಳನ್ನು ಮಾಡುವ ಮುನ್ನ ಯಾರೇ ಆಗಲಿ ಭೂತಕಾಲದಲ್ಲಿ ಏನಾಗಿತ್ತು ಎಂಬುದನ್ನು ಗಮನಿಸಿಕೊಳ್ಳಬೇಕು. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಷಯ. ಯಾರು ಕೂಡಾ ಇಲ್ಲಿ ರಾಜಕೀಯ ತರಬಾರದು ಎಂದು ಮಾಜಿ ರಕ್ಷಣಾ ಸಚಿವ ಪವಾರ್ ಸತಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಇಪ್ಪತ್ನಾಲ್ಕು ಗಂಟೆಗಳ ಅವಧಿಯಲ್ಲಿ ೧೮,೫೦೦ ಹೊಸ ಕೊರೋನಾ ಸೋಂಕು ಪ್ರಕರಣಗಳನ್ನು ದಾಖಲಿಸುವುದರೊಂದಿಗೆ ಭಾರತವು 2020 ಜೂನ್ 27ರ  ಶನಿವಾರ ಗರಿಷ್ಠ ಏಕದಿನ ಸೋಂಕಿನ ಇನ್ನೊಂದು ಅನಪೇಕ್ಷಿತ ದಾಖಲೆಯನ್ನು ನಿರ್ಮಿಸಿತು. ಆದರೆ ಇದೇ ವೇಳೆಗೆ ಚೇತರಿಕೆಯ ಪ್ರಮಾಣ ಶೇಕಡಾ ೫೮ಕ್ಕೆ ಏರಿದ ಆಶಾದಾಯಕ ಬೆಳವಣಿಗೆಯ ಮಾಹಿತಿಯನ್ನೂ ಕೇಂದ್ರ ಸರ್ಕಾರ ಒದಗಿಸಿತು. ಸೋಂಕು ಆರಂಭವಾದಂದಿನಿಂದ ಈವರೆಗೆ ದಾಖಲಾಗಿರುವ ,೦೮,೯೫೩ ಪ್ರಕರಣಗಳ ಪೈಕಿ ಲಕ್ಷಕ್ಕೆ ಸಮೀಪದ ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ರೋಗದಿಂದ ಗುಣಮುಖರಾಗಿ ಚೇತರಿಕೆ ಕಂಡವರ ಪ್ರಮಾಣ ಶೇಕಡಾ ೫೮ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದರು. ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಕೇವಲ ಶೇಕಡಾ ೩ರಷ್ಟಿದ್ದು, ಸೋಂಕು ದುಪ್ಪಟ್ಟುಗೊಳ್ಳುವ ದಿನಗಳ ಅಂತರ ಅಂದಾಜು ೧೯ರಷ್ಟಿದೆ. ಮಾರ್ಚ್ ೨೫ರಂದು ರಾಷ್ಟ್ರವ್ಯಾಪಿ ದಿಗ್ಬಂಧನ ಹೇರಿಕೆಗೆ ಮುನ್ನ ದೇಶದಲ್ಲಿ ದಿನಗಳಿಗೆ ಒಮ್ಮೆ ಪ್ರಕರಣಗಳು ದುಪ್ಪಟ್ಟು ಆಗುತ್ತಿದ್ದುದಕ್ಕೆ ಹೋಲಿಸಿದರೆ ಇದು ದೊಡ್ಡ ಅಂತರ ಎಂದು ಸಚಿವರು ನುಡಿದರು. ನಮ್ಮ ಚೇತರಿಕೆಯ ಪ್ರಮಾಣ ಶೇಕಡಾ ೫೮ನ್ನು ದಾಟಿದೆ. ಸುಮಾರು ಲಕ್ಷ ಮಂದಿ ಕೋವಿಡ್ -೧೯ ಸೋಂಕಿನಿಂದ ಗುಣಮುಖರಾಗಿದ್ದಾರೆ. ನಮ್ಮಲ್ಲಿ ಸಾವಿನ ಪ್ರಮಾಣ ಶೇಕಡಾ ೩ರಷ್ಟಿದ್ದು, ಇದು ಅತ್ಯಂತ ಕೆಳಗಿನ ಸಂಖ್ಯೆಯಾಗಿದೆ. ಸೋಂಕು ದುಪ್ಪಟ್ಟು ಆಗುವಲ್ಲಿನ ದಿನಗಳ ಅಂತರ ಸುಮಾರು ೧೯ ದಿನಗಳಿಗೆ ಏರಿದೆ. ಲಾಕ್ ಡೌನ್‌ಗೆ ಮುನ್ನ ಇದು ದಿನಗಳಾಗಿದ್ದವು ಎಂದು ಹರ್ಷವರ್ಧನ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪೀಪಲ್ಸ್ ಲಿಬರೇಶನ್ ಆರ್ಮಿಯು ಜೂನ್ ೬ರ ಒಪ್ಪಂದದ ಪ್ರಕಾರ ಉದ್ವಿಗ್ನತೆ ಶಮನಗೊಳಿಸುವ ಮತ್ತು ಪಶ್ಚಿಮ ವಿಭಾಗದ ,೫೯೭ ಕಿಮೀ ನೈಜ ನಿಯಂತ್ರಣ ರೇಖೆಯಲ್ಲಿನ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವ ಬದ್ಧತೆ ಈಡೇರಿಸುವುದಕ್ಕಾಗಿ ಭಾರತ ಕಾಯುತ್ತಿದೆ. ಹೀಗಾಗಿ ಪೂರ್ವ ಲಡಾಖ್‌ನಲ್ಲಿ ಅಸಹಜ ಸ್ಥಿತಿ ಹಾಗೆಯೇ ಮುಂದುವರೆದಿದೆ. ಪೂರ್ವ ಲಡಾಖ್‌ನಲ್ಲಿ ಗಡಿಯಲ್ಲಿ  ಉಭಯ ಸೇನೆಗಳೂ ಮುಂಚೂಣಿಯಲ್ಲಿ ಇದ್ದರೂ, ನಾಲ್ಕು ಪಾಯಿಂಟ್‌ಗಳ ಪೈಕಿ ಎರಡರಲ್ಲಿ ಉಭಯ ಕಡೆಗಳಲ್ಲೂ ಉದ್ವಿಗ್ನತೆ ಕಡಿಮೆಗೊಳಿಸಲಾಗುತ್ತಿದೆ ಎಂಬ ವರದಿಗಳಿವೆ. ಆದಾಗ್ಯೂ ಉಭಯ ಕಡೆಗಳೂ ಉನ್ನತ ಸೇನಾ ಕಟ್ಟೆಚ್ಚರವನ್ನು ಮುಂದುವರೆಸಿವೆ. ಗಡಿ ಪರಿಸ್ಥಿತಿ ಹಾಗೆಯೇ ಮುಂದುವರೆದಿದೆ. ಯಥಾಸ್ಥಿತಿ ಸ್ಥಾಪನೆಯ ಹೊಣೆಗಾರಿಕೆ ಪಿಎಲ್‌ಎ ಮೇಲೆಯೇ ಇದೆ. ಏಕೆಂದರೆ ಅದು ಕಳೆದ ತಿಂಗಳು ಎಲ್ಲ ಒಪ್ಪಂದಗಳನ್ನು ಮತ್ತು ವಿಶ್ವಾಸ ನಿರ್ಮಾಣದ ಕ್ರಮಗಳನ್ನು ಕೂಡಾ ಉಲ್ಲಂಘಿಸಿ ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಯತ್ನಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಹೊಸ ಸ್ಥಿತಿಯನ್ನೇ ಮಾಮೂಲು ಸ್ಥಿತಿ ಎಂಬುದಾಗಿ ಪಿಎಲ್‌ಎ ಪ್ರತಿಪಾದಿಸುವಂತಿಲ್ಲ ಮತ್ತು ಪಿಎಲ್ ಶಾಂತಿ ಸ್ಥಾಪನೆಗಾಗಿ ತನ್ನ ಹಿಂದಿನ ನೆಲೆಗಳಿಗೆ ವಾಪಸಾಗಬೇಕು ಮತ್ತು ದ್ವಿಪಕ್ಷೀಯ ಬಾಂಧವ್ಯಗಳನ್ನು ಪುನಸ್ಥಾಪನೆ ಮಾಡಬೇಕು ಎಂಬುದಾಗಿ ಭಾರತ ಬಯಸುತ್ತದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಚೀನಾಕ್ಕೆ ಖಂಡತುಂಡವಾಗಿ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜೂನ್  27  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment