ನಾನು ಮೆಚ್ಚಿದ ವಾಟ್ಸಪ್

Friday, June 5, 2020

ಇಂದಿನ ಇತಿಹಾಸ History Today ಜೂನ್ 05

ಇಂದಿನ ಇತಿಹಾಸ  History Today ಜೂನ್  05 

2020: ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರ್ಥಿಕತೆಯ ಮೇಲಿನ ವೆಚ್ಚವನ್ನು ಬಿಗಿಗೊಳಿಸುವ ಕ್ರಮವಾಗಿ ಹಣಕಾಸು ಸಚಿವಾಲಯವು  2020 ಜೂನ್ 05ರ ಶುಕ್ರವಾರ ಎಲ್ಲಾ ಹೊಸ ಯೋಜನೆಗಳನ್ನು ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೆ ಅಮಾನತುಗೊಳಿಸಿತು. ಆತ್ಮ ನಿರ್ಭರ ಭಾರತ ಅಭಿಯಾನ ಮತ್ತು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಘೋಷಿಸಲಾದ ಯೋಜನೆಗಳನ್ನು ಮಾತ್ರ ಪ್ರಾರಂಭಿಸಿ ಮುಂದುವರೆಸಲಾಗುವುದು. ಹಣಕಾಸು ವರ್ಷದಲ್ಲಿ ಬೇರೆ ಯಾವುದೇ ಯೋಜನೆಗೆ ಅನುಮೋದನೆ ನೀಡಲಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿತು. ಸರ್ಕಾರದ ನಿರ್ಧಾರದ ಪರಿಣಾಮವಾಗಿ ಮುಂಗಡಪತ್ರದ (ಬಜೆಟ್) ಅಡಿಯಲ್ಲಿ ಈಗಾಗಲೇ ಅನುಮೋದಿಸಲಾದ ಯೋಜನೆಗಳು ಮುಂದಿನ ವರ್ಷದ ಮಾರ್ಚ್ ೩೧ ರವರೆಗೆ ಸ್ಥಗಿತಗೊಳ್ಳುತ್ತವೆ. ಹಣಕಾಸು ಸಚಿವಾಲಯಕ್ಕೆ ವಿನಂತಿ ಕಳುಹಿಸುವುದನ್ನು ನಿಲ್ಲಿಸುವಂತೆ ಹೊಸ ಸಚಿವಾಲಯಗಳು ಸೇರಿದಂತೆ ಎಲ್ಲ ಸಚಿವಾಲಯಗಳಿಗೆ ತಿಳಿಸಲಾಗಿದೆ. "ಕೋವಿಡ್-೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಣಕಾಸು ಸಂಪನ್ಮೂಲಗಳ ಮೇಲೆ ಅಭೂತಪೂರ್ವ ಬೇಡಿಕೆ ಇದೆ ಮತ್ತು ಉದಯೋನ್ಮುಖ ಮತ್ತು ಬದಲಾಗುತ್ತಿರುವ ಆದ್ಯತೆಗಳಿಗೆ ಅನುಗುಣವಾಗಿ ಸಂಪನ್ಮೂಲಗಳನ್ನು ವಿವೇಕಯುತವಾಗಿ ಬಳಸಿಕೊಳ್ಳುವ ಅವಶ್ಯಕತೆಯಿದೆ" ಎಂದು ಹಣಕಾಸು ಸಚಿವಾಲಯದ  ಹೇಳಿಕೆ ತಿಳಿಸಿತು. ಹೊಸ ನಿಯಮದಂತೆ ಯಾವುದೇ ವಿನಾಯಿತಿಯನ್ನು ವೆಚ್ಚ ಇಲಾಖೆ ಅನುಮೋದಿಸಬೇಕಾಗಿದೆ ಎಂದು ಹೇಳಿಕೆ ತಿಳಿಸಿತು. . (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸಾವಿರಾರು ಪಾಕಿಸ್ತಾನಿ ಭಯೋತ್ಪಾದಕರು ಇರುವುದನ್ನು ಸೂಚಿಸುವ ಹೊಸ ವಿಶ್ವಸಂಸ್ಥೆ ವರದಿಯು ಕಳೆದ ವರ್ಷ  ಪಾಕಿಸ್ತಾನವು ೪೦,೦೦೦ ಭಯೋತ್ಪಾದಕರಿಗೆ ಆತಿಥ್ಯ ನೀಡಿದೆ ಎಂಬುದಾಗಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸ್ವತಃ ಒಪ್ಪಿಕೊಂಡದ್ದರ ಪ್ರತಿಫಲನವಾಗಿದೆ ಎಂದು ನಂಬಲರ್ಹ ಮೂಲಗಳು  2020 ಜೂನ್ 05ರ ಶುಕ್ರವಾರ ತಿಳಿಸಿದವು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು "ಪಾಕಿಸ್ತಾನವನ್ನು ದೂಷಿಸಲು" ವಿಶ್ವಸಂಸ್ಥೆ ವರದಿಯನ್ನು ಬಳಸುತ್ತಿದೆ ಎಂಬ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಾದಕ್ಕೆ ಪ್ರತಿಕ್ರಿಯಿಸಿದ ಅನಾಮಧೇಯರಾಗಿ ಉಳಿಯಬಯಸಿದ ವ್ಯಕ್ತಿ, ಈಗಾಗಲೇ ತಪ್ಪೊಪ್ಪಿಕೊಂಡಿರುವ ಇಮ್ರಾನ್ ಖಾನ್ ಹೇಳಿಕೆಯನ್ನೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮೇಲ್ವಿಚಾರಣಾ ತಂಡ ಪುನರುಚ್ಚರಿಸಿದೆಎಂದು ಹೇಳಿದ್ದಾರೆ.  ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಭಯೋತ್ಪಾದಕರಲ್ಲಿ ಸುಮಾರು ,೫೦೦ ಪಾಕಿಸ್ತಾನಿ ಪ್ರಜೆಗಳಿದ್ದಾರೆ ಮತ್ತು ಜೈಶ್--ಮೊಹಮ್ಮದ್ (ಜೆಎಂ) ಮತ್ತು ಲಷ್ಕರ್--ತೊಯ್ಬಾ (ಎಲ್ಇಟಿ) ಯುದ್ಧ ಪೀಡಿತ ದೇಶಕ್ಕೆ ವಿದೇಶಿ ಹೋರಾಟಗಾರರನ್ನು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಕಳೆದ ತಿಂಗಳು ಬಿಡುಗಡೆ ಮಾಡಲಾದ ವಿಶ್ವಸಂಸ್ಥೆ ವರದಿಯು ತಿಳಿಸಿತ್ತು. "ಪಾಕಿಸ್ತಾನವು ಇನ್ನೂ ೩೦,೦೦೦ ರಿಂದ ೪೦,೦೦೦ ಭಯೋತ್ಪಾದಕರಿಗೆ ಆತಿಥ್ಯ ವಹಿಸುತ್ತಿದೆ ಎಂದು ಅವರ ಪ್ರಧಾನಿ ಕಳೆದ ವರ್ಷ ಒಪ್ಪಿಕೊಂಡಿದ್ದನ್ನು ಪಾಕಿಸ್ತಾನದ ವಿದೇಶಾಂಗ ಕಚೇರಿ ನೆನಪಿಸಿಕೊಳ್ಳುವುದು ಉತ್ತಮ. ಹಿಂದೆ ಭಯೋತ್ಪಾದಕರು ಇತರ ದೇಶಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ದೇಶದ ನೆಲವನ್ನು ಬಳಸಿದ್ದರು ಎಂದು ಪಾಕಿಸ್ತಾನದ ನಾಯಕತ್ವವು  ದಾಖಲಿಸಿz’ ಎಂದು ಮೇಲೆ ಉಲ್ಲೇಖಿಸಿದ ವ್ಯಕ್ತಿಗಳಲ್ಲಿ ಒಬ್ಬರು ಹೇಳಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಪ್ರಮುಖ ಸೇನಾ ಮಾತುಕತೆಗಳ ಮೂಲಕ ಭಾರತದೊಂದಿಗೆ ಗಡಿಬಿಕ್ಕಟ್ಟನ್ನುಸರಿಯಾಗಿ ಬಗೆಹರಿಸಲುತಾನು ಬದ್ಧ ಎಂಬ ಚೀನಾ ಹೇಳಿಕೆಯ ನಡುವೆ ಲಡಾಖ್ ಬಿಕ್ಕಟ್ಟು ಇತ್ಯರ್ಥ ನಿಟ್ಟಿನಲ್ಲಿ ಪ್ರಗತಿ ಸಾಧಿಸುವ ಆಶಯದೊಂದಿಗೆ ಭಾರತದ ಸೇನಾ ಅಧಿಕಾರಿಗಳು ಚೀನೀ ಅಧಿಕಾರಿಗಳೊಂದಿಗೆ  2020  ಜೂನ್  06ರ ಶನಿವಾರ ಉನ್ನತ ಮಟ್ಟದ ಅಧಿಕಾರಿಗಳ ಮೊದಲ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಲೇಹ್ ಮೂಲದ ೧೪ ಕೋರ್ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿಯ ತತ್ಸಮಾನ ಅಧಿಕಾರಿ ಉನ್ನತ ಮಟ್ಟದ ಸೇನಾ ಅಧಿಕಾರಿಗಳ ಮೊದಲ ಸುತ್ತಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ಯಾಂಗೋಂಗ್ ಲೇಕ್ ಸಮೀಪ ಮೇ ೫ರಂದು ಮತ್ತು ಬಳಿಕ ಗಲ್ವಾನ್ ನದಿ ಪಾತ್ರದ ಸಮೀಪ ಸಂಭವಿಸಿದ ಘರ್ಷಣೆಗಳ ಬಳಿಕ ನಡೆಯುತ್ತಿರುವ ಉನ್ನತ ಮಟ್ಟದ ಮೊದಲ ಸೇನಾ ಮಾತುಕತೆ ಇದಾಗಿದೆ.  ಉಭಯ ಸೇನೆಗಳ ಮೇಜರ್ ಜನರಲ್ ಮಟ್ಟದ ಅಧಿಕಾರಿಗಳ ನೇತೃತ್ವದ ನಿಯೋಗಗಳ ಮಧ್ಯೆ ಜೂನ್ ೨ರಂದು ನಡೆದ ಕೊನೆಯ ಸುತ್ತಿನ ಮಾತುಕತೆ ಅಪೂರ್ಣವಾಗಿತ್ತು. ಗಡಿ ಬಿಕ್ಕಟ್ಟನ್ನು ಕೊನೆಗೊಳಿಸಲು ಶನಿವಾರ ಭಾರತ ಮತ್ತು ಚೀನಾದ ಹಿರಿಯ ಸೇನಾ ಅಧಿಕಾರಿಗಳ ನಡುವಣ ಪ್ರಮುಖ ಮಾತುಕತೆಗೆ ಮುಂಚಿತವಾಗಿ, ಭಾರತದೊಂದಿಗೆ ಸಂಬಂಧಿಸಿದ ಸಮಸ್ಯೆಯನ್ನು ಸರಿಯಾಗಿ ಪರಿಹರಿಸಲು ಬದ್ಧವಾಗಿರುವುದಾಗಿ ಚೀನಾ ಶುಕ್ರವಾರ ಹೇಳಿತು. . (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020:  ನವದೆಹಲಿ: ರಾಜ್ಯಗಳು ಸತತ ಎರಡನೇ ದಿ ,೦೦೦ ಕ್ಕೂ ಹೆಚ್ಚು ಕೊರೋನವೈರಸ್ ಸೋಂಕಿನ ಪ್ರಕರಣಗಳನ್ನು ದಾಖಲಿಸುತ್ತಿದ್ದು, ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯು  2020 ಜೂನ್ 05ರ ಶುಕ್ರವಾರ  ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿತು.  ಭಾರತದ ಕೋವಿಡ್- ೧೯ ಎಣಿಕೆ .೨೬ ಲಕ್ಷದ ಭೀಕರ ಮೈಲಿಗಲ್ಲನ್ನು ದಾಟಿದೆ. ತಮಿಳುನಾಡು, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕೇರಳ ಮತ್ತು ಅಸ್ಸಾಂ- ಆರು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ೨೪ ಗಂಟೆಗಳಲ್ಲಿ ಕನಿಷ್ಠ ಸೋಂಕಿನ ಅತಿದೊಡ್ಡ ಏರಿಕೆಗೆ ಸಾಕ್ಷಿಯಾದವು.  ಇದೇ ವೇಳೆಗೆ ಭಾರತದಲ್ಲಿ ಸಾವಿನ ಸಂಖ್ಯೆ ,೩೪೮ ತಲುಪಿದೆ. ಕಳೆದ ೨೪ ಗಂಟೆಗಳಲ್ಲಿ ರಾಜ್ಯಗಳು ೨೭೩ ಸಾವುಗಳನ್ನು ದಾಖಲಿಸಿದ್ದು, ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಾಣ ನಷ್ಟವಾಗಿದೆ. ಗುರುವಾರ ಸಂಭವಿಸಿದ ಒಟ್ಟು ಸಾವುನೋವುಗಳಲ್ಲಿ ಸಿಂಹ ಪಾಲು ಮಹಾರಾಷ್ಟ್ರದಿಂದ ಬಂದಿದೆ. ಭಾರತದಲ್ಲಿ ಒಟ್ಟು ಸಕ್ರಿಯ ಕೊರೋನವೈರಸ್ ರೋಗಿಗಳ ಸಂಖ್ಯೆ ೧೧೦,೯೬೦ ಕ್ಕೆ ಏರಿದ್ದು, ಒಟ್ಟು ಕೊರೋನವೈರಸ್ ಪ್ರಕರಣಗಳಲ್ಲಿ ಸುಮಾರು ಶೇಕಡಾ ೪೮ರಷ್ಟು ಅಂದರೆ .೦೯ ಲಕ್ಷ ರೋಗಿಗಳು ಕಾಯಿಲೆಯಿಂದ ಚೇತರಿಸಿ ಗುಣಮುಖರಾಗಿದ್ದಾರೆ. . (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಕೆಳವರ್ಗದ  ಸಮುದಾಯಗಳನ್ನು ಉನ್ನತಿಗೇರಿಸುವ ಪ್ರಯತ್ನದ ಭಾಗವಾಗಿ ಭಾರತೀಯ ಸಂಸ್ಥೆಗಳು ಮತ್ತು ಸಂಘಟನೆಗಳಿಗೆ  ೩೪೦ ದಶಲಕ್ಷ ಡಾಲರುಗಳಿಂತಲೂ (೩೪ ಕೋಟಿ ಡಾಲರ್) ಹೆಚ್ಚಿನ ಮೌಲ್ಯದ ಸಾಲ ಮತ್ತು ಹೂಡಿಕೆಗಳನ್ನು ನೀಡಲು ಅಮೆರಿಕ 2020 ಜೂನ್ 05ರ ಶನಿವಾರ ಒಪ್ಪಿಗೆ ನೀಡಿತು. ಈ ಹೆಚ್ಚಿನ ಸಾಲಗಳು ಆಫ್ರಿಕಾ, ಲ್ಯಾಟಿನ್ ಅಮೆರಿಕ, ಇಂಡೋ-ಪೆಸಿಫಿಕ್ ಮತ್ತು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸಲು ಅಮೆರಿಕ ಅಂತಾರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮ (ಯುಎಸ್ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್ಸಿ) ನಿರ್ದೇಶಕರ ಮಂಡಳಿಯು ಇತ್ತೀಚೆಗೆ ಅನುಮೋದಿಸಿದ ಬಿಲಿಯನ್ ಡಾಲರ್ ಹೂಡಿಕೆಗಳ ಭಾಗವಾಗಿದೆ.  ಕೋವಿಡ್ -೧೯ ಪ್ರಭಾವದಿಂದ ಹಲವಾರು ಯೋಜನೆಗಳು ಹಿಮ್ಮೆಟ್ಟುತ್ತಿರುಂತಹ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಯೋಜನೆಯ ಬೆಂಬಲಿಸುತ್ತದೆ ಮತ್ತು ಈಕ್ವಿಟಿ ಹಾಗೂ ತಾಂತ್ರಿಕ ನೆರವು ಬಳಸುವ ಮೊದಲ ವಹಿವಾಟುಗಳನ್ನು ಒಳಗೊಂಡಿರುತ್ತದೆ ಎಂದು ಅಮೆರಿಕ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ. ಭಾರತದಲ್ಲಿ ಇಂಧನ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ ರಾಜಸ್ಥಾನದಲ್ಲಿ ೩೦೦ ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ರೆನ್ಯೂ ಪವರ್ಗೆ ಸಹಾಯ ಮಾಡಲು ೧೪೨ ಮಿಲಿಯನ್ ಡಾಲರ್ ಸಾಲವನ್ನು ಒದಗಿಸಲಾಗುವುದು. ಮತ್ತೊಂದು ೫೦ ಮಿಲಿಯನ್ ಡಾಲರ್ ಸಾಲವು ಸೀತಾರಾ ಸೋಲಾರ್ ಎನರ್ಜಿ ಪ್ರೈವೇಟ್ ಲಿಮಿಟೆಡ್ಗೆ ರಾಜಸ್ಥಾನದಲ್ಲಿ ೧೦೦ ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ನೆರವಾಗುವ ಮೂಲಕ ವಿದ್ಯುತ್ ಸರಬರಾಜನ್ನು ಹೆಚ್ಚಿಸಲು ಅನುವು ಮಾಡಿಕೊಡಲಿದೆ. . (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜೂನ್  05  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment