ನಾನು ಮೆಚ್ಚಿದ ವಾಟ್ಸಪ್

Sunday, June 28, 2020

ಇಂದಿನ ಇತಿಹಾಸ History Today ಜೂನ್ 28

ಇಂದಿನ ಇತಿಹಾಸ  History Today ಜೂನ್  28  

2020: ನವದೆಹಲಿ: ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂದಿನ ಹಂತ ತುಂಬಾ ಅಪಾಯಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟಡ್ರೋಸ್ ಅಧನಂ ಗೆಬ್ರೆಯೇಸಸ್ 2020 ಜೂನ್ 28ರ ಭಾನುವಾರ ವಿಶ್ವದ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದರು. ಸಾವಿನ ಸಂಖ್ಯೆ ಲಕ್ಷ ದಾಟಿದ್ದು, ಜೂನ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಅವರು ಹೇಳಿದರು. ಕೊರೊನಾ ಸೋಂಕಿನ ಅಂತ್ಯವನ್ನು ನಾವು ಕಂಡಿಲ್ಲ. ಅಲ್ಲದೆ, ಅದರ ಸಂಪೂರ್ಣ ರೂಪವನ್ನೂ ನೋಡಿಲ್ಲ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಅಲಿ ಮೊಕದಾದ್ ಅಭಿಪ್ರಾಯಪಟ್ಟರು. ಇದು ೧೯೧೮ರಲ್ಲಿ ಸಂಭವಿಸಿ ೫೦ ಕೋಟಿ ನಾಗರಿಕರಿಗೆ ಸೋಂಕು ತಗುಲಿದ ಸ್ಪಾನಿಷ್ ಫ್ಲೂಗಿಂತಲೂ ಅತ್ಯಂತ ಅಪಾಯಕಾರಿ ಎಂದು ಅವರು ಹೇಳಿದರು. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಸೋಂಕು ನಂತರ ಯೂರೋಪ್ ರಾಷ್ಟ್ರಗಳು, ಅಮೆರಿಕಕ್ಕೆ ಹರಡಿತು. ನಂತರ ಆರೋಗ್ಯ ಕ್ಷೇತ್ರಗಳಲ್ಲಿ ದುರ್ಬಲವಾಗಿರುವ ಬ್ರೆಜಿಲ್ ಹಾಗೂ ಭಾರತದಂತಹ ರಾಷ್ಟ್ರಗಳನ್ನು ಕಾಡುತ್ತಿದೆ ಎಂದು ಅವರು ನುಡಿದರು. 2020 ಜೂನ್ 28ರ ಭಾನುವಾರ ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ . ಕೋಟಿಗೆ ತಲುಪಿತು. ಸಾವಿನ ಸಂಖ್ಯೆ ಲಕ್ಷ ದಾಟಿತು. ಅಮೆರಿಕಾದಲ್ಲಿ ಮೃತರಾದವರ ಸಂಖ್ಯೆ .೨೮ ಲಕ್ಷಕ್ಕೆ ತಲುಪಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಬೆಂಗಳೂರು: ಆನ್ಲೈನ್ ಶಿಕ್ಷಣದ ಮಾದರಿ ಸಿದ್ಧಪಡಿಸಲು ರಚಿಸಿದ ತಜ್ಞರ ಸಮಿತಿ ವರದಿ ಆಧರಿಸಿ ರಾಜ್ಯ ಸರ್ಕಾರ ಅಂತಿಮ ಮಾರ್ಗಸೂಚಿ ಹೊರಡಿಸುವರೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊರಡಿಸಿರುವ ಡಿಜಿಟಲೀಕರಣ ಕುರಿತ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಐಸಿಎಸ್, ಸಿಬಿಎಸ್ ಹಾಗೂ ಅಂತರರಾಷ್ಟ್ರೀಯ ಪಠ್ಯಕ್ರಮ ಬೋಧಿಸುವ ಸಂಸ್ಥೆಗಳು ಆನ್ಲೈನ್ ಶಿಕ್ಷಣ ನೀಡಬಹುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಕೇಂದ್ರದ ಮಾರ್ಗಸೂಚಿ ಸೂತ್ರಗಳ ಪ್ರಕಾರ, ಪೂರ್ವ ಪ್ರಾಥಮಿಕ ಬೋಧಿಸುವ ಶಿಕ್ಷಣ ಸಂಸ್ಥೆಗಳು ವಾರಕ್ಕೆ ಒಂದು ದಿನ ಗರಿಷ್ಠ ೩೦ ನಿಮಿಷ ಪೋಷಕರ ಜೊತೆ ಆನ್ಲೈನ್ ಸಂವಹನ ಮತ್ತು ಮಾರ್ಗದರ್ಶನ ನೀಡಬಹುದು. ೧ರಿಂದ ೫ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ (ದಿನ ಬಿಟ್ಟು ದಿನ) ಎರಡು ಅವಧಿ ೩೦ರಿಂದ ೪೫ ನಿಮಿಷ ಆನ್ಲೈನ್ ಶಿಕ್ಷಣ ನೀಡಬಹುದು.೬ರಿಂದ ೮ನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಐದು ದಿನ ಗರಿಷ್ಠ ಎರಡು ಅವಧಿ ೩೦ರಿಂದ ೪೫ ನಿಮಿಷ ಹಾಗೂ ಮತ್ತು ೧೦ನೇ ತರಗತಿ ಮಕ್ಕಳಿಗೆ ವಾರದಲ್ಲಿ ಐದು ದಿನ ೩೦ರಿಂದ ೪೫ ನಿಮಿಷ ಗರಿಷ್ಠ ನಾಲ್ಕು ಅವಧಿ ಆನ್ಲೈನ್ ಶಿಕ್ಷ ನೀಡಬಹುದು.ಕೋವಿಡ್ ೧೯ ರೋಗ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಿಯಮಿತ ಶಿಕ್ಷಣಕ್ಕೆ ಪೂರಕವಾಗಿ ಆನ್ಲೈನ್ ಶಿಕ್ಷಣ ನೀಡಬೇಕಾಗಿದೆ. ಹೀಗಾಗಿ, ಶಿಕ್ಷಣ ಸಂಸ್ಥೆಗಳು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದು. ಶುಲ್ಕವನ್ನು ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಿಸಬೇಕು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

 2020: ಬೆಂಗಳೂರು:  ಗದಗ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆರಾಗಿದ್ದ ನಾಡೋಜ ಗೀತಾ ನಾಗಭೂಷಣ  ಅವರು 2020 ಜೂನ್ 28 ಭಾನುವಾರ ಹೃದಯಾಘಾತದಿಂದ ನಿಧನರಾದರು.‘ಬದುಕು’ ಕಾದಂಬರಿಗೆ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.ಗೀತಾ ನಾಗಭೂಷಣ, ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಸಾವಳಗಿ ಎಂಬ ಪುಟ್ಟ ಹಳ್ಳಿಯಲ್ಲಿ ಮಾರ್ಚ್ ೨೫, ೧೯೪೨ರಲ್ಲಿ ಶಾಂತಪ್ಪ, ಶರಣಮ್ಮದಂಪತಿಗಳ ಮಗಳಾಗಿ ಜನಿಸಿದರು. ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿರುವ ನಾಡೋಜ ಗೀತಾ ನಾಗಭೂಷಣ, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳ ನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ದಾಟಿ ತಮ್ಮ ಎಡೆಬಿಡದ ಪರಿಶ್ರಮದಿಂದ ಬಿ., ಬಿ.ಎಡ್, ಎಂ. ಪದವಿಗಳನ್ನು ಗಳಿಸಿ ಬಹುಕಾಲ ಅಧ್ಯಾಪನ ವೃತ್ತಿಯನ್ನೂ ನಡೆಸಿದವರು.ಜೊತೆಗೆ ತಮ್ಮ ಶಿಕ್ಷಕ ವೃತ್ತಿ, ಬರಹ ಪ್ರವೃತ್ತಿ ಮತ್ತು ನಡೆಗಳಿಂದ ಸಮಾಜಕ್ಕೆ ಬೆಳಕು ಕಾಣಿಸುವಲ್ಲಿ ನಿರಂತರ ಪ್ರಯತ್ನಶೀಲರಾದವರು. ಡಾ. ಗೀತಾ ನಾಗಭೂಷಣ ಅವರು ನಾಡೊಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಮಹಿಳಾ ಸಾಹಿತಿ ಕೂಡಾ.  ಗೀತಾ ಅವರ ‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.(ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಜೂನ್  28  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

 


No comments:

Post a Comment