ನಾನು ಮೆಚ್ಚಿದ ವಾಟ್ಸಪ್

Sunday, June 7, 2020

ಇಂದಿನ ಇತಿಹಾಸ History Today ಜೂನ್ 07

ಇಂದಿನ ಇತಿಹಾಸ  History Today ಜೂನ್  07

2020: ಬೆಂಗಳೂರು: ಕನ್ನಡ ಚಿತ್ರನಟ ಚಿರಂಜೀವಿ ಸರ್ಜಾ(೩೯) ತೀವ್ರ ಹೃದಯಾಘಾತದಿಂದ 2020 ಮೇ 7ರ ಭಾನುವಾರ ಸಂಜೆ ಬೆಂಗಳೂರಿನ ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು. ಚಿರಂಜೀವಿ ಅವರು ಹಿರಿಯ ನಟ ದಿವಂಗತ ಶಕ್ತಿಪ್ರಸಾದ್ ಮತ್ತು ಲಕ್ಷ್ಮಿದೇವಮ್ಮ ಅವರ ಮೊಮ್ಮಗ. ಶಕ್ತಿಪ್ರಸಾದ್ ಅವರ ಮಗಳು ಅಮ್ಮಾಜಿ ಹಾಗೂ ವಿಜಯಕುಮಾರ್  ಅವರ ಹಿರಿಯ ಪುತ್ರ. ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಅಕ್ಕನ ಮಗ. ಇವರ ಸೋದರ ಧ್ರುವ ಸರ್ಜಾ ಕೂಡ ಸಿನಿಮಾ ನಟ. ಚಿರಂಜೀವಿ ಸರ್ಜಾ ಎರಡು ವರ್ಷಗಳ ಹಿಂದೆಯಷ್ಟೇ ಹಿರಿಯ ಕಲಾವಿದರಾದ  ಸುಂದರರಾಜ್  ಮತ್ತು ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್ ಅವರನ್ನು ಮದುವೆಯಾಗಿದ್ದರು. ಈ ಜೋಡಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿತ್ತು. ಚಿರಂಜೀವಿ ‘ವಾಯುಪುತ್ರ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.  ‘ಗಂಡೆದೆ’, ‘ಚಿರು’, ‘ದಂಡಂ ದಶಗುಣಂ’, ‘ವರದನಾಯಕ’, ‘ಆಟಗಾರ’, ‘ಆಕೆ’, ‘ಸಂಹಾರ’, ‘ಅಮ್ಮ ಐ ಲವ್ ಯು’ ಸೇರಿದಂತೆ ೨೨ ಸಿನಿಮಾಗಳಲ್ಲಿ ಅವರು ನಟಿಸಿದ್ದರು.  ಇವರ ನಟನೆಯಲ್ಲಿ ತೆರೆಕಂಡಿದ್ದ ಕೊನೆಯ ಚಿತ್ರ ‘ಶಿವಾರ್ಜುನ’. ಇತ್ತೀಚೆಗೆ ಇವರು ರಮೇಶ್ ರಾಜ್ ನಿರ್ದೇಶನದ ‘ಧೀರಂ’ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದರು. ಇವರು ನಟಿಸುತ್ತಿದ್ದ ‘ಏಪ್ರಿಲ್’, ‘ರಾಜಮಾರ್ತಾಂಡ’ ಮತ್ತು ‘ಕ್ಷತ್ರಿಯ’ ಸಿನಿಮಾಗಳ ಶೂಟಿಂಗ್  ಕೊರೊನಾದಿಂದಾಗ ಸ್ಥಗಿತಗೊಂಡಿದ್ದವು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

 

ಇಂದಿನ ಇತಿಹಾಸ  History Today ಜೂನ್  07 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 


No comments:

Post a Comment