ಇಂದಿನ ಇತಿಹಾಸ History
Today
ಜೂನ್ 08
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಇನ್ನೊಬ್ಬ ಗಣ್ಯರಿಗಾಗಿ ಹಾರಾಟಕ್ಕೆ ಎರಡು ಕಸ್ಟಮ್ ನಿರ್ಮಿತ ಬಿ೭೭೭ ವಿಮಾನಗಳನ್ನು ಬೋಯಿಂಗ್ ಸಂಸ್ಥೆಯು ಏರ್ ಇಂಡಿಯಾಕ್ಕೆ ಸೆಪ್ಟೆಂಬರ್ ವೇಳೆಗೆ ಒದಗಿಸಲಿದೆ ಎಂದು ಹಿರಿಯ ಅಧಿಕಾರಿಗಳು 2020 ಜೂನ್ 08ರ ಸೋಮವಾರ ಇಲ್ಲಿ ತಿಳಿಸಿದರು. ವಿವಿಐಪಿ ಪ್ರಯಾಣಕ್ಕಷ್ಟೇ ಸೀಮಿತವಾದ ಈ ಎರಡು ವಿಮಾನಗಳನ್ನು ಜುಲೈ ವೇಳೆಗೆ ಒದಗಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ಕಳೆದ ವರ್ಷ ಅಕ್ಟೋಬರಿನಲ್ಲಿ ತಿಳಿಸಿದ್ದರು. ‘ಮೂಲತಃ ಕೋವಿಡ್-೧೯ ಕಾರಣದಿಂದ ಸ್ವಲ್ಪ ವಿಳಂಬವಾಗಿದೆ, ಎರಡೂ ವಿಮಾನಗಳು ಸೆಪ್ಟೆಂಬರ್ ವೇಳೆಗೆ ತಲುಪಲಿವೆ’ ಎಂದು ಅಧಿಕಾರಿಗಳು ಸೋಮವಾರ ನುಡಿದರು. ಬೋಯಿಂಗ್ ಬಿ೭೭೭ ವಿಮಾನಗಳೆರಡನ್ನೂ ಭಾರತೀಯ ವಾಯುಪಡೆ ಪೈಲಟ್‌ಗಳು ಚಲಾಯಿಸುತ್ತರೆ, ಏರ್ ಇಂಡಿಯಾ ಪೈಲಟ್‌ಗಳು ಅಲ್ಲ. ಆದಾಗ್ಯೂ, ಅಗಲವಾದ ಈ ವಿಮಾನಗಳನ್ನು ಭಾರತೀಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಆಧೀನ ಸಂಸ್ಥೆಯಾಗಿರುವ ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (ಎಐಇಎಸ್ ಎಲ್) ನಿರ್ವಹಿಸುತ್ತದೆ ಎಂದು ಅಧಿಕಾರಿಗಳು ಹೇಳಿದರು. ಪ್ರಸ್ತುತ, ಪ್ರಧಾನಿ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರು ಏರ್ ಇಂಡಿಯಾದ ಬಿ೭೪೭ ವಿಮಾನಗಳಲ್ಲಿ ಹಾರಾಟ ನಡೆಸುತ್ತಾರೆ. ಈ ವಿಮಾನಗಳು ‘ಏರ್ ಇಂಡಿಯಾ ಒನ್’ ಎಂಬ ಕರೆ ಚಿಹ್ನೆಯನ್ನು ಹೊಂದಿವೆ. . (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 2020 ಜೂನ್ 8ರ ಭಾನುವಾರ ಮಧ್ಯಾಹ್ನದಿಂದ ಜ್ವರ, ಗಂಟಲು ನೋವು ಮುತ್ತು ಕೆಮ್ಮಿನಿಂದ ಬಳಲುತ್ತಿದ್ದು, ಮನೆಯಲ್ಲೇ ಏಕಾಂತವಾಸಕ್ಕೆ ಒಳಗಾದರು. ಅವರು 2020 ಜೂನ್ 09ರ ಮಂಗಳವಾರ ಕೋವಿಡ್-೧೯ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿದವು. ಈ ಮಧ್ಯೆ ದೇಶಾದ್ಯಂತ ಕೊರೋನಾಸೋಂಕಿನ ಪ್ರಕರಣಗಳು 2,58,090ಕ್ಕೆ ಏರಿದ್ದು, ಸಾವಿನ ಸಂಖ್ಯೆ 7,210ಕ್ಕೆ ತಲುಪಿದವು. ‘ಮುಖ್ಯಮಂತ್ರಿಯವರ ಎಲ್ಲ ಸಭೆಗಳನ್ನೂ ರದ್ದು ಪಡಿಸಲಾಗಿದೆ. ಎಂದು ದೆಹಲಿ ಸರ್ಕಾರದ ಸುದ್ದಿ ಮೂಲಗಳು ತಿಳಿಸಿದವು. ಭಾನುವಾರ ಮಧ್ಯಾಹ್ನದಿಂದ ಮುಖ್ಯಮಂತ್ರಿಯವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ವೈದ್ಯರ ಸಲಹೆಯ ಮೇರೆಗೆ ಅವರು ಮಂಗಳವಾರ ಕೋವಿಡ್-೧೯ ಪರೀಕ್ಷೆಗೆ ಹೋಗಲು ಒಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. "ಮುಖ್ಯಮಂತ್ರಿಯವರು ದೂರವಾಣಿಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದರು ಮತ್ತು ರೋಗಲಕ್ಷಣಗಳು ಕಡಿಮೆಯಾಗದಿದ್ದರೆ ನಾಳೆ ಸ್ವತಃ ಪರೀಕ್ಷಿಸಲು ಯೋಜಿಸಿದ್ದಾರೆ" ಎಂದು ಆಮ್ ಆದ್ಮಿ ಪಕ್ಷದ ವಕ್ತಾರರು ಹೇಳಿದರು. ಭಾನುವಾರ ಮಧ್ಯಾಹ್ನ ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ಕೇಜ್ರಿವಾಲ್ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು, ದೆಹಲಿಯಲ್ಲಿನ ದೆಹಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ಆಸ್ಪತ್ರೆಗಳು ಕೊರೋನವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ದೆಹಲಿಯ ನಿವಾಸಿಗಳಿಗೆ ಮಾತ್ರ ಚಿಕಿತ್ಸೆ ಒದಗಿಸುತ್ತವೆ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಘೋಷಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ’ಅನ್ಲಾಕ್’ ಹಂತಕ್ಕೆ ಅಡಿಯಿಟ್ಟ ಭಾರತದಾದ್ಯಂತ 2020 ಜೂನ್ 08ರ ಸೋಮವಾರ ಮಾಲ್‌ಗಳು, ರೆಸ್ಟೋರೆಂಟ್‌ಗಳು, ದೇವಸ್ಥಾನಗಳು ಬಾಗಿಲು ತೆರೆದವು, ಆದರೆ ಕೊರೋನಾವೈರಸ್ ಪ್ರಕರಣಗಳ ದಿಢೀರ್ ಏರಿಕೆ ಕಂಡದ್ದನ್ನು ಅನುಸರಿಸಿ ಪಶ್ಚಿಮ ಬಂಗಾಳ ಮತ್ತು ಮಿಜೋರಂ ಸರ್ಕಾರಗಳು ರಾಜ್ಯಗಳಲ್ಲಿ ಇನ್ನೂ ಎರಡು ವಾರ (ಜೂನ್ ೩೦ರವರೆಗೆ) ಸಂಪೂರ್ಣ ದಿಗ್ಬಂಧನ (ಲಾಕ್‌ಡೌನ್) ವಿಸ್ತರಿಸಲು ನಿರ್ಧರಿಸಿದವು. ಉಭಯ ರಾಜ್ಯಗಳಲ್ಲೂ ದಿಗ್ಬಂಧನ ನಿರ್ಬಂಧಗಳು ಮಂಗಳವಾರ ಜಾರಿಗೆ ಬರಲಿವೆ. ‘ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯು ಹಾಲಿ ಪರಿಸ್ಥಿತಿಯನ್ನು ಅನುಸರಿಸಿ ರಾಜ್ಯದಲ್ಲಿ ೨೦೨೦ ಜೂನ್ ೯ರಂದು ಬೆಳಗ್ಗಿನ ೦೦.೦೦ ಗಂಟೆಯಿಂದ ಅನ್ವಯವಾಗುವಂತೆ ೨ ವಾರಗಳ ಕಾಲ ಸಂಪೂರ್ಣ ದಿಗ್ಬಂಧನ ಜಾರಿಗೊಳಿಸಲು ನಿರ್ಧರಿಸಿದೆ. ದಿಗ್ಬಂಧನ ಮಾರ್ಗಸೂಚಿಗಳನ್ನು ಇಷ್ಟರಲ್ಲೇ ಬಿಡುಗಡೆ ಮಾಡಲಾಗುವುದು’ ಎಂದು ಮಿಜೋರಂನ ಮಾಹಿತಿ ಮತ್ತು ಸಾರ್ವಜನಿಕ ಬಾಂಧವ್ಯಗಳ ನಿರ್ದೇಶನಾಲಯ ಟ್ವೀಟ್ ಮಾಡಿತು. ಇದಕ್ಕೂ ಹೆಚ್ಚಾಗಿ, ಪ್ರಸ್ತುತ ೧೪ ದಿನಗಳ ಅವಧಿಗೆ ವಿಧಿಸಲಾಗಿರುವ ಪ್ರತ್ಯೇಕವಾಸದ (ಕ್ವಾರಂಟೈನ್) ಅವಧಿಯನ್ನು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ೨೧ ದಿನಗಳ ಅವಧಿಗೆ ವಿಸ್ತರಿಸಲೂ ಸರ್ಕಾರ ನಿರ್ಧರಿಸಿತು. . (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೆಹಲಿಯ ನಿವಾಸಿಗಳಲ್ಲ ಎಂಬ ಕಾರಣಕ್ಕಾಗಿ ಯಾವುದೇ ರೋಗಿಗೆ ಚಿಕಿತ್ಸೆ ನಿರಾಕರಿಸಬಾರದು ಎಂದು ಲೆಫ್ಟಿನೆಂಟ್-ಗವರ್ನರ್ ಅನಿಲ್ ಬೈಜಾಲ್ 2020 ಜೂನ್ 8ರ ಸೋಮವಾರ ನಿರ್ದೇಶನ ನೀಡಿದರು. ದೆಹಲಿ ನಿವಾಸಿಗಳಿಗೆ ಮಾತ್ರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸುವ ಎಎಪಿ ಸರ್ಕಾರದ ನಿರ್ಧಾರವನ್ನು ಅವರು ರದ್ದುಪಡಿಸಿದರು. ಆರೋಗ್ಯದ ಹಕ್ಕು ಜೀವನ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗನ್ನು ನೀಡಿದೆ ಎಂದು ಬೈಜಾಲ್ ರಾಜ್ಯ ಸರ್ಕಾರದ ಗಮನ ಸೆಳೆದರು. "ದೆಹಲಿಯ ನಿವಾಸಿಯಲ್ಲದ ಕಾರಣ ಯಾವುದೇ ರೋಗಿಗೆ ಚಿಕಿತ್ಸೆಯನ್ನು ನಿರಾಕರಿಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವಂತೆ ದೆಹಲಿಯ ಎನ್‌ಸಿಟಿಗೆ ಸಂಬಂಧಿಸಿದ ನೇರ ಇಲಾಖೆಗಳು ಮತ್ತು ಅಧಿಕಾರಿಗಳಿಗೆ ಬೈಜಾಲ್ ಸೂಚಿಸಿದ್ದಾರೆ’ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಹೇಳಿಕೆ ತಿಳಿಸಿತು. ದೆಹಲಿಯ ಆಸ್ಪತ್ರೆಗಳಲ್ಲಿನ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೂರುಗಳು ಹೆಚ್ಚಾಗುತ್ತಿದ್ದಂತೆ, ನಗರದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ದೆಹಲಿ ನಿವಾಸಿಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತವೆ ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳು ಎಲ್ಲರಿಗೂ ಮುಕ್ತವಾಗಿರುತ್ತವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. . (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಜೈಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್-ಮನ್ರೇಗಾ) ಅಡಿಯಲ್ಲಿ ೫೦ ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ತೊಡಗಿಸುವ ಮೂಲಕ ರಾಜಸ್ಥಾನವು ದೇಶದಲ್ಲೇ ಅಗ್ರ ಸ್ಥಾನದಲ್ಲಿದೆ ಎಂದು ಉಪಮುಖ್ಯಮಂತ್ರಿ ಸಚಿನ್ ಪೈಲಟ್ 2020 ಜೂನ್ 08ರ ಸೋಮವಾರ ಹೇಳಿದರು. ಕಲ್ಯಾಣ ಯೋಜನೆಯಡಿ ವಿವಿಧ ಕಾಮಗಾರಿಗಳಲ್ಲಿ ತೊಡಗಿಸಲಾಗಿರುವ ೫೦ ಲಕ್ಷ ಜನರಲ್ಲಿ ಸುಮಾರು ೧೩ ಲಕ್ಷ ಮಂದಿ ವಲಸೆ ಕಾರ್ಮಿಕರು’ ಎಂದು ಪೈಲಟ್ ಹೇಳಿದರು. ಕೋವಿಡ್ -೧೯ ಸಾಂಕ್ರಾಮಿಕ ರೋಗವು ಲಕ್ಷಾಂತರ ಜನರ ಜೀವನೋಪಾಯವನ್ನು ಕಸಿದುಕೊಂಡಿದೆ. ಇಂತಹ ಹೊತ್ತಿನಲ್ಲಿ ರಾಜಸ್ಥಾನದ ಗ್ರಾಮೀಣ ಪ್ರದೇಶದ ಜನರಿಗೆ ಮನ್ರೇಗಾ ನಿರ್ಣಾಯಕ ಆರ್ಥಿಕ ನೆರವು ನೀಡಿದೆ ಎಂದು ಸಚಿವರು ನುಡಿದರು. ಏಪ್ರಿಲ್ ತಿಂಗಳಲ್ಲಿ ಮನ್ರೇಗಾ ಅಡಿಯಲ್ಲಿ ರಾಜ್ಯದಲ್ಲಿ ಕೇವಲ ೬೨,೦೦೦ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದರು. ಆದರೆ ಇಲಾಖೆಯ ಪ್ರಯತ್ನದಿಂದಾಗಿ, ಜೂನ್ ೮ ರ ವೇಳೆಗೆ ಯೋಜನೆಯಡಿ ತೊಡಗಿಸಿಕೊಂಡಿರುವ ಕಾರ್ಮಿಕರ ಸಂಖ್ಯೆ ೫೦.೨೦ ಲಕ್ಷವನ್ನೂ ಮೀರಿದೆ. ೪.೧೧ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿರುವ ಭಿಲ್ವಾರಾ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಲಾಗಿದೆ ಎಂದು ಪಂಚಾಯತಿ ರಾಜ್ ಮತ್ತು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಪೈಲಟ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment