ನಾನು ಮೆಚ್ಚಿದ ವಾಟ್ಸಪ್

Tuesday, June 16, 2020

ಇಂದಿನ ಇತಿಹಾಸ History Today ಜೂನ್ 16

ಇಂದಿನ ಇತಿಹಾಸ  History Today ಜೂನ್  16  

2020: ನವದೆಹಲಿ: ಪೂರ್ವ ಲಡಾಖ್ನಲ್ಲಿ  2020 ಜೂನ್ 15ರ ಸೋಮವಾರ ರಾತ್ರಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಜೊತೆಗಿನಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನೆಯ ಒಬ್ಬ ಒಬ್ಬ ಅಧಿಕಾರಿ ಸೇರಿದಂತೆ  20 ಮಂದಿ ಯೋಧರು ಹುತಾತ್ಮರಾಗಿದ್ದು, ಉಭಯ ಕಡೆಗಳಲ್ಲ್ಲೂ ಅನೇಕ ಸಾವುನೋವುಗಳು ಸಂಭವಿಸಿವೆ ಎಂದು ಸೇನಾ ಮೂಲಗಳು  2020 ಜೂನ್ 16ರ ಮಂಗಳವಾರ ಹೇಳಿದವು. ೧೯೭೫ರಲ್ಲಿ ಅರುಣಾಚಲ ಪ್ರದೇಶದಲ್ಲಿ ಚೀನೀಪಡೆಗಳು ಗಸ್ತು ತಿರುಗುತ್ತಿದ್ದ ಭಾರತೀಯ ಪಡೆಗಳ ಜೊತೆ ನಡೆಸಿದ್ದ ಘರ್ಷಣೆಯ ಬಳಿಕ ಭಾರತೀಯ ಪಡೆಗಳು ಪಿಎಲ್ ಜೊತೆಗಿನ ಘರ್ಷಣೆಯಲ್ಲಿ ಸಾವುನೋವು ಸಂಭವಿಸಿದ  ಮೊದಲ ಪ್ರಕರಣ ಇದು ಎಂದು ಮೂಲಗಳು ತಿಳಿಸಿದವು. ಭಾರತೀಯ ಕಡೆಯಲ್ಲಿ ಹುತಾತ್ಮರಾಗಿರುವ ಅಧಿಕಾರಿಗಳಲ್ಲಿ ಒಬ್ಬರು ಕಮಾಂಡಿಂಗ್ ಅಧಿಕಾರಿಯಾಗಿದ್ದಾರೆ. ಜೆಸಿಒ ಒಬ್ಬರಿಗೂ ಗಾಯಗಳಾಗಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆಗಾಲ್ವನ್ ಕಣಿವೆಯಲ್ಲಿ ಪ್ರಕ್ಷುಬ್ಧತೆಯನ್ನು ಶಮನಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿ ಇರುವ ವೇಳೆಯಲ್ಲೇ ಘರ್ಷಣೆ ಸಂಭವಿಸಿದೆ ಎಂದು ಸೇನಾ ಮೂಲಗಳು ಹೇಳಿವೆ. ಉಭಯ ಕಡೆಗಳ ಹಿರಿಯ ಸೇನಾ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಲು ಪ್ರಸ್ತುತ ಮಾತುಕತೆ ನಡೆಸುತ್ತಿದ್ದಾರೆ ಎಂದು ಸೇನೆ ತಿಳಿಸಿದೆ. ಉಭಯ ಸೇನೆಗಳ ಸೇನಾ ಕಮಾಂಡರುಗಳಾದ ಮೇಜರ್ ಜನರಲ್ ಅಭಿಜಿತ್ ಬಾಪಟ್ (ಕರು ಮೂಲದ ಕೇಂದ್ರ ಕಚೇರಿ ಇನ್ ಫ್ಯಾಂಟ್ರಿ ವಿಭಾಗ) ಮತ್ತು ಚೀನಾದ ತತ್ಸಮಾನ ಅಧಿಕಾರಿಗಳು ಘರ್ಷಣೆ ಸಂಭವಿಸಿದ ಸ್ಥಳದಲ್ಲೇ ಶಮನ ಯತ್ನದ ಮಾತುಕತೆಯಲ್ಲಿ ತೊಡಗಿದ್ದಾರೆ ಮತ್ತು ಪ್ರಕ್ಷುಬ್ಧತೆ ಶಮನಕ್ಕೆ ಯತ್ನಿಸುತ್ತಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿವೆ. ಎಲ್ಲ ಸಾವುಗಳೂ ಕಲ್ಲೆಸೆತ ಮತ್ತು ಸೈನಿಕರು ಬಳಸಿದ ಕಬ್ಬಿಣದ ಸರಳುಗಳಿಂದಾಗಿ ಸಂಭವಿಸಿವೆ ಎಂದು ಹೆಸರು ಹೇಳಲು ಇಚ್ಛಿಸದ ಮೂಲವೊಂದು ತಿಳಿಸಿತು. ಸೇನೆಯು ಘಟನೆ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಉಭಯ ಸೇನೆಗಳು ಕಲ್ಲೆಸೆತ, ಕ್ಷಿಪಣಿ ಎಸೆತಗಳನ್ನು ನಡೆಸಿದ್ದು ಇದೇ ಮೊದಲೇನಲ್ಲ ಎಂದು ಮೂಲಗಳು ಹೇಳಿವೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಪೂರ್ವ ಲಡಾಖ್ನಲ್ಲಿ ಭಾರತ ಮತ್ತು ಚೀನೀ ಸೇನೆಯ ಮಧ್ಯೆ ಸಂಭವಿಸಿದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಯೋಧರ ಸಾವನ್ನು ಆಘಾತಕಾರಿ, ನಂಬಲಾಗದಂತಹುದು ಮತ್ತು ಸ್ವೀPರಿಸಲು ಸಾಧ್ಯವಿಲ್ಲದಂತಹುದು ಎಂದು ಕಾಂಗ್ರೆಸ್  2020 ಜೂನ್ 16ರ ಮಂಗಳವಾರ ಬಣ್ಣಿಸಿತು.  ‘ಆಘಾತಕಾರಿ, ನಂಬಲಸಾಧ್ಯ ಮತ್ತು ಸ್ವೀಕರಿಸಲಾಗದಂತಹುದು. ರಕ್ಷಣಾ ಸಚಿವರು ದೃಢಪಡಿಸುವರೇ?’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಟ್ವೀಟ್ ಮಾಡಿದರು. ಬೆಳವಣಿಗೆಯುದುರಂತ ಸುದಿ, ಸರ್ಕಾರವುದೃಢವಾಗಿವ್ಯವಹರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿ ತರೂರ್ ಹೇಳಿದರು. ‘ಲಡಾಖ್ನಿಂದ ಬಂದಿರುವ ದುರಂತ ಸುದ್ದಿ ಆಘಾತಕಾರಿ ಮತ್ತು ನಮ್ಮ ಸರ್ಕಾರವು ವಿಷಯವನ್ನು ದೃಢವಾಗಿ ನಿಭಾಯಿಸುವ ಅಗತ್ಯವನ್ನು ಸೂಚಿಸುತ್ತದೆಎಂದು ತರೂರ್ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಇಸ್ಲಾಮಾಬಾದಿನಲ್ಲಿ ಸೋಮವಾರ ಹೊರ ಹೊರಟಿದ್ದ ಭಾರತೀಯ ಹೈಕಮೀಷನ್ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಅಪಹರಿಸಿ ಹಿಂಸಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿನ ತನ್ನ ರಾಜತಾಂತ್ರಿಕ ಸಿಬ್ಬಂದಿ ಹಾಜರಾತಿಯನ್ನು ಗಣನೀಯವಾಗಿ ತಗ್ಗಿಸುವ ಬಗ್ಗೆ ಭಾರತ ಚಿಂತಿಸಬಹುದು ಎಂದು ನಂಬಲರ್ಹ ಮೂಲಗಳು 2020 ಜೂನ್ 16ರ ಮಂಗಳವಾರ ತಿಳಿಸಿದವು. ಇಸ್ಲಾಮಾಬಾದಿನ ಪೆಟ್ರೋಲ್ ಸ್ಟೇಷನ್ ಒಂದರಿಂದ ಭಾರತೀಯ ಹೈಕಮೀಷನ್ ಸಿಬ್ಬಂದಿಯನ್ನು ೧೫ ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿದ್ದರು. ಭಾರತೀಯ ಹೈಕಮೀಷನ್ ಕಚೇರಿಗೆ ಅತ್ಯಂತ ಹತ್ತಿರದಲ್ಲೇ ಇದ್ದ ಸ್ಥಳದಿಂದ ಅಪಹರಿಸಿದ ಬಳಿಕ ಸಿಬ್ಬಂದಿಗೆ ಹಲವಾರು ತಾಸುಗಳ ಕಾಲ ಚಿತ್ರ ಹಿಂಸೆ ನೀಡಿದ್ದಲ್ಲದೆ ಬಿಡುಗಡೆ ಮಾಡುವುದಕ್ಕೆ ಮುನ್ನ ಅವರ ವಿರುದ್ಧ ರಸ್ತೆ ಅಪಘಾತ ಎಸಗಿದ ಆರೋಪ ಹೊರಿಸಲಾಗಿತ್ತು. ಅವರ ಕತ್ತು, ಮುಖ, ಪೃಷ್ಠ ಮತ್ತ ಬೆನ್ನಿನಲ್ಲಿ ತೀವ್ರವಾದ ಗಾಯಗಳಿದ್ದವು.  ತನ್ನ ಸಿಬ್ಬಂದಿಯ ಅಪಹರಣ ಮತ್ತು ಚಿತ್ರಹಿಂಸೆಗೆ ಭಾರತ ಇನ್ನೂ ಯಾವುದೇ ಔಪಚಾರಿಕೆ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ದೈನಂದಿನ ಪತ್ರಿಕಾಗೋಷ್ಠಿಯಲಿ ಭಾರತೀಯ ಹೈಕಮೀಷನ್ ಅಧಿಕಾರಿಗಳುಅಪಹೃತ ಸಿಬ್ಬಂದಿ ತಮಗೆ ನೀಡಲಾದ ಚಿತ್ರ ಹಿಂಸೆಯ ಬಗ್ಗೆ ವಿಸ್ತೃತವಾಗಿ ತಿಳಿಸಿದ್ದು, ಬಲವಂತವಾಗಿ ತಮ್ಮಿಂದ ತಪ್ಪೊಪ್ಪಿಗೆ ಪಡೆದು ಅದನ್ನು ವಿಡಿಯೋದಲ್ಲಿ ದಾಖಲಿಸಲಾಗಿದೆ ಮತ್ತು ಬೆದರಿಕೆಗಳನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆಎಂದು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ರೋಗದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾದ ರೋಗಿಗಳ ಜೀವ ಉಳಿಸುವಲ್ಲಿ  ಡೆಕ್ಸಮೆಥಾಸೊನ್ಅತ್ಯಂತ ಅಗ್ಗದ ಮತ್ತು ವ್ಯಾಪಕವಾಗಿ ಲಭ್ಯವಿರುವ ಪರಿಣಾಮಕಾರಿಯಾದ ಚೊಚ್ಚಲ ಔಷಧ ಎಂಬುದು ಸಾಬೀತಾಗಿದೆ ಎಂದು ಬಿಬಿಸಿಯು 2020 ಜೂನ್ 16ರ ಮಂಗಳವಾರ ವರದಿ ಮಾಡಿತು. ಕಡಿಮೆ-ಪ್ರಮಾಣದ ಸ್ಟೀರಾಯ್ಡ್ ಚಿಕಿತ್ಸೆಯಲ್ಲಿ ಬಳಸುವ ಡೆಕ್ಸಮೆಥಾಸೊನ್ ಔಷಧವು ಮಾರಕ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪ್ರಗತಿಯಾಗಿದೆ ಎಂದು ಇಂಗ್ಲೆಂಡಿನ ತಜ್ಞರು ಹೇಳಿರುವುದಾಗಿ ಟಿವಿ ವರದಿ ತಿಳಿಸಿತು. ಕೊರೋನಾವೈರಸ್ಸಿಗೆ ಪ್ರಸ್ತುತ ಬಳಸಲಾಗುತ್ತಿರುವ ಔಷಧಗಳು ಪರಿಣಾಮಕಾರಿಯಾಗಿ ಕಾರ್ ನಿರ್ವಹಿಸುತ್ತದೆಯೇ ಎಂಬುದಾಗಿ ಪರಿಶೀಲಿಸಲು ನಡೆದ ವಿಶ್ವದ ಅತಿದೊಡ್ಡ ಪ್ರಯೋಗದಲ್ಲಿ ಡೆಕ್ಸಮೆಥಾಸೊನ್ ಉತ್ತೀರ್ಣಗೊಂಡಿದೆ. ಇದು ವೆಂಟಿಲೇಟರ್ಗಳಲ್ಲಿ ಇರುವ ರೋಗಿಗಳ ಸಾವಿನ ಅಪಾಯವನ್ನು ಮೂರನೇ ಒಂದು ಭಾಗದಷ್ಟು ಕಡಿತಗೊಳಿಸುತ್ತದೆ. ಆಮ್ಲಜನಕದಲ್ಲಿರುವವರ ಸಾವನ್ನು ಐದನೇ ಒಂದು ಭಾಗದಷ್ಟು ಕಡಿತಗೊಳಿಸುತ್ತದೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಇಂಗ್ಲೆಂಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಔಷಧವನ್ನು  ಬಳಸಿದ್ದರೆ, ,೦೦೦ ಜೀವಗಳನ್ನು ಉಳಿಸಬಹುದಿತ್ತು ಎಂದು ಸಂಶೋಧಕರು ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಮಹಾವೀರ ಚಕ್ರ ಪ್ರಶಸ್ತಿ ವಿಜೇತ ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಜ್ ಮೋಹನ್ ವೋಹ್ರಾ (೮೮) ಅವರು ಕೊರೋನಾವೈರಸ್ಸಿಗೆ ಬಲಿಯಾಗಿದ್ದಾರೆ. ಶಿಮ್ಲಾ ಮೂಲದ ಅವರು ೧೯೩೨ರಲ್ಲಿ ಜನಿಸಿದ್ದರು. ‘ಹೃದಯ ಸಂಬಂಧಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೇಳೆ ತಪಾಸಣೆ ನಡೆಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಜೂನ್ ೧೪ ರಂದು ಅವರು ಸಾವನ್ನಪ್ಪಿದ್ದಾರೆ. ಅಂದೇ ಮೃತರ ಅಂತ್ಯಕ್ರಿಯೆ ನಡೆಸಲಾಯಿತುಎಂದು ಅಧಿಕಾರಿಗಳು ತಿಳಿಸಿದ್ದಾರೆ. ೧೯೭೧ರಲ್ಲಿ ಭಾರತ- ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಅಪ್ರತಿಮ ಶೌರ್ಯ ಮೆರೆದ ಹಿನ್ನೆಲೆಯಲ್ಲಿ ವೋಹ್ರಾ ಅವರಿಗೆ ೧೯೭೨ರಲ್ಲಿ ಮಹಾವೀರ ಚಕ್ರ ಪ್ರಶಸ್ತಿ ನೀಡಲಾಗಿತ್ತು. ವೋಹ್ರಾ ಅವರು ಸೇನೆಯ ಪೂರ್ವ ಕಮಾಂಡ್ ಜನರಲ್ ಕಮಾಂಡಿಂಗ್ ಆಫೀಸರ್ ಆಗಿದ್ದರು. ಅಲ್ಲದೆ, ಶಸ್ತ್ರಸಜ್ಜಿತ ಸೇನಾ ವಿಭಾಗದ ಮುಖ್ಯ ಕಮಾಂಡಿಂಗ್ ಅಧಿಕಾರಿಯೂ ಆಗಿದ್ದರು. ಭಾರತವು ಸತತ ಐದನೇ ದಿನ ೧೦,೦೦೦ ಹೊಸ ಕೊರೋನಾವೈರಸ್ ಪ್ರಕರಣಗಳನ್ನು ಮಂಗಳವಾರ ದಾಖಲಿಸಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ,೪೩,೦೯೧ ಕ್ಕೆ ಏರಿದೆ. ೩೮೦ ಹೊಸ ಸಾವಿನೊಂದಿದೆ ಸಾವಿನ ಸಂಖ್ಯೆ ,೯೦೦ ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಕಳೆದ ೨೪ ಗಂಟೆಗಳಲ್ಲಿ ದೇಶವು ೧೦,೬೬೭ ಕರೋನವೈರಸ್ ಸೋಂಕುಗಳನ್ನು ದಾಖಲಿಸಿದೆ.ಒಟ್ಟು ಸೋಂಕಿತರ ಪೈಕಿ ,೮೦,೦೧೨ ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ,೫೩,೧೭೮ ಆಗಿದೆ. ಎಂದು ಅಧಿಕೃತವಾಗಿ ನವೀಕರಿಸಿದ ಅಂಕಿ ಅಂಶ ಬೆಳಗ್ಗೆ ಗಂಟೆಗೆ ತಿಳಿಸಿದೆ. "ಹೀಗಾಗಿ, ಚೇತರಿಕೆಯ ಪ್ರಮಾಣ ಶೇಕಡಾ ೫೨.೪೬ಕ್ಕೆ ಏರಿದೆಎಂದು ಅಧಿಕಾರಿಯೊಬ್ಬರು ತಿಳಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಜೂನ್  16  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment