ನಾನು ಮೆಚ್ಚಿದ ವಾಟ್ಸಪ್

Wednesday, June 10, 2020

ಇಂದಿನ ಇತಿಹಾಸ History Today ಜೂನ್ 10

ಇಂದಿನ ಇತಿಹಾಸ  History Today ಜೂನ್  10  

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳ ಏರಿಕೆ ಪ್ರಮಾಣ ಪ್ರತಿದಿನ ಅಂದಾಜು ೧೦,೦೦೦ಕ್ಕೆ ಏರಿದ್ದರ ನಡುವೆಯೂ ಇದೇ ಮೊದಲ ಬಾರಿಗೆ ಗುಣಮುಖರಾದ ಕೋವಿಡ್-೧೯ ರೋಗಿಗಳ ಸಂಖ್ಯೆಯು ಸಕ್ರಿಯ ಪ್ರಕರಣಗಳನ್ನು ಮೀರಿಸಿದೆ. ಆರೋಗ್ಯ ಸಚಿವಾಲಯವು  ೨೦೨೦ ಜೂನ್ ೧೦ರ ಬುಧವಾರ ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳಿಂದ ವಿಚಾರವು ಬೆಳಕಿಗೆ ಬಂದಿತು. ರೋಗ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕೊರೋನಾವೈರಸ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ,೩೫,೨೦೫ಕ್ಕೆ ಏರಿದೆ. ಇದೇ ವೇಳೆಗೆ ಬುಧವಾರದ ಅಂಕಿಸಂಖ್ಯೆಯಂತೆ ಭಾರತದಲ್ಲಿರುವ ಸಕ್ರಿಯ ಕೋವಿಡ್-೧೯ ಪ್ರಕರಣಗಳ ಸಂಖ್ಯೆ  ,೩೩,೬೩೨. ಒಟ್ಟಾರೆ ಚೇತರಿಕೆ ಪ್ರಮಾಣ ಶೇಕಡಾ ೪೯. ಭಾರತದ ಒಟ್ಟು ಕೊರೋನಾವೈರಸ್ ಸೋಂಕಿತರ ಸಂಖ್ಯೆ ಬುಧವಾರ .೭೬ ಲಕ್ಷವನ್ನು ಮೀರಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ ,೫೦೦ನ್ನು  ದಾಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ಈವರೆಗೆ ಕೊರೋನಾವೈರಸ್ ಪತ್ತೆ ಸಲುವಾಗಿ ೫೦ ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಳೆದ ೨೪ ಗಂಟೆಗಳಲ್ಲಿ .೪೫ ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಟ್ಟು ೯೦,೦೦೦ ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಈಗಲೂ ದೇಶದ ಅತಿಬಾಧಿತ ರಾಜ್ಯವಾಗಿದೆ. ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ,೨೫೯ ಹೊಸ ಪ್ರಕರಣಗಳು ದಾಖಲಾದವು. ಆಶಾದಾಯಕ ವಿಚಾರವೇನೆಂದರೆ ಸುಮಾರು ಶೇಕಡಾ ೪೭ರಷ್ಟು ಕೋವಿಡ್ ರೋಗಿಗಳು ರಾಜ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾಸೋಂಕಿನಿಂದ ಗುಣಮುಖರಾದವರು ಪಂಜಾಬಿನಲ್ಲಿದ್ದಾರೆ. ರಾಜ್ಯದಲ್ಲಿ ಶೇಕಡಾ ೮೦ರಷ್ಟು ಕೊರೋನಾವೈರಸ್ ರೋಗಿಗಳು ಗುಣಮುಖರಾಗಿದ್ದಾರೆ. ಪಂಜಾಬಿನಲ್ಲಿ ಪ್ರಸ್ತುತ ೪೯೭ ಸಕ್ರಿಯ ಪ್ರಕರಣಗಳಿದ್ದರೆ, ,೧೬೭ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಆಸ್ಪತ್ರೆಯ ಹಾಸಿಗೆಗಳನ್ನು ಹುಡುಕಲು ಓಡಾಡುವ ರೋಗಿಗಳಿಗೆ ಸಹಾಯ ಮಾಡುವ ಸಲುವಾಗಿ, ದೆಹಲಿಯ ಎಲ್ಲ ಆಸ್ಪತ್ರೆಗಳಲ್ಲಿ ಇರುವ ರೋಗಿಗಳು, ಹಾಸಿಗೆಗಳ ಲಭ್ಯತೆಯನ್ನು ಸೂಚಿಸುವ ಎಲೆಕ್ಟ್ರಾನಿಕ್ ಫಲPವನ್ನು ಆಸ್ಪತ್ರೆಗಳ ಪ್ರವೇಶದ್ವಾರದಲ್ಲಿ ಅಳವಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ೨೦೨೦ ಜೂನ್ ೧೦ರ ಬುಧವಾರ ಆದೇಶ ನೀಡಿದರು. ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಸೂಕ್ತ ಆದೇಶ ನೀಡುವಂತೆ ಬೈಜಾಲ್ ಅವರು ಈಗಾಗಲೇ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಅವರಿಗೆ ಸೂಚಿಸಿದರು. ಎಲೆಕ್ಟ್ರಾನಿಕ್ ಫಲಕಗಳ ಸಂಪರ್ಕವನ್ನು ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಲಾಗುವ ಕೇಂದ್ರ ನಿಯಂತ್ರಣ ಘಟಕಕ್ಕೆ ಒದಗಿಸುವಂತೆ ಕೂಡಾ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದರು. ಸರ್ಕಾರವು ಹಿಂದೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಬಗ್ಗೆ ತಿಳಿಯಲು ಆಸ್ಪತ್ರೆಗಳಲ್ಲಿ ಎಲೆಕ್ಟ್ರಾನಿಕ್ ಫಲಕ ಅಳವಡಿಸುವುದರ ಜೊತೆಗೆ ಸರ್ಕಾರ ಸ್ಥಾಪಿಸಿದ ವೆಬ್ ಸೈಟ್ ಮತ್ತು ಆಪ್ಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸೂಚಿಸಿತ್ತು. ಆದರೆ ವೆಬ್ ಸೈಟ್ ಮತ್ತು ಆಪ್ಗಳಲ್ಲಿ ಹಾಸಿಗೆ ಲಭ್ಯತೆಯ ಮಾಹಿತಿ ಇದ್ದರೂ, ಆಸ್ಪತ್ರೆಗೆ ಹೋದಾಗಿ ಹಾಸಿಗೆ ಇಲ್ಲ ಎಂಬುದಾಗಿ ವಾಪಸ್ ಕಳುಹಿಸಲಾಗುತ್ತಿದೆ ಎಂಬ ದೂರುಗಳು ಬಂದಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೀಜಿಂಗ್:  ರಾಜತಾಂತ್ರಿಕರು ಮತ್ತು ಸೇನಾ ಅಧಿಕಾರಿಗಳ ನಡುವಣ ಮಾತುಕತೆಯ ಬಳಿಕ ಉಭಯ ದೇಶಗಳೂ ಪರಿಸ್ಥಿತಿ ಶಮನಕ್ಕೆ ಯತ್ನಿಸುತ್ತಿವೆ ಎಂದು ಚೀನಾ ೨೦೨೦ ಜೂನ್ ೧೦ರ ಬುಧವಾರ ಹೇಳಿತು. ಆದರೆ ಲಡಾಖ್ ವಾಸ್ತವಿಕ ನಿಯಂತ್ರಣ ರೇಖೆಯಿಂದ ಹಿಂದಕ್ಕೆ ತೆರಳುತ್ತಿರುವ ಉಭಯ ದೇಶಗಳ ಪಡೆಗಳ ವಿವರ ನೀಡಲು ಅದು ನಿರಾಕರಿಸಿತು. ಬುಧವಾರ ಇನ್ನೊಂದು ಸುತ್ತಿನ ಮಾತುಕತೆ ನಡೆಯುವುದಕ್ಕೆ ಮುಂಚಿತವಾಗಿ ಗಡಿಬಿಕ್ಕಟ್ಟನ್ನು ಕೊನೆಗೊಳಿಸುವ ಉದ್ದೇಶದಿಂದ ಉಭಯ ದೇಶಗಳ ಸೇನೆಗಳು ಪೂರ್ವ ಲಡಾಖ್ನಿಂದ ಸೀಮಿತ ಪ್ರಮಾಣದಲ್ಲಿ ಹಿಂದಕ್ಕೆ ಹೊರಟಿವೆ ಎಂಬುದಾಗಿ ಭಾರತೀಯ ಮಾಧ್ಯಮಗಳಲ್ಲಿ ಬಂದ ವರದಿಗಳಿಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಯಿಂಗ್ ಅವರು ಪ್ರತಿಕ್ರಿಯಿಸಿದರು. ಉಭಯ ದೇಶಗಳ ಸೇನೆಗಳು ಹಿಂದಿನ ಸ್ಥಳಗಳಿಂದ ಹಿಂದಕ್ಕೆ ಸಾಗುತ್ತಿವೆ ಎಂಬ ವರದಿಗಳ ಬಗ್ಗೆ ಪ್ರಶ್ನಿಸಿದಾಗಗಡಿಯುದ್ದಕ್ಕೂ ಉದ್ವಿಗ್ನತೆ ಶಮನಕ್ಕೆ ಉಭಯ ಕಡೆಗಳೂ ಕ್ರಮಗಳನ್ನು ಕೈಗೊಳ್ಳುತ್ತಿವೆಎಂದಷ್ಟೇ ಹುವಾ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಮಸ್ಯೆ ಇತ್ಯರ್ಥಕ್ಕಾಗಿ ಶನಿವಾರ ನಡೆದ ಭಾರತ ಮತ್ತು ಚೀನಾ ನಡುವಣ ಸೇನಾ ಮಾತುಕತೆಗಳನ್ನು ನಿರ್ದಿಷ್ಟವಾಗಿ ಆಕೆ ಉಲ್ಲೇಖಿಸಲಿಲ್ಲ. ಇತೀಚೆಗೆ ಚೀನಾ ಮತ್ತು ಭಾರತದ ರಾಜತಾಂತ್ರಿಕ ಮತ್ತು ಸೇನಾ ಮಟ್ಟದಲ್ಲಿ ಗಡಿಯಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಪರಿಣಾಮಕಾರಿ ಸಂಪರ್ಕ ಸಾಧಿಸಲಾಗಿದೆ ಮತ್ತು ಧನಾತ್ಮಕ ಸಹಮತಕ್ಕೆ ಬರಲಾಗಿದೆಎಂದು ಆಕೆ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ಕೊರೋನಾವೈರಸ್ ಸಾಂಕ್ರಾಮಿಕದ ಪ್ರಾಥಮಿಕ ದಿನಗಳಲ್ಲಿ ಮುಂಬೈ ನಗರದಲ್ಲಿ ಕೋವಿಡ್ ಹಾಟ್ ಸ್ಪಾಟ್ ಆಗಿ ಪರಿವರ್ತನೆಗೊಂಡಿದ್ದ ಧಾರಾವಿ ಕೊಳಚೆಗೇರಿಯು ದಿನದಿಂದ ದಿನಕ್ಕೆ ಕಡಿಮೆ ಸೋಂಕಿನ ಪ್ರಕರಣಗಳನ್ನು ಕಾಣುತ್ತಿದೆ. ದೈನಂದಿನ ಸರಾಸರಿ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿವೆ. ಸೋಂಕು ನಿಯಂತ್ರಣಕ್ಕೆ ಧಾರಾವಿ ದಾರಿ ತೋರಿಸಿದೆ. ಏಷ್ಯಾದ ಅತಿದೊಡ್ಡ ಕೊಳಚೆಗೇರಿ ಆಗಿರುವ ಧಾರಾವಿಯಲ್ಲಿ ಜೂನ್ ಮೊದಲ ವಾರ ಕೊರೋನಾವೈರಸ್ ಸೋಂಕಿಗೆ ಒಬ್ಬನೇ ಒಬ್ಬ ವ್ಯಕ್ತಿ ಕೂಡಾ ಬಲಿಯಾಗಿಲ್ಲ. ಮೇ ತಿಂಗಳಲ್ಲಿ ಸರಾಸರಿ ೪೭ ಪ್ರಕರಣಗಳು ವರದಿಯಾಗಿದ್ದ ಧಾರಾವಿಯಲ್ಲಿ ಜೂನ್ ಹೊತ್ತಿಗೆ ಸೋಂಕಿನ ಪ್ರಕರಣಗಳ ಸಂಖ್ಯೆ ೨೭ಕ್ಕೆ ಇಳಿದಿತ್ತು. ಸೋಂಕು ದುಪ್ಪಟ್ಟಾಗುವ ಪ್ರಮಾಣ ೪೪ ದಿನಗಳಿಗೆ ಏರಿತ್ತು. ಪ್ರದೇಶದಲ್ಲಿ ಒಟ್ಟು ಕೊರೋನಾವೈರಸ್ ಪ್ರಕರಣಗಳಲ್ಲಿ ಶೇಕಡಾ ೫೦ರಷ್ಟು ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿದ್ದಾರೆ. ಜೂನ್ ೮ರಂದು ಪ್ರದೇಶದಲ್ಲಿ ೧೨ ಹೊಸ ಪ್ರಕರಣಗಳು ದಾಖಲಾದವು ಮತ್ತು ಜೂನ್ ೭ರಂದು ೧೩ ಹೊಸ ಪ್ರಕರಣಗಳು ದೃಢಪಟ್ಟವು. ಆದಾಗ್ಯೂ, ಜೂನ್ ೯ರಂದು ಇಲ್ಲಿ ೨೬ ಹೊಸ ಪ್ರಕರಣಗಳು ಮತ್ತು ಸಾವುಗಳು ದಾಖಲಾದವು. ಮಹಾರಾಷ್ಟ್ರ ಸರ್ಕಾರದವೈರಸ್ಸನ್ನು ಬೆನ್ನಟ್ಟುವ ನೀತಿಯುಕೊರೋನಾವೈರಸ್ ವಿರುದ್ಧದ ಸಮರದಲ್ಲಿ ವಿಜಯಸಾಧನೆಗೆ ಕಾರಣವಾಗಿದೆ ಎಂದು ಧಾರಾವಿಯನ್ನೂ ಒಳಗೊಳ್ಳುವ ಬಿಎಂಸಿ ಜಿ ಉತ್ತರ ವಾರ್ಡಿನ ಅಸಿಸ್ಟೆಂಟ್ ಮುನಿಸಿಪಲ್ ಕಮೀಷನರ್ ಕಿರಣ್ ದಿಘಾವ್ಕರ್ ೨೦೨೦ ಜೂನ್ ೧೦ರ ಬುಧವಾರ ಹೇಳಿದರು. ತೀವ್ರ ಸ್ವರೂಪದ ಸಂಪರ್ಕ ಪತ್ತೆ, ಪ್ರತ್ಯೇಕವಾಸ ಮತ್ತು ಪರೀಕ್ಷೆಗಳು ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಇಳಿಮುಖಗೊಳಿಸಲು ಮುಂಬೈಗೆ ನೆರವಾದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪಾಲಿಶ್ ಮಾಡಿದ ವಜ್ರಗಳು, ಬೆಳ್ಳಿ ಚಿನ್ನಾಭರಣ ಮತ್ತು ಮುತ್ತು ಸೇರಿದಂತೆ ಸುಮಾರು ,೩೫೦ ಕೋಟಿ ರೂಪಾಯಿ ಮೌಲ್ಯದ ೧೦೮ ವಸ್ತುಗಳನ್ನು ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ಸೇರಿದ ಹಾಂಕಾಂಗ್ ಗೋದಾಮಿನಿಂದ ಭಾರತಕ್ಕೆ ತರಲಾಗಿದೆ ಎಂದು ಜಾರಿ ನಿರ್ದೇಶನಾಲಯವು 2020 ಜೂನ್ 10ರ ಬುಧವಾರ ಪ್ರಕಟಿಸಿತು. ವಸ್ತುಗಳ ಮೌಲ್ಯ ಅಂದಾಜು ,೩೫೦ ಕೋಟಿ ರೂಪಾಯಿಗಳು ಎಂಬುದಾಗಿ ಘೋಷಿಸಲಾಗಿದೆ. ಪಾಲಿಶ್ ಮಾಡಿದ ವಜ್ರಗಳು, ಮುತ್ತುಗಳು, ಬೆಳ್ಳಿ ಚಿನ್ನಾಭರಣಗಳು ಇತ್ಯಾದಿ ಅಮೂಲ್ಯ ಸೊತ್ತುಗಳು ಇವುಗಳಲ್ಲಿ ಸೇರಿವೆ. ಇವುಗಳನ್ನು ಹಾಂಕಾಂಗಿನಲ್ಲಿ ಸಾಗಣೆ ಕಂಪೆನಿಯೊಂದರ ಗೋದಾಮಿನಲ್ಲಿ ಇಡಲಾಗಿತ್ತು ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು. ಸುಮಾರು ,೩೪೦ ಕಿ.ಗ್ರಾಂ ತೂಕದ ಸರಕನ್ನು ಬುಧವಾರ ಮುಂಬೈಗೆ ವಾಪಸ್ ತರಲಾಗಿದೆ ಎಂದು ಅಧಿಕಾರಿ ನುಡಿದರು. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಭಾರತೀಯ ವ್ಯಾಪಾರೋದ್ಯಮಿಗಳಾಗಿದ್ದು, ಭಾರತೀಯ ಬ್ಯಾಂಕುಗಳಿಗೆ ಸಹಸ್ರಾರು ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಬೇಕಾಗಿದ್ದಾರೆ. ನೀರವ್ ಮೋದಿ ೨೩,೭೮೦ ಕೋಟಿ ರೂಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ವಂಚನೆ ಪ್ರಕರಣದ ಮುಖ್ಯ ಆರೋಪಿಯಾಗಿದ್ದು ಕಳೆದ ವರ್ಷ ಮಾರ್ಚ್ನಿಂದೀಚೆಗೆ ಇಂಗ್ಲೆಂಡಿನಲ್ಲಿ ಸೆರೆವಾಸದಲ್ಲಿರುವ  ನೀರವ್ ಮೋದಿಯನ್ನು ಇಂಗ್ಲೆಂಡಿನಿಂದ ಹಸ್ತಾಂತರ ಮಾಡಿಕೊಳ್ಳಲು ಭಾರತವು ತೀವ್ರ ಪ್ರಯತ್ನ ನಡೆಸುತ್ತಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

 ಇಂದಿನ ಇತಿಹಾಸ  History Today ಜೂನ್  10  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment