ನಾನು ಮೆಚ್ಚಿದ ವಾಟ್ಸಪ್

Friday, June 12, 2020

ಇಂದಿನ ಇತಿಹಾಸ History Today ಜೂನ್ 12

ಇಂದಿನ ಇತಿಹಾಸ  History Today ಜೂನ್  12  

2020: ವಾಷಿಂಗ್ಟನ್: ‘ಅನ್ನ ನೀಡುವ ಭೂಮಿ ತಾಯಿಗೆ ಮರಳಿ ಸಾರವ ನೀಡು ಎಂಬ ಸಿದ್ಧಾಂತ ಪ್ರತಿಪಾದಿಸುವ ಭಾರತೀಯ ಮೂಲದ ಅಮೆರಿಕದ ಮಣ್ಣು ವಿಜ್ಞಾನಿ ಡಾ. ರತನ್ ಲಾಲ್ (೭೫) ಅವರು ೨೦೨೦ರ ಪ್ರತಿಷ್ಠಿತವಿಶ್ವ ಆಹಾರ ಪುರಸ್ಕಾರಕ್ಕೆ ೨೦೨೦ ಜೂನ್ ೧೨ರ ಶುಕ್ರವಾರ ಪಾತ್ರರಾದರು. ಕೃಷಿ ಕ್ಷೇತ್ರದಲ್ಲಿ ಮಾಡಿರುವ ಜೀವಮಾನದ ಸಾಧನೆ ಪರಿಗಣಿಸಿ ನೀಡುವ ಪ್ರಶಸ್ತಿಯು ನೊಬೆಲ್ ಪುರಸ್ಕಾರಕ್ಕೆ ಸಮವಾಗಿದ್ದು, ೧೮.೯೭ ಕೋಟಿ ರೂ. (೨೫೦,೦೦೦ ಡಾಲರ್) ನಗದು ಬಹುಮಾನ ಹೊಂದಿದೆ. ಕೃಷಿ ಭೂಮಿಯ ಕುರಿತು ಐದು ದಶಕಗಳಿಂದ ಸಂಶೋಧನೆ ನಡೆಸುತ್ತಿರುವ ರತನ್ ಲಾಲ್ ಅವರು, ಮಣ್ಣಿನ ಸಾರ ಹೆಚ್ಚಿಸುವ ಹಲವು ತಂತ್ರಗಳನ್ನು ಪರಿಚಯಿಸಿದ್ದರು. ಜಗತ್ತಿನಾದ್ಯಂತ ೫೦ ಕೋಟಿ ರೈತರು ಇವರ ಸಂಶೋಧನೆಯ ಫಲವನ್ನು ಉಂಡಿದ್ದಾರೆ ಎಂದುವಲ್ಡ್ ಫುಡ್ ಪ್ರೈಸ್ ಫೌಂಡೇಷನ್ ಹೇಳಿತು. ಫೌಂಡೇಷನ್ನಿನ ಕೇಂದ್ರ ಕಚೇರಿ ಅಮೆರಿಕದ ಅಯೊವಾದಲ್ಲಿದೆ. ಓಹಿಯೊ ಸ್ಟೇಟ್ ಯೂನಿವರ್ಸಿಟಿಯ ಕಾಲೇಜ್ ಆಫ್ ಫುಡ್, ಅಗ್ರಿಕಲ್ಚರ್ ಆಂಡ್ ಎನ್ವಿರಾನ್ಮೆಂಟಲ್ ಸೈನ್ಸನ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ರತನ್ ಲಾಲ್ ಅವರು ತಮಗೆ ದೊರೆತ ನಗದು ಬಹುಮಾನವನ್ನು ಮಣ್ಣಿನ ಕುರಿತ ಭವಿಷ್ಯದ ಸಂಶೋಧನಾ ಕಾರ್ಯಕ್ಕೆ ದಾನ ಮಾಡುವುದಾಗಿ ಘೋಷಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ -೧೯ ರೋಗಿಗಳಿಗೆ ನೀಡಲಾದ ಅಸಮರ್ಪಕ ಚಿಕಿತ್ಸೆ ಮತ್ತು ಕೊರೋನಾ ಮೃತ ದೇಹಗಳ ನಿರ್ವಹಣೆ ನಿಟ್ಟಿನಲ್ಲಿ ತಳೆದ ಧೋರಣೆ ಬಗ್ಗೆ 2020 ಜೂನ್ 12ರ ಶುಕ್ರವಾರ ಕೆಂಡಾಮಂಡಲ ಸಿಟ್ಟು ಪ್ರದರ್ಶಿಸಿದ ಸುಪ್ರೀಂಕೋರ್ಟ್ಕೊರೋನಾ ರೋಗಿಗಳ ಸ್ಥಿತಿ ಪ್ರಾಣಿಗಳ ಸ್ಥಿತಿಗಿಂತಲೂ ಶೋಚನೀಯ ಮತ್ತು ಕೆಟ್ಟದ್ದಾಗಿದೆಎಂದು ಹೇಳಿತು. ಮಾಧ್ಯಮ ವರದಿಗ ಹಿನ್ನೆಲೆಯಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠವು ಆಸ್ಪತ್ರೆಗಳಲ್ಲಿನ ಪರಿಸ್ಥಿತಿಗಳ ಬಗ್ಗೆ ದೆಹಲಿ, ಮಹಾರಾಷ್ಟ್ರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ನಾಲ್ಕು ರಾಜ್ಯಗಳಿಂದ ವಿವರವಾದ ವರದಿಗಳನ್ನು ತರಿಸಿಕೊಂಡಿತ್ತು. "ಕೋವಿಡ್ -೧೯ ರೋಗಿಗಳಿಗೆ ಪ್ರಾಣಿಗಳಿಗಿಂತಲೂ ನಿಕೃಷ್ಟ ಚಿಕಿತ್ಸೆ ನೀಡಲಾಗುತ್ತದೆ. ಒಂದು ಪ್ರಕರಣದಲ್ಲಿ ಕಸದಲ್ಲಿ ಮೃತ ದೇಹ ಪತ್ತೆಯಾಗಿದೆ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಹೇಳಿತು. ದೆಹಲಿ ರಾಜ್ಯವು ನ್ಯಾಯಪೀಠದಿಂದ ಭಾರೀ ಟೀಕೆಗೆ ಗುರಿಯಾಯಿತು. ’ಆಸ್ಪತ್ರೆಗಳಲ್ಲಿನ ಪರಿಸ್ಥಿತಿ ನಿಕೃಷ್ಟವಾಗಿದ್ದು, ಅವು ಕೋವಿಡ್ -೧೯ ಪರೀಕ್ಷೆಯನ್ನು ಕಡಿಮೆಗೊಳಿಸಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯ ಹಾಸಿಗೆಗಳು ಖಾಲಿ ಇದ್ದರೂ ರೋಗಿಗಳು ಆಸ್ಪತ್ರೆಯಲ್ಲಿ ಪ್ರವೇಶ ಪಡೆಯಲು ಕಂಬದಿಂದ ಕಂಬಕ್ಕೆ  ಸುತ್ತಬೇಕಾದ ಸ್ಥಿತಿ ಇದೆ ಎಂದು ಸುಪ್ರೀಂಕೋರ್ಟ್ ಹೇಳಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಬಿಹಾರದ ಸೀತಾಮಡಿ ಜಿಲ್ಲೆಯ ಗಡಿಯಲ್ಲಿ ನೇಪಾಳ ಪೊಲೀಸರು ಗುಂಪಿನ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದ ಪರಿಣಾಮವಾಗಿ ಕನಿಷ್ಠ ಒಬ್ಬ ಭಾರತೀಯ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು 2020 ಜೂನ್ 12ರ ಶುಕ್ರವಾರ ತಿಳಿಸಿದರು. ಜಿಲ್ಲೆಯ ಸೋನೆಬರ್ಶ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾ ಪಾರ್ಸೇನ್ ಪಂಚಾಯಿತಿಯ ಲಾಲ್ಬಂಡಿ-ಜಂಕಿ ನಗರ ಗಡಿಯಲ್ಲಿ ಭಾರತೀಯರು ಮತ್ತು ನೇಪಾಳ ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ ಬಳಿಕ ಗುಂಡಿನ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿದವು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಪ್ರಧಾನ ಕಚೇರಿ) ಜಿತೇಂದ್ರ ಕುಮಾರ್ ಅವರು ಒಬ್ಬನ ಸಾವು ಮತ್ತು ಇತರ ನಾಲ್ವರು ಗಾಯಗೊಂಡಿರುವುದನ್ನು ದೃಢಪಡಿಸಿದ್ದಾರೆ. ಗುಂಡು ಹಾರಾಟ ನಡೆದ ಸ್ಥಳವು ನೇಪಾಳದ ವ್ಯಾಪ್ತಿಗೆ ಬರುತ್ತದೆ. ವಿಕೇಶ್ ಕುಮಾರ್ ರಾಯ್ (೨೫) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಉಮೇಶ್ ರಾಮ್ ಮತ್ತು ಉದಯ್ ಠಾಕೂರ್ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಗುಂಡೇಟು ತಗುಲಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಲಗಾನ್ ರೈ ಎಂಬ ಇನ್ನೊಬ್ಬ ವ್ಯಕ್ತಿಯನ್ನು ನೇಪಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನು ಉತ್ತಮ ಚಿಕಿತ್ಸೆಗಾಗಿ ಸೀತಾಮಡಿ ಸದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವಿಕೇಶ್ ಕುಮಾರ್ ರಾಯ್ ಅವರ ತಂದೆ ನಾಗೇಶ್ವರ ರಾಯ್ ಅವರು ತನ್ನ ಮಗ ಕೆಲಸ ಮಾಡುತ್ತಿದ್ದ ಕೃಷಿ ಭೂಮಿಯು ನೇಪಾಳದ ನಾರಾಯಣಪುg ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ) 

2020: ನವದೆಹಲಿ: ಶೂನ್ಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರಿಟರ್ನ್ ಫೈಲಿಂಗ್ ಮತ್ತು ಜುಲೈ ೨೦೧೭ ಮತ್ತು ಜನವರಿ ೨೦೨೦ ನಡುವೆ ರಿಟರ್ನ್ಸ್ ಸಲ್ಲಿಸದ ನೋಂದಾಯಿತ ಘಟಕಗಳಿಗೆ ಯಾವುದೇ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2020 ಜೂನ್ 12ರ ಶುಕ್ರವಾರ ಪ್ರಕಟಿಸಿದರು. ‘ಕೋವಿಡ್ ಅವಧಿಗೆ ಮುಂಚಿನ ಜುಲೈ ೨೦೧೭ ರಿಂದ ಜನವರಿ ೨೦೨೦ರ ವರೆಗಿನ ಅವಧಿಗೆ, ಸಾಕಷ್ಟು ರಿಟರ್ನ್ ಫೈಲಿಂಗ್ ಬಾಕಿ ಉಳಿದಿದೆ. ತೆರಿಗೆ ಬಾಧ್ಯತೆಗಳಿಲ್ಲದ ಆದರೆ ಜುಲೈ ೨೦೧೭ ರಿಂದ ಜನವರಿ ೨೦೨೦ ನಡುವೆ ರಿಟರ್ನ್ಸ್ ಸಲ್ಲಿಸದ ಎಲ್ಲರಿಗೂ ವಿಳಂಬ ಶುಲ್ಕವಿರುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. "ತೆರಿಗೆ ಹೊಣೆಗಾರಿಕೆಯನ್ನು ಹೊಂದಿರುವವರಿಗೆ, ಜುಲೈ ೨೦೧೭ ರಿಂದ ಜನವರಿ ೨೦೨೦ ರವರೆಗೆ ಜಿಎಸ್ಟಿಆರ್- ಬಿ ರಿಟರ್ನ್ಸ್ ಸಲ್ಲಿಸದಿರುವವರಿಗೆ ಗರಿಷ್ಠ ವಿಳಂಬ ಶುಲ್ಕವನ್ನು ೫೦೦ ರೂಗಳಿಗೆ ಮಿತಿಗೊಳಿಸಲಾಗಿದೆ. ಇದು ಜುಲೈ , ೨೦೨೦ರಿಂದ ಸೆಪ್ಟೆಂಬರ್ ೩೦, ೨೦೨೦ರ ನಡುವಣ ಸಮಯದಲ್ಲಿ ಸಲ್ಲಿಸಿದ ಎಲ್ಲಾ ರಿಟರ್ನ್ಗಳಿಗೂ ಅನ್ವಯಿಸುತ್ತದೆ ಎಂದು ಸೀತಾರಾಮನ್ ಹೇಳಿದರು. ಕೋಟಿ ರೂಪಾಯಿಗಳ ವಹಿವಾಟು ಹೊಂದಿರುವ ಸಣ್ಣ ತೆರಿಗೆದಾರರು ಜುಲೈ ೩೦ರ ನಂತರ ಸೆಪ್ಟೆಂಬರ್  ೩೦ರ ಒಳಗೆ ಸಲ್ಲಿಸಿದ ಫೆಬ್ರವರಿ-ಏಪ್ರಿಲ್ ೨೦೨೦ ನಡುವಣ ರಿಟರ್ನ್ಗಳಿಗೆ ಶೇಕಡಾ ೧೮ರ ಬದಲಿಗೆ ಶೇಕಡಾ ರಷ್ಟು ಕಡಿಮೆ ಬಡ್ಡಿದರವನ್ನು ಪಾವತಿಸಲಿದ್ದಾರೆ ಎಂದು ಸಚಿವರು ಪ್ರಕಟಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ:  ಭಾರತದಲ್ಲಿ  ಒಂದೇ  ದಿನದಲ್ಲಿ ಗರಿಷ್ಠ ೧೦೯೫೬ ಸೋಂಕಿನ ಪ್ರಕರಣಗಳು ದಾಖಲಾಗುವುದರೊಂದಿಗೆ 2020 ಜೂನ್ 12ರ ಶುಕ್ರವಾರ ಕೊರೋನಾವೈರಸ್ ಸೋಂಕು ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿಯಿತು. ಗುರುವಾರ ರಾತ್ರಿ ಒಟ್ಟು ಕೊರೋನಾ ಸೋಂಕಿನ ಪ್ರಕರಣಗಳಲ್ಲಿ ಇಂಗ್ಲೆಂಡನ್ನು ಹಿಂದಕ್ಕೆ ತಳ್ಳಿ ವಿಶ್ವದಲ್ಲಿ ಅತಿಬಾಧಿತ ರಾಷ್ಟ್ರಗಳ ಸಾಲಿನಲ್ಲಿ ೪ನೇ ಸ್ಥಾನಕ್ಕೆ ಏರಿರುವ ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ೩೯೬ ಸಾವುಗಳು ಸಂಭವಿಸಿವೆ.ಇದರೊಂದಿಗೆ ದೇಶದಲ್ಲಿ ಕೊರೋನಾವೈರಸ್ ಸೋಂಕಿನ ಸಂಖ್ಯೆ ,೯೭,೫೩೫ಕ್ಕೆ ಏರಿತು.ಆದರೆ, ಆಶಾದಾಯಕ ಬೆಳವಣಿಗೆಯಲ್ಲಿ ಸತತ ಮೂರನೇ ದಿನವೂ ಭಾರತದಲ್ಲಿ ಸಕ್ರಿಯ ರೋಗಿಗಳ ಸಂಖ್ಯೆಯನ್ನು ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ಹಿಂದಕ್ಕೆ ಹಾಕಿದೆ. ಒಟ್ಟು ,೯೭,೫೩೫ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ,೪೧,೮೪೨ ಆಗಿದ್ದರೆ, ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ,೪೭,೧೯೫ ಆಗಿದೆ. ದೇಶದಲ್ಲಿ ಕೊರೋನಾವೈರಸ್ಸಿಗೆ ಬಲಿಯಾದವರ  ಒಟ್ಟು ಸಂಖ್ಯೆ ,೪೯೮ ಎಂದು ಕೇಂದ್ರ ಆರೋಗ್ಯ ಸಚಿವಾಲಯದ  ಅಂಕಿಸಂಖ್ಯೆಗಳು ತಿಳಿಸಿವೆ."ಹೀಗಾಗಿ, ಇದುವರೆಗೆ ಸುಮಾರು ಶೇಕಡಾ ೪೯.೪೭ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಂಕು ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ ವಿದೇಶಿಯರು ಸೇರಿದ್ದಾರೆ. ಶುಕ್ರವಾರ ಬೆಳಗ್ಗಿನವರೆಗೆ ವರದಿಯಾದ ೩೯೬ ಹೊಸ ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿ ೧೫೨, ದೆಹಲಿಯಲ್ಲಿ ೧೦೧, ಗುಜರಾತ್ನಲ್ಲಿ ೩೮, ಉತ್ತರಪ್ರದೇಶದಲ್ಲಿ ೨೪, ತಮಿಳುನಾಡಿನಲ್ಲಿ ೨೩, ಹರಿಯಾಣದಲ್ಲಿ ೧೨, ಪಶ್ಚಿಮ ಬಂಗಾಳದಲ್ಲಿ ೧೦, ತೆಲಂಗಾಣದಲ್ಲಿ , ರಾಜಸ್ಥಾನದಲ್ಲಿ ಆರು, ಮಧ್ಯಪ್ರದೇಶ ಮತ್ತು ಪಂಜಾಬ್ನಲ್ಲಿ ತಲಾ ನಾಲ್ಕು, ಬಿಹಾರ ಮತ್ತು ಕರ್ನಾಟಕದಲ್ಲಿ ತಲಾ ಮೂರು, ಆಂಧ್ರಪ್ರದೇಶ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ತಲಾ ಎರಡು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2020 ಜೂನ್ 12ರ ಶುಕ್ರವಾರ ರಕ್ಷಣಾ ಸೇವಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥರೊಂದಿಗೆ ಲಡಾಖ್ ಪರಿಸ್ಥಿತಿ ಬಗ್ಗೆ ಪರಿಶೀಲನಾ ಸಭೆ ನಡೆಸಿದರು. ಗಡಿ ಬಿಕ್ಕಟ್ಟನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲು ರಾಜತಾಂತ್ರಿಕ ಮತ್ತು ಸೇನಾ ಅಧಿಕಾರಿಗಳನ್ನು ತೊಡಗಿಸುವ ಮೂಲಕ ಭಾರತ ಮತ್ತು ಚೀನಾ ಪುನರಾವರ್ತಿತ ಸಂಧಾನ ಸಭೆಗಳನ್ನು ನಡೆಸುತ್ತಿರುವುದರ ಬೆನ್ನಲ್ಲೇ ರಾಜನಾಥ್ ಸಿಂಗ್ ಅವರು ಸಿಡಿಎಸ್ ಮತ್ತು ಇತರ ಸೇನಾ ಅಧಿಕಾರಿಗಳ ಜೊತೆಗೆ ಲಡಾಖ್ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಒಂದು ದಿನ ಮುಂಚಿತವಾಗಿ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಿಗೂ ಚೀನೀ ಪಡೆಗಳ ಜಮಾವಣೆ ವಿಸ್ತರಣೆ ಆಗಿರುವುದನ್ನು ಮೂಲಗಳು ದೃಢ ಪಡಿಸಿದ್ದವು. ವಾರಾರಂಭದಲ್ಲಿ ವಿವಾದಾತ್ಮಕ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ (ಎಲ್ಎಸಿ) ಗಾಲ್ವಾನ್ ಕಣಿವೆಯ ಮೂರು ಹಾಟ್ಸ್ಪಾಟ್ಗಳು ಮತ್ತು ಪಹರೆ ಪಾಯಿಂಟ್ ೧೫ ಹಾಗೂ ಪೂರ್ವ ಲಡಾಖ್ ಹಾಟ್ ಸ್ಪ್ರಿಂಗ್ ಪ್ರದೇಶಗಳಿಂದ ಉಭಯ ದೇಶಗಳ ಸೈನಿಕರೂ ಸೀಮಿತ ಪ್ರಮಾಣದಲ್ಲಿ ವಾಪಸಾಗಿದ್ದರೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದರು. ಪೂರ್ವ ಲಡಾಖ್ ಹಾಟ್ ಸ್ಪ್ರಿಂಗ್ಗಳು ಉದ್ವಿಗ್ನತೆಯ ಕೇಂದ್ರ ಬಿಂದುಗಳಾಗಿದ್ದವು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜೂನ್  12  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment