ನಾನು ಮೆಚ್ಚಿದ ವಾಟ್ಸಪ್

Tuesday, June 23, 2020

ಇಂದಿನ ಇತಿಹಾಸ History Today ಜೂನ್ 23

2020: ಹರಿದ್ವಾರ
: ಇಡೀ ಜಗತ್ತು ಕೊರೋನಾವೈರಸ್  ಲಸಿಕೆ ಕಂಡು ಹಿಡಿಯಲು ಶತಪ್ರಯತ್ನ ನಡೆಸುತ್ತಿರುವ ಹೊತ್ತಿನಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಬಲ್ಲ ಮೊತ್ತ ಮೊದಲ ಆಯುರ್ವೇದ ಔಷಧವನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಯೋಗಗುರು ಬಾಬಾ ರಾಮದೇವ್ ಅವರು ಅವರು 23 ಜೂನ್ 2020ರ ಮಂಗಳವಾರ ಇಲ್ಲಿ ಪ್ರಕಟಿಸಿದರು.  ಇದು ರೋಗನಿರೋಧಕ ಶಕ್ತಿ ವರ್ಧಿಸುವ ಔಷಧವಲ್ಲ. ರೋಗವನ್ನೇ ಗುಣಪಡಿಸುವ ಔಷಧ. ‘ಕೊರೊನಿಲ್ ಮತ್ತುಸ್ವಸಾರಿ ಎಂಬ ಎರಡು ಔಷಧಗಳು ಕೊರೋನಾ ರೋಗಿಗಳ ಮೇಲೆ ಶೇ ೧೦೦ರಷ್ಟು ಧನಾತ್ಮಕ ಫಲಿತಾಂಶ ನೀಡಿವೆ ಎಂದು ರಾಮದೇವ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು. ಇಡೀ ಜಗತ್ತು ಕೋವಿಡ್ ಲಸಿಕೆಗೆ ಕಾದು ಕುಳಿತಿರುವಾಗ ಪತಂಜಲಿ ಸಂಶೋಧನಾ ಸಂಸ್ಥೆ ಹಾಗೂ ಎನ್‌ಐಎಂಎಸ್ ಸಂಸ್ಥೆಗಳು ಒಗ್ಗೂಡಿ ಚೊಚ್ಚಲ ಆಯುರ್ವೇದಿಕ್ ಔಷಧ ಸಿದ್ಧಪಡಿಸಿವೆ. ಔಷಧಗಳು ದೀರ್ಘ ಸಂಶೋಧನೆ ಮೂಲಕ ಪ್ರಾಯೋಗಿಕವಾಗಿ ತಯಾರಾಗಿವೆ ಎಂದು ರಾಮದೇವ್ ಹೇಳಿದರು. ‘ಕೊರೋನಿಲ್, ’ಸ್ವಸಾರಿ ಔಷಧ ಸೇವನೆಯಿಂದ - ದಿನಗಳ ಅವಧಿಯಲ್ಲಿ ರೋಗಿಗಳು ಗುಣಮುಖರಾಗುತ್ತಾರೆ ಎಂದು ಅವರು ರಾಮದೇವ್ ಆಶಾಭಾವ ವ್ಯಕ್ತಪಡಿಸಿದರು. ಎರಡು ಪ್ರಯೋಗಗಳನ್ನು ಔಷಧಗಳ ಮೇಲೆ ನಡೆಸಲಾಗಿದೆ. ಮೊದಲನೆಯ ಕ್ಲಿನಿಕಲ್ ಆಧರಿತ ಅಧ್ಯಯನವನ್ನು ದೆಹಲಿ, ಅಹಮದಾಬಾದ್ ಸೇರಿ ಹಲವು ನಗರಗಳಲ್ಲಿ ಕೈಗೊಳ್ಳಲಾಗಿದೆ. ೨೮೦ ರೋಗಿಗಳು ಶೇ ೧೦೦ರಷ್ಟು ಗುಣಮುಖರಾಗಿದ್ದಾರೆ. ಔಷಧದ ಮೂಲಕ ಕೊರೊನಾ ವೈರಸ್ ಅನ್ನು ನಿಯಂತ್ರಿಸಬಹುದು ಎಂದು ಅವರು  ನುಡಿದರು. ೫೪೫ ರೂಪಾಯಿಗಳಿಗೆ ಕೊರೊನಾ ಕಿಟ್ ಲಭಿಸುತ್ತದೆ. ಕಿಟ್ಟನ್ನು ೩೦ ದಿನ ಬಳಸಬಹುದು ಎಂದು ಪತಂಜಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಚಾರ್ಯ ಬಾಲಕೃಷ್ಣ ತಿಳಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಗಲ್ವಾನ್ ಕಣಿವೆಯ ಘರ್ಷಣೆಗಳ ಹಿನ್ನೆಲೆಯಲ್ಲಿ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಲ್ಲಿ ಚೀನಾದೊಂದಿಗೆ ನಡೆಸಲಾಗುತ್ತಿರುವ ಸುದೀರ್ಘ ಮಾತುಕತೆ ಧನಾತ್ಮಕವಾಗಿದ್ದು, ಸೌಹಾರ್ದಯುತವಾಗಿದೆ ಎಂದು ಭಾರತೀಯ ಸೇನೆ 23 ಜೂನ್ 2020ರ ಮಂಗಳವಾರ ತನ್ನ ಚೊಚ್ಚಲ ಹೇಳಿಕೆಯಲ್ಲಿ ತಿಳಿಸಿತು. "೨೦೨೦ ಜೂನ್ ೨೨ರಂದು ಭಾರತ ಮತ್ತು ಚೀನಾ ನಡುವೆ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಸೌಹಾರ್ದಯುತ, ಧನಾತ್ಮಕ ಮತ್ತು ರಚನಾತ್ಮಕ ವಾತಾವರಣದಲ್ಲಿ ಮೊಲ್ಡೊದಲ್ಲಿ ನಡೆಯಿತು. ಸೇನೆ ಹಿಂಪಡೆಯುವ ಬಗ್ಗೆ ಪರಸ್ಪರ ಒಮ್ಮತವಿತ್ತು. ಪೂರ್ವ ಲಡಾಕ್‌ನ ಎಲ್ಲಾ ಘರ್ಷಣೆ ಪ್ರದೇಶಗಳಿಂದ ಸೇನೆ ಹಿಂಪಡೆಯುವ ವಿಧಾನಗಳನ್ನು ಚರ್ಚಿಸಲಾಯಿತು ಮತ್ತು ಚರ್ಚೆಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಸೇನೆ ಹೇಳಿತು.  ಭಾರತದ ೨೦ ಯೋಧರು ಹುತಾತ್ಮರಾಗಲು ಕಾರಣವಾದs ಗಲ್ವಾನ್ ಕಣಿವೆಯ ಹಿಂಸಾತ್ಮಕ ಘರ್ಷಣೆಯಿಂದ ಉದ್ಭವಿಸಿದ ಉದ್ವಿಗ್ನತೆಯನ್ನು ಶಮನಗೊಳಿಸುವ ಯತ್ನವಾಗಿ ಭಾರತ ಮತ್ತು ಚೀನೀ ಸೇನೆ ಸೋಮವಾರ ಎರಡನೇ ಸುತ್ತಿನ ಲೆಫ್ಟಿನೆಂಟ್ ಜನರಲ್ ಹಂತದ ಮಾತುಕತೆಯನ್ನು ನಡೆಸಿದವು. ಪೂರ್ವ ಲಡಾಖ್‌ನ ಚುಶುಲ್ ವಿಭಾಗದಲ್ಲಿನ ಚೀನೀ ಕಡೆಯ ಮೋಲ್ಡೋದಲ್ಲಿ  ಬೆಳಗ್ಗೆ ೧೧.೩೦ ಗಂಟೆಗೆ ಆರಂಭವಾದ ಮಾತುಕತೆ ಮಧ್ಯರಾತಿಯವರೆಗೆ ನಡೆಯಿತು. ಪೂರ್ವ ಲಡಾಖ್‌ನಲ್ಲಿ ಸೇನೆ ಹಿಂಪಡೆಯುವ ವಿಧಿವಿಧಾನವನ್ನು ಅಂತಿಮಗೊಳಿಸುವ ಬಗ್ಗೆ ಮಾತುಕತೆ ಗಮನ ಹರಿಸಿತು ಎಂದು ಮೂಲಗಳು ತಿಳಿಸಿದವು. ಜೂನ್ ೬ರಂದು ಮೊದಲ ಸುತ್ತಿನ ಲೆಫ್ಟಿನೆಂಟ್ ಜನರಲ್ ಮಾತುಕತೆಗಳು ಇದೇ ಜಾಗದಲ್ಲಿ ನಡೆದಿದ್ದವು. ಗಲ್ವಾನ್ ಕಣಿವೆಯಿಂದ ಆರಂಭಿಸಿ ಹಂತ ಹಂತವಾಗಿ ಎಲ್ಲ ಸ್ಥಳಗಳಿಂದ ಸೈನಿಕರನ್ನು ಹಿಂತೆಗೆದುಕೊಳ್ಳುವ ಒಪ್ಪಂದವನ್ನು ಸಭೆ ಅಂತಿಮಗೊಳಿಸಿತ್ತು. ಆದಾಗ್ಯೂ, ಜೂನ್ ೧೫ರ ಹಿಂಸಾತ್ಮಕ ಘರ್ಷಣೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿತು. ಉಭಯ ಕಡೆಗಳೂ ೩೫೦೦ ಕಿಮೀ ಉದ್ಧದ ಗಡಿಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಸೇನೆ ಜಮಾವಣೆ ಮಾಡಿದ್ದವು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿನ ಬೃಹತ್ ರಸ್ತೆ ಅಭಿವೃದ್ಧಿ ಯೋಜನೆಗಳು ನದಿಗಳು ತಮ್ಮ ಹಾದಿಯನ್ನು ಬದಲಿಸಲು ಮತ್ತು ಚೀನಾದ ಗಡಿಯನ್ನು ನೇಪಾಳದ ಉತ್ತರ ಪ್ರದೇಶಗಳಿಗೆ ವಿಸ್ತರಿಸಲು ಕಾರಣವಾಗಿವೆ ಎಂದು ನೇಪಾಳದ ಕೃಷಿ ಇಲಾಖೆಯ ದಾಖಲೆಯೊಂದು ಬಹಿರಂಗ ಪಡಿಸಿದೆ. ಹಲವಾರು ಜಿಲ್ಲೆಗಳಲ್ಲಿನ ನೇಪಾಳದ ಭೂಪ್ರದೇಶದ ಭಾಗಗಳನ್ನು ಈಗಾಗಲೇ ಚೀನಾ ಅತಿಕ್ರಮಿಸಿದೆ ಮತ್ತು ನದಿಗಳು ಹಾದಿಯನ್ನು ಬದಲಾಯಿಸುವುದನ್ನು ಮುಂದುರೆಸಿದರೆ ಚೀನಾವು ಉತ್ತರದ ಹೆಚ್ಚಿನ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ದಾಖಲೆ ಎಚ್ಚರಿಸಿದೆ. ನದಿಗಳು ಬದಲಾಗುತ್ತಿರುವ ಹಾದಿಯಿಂದ ನೇಪಾಳದ ಭೂಪ್ರದೇಶದ ನಷ್ಟವು "ನೂರಾರು ಹೆಕ್ಟೇರ್ ಭೂಮಿಗಳಷ್ಟು ಆಗಬಹುದು  ಎಂದು ಅದು ಹೇಳಿದೆ.  "ಕಾಲಾನಂತರದಲ್ಲಿ, ಚೀನಾ ಪ್ರದೇಶಗಳಲ್ಲಿ ಸಶಸ್ತ್ರ ಪೊಲೀಸರ ಗಡಿ ವೀಕ್ಷಣಾ ಠಾಣೆಗಳನ್ನು ಅಭಿವೃದ್ಧಿ ಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಕೃಷಿ ಸಚಿವಾಲಯದ ಸಮೀಕ್ಷಾ ವಿಭಾಗದ ದಾಖಲೆ ತಿಳಿಸಿದೆ.  ಉತ್ತರದಲ್ಲಿ ಚೀನಾದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ನೇಪಾಳವು ಪೂರ್ವದಿಂದ ಪಶ್ಚಿಮಕ್ಕೆ ೪೩ ಬೆಟ್ಟಗಳು ಮತ್ತು ಪರ್ವತಗಳನ್ನು ಹೊಂದಿದೆ, ಇದು ಉಭಯ ದೇಶಗಳ ನಡುವಿನ ನೈಸರ್ಗಿಕ ಗಡಿಯಾಗಿ ಕಾರ್ಯನಿರ್ವಹಿಸುತ್ತದೆ. ಉಭಯ ದೇಶಗಳು ಮುಖ್ಯವಾಗಿ ವ್ಯಾಪಾರಕ್ಕಾಗಿ ಆರು ಹೊರಠಾಣೆಗಳನ್ನು (ಚೆಕ್ ಪೋಸ್ಟ್) ಹೊಂದಿವೆ.  ೧೧ ನದಿಗಳ ಬದಲಾಗುತ್ತಿರುವ ಮಾರ್ಗ ಈಗಾಗಲೇ ಹಮ್ಲಾ, ರಸುವಾ, ಸಿಂಧುಪಾಲ್ಚೌಕ್ ಮತ್ತು ಸಂಖುವಸಭ ನಾಲ್ಕು ಜಿಲ್ಲೆಗಳಲ್ಲಿ ೩೬ ಹೆಕ್ಟೇರ್ ಅಥವಾ .೩೬ ಚದರ ಕಿ.ಮೀ. ಪ್ರದೇಶವನ್ನು ನೇಪಾಳಕ್ಕೆ ನಷ್ಟವಾಗುವಂತೆ ಮಾಡಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಒಂದೇ ದಿನದಲ್ಲಿ ೧೪,೯೩೩ ಜನರಿಗೆ ಕೊರೋನವೈರಸ್‌ಗೆ ಸೋಂಕು ದೃಢಪಡುವುದರೊಂದಿಗೆ ಭಾರತದ ಕೋವಿಡ್-೧೯ ಸೋಂಕಿನ ಪ್ರಕರಣಗಳ ಸಂಖ್ಯೆ ಮಂಗಳವಾರ ,೪೦,೨೧೫ ಕ್ಕೆ ಏರಿತು. ೩೧೨ ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ ೧೪,೦೧೧ ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 23 ಜೂನ್ 2020ರ ಮಂಗಳವಾರ ತಿಳಿಸಿತು. ಈವರೆಗೆ ಒಟ್ಟು ,೪೮,೧೮೯ ರೋಗಿಗಳು ಗುಣಮುಖರಾಗಿದ್ದು, ,೭೮,೦೧೪ ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಬೆಳಗ್ಗೆ ನವೀಕರಿಸಲಾದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.  ಕಳೆದ ೨೪ ಗಂಟೆಗಳಲ್ಲಿ, ಒಟ್ಟು ೧೦,೯೯೪ ಕೋವಿಡ್ -೧೯ ರೋಗಿಗಳು ಚೇತರಿಸಿಕೊಂಡಿದ್ದಾರೆ, ಕೊರೋನವೈರಸ್ ಸೋಂಕಿತ ರೋಗಿಗಳಲ್ಲಿ ಚೇತರಿಕೆಯ ಪ್ರಮಾಣವು ಶೇಕಡಾ ೫೬.೩೮ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಕೋವಿಡ್ ರೋಗಿಗಳಿಗಾಗಿ ಸ್ಥಾಪಿಸಲಾಗುತ್ತಿರುವ ಭಾರತದ ಅತಿದೊಡ್ಡ ಚಿಕಿತ್ಸಾ ಸೌಲಭ್ಯವನ್ನು ನಡೆಸಲು ಗೃಹ ಸಚಿವ ಅಮಿತ್ ಶಾ ಅವರು ಭಾರತ ಟಿಬೆಟ್ ಗಡಿ ಪೊಲೀಸ್ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್-ಐಟಿಬಿಪಿ) ವೈದ್ಯಕೀಯ ಸಿಬ್ಬಂದಿಯನ್ನು ಬಳಸಿಕೊಂಡಿದ್ದಾರೆ. ಚಟ್ಟರ್‌ಪುರದ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಸಂಕೀರ್ಣದಲ್ಲಿ ಸ್ಥಾಪಿಸಲಾಗಿರುವ ಸೌಲಭ್ಯವು ೧೦,೨೦೦ ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸಾ ಅವಕಾಶ ಕಲ್ಪಿಸುತ್ತದೆ.  ೧೫ ಫುಟ್‌ಬಾಲ್ ಮೈದಾನಗಳ ಗಾತ್ರದಷ್ಟು ದೊಡ್ಡದಾದ ಚಟ್ಟರ್‌ಪುರ ಸೌಲಭ್ಯವನ್ನು ಸರ್ದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆ ಎಂಬುದಾಗಿ ಹೆಸರಿಸಲಾಗಿದೆ. "ಇದು ೧೦೦೦ ಕೋವಿಡ್ ರೋಗಿಗಳಿಗಾಗಿ ಚೀನಾದ ಲೀಶೆನ್ಶಾನ್‌ನಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿದ್ದ ಸೌಲಭ್ಯಕ್ಕಿಂತ ೧೦ ಪಟ್ಟು ದೊಡ್ಡದಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಫೆಬ್ರವರಿಯಲ್ಲಿ, ಚೀನಾದ ರಾಜತಾಂತ್ರಿಕರು ಆಸ್ಪತ್ರೆಯ ನಿರ್ಮಾಣದ ವೀಡಿಯೊವನ್ನು ಹೊರಹಾಕಿದರು, ಆಗ ಅದನ್ನು ದೊಡ್ಡ ಸಾಧನೆ ಎಂದು ಪರಿಗಣಿಸಲಾಗಿತ್ತು. ಕೋವಿಡ್ -೧೯ ರೋಗಿಗಳಿಗೆ ಸ್ಥಳಾವಕಾಶ ಮತ್ತು ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ತ್ವರಿತವಾಗಿ ವಿಸ್ತರಿಸಲು ದೆಹಲಿ ಸರ್ಕಾgಕ್ಕೆ ಸಹಾಯ ಮಾಡುವ ಸಲುವಾಗಿ ಸ್ವಯಂಸೇವಾ ವಲಯವನ್ನು ಸಂಪರ್ಕಿಸುವಂತೆ ಗೃಹ ಸಚಿವ ಅಮಿತ್ ಶಾ, ತಿಂಗಳ ಆರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಸೂಚಿಸಿದ್ದರು. ಹಿಂದೆ ದೇಶದ ಇತರ ಭಾಗಗಳಲ್ಲಿನ ಕೆಲವು ಸೌಲಭ್ಯಗಳಲ್ಲಿ ವಲಸಿಗರಿಗಾಗಿ ಶಿಬಿರಗಳನ್ನು ನಡೆಸುತ್ತಿದ್ದ ಆಧ್ಯಾತ್ಮಿಕ ಸಂಸ್ಥೆ ಸತ್ಸಂಗ್, ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ಅವರ ಮನವಿಗೆ ಮೊತ್ತ ಮೊದಲನೆಯದಾಗಿ ಸ್ಪಂದಿಸಿತು.ರೋಗಿಗಳಿಗೆ ಊಟವನ್ನು ತಾನು ಒದಗಿಸುವುದಾಗಿ ಎಂದು ಸಂಸ್ಥೆ ಸರ್ಕಾರಕ್ಕೆ ತಿಳಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡುವ ಪ್ರಸ್ತಾಪಕ್ಕೆ ರಶ್ಯಾ ಮತ್ತೊಮ್ಮೆ ಬೆಂಬಲ ವ್ಯಕ್ತ ಪಡಿಸಿದೆ. 2020 ಜೂನ್ 23ರ ಮಂಗಳವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ರಶ್ಯಾ, ಭಾರತ ಮತ್ತು ಚೀನಾವನ್ನು ಒಳಗೊಂಡ ಆರ್‌ಐಸಿ ಗುಂಪಿನ ವಿದೇಶಾಂಗ ಸಚಿವರ ತ್ರಿಪಕ್ಷೀಯ ಸಮ್ಮೇಳನದಲ್ಲಿ ಮೂರೂ ದೇಶಗಳು ವಿಶ್ವಸಂಸ್ಥೆ ಸುಧಾರಣೆಗಳ ಬಗ್ಗೆ ಚರ್ಚಿಸಿವೆ ಎಂದು ರಶ್ಯಾ ಹೇಳಿದೆ. ವಿಶ್ವಸಂಸ್ಥೆಯ ಅತ್ಯಂತ ಪ್ರಬಲ ಅಂಗವಾಗಿರುವ ಭದ್ರತಾ ಮಂಡಳಿ ಸಹಿತವಾಗಿ ವಿಶ್ವಸಂಸ್ಥೆಯಲ್ಲಿ ಮಹತ್ವದ ಸುಧಾರಣೆಗಳಿಗಾಗಿ ಭಾರತವು ಒತ್ತಾಯಿಸುತ್ತಿದೆ, ಅದರ ಸಂಯೋಜನೆಯು ಹಾಲಿ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಪ್ರತಿನಿಧಿಸುತ್ತಿಲ್ಲ ಎಂದು ಭಾರತ ಹೇಳುತ್ತಿದೆ. "ಇಂದು ನಾವು ವಿಶ್ವಸಂಸ್ಥೆಯ ಸಂಭಾವ್ಯ ಸುಧಾರಣೆಗಳ ಬಗ್ಗೆ ಮಾತನಾಡಿದ್ದೇವೆ ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಲು ಭಾರತವು ಪ್ರಬಲ ಅಭ್ಯರ್ಥಿಯಾಗಿದೆ. ನಾವು ಭಾರತದ ಉಮೇದುವಾರಿಕೆಯನ್ನು ಬೆಂಬಲಿಸುತ್ತೇವೆ. ಭಾರತವು ಭದ್ರತಾ ಮಂಡಳಿಯ ಪೂರ್ಣ ಪ್ರಮಾಣದ ಸದಸ್ಯರಾಗಬಹುದು ಎಂದು ನಾವು ನಂಬುತ್ತೇವೆ ಎಂದು ಸೆರ್ಗೆಯ್ ಲಾವ್ರೊವ್ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)
 
ಇಂದಿನ ಇತಿಹಾಸ  History Today ಜೂನ್  23  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment