ನಾನು ಮೆಚ್ಚಿದ ವಾಟ್ಸಪ್

Tuesday, June 9, 2020

ಇಂದಿನ ಇತಿಹಾಸ History Today ಜೂನ್ 09

ಇಂದಿನ ಇತಿಹಾಸ  History Today ಜೂನ್  09

2020: ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾ ಮತ್ತು ಭಾರತೀಯ ಪಡೆಗಳು ಗಾಲ್ವಾನ್ ಕಣಿವೆ ಮತ್ತು ಪೂರ್ವ ಲಡಾಖ್ ಇತರ ಎರಡು ಪ್ರದೇಶಗಳಲ್ಲಿ 2020 ಜೂನ್ 09ರ ಮಂಗಳವಾರ ‘’ಹಿಂದಕ್ಕೆ ತೆರಳಲುಆರಂಭಿಸಿದವು. ಮಾತುಕತೆಗಳ ಮೂಲಕ ಒಂದು ತಿಂಗಳ ಅವಧಿಯ ಬಿಕ್ಕಟ್ಟನ್ನು ಪರಿಹರಿಸುವ ಇಚ್ಛೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಸೇನಾ ಮೂಲಗಳು ತಿಳಿಸಿದವು. ಲಡಾಖ್ ಗಡಿಯಿಂದ sಸೋಮವಾರ ರಾತ್ರಿ, ರಿಂದ . ಕಿ.ಮೀ ಹಿಂದೆ ಸರಿದಿರುವ ಚೀನಿ ಪಡೆಗಳು, ಮೂಲಕ ಗಡಿಯಲ್ಲಿ ಸುದೀರ್ಘ ಸೈನಿಕ ಚಟುವಟಿಕೆಗಳಿಗೆ ತೆರೆ ಎಳೆದಿವೆ. ಪ್ರತಿಯಾಗಿ ಭಾರತೀಯ ಪಡೆಗಳು ಮಂಗಳವಾರ ಸಂಜೆ, ಗಡಿಯಿಂದ ಹಿಂದಕ್ಕೆ ಸರಿದವು ಎಂದು ಮೂಲಗಳು ಹೇಳಿದವು. ಆದಾಗ್ಯೂ, ಪ್ಯಾಂಗೊಂಗ್ ತ್ಸೊ ಮತ್ತು ದೌಲತ್ ಬೇಗ್ ಓಲ್ಡಿಯಂತಹ ಪ್ರದೇಶಗಳಲ್ಲಿ ಅವರ ನಿಲುವುಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಮೂಲಗಳು ಹೇಳಿದವು. ಏನಿದ್ದರೂ, ರಕ್ಷಣಾ ಸಚಿವಾಲಯದಿಂದ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಸೇನೆಯನ್ನು ನಿಯೋಜಿಸುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಮಾತುಕತೆಗಳಲ್ಲಿ ಪ್ರಗತಿಯ ಬಗೆಗೂ ಚೀನಾದ ಕಡೆಯಿಂದ ಯಾವುದೇ ಹೇಳಿಕೆಗಳು ಬಂದಿಲ್ಲ. ಚೀನಾ ಮತ್ತು ಭಾರತೀಯ ಸೇನೆಗಳು ಕೆಲವು ಪಡೆಗಳನ್ನು ಹಿಂತೆಗೆದುಕೊಂಡಿವೆ ಮತ್ತು ಗಾಲ್ವಾನ್ ಮತ್ತು ಹಾಟ್ ಸ್ಪ್ರಿಂಗ್ಸ್ ಮತ್ತು ಗಸ್ತು ಪ್ರದೇಶ ಪಿಪಿ -೧೫ ನಿಂದ ತಾತ್ಕಾಲಿಕ ಮೂಲಸೌಕರ್ಯಗಳನ್ನು ತೆಗೆದುಹಾಕಿವೆ ಎಂದು ಸೇನಾ ಮೂಲಗಳು ತಿಳಿಸಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ದೆಹಲಿಯಲ್ಲಿ ಕೊರೋನಾ ಸೋಂಕು ಸಮುದಾಯ ಪ್ರಸರಣ ಆಗುತ್ತಿಲ್ಲ ಎಂದು ಕೇಂದ್ರ ಸರ್ಕಾರವು 2020  ಜೂನ್ 09ರ ಮಂಗಳವಾರ ಪ್ರತಿಪಾದಿಸಿತು. ಇದರ ಬೆನ್ನಲ್ಲೇ ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಮನಿಶ್ ಸೊಸೋಡಿಯಾ ಅವರು ರಾಜಧಾನಿಯಲ್ಲಿ ಕೋವಿಡ್-೧೯ ಪ್ರಕರಣಗಳು ಯದ್ವಾತದ್ವ ಏರುತ್ತಿದ್ದು ಜುಲೈ ಅಂತ್ಯದ ವೇಳೆಗೆ . ಲಕ್ಷಕ್ಕೆ ಏರುವ ಸಾಧ್ಯತೆಗಳಿವೆ ಎಂದು ಹೇಳಿದರು.  ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಸಭೆಯ ಬಳಿಕ ವರದಿಗಾರರ ಜೊತೆಗೆ ಮಾತನಾಡಿದ ಸಿಸೋಡಿಯಾ ಜುಲೈ ೩೧ರ ವೇಳೆಗೆ ನಗರದಲ್ಲಿ . ಲಕ್ಷ ಕೋವಿಡ್-೧೯ ಪ್ರಕರಣಗಳು ದಾಖಲಾಗುವ ನಿರೀಕ್ಷೆ ಇದೆ ಎಂದು ಹೇಳಿದರು. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸರ್ಕಾರದ ಪ್ರತಿನಿಧಿಗಳು ದೆಹಲಿಯಲ್ಲಿ ಕೋವಿಡ್ -೧೯ ಸಮುದಾಯ ಪ್ರಸರಣ ಆಗುತ್ತಿಲ್ಲ ಎಂದು ಸಭೆಯಲ್ಲಿ ಹೇಳಿದರುಸಿಸೋಡಿಯಾ ನುಡಿದರು. ದೆಹಲಿಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ದೆಹಲಿ ನಿವಾಸಿಗಳಿಗೆ ಮಾತ್ರವೇ ಮೀಸಲುಗೊಳಿಸುವಂತೆ ರಾಜ್ಯ ಸರ್ಕಾರ ಮಾಡಿದ್ದ ಆದೇಶವನ್ನು ರದ್ದು ಪಡಿಸಿದ ಕ್ರಮವನ್ನು ಪುನರ್ ಪರಿಶೀಲಿಸಲು ಲೆಪ್ಟಿನೆಂಟ್ ಗವರ್ನರ್ ನಿರಾಕರಿಸಿದರು ಎಂದೂ ಉಪಮುಖ್ಯಮಂತ್ರಿ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಲಸೆ ಕಾರ್ಮಿಕರ ಸಲುವಾಗಿ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದ ರೈಲುಗಳನ್ನುಕೊರೋನಾ ಎಕ್ಸ್ಪ್ರೆಸ್ಎಂಬುದಾಗಿ ಅಪಹಾಸ್ಯ ಮಾಡಿದ್ದಕ್ಕೆ 2020 ಜೂನ್ 09ರ ಮಂಗಳವಾರ ಎದಿರೇಟು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಕೊರೋನಾ ಎಕ್ಸ್ಪ್ರೆಸ್ ರೈಲುಗಳು ತೃಣಮೂಲ ಕಾಂಗೆಸ್ ಪಾಲಿಗೆಎಕ್ಸಿಟ್ ಎಕ್ಸ್ಪ್ರೆಸ್ (ನಿರ್ಗಮನ ) ಆಗಲಿವೆ ಎಂದು ಚುಚ್ಚಿದರು. ವರ್ಚುವಲ್ ರ್ಯಾಲಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ವಿರುದ್ಧ ಹರಿತವಾದ ವಾಗ್ಬಾಣಗಳನ್ನು ಎಸೆದ ಶಾ, ’ಮಮತಾ ದೀದಿಯವರೇ ನೀವು ಹೆಸರು ಇಟ್ಟಿರುವಕೋರೋನಾ ಎಕ್ಸ್ಪ್ರೆಸ್ನಿಮ್ಮ ಪಾಲಿನ ನಿರ್ಗಮನ ಮಾರ್ಗವಾಗಲಿದೆ. ನೀವು ವಲಸೆ ಕಾರ್ಮಿಕರ ಗಾಯಗಳಿಗೆ ಉಪ್ಪು ಸವರಿದ್ದೀರಿ. ಅವರು ಇದನ್ನು ಎಂದಿಗೂ ಮರೆಯುವುದಿಲ್ಲಎಂದು ನುಡಿದರು. ‘ಪಶ್ಚಿಮ ಬಂಗಾಳ ಜನ ಸಂವಾದರಾಲಿಯಲ್ಲಿ ಪಶ್ಚಿಮ ಬಂಗಾಳದ ಕಾರ್ಯಕರ್ತರನ್ನು ಉದ್ದೇಶಿಸಿ ಗೃಹ ಸಚಿವರು ಮಾತನಾಡಿದರು.ಪಕ್ಷ ಮತ್ತು ಸರ್ಕಾರದ ಸಂದೇಶಗಳನ್ನು ಹರಡುವ ಮತ್ತು ರಾಜಕೀಯ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ಬಿಜೆಪಿಯು ವರ್ಚುವಲ್ ರಾಲಿಗಳನ್ನು ನಡೆಸುತ್ತಿದೆ. ವಲಸೆ ಕಾರ್ಮಿಕರನ್ನು ಒಯ್ಯುವ ಸಲುವಾಗಿ ಸರ್ಕಾರವು ವ್ಯವಸ್ಥೆ ಮಾಡಿದ ರೈಲುಸೇವೆಯನ್ನು ಅಪಹಾಸ್ಯ ಮಾಡಿದ ಮಮತಾ ಬ್ಯಾನರ್ಜಿ ಟೀಕೆಯತ್ತ ಶಾ ಬೊಟ್ಟು ಮಾಡಿದರು. ರೈಲ್ವೇಯು ಹಲವಾರು ರೈಲುಗಳನ್ನು ಓಡಿಸುವ ಬದಲಿಗೆ ಒಂದು ರೈಲಿನಲ್ಲಿ ಎಲ್ಲರನ್ನೂ ತುಂಬಿಕೊಂಡು ಹೋಗುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಟೀಕಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಗುವಾಹಟಿ: ಅಸ್ಸಾಮಿನ ಮೇಲ್ಭಾಗದ ತೀನ್ಸುಕಿಯಾ ಜಿಲ್ಲೆಯಲ್ಲಿನ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್ನೈಸರ್ಗಿಕ ಅನಿಲ ಬಾವಿಯಲ್ಲಿ  ಅನಿಲ ಹೊರಹೊಮ್ಮಲಾರಂಭಿಸಿದ ೧೩ ದಿನಗಳ ಬಳಿಕ 2020 ಜೂನ್ 09ರ ಮಂಗಳವಾರ ಭಾರೀ ಬೆಂಕಿ ಕಾಣಿಸಿಕೊಂಡಿತು. ಬಾಗ್ಜಾನ್ನಲ್ಲಿರುವ ಅನಿಲ ಬಾವಿಯಿಂದ ದೊಡ್ಡ ಪ್ರಮಾಣದ ಹೊಗೆ ಹೊರಹೊಮ್ಮುತ್ತಿದೆ. ಹಲವಾರು ಕಿಲೋಮೀಟರ್ ದೂರದಲ್ಲಿರುವ ಡಿಬ್ರು ಸೈಖೋವಾ ರಾಷ್ಟ್ರೀಯ ಉದ್ಯಾನವನ ಮತ್ತು ಪರಿಸರ-ಸೂಕ್ಷ್ಮ ಮಾಗುರಿ ಮೊಟ್ಟಾಪುಂಗ್ ಮೈದಾನ ಪ್ರದೇಶಕ್ಕೆ ಹತ್ತಿರದ ಸ್ಥಳದಿಂzಲೇ ಆಗಸವನ್ನು ವ್ಯಾಪಿಸುತ್ತಿರುವ ಹೊಗೆ ಮತ್ತು ಬೆಂಕಿ ಕಾಣಿಸುತ್ತಿದೆ. ಮಧ್ಯಾಹ್ನ .೪೦ ಗಂಟೆಯ ವೇಳೆಗೆ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರನೆ ಕಂಡುಬಂದಿರುವ ಬೆಂಕಿಗೆ  ಕಾರಣ ಇನ್ನೂ ಪತ್ತೆಯಾಗಿಲ್ಲಎಂದು ಒಐಎಲ್ ಹಿರಿಯ ವ್ಯವಸ್ಥಾಪಕ (ಕಾರ್ಪೊರೇಟ್ ಸಂವಹನ) ಜಯಂತ ಬೋರ್ಮುಡೊಯ್ ತಿಳಿಸಿದರು. ಘಟನೆಯಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ (ಒಎನ್ಜಿಸಿ) ಫೈರ್ಮ್ಯಾನ್ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುವುದನ್ನು ಹೊರತುಪಡಿಸಿ, ಬೇರೆ ಯಾರಿಗೂ ಗಾಯಗಳಾಗಿಲ್ಲಎಂದು ಒಐಎಲ್ ಹಿರಿಯ ವ್ಯವಸ್ಥಾಪಕ ಬೋರ್ಮುಡೊಯ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಚೀನಾ ಜೊತೆಗಿನ ಗಡಿ ಬಿಕ್ಕಟ್ಟಿನ ಬಗ್ಗೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಹರಿಹಾಯಲಾರಂಭಿಸಿವೆ. ಸರ್ಕಾರವು ಸತ್ಯವನ್ನು ಅಡಗಿಸಿ ಇಡುತ್ತಿದೆ ಎಂದು ವಿಪಕ್ಷ ದಾಳಿಯ ಮುಂಚೂಣಿಯಲ್ಲಿ ನಿಂತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿಸಿದರು. ವಾಸ್ತವ ಏನೆಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ, ಆದರೆ ಯಾರೋ ಒಬ್ಬರನ್ನು ಖುಷಿಯಲ್ಲಿ ಇರಿಸುವ ಕೆಲಸ ನಡೆಯುತ್ತಿದೆಎಂದು ಹಿಂದಿಯಲ್ಲಿ ಗಾಲಿಬ್ ದ್ವಿಪದಿಯನ್ನು ಬಳಸಿಕೊಂಡು ರಾಹುಲ್ ಅವರು ಗೃಹ ಸಚಿವ ಅಮಿತ್ ಅವರ ಮೇಲೆ 2020 ಜೂನ್ 09ರ ಮಂಗಳವಾರ ದಾಳಿ ನಡೆಸಿದರು. ಇದಕ್ಕೆ ಮುನ್ನ ಅವರು ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ನಡೆಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪ್ರತಿಕ್ರಿಯಿಸಿದ್ದರು. "ಚೀನಿಯರು ಲಡಾಖ್ನಲ್ಲಿ  ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆಯೇ?’ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರಶ್ನಿಸಿದ್ದರು.ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲ ಅವರು ರಕ್ಷಣಾ ಸಚಿವರನ್ನು ರಾಹುಲ್ ಪ್ರಶ್ನೆಗೆ ಉತ್ತರಿಸುವಂತೆ ಆಗ್ರಹಿಸಿದರು. ವಿರೋಧ ಪಕ್ಷದ ಚಿಹ್ನೆಗಳನ್ನು ಹಳಿಯುವುದರಿದ ಭಾರತದ ರಕ್ಷಣೆಯಾಗುವುದಿಲ್ಲಎಂದು ಸುರ್ಜೆವಾಲ  ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಜೂನ್  09 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment