ನಾನು ಮೆಚ್ಚಿದ ವಾಟ್ಸಪ್

Monday, June 22, 2020

ಇಂದಿನ ಇತಿಹಾಸ History Today ಜೂನ್ 22

ಇಂದಿನ ಇತಿಹಾಸ  History Today ಜೂನ್  22  

2020: ನವದೆಹಲಿ: ಪಶ್ಚಿಮ, ಮಧ್ಯ ಅಥವಾ ಪೂರ್ವ ವಲಯಗಳಲ್ಲಿ ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡೆಸುವ ಯಾವುದೇ ಉಲ್ಲಂಘನೆಯನ್ನು ಹಿಮ್ಮೆಟ್ಟಿಸಲು ಭಾರತವು ತನ್ನ ವಿಶೇಷ ಪರ್ವತ ಯುದ್ಧ ಪಡೆಗಳನ್ನು ,೪೮೮ ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ (ಎಲ್‌ಎಸಿ) ರೇಖೆಯಲ್ಲಿ ನಿಯೋಜಿಸಿದೆನರೇಂದ್ರ ಮೋದಿ ಸರ್ಕಾರವನ್ನು ಬಗ್ಗಿಸುವ ಕುತ್ಸಿತ ಉದ್ದೇವಿಟ್ಟುಕೊಂಡಿರುವ ಪಿಎಲ್‌ಎ ಗಡಿಯಾಚೆಯಿಂದ ನಡೆಸಬಹುದಾದ ಯಾವುದೇ ಆಕ್ರಮಣದಿಂದ ಎಲ್‌ಎಸಿಯನ್ನು ರಕ್ಷಿಸಲು ಭಾರತೀಯ ಸೇನೆಗೆ ನಿರ್ದೇಶನ ನೀಡಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು  2020 ಜೂನ್ 22ರ ಸೋಮವಾರ ದೃಢಪಡಿಸಿದವು.  ಕಳೆದ ಕೆಲವು ದಶಕಗಳಿಂದ ಉತ್ತರ ವಲಯದಲ್ಲಿ ಹೋರಾಡಲು ತರಬೇತಿ ಪಡೆದಿರುವ ವಿಶೇಷ ಪಡೆಗಳನ್ನು ಕೆಂಪು ಧ್ವಜಾರೋಹಣ ಯತ್ನಗಳನ್ನು ತಡೆಯಲು ಗಡಿ ಮುಂಚೂಣಿಗೆ ತರಲಾಗಿದೆ. ಪದಾತಿದಳದೊಂದಿಗೆ ಸೇನಾವಾಹನಗಳ ಮೂಲಕ ತಾರು ಹಾಕಿದ ರಸ್ತೆಗಳಲ್ಲಿ ಸಾಗುವ ಪಿಎಲ್‌ಎ ಗೆ ಸವಾಲೊಡ್ಡಲು ಕಾರ್ಗಿಲ್ ಯುದ್ಧದಲ್ಲಿ ಪ್ರದರ್ಶಿಸಿದಂತೆ ಪರ್ವತ ಪ್ರದೇಶಗಲ್ಲಿ ಗೆರಿಲ್ಲಾ ಸಮರ ನಡೆಸಲು ಭಾರತೀಯ ಪರ್ವತ ಪಡೆಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. "ಪರ್ವತದಲ್ಲಿ ಹೋರಾಟದ ಕಲೆ ಕಠಿಣವಾಗಿದೆ, ಏಕೆಂದರೆ ಮಾನವ ಸಾವುನೋವುಗಳ ಸಂಖ್ಯೆಯು ಎತ್ತರದಲ್ಲಿ ಕುಳಿತುಕೊಳ್ಳುವ ಎದುರಾಳಿಯ ಪ್ರತಿ ಪಡೆಗೆ ೧೦ ಆಗಿದೆ. ಉತ್ತರಾಖಂಡ, ಲಡಾಖ್, ಗೂರ್ಖಾ, ಅರುಣಾಚಲ ಮತ್ತು ಸಿಕ್ಕಿಂನ ಪಡೆಗಳು ಶತಮಾನಗಳಿಂದ ಅಪರೂಪದ ಎತ್ತರಕ್ಕೆ ಹೊಂದಿಕೊಂಡಿವೆ. ಆದ್ದರಿಂದ ಅವರ ಹೋರಾಟದ ಸಾಮರ್ಥ್ಯವು ಅಪ್ರತಿಮವಾಗಿದೆ. ಪರ್ವತ ಯುದ್ಧದಲ್ಲಿ ಫಿರಂಗಿ ಮತ್ತು ಕ್ಷಿಪಣಿಗಳು ಅತ್ಯಂತ ನಿಖರತೆಯನ್ನು ಹೊಂದಿರಬೇಕು, ಇಲ್ಲದಿದ್ದರೆ ಅವುಗಳ ಪರ್ವತ ಗುರಿ ಮೈಲುಗಳಷ್ಟು ದೂರದಲ್ಲಿ ತಪ್ಪಿಹೋಗುತ್ತವೆಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಲಡಾಖ್ ಪ್ರದೇಶದಲ್ಲಿ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಉದ್ವಿಗ್ನತೆ ಶಮನಕ್ಕಾಗಿ ಭಾರತ ಮತ್ತು ಚೀನಾ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನೀ ಕಡೆಯಲ್ಲಿರುವ ಚುಶುಲ್ ಎದುರಿನ ಮೋಲ್ಡೋದಲ್ಲಿ ಕೋರ್ ಕಮಾಂಡರ್ ಮಟ್ಟದ ಸಭೆ ನಡೆಸುತ್ತಿದ್ದಾರೆ ಎಂದು ಭಾರತೀಯ ಸೇನಾ ಮೂಲಗಳು  2020 ಜೂನ್ 22ರ ಸೋಮವಾರ ತಿಳಿಸಿದವು.  ಜೂನ್ ೬ರ ಬಳಿಕ ನಡೆಯುತ್ತಿರುವ ಎರಡನೇ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಇದಾಗಿದೆ. ಜೂನ್ ೬ರ ಮಾತುಕತೆಯಲ್ಲಿ ಉಭಯ ಸೇನೆಗಳೂ ವಿವಿಧ ಕಡೆಗಳಲ್ಲಿ ಘರ್ಷಣೆ ನಿಲ್ಲಿಸಬೇಕು ಎಂದು ಒಪ್ಪಿಕೊಳ್ಳಲಾಗಿತ್ತು. ಉಭಯ ಕಡೆಗಳೂ ತಮ್ಮ ಸೈನಿಕರನ್ನು ಎಲ್‌ಎಸಿಯಲ್ಲಿನ ಮೇ ೪ಕ್ಕೆ ಹಿಂದಿನ ಸ್ಥಳಗಳಿಗೆ ವಾಪಸ್ ಕಳುಹಿಸಬೇಕು ಎಂದು ಭಾರತ ಸಲಹೆ ಮಾಡಿತ್ತು. ಭಾರತದ ಸಲಹೆಗೆ ಚೀನಾ ಕಡೆಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ ಮತ್ತು ಸುಮಾರು ೧೦,೦೦೦ಕ್ಕೂ ಹೆಚ್ಚು ಪಡೆಗಳನ್ನು ಜಮಾಯಿಸಿದ್ದ ನೆಲೆಗಳಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವ ಯಾವುದೇ ಸೂಚನೆಗಳನ್ನೂ ಅದು ನೀಡಿರಲಿಲ್ಲ. ಅಸಾಧಾರಣ ಸಂದರ್ಭಗಳಲ್ಲಿ ಮದ್ದುಗುಂಡು ಬಳಸಲು ಪಡೆಗಳಿಗೆ ಅಧಿಕಾರ ಇರುವ ಎಲ್‌ಎಸಿಯ ಸ್ಥಳಗಳಲ್ಲಿ ಸೇನಾ ನಿಯೋಜನೆಯ ನಿಯಮಗಳಲ್ಲಿ ಬದಲಾವಣೆ ಮಾಡುವ ಬಗ್ಗೆ ಕೂಡಾ ಭಾರತ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿದವು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ವಿಶ್ವದಲ್ಲಿ ಲಕ್ಷ ಜನಸಂಖ್ಯೆಗೆ ಇರುವ ಕೊರೊನಾವೈರಸ್ ಕಾಯಿಲೆಯ (ಕೋವಿಡ್ -೧೯) ಪ್ರಮಾಣಕ್ಕೆ ಹೋಲಿಸಿದರೆ, ಭಾರತವು ಅತ್ಯಂತ ಕಡಿಮೆ ಪ್ರಕರಣಗಳಿರುವ ದೇಶಗಳಲ್ಲಿ ಒಂದಾಗಿದೆ ಮತ್ತು ಚೇತರಿಸಿಕೊಂಡವರು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರವನ್ನು ವಿಸ್ತರಿಸುತ್ತಲೇ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ  2020 ಜೂನ್ 22ರ ಸೋಮವಾರ ತಿಳಿಸಿತು. ಕೇಂದ್ರ ಆರೋಗ್ಯ ಸಚಿವಾಲಯವು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಭಾನುವಾರದ ವರದಿಯನ್ನು ಉಲ್ಲೇಖಿಸಿತು.  "ಪ್ರತಿ ಲಕ್ಷ ಜನಸಂಖ್ಯೆಗೆ ಭಾರತದ ಪ್ರಕರಣಗಳು ೩೦.೦೪ ಆಗಿದ್ದರೆ, ಜಾಗತಿಕ ಸರಾಸರಿ ಅದರ ಮೂರು ಪಟ್ಟು ಅಂದರೆ ೧೧೪.೬೭ ರಷ್ಟಿದೆ" ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿತುಅಮೆರಿPವು ಪ್ರತಿ ಲಕ್ಷ ಜನಸಂಖ್ಯೆಗೆ ೬೭೧.೨೪ ಪ್ರಕರಣಗಳನ್ನು ಹೊಂದಿದ್ದರೆ, ಜರ್ಮನಿ, ಸ್ಪೇನ್ ಮತ್ತು ಬ್ರೆಜಿಲ್‌ನ ಪ್ರಕರಣಗಳ ಸಂಖ್ಯೆ ಕ್ರಮವಾಗಿ ೫೮೩.೮೮, ೫೨೬.೨೨ ಮತ್ತು ೪೮೯.೪೨ ಆಗಿದೆ ಎಂದು ಅದು ಹೇಳಿತು.  " ಕಡಿಮೆ ಅಂಕಿ ಅಂಶವು ಕೋವಿಡ್-೧೯ ಸೋಂಕಿನ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೈಗೊಂಡ ಶ್ರೇಣೀಕೃತ, ಪೂರ್ವಭಾವಿ ಮತ್ತು ಕ್ರಿಯಾತ್ಮಕ ವಿಧಾನಕ್ಕೆ ಸಾಕ್ಷಿಯಾಗಿದೆ" ಎಂದು ಸಚಿವಾಲಯ ಹೇಳಿತುಕಳೆದ ೨೪ ಗಂಟೆಗಳಲ್ಲಿ ೧೪,೮೨೧ ಸೋಂಕುಗಳು ಮತ್ತು ೪೪೫ ಸಾವುಗಳು ಸಂಭವಿಸಿದ ನಂತರ ಭಾರತದ ಸೋಂಕಿನ ಪ್ರಮಾಣ ,೨೫,೨೮೨ ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಸೋಮವಾರ ತೋರಿಸಿದೆ. ದೇಶದ ಸಾವಿನ ಸಂಖ್ಯೆ ೧೩,೬೯೯ಕ್ಕೆ ಏರಿದೆ. ಆರೋಗ್ಯ ಸಚಿವಾಲಯದ ಡ್ಯಾಶ್‌ಬೋರ್ಡ್ ಪ್ರಕಾರ, ,೭೪,೩೮೪ ಸಕ್ರಿಯ ಕೋವಿಡ್ -೧೯ ಪ್ರಕರಣಗಳಿವೆ ಮತ್ತು ,೩೭,೧೯೫ ಜನರು ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ,೪೪೦ ಕೋವಿಡ್ -೧೯ ರೋಗಿಗಳನ್ನು ಗುಣಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ(ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷವನ್ನು  2020 ಜೂನ್ 22ರ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಭದ್ರತಾ ಪಡೆಗಳನ್ನು ಪದೇ ಪದೇ ಅವಮಾನಿಸುವುದು ಮತ್ತು ಅವರ ಶೌರ್ಯವನ್ನು ಪ್ರಶ್ನಿಸುವುದನ್ನು ಬಿಟ್ಟು ಬಿಡಬೇಕು ಎಂದು ಆಗ್ರಹಿಸಿದರು. ಟ್ವಿಟ್ಟರ್ ಖಾತೆಯಲ್ಲಿ ಸಂದೇಶವೊಂದನ್ನು ಪ್ರಕಟಿಸಿದ ನಡ್ಡಾಪಡೆಗಳನ್ನು ಪದೇ ಪದೇ ಅವಮಾನಿಸುವುದನ್ನು, ಅವರ ಶೌರ್‍ಯವನ್ನು ಪ್ರಶ್ನಿಸುವುದನ್ನು ದಯವಿಟ್ಟು ನಿಲ್ಲಿಸಿ. ಟ್ವಿಟ್ಟರ್  ಪ್ರಕಟಣೆಯ ಮೂಲಕ ನೀವು ವಾಯುದಾಳಿ ಮತ್ತು ಸರ್ಜಿಕಲ್ ದಾಳಿ ನಡೆಸಿದ್ದೀರಿ. ದಯವಿಟ್ಟು ವಿಶೇಷವಾಗಿ ಇಂತಹ ಸಂದರ್ಭಗಳಲ್ಲಿ ರಾಷ್ಟ್ರೀಯ ಏಕತೆಯ ನೈಜ ಅರ್ಥವನ್ನು ಅರಿತುಕೊಳ್ಳಿ, ಸುಧಾರಿಸಿಕೊಳ್ಳಲು ಈಗಲೂ ತಡವಾಗಿಲ್ಲಎಂದು ನಡ್ಡಾ ಬರೆದರು. ಲಡಾಖ್‌ನಲ್ಲಿ ಜೂನ್ ೧೫ರಂದು ಭಾರತ ಮತ್ತು ಚೀನೀ ಪಡೆಗಳ ಮಧ್ಯೆ ನಡೆದ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ ಮನಮೋಹನ್ ಸಿಂಗ್ ಅವರ ಹೇಳಿಕೆಗೆ ನಡ್ಡಾ ಅವರು ಪ್ರತಿಕ್ರಿಯೆ ನೀಡಿದರು. ಘರ್ಷಣೆಯಲ್ಲಿ ೨೦ ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು.  ಶುಕ್ರವಾರ ಸರ್ವಪಕ್ಷ ಸಭೆಯಲ್ಲಿ  ಪ್ರಧಾನಿ ಮೋದಿಯವರು ನೀಡಿದ ಹೇಳಿಕೆಯು ವಿವಾದ ಹುಟ್ಟು ಹಾಕಿದ್ದನ್ನು ಉಲ್ಲೇಖಿಸಿದ ಮನಮೋಹನ್ ಸಿಂಗ್ ಅವರು ತಮ್ಮ ಮಾತುಗಳ ಪರಿಣಾಮ ಏನಾಗುತ್ತದೆ ಎಂಬುದನ್ನು ಪ್ರಧಾನಿ ಮೋದಿ ಅವರು ಸದಾಕಾಲ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಲಡಾಖ್‌ನಲ್ಲಿ ಚೀನೀ ಸೇನೆಯ ಜೊತೆಗಿನ ಭೀಕರ ಘರ್ಷಣೆಯಲ್ಲಿ ೨೦ ಭಾರತೀಯ ಸೈನಿಕರು ಸಾವನ್ನಪ್ಪಿದಾಗಿನಿಂದ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ಮೇಲೆ ಮಾಡುತ್ತಿರುವ ದಾಳಿಯನ್ನು ಇನ್ನಷ್ಟು ಹೆಚ್ಚಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾ ಹೊಗಳುತ್ತಿರುವುದು ಏಕೆ ಎಂದು ಪ್ರಶ್ನಿಸಿ  2020 ಜೂನ್ 22ರ ಸೋಮವಾರ ಟ್ವೀಟ್ ಮಾಡಿದರು. ದಿನಕ್ಕೆ ಸಾಮಾನ್ಯವಾಗಿ ಒಂದು ಟ್ವೀಟ್ ಮಾಡುತ್ತಿದ್ದ ರಾಹುಲ್ ಇದೀಗ ಟ್ವೀಟ್ ಸಂಖ್ಯೆಯನ್ನು ಎರಡಕ್ಕೆ ಏರಿಸಿದರು. ದ್ವಿಪಕ್ಷೀಯ ಬಾಂಧವ್ಯದ ಉದ್ವಿಗ್ನತೆ ಮತ್ತು ಗಲ್ವಾನ್ ಪ್ರದೇಶದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಭಾರತ ವಿರೋಧ್ಧಿ ಹೋರಾಟದ ಮಧ್ಯೆಯೂ ಚೀನಾವು ಏಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವುದರಲ್ಲಿ ನಿರತವಾಗಿದೆ ಎಂದು ಅವರು ಪ್ರಶ್ನಿಸಿದರು. ‘ಚೀನಾ ನಮ್ಮ ಸೈನಿಕರನ್ನು ಕೊಂದಿತು. ಚೀನಾ ನಮ್ಮ ಭೂಮಿಯನ್ನು ತೆಗೆದುಕೊಂಡಿತು. ಹಾಗಾದರೆ, ಸಂಘರ್ಷದ ಸಂದರ್ಭದಲ್ಲಿ ಚೀನಾವು ಶ್ರೀ ಮೋದಿಯನ್ನು ಏಕೆ ಹೊಗಳಿದೆ?’ ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಶುಕ್ರವಾರದ ಸರ್ವಪಕ್ಷ ಸಭೆಯಲ್ಲಿ ಗಡಿ ಸಭೆಯಲ್ಲಿ ಪ್ರಧಾನ ಮಂತ್ರಿಯ ಕಾಮೆಂಟ್‌ಗಳನ್ನು ಚೀನಾದ ಸಾಮಾಜಿಕ ಮಾಧ್ಯಮ ಹೇಗೆ ಸ್ವಾಗತಿಸಿತು ಎಂಬುದಾಗಿ ವಿವರಿಸಿದ ಪತ್ರಿಕಾ ವರದಿಯೊಂದನ್ನು ರಾಹುಲ್ ಟ್ವೀಟ್‌ಗೆ ಜೋಡಿಸಿದರು. ಚೀನಾದೊಂದಿಗಿನ ಗಡಿ ಪರಿಸ್ಥಿತಿ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ, ಪ್ರಧಾನಿ "ಯಾರೂ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿಲ್ಲ, ಅಥವಾ ಪ್ರಸ್ತುತ ಭಾರತೀಯ ಭೂಪ್ರದೇಶದಲ್ಲಿ ಯಾರೂ ಇಲ್ಲ, ಮತ್ತು ಯಾವುದೇ ಭಾರತೀಯ ಠಾಣೆಯನ್ನು ವಶಪಡಿಸಿಕೊಳ್ಳಲಾಗಿಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದರು .  (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜೂನ್  22  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment