ನಾನು ಮೆಚ್ಚಿದ ವಾಟ್ಸಪ್

Friday, June 26, 2020

ಇಂದಿನ ಇತಿಹಾಸ History Today ಜೂನ್ 26

ಇಂದಿನ ಇತಿಹಾಸ  History Today ಜೂನ್  26  

2020:  ನವದೆಹಲಿ: ಪೂರ್ವ ಲಡಾಕ್ನಲ್ಲಿನ ಆಕ್ರಮಣಕಾರಿ ಸೇನಾ ಭಂಗಿಯ ಮೂಲಕ ,೪೮೮ ಕಿಲೋಮೀಟರ್ ಉದ್ದದ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಯುದ್ಧದಂತಹ ಪರಿಸ್ಥಿತಿಯನ್ನು ಹುಟ್ಟುಹಾಕಲು ಪ್ರಯತ್ನಿಸುವ ಮೂಲಕ ಚೀನಾವು ದ್ವಿಪಕ್ಷೀಯ ಬಾಂಧವ್ಯದ ಗಡಿಯಾರವನ್ನು ೧೯೯೦ರ ದಶಕಕ್ಕೆ ತಿರುಗಿಸಿದೆ ಎಂದು ಭಾರತ 2020 ಜೂನ್ 26ರ ಶುಕ್ರವಾರ ಆರೋಪಿಸಿತು.  ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್) ದಂಡನಾಯಕನೂ ಆಗಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ೧೯೯೩ರ ಶಾಂತಿ ಒಪ್ಪಂದವನ್ನು ಚೂರುಚೂರಾಗಿ ಹರಿದು ಹಾಕಿದ್ದಾರೆ ಎಂದು ಹೇಳುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದ್ವಿಪಕ್ಷೀಯ ಬಾಂಧವ್ಯಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವಂತಹ ಅಂತಿಮ ರಾಜತಾಂತ್ರಿಕ  ಅಂತಿಮ ಎಚ್ಚರಿಕೆ ನೀಡಿತು. ೧೯೯೩ರಲ್ಲಿ ಆಗಿನ ಪ್ರಧಾನಿ ಪಿವಿ ನರಸಿಂಹ ರಾವ್-ಜಿಯಾಂಗ್ ಝಮಿನ್ ಯುಗದಲ್ಲಿ ಸಹಿ ಹಾಕಿದ ಒಪ್ಪಂದವು ಮಿಲಿಟರಿ ಪಡೆಗಳನ್ನು ಎಲ್ಎಸಿಯ ಉದ್ದಕ್ಕೂಕನಿಷ್ಠ ಮಟ್ಟದಲ್ಲಿಇರಿಸಬೇಕು ಎಂದು ಸ್ಪಷ್ಟಪಡಿಸುತ್ತದೆ. ಇದಕ್ಕೆ ಅನುಗುಣವಾಗಿ ಚೀನಾವು ಎಲ್ಎಸಿಯಿಂದ ಪಿಎಲ್ ಪಡೆಗಳನ್ನು ಹಿಂತೆಗೆದುಕೊಂಡು ಉದ್ವಿಗ್ನತೆ ಶಮನಗೊಳಿಸದೇ ಇದ್ದಲ್ಲಿ ಕಳೆದ ಮೂರು ದಶಕಗಳ ದ್ವಿಪಕ್ಷೀಯ ಬಾಂಧವ್ಯದಲ್ಲಿ ಗಳಿಸಿದ ಎಲ್ಲಾ ಲಾಭಗಳು ನಷ್ಟವಾಗುತ್ತವೆ ಎಂದು ಗುರುವಾರ ತಿಳಿಸುವ ಮೂಲಕ ಮೂಲಕ ಚೀನಾಕ್ಕೆ ಭಾರತ ಕಡೆಯ ಎಚ್ಚರಿಕೆಯನ್ನು ನೀಡಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ‘ನಾನು ಇಂದಿರಾ ಗಾಂಧಿ ಮೊಮ್ಮಗಳು. ಬಿಜೆಪಿಯ ಅಘೋಷಿತ ವಕ್ತಾರರಂತೆ ವರ್ತಿಸುತ್ತಿರುವ ವಿರೋಧ ಪಕ್ಷದ ನಾಯಕರ ರೀತಿ ನಾನಲ್ಲ. ಸಾಧ್ಯವಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಿಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ಸರ್ಕಾರಕ್ಕೆ  2020 ಜೂನ್ 26ರ ಶುಕ್ರವಾರ ಸವಾಲು ಹಾಕಿದರು. ಸತ್ಯವನ್ನು ನುಡಿದದ್ದಕ್ಕೆ ವಿವಿಧ ಇಲಾಖೆಗಳ ಮೂಲಕ ಉತ್ತರ ಪ್ರದೇಶ ಸರ್ಕಾರ ನನಗೆ ಬೆದರಿಕೆ ಹಾಕುವ ಕಾರ್ಯದಲ್ಲಿ ತೊಡಗಿದೆಎಂದು ಅವರು ಆರೋಪಿಸಿದರು.  ಕಾನ್ಪುರದ ಮಕ್ಕಳ ಆಶ್ರಯ ನಿಲಯದ ಕುರಿತು ನೀಡಿರುವ ಹೇಳಿಕೆಗೆ ಮೂರು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್ ನೀಡಿದ ಬಳಿಕ ಪ್ರಿಯಾಂಕಾ ಪ್ರತಿಕ್ರಿಯೆ ನೀಡಿದರು. ರಾಜ್ಯ ಸರ್ಕಾರದ ನಿಲಯದಲ್ಲಿ ಇಬ್ಬರು ಬಾಲಕಿಯರು ಗರ್ಭಿಣಿಯರಾಗಿರುವ ಬಗ್ಗೆ ಮಾಧ್ಯಮಗಳು ಪ್ರಕಟಿಸಿದ ವರದಿಯನ್ನು ಪ್ರಸ್ತಾಪಿಸಿ ಪ್ರಿಯಾಂಕಾ ಅವರು ಫೇಸ್ಬುಕ್ನಲ್ಲಿ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ಜನರ ಸೇವಕಿಯಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಸರ್ಕಾರ ಸತ್ಯವನ್ನು ಬಹಿರಂಗಪಡಿಸಬೇಕು. ಸುಳ್ಳು ಹೇಳಬಾರದು. ನನ್ನ ವಿರುದ್ಧ ಯಾವುದೇ ರೀತಿ ಕ್ರಮಕೈಗೊಂಡರೂ ಸತ್ಯವನ್ನೇ ಜನರ ಮುಂದಿಡುತ್ತೇನೆಎಂದು ಪ್ರಿಯಾಂಕಾ ಶುಕ್ರವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶ ಸರ್ಕಾರ ನನ್ನ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವ ದೈರ್ ಮಾಡಲಿ. ನಾನು ಸತ್ಯವನ್ನೇ ಎತ್ತಿ ತೋರಿಸುತ್ತೇನೆ. ಸಾರ್ವಜನಿಕ ಸೇವಕಿಯಾಗಿ ಉತ್ತರ ಪ್ರದೇಶದ ಜನರ ಕಡೆಗಿನ ನನ್ನ ಕರ್ತವ್ಯ ಇದು. ಸರ್ಕಾರದ ಅಪಪ್ರಚಾರವನ್ನು ಪ್ರಚಾರ ಮಾಡುವುದು ನನ್ನ ಕರ್ತವ್ಯ ಅಲ್ಲ. ಉತ್ತರ ಪ್ರದೇಶ ಸರ್ಕಾರವು ನನಗೆ ಬೆದರಿಕೆ ಹಾಕಲು ಸಮಯ ವ್ಯರ್ಥ ಮಾಡುತ್ತಿದೆಎಂದು ಪ್ರಿಯಾಂಕಾ ದೂರಿದ್ದಾರೆ.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಅಂತಾರಾಷ್ಟ್ರೀಯ ವಿಮಾನ ಯಾನ, ಶಿಕ್ಷಣ ಸಂಸ್ಥೆಗಳು ಮತ್ತು ಮೆಟ್ರೋ ಸೇವೆಗಳತ್ತ ಗಮನಹರಿಸಿರುವ ಕೇಂದ್ರ ಸರ್ಕಾರ, ಅನ್ ಲಾಕ್ ಸಲುವಾಗಿ ಸಮಾಲೋಚನೆ ಪ್ರಕ್ರಿಯೆಯನ್ನು ಆರಂಭಿಸಿದ್ದು, ಮುಂದಿನ ವಾರ ಮಾರ್ಗಸೂಚಿಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕೃತ ಮೂಲಗಳು 2020 ಜೂನ್ 26ರ ಶುಕ್ರವಾರ ತಿಳಿಸಿದವು. "ಹೌದು, ಅನ್ ಲಾಕ್ ಕುರಿತು ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ" ಎಂದು ಯೋಜನೆಯಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿಯೊಬ್ಬರು ದೃಢ ಪಡಿಸಿದರು.  ಮಧ್ಯೆ, ಜುಲೈ ೧೫ ರವರೆಗೆ ಯಾವುದೇ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅನುಮತಿ ನೀಡುವುದಿಲ್ಲ ಎಂದು  ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಬಳಿಕ ನಂತರ ಶುಕ್ರವಾರ,) ಸ್ಪಷ್ಟಪಡಿಸಿತು. ಆದಾಗ್ಯೂ, ಆಯ್ದ ಮಾರ್ಗಗಳಲ್ಲಿ ಪ್ರಕರಣಗಳನ್ನು ಆಧರಿಸಿ ನಿಗದಿತ ಅಂತಾರಾಷ್ಟ್ರೀಯ ನಿಗದಿತ ವಿಮಾನಗಳಿಗೆ ಅನುಮತಿ ನೀಡಬಹುದು ಎಂದು ಅದು ಹೇಳಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಮುಂಬೈ: ೧೯೯೩ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಮತ್ತು ತಲೆಮರೆಸಿಕೊಂಡ ಆರೋಪಿ ಟೈಗರ್ ಮೆಮನ್ ಸಹೋದರ ಯೂಸುಫ್ ಮೆಮನ್  2020 ಜೂನ್ 26ರ ಶುಕ್ರವಾರ  ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಾಸಿಕ್ ರಸ್ತೆ ಕಾರಾಗೃಹದಲ್ಲಿ ಸಾವನ್ನಪ್ಪಿದ್ದಾನೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದರು.  ಸಾವಿಗೆ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಮತ್ತು ಶವವನ್ನು ಶವಪರೀಕ್ಷೆಗಾಗಿ ಧುಲೆಗೆ ಕಳುಹಿಸಲಾಗುವುದು ಎಂದು ಅಧಿಕಾರಿ ಹೇಳಿದರು.  ನಾಸಿಕ್ ಪೊಲೀಸ್ ಕಮಿಷನರ್ ವಿಶ್ವಾಸ್ ನಂಗ್ರೆ-ಪಾಟೀಲ್ ಅವರು ಮೆಮನ್ ಸಾವನ್ನು ದೃಢ ಪಡಿಸಿದರು. ದೇಶಭ್ರಷ್ಟ ಪಾತಕಿ ದಾವೂದ್ ಇಬ್ರಾಹಿಂ ಜೊತೆಗೆ ಟೈಗರ್ ಮೆಮನ್ ೧೯೯೩ರ ಮುಂಬೈ ಸರಣಿ ಸ್ಫೋಟದ ಪಿತೂರಿಯ ಸೂತ್ರಧಾರಿಯಾಗಿದ್ದರೆ, ಯೂಸುಫ್ ಮುಂಬೈನ ಅಲ್ ಹುಸೇನಿ ಕಟ್ಟಡದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ತನ್ನ ಫ್ಲಾಟ್ ಮತ್ತು ಗ್ಯಾರೇಜ್ನ್ನು ಒದಗಿಸಿದ್ದ ಎಂದು ಆಪಾದಿಸಲಾಗಿತ್ತು. ವಿಶೇಷ ಟಾಡಾ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪ್ರಕರಣದಲ್ಲಿ ಬಂಧಿತನಾಗಿದ್ದ ಮತ್ತೊಬ್ಬ ಮೆಮನ್ ಸಹೋದರ ಯಾಕೂಬ್ ಮೆಮನ್ನನ್ನು ೨೦೧೫ ರಲ್ಲಿ ಗಲ್ಲಿಗೇರಿಸಲಾಗಿತ್ತು. ೧೯೯೩ರ ಮಾರ್ಚ್ ೧೨ರಂದು ಮುಂಬೈ ನಗರದಲ್ಲಿ ಸಂಭವಿಸಿದ ೧೨ ಸ್ಫೋಟಗಳಲ್ಲಿ ಕನಿಷ್ಠ ೨೫೦ ಜನರು ಸಾವನ್ನಪ್ಪಿ,  ನೂರಾರು ಜನರು ಗಾಯಗೊಂಡಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020:  ನವದೆಹಲಿ: ಮೂರು ವಿಡಿಯೋ ಸಂದೇಶಗ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2020 ಜೂನ್ 26ರ ಶುಕ್ರವಾರ ಚೀನೀ ಆಕ್ರಮಣಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ದಾಳಿ ನಡೆಸಿದರು.  ಸೋನಿಯಾ ಗಾಂಧಿ, ಪುತ್ರ ರಾಹುಲ್ ಮತ್ತು ಪುತ್ರಿ ಪ್ರಿಯಾಂಕಾ ಅವರು ಭಾರತ-ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡು, ಚೀನೀ ಸೇನೆಯು ಆಕ್ರಮಿಸಿಕೊಂಡಿರುವ ಭಾರತದ ಭೂಪ್ರದೇಶದ ವ್ಯಾಪ್ತಿ ಬಗ್ಗೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದರು.  ಚೀನಾವು ನಮ್ಮ ಪ್ರದೇಶವನ್ನು ದಾಟಿಲ್ಲಎಂಬ ಪ್ರಧಾನಿ ಮೋದಿಯವರ ಹೇಳಿಕೆಗಳನ್ನು ಉಲ್ಲೇಖಿಸಿದ ಸೋನಿಯಾ ಗಾಂಧಿ, ’ಆದರೆ, ರಕ್ಷಣಾ ತಜ್ಞರು, ಉಪಗ್ರಹ ಚಿತ್ರಗಳು ಮತ್ತು ವಿದೇಶಾಂಗ ಸಚಿವಾಲಯದಿಂದ ಹೊರಬರುವ ಹೇಳಿಕೆಗಳ ಪ್ರಕಾರ ಚೀನಾದ ಪಡೆಗಳು ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವುದು ಕಂಡುಬರುತ್ತದೆಎಂದು ಹೇಳಿದರು.  ಜೂನ್ ತಿಂಗಳ ಆರಂಭದಲ್ಲಿ ಪೂರ್ವ ಲಡಾಖ್ ಗಲ್ವಾನ್ ಪ್ರದೇಶದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್) ಸೈನಿಕರೊಂದಿಗೆ ಹಿಂಸಾತ್ಮಕ ಮುಖಾಮುಖಿಯಲ್ಲಿ ಹುತಾತ್ಮರಾದ ೨೦ ಸೈನಿಕರಿಗೆ ಗೌರವ ಸಲ್ಲಿಕೆಯೊಂದಿಗೆ ಆರಂಭವಾಗುವ ಮೂರೂ ವಿಡಿಯೋ ಸಂದೇಶಗಳಲ್ಲಿ, ಮುಂದುವರೆದಂತೆ ತ್ರಿವಳಿ ನಾಯಕರೂ ಪ್ರಧಾನಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಹುತಾತ್ಮ ಸೈನಿಕರಿಗೆ ದೇಶವು ಗೌರವ ಸಲ್ಲಿಸುತ್ತಿರುವಾಗ, ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಗಳಿಂದ ಹಿಂದೆ ಸರಿಯಲು ಸಾಧ್ಯವಿಲ. ಚೀನೀ ಸೇನೆಯು ಆಕ್ರಮಿಸಿಕೊಂಡಿದೆ ಎಂದು ಹೇಳಲಾಗಿರುವ ಭಾರತೀಯ ಭೂಪ್ರದೇಶವನ್ನು ಮರಳಿ ಪಡೆಯಬೇಕು ಎಂದು ಸೋನಿಯಾ ಗಾಂಧಿ ಹೇಳಿದರು. ಸೇನೆಗೆ ಸರ್ವರೀತಿಯ ಬೆಂಬಲವನ್ನು ಸರ್ಕಾರ ನೀಡಬೇಕು. ಇದು ನಿಜವಾದ ದೇಶಭಕ್ತಿಎಂದು ತಮ್ಮ ಮೂರು ನಿಮಿಷಗಳ ವಿಡಿಯೋ ಸಂದೇಶದಲ್ಲಿ ಸೋನಿಯಾ ನುಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020:  ನವದೆಹಲಿ: ಕೋವಿಡ್ -೧೯ ಪ್ರಕರಣಗಳಲ್ಲಿ ಅತಿ ಹೆಚ್ಚು ಏಕದಿನ ಏರಿಕೆಯಲ್ಲಿ 2020 ಜೂನ್ 26ರ ಶುಕ್ರವಾರ  ೧೭,೦೦೦ ದಾಟುವುದರೊಂದಿಗೆ ಭಾರತದ ಸಂಖ್ಯೆ ,೯೦,೪೦೧ ಕ್ಕೆ ತಲುಪಿತು.  ೪೦೭ ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ ೧೫,೩೦೧ಕ್ಕೆ ಏರಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದವು.  ಬೆಳಗ್ಗೆ ಗಂಟೆಗೆ ನವೀಕರಿಸಲಾದ ಅಂಕಿಅಂಶಗಳ ಪ್ರಕಾರ ದೈನಂದಿನ ಕೋವಿಡ್-೧೯ ಪ್ರಕರಣಗಳು ಅತಿ ಹೆಚ್ಚು ಅಂದರೆ ೧೭,೨೯೬ ಪ್ರಕರಣಗಳು ಎಂಬುದಾಗಿ ದಾಖಲಾಗಿದೆ.  ಭಾರತ ಸತತ ಏಳನೇ ದಿನ ೧೪,೦೦೦ ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು, ಜೂನ್ ರಿಂದ ೨೬ ರವರೆಗೆ ,೯೯,೮೬೬ ಸೋಂಕುಗಳ ಉಲ್ಬಣಕ್ಕೆ ಸಾಕ್ಷಿಯಾಗಿದೆ.  ಸಕ್ರಿಯ ಪ್ರಕರಣಗಳ ಸಂಖ್ಯೆ ,೮೯, ೪೬೩ ಆಗಿದ್ದು, ,೮೫,೬೩೬ ಜನರು ಚೇತರಿಸಿಕೊಂಡಿದ್ದಾರೆ. "ಹೀಗಾಗಿ, ಇದುವರೆಗೆ ಸುಮಾರು ೫೮.೨೪ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು.  ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಜೂನ್ ೨೫ ರವರೆಗೆ ಒಟ್ಟು ೭೭,೭೬,೨೨೮ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಗುರುವಾರ ,೧೫,೪೪೬ ಮಾದರಿಗಳನ್ನು ಪರೀಕ್ಷಿಸಲಾಗಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)
 
ಇಂದಿನ ಇತಿಹಾಸ  History Today ಜೂನ್  26  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment