Friday, June 28, 2019

ಇಂದಿನ ಇತಿಹಾಸ History Today ಜೂನ್ 26

ಇಂದಿನ ಇತಿಹಾಸ History Today  ಜೂನ್  26
2019: ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ ಪ್ರಾಮಾಣಿಕತೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಭಿಸಿರುವ ಪ್ರಚಂಡ ವಿಜಯವನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಪಕ್ಷವು ಮತದಾರರನ್ನು ಅವಮಾನಿಸಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ತೀವ್ರ ಟೀಕಾ ಪ್ರಹಾರ ನಡೆಸಿದರು. ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಅರ್ಪಿಸುವ ಗೊತ್ತುವಳಿ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ಪ್ರಧಾನಿಜನರ ತೀರ್ಪನ್ನೇ ಪ್ರಶ್ನಿಸುವ ಮೂಲಕ ಮತದಾರರನ್ನೇ ಅವಮಾನಿಸಿರುವ ವಿರೋಧ ಪಕ್ಷದ ದುರಹಂಕಾರಕ್ಕೂ ಒಂದು ಮಿತಿ ಇದೆ ಎಂದು ಹೇಳಿದರು.  ‘ಕಾಂಗ್ರೆಸ್ ಸಮಸ್ಯೆಯಿಂದ ನರಳುತ್ತಿದೆ. ಅದಕ್ಕೆ ಪರಾಭವವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ, ಮತ್ತು ವಿಜಯವನ್ನು ಜೀರ್ಣಸಿಕೊಳ್ಳಲು ಆಗುತ್ತಿಲ್ಲ ಎಂದು ಪ್ರಧಾನಿ ನುಡಿದರು.  ‘ಇಷ್ಟೊಂದು ದೊಡ್ಡ ಜನಾದೇಶದ ಬಳಿಕ ನೀವು  (ಬಿಜೆಪಿ) ಗೆದ್ದಿದ್ದೀರಿ, ರಾಷ್ಟ್ರ ಸೋತಿದೆ ಎಂದು ನೀವು ಹೇಳುತ್ತಿದ್ದೀರಿ. ಕಾಂಗ್ರೆಸ್ ಸೋತರೆ ರಾಷ್ಟ್ರ ಸೋತಂತಾಗುತ್ತದೆಯೇ? ದುರಂಕಾರಕ್ಕೂ ಒಂದು ಮಿತಿ ಇದೆ ಎಂದು ಅವರು ಹೇಳಿದರು.  ಇಂತಹ ಭಾಷೆಯನ್ನು ಬಳಸುವ ಮೂಲಕ ಕಾಂಗ್ರೆಸ್ ಮತದಾರರನ್ನು ನೋಯಿಸಿದೆ. ’ಕೆಲವು ನಾಯಕರು ಬಿಜೆಪಿ ಮತ್ತು ಮಿತ್ರ ಪಕ್ಷಗಳು ಚುನಾವಣೆ ಗೆದ್ದಿವೆ, ಆದರೆ ರಾಷ್ಟ್ರ ಸೋತಿದೆ ಎಂಬುದಾಗಿ ಹೇಳಿದಾಗ ನನಗೆ ಬೇಸರವಾಗಿದೆ.. ಹೇಳಿಕೆಗಳು ದುರದೃಷ್ಟಕರ ಎಂಬುದಾಗಿ ಸ್ಪಷ್ಟವಾಗಿ ಹೇಳಲು ನಾನು ಬಯಸುತ್ತೇನೆ. ಮತದಾರರ ವಿವೇಚನೆಯನ್ನು ಏಕೆ ಪ್ರಶ್ನಿಸುತ್ತೀರಿ?’ ಎಂದು ಅವರು ಕೇಳಿದರು.  ‘ತಾವು ಗೆಲ್ಲದೇ ಇದ್ದರೆ ಭಾರತ ಗೆಲ್ಲವುದಿಲ್ಲ ಎಂದು ಕಾಂಗ್ರೆಸ್ ಪಕ್ಷದಲ್ಲಿನ ನಮ್ಮ ಗೆಳೆಯರು ಭಾವಿಸುತ್ತಾರೆಯೇ? ಭಾರತ ಮತ್ತು ಕಾಂಗ್ರೆಸ್ ಒಂದೇಯಾ? ಇಲ್ಲ. ಅವು ಒಂದೇ ಅಲ್ಲ. ನಮ್ಮ ಚುನಾವಣಾ ಪ್ರಕ್ರಿಯೆಯನ್ನು ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವುದು ಮುಖ್ಯ ಎಂದು ಅವರು ನುಡಿದರು.  ‘ಕಾಂಗ್ರೆಸ್ ವಾದಗಳನ್ನು ಒಪ್ಪುವುದಾದರೆ ಪಕ್ಷವು ವಯನಾಡು ಮತ್ತು ರಾಯ್ ಬರೇಲಿ ಸ್ಥಾನಗಳಲ್ಲಿ ಪಡೆದಿರುವ ಗೆಲುವು ಕೂಡಾ ರಾಷ್ಟ್ರದ ಪರಾಭವವೇ?’ ಎಂದು ಅಚ್ಚರಿ ವ್ಯಕ್ತ ಪಡಿಸಿದರು.  ‘ಸಂಕುಚಿತ ಮನೋಭಾವ ಮತ್ತು ವಿಕೃತ ಯೋಚನೆಗಳ ಪರಿಣಾಮವಾಗಿ ಕೆಲವು ವ್ಯಕ್ತಿಗಳು ಜನಾದೇಶವನ್ನು ಒಪ್ಪುತ್ತಿಲ್ಲ ಮತ್ತು ನೀವು ಚುನಾವಣೆ ಗೆದ್ದಿದ್ದೀರಿ, ಆದರೆ ರಾಷ್ಟ್ರ ಸೋತಿದೆ ಎಂದು ಹೇಳುತ್ತಿದ್ದಾರೆ. ನಮ್ಮ ಪ್ರಜಾಪ್ರಭುತ್ವಕ್ಕೆ ಇದಕ್ಕಿಂತ ಹೆಚ್ಚಿನ ಅವಮಾನ ಬೇರೊಂದು ಇರಲು ಸಾಧ್ಯವಿಲ್ಲ ಎಂದು ಮೋದಿ ನುಡಿದರು. ‘ಕಾಂಗ್ರೆಸ್ ಪಕ್ಷಕ್ಕೆ ೧೭ ರಾಜ್ಯಗಳಲ್ಲಿ ಒಂದೇ ಒಂದು ಲೋಕಸಭಾ ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದರತ್ತ ಬೊಟ್ಟು ಮಾಡಿದ ಪ್ರಧಾನಿಕಾಂಗ್ರೆಸ್ ಪಕ್ಷಕ್ಕೆ ಸೋಲನ್ನು ಒಪ್ಪಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ ಎಂದು ಹೇಳಿದರು.  ‘ಕಾಂಗ್ರೆಸ್ ಪಕ್ಷದಲ್ಲಿನ ನನ್ನ ಗೆಳೆಯರಿಗೆ ವಿಜಯವನ್ನು ಜೀರ್ಣಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅವರಿಗೆ ಸೋಲನ್ನು ಒಪ್ಪಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಆರೋಗ್ಯಕರ ಸಂಕೇತ ಎಂಬುದಾಗಿ ನಾನು ಪರಿಗಣಿಸುವುದಿಲ್ಲ ಎಂದು ಮೋದಿ ನುಡಿದರು. ‘ ವಿಶ್ವಾದ್ಯಂತ ಶ್ಲಾಘನೆಗೆ ಪಾತ್ರವಾಗಿರುವ ವಿದ್ಯುನ್ಮಾನ ಮತಯಂತ್ರಗನ್ನು  (ಇವಿಎಂ) ಪ್ರಶ್ನಿಸುತ್ತಿರುವುದಕ್ಕಾಗಿಯೂ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ’ನಮ್ಮ ಚುನಾವಣಾ ಪ್ರಕ್ರಿಯೆಯ ಅಗಾಧತೆಯನ್ನು ವಿಶ್ವವು ತಿಳಿಯಬೇಕಾಗಿದೆ. ಕೆಲವರು ಸದನದಲ್ಲಿ ಇವಿಎಂ ಬಗ್ಗೆ ಮಾತನಾಡಿದ್ದಾರೆ ಎಂದು ಅವರು ಹೇಳಿದರು.  ‘ನಾವು ಸಂಸತ್ತಿನಲ್ಲಿ ಕೇವಲ ಇಬ್ಬರು ಸಂಸತ್ ಸದಸ್ಯರನ್ನು ಹೊಂದಿದ್ದ ಕಾಲವಿತ್ತು ಎಂಬುದನ್ನು ಅವರಿಗೆ ನೆನಪಿಸಲು ನಾನು ಬಯಸುತ್ತೇನೆ. ಆಗ ಜನರು ನಮ್ಮನ್ನು ತಮಾಷೆ ಮಾಡುತ್ತಿದ್ದರು. ಆದರೆ, ನಾವು ಕಠಿಣ ಶ್ರಮ ವಹಿಸಿ ದುಡಿದೆವು ಮತ್ತು ಜನರ ವಿಶ್ವಾಸ ಸಂಪಾದಿಸಿದೆವು. ನಾವು ಮತಗಟ್ಟೆಗಳನ್ನು ದೂರಲಿಲ್ಲ. ನಮ್ಮ ಚುನಾವಣಾ ಪ್ರಕ್ರಿಯೆಗಳು ಹೇಗೆ ಸುಧಾರಣೆಗೊಂಡಿವೆ ಎಂಬುದನ್ನು ನಾವು ಮೆಚ್ಚಬೇಕು ಎಂದು ಪ್ರಧಾನಿ ನುಡಿದರು.  ‘೧೯೫೦ರ ದಶಕದಲ್ಲಿ ಚುನಾವಣಾ ಪ್ರಕ್ರಿಯೆ ಅಗಾಧ ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಕೆಲವು ಸ್ಥಳಗಳಲ್ಲಿ ಹಿಂಸೆ ಮತ್ತು ಮತಗಟ್ಟೆ ವಶ ಪ್ರಕರಣಗಳು ಮಾಮೂಲು ಆಗಿದ್ದವುಈಗ ಮತದಾನದ ಪ್ರಮಾಣ ಹೆಚ್ಚಿರುವುದು ಸುದ್ದಿಯಾಗುತ್ತಿದೆ. ಇದು ಆರೋಗ್ಯಕರ ಸೂಚನೆ ಎಂದು ಅವರು ಬೊಟ್ಟು ಮಾಡಿದರು. ‘ಚುನಾವಣಾ ಮತಯಂತ್ರಗಳನ್ನು ಬಳಸಿಯೇ ಹಲವಾರು ಚುನಾವಣೆಗಳು ನಡೆದಿವೆ ಮತ್ತು ರಾಜ್ಯಸಭೆಯನ್ನು ಪ್ರತಿನಿಧಿಸಿರುವ ಪಕ್ಷಗಳು ಕೆಲವು ರಾಜ್ಯಗಳಲ್ಲಿ ಆಡಳಿತ ನಡೆಸುವ ಅವಕಾಶಗಳನ್ನೂ ಪಡೆದಿವೆ. ಹಾಗಿರುವಾಗ ಈಗೇಕೆ ಇವಿಎಂನ್ನು ಪ್ರಶ್ನಿಸುತ್ತಿದ್ದೀರಿ?’ ಎಂದು ಮೋದಿ ಕೇಳಿದರು.  ‘ಒಂದು ರಾಷ್ಟ್ರ ಒಂದು ಚುನಾವಣೆ ಬಗೆಗಿನ ಚರ್ಚೆ ವೇಳೆಯಲ್ಲೂ ನಾವು ಇದೇ ರೀತಿಯ ಧೋರಣೆಯನ್ನು ನಾವು ಕಾಣುತ್ತಿದ್ದೇವೆ. ಹೌದು, ಕೆಲವರು ಕಲ್ಪನೆಯನ್ನು ಮೆಚ್ಚದಿರಬಹುದು. ಅಥವಾ ಬಗ್ಗೆ ತಮ್ಮದೇ ಆದ ದೃಷ್ಟಿಕೋನಗಳನ್ನು ಹೊಂದಿರಬಹುದು. ಆದರೆ ತಮ್ಮ ಕಲ್ಪನೆಯನ್ನು ಮುಂದಿಟ್ಟು ವಿಷಯದ ಬಗ್ಗೆ ಚರ್ಚೆ ನಡೆಸುವುದು ಮುಖ್ಯ ಎಂದು ಮೋದಿ ಹೇಳಿದರು.  ‘ನವ ಭಾರತ ಕಲ್ಪನೆಯನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿರುವುದು ಏಕೋ ಎಂದೂ ಪ್ರಧಾನಿ ಅಚ್ಚರಿ ವ್ಯಕ್ತ ಪಡಿಸಿದರು. ’ಇದು ಪಾಪ ಎಂಬಂತೆ ಬಿಂಬಿಸಿ ವಿರೋಧಿಸುವ ಮೂಲಕ ಜನರಲ್ಲಿ ನಕಾರಾತ್ಮಕತೆಯನ್ನು ತುಂಬಬೇಡಿ ಎಂದು ಅವರು ಹೇಳಿದರು.  ‘ಸಂಪುಟ ಪ್ರಸ್ತಾಪಗಳನ್ನು ಪತ್ರಿಕಾಗೋಷ್ಠಿಗಳಲ್ಲಿ ಹರಿದೆಸೆದ ಹಳೆಯ ಭಾರತ ನಮಗೆ ಅಗತ್ಯವಿದೆಯೇ? ಅಥವಾ ಎಲ್ಲೆಡೆಯಲ್ಲೂ ಹಗರಣಗಳು ತುಂಬಿದ ಹಳೆಯ ಭಾರತ ನಮಗೆ ಬೇಕೆ?  ’ಟುಕಡೆ ಟುಕಡೆ ಗ್ಯಾಂಗ್ಗಳಿಗೆ ಬೆಂಬಲ ನೀಡಿದ್ದ ಹಳೆಯ ಭಾರತ ನಮಗೆ ಬೇಕೆ? ಎಂಬುದಾಗಿ ಪ್ರಶ್ನಿಸಿದ ಪ್ರಧಾನಿ ದೇಶದ ಜನರು ಭಾರತವನ್ನು ಹಿಂದಕ್ಕೆ ಒಯ್ಯಲು ಸಿದ್ಧರಿಲ್ಲ ಎಂದು ಹೇಳಿದರುರಾಷ್ಟ್ರವನ್ನು ಮುಂದಕ್ಕೆ ಒಯ್ಯುವಂತೆ ವಿರೋಧಿ ಸದಸ್ಯರನ್ನು ಆಗ್ರಹಿಸಿದ ಪ್ರಧಾನಿ ಹೀಗೆ ಮಾಡುವ ಮೂಲಕ ನೀವು ರಾಷ್ಟ್ರಕ್ಕೆ ಕಾಣಿಕೆ ಸಲ್ಲಿಸುವಿರಿ ಎಂದು ನಾನು ನಿರೀಕ್ಷಿಸುವೆ ಎಂದು ನುಡಿದರು.  ಇವಿಎಂಗಳನ್ನು ವಿರೋಧಿಸುವವವರು ಇವಿಎಂಗಳನ್ನು ಮಾತ್ರವೇ ವಿರೋಧಿಸುತ್ತಿಲ್ಲ. ಅವರಿಗೆ ತಂತ್ರಜ್ಞಾನ, ಡಿಜಿಟಲ್ ವಹಿವಾಟು, ಆಧಾರ್, ಜಿಎಸ್ಟಿ, ಭೀಮ್ ಆಪ್ ಇವೆಲ್ಲದರ ಬಗೆಗೂ ಸಮಸ್ಯೆಗಳಿವೆ ಎಂದು ಪ್ರಧಾನಿ ಹೇಳಿದರು. ಇಂತಹ ನಕಾತಾತ್ಮಕತೆ ಏಕೆಕೆಲವು ಪಕ್ಷಗಳು ಜನರ ವಿಶ್ವಾಸ ಗಳಿಸಲು ಸಾಧ್ಯವಾಗದೇ ಇರುವುದಕ್ಕೆ ನಕಾರಾತ್ಮಕತೆ ಮುಖ್ಯ ಕಾರಣ ಎಂದು ಪ್ರಧಾನಿ ವಿಶ್ಲೇಷಿಸಿದರುಜಾರ್ಖಂಡ್ ಗುಂಪು ಹತ್ಯೆ ಘಟನೆಯ ಬಗ್ಗೆ ಪ್ರಧಾನಿ ಬೇಸರ ವ್ಯಕ್ತ ಪಡಿಸಿದರು. ’ಜಾರ್ಖಂಡ್ ಗುಂಪು ಹತ್ಯೆಯು ನನಗೆ ನೋವುಂಟು ಮಾಡಿದೆ. ಅದು ಇತತರಿಗೂ ನೋವುಂಟು ಮಾಡಿದೆ. ಆದರೆ, ರಾಜ್ಯಸಭೆಯಲ್ಲಿ ಕೆಲವು ಮಂದಿಜಾರ್ಖಂಡ್ ಗುಂಪು ಹತ್ಯೆಗಳ ಆಡುಂಬೊಲವಾಗಿದೆ ಎಂಬುದಾಗಿ ಹೇಳಿದ್ದಾರೆ. ಇದು ನ್ಯಾಯವೇ? ಅವರು ರಾಜ್ಯವನ್ನು ಏಕೆ ಅವಮಾನಿಸುತ್ತಿದ್ದಾರೆ. ನಮಗೆ ಯಾರಿಗೂ ಜಾರ್ಖಂಡ್ ರಾಜ್ಯವನ್ನು ಅವಮಾನಿಸುವ ಹಕ್ಕು ಇಲ್ಲ ಎಂದು ಪ್ರಧಾನಿ ನುಡಿದರು.  ‘ಜಾರ್ಖಂಡ್ ಇರಲಿ, ಪಶ್ಚಿಮ ಬಂಗಾಳವಿರಲಿ ಅಥವಾ ಕೇರಳ ಇರಲಿ ಹಿಂಸಾಚಾರ ಬಗ್ಗೆ ಒಂದೇ ರೀತಿಯಾಗಿ ವರ್ತಿಸಬೇಕು ಮತ್ತು ಹಿಂಸಾಚಾರದ ಕಾರಣಕರ್ತರಿಗೆ ತಕ್ಕ ಪಾಠವನ್ನು ಕಲಿಸಬೇಕು. ಇಂತಹ ವಿಷಯದಲ್ಲಿ ಇದೇ ರಾಷ್ಟ್ರವೇ ಒಂದಾಗಿದೆ ಎಂಬ ಸೂಚನೆಯನ್ನು ಅವರಿಗೆ ನೀಡಬೇಕು ಎಂದು ಮೋದಿ ಹೇಳಿದರು.

2019: ನವದೆಹಲಿ: ಬಿಜೆಪಿ ಪ್ರಧಾನ ಕಾರ್ಯದರ್ಶಿಯ ಪುತ್ರ  ಹಾಗೂ ಮಧ್ಯಪ್ರದೇಶದ ಪಕ್ಷದ ಶಾಸಕ ಆಕಾಶ್ ವಿಜಯವರ್ಗೀಯ ಅವರನ್ನು ಬುಧವಾರ ಪೌರ ಸಂಸ್ಥೆಯ ಅಧಿಕಾರಿಯೊಬ್ಬರನ್ನು ಕಟ್ಟಡ ಕೆಡಹುವ ಕಾರ್ಯಾಚರಣೆ ವೇಳೆ, ತೀವ್ರ ವಾಗ್ವಾದದ ಬಳಿಕ ಕ್ರಿಕೆಟ್ ಬ್ಯಾಟ್ನಿಂದ ಥಳಿಸಿದ್ದಕ್ಕಾಗಿ ಬಂಧಿಸಲಾಯಿತು. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ವಿಜಯವರ್ಗೀಯ ಮತ್ತು ಇತರ ೧೦ ಮಂದಿಯನ್ನು ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರ ಪುತ್ರ ಆಕಾಶ್ ಅವರು ತಮ್ಮ ಸುತ್ತ ಮಾಧ್ಯಮ ಮಂದಿ ಇದ್ದಾಗಲೇ ಅಧಿಕಾರಿಯ ಮೇಲೆ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ನಡೆಸಿದ್ದು, ಮಾಧ್ಯಮ ಮಂದಿ ಇಡೀ ಘಟನೆಯನ್ನು ಚಿತ್ರೀಕರಿಸಿದರು. ತಮ್ಮ ಕೃತ್ಯವನ್ನು ಸಮರ್ಥಿಸಿದ ಆಕಾಶ್ನಮಗೆ ಬಿಜೆಪಿಯಲ್ಲಿ ಮೊದಲು ಅಹವಾಲು, ಬಳಿಕ ಮನವಿ ಮತ್ತು   ಬಳಿಕ ದಾಳಿ ಮಾಡಲು (ಪಹ್ಲೆ ಆವೇದನ್, ಫಿರ್ ನಿವೇದನ್ ಔರ್ ಫಿರ್ ದನಾದನ್) ಕಲಿಸಲಾಗಿದೆ ಎಂದು ಹೇಳಿದರು. ’ನಾನು ಆತ್ಮರಕ್ಷಣೆಗಾಗಿ ಕೃತ್ಯ ನಡೆಸಿರುವುದರಿಂದ ಘಟನೆ ಬಗ್ಗೆ ವಿಷಾದಿಸುವುದಿಲ್ಲ ಎಂದು ಅವರು ನುಡಿದರುಮನೆಯೊಂದನ್ನು ನೆಲಸಮಗೊಳಿಸಿದ್ದನ್ನು  ವಿರೋಧಿಸಿ ಸ್ಥಳೀಯರು ಪ್ರತಿಭಟಿಸುತ್ತಿದ್ದರು. ಪ್ರತಿಭಟನಕಾರರ ಮಧ್ಯೆ ಇದ್ದ ಆಕಾಶ್ ವಿಜಯವರ್ಗೀಯ ಅವರು ಸ್ಥಳ ಬಿಟ್ಟು ಹೋಗದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಪೌರಸಂಸ್ಥೆಯ ಸಿಬ್ಬಂದಿಗೆ ಎಂದು ಎಚ್ಚರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಆಕಾಶ್ ಬೆಂಬಲಿಗರು ಕಟ್ಟಡ ನಾಶಕ್ಕಾಗಿ ತರಲಾಗಿದ್ದ ಬುಲ್ ಡೋಜರಿನ (ಅರ್ತ್ ಮೂವಿಂಗ್ ಮೆಷಿನ್) ಕೀಗಳನ್ನು ಕೂಡಾ ತೆಗೆದರು ಎಂದು ಪ್ರತ್ಯಕ್ಷದರ್ಶಿಗಳು ನುಡಿದರು. ತೀವ್ರ ವಾಗ್ವಾದದ ಮಧ್ಯೆ, ಆಕಾಶ್ ಅವರು ಕ್ರಿಕೆಟ್ ಬ್ಯಾಟ್ ಒಂದನ್ನು ತಂದು ಮೊಬೈಲ್ ಮೂಲಕ ಮಾತನಾಡುತ್ತಿದ್ದ ಅಧಿಕಾರಿಗೆ ಹೊಡೆದರು. ಶಾಸಕರ ಬೆಂಬಲಿಗರು ಕೂಡಾ ಅಧಿಕಾರಿ ಮೇಲೆ ದಾಳಿ ನಡೆಸಿದರು ಮತ್ತು ನಿಂದಿಸಿದರು. ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದರು.
ಘಟನೆಯ ಬೆನ್ನಲ್ಲೇ ಇಂದೋರ್ ಮುನಿಸಿಪಲ್ ಕಾರ್ಪೋರೇಷನ್  ನೌಕರರು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಪ್ರತಿಭಟನಾ  ಪ್ರದರ್ಶನ ನಡೆಸಿದರು. ಉತ್ತಮ ಸ್ಥಿತಿಯಲ್ಲಿದ್ದ ಕೆಲವು ಮನೆಗಳನ್ನು ಕೂಡಾ ಅಧಿಕಾರಿಗಳು ಶಿಥಿಲಗೊಂಡಿವೆ ಎಂದು ಘೋಷಿಸಿ ಕೆಡವಲು ಹೊರಟಿದ್ದರು ಎಂದು ಆಕಾಶ್ ನುಡಿದರು.  ‘ಇದು ಮಾಲೀಕರು ಮತ್ತು ಅಧಿಕಾರಿಗಳ ನಡುವಣ ಸಂಚು. ಮನೆಗಳನ್ನು ಕೆಡವಿ ಹಾಕುವ ಮೂಲಕ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರು ಬಯಸಿದ್ದಾರೆ ಎಂದು ಆಕಾಶ್ ವಿಜಯವರ್ಗೀಯ ದೂರಿದರು. ಅಧಿಕಾರಿ ಮೇಲಿನ ಹಲ್ಲೆಯನ್ನು ಖಂಡಿಸಿದ ರಾಜ್ಯ ಕಾಂಗ್ರೆಸ್ ವಕ್ತಾರ ನೀಲಭ್ ಶುಕ್ಲ ಅವರುಶಾಸನಕರ್ತನೇ ಶಾಸನವನು ಉಲ್ಲಂಘಿಸಿದ್ದಾನೆ. ಘಟನೆಯು ಬಿಜೆಪಿಯ ನೈಜ ಮುಖವನ್ನು ಬಯಲು ಮಾಡಿದೆ ಎಂದು ಹೇಳಿದರು.

2019: ಹೈದರಾಬಾದ್:  ಮುಳಗುತ್ತಿರುವ ಕಾಂಗ್ರೆಸ್ ನೌಕೆಯನ್ನು ರಕ್ಷಿಸಲು ಕೊನೆಯವರೆಗೂ ಯತ್ನಿಸುವ ಬದಲಿಗೆ ತಾವು ಮೊತ್ತ ಮೊದಲಿಗರಾಗಿ ನೌಕೆಯಿಂದ ಹೊರಕ್ಕೆ ಹಾರಿದ್ದಾರೆ ಎಂಬುದಾಗಿ ಹೇಳುವ ಮೂಲಕ ಬಿಜೆಪಿ ಉಪಾಧ್ಯಕ್ಷ ಶಿವರಾಜ್ ಸಿಂಗ್ ಚೌಹಾಣ್ ಅವರು  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಚಿವುಟಿದರು.  ‘ಈಗ ಕಾಂಗ್ರೆಸ್ ಅಧ್ಯಕ್ಷರು ಯಾರು ಎಂಬುದು ನಿಮಗೆ ಗೊತ್ತಿಲ್ಲ. ಯಾವುದೇ ನೌಕೆ ಮುಳುಗುವಾಗ ಅದರ ಕ್ಯಾಪ್ಟನ್ ಕೊನೆಯವರೆಗೂ ಅದನ್ನು ರಕ್ಷಿಸಲು ಅದರಲ್ಲಿ ಇದ್ದುಕೊಂಡೇ ಪ್ರಯತ್ನಿಸುತ್ತಾನೆ ಎಂಬುದನ್ನು ನಾವು ಕೇಳಿದ್ದೇವೆ. ಆದರೆ ಮುಳುಗುತ್ತಿರುವ ಕಾಂಗ್ರೆಸ್ನಿಂದ ಅದರ ಕ್ಯಾಪ್ಟನ್ ಮೊತ್ತ ಮೊದಲಿಗರಾಗಿ ಹೊರಕ್ಕೆ ಹಾರಿದ್ದಾರೆ ಎಂದು ಚೌಹಾಣ್ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.  ‘ಪ್ರಧಾನಿ ನರೇಂದ್ರ ಮೋದಿಯವರಾಗಲೀ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಾಗಲೀ ಅಥವಾ ಪಕ್ಷದ ಕಾರ್ಯಕರ್ತರಾಗಲೀ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಪ್ರಚಂಡ ವಿಜಯ ಗಳಿಸಿದ ಬಳಿಕ ಹೊಗಳಿಕೆಯನ್ನು ಕೇಳುತ್ತಾ ವಿಶ್ರಮಿಸಿಲ್ಲ ಎಂದು ಅವರು ನುಡಿದರು. ಬಿಜೆಪಿಯ ಸದಸ್ಯತ್ವ ಪ್ರಮುಖರಾಗಿರುವ ಚೌಹಾಣ್ ಅವರು ಪಕ್ಷವು ಶೀಘ್ರದಲ್ಲೇ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಿದೆ ಎಂದು ಹೇಳಿದರು. ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷಗಳ (ಬಿಎಸ್ಪಿ) ಮೈತ್ರಿಕೂಟ ಒಡೆಯುವುದರೊಂದಿಗೆ ಮತ್ತು  ರಾಹುಲ್ ಗಾಂಧಿಯವರು ನೌಕೆಯಿಂದ ಹೊರಕ್ಕೆ ಹಾರುವುದರೊಂದಿಗೆ ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳು ಅತ್ಯಂತ ಹೀನಾಯ ಇವೆ ಎಂದು ಅವರು ಪ್ರತಿಪಾದಿಸಿದರು. ೨೦೨೩ರಲ್ಲಿ ತೆಲಂಗಾಣದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ಬಳಿಕ ಸರ್ಕಾರ ರಚಿಸುವುದು ಬಿಜೆಪಿಯ ಗುರಿ ಎಂದು ಚೌಹಾಣ್ ನುಡಿದರು. ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದ ಸ್ಥಿರತೆ ಕುರಿತ ಚರ್ಚೆಯ ಬಗ್ಗೆ ಕೇಳಲಾದ ಪ್ರಶ್ನೆಗೆಎಸ್ಪಿ, ಬಿಎಸ್ಪಿ ಮತ್ತು ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಲಾಗಿದೆ ಎಂಬುದರತ್ತ ಚೌಹಾಣ್ ಬೊಟ್ಟು ಮಾಡಿದರು.

2019: ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಮೇತರ ಸ್ಥಾನಕ್ಕೆ ಭಾರತದ ಅಭ್ಯರ್ಥನವನ್ನು ವಿಶ್ವಸಂಸ್ಥೆಯಲ್ಲಿ ಏಷ್ಯಾ-ಪೆಸಿಫಿಕ್ ಸಮೂಹವು ಸರ್ವಾನುಮತದೊಂದಿಗೆ ಅನುಮೋದಿಸಿತು. ಇದರೊಂದಿಗೆ ಭಾರತವು ಇನ್ನೊಂದು ಮಹತ್ವದ ರಾಜತಾಂತ್ರಿಕ ವಿಜಯವನ್ನು ಗಳಿಸಿತು. ೨೦೨೧-೨೨ರ ಅವಧಿಯ ೧೫ ಸದಸ್ಯರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐವರು ಕಾಯಮೇತರ ಸದಸ್ಯ ಸ್ಥಾನಗಳಿಗಾಗಿ ಮುಂದಿನ ವರ್ಷ (2020) ಜೂನ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ.  ‘ವಿಶ್ವಸಂಸ್ಥೆಯಲ್ಲಿನ ಏಷ್ಯಾ-ಪೆಸಿಫಿಕ್ ಸಮೂಹವು ೨೦೨೧-೨೨ರ ಎರಡು ವರ್ಷಗಳ ಅವಧಿಗೆ ಭದ್ರತಾ ಮಂಡಳಿಯ ಕಾಯಮೇತರ ಸ್ಥಾನಕ್ಕೆ ಭಾರತದ ಅಭ್ಯರ್ಥನವನ್ನು ಸರ್ವಾನುಮತದಿಂದ ಅನುಮೋದಿಸಿದೆ. ಎಲ್ಲ ೫೫ ಮಂದಿ ಸದಸ್ಯರಿಗೂ ಅವರ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿಯಾಗಿರುವ ವಿಶ್ವಸಂಸ್ಥೆಯ ರಾಯಭಾರಿ ಸೈಯದ್ ಅಕ್ಬರುದ್ದೀನ್ ಅವರು ಮಂಗಳವಾರ (ಭಾರತದಲ್ಲಿ ಬುಧವಾರ) ಟ್ವೀಟ್ ಮಾಡಿದರು. ಅಕ್ಬರುದ್ದೀನ್ ಅವರ ಟ್ವೀಟ್ ಸಹಿತವಾದ ವಿಡಿಯೋ ಸಂದೇಶವೊಂದುಏಷ್ಯಾ-ಪೆಸಿಫಿಕ್ ಸಮೂಹವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಮೇತರ ಸ್ಥಾನಕ್ಕೆ ಅನುಮೋದನೆ ನೀಡಿದೆ. ೫೫ ರಾಷ್ಟ್ರಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ೨೦೨೧-೨೦೨೨ರ ಅವಧಿಯ ಕಾಯಮೇತರ ಸದಸ್ಯ ಸ್ಥಾನಕ್ಕೆ ಏಕ ಅಭ್ಯರ್ಥಿಯಾಗಿ ಭಾರತವನ್ನು ಬೆಂಬಲಿಸಿವೆ ಎಂದು ತಿಳಿಸಿತು. ಭಾರತದ ಅಭ್ಯರ್ಥನವನ್ನು ಅನುಮೋದಿಸಿದ್ದಕ್ಕಾಗಿ ಏಷ್ಯಾ- ಪೆಸಿಫಿಕ್ ಸಮೂಹದ ಎಲ್ಲ ರಾಷ್ಟ್ರಗಳಿಗೂ  ವಿಡಿಯೋ ಸಂದೇಶವು ಧನ್ಯವಾದಗಳನ್ನು ಅರ್ಪಿಸಿತು. ಭಾರತದ ಅಭ್ಯರ್ಥನವನ್ನು ಬೆಂಬಲಿಸಿರುವ ೫೫ ರಾಷ್ಟ್ರಗಳಲ್ಲಿ ಆಫ್ಘಾನಿಸ್ಥಾನ, ಬಾಂಗ್ಲಾದೇಶ, ಭೂತಾನ್, ಚೀನಾಇಂಡೋನೇಶ್ಯಾ, ಇರಾನ್, ಜಪಾನ್, ಕುವೈತ್, ಕಿರ್ಗಿಸ್ಥಾನ, ಮಲೇಶಿಯಾ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಖತಾರ್, ಸೌದಿ ಅರೇಬಿಯಾ, ಶ್ರೀಂಕಾ, ಸಿರಿಯಾ, ಟರ್ಕಿ, ಯುಎಇ, ಮತ್ತು ವಿಯೆಟ್ನಾಂ ಸೇರಿದ್ದವು. ೧೯೩ ಸದಸ್ಯಬಲದ ಜನರಲ್ ಅಸೆಂಬ್ಲಿಯು ಪ್ರತಿವರ್ಷವೂ ಎರಡು ವರ್ಷಗಳ ಅವಧಿಗಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಐವರು ಕಾಯಮೇತರ ಸದಸ್ಯರನ್ನು ಆರಿಸುತ್ತದೆ. ಚೀನಾ, ಫ್ರಾನ್ಸ್, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕದ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿನ ಐದು ಕಾಯಂ ಸದಸ್ಯರಾಗಿವೆಭಾರತವು ಹಿಂದೆ ೧೯೫೦-೧೯೫೧, ೧೯೬೭-೧೯೬೮, ೧೯೭೨-೧೯೭೩, ೧೯೭೭-೧೯೭೮, ೧೯೮೪-೧೯೮೫, ೧೯೯೧-೧೯೯೨ ಮತ್ತು ತೀರಾ ಇತ್ತೀಚೆಗೆ ೨೦೧೧-೨೦೧೨ರಲ್ಲಿ ಮಾಜಿ ರಾಯಭಾರಿ ಹರದೀಪ್ ಸಿಂಗ್ ಪುರಿ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕಾಯಮೇತರ ಸದಸ್ಯನಾಗಿ ಆಯ್ಕೆಯಾಗಿತ್ತು. ಭಾರತವು ೨೦೨೧-೨೦೨೨ರ ಅವಧಿಗಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಮೇತರ ಸದಸ್ಯತ್ವಕ್ಕೆ ಸ್ಪರ್ಧಿಸಲಿದೆ ಎಂದು ವಿಶ್ವಸಂಸ್ಥೆಯ ಭಾಋತದ ಮಾಜಿ ಕಾಯಂ ಪ್ರತಿನಿಧಿ .ಕೆ. ಮುಖರ್ಜಿ ಹಿಂದೆ ಹೇಳಿದ್ದರು. 


2018: ನವದೆಹಲಿ: ತುರ್ತು ಪರಿಸ್ಥಿತಿ ಹೇರಿಕೆಯ ೪೩ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಬಲ ಟೀಕಾ ಪ್ರಹಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ’ಗಾಂಧಿ ಕುಟುಂಬದ ವೈಯಕ್ತಿಕ ಸ್ವಾರ್ಥಿ ಹಿತಾಸಕ್ತಿಗಳಿಗಾಗಿ ಭಾರತವನ್ನೇ ಸೆರೆಮನೆಯನ್ನಾಗಿ ಪರಿವರ್ತಿಸಲಾಯಿತು ಎಂದು ಹೇಳಿದರು.  ತುರ್ತು ಪರಿಸ್ಥಿತಿಯ ವಾರ್ಷಿಕೋತ್ಸವದ ಅಂಗವಾಗಿ ಬಿಜೆಪಿಯು ಮುಂಬೈಯಲಿ ಸಂಘಟಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ’ಈ ದಿನವನ್ನು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮರುಸಮರ್ಪಣಾ ದಿನವಾಗಿ ಆಚರಿಸಬೇಕಾದ ಅಗತ್ಯವಿದೆ ಎಂದು ನುಡಿದರು.
ರಾಷ್ಟ್ರದ ಸುವರ್ಣ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಒಂದು ಕಪ್ಪು ಚುಕ್ಕೆ. ಈದಿನವನ್ನು ಕರಾಳದಿನವಾಗಿ ಆಚರಿಸುತ್ತಿರುವುದು ತುರ್ತುಸ್ಥಿತಿ ಹೇರಿದ ಪಾಪಕ್ಕಾಗಿ ಕಾಂಗ್ರೆಸ್ಸನ್ನು ಟೀಕಿಸುವುದಕ್ಕಾಗಿ ಮಾತ್ರ ಅಲ್ಲ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಜಾಗೃತಿ ಮೂಡಿಸುವ ಸಲುವಾಗಿ ಕೂಡಾ ಎಂದು ಪ್ರಧಾನಿ ನುಡಿದರು.  ಸಂವಿಧಾನ, ದಲಿತರು ಮತ್ತು ಅಲ್ಪಸಂಖ್ಯಾತರು ಅಪಾಯಕ್ಕೆ ಗುರಿಯಾಗಿದ್ದಾರೆ (ಬಿಜೆಪಿ ನೇತೃತ್ವದ ಆಡಳಿತದಲ್ಲಿ) ಎಂಬ ’ಕಾಲ್ಪನಿಕ ಭಯವನ್ನು ಹರಡುತ್ತಿರುವುದಕ್ಕಾಗಿ ಕಾಂಗ್ರೆಸ್ ಮೇಲೆ ಹರಿಹಾಯ್ದ ಮೋದಿ, ’ಕಾಂಗ್ರೆಸ್ ಎಂದಿಗೂ ಸುಧಾರಿಸುವುದಿಲ್ಲ ಎಂದು ಹೇಳಿದರು. ’ಸ್ವಹಿತದ ವೃದ್ಧಿಗಾಗಿ ಅವರು ತಮ್ಮ ಪಕ್ಷವನ್ನೇ ಹಾಳು ಮಾಡಿದ್ದಾರೆ ಎಂದು ಮೋದಿ ನುಡಿದರು.  ಸ್ವಾರ್ಥಿ ಹಿತಾಸಕ್ತಿಗಳಿಗಾಗಿ ವಿರೋಧಿ ನಾಯಕರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ರಾಷ್ಟ್ರವನ್ನೇ ಸೆರೆಮನೆಯನ್ನಾಗಿ ಪರಿವರ್ತಿಸಿತು. ಅವರಿಗೆ ರಾಷ್ಟ್ರ ಮತ್ತು ಪ್ರಜಾಪ್ರಭುತ್ವಕ್ಕೆ ಯಾವುದೇ ಬೆಲೆಯೂ ಇಲ್ಲ. ಕೋರ್ಟ್ ತೀರ್ಪಿನ ಬಳಿಕ ಪ್ರಧಾನಿ ಹುದ್ದೆಯನ್ನು ತ್ಯಜಿಸುವ ಬದಲಿಗೆ ಅವರು (ಇಂದಿರಾ ಗಾಂಧಿ) ತುರ್ತು ಪರಿಸ್ಥಿತಿಯನ್ನು ರಾಷ್ಟ್ರದ ಮೇಲೆ ಹೇರಿದರು. ಈ ವ್ಯಕ್ತಿಗಳು ಸಂವಿಧಾನ ರಕ್ಷಣೆಯ ಬಗ್ಗೆ ಹೇಗೆ ಮಾತನಾಡುತ್ತಾರೆ?’ ಎಂದು ಮೋದಿ ಪ್ರಶ್ನಿಸಿದರು.  ‘ಅವರಿಗಾಗಿ (ಕಾಂಗ್ರೆಸ್) ಹಾಡಲು ಕಿಶೋರ್ ಕುಮಾರ್‌ಜಿ ನಿರಾಕರಿಸಿದಾಗ, ರೇಡಿಯೋದಲ್ಲಿ ಅವರ ಹಾಡುಗಳ ಪ್ರಸಾರಕ್ಕೆ ಅವಕಾಶ ನಿರಾಕರಿಸಲಾಗಿತ್ತು ಎಂದು ಮೋದಿ ನೆನಪಿಸಿದರು.   ಲೋಕಸಭೆಯಲ್ಲಿ ತಮ್ಮ ಬಲ ೪೦೦ರಿಂದ ೪೪ ಸ್ಥಾನಗಳಿಗೆ ಕುಸಿದಾಗ, ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಗ್ಗೆ ಮತ್ತು ಚುನಾವಣಾ ಆಯೋಗದ ಕಾರ್‍ಯ ನಿರ್ವಹಣೆಯನ್ನು ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಮೋದಿ, ಕರ್ನಾಟಕದ ಇತ್ತೀಚಿನ ಚುನಾವಣೆ ಬಳಿಕ ಅವರು ವಿದ್ಯುನ್ಮಾನ ಮತಯಂತ್ರದ ಬಗ್ಗೆ ಪ್ರಶ್ನಿಸುತ್ತಿಲ್ಲ ಎಂದು ಹೇಳಿದರು.  ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ವಿರುದ್ಧ ’ವಾಗ್ದಂಡನಾ ನಿರ್ಣಯ ಮಂಡಿಸಿದ್ದಕ್ಕಾಗಿಯೂ ಕಾಂಗ್ರೆಸ್ ಪಕ್ಷವನ್ನು ಪ್ರಧಾನಿ ಟೀಕಿಸಿದರು.  ‘ಅವರು (ಗಾಂಧಿ ಕುಟುಂಬ) ತಮ್ಮ ವಿರುದ್ಧ ಭ್ರಷ್ಟಾಚಾರದ ಆಪಾದನೆಗಳು ಬರಬಹುದು ಮತ್ತು ತಾವೂ ಜಾಮೀನಿನಲ್ಲಿ ಹೊರಬರಬೇಕಾಗಬಹುದು ಎಂಬ ಕಲ್ಪನೆಯನ್ನು ಕೂಡಾ ಮಾಡಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ವಾಗ್ದಂಡನಾ ನಿರ್ಣಯ ಮಂಡಿಸಲು ನಿರ್ಧರಿಸಿತು ಎಂದು ಮೋದಿ ಹೇಳಿದರು.  ತಮ್ಮ ಸರ್ಕಾರವು ಸಂವಿಧಾನದ ರಕ್ಷಣೆಗೆ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಬದ್ಧವಾಗಿದೆ. ಸಂವಿಧಾನವು ಕೇವಲ ಪುಸ್ತಕವಲ್ಲ, ಜನಸಾಮಾನ್ಯನ ಆಶಯಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಈಡೇರಿಸುವ ಮಾರ್ಗ ಎಂದು ಮೋದಿ ನುಡಿದರು.   ತುರ್ತು ಪರಿಸ್ಥಿತಿಯ ವಿರುದ್ಧ ’ಎದ್ದು ನಿಂತದ್ದಕ್ಕಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ರಾಮನಾಥ ಗೋಯೆಂಕಾ, ಕುಲದೀಪ್ ನಯ್ಯರ್ ಮತ್ತು ’ಸ್ಟೇಟ್ಸ್ ಮನ್ ವೃತ್ತ ಪತ್ರಿಕೆಯನ್ನು ಮೋದಿ ಪ್ರಶಂಸಿಸಿದರು.   ‘ಅವರಲ್ಲಿ ಹಲವರು ನಮ್ಮ ನಮ್ಮ ಬೆಂಬಲಿಗರೂ ಅಲ್ಲ. ನಯ್ಯರ್ ಅವರಂತೂ ನಮ್ಮ ಕಟು ಟೀಕಾಕಾರರು. ಅದರೆ ಅವರು ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದರು ಎಂದು ಮೋದಿ ಹೇಳಿದರು.

2018: ನವದೆಹಲಿ: ಸಾವಿರಾರು ಕೋಟಿ ರೂಪಾಯಿ ಬ್ಯಾಂಕ್ ಸಾಲ ಬಾಕಿ ಇಟ್ಟುಕೊಂಡು, ವಿದೇಶಕ್ಕೆ ಪರಾರಿಯಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರು ಇದೀಗ ತಾವು ಪ್ರಧಾನಿ ಮತ್ತು ವಿತ್ತ ಸಚಿವರಿಗೆ ಬರೆದಿದ್ದ ಪತ್ರಕ್ಕೆ ಸ್ಪಂದನೆಯೇ ಸಿಗಲಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.  ತಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಿಗೆ ಬರೆದದ್ದು ಎಂದು ಪ್ರತಿಪಾದಿಸಿದ ಪತ್ರವನ್ನು ವಿಜಯ್ ಮಲ್ಯ ಅವರು  ಬಹಿರಂಗ ಪಡಿಸಿದರು.  ಲಂಡನ್ನಿನಲ್ಲಿ ಪತ್ರ ಬಿಡುಗಡೆ ಮಾಡಿ ಹೇಳಿಕೆ ನೀಡಿರುವ ಮಲ್ಯ, ’ನಾನು ೨೦೧೬ ರಲ್ಲಿ ಪ್ರಧಾನ ಮಂತ್ರಿ ಮತ್ತು ಹಣಕಾಸು ಸಚಿವರಿಬ್ಬರಿಗೂ ಪತ್ರ ಬರೆದಿದ್ದೆ. ಆದರೆ ಇಬ್ಬರಿಂದಲೂ ಪ್ರತಿಕ್ರಿಯೆಗಳು ಬರಲಿಲ್ಲ. ಸರಿಯಾದ ದೃಷ್ಟಿಕೋನದಲ್ಲಿ ವಿಷಯ ತಿಳಿಯಲು ಈ  ಪತ್ರಗಳನ್ನು ಸಾರ್ವಜನಿಕವಾಗಿ ಬಿಡುಗಡೆ  ಮಾಡುತ್ತಿದ್ದೇನೆ ಎಂದು ಹೇಳಿದರು.  ‘ನಾನು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ತೀರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ರಾಜಕೀಯ ಪ್ರೇರೇಪಿತ ಬಾಹ್ಯ ಅಂಶಗಳು ಮಧ್ಯಪ್ರವೇಶಿಸಿದರೆ ನಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಬಿಡುಗಡೆ ಮಾಡಲಾಗಿರುವ ಪತ್ರದಲ್ಲಿ ವಿವರಿಸಿದ್ದರು.   ‘ನನ್ನನ್ನು ಬ್ಯಾಂಕ್ ಹಗರಣಗಳ ಪೋಸ್ಟರ್ ಬಾಯ್ ಆಗಿ ಮಾಡಲಾಗಿದೆ ಎಂದೂ ಮಲ್ಯ ಅವರು ಪತ್ರದಲ್ಲಿ ತಮ್ಮ ನೋವು ತೋಡಿಕೊಂಡಿದ್ದರು. ‘೨೦೧೬ರ ಏಪ್ರಿಲ್ ೧೫ರಂದು ನಾನು ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೆ. ಆದರೆ ಇಬ್ಬರಿಂದಲೂ ನನಗೆ ಉತ್ತರ ಬರಲಿಲ್ಲ ಎಂದು ಸುದೀರ್ಘ ಮೌನದ ಬಳಿಕ ಮಲ್ಯ ಪ್ರತಿಪಾದಿಸಿದರು. ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ ಸಾಲ ಪಡೆದ ೯೦೦೦ ಕೋಟಿ ರೂಪಾಯಿಗಳನ್ನು ಕದ್ದುಕೊಂಡು ನಾನು ಓಡಿ ಹೋಗಿದ್ದೇನೆ ಎಂಬಂತೆ ರಾಜಕಾರಣಿಗಳು ಮತ್ತು ಮಾಧ್ಯಮಗಳು ನನ್ನನ್ನು ಆಪಾದಿಸುತ್ತಿದೆ. ಸಾಲ ನೀಡಿದ ಕೆಲವು ಬ್ಯಾಂಕುಗಳು ನಾನು ಉದ್ದೇಶಪೂರ್ವಕ ಸುಸ್ತಿದಾರ ಎಂದೂ ಬಿಂಬಿಸುತ್ತಿವೆ ಎಂದೂ ಮಲ್ಯ ಹೇಳಿದರು.  ‘ನಾನು ಸಾಲ ತೀರಿಸಲು ಸರ್ವಯತ್ನ ಮಾಡುತ್ತಿದ್ದೇನೆ. ಆದರೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನನ್ನ ವಿರುದ್ಧ ಕ್ರಿಮಿನಲ್ ದೋಷಾರೋಪ ಹೊರಿಸಲು ದೃಢ ನಿರ್ಧಾರ ಮಾಡಿವೆ ಎಂದು ಅವರು ನುಡಿದರು.  ಅತ್ಯಂತ ಅಚ್ಚರಿಯ ವಾಸ್ತವಾಂಶ ಏನೆಂದರೆ ಸರ್ಕಾರಿ ರಂಗದ ಬ್ಯಾಂಕುಗಳು ಸೇರಿದಂತೆ ಸಾಲಗಾರರಿಗೆ ಹಣ ಮರುಪಾವತಿ ಮಾಡುವ ಸಲುವಾಗಿ ಆಸ್ತಿಗಳನ್ನು ಮಾರಾಟ ಮಾಡಲು ಅವಕಾಶ ನೀಡುವಂತೆ ಕೋರಿ ನನ್ನ ಸಮೂಹ ಸಲ್ಲಿಸಿದ ಅರ್ಜಿಗಳನ್ನು ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ ವಿರೋಧಿಸಿದೆ. ಸರ್ಕಾರವು ನಾನು ಸರ್ಕಾರಿ ರಂಗದ ಸಾಲವನ್ನು ಮರುಪಾವತಿ ಮಾಡಬೇಕು ಎಂಬುದಾಗಿ ಬಯಸಿದೆಯೇ ಅಥವಾ ಇಲ್ಲವೇ ಎಂಬ ಮೂಲಭೂತ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ ಎಂದು ಮಲ್ಯ ಹೇಳಿದರು.  ಪ್ರಧಾನಿ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಪ್ರಧಾನಿಯವರ ನೂತನ ಉಪಕ್ರಮಗಳನ್ನು ಶ್ಲಾಘಿಸಿದ ಮಲ್ಯ, ತಾವು ವಿವಿಧ ಸಂಸ್ಥೆಗಳನ್ನು ಯಶಸ್ವಿಯಾಗಿ ಕಟ್ಟಿ ಬೆಳೆದಿದ್ದನ್ನು ಉಲ್ಲೇಖಿಸಿದ್ದಾರೆ. ವಿಶ್ವದಲ್ಲೇ ಬೃಹತ್ತಾದ ಯುನೈಟೆಡ್ ಸ್ಪಿರಿಟ್ಸ್ ಕಂಪೆನಿ, ಮತ್ತು ಭಾರತದಲ್ಲೇ ಅತಿ ದೊಡ್ಡದಾದ ಯುನೈಟೆಡ್ ಬ್ರೀವರೀಸ್ ನ್ನು  ಮೂರು ದಶಕಗಳ ಅವಧಿಯಲ್ಲಿ ಕಟ್ಟಿದ ತೃಪ್ತಿ ತನಗಿದೆ. ಇವುಗಳ ಮೂಲಕ ಕೋಟ್ಯಂತರ ರೂಪಾಯಿಗಳ ತೆರಿಗೆಯನ್ನೂ ಸರ್ಕಾರದ ಬೊಕ್ಕಸಕ್ಕೆ ಪಾವತಿಸಿದ್ದೇನೆ. ಮತ್ತು ಸಹಸ್ರಾರು ಮಂದಿಗೆ ಉದ್ಯೋಗ ಒದಗಿಸಿದ್ದೇನೆ. ನಷ್ಟದಲ್ಲಿದ್ದ ಹಿಂದೂಸ್ಥಾನ್ ಪಾಲಿಮರ್‍ಸ್ ಲಿಮಿಟೆಡ್ ಮತ್ತು ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್‍ಸ್ ಲಿಮಿಟೆಡ್ ಗಳನ್ನು ಯಶಸ್ವಿಯಾಗಿ ಮುನ್ನಡೆಸಿ, ಬ್ಯಾಂಕುಗಳೂ ಸೇರಿದಂತೆ ಅವುಗಳಲ್ಲಿ ಹಣ ತೊಡಗಿಸಿದವರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ ಎಂದು ಮಲ್ಯ ಬರೆದಿದ್ದರು.  ೧೯೮೮ರಿಂದ ಅನಿವಾಸಿ ಭಾರತೀಯನಾಗಿ ಆಲ್ಕೋಹಾಲಿಕ್ಸ್ ಬ್ರೀವರೇಜಸ್, ಪೆಯಿಂಟ್ಸ್ ಮತ್ತು ಹಾಸ್ಪಟಾಲಿಟಿ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಜಾಗತಿಕ ಉದ್ಯಮಗಳನ್ನು ಅಭಿವೃದ್ಧಿ ಪಡಿಸಿದ್ದೇನೆ. ಆದರೆ ದುರದೃಷ್ಟಕರವಾಗಿ ಇವು ಯಾವುದನ್ನೂ ಮಾಧ್ಯಮಗಳು ಅರ್ಥ ಮಾಡಿಕೊಂಡಿಲ್ಲ, ಮೆಚ್ಚಿಕೊಂಡಿಲ್ಲ ಮತ್ತು ಜನರ ಗಮನಕ್ಕೂ ತಂದಿಲ್ಲ ಎಂದು ಮಲ್ಯ ದುಃಖ ವ್ಯಕ್ತ ಪಡಿಸಿದ್ದರು.  ಪ್ರಸ್ತುತ ಪ್ರತಿಕೂಲ ಸನ್ನಿವೇಶದಲ್ಲಿ ತಮ್ಮನ್ನು ನ್ಯಾಯೋಚಿತ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂಬುದಾಗಿ ಅವರು ಪ್ರಧಾನಿಗೆ ಪತ್ರದಲ್ಲಿ ಮನವಿ ಮಾಡಿದ್ದರು. ೯,೦೦೦ ಕೋಟಿಗೂ ಹೆಚ್ಚು ಮೌಲ್ಯದ ಸಾಲ ಬಾಕಿ ಇಟ್ಟು, ೨೦೧೬ ರಲ್ಲಿ ಲಂಡನ್‌ಗೆ ಪರಾರಿಯಾಗಿದ್ದ ಮಲ್ಯ ಅವರನ್ನು  ವಾರಂಟ್ ಮೇಲೆ ಬಂಧಿಸಿ ಕೂಡಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಅವರನ್ನು ಭಾರತಕ್ಕೆ ಕರೆತರಲು ಸರ್ಕಾರ ಶತಾಯಗತಾಯ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಇದುವರೆಗೂ ಅದು ಸಾಧ್ಯವಾಗಿಲ್ಲ.

2018: ಅಯೋಧ್ಯಾ:  ’ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಡಿ. ೨೦೧೯ ರ ಲೋಕಸಭಾ ಚುನಾವಣೆಯ ಒಳಗೆ ಅಯೋಧ್ಯೆಯಲ್ಲಿ  ರಾಮ ಮಂದಿರ ನಿರ್ಮಾಣ ಮಾಡುತ್ತೇವೆ. ಅಲ್ಲಿಯವರೆಗೆ ತಾಳ್ಮೆಯಿಂದಿರಿ ಎಂಬುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ ಸಮ್ಮೇಳನದಲ್ಲಿ  ಸ್ವಾಮೀಜಿಗಳಿಗೆ ಭರವಸೆ ನೀಡಿದರು.  ‘ಮೊಘಲ್ ಚಕ್ರವರ್ತಿ ಬಾಬರ್ ರಾಮಮಂದಿರವನ್ನು ಕೆಡವಿಹಾಕಲು ಯಾವುದೇ ನ್ಯಾಯಾಲಯದ ಆದೇಶದೊಂದಿಗೆ ಬಂದಿರಲಿಲ್ಲ ಮತ್ತು ೧೯೯೨ರಲ್ಲಿ ಬಾಬರಿ ಮಸೀದಿಯ ಧ್ವಂಸ ಯಾವುದೇ ನ್ಯಾಯಾಲಯದ ನಿರ್ದೇಶನ ಪ್ರಕಾರ ನಡೆದಿರಲಿಲ್ಲ ಎಂಬುದಾಗಿ ಇನ್ನೊಬ್ಬ ಬಿಜೆಪಿ ನಾಯಕ ಹಾಗೂ ಮಾಜಿ ಸಂಸತ್ ಸದಸ್ಯ ರಾಮ್ ವಿಲಾಸ್ ವೇದಾಂತಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಯೋಗಿ ಆದಿತ್ಯ ನಾಥ್ ಅವರಿಂದ ಈ ಭರವಸೆಯ ಮಾತುಗಳು ಬಂದವು.  ವೇದಾಂತಿ ಅವರು ಇನ್ನೂ ಮುಂದುವರೆದು ನಿವೇಶನದಲ್ಲಿ ದಿಢೀರನೆ ರಾಮಲಲ್ಲಾ ವಿಗ್ರಹ ಪ್ರತ್ಯಕ್ಷವಾದಂತೆ ಒಂದು ದಿನ ದಿಢೀರನೆ ದೇವಾಲಯ ನಿರ್ಮಾಣ ಕಾರ್ಯವೂ ಆರಂಭವಾಗಲಿದೆ ಎಂದೂ ಹೇಳಿದ್ದರು.  ಸಂತ ಸಮ್ಮೇಳನದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ರಾಮಮಂದಿರ ನಿರ್ಮಾಣ ಆಗಬೇಕು ಎಂಬುದರಲ್ಲಿ ಎರಡು ಮಾಡಿಲ್ಲ ಎಂದು ಹೇಳಿದರು. ’ನಾವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಅದರದ್ದೇ ಕಾರ್ಯಗಳನ್ನು ಹೊಂದಿದ್ದು ನಾವು ಅದನ್ನು ಮನಸ್ಸಿನಲ್ಲಿರಿಸಿಕೊಳ್ಳಬೇಕಾಗಿದೆ ಎಂದು ನುಡಿದರು.  ‘ಮರ್ಯಾದಾ ಪುರುಷೋತ್ತಮ ರಾಮ ವಿಶ್ವಕ್ಕೆ ಆದರ್ಶ ಪುರುಷ. ಅವನ ದಯೆ ಇದ್ದರೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತದೆ. ಅದರಲ್ಲಿ ಅನುಮಾನವೇ ಬೇಡ ಎಂದು ಮುಖ್ಯಮಂತ್ರಿ ಯೋಗಿ ಹೇಳಿದರು.  ವಿಶ್ವ ಹಿಂದು ಪರಿಷದ್ ಇದೀಗ ಮತ್ತೆ ರಾಮಮಂದಿರ ನಿರ್ಮಾಣಕ್ಕಾಗಿ ಆಂದೋಲನ ನಡೆಸಲು ಮುಂದಾಗಿದ್ದು, ಅದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿದೆ.  ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು  ಮೂರು ನಾಲ್ಕು ತಿಂಗಳಿನೊಳಗೆ ತೀರ್ಪು ಬಾರದೇ ಇದ್ದಲ್ಲಿ, ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ವಿಶ್ವ ಹಿಂದೂ ಪರಿಷದ್ ಹೇಳಿದೆ.

2018: ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ವ್ಯವಸ್ಥೆಯನ್ನು ಪರಿಷ್ಕರಿಸಲಾಗಿದ್ದು, ಹೊಸ ಭದ್ರತಾ ಸೂತ್ರಗಳ ಅಡಿಯಲ್ಲಿ ಇನ್ನು ಮುಂದೆ ಸಚಿವರು ಮತ್ತು ಅಧಿಕಾರಿಗಳು ಕೂಡಾ ಅವರ ಸಮೀಪಕ್ಕೆ ಸುಳಿಯದಂತೆ ಕ್ರಮ ಕೈಗೊಳ್ಳಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ’ಅತ್ಯಂತ ಹೆಚ್ಚಿನ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರ ಭದ್ರತೆಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದ್ದು, ಇನ್ನು ಮುಂದೆ ಸಚಿವರು ಮತ್ತು ಅಧಿಕಾರಿಗಳನ್ನು ಕೂಡಾ ವಿಶೇಷ ರಕ್ಷಣಾ ತಂಡವು (ಎಸ್ ಪಿಜಿ) ಅನುಮತಿ ನೀಡದ ವಿನಃ ಪ್ರಧಾನಿಯ ಅತ್ಯಂತ ಸಮೀಪಕ್ಕೆ ಬಿಡಲಾಗುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿತು. ಪ್ರಧಾನಿ ಮೋದಿ ಅವರಿಗೆ ’ಅಪರಿಚಿತ ಬೆದರಿಕೆಯನ್ನು ಗೃಹ ಇಲಾಖೆಯ ಹೇಳಿಕೆಯು ಉಲ್ಲೇಖಿಸಿದೆ. ೨೦೧೯ರ ಸಾಮಾನ್ಯ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರು ’ಅತ್ಯಂತ ಮೌಲ್ಯದ ಗುರಿ ಆಗಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ಮುಖ್ಯ ಪ್ರಚಾರಕರಾಗಲಿರುವ ಮೋದಿ ಅವರಿಗೆ ಅತ್ಯಂತ ದೊಡ್ಡ ಬೆದರಿಕೆಯಾಗಿರುವ ರೋಡ್ ಶೋ ಗಳನ್ನು ಕಡಿತಗೊಳಿಸುವಂತೆ ಮತ್ತು ಅದರ ಬದಲಿಗೆ ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡುವಂತೆ ಎಸ್ ಪಿಜಿ ಸಲಹೆ ಮಾಡಿದೆ ಎಂದು ನಂಬಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಪ್ರಧಾನಿಯವರ ಭದ್ರತೆಗಾಗಿ ರೂಪಿಸಲಾಗಿರುವ ನಿಕಟ ರಕ್ಷಣಾ ತಂಡಕ್ಕೆ (ಸಿಪಿಟಿ) ನೂತನ ಮಾಗದರ್ಶಿ ನಿಯಮಗಳನ್ನು ಮತ್ತು ಪ್ರಧಾನಿಗೆ ಇರುವ ಅಪಾಯದ ಅಂದಾಜನ್ನು ವಿವರಿಸಲಾಗಿದ್ದು, ಅಗತ್ಯ ಬಿದ್ದಲ್ಲಿ ಸಚಿವರು ಅಥವಾ ಅಧಿಕಾರಿಯನ್ನು ದೂರ ದಬ್ಬುವಂತೆ ಅದಕ್ಕೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿ ಹೇಳಿದರು. ತಾವು ಬಂಧಿಸಿರುವ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಜೊತೆಗೆ ಸಂಪರ್ಕ ಇರುವ ಐವರ ಪೈಕಿ ಒಬ್ಬನ ಮನೆಯಿಂದ ಪ್ರಧಾನಿಯವರಿಗೆ ಅಪಾಯ ಇರುವ ಸುಳಿವು ನೀಡಿದ ಪತ್ರವನ್ನು ವಶ ಪಡಿಸಿಕೊಂಡಿರುವುದಾಗಿ ಜೂನ್ ೭ರಂದು ನ್ಯಾಯಾಲಯಕ್ಕೆ ಪುಣೆ ಪೊಲೀಸರು ತಿಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿಯವರ ಭದ್ರತಾ ವ್ಯವಸ್ಥೆಯ ಬಗ್ಗೆ ಮರುವಿಮರ್ಶೆ ನಡೆಸಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದರು.  ಸದರಿ ಪತ್ರವು ’ಇನ್ನೊಂದು ರಾಜೀವ್ ಗಾಂಧಿ ಮಾದರಿ ಘಟನೆಯಲ್ಲಿ ಮೋದಿ ಅವರನ್ನು ಹತ್ಯೆಗೈಯುವ ಯೋಜನೆ ಬಗ್ಗೆ ಪ್ರಸ್ತಾಪಿಸಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.  ಇದಲ್ಲದೆ, ಇತ್ತೀಚೆಗಿನ ಪಶ್ಚಿಮ ಬಂಗಾಳದ ಭೇಟಿ ಕಾಲದಲ್ಲಿ ವ್ಯಕ್ತಿಯೊಬ್ಬ ಭದ್ರತೆಯ ಆರು ಹಂತಗಳನ್ನು ದಾಟಿ ಪ್ರಧಾನಿಯವರ ಪಾದ ಮುಟ್ಟಲು ನುಗ್ಗಿ ಬಂದ ಘಟನೆ ಭದ್ರತಾ ಸಂಸ್ಥೆಗಳನ್ನು ಪೇಚಿಗೆ ಈಡು ಮಾಡಿತ್ತು.  ಈ ಎರಡು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜನಾಥ ಸಿಂಗ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್‍ಯದರ್ಶಿ ರಾಜೀವ್ ಗೌಬಾ ಮತ್ತು ಗುಪ್ತಚರ ದಳ ನಿರ್ದೇಶಕ ರಾಜೀವ್ ಅವರ ಜೊತೆಗೆ ಪ್ರಧಾನಿಯವರ ಭದ್ರತೆ ಬಗ್ಗೆ ಪರಾಮರ್ಶಿಸಲು ಸಭೆ ನಡೆಸಿದ್ದರು.  ಈ ಸಭೆಯಲ್ಲಿ ಗೃಹ ಸಚಿವರು ಮೋದಿ ಅವರ ಭದ್ರತಾ ವ್ಯವಸ್ಥೆಗಳನ್ನು ಸೂಕ್ತವಾಗಿ ಬಲ ಪಡಿಸಲು ಇತರ ಸಂಸ್ಥೆಗಳ ಜೊತೆ ಸಮಾಲೋಚಿಸಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಮಾವೋವಾದಿಗಳು ಛತ್ತೀಸ್ ಗಢ, ಜಾರ್ಖಂಡ್, ಮಧ್ಯ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಆಗಾಗ ಪ್ರತ್ಯಕ್ಷರಾಗಿ ದಾಳಿ ನಡೆಸುತ್ತಿರುವುದನ್ನು ಅತ್ಯಂತ ಸೂಕ್ಷ್ಮ ಘಟನೆಗಳು ಎಂಬುದಾಗಿ ಬಣ್ಣಿಸಿದ ದೃಹ ಸಚಿವಾಲಯವು ಈ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ತಮ್ಮ ರಾಜ್ಯಗಳಿಗೆ ಪ್ರಧಾನಿ ಭೇಟಿ ನೀಡುವ ವೇಳೆಯಲ್ಲಿ ಹೆಚ್ಚುವರಿ ನಿಗಾ ವಹಿಸುವಂತೆ ಸೂಚನೆ ನೀಡಿದೆ ಎಂದು ಅಧಿಕಾರಿ ಹೇಳಿದರು.  ಭದ್ರತಾ ಸಂಸ್ಥೆಗಳು ವಿಶೇಷವಾಗಿ ಕೇರಳ ಮೂಲದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಬಗೆಗೂ ಹೆಚ್ಚಿನ ಕಣ್ಣಿಟ್ಟಿವೆ. ಈ ಸಂಘಟನೆಯು ತೀವ್ರವಾದಿ ಗುಂಪುಗಳ ಮುಂಚೂಣಿ ಸಂಸ್ಥೆ ಎಂದು ಭದ್ರತಾ ಸಂಸ್ಥೆಗಳು ನಂಬಿವೆ.

2018: ನವದೆಹಲಿ: ೧೯೭೫ರ ಜೂನ್ ೨೫ರಂದು ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಅಲಹಾಬಾದ್ ಹೈಕೋರ್ಟ್ ತಮ್ಮ ವಿರುದ್ಧ ನೀಡಿದ್ದ ತೀರ್ಪಿನ ಬಳಿಕ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ದೇಶದಲ್ಲಿ ’ಆಂತರಿಕ ತುರ್ತು ಸ್ಥಿತಿ ಜಾರಿಗೊಳಿಸಲು ತೀರ್ಮಾನಿಸಿ ರಾಷ್ಟ್ರಪತಿ ಅವರ ಮೂಲಕ ಜೂನ್ ೨೫ರಂದು ತುರ್ತುಸ್ಥಿತಿ ಘೋಷಣೆ ಮಾಡಿಸಿದ್ದರು.  ತುರ್ತು ಸ್ಥಿತಿ ಘೋಷಣೆಯ ಜೊತೆಗೇ ದೇಶಾದ್ಯಂತ ಹಲವಾರು ನಾಯಕರು ಬಂಧನಕ್ಕೊಳಗಾಗಿದ್ದರು. ಅಂದಿನ ಜನಸಂಘದ (ಈಗಿನ ಬಿಜೆಪಿ) ನಾಯಕರು ಕೂಡಾ ಬಂಧನಕ್ಕೊಳಗಾಗಿದ್ದರು.  ಹಲವರು ಬಂಧನ ತಪ್ಪಿಸಿಕೊಳ್ಳಲು ವೇಷಗಳನ್ನು ಮರೆಸಿ ಓಡಾಡುತ್ತಿದ್ದರು. ಅಂತಹ ಛದ್ಮವೇಷಧಾರಿಗಳಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಒಬ್ಬರಾಗಿದ್ದರು.  ಹೌದು, ತುರ್ತು ಪರಿಸ್ಥಿತಿಯ ವೇಳೆ ನರೇಂದ್ರ ಮೋದ್ರಿ ಅವರು ಸೆರೆಮನೆಗೆ ಹೋಗಿರಲಿಲ್ಲ. ಆದರೆ, ಅವರು ಸೆರೆಮನೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಹಲವಾರು ವೇಷಗಳನ್ನು ಧರಿಸಿಕೊಂಡು ಓಡಾಡುತ್ತಿದ್ದರು. ಬಚ್ಚಿಟ್ಟುಕೊಳ್ಳಲು ಸೃಜನಶೀಲ ಮಾರ್ಗಗಳನ್ನು ಅವರು ಹುಡುಕುತ್ತಿದ್ದರು ಎಂದು ಹಿರಿಯ ಪತ್ರಕರ್ತ ನೀಲಾಂಜನ್ ಮುಖ್ಯೋಪಾಧ್ಯಾಯ ಹೇಳಿದರು. ತುರ್ತು ಪರಿಸ್ಥಿತಿಯ ಘೋಷಣೆ ಮಾಡಿದ ಬಳಿಕ ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿಪಕ್ಷ ನಾಯಕರನ್ನು ಜೈಲಿಗಟ್ಟುತ್ತಿದ್ದರು. ಆದರೆ, ಹಲವರು ಇದರಿಂದ ಪಾರಾಗಲು ವಿವಿಧ ರೀತಿಯ ವೇಷ ಹಾಕಿಕೊಳ್ಳುತ್ತಿದ್ದರು. ಆಗ ಆರೆಸ್ಸೆಸ್ ಪ್ರಚಾರಕರಾಗಿದ್ದ ಮೋದಿ ಬಂಧನವನ್ನು ತಪ್ಪಿಸಿಕೊಳ್ಳಲು ಸಿಖ್ ವೇಷ ಧರಿಸಿ ಓಡಾಡುತ್ತಿದ್ದರಂತೆ.  ಆರೆಸ್ಸೆಸ್ ಸೇರಿದಂತೆ ಹಲವಾರು ಸಂಘನೆಗಳನ್ನು ಸರ್ಕಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಮೋದಿ ಆಗ ಸಿಖ್ ವೇಷ ಧರಿಸುತ್ತಿದ್ದರು. ಸಿಖ್ ವೇಷದಲ್ಲಿ ಅವರು ನಿಷೇಧಿತ ಸಾಹಿತ್ಯವನ್ನು ದೆಹಲಿಗೆ ಒಯ್ದು ಸೆರೆಮನೆಯಲ್ಲಿದ್ದ  ಜನಸಂಘದ ನಾಯಕರನ್ನು ಭೇಟಿ ಮಾಡಿದ್ದರು ಎಂದು ವರದಿಯೊಂದು ಹೇಳಿತು. ಆಗ ೨೫ ವರ್ಷ ವಯಸ್ಸಿನವರಾಗಿದ್ದ ಮೋದಿ, ಸನ್ಯಾಸಿಯ ವೇಷ ಧರಿಸಿ ಜಾರ್ಜ್ ಫರ್ನಾಂಡಿಸ್ ಮತ್ತಿತರ ನಾಯಕರನ್ನು ಸುರಕ್ಷಿತ ಸ್ಥಳಗಳಿಗೆ ಬಿಟ್ಟು ಬರುತ್ತಿದ್ದರು. ಇದೇ ರೀತಿ ಆಗ ಪ್ರಮುಖ ನಾಯಕರನ್ನು ಸಂಪರ್ಕಿಸಿ ಅವರಿಗೆ ನಿಷೇಧಿತ ಸಾಹಿತ್ಯವನ್ನು ನೀಡುತ್ತಿದ್ದರು ಎಂದು ಹೇಳಲಾಯಿತು. ಮೋದಿ ಅವರನ್ನು ಆಗ ’ಪ್ರಕಾಶ್ ಎಂಬ ಗುಪ್ತ ಹೆಸರಿನಿಂದ ಕರೆಯಲಾಗುತ್ತಿತ್ತು. ತುರ್ತು ಪರಿಸ್ಥಿತಿ ಸಮಯದಲ್ಲಿ ಅವರು ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ನಡೆಸುತ್ತಿದ್ದ ಭೂಗತ ಚಟುವಟಿಕೆಗಳಿಂದಲೇ ಕ್ರಮೇಣವಾಗಿ ದೊಡ್ಡ ನಾಯಕರಾಗಿ ಹೊರಹೊಮ್ಮಿದರು. ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ಬಳಿಕ ಮೋದಿಯ ಹೆಸರು ಆರೆಸ್ಸೆಸ್ ವಲಯದಲ್ಲಿ ಚಿರಪರಿಚಿತವಾಯಿತು ಮತ್ತು ಮೋದಿ ಅವರು ಮಾಡಿದ ಈ ಕಾರ್ಯಗಳಿಂದಲೇ ಅವರ ಮೌಲ್ಯವೂ ಹೆಚ್ಚಾಗುತ್ತಾ ಹೋಯಿತು ಎಂದು ನೀಲಾಂಜನ್ ಮುಖೋಪಾಧ್ಯಾಯ ಹೇಳಿದರು.  
2008: ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ಷಾ ಅವರು ಈದಿನ ಮಧ್ಯರಾತ್ರಿ ತಮಿಳುನಾಡಿನ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ನಿಧನರಾದರು. ಕೆ.ಎಂ.ಕಾರ್ಯಪ್ಪ ಅವರ ನಂತರ ಸೇನೆಯ ಉನ್ನತ ಗೌರವ ಪಡೆದ ಎರಡನೇ ವ್ಯಕ್ತಿಯಾದ ಮಾಣಿಕ್ಷಾ ಅವರು ಬಾಂಗ್ಲಾದೇಶದ ಉಗಮಕ್ಕೆ ಕಾರಣವಾದ 1971ರ ಭಾರತ- ಪಾಕ್ ಯುದ್ಧದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

2007: ತಮಿಳು ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಹಾಗೂ ನಿರ್ದೇಶಕ ಜೀವಾ (46) ಅವರು ಮಾಸ್ಕೋದಲ್ಲಿ ಹೃದಯಾಘಾತದಿಂದ ನಿಧನರಾದರು. ತಮಿಳು ಚಲನಚಿತ್ರ `ಧೂಮ್ ಧೂಮ್' ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿತು.

2007: ಗಾಯಗಳನ್ನು ಗುಣಪಡಿಸಬಲ್ಲಂತಹ ದೀರ್ಘಕಾಲ ಉಳಿಯಬಲ್ಲ `ಕೃತಕ ಚರ್ಮವನ್ನು' ತಾವು ಪ್ರಯೋಗಾಲಯದಲ್ಲಿ (ಲ್ಯಾಬೋರೇಟರಿ) ಸೃಷ್ಟಿಸಿರುವುದಾಗಿ ಬ್ರಿಟಿಷ್ ಜೈವಿಕ ತಂತ್ರಜ್ಞಾನ ಕಂಪೆನಿ ಇಂಟರ್ಸೆಟೆಕ್ಸ್ ಗ್ರೂಪಿನ ವಿಜ್ಞಾನಿಗಳು ಪ್ರಕಟಿಸಿದರು. ತಾವು ಮಾಡಿರುವ ಈ ಸಾಧನೆ ವೈದ್ಯಕೀಯ ಪ್ರಯೋಗದಲ್ಲಿ ಯಶಸ್ವಿಯಾಗಿದೆ ಎಂದು ಅವರು ಘೋಷಿಸಿದರು.

2007: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಬೆಂಗಳೂರಿನ ಪದ್ಮನಾಭ ನಗರದ ನಿವಾಸದಲ್ಲಿ ರೈತ ಸೋಮಶೇಖರ (45) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಇವರು ಹಾಸನ ಜಿಲ್ಲೆ ಹಿರೀಸಾವೆಯವರು.

2007: 1789 ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದ ಸಂಸತ್ತಿನ ಮೇಲ್ಮನೆಯಾದ ಸೆನೆಟಿನಲ್ಲಿ ಜುಲೈ 12ರಂದು ಹಿಂದೂ ಪ್ರಾರ್ಥನೆ ಮೂಲಕ ಕಲಾಪಕ್ಕೆ ಚಾಲನೆ ನೀಡಲಾಗುವುದು. ಹಿಂದೂ ಪುರೋಹಿತ ರಾಜನ್ ಅವರು ಪ್ರಾರ್ಥನೆ ಸಲ್ಲಿಸಿ ಇತಿಹಾಸ ಸೃಷ್ಟಿಸುವರು ಓಂಕಾರದೊಂದಿಗೆ ಅವರ ಪ್ರಾರ್ಥನೆ ಆರಂಭವಾಗುವುದು ಎಂದು ಈದಿನ ಪ್ರಕಟಿಸಲಾಯಿತು.

2007: ಮಣಿಪಾಲ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ಅನಿಮೇಶನ್ ಪದವಿ ಶಿಕ್ಷಣವನ್ನು ಆರಂಭಿಸಿತು.

2006: ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ತನ್ನ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ ಎಲ್ಲ ನಾಲ್ವರು ಸದಸ್ಯರನ್ನೂ ಕಿಚ್ಚಿಟ್ಟು ಕೊಂದ ಮುಂಬೈ ನಗರದ ವರ್ತಕನಿಗೆ ಕೆಳಗಿನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದು ಮರಣ ದಂಡನೆಯನ್ನು ದೃಢ ಪಡಿಸಿತು. `ಇದು ಅಪರೂಪಗಳಲ್ಲೇ ಅಪರೂಪದ ಪ್ರಕರಣ' ಎಂದು ಹೈಕೋರ್ಟ್ ಬಣ್ಣಿಸಿತು. ತನ್ನ ಪತ್ನಿ ಕಮಲಜೀತ್, ಪುತ್ರ ಅಮನದೀಪ್, ಪುತ್ರಿಯರಾದ ನಿತಿ ಮತ್ತು ತಾನಿಯಾಳನ್ನು 2003ರ ಏಪ್ರಿಲ್ 10ರಂದು ಅಜಿತ್ ಸಿಂಗ್ ಗುಜ್ರಾಲ್ ಬೆಂಕಿ ಹಚ್ಚಿ ಕೊಂದಿದ್ದ.

2006: ಪ್ರಾರ್ಥನೆಯ ಮೂಲಕ 55 ವರ್ಷದ ವ್ಯಕ್ತಿಯ ಕ್ಯಾನ್ಸರ್ ಗುಣಪಡಿಸಿದ `ಪ್ರಾರ್ಥಿಸುವ ಮಾತೆ' ಎಂದೇ ಖ್ಯಾತಿ ಪಡೆದಿರುವ ಕೇರಳದ ತ್ರಿಶ್ಯೂರಿನ ಸಿಸ್ಟರ್ ಯುಫ್ರೇಸಿಯಾ ಅವರನ್ನು `ಪರಮಾನಂದ ನೀಡುವ' ವ್ಯಕ್ತಿಗಳ ಪಟ್ಟಿಗೆ ಸೇರಿಸುವ ಮೂಲಕ ಪೋಪ್ 16ನೇ ಬೆನೆಡಿಕ್ಟ್ ಆಕೆಯ `ಪವಾಡ'ಕ್ಕೆ ಮಾನ್ಯತೆಯ ಮುದ್ರೆ ಒತ್ತಿ ಪತ್ರ ಬರೆದರು. ಸಿಸ್ಟರ್ ಯುಫ್ರೇಸಿಯಾ ಅವರ `ಪ್ರಾರ್ಥನಾ ಪವಾಡ'ದ ಬಗ್ಗೆ ವೈದ್ಯಕೀಯ, ಸೈದ್ಧಾಂತಿಕ ಹಾಗೂ ಕಾರ್ಡಿನಲ್ ಗಳ ಸಮಾಲೋಚನಾ ವರದಿಗಳನ್ನು ಸಲ್ಲಿಸಲಾಗಿತ್ತು. ಸಮೀಪದ ಅಂಚೇರಿಯ ನಿವಾಸಿ ಕ್ಯಾನ್ಸರ್ ರೋಗಿ ಥರಕನ್ ಥಾಮಸ್ ಅವರ ಕಿರಿಹೊಟ್ಟೆಯ ತಟ್ಟೆಲುಬು ಅಥವಾ ಮೂತ್ರಪಿಂಡದ ಕುಳಿಯಲ್ಲಿ ಇದ್ದ ಕ್ಯಾನ್ಸರ್ ಗಡ್ಡೆ 1997ರ ಡಿಸೆಂಬರಿನಲ್ಲಿ ಸಿಸ್ಟರ್ ಯುಫ್ರೇಸಿಯಾ ಅವರ ಪ್ರಾರ್ಥನೆಯಿಂದ ಕ್ಯಾನ್ಸರ್ ವಾಸಿಯಾಯಿತು ಎಂದು ಜುಬಿಲಿ ವೈದ್ಯಕೀಯ ಆಸ್ಪತ್ರೆಯ ಮೂಳೆತಜ್ಞ ಡಾ. ಎಂ. ರಾಜೀವ ರಾವ್  ದೃಢಪಡಿಸಿದ್ದರು.

2006: ಈಕ್ವೆಡಾರ್ ವಿರುದ್ಧ ಫ್ರೀಕಿಕ್ ನಿಂದ ಗೋಲು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕ ಡೇವಿಡ್ ಬೆಕಮ್ ಮೂರೂ ವಿಶ್ವಕಪ್ ನಲ್ಲಿ ಗೋಲು ಗಳಿಸಿದ ಇಂಗ್ಲೆಂಡಿನ ಏಕೈಕ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಫ್ರಾನ್ಸಿನಲ್ಲಿ ನಡೆದ 1998ರ ವಿಶ್ವಕಪ್, 2002ರ ವಿಶ್ವಕಪ್ ಮತ್ತು 2006ರ ವಿಶ್ವಕಪ್ನಲ್ಲಿ ಬೆಕಮ್ ಗೋಲು ಗಳಿಸಿದ್ದರು.

1975: ಭಾರತದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ಸಂವಿಧಾನದ 352ನೇ ವಿಧಿಯನ್ವಯ ದೇಶಾದ್ಯಂತ `ತುರ್ತು ಪರಿಸ್ಥಿತಿ' ಘೋಷಿಸಿದರು. ಆಂತರಿಕ ತೊಂದರೆಗಳಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಅತ್ಯಂತ ಕೆಟ್ಟ ಘಳಿಗೆ ಎಂದು ಪರಿಗಣನೆಯಾಯಿತು.

1960: ಕಲಾವಿದ ಸುಗ್ಗನಹಳ್ಳಿ ಷಡಕ್ಷರಿ ಜನನ.

1957: ಕಲಾವಿದ ಕೃಷ್ಣಮೂರ್ತಿ ಎಚ್.ಎಸ್. ಜನನ.

1957: ಕಲಾವಿದೆ ಸುಶೀಲಾ ಮೆಹತಾ ಜನನ.

1945: ಜನಪದ ಗೀತೆ, ಸುಗಮ ಸಂಗೀತ ಕ್ಷೇತ್ರಗಳ ವಿಶಿಷ್ಟ ಗಾಯಕಿ ಜಯಶ್ರೀ ಗುತ್ತಲ ಅವರು ತಿರುಮಲರಾವ್ ದೇಶಪಾಂಡೆ- ಲಕ್ಷ್ಮೀಬಾಯಿ ದಂಪತಿಯ ಮಗಳಾಗಿ ವಿಜಾಪುರ ಜಿಲ್ಲೆಯ ಬದಾಮಿ ತಾಲ್ಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ಜನಿಸಿದರು.

1944: ಐವತ್ತು ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವಸಂಸ್ಥೆ ಚಾರ್ಟರಿಗೆ ಸಹಿ ಹಾಕಿ ಸರ್ವಾನುಮತದಿಂದ ಅದನ್ನು ಅಂಗೀಕರಿಸಿದರು. 1945ರ ಅಕ್ಟೋಬರಿನಲ್ಲಿ ಅದು ಅನುಷ್ಠಾನಗೊಂಡಿತು.

1928: ಜಪಾನೀ ಸಂಶೋಧಕ ಯೊಶಿರೊ ನಕಾಮತ್ಸ್ ಜನ್ಮದಿನ. 3000 ಪೇಟೆಂಟ್ ಗಳನ್ನು ಪಡೆದುಕೊಂಡು ಅವರು ಜಾಗತಿಕ ದಾಖಲೆಯನ್ನು ಸ್ಥಾಪಿಸಿದ್ದಾರೆ. 1950ರಲ್ಲಿ ಟೋಕಿಯೋದ ಇಂಪೀರಿಯಲ್ ಯುನಿವರ್ಸಿಟಿಯಲ್ಲಿ ಫ್ಲಾಪಿ ಡಿಸ್ಕನ್ನು ಸಂಶೋಧಿಸಿದ ಕೀರ್ತಿ ಕೂಡಾ ಇವರದೇ.

1902: ಅಮೆರಿಕದ ಎಲೆಕ್ಟ್ರಿಕಲ್ ಎಂಜಿನಿಯರ್ ಮತ್ತು ಕೈಗಾರಿಕೋದ್ಯಮಿ ವಿಲಿಯಂ ಪಿ. ಲೀಯರ್ (1902-78) ಜನ್ಮದಿನ. ಇವರ ಲೀಯರ್ ಜೆಟ್ ಕಾರ್ಪೊರೇಷನ್ ಜಗತ್ತಿನಲ್ಲಿ ಬೃಹತ್ ಪ್ರಮಾಣದಲ್ಲಿ ಬಿಸಿನೆಸ್ ಜೆಟ್ ಏರ್ ಕ್ರಾಫ್ಟ್ ಗಳನ್ನು ಮೊತ್ತ ಮೊದಲ ಬಾರಿಗೆ ನಿರ್ಮಾಣ ಮಾಡಿತು. ಆಟೋಮೊಬೈಲ್ ರೇಡಿಯೋ, ಎಂಟು ಟ್ರ್ಯಾಕಿನ ಸ್ಟೀರಿಯೋ ಟೇಪ್ ಪ್ಲೇಯರುಗಳನ್ನು ಆಟೋಮೊಬೈಲುಗಳಿಗಾಗಿ ಅಭಿವೃದ್ಧಿ ಪಡಿಸಿದ್ದು ಕೂಡಾ ಇವರ ಈ ಸಂಸ್ಥೆಯೇ.

1541: ಇನ್ಕಾ ಸಾಮ್ರಾಜ್ಯವನ್ನು ಪರಾಭವಗೊಳಿಸಿದ ಹಾಗೂ ಲಿಮಾ ನಗರವನ್ನು ಸ್ಥಾಪಿಸಿದ ಸ್ಪೇನಿನ ದೊರೆ ಫ್ರಾನ್ಸಿಸ್ಕೋ ಪಿಝಾರೋನನ್ನು (1475-1541) ಕೊಲೆಗೈಯಲಾಯಿತು.

1539: ಶೇರ್ ಶಹಾ ಚೌಸಾ ಕದನದಲ್ಲಿ ಹುಮಾಯೂನನನ್ನು ಸೋಲಿಸಿದನು. ಆಫ್ಘನ್ನರಿಂದ ಸಹಸ್ರಾರು ಮಂದಿ ಹತರಾದರು. ಪರಾರಿಯಾಗಲು ಯತ್ನಿಸಿದವರನ್ನು ಗಂಗಾನದಿಯಲ್ಲಿ ಮುಳುಗಿಸಿ ಸಾಯಿಸಲಾಯಿತು. ಹುಮಾಯೂನ್ ತಪ್ಪಿಸಿಕೊಂಡು ಪಾರಾದ.

No comments:

Post a Comment