Friday, June 7, 2019

ಇಂದಿನ ಇತಿಹಾಸ History Today ಜೂನ್ 07

ಇಂದಿನ ಇತಿಹಾಸ History Today ಜೂನ್ 07
2019: ಅಮರಾವತಿ: ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಏರಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ ರೆಡ್ಡಿ ಅವರು ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ತಮ್ಮ ಸಚಿವ ಸಂಪುಟದಲ್ಲಿ ಐವರು ಉಪ ಮುಖ್ಯಮಂತ್ರಿಗಳನ್ನು ನೇಮಿಸುವ ನಿರ್ಧಾರ ಕೈಗೊಂಡರು. ಅಲ್ಲದೆ ತಮ್ಮ ಸಂಪುಟದ ಸಚಿವರಿಗೆ ಕೇವಲ ೩೦ ತಿಂಗಳುಗಳ (ಎರಡೂವರೆ ವರ್ಷ) ಕಾಲಾವಧಿಯನ್ನು ಮಾತ್ರ ನಿಗದಿ ಪಡಿಸುವ ಅಭೂತಪೂರ್ವ ನಿರ್ಧಾರ ಕೈಗೊಂಡರು. ನೂತನ ಉಪ ಮುಖ್ಯಮಂತ್ರಿಗಳು 08 ಜೂನ್  2019ರ ಶನಿವಾರ ಪ್ರಮಾಣವಚನ ಸ್ವೀಕರಿಸುವರು ಎಂದು  ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಜಗನ್ ಮೋಹನ್ ರೆಡ್ಡಿ ಹೇಳಿದರು. ೨೫ ಮಂದಿ ಸಚಿವರನ್ನು ಒಳಗೊಂಡ ಪೂರ್ಣ ಪ್ರಮಾಣದ ಸಚಿವ ಸಂಪುಟವನ್ನು ರಚಿಸುವುದಾಗಿ ಜಗನ್ ರೆಡ್ಡಿ ಅವರು ಅಮರಾವತಿಯ ತಡೆಪಳ್ಳಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ವೈಎಸ್ ಆರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಕಟಿಸಿದರು. ಸಭೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಪಕ್ಷದ ೧೫೧ ಮಂದಿ ವಿಧಾನಸಭಾ ಸದಸ್ಯರು ಮತ್ತು ಮಂದಿ ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರುಸಚಿವರಲ್ಲಿ ಐವರನ್ನು ಉಪ ಮುಖ್ಯಮಂತ್ರಿಗಳಾಗಿ ನೇಮಿಸಲಾಗುವುದು. ಪರಿಶಿಷ್ಟ ಜಾತಿ(ಎಸ್ ಸಿ), ಪರಿಶಿಷ್ಟ ಪಂಗಡ (ಎಸ್ ಟಿ), ಇತರೆ ಹಿಂದುಳಿದ ವರ್ಗಗಳು(ಒಬಿಸಿ), ಅಲ್ಪಸಂಖ್ಯಾತರು ಮತ್ತು ಮುಂದುವರೆದ ಕಾಪು ಸಮುದಾಯದಿಂದ ತಲಾ ಒಬ್ಬರಂತೆ ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದುಕ್ರಾಂತಿಕಾರಿ ಎಂಬುದಾಗಿ ಬಣ್ಣಿಸಲಾದ ನಿರ್ಧಾರವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಕಟಿಸುತ್ತಾ ಜಗನ್ ಹೇಳಿದರು.  ೨೫ ಮಂದಿ ಸಚಿವರೂ ಇದೇ ವೇಳೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎರಡೂವರೆ ವರ್ಷಗಳ ಅವಧಿಯಲ್ಲಿ ಅವರ ಕಾರ್ಯನಿರ್ವಹಣೆಯ ಮರುಪರಿಶೀಲನೆ ನಡೆಸಲಾಗುವುದು. ಅವರ ಪೈಕಿ ಶೇಕಡಾ ೯೦ರಷ್ಟು ಮಂದಿಯನ್ನು ಮರುಪರಿಶೀಲನೆ ಬಳಿಕ ಬದಲಾಯಿಸಲಾಗುವುದು ಎಂದು ಜಗನ್ ನುಡಿದರು.  ‘ಆದ್ದರಿಂದ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ ಎಂಬುದಾಗಿ ಭ್ರಮನಿರಸನಗೊಂಡವರು ಎರಡೂವರೆ ವರ್ಷಗಳ ಬಳಿಕ ಸಚಿವರಾಗುವ ಅವಕಾಶ ಪಡೆಯಲಿದ್ದಾರೆ. ಹೀಗ ಮಾಡುವ ಮೂಲಕ ಎಲ್ಲ ಅರ್ಹ ಶಾಸಕರಿಗೂ ಸಚಿವ ಸ್ಥಾನದ ಖಾತರಿಯೂ ಲಭಿಸುವುದು ಎಂದು ಜಗನ್ ಹೇಳಿದರು.  ‘ಸಚಿವ ಸ್ಥಾನವು ಗೌರವ ಅಲ್ಲ, ಬದಲಿಗೆ ಅದು ಜವಾಬ್ದಾರಿ ಎಂದು ಮುಖ್ಯಮಂತ್ರಿ ಬೊಟ್ಟು ಮಾಡಿದರುಸಂಪುಟ ವಿಸ್ತರಣೆಗೆ ಮುನ್ನವೇ ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಹೇಗೆ ಆರಿಸಲಾಗುವುದು ಎಂಬುದಾಗಿ ವಿವರಿಸಲು ಶಾಸಕಾಂಗ ಪಕ್ಷದ ಸಭೆ ನಡೆಸಿರುವುದು ಜಗನ್ ರೆಡ್ಡಿಯವರ ಹಾದಿ ಬದಲಾವಣೆಯ ಅಸಾಮಾನ್ಯ ಕ್ರಮ ಎಂದು ಶಾಸಕರು ಹೇಳಿದರು. ರೆಡ್ಡಿ ಅವರ ಪ್ರಸ್ತಾಪವನ್ನು ಬೆಂಬಲಿಸಿ ಸುಮಾರು ೩೫ ಶಾಸಕರು ಮಾತನಾಡಿದರು, ಕೆಲವು ಹಿರಿಯ ಸದಸ್ಯರು ಸಂದರ್ಭದಲ್ಲಿ ಭಾವುಕರಾದರು ಎಂದು ಮೂಲಗಳು ಹೇಳಿದವು. ಸಂಪುಟದ ಶೇಕಡಾ ೫೦ರಷ್ಟು ಮಂದಿಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ತುಂಬುವ ಮೂಲಕ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಖಾತರಿ ನೀಡಲಾಗುವುದು ಎಂದೂ ಮುಖ್ಯಮಂತ್ರಿ ಸಭೆಯಲ್ಲಿ ಹೇಳಿದರು.  ಏನಿದ್ದರೂ, ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಲಾಗುವ ಶಾಸಕರ ಹೆಸರುಗಳನ್ನು ಜಗನ್ ರೆಡ್ಡಿ ಅವರು ಪ್ರಕಟಿಸಿಲಿಲ್ಲ. ಸಂಪುಟಕ್ಕೆ ಆಯ್ಕೆಯಾದವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ ವಿಜಯ್ ಸಾಯಿ ರೆಡ್ಡಿ ಅವರು ಸಂಜೆಯೊಳಗಾಗಿ ವೈಯಕ್ತಿಕವಾಗಿ ತಿಳಿಸುವರು ಎಂದು ಜಗನ್ ಹೇಳಿದರು. ರಾಜ್ಯ ಸಚಿವ ಸಂಪುಟದಲ್ಲಿ ಐದು ಮಂದಿ ಉಪಮುಖ್ಯಮಂತ್ರಿಗಳನ್ನು ನೇಮಿಸುತ್ತಿರುವುದು ಇತಿಹಾಸದಲ್ಲೇ ಇದು ಪ್ರಥಮ. ಹಿಂದಿನ ಅವಧಿಯಲ್ಲಿ ತೆಲುಗುದೇಶಂ ಪಕ್ಷದ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ಇಬ್ಬರು ಉಪ ಮುಖ್ಯಮಂತ್ರಿಗಳನ್ನು - ನಿಮ್ಮಕಾಯಲ ಚಿನ್ನ ರಾಜಪ್ಪ ಮತ್ತು ಕೆ.. ಕೃಷ್ಣ ಮೂರ್ತಿ ಅವರನ್ನು ನೇಮಿಸಿದ್ದರು. ಅವರು ಕ್ರಮವಾಗಿ ಮಹತ್ವದ ಖಾತೆಗಳಾದ ಗೃಹ ಮತ್ತು ಕಂದಾಯ ಸಚಿವಾಲಯಗಳನ್ನು ಹೊಂದಿದ್ದರು. ತೆಲಂಗಾಣದಲ್ಲಿ ಕೂಡಾ, ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊಂದಿದ್ದರು. ಉಪ ಮುಖ್ಯ ಮಂತ್ರಿಗಳಾಗಿದ್ದ  ಮೊಹಮ್ಮದ್ ಮಹಮೂದ್ ಅಲಿ ಮತ್ತು ಕಡಿಯಂ ಶ್ರೀಹರಿ ಅವರು ಗೃಹ ಮತ್ತು ಶಿಕ್ಷಣ ಖಾತೆಗಳನ್ನು ಹೊಂದಿದ್ದರು.

2019: ನವದೆಹಲಿ: ದುಬೈಯಲ್ಲಿ ೩೧ ಮಂದಿ ಪ್ರಯಾಣಿಕರಿದ್ದ ಬಸ್ಸು ಅಪಘಾತಕ್ಕೆ ಈಡಾಗಿದ್ದು, ೧೨ ಮಂದಿ ಭಾರತೀಯರು ಸೇರಿ ೧೭ ಮಂದಿ ಸಾವನ್ನಪ್ಪಿದ್ದಾರೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಭಾರತದ ಕಾನ್ಸುಲ್ ಜನರಲ್ ಕಚೇರಿ ತಿಳಿಸಿತು. ಮಸ್ಕತ್ -ದುಬೈ ಮಾರ್ಗದ ಬಸ್ಸಿನ ಚಾಲಕ ದುಬೈಯ ಅಲ್ ರಶೀದಿಯಾ ಮೆಟ್ರೂ ಸ್ಟೇಷನ್ನಲ್ಲಿ 06 ಜೂನ್ 2019ರ ಗುರುವಾರ ಸಂಜೆ ತನ್ನ ಬಸ್ಸನ್ನು ಬಸ್ಸುಗಳಿಗೆ ಮೀಸಲಾಗಿ ಇಲ್ಲದೇ ಇದ್ದ ಜಾಗಕ್ಕೆ ನುಗ್ಗಿಸಿದಾಗ ಅಪಘಾತ ಸಂಭವಿಸಿತು.  ಬಸ್ಸು ಒಮಾನಿ ಸರ್ಕಾರದ ಮ್ವಾಸಾಲತ್ ಸಾರಿಗೆ ಕಂಪೆನಿಗೆ ಸೇರಿದ್ದಾಗಿತ್ತು. ೩೧ ಜನರನ್ನು ಒಯ್ಯುತ್ತಿದ್ದ ಬಸ್ಸು ಹೈಟ್ ಬ್ಯಾರಿಯರ್ಗೆ ಅಪ್ಪಳಿಸಿದಾಗ ಬಸ್ಸಿನ ಎಡಬದಿ ಸಂಪೂರ್ಣ ನಜ್ಜುಗುಜ್ಜಾಗಿದ್ದು ಬದಿಯಲ್ಲಿ ಕುಳಿತಿದ್ದ ಪ್ರಯಾಣಿಕರು ಸಾವನ್ನಪ್ಪಿದರು. ಇನ್ನೂ ಕೆಲವು ಶವಗಳನ್ನು ಗುರುತಿಸ ಬೇಕಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಬಹುದು ಎಂದು ದುಬೈ ಪೊಲೀಸರು ತಿಳಿಸಿದರು. ‘ದುಬೈಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತರಾದ ಭಾರತೀಯರ ಸಂಖ್ಯೆ ೧೨ಕ್ಕೆ ತಲುಪಿದೆ ಎಂಬುದನ್ನು ಅತ್ಯಂತ ಬೇಸರದೊಂದಿಗೆ ತಿಳಿಸುತ್ತಿದ್ದೇವೆ. ನಮ್ಮ ಅಧಿಕಾರಿಗಳು ಅಗತ್ಯ ನೆರವು ನೀಡುವ ಸಲುವಾಗಿ ರಶೀದಿಯಾ ಪೊಲೀಸ್ ಠಾಣೆ ಮತ್ತು ಶವಾಗಾರಕ್ಕೆ ತೆರಳಿದ್ದಾರೆ ಎಂದು ವಿಪುಲ್ ಟ್ವೀಟ್ ಮಾಡಿದರು. ಪಾರ್ಥಿವ ಶರೀರಗಳಿಗೆ ಸಂಬಂಧಿಸಿದ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ನಾವು ಯತ್ನಿಸುತ್ತಿದ್ದೇವೆ ಎಂದು ಅವರು ಬರೆದರು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಅಪಘಾತದಲ್ಲಿ ಮೃತರಾದವರ ಕುಟುಂಬಗಳಿಗೆ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದರು. ದುಬೈಯಲ್ಲಿ ೧೨ ಮಂದಿ ಭಾರತೀಯರ ಜೀವ ಬಲಿ ಪಡೆದ ದುರದೃಷ್ಟಕರ ಬಸ್ಸ್ಸು ಅಪಘಾತದಿಂದ ನಾವು ಅತೀವ ದುಃಕ್ಕೆ ಒಳಗಾಗಿದ್ದೇವೆ. ಮೃತ ಕುಟುಂಬಗಳಿಗೆ ನನ್ನ ಪ್ರಾಮಾಣಿಕ ಸಂತಾಪಗಳು. ದುಬೈಯಲ್ಲಿನ ನಮ್ಮ ರಾಜತಾಂತ್ರಿಕ ಕಚೇರಿಯು ಎಲ್ಲ ನೆರವನ್ನೂ ಒದಗಿಸುತ್ತಿದೆ ಎಂದು ಜೈಶಂಕರ್ ಟ್ವೀಟ್ ಮಾಡಿದರು. ಮೃತರನ್ನು ವಿಕ್ರಮ್ ಠಾಕೂರ್, ವಿಮಲ್ ಠಾಕೂರ್, ಕಾರ್ತಿಕೇಯನ್ ಕೇಶವ ಪೈಲೈಕರ್,ಕಿರಣ್ ಜಾನಿ ಜಾನಿ ವಲ್ಲಿಥೊಟ್ಟಾಯಿಥಿಲ್ ಪೈಲಿ, ಫಿರೋಜ್ ಖಾನ್ ಅಜೀಜ್ ಪಠಾಣ್, ರೇಷ್ಮಾ ಫಿರೋಜ್ ಖಾನ್ ಪಠಾಣ್, ಜಮಾಲುದ್ದೀನ್ ಅರಕ್ಕಾವೀಟ್ಟಿಲ್, ರೋಶಿ ಮೂಲಚಂದಾನಿ, ಉಮರ್ ಚೊನೊಕತವಾತ್ ಮಮ್ಮದ್ ಪುತೇನ್, ನಬಿಲ್ ಉಮರ್ ಚೊನೊಕತವಾತ್ ಸೇರಿದ್ದಾರೆಭಾರತದ ರಾಜತಾಂತ್ರಿಕ ಕಚೇರಿಯು ಮೊದಲಿಗೆ ಅಪಘಾತದಲ್ಲಿ ಮೃತ ಭಾರತೀಯರ ಸಂಖ್ಯೆ ಎಂದು ತಿಳಿಸಿತ್ತು. ಬಳಿಕ ಮೃತರ ಸಂಖ್ಯೆ ಎಂದೂ ಬಳಿಕ ಮೃತರ ಸಂಖ್ಯೆ ೧೨ ಎಂದೂ ತಿಳಿಸಿತ್ತು. ನಾಲ್ವರು ಭಾರತೀಯರನ್ನು ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿಕೊಡಲಾಗಿದೆ. ಮೂವರು ಇನ್ನೂ ರಶೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾನ್ಸುಲೇಟ್ ಇದಕ್ಕೆ ಮುನ್ನ ಟ್ವೀಟ್ ಮಾಡಿತ್ತು. ಹೆಲ್ಪ್ ಲೈನ್ ಸಂಖ್ಯೆ +೯೭೧-೫೬೫೪೬೩೯೦೩- ಇದನ್ನು ಬಸ್ಸಿನಲ್ಲಿ ಪಯಣಿಸುತ್ತಿದ್ದವರ ಬಂಧುಗಳಿಗೆ ವಿಚಾರಣೆ ಸಲುವಾಗಿ ಬಿಡುಗಡೆ ಮಾಡಲಾಯಿತು. ದುಬೈ ಪೊಲೀಸರು ಇದಕ್ಕೆ ಮುನ್ನ ಸಾವಿನ ಸಂಖ್ಯೆಯನ್ನು ಟ್ವೀಟ್ ಮೂಲಕ ಪ್ರಕಟಿಸಿದ್ದರು. ದುಬೈ ಪೊಲೀಸರು ತಮ್ಮ ಸಂತಾಪವನ್ನೂ ವ್ಯಕ್ತ ಪಡಿಸಿದ್ದರು. ಝಾಯೆಡ್ ರಸ್ತೆಯ ಶೇಖ್ ಮೊಹಮ್ಮದ್ ಬಿನ್ ಝಯೇದ್ ರಸ್ತೆಯಲ್ಲಿ ೧೭ ಮಂದಿ ಪ್ರಯಾಣಿಕರು ಸಾವನ್ನಪ್ಪಿದ ಬಸ್ಸು ಅಪಘಾತದಲ್ಲಿ ಮೃತರಾದವರ ಕುಟುಂಬಗಳಿಗೆ ದುಬೈ ಪೊಲೀಸರ ಪ್ರಾಮಾಣಿಕ ಸಂತಾಪಗಳು ಎಂದು ದುಬೈ ಪೊಲೀಸರ ಟ್ವೀಟ್ ತಿಳಿಸಿತು.

2019: ಕೋಲ್ಕತ: ಜೂನ್ ೧೫ರಂದು ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೈಗೊಂಡ ನಿರ್ಧಾರವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯ ಘಟಕವುಟಿಎಂಸಿ ಮುಖ್ಯಸ್ಥರು ರಾಷ್ಟ್ರ ವಿರೋಧಿಯಂತೆ ವರ್ತಿಸುತ್ತಿದ್ದಾರೆ ಮತ್ತು ಬಂಗಾಳದ ಅಭಿವೃದ್ಧಿಯನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ ಎಂದು ಆಪಾದಿಸಿತು. ಬಿಜೆಪಿ ಟೀಕೆಗೆ ತತ್ ಕ್ಷಣವೇ ಎದಿರೇಟು ನೀಡಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯತೆ ಅಥವಾ ಅಭಿವೃದ್ಧಿಯ ಬಗ್ಗೆ ತಾನು ಬಿಜೆಪಿಯಂತಹ ಕೋಮುವಾದಿ ಪಕ್ಷದಿಂದ ಪಾಠಗಳನ್ನು ಕಲಿಯಬೇಕಾಗಿಲ್ಲ ಎಂದು ಹೇಳಿತು. ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿದ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಜಯಪ್ರಕಾಶ್ ಮಜುಂದಾರ್ ಅವರು ಮಮತಾ ಬ್ಯಾನರ್ಜಿ ಅವರ ಕ್ರಮವು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧ ಎಂದು ಹೇಳಿದರು.  ‘ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮುಂದಕ್ಕೆ ಸಾಗುತ್ತಿರುವಾಗ, ಮಮತಾ ಮಾತ್ರವೇ ಅದನ್ನು ವಿರೋಧಿಸುತ್ತಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಕೂಡಾ ನೀತಿ ಆಯೋಗದ ಸಭೆಗೆ ಹಾಜರಾಗುತ್ತಿದ್ದಾರೆ ಎಂದು ಮಜುಂದಾರ್ ನುಡಿದರು.  ‘ಇದು (ಮಮತಾ ನಿರ್ಧಾರ) ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧ. ಅವರು ರಾಷ್ಟ್ರ ವಿರೋಧಿಯಂತೆ ವರ್ತಿಸುತ್ತಿದ್ದಾರೆ ಮತ್ತು ಬಂಗಾಳದ ಬೆಳವಣಿಗೆಯನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ ಎಂದು ಮಜುಂದಾರ್ ಹೇಳಿದರುಬ್ಯಾನರ್ಜಿಯವರು ಜೂನ್ ೧೫ರಂದು ನೀತಿ ಆಯೋಗದ ಸಭೆಯಲ್ಲಿ ತಾವು ಹಾಜರಾಗಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದ್ದರು. ಆಯೋಗಕ್ಕೆ ರಾಜ್ಯ ಯೋಜನೆಗಳಿಗೆ ಬೆಂಬಲ ನೀಡಲು ಯಾವುದೇ ಆರ್ಥಿಕ ಅಧಿಕಾರಗಳಿಲ್ಲವಾದ್ದರಿಂದ ಅದೊಂದುನಿಷ್ಫಲ ಸಂಸ್ಥೆ ಎಂಬುದಾಗಿ ಮಮತಾ ತಮ್ಮ ಗೈರುಹಾಜರಿಗೆ ಕಾರಣ ನೀಡಿದ್ದರು.  ‘ರಾಜ್ಯಗಳ ಯೋಜನೆಗಳಿಗೆ ಬೆಂಬಲ ನೀಡಲು ನೀತಿ ಆಯೋಗಕ್ಕೆ ಯಾವುದೇ ಆರ್ಥಿಕ ಅಧಿಕಾರ ಇಲ್ಲದೇ ಇರುವ ವಾಸ್ತವಾಂಶದ ಹಿನ್ನೆಲೆಯಲ್ಲಿ, ಯಾವುದೇ ಆರ್ಥಿಕ ಅಧಿಕಾರವಿಲ್ಲದ ಸಂಸ್ಥೆಯ ಸಭೆಯಲ್ಲಿ ಪಾಲ್ಗೊಳ್ಳುವುದು ನನ್ನ ಪಾಲಿಗೆ ನಿಷ್ಫಲ ಎಂದು ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರುಜೂನ್ ೧೫ರಂದು ನಡೆಯಲಿರುವ ನೀತಿ ಆಯೋಗದ ಆಡಳಿತ ಮಂಡಳಿಯ ಐದನೇ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಲಿದ್ದಾರೆ. ಸಭೆಯ ರಾಷ್ಟ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಆಡಳಿತ ಮಂಡಳಿಯು ಜೂನ್ ೧೫ರಂದು ಚರ್ಚಿಸಲಿದೆನೀತಿ ಆಯೋಗ ಬಹಿಷ್ಕಾರದ ಟಿಎಂಸಿ ಮುಖ್ಯಸ್ಥರ ನಿರ್ಧಾರವನ್ನು ಟೀಕಿಸಿದ ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ಚೊಚ್ಚಲ ಬಾರಿಗೆ ಸಂಸತ್ ಸದಸ್ಯರಾಗಿರುವ ದಿಲೀಪ್ ಘೋಷ್ ಅವರು, ಸಭೆಗೆ ಗೈರು ಹಾಜರಾಗಲು ಮಮತಾ ಅವರು ಮುಂದೊಡ್ಡಿರುವ ಕಾರಣ ಕೇವಲಕುಂಟು ನೆಪ ಅಷ್ಟೆ ಎಂದರು. ಮಮತಾ ಬ್ಯಾನರ್ಜಿ ಅವರ ನಿರ್ಧಾರವು ಅವರು ಇನ್ನೂ ತಮ್ಮ ಸೋಲನ್ನು  ಒಪ್ಪಿಕೊಂಡಿಲ್ಲ ಮತ್ತು ಅವರು ಪ್ರತಿಯೊಂದನ್ನೂ ರಾಜಕೀಯ ಗೊಳಿಸಲು ಬಯಸುತ್ತಾರೆ ಎಂಬುದನ್ನು ಪ್ರತಿಫಲಿಸಿದೆ ಎಂದು ದಿಲೀಪ್ ಘೋಷ್ ಹೇಳಿದರು. ಆಕೆಗೆ ಬಗ್ಗೆ ನಾಚಿಕೆಯಾಗಬೇಕು ಎಂದು ಅವರು ನುಡಿದರು.  ‘ಕೇವಲ ಆಕೆಗೆ ಮಾತ್ರವೇ ನೀತಿ ಆಯೋಗದ ಜೊತೆಗೆ ಸಮಸ್ಯೆ ಇದೆ. ಇತರ ಮುಖ್ಯಮಂತ್ರಿಗಳಿಗೆ ಇಲ್ಲ. ಸಭೆಯಲ್ಲಿ ಪಾಲ್ಗೊಳ್ಳಲು ಇಚ್ಛೆ ಇಲ್ಲವಾದ ಕಾರಣ ಅವರು ಸಭೆ ತಪ್ಪಿಸಿಕೊಳ್ಳಲು ಕುಂಟು ನೆಪಗಳನ್ನು ಮುಂದೊಡ್ಡುತ್ತಿದ್ದಾರೆ ಎಂದು ಘೋಷ್ ಹೇಳಿದರು. ಬಿಜೆಪಿ ಟೀಕೆಯ ವಿರುದ್ಧ ಬಿಜೆಪಿ ನಾಯಕತ್ವದ ಮೇಲೆ ಪ್ರತಿದಾಳಿ ನಡೆಸಿದ ರಾಜ್ಯದ ಆಹಾರ ಸರಬರಾಜು ಸಚಿವ ಜ್ಯೋತಿಪ್ರಿಯೋ ಮುಲ್ಲಿಕ್  ಅವರು, ’ಟಿಎಂಸಿಗೆ ಅಥವಾ ಮಮತಾ ಬ್ಯಾನರ್ಜಿ ಅವರಿಗೆ ರಾಷ್ಟ್ರಿಯತೆ ಅಥವಾ ಅಭಿವೃದ್ಧಿ ಬಗ್ಗೆ ಬಿಜೆಪಿಯಂತಹ ಕೋಮುವಾದಿ ಪಕ್ಷದಿಂದ ಪಾಠ ಕಲಿಯಬೇಕಾದ ಅಗತ್ಯ ಇಲ್ಲ ಎಂದು ನುಡಿದರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಣ ರಾಜಕೀಯ ಘರ್ಷಣೆ ತಾರಕಕ್ಕೆ ಏರಿರುವುದರ ಮಧ್ಯೆಯೇ ಬ್ಯಾನರ್ಜಿ ಅವರು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡರು. ಇತ್ತೀಚೆಗಷ್ಟೇ ಮುಕ್ತಾಯಗೊಂಡಿರುವ ಚುನಾವಣೆಯಲ್ಲಿ ಲೋಕಸಭೆಯ ೪೨ ಲೋಕಸಭಾ ಸ್ಥಾನಗಳ ಪೈಕಿ ೧೮ ಸ್ಥಾನಗಳನ್ನು ಬಿಜೆಪಿಯು ಗೆದ್ದಿದ್ದು, ಅದರ ನಾಯಕರು ರಾಜ್ಯದಲ್ಲಿನ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ೨೦೨೧ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದಿಂದ ಕಿತ್ತು ಹಾಕುವುದಾಗಿ ಪ್ರತಿಪಾದಿಸಿದರು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ೩೪ ಸ್ಥಾನಗಳನ್ನು ಗೆದ್ದಿದ್ದ ಟಿಎಂಸಿ ಬಾರಿ ಕೇವಲ ೨೨ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿ ಬಂದಿತ್ತುಕಳೆದ ತಿಂಗಳು ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೂ ಹಾಜರಾಗಿರಲಿಲ್ಲ. ಇದಕ್ಕೆ ಬಂಗಾಳದಲ್ಲಿ ರಾಜಕೀಯ ಹಿಂಸೆಯಲ್ಲಿ ತನ್ನ ೫೪ ಕಾರ್ಯಕರ್ತರು ಸಾವನ್ನಪ್ಪಿರುವುದಾಗಿ ಬಿಜೆಪಿ ಮಾಡಿದ ಪ್ರತಿಪಾದನೆಯನ್ನು ಅವರು ನೆಪವಾಗಿಸಿದ್ದರು. ಬಿಜೆಪಿಯ ಪ್ರತಿಪಾದನೆ ಸಂಪೂರ್ಣ ಸುಳ್ಳು ಎಂಬುದಾಗಿ ಮಮತಾ ಹೇಳಿದ್ದರು.


2019: ಬೆಂಗಳೂರು: ತಿರುಪತಿ ತಿಮ್ಮಪ್ಪನ ದೇವಸ್ಥಾನದಂ ತೆಯೇ ರಾಜ್ಯದಲ್ಲೂ ಬೃಹತ್ ತಿಮ್ಮಪ್ಪನ ದೇಗುಲ ನಿರ್ಮಾಣವಾಗಲಿದೆ. ರಾಮನಗರ ಜಿಲ್ಲೆಯಲ್ಲಿ ೧೫ ಎಕರೆ ಪ್ರದೇಶದಲ್ಲಿ ತಿಮ್ಮಪ್ಪನ ದೇವಸ್ಥಾನ ನಿರ್ಮಾಣ ವಾಗಲಿದೆ.  ರಾಮನಗರದಲ್ಲಿ ಟಿಟಿಡಿ ಟ್ರಸ್ಟ್ ವತಿಯಿಂದ ವೇಂಕ ಟೇಶ್ವರ ದೇವಸ್ಥಾನ ಮತ್ತು ಸಮುದಾಯ ಭವನಕ್ಕೆ ೧೫ ಎಕರೆ ಸ್ಥಳವನ್ನು ಗುರುತಿಸುವಂತೆ ಸಿಎಂ ಅಧಿಕಾರಿ ಗಳಿಗೆ ಸೂಚನೆ ನೀಡಿದ್ದಾರೆ. ದೇವಾಲಯದ ವೆಚ್ಚವನ್ನು ಟಿಟಿಡಿಯೇ ಭರಿಸಲಿದೆ ಎಂದು ಮೂಲಗಳು ತಿಳಿಸಿದವು. ರಾಜ್ಯದ ಐತಿಹಾಸಿಕ, ಪಾರಂಪರಿಕ ದೇವಾಲಯ ಗಳ ಅಭಿವೃದ್ಧಿ ಮಾಡಬೇಕು ಎಂದು ಕುಮಾರಸ್ವಾಮಿ ಸಭೆಯಲ್ಲಿ ನಿರ್ಧಾರ ಮಾಡಿದರು. ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ೨೧ ಕೋಟಿಗಳ ಪ್ರಸ್ತಾವನೆ ಸಲ್ಲಿಸು ವುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

2018: ನಾಗಪುರ: ಭಾರತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಸಿದ್ಧಾಂತಗಳ ಕುರಿತ ತಮ್ಮ ತಿಳಿವಳಿಕೆಯನ್ನು ಹಂಚಿಕೊಳ್ಳಲು ಇಲ್ಲಿಗೆ ಬಂದಿರುವುದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಈದಿನ ಇಲ್ಲಿ ಹೇಳಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಹನೆಯಿಂದಲೇ ಭಾರತ ತನ್ನ ಶಕ್ತಿಯನ್ನು ಗಳಿಸಿದೆ ಎಂದು ನುಡಿದರು. ಭಾರತ ಯಾವಾಗಲೂ ಮುಕ್ತ ಸಮಾಜವಾಗಿತ್ತು ಮತ್ತು ರೇಷ್ಮೆ ಮಾರ್ಗ ಮತ್ತು ಜಾಗತಿಕ ಹೆದ್ದಾರಿಗಳ ಮೂಲಕ ವಿಶ್ವದ ಜೊತೆ ಸಂಪರ್ಕ ಹೊಂದಿತ್ತು. ಭಾರತಕ್ಕೆ ಬಂದ ವರ್ತಕರು ಮತ್ತು ಭಾರತವನ್ನು ಗೆದ್ದವರು ’ನಾವು ದಕ್ಷ ಆಡಳಿತ ಮತ್ತು ಮಹಾನ್ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದುದಾಗಿ ಹೇಳಿದ್ದಾರೆ ಎಂದು ಹೇಳಿದರು.  ‘ಕ್ರಿಸ್ತಪೂರ್ವ ೬ನೇ ಶತಮಾನಕ್ಕೂ ಹಿಂದೆಯೇ ಭಾರತ ದೇಶ ಉದಯವಾಗಿದ್ದುದನ್ನು ಇತಿಹಾಸದಿಂದ ನಾವು ಅರಿಯಬಲ್ಲೆವು. ೬೦೦ ವರ್ಷ ಕಾಲ ಮುಸ್ಲಿಮರು ಭಾರತವನ್ನು ಆಳಿದರು. ಬಳಿಕ ಈಸ್ಟ್ ಇಂಡಿಯಾ ಕಂಪೆನಿ ಆಡಳಿತ ಸೂತ್ರವನ್ನು ಹಿಡಿಯಿತು. ವ್ಯಾಪಾರಿ ಸಂಸ್ಥೆ ಭಾರತದ ಆಡಳಿತವನ್ನು ಹಿಡಿಯಿತು. ಮೊದಲ ಸ್ವಾತಂತ್ರ್ಯ ಹೋರಾಟದ ಬಳಿಕ ಭಾರತವು ರಾಣಿಯ ಆಡಳಿತಕ್ಕೆ ಹಸ್ತಾಂತರಗೊಂಡಿತು. ಏನೇ ಆದರೂ ಒಂದು ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಇಷ್ಟೊಂದು ಆಡಳಿತಗಾರರ ಬಳಿಕವೂ ೫೦೦೦ ವರ್ಷಗಳಷ್ಟು ಹಳೆಯದಾದ ನಾಗರಿಕತೆಯ ನಿರಂತರತೆ ಉಳಿದಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದರು.  ದ್ವೇಷವು ರಾಷ್ಟ್ರೀಯತೆಯನ್ನು ದುರ್ಬಲಗೊಳಿಸುತ್ತದೆ. ಅಸಹನೆಯು ನಮ್ಮ ರಾಷ್ಟ್ರೀಯ ವ್ಯಕ್ತಿತ್ವವನ್ನು ದುರ್ಬಲಗೊಳಿಸುತ್ತದೆ. ಹಲವಾರು ರಾಜವಂಶಗಳು, ಶಕ್ತಿಶಾಲಿ ಸಾಮ್ರಾಜ್ಯಗಳು ಭಾರತದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಆಡಳಿತ ನಡೆಸಿದವು. ನಮ್ಮ ರಾಷ್ಟ್ರೀಯ ವ್ಯಕ್ತಿತ್ವವು ಹಲವಾರು ಸಂಸ್ಕೃತಿಗಳ, ನಂಬಿಕೆಗಳ ಸಂಗಮ, ಸಮೀಕರಣಗಳ ಪ್ರಕ್ರಿಯೆಯಿಂದ ರೂಪುಗೊಂಡಿದೆ. ಇದು ನಮ್ಮನ್ನು ವಿಶಿಷ್ಟ ಹಾಗೂ ತಾಳ್ಮೆಯ ಸಮಾಜವನ್ನಾಗಿ ಮಾಡಿದೆ ಎಂದು ಪ್ರಣಬ್ ದಾ ಹೇಳಿದರು.  ಸುಮಾರು ೧೮೦೦ ವರ್ಷಗಳ ಕಾಲ, ಹಲವಾರು ವಿಶ್ವ ವಿದ್ಯಾಲಯಗಳು ವಿಶ್ವದ ಎಲ್ಲೆಡೆಯಿಂದ ವಿದ್ಯಾರ್ಥಿಗಳನ್ನು ಭಾರತದತ್ತ ಸೆಳೆದವು. ಭಾರತದ ರಾಷ್ಟ್ರೀಯತೆಯು ಸಾರ್ವತ್ರಿಕತೆಯಿಂದ ಬೆಳೆಯಿತು. ನಾವು ಇಡೀ ವಿಶ್ವವನ್ನೇ ಒಂದು ಕುಟುಂಬವಾಗಿ ಕಾಣುತ್ತೇವೆ. ಭಾರತವು ಸಹನೆಯಿಂದ ತನ್ನ ಶಕ್ತಿಯನ್ನು ಪಡೆಯುತ್ತದೆ. ನಾವು ಶತಮಾನಗಳ ಕಾಲದಿಂದ ಸಾಮೂಹಿಕ ಪ್ರಜ್ಞೆಯನ್ನು ನಂಬಿದ್ದೇವೆ. ಅಸಹನೆಯು ರಾಷ್ಟ್ರೀಯ ವ್ಯಕ್ತಿತ್ವವನ್ನು ದುರ್ಬಲಗೊಳಿಸುತ್ತದೆ. ನಾವು ವೈವಿಧ್ಯತೆಯನ್ನು ಸಂಭ್ರಮಿಸಬೇಕು. ನಮ್ಮ ರಾಷ್ಟ್ರವನ್ನು  ಧರ್ಮ, ಸಿದ್ಧಾಂತ ಅಥವಾ ಅಸಹನೆಯಿಂದ ವಿವರಿಸಲು ನಡೆಸುವ ಯಾವುದೇ ಯತ್ನವು ನಮ್ಮ ಅಸ್ತಿತ್ವವನ್ನೇ ಮಸುಕುಗೊಳಿಸುತ್ತದೆ ಎಂದು ಪ್ರಣಬ್ ನುಡಿದರು.  ಮುಖರ್ಜಿ ಅವರು ತಮ್ಮ ಭಾಷಣದಲ್ಲಿ ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತದ ರಾಷ್ಟ್ರೀಯತೆ ಬಗ್ಗೆ ಹೊಂದಿದ್ದ ಅಭಿಪ್ರಾಯಗಳನ್ನು ಉಲ್ಲೇಖಿಸಿದರು.  ಅದಕ್ಕೆ ಮುನ್ನ ಮಾತನಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಣಬ್ ಮುಖರ್ಜಿ ಅವರು ಆರೆಸ್ಸೆಸ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಕ್ಕೆ ವಿವಾದ ಸೃಷ್ಟಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ನಡೆಸಿದರು. ಈ ವಿವಾದ ಅರ್ಥರಹಿತ. ನಾವು ಎಲ್ಲರನ್ನೂ ಅಪ್ಪಿಕೊಳ್ಳುತ್ತೇವೆ. ಆರೆಸ್ಸೆಸ್ ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲ. ಆರೆಸ್ಸೆಸ್ ವಿವಿಧತೆಯಲ್ಲಿ ಏಕತೆಯನ್ನು ನಂಬುತ್ತದೆ ಎಂದು ಅವರು ನುಡಿದರು.  ನಾಗಪುರದಲ್ಲಿ ಆರೆಸ್ಸೆಸ್ಸಿನ ಮುಖ್ಯಕೇಂದ್ರಕ್ಕೆ ಆಗಮಿಸಿದ ಪ್ರಣಬ್ ಮುಖರ್ಜಿ ಅವರು ಕೇಶವ ಬಲಿರಾಂ ಹೆಡ್ಗೇವಾರ್ ಸ್ಮಾರಕಕೆ ಭೇಟಿ ನೀಡಿ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ’ಹೆಡ್ಗೇವಾರ್ ಅವರು ರಾಷ್ಟ್ರದ ಮಹಾನ್ ಪುತ್ರ ಎಂಬುದಾಗಿ ಬರೆದರು.  ಮೋಹನ್ ಭಾಗವತ್ ಅವರು ಮುಖರ್ಜಿ ಅವರನ್ನು ಸಂಘದ ಕೇಂದ್ರಕ್ಕೆ ಸ್ವಾಗತಿಸಿದರು.  ಆರೆಸ್ಸೆಸ್ಸಿನ ವಾರ್ಷಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡ ಪ್ರಣಬ್ ಮುಖರ್ಜಿ ಅವರ ನಡೆಗೆ ಅವರ ಪುತ್ರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಬಹಳಷ್ಟು ನಾಯಕರು ಸಮಾರಂಭದಲ್ಲಿ ಪ್ರಣಬ್ ದಾ ಪಾಲ್ಗೊಳ್ಳುವುದು ಸರಿಯಲ್ಲ, ಮಾಜಿ ರಾಷ್ಟ್ರಪತಿಯಿಂದ ಇಂತಹ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಟೀಕಿಸಿದ್ದರು.  ಎಲ್ಲ ಟೀಕೆಗಳಿಗೂ ಸಮಾರಂಭದಲ್ಲೇ ಉತ್ತರ ಕೊಡುವೆ. ನನ್ನ ಭಾಷಣದ ಬಳಿಕ ನನ್ನ ನಿರ್ಧಾರದ ಬಗ್ಗೆ ತೀರ್ಮಾನಿಸಿ ಎಂದು ಪ್ರಣಬ್ ಮುಖರ್ಜಿ ಪ್ರತಿಕ್ರಿಯಿಸಿದ್ದರು. 


2018: ಬೆಂಗಳೂರು: ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಕನ್ನಡ ಪರ ಕಾರ್ಯಕರ್ತರ ವ್ಯಾಪಕ ಪ್ರತಿಭಟನೆಗಳ ಪರಿಣಾಮವಾಗಿ ಕರ್ನಾಟಕದಲ್ಲಿ ರಜನೀ ಕಾಂತ್ ಅಭಿನಯದ ’ಕಾಲಾ ಚಿತ್ರ  ವಿಶ್ವದೆಲ್ಲೆಡೆ ಬಿಡುಗಡೆಯಾದರೂ, ಕರ್ನಾಟಕದಲ್ಲಿ ಬೆಳಕು ಕಾಣಲಿಲ್ಲ.  ಚಿತ್ರ ಬಿಡುಗಡೆಯಾಗಬೇಕಾಗಿದ್ದ ಚಿತ್ರ ಮಂದಿರಗಳು ಚಿತ್ರ ನಟನ ಹೇಳಿಕೆಯ ವಿರುದ್ಧ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಕ್ಕೆ ನಿರಾಕರಿಸಿದವು. ತಮಿಳು ಸೂಪರ್ ಸ್ಟಾರ್ ಅಭಿಮಾನಿಗಳು ಭ್ರಮನಿರಸನಗೊಂಡರು. ನಗರದಲ್ಲಿ ಚಿತ್ರ ಬಿಡುಗಡೆಯಾಗಬೇಕಾಗಿದ್ದ ಎಲ್ಲ ಚಿತ್ರಮಂದಿರಗಳ ಎದುರು ಪ್ರತಿಭಟನಕಾರರು ಪ್ರದರ್ಶನಗಳನ್ನು ನಡೆಸಿದರು.  ಉಭಯ ರಾಜ್ಯಗಳ ನಡುವಣ ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ರೈತರಿಗೆ ಬೆಂಬಲ ವ್ಯಕ್ತ ಪಡಿಸುವ ಸಲುವಾಗಿ ಚಿತ್ರ ನೋಡಲು ಹೋಗಬೇಡಿ ಎಂದು ಪ್ರತಿಭಟನಕಾರರು ಸೂಪರ್ ಸ್ಟಾರ್ ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.   ಕಾಲಾ ಬಿಡುಗಡೆಯಾಗಿರುವ ಚಿತ್ರಮಂದಿರಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದರು.  ಕೆಲವು ಚಿತ್ರಮಂದಿರಗಳು ಟಿಕೆಟ್ ಹಣ ವಾಪಸ್ ನೀಡಿದರೆ, ಮಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಕಾಲಾ ಚಿತ್ರ ಪ್ರದರ್ಶನಕ್ಕೆ ವಿರೋಧ ಇದ್ದರೂ ೧೨.೩೦ ರಿಂದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆ, ಮೈಸೂರು, ಬಳ್ಳಾರಿ, ಹಾಸನ, ರಾಯಚೂರಿನ ಮಾಲ್ ಮತ್ತು ಥಿಯೇಟರ್ಗಳಲ್ಲಿ ಕಾಲಾ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು.  ಬೆಂಗಳೂರಿನ ಓರಾಯನ್ ಮಾಲ್, ಲಿಡೋ ಚಿತ್ರಮಂದಿರ, ಗರುಡಾ ಮಾಲ್ನಲ್ಲಿ ಚಿತ್ರಪ್ರದರ್ಶನ ರದ್ದು ಮಾಡಲಾಯಿತು. ಬೆಂಗಳೂರಿನಲ್ಲಿ ಕಾಲಾ ಚಿತ್ರ ಪ್ರದರ್ಶನ ಹಿನ್ನಲೆಯಲ್ಲಿ ಒರಾಯನ್ ಮಾಲ್ ಬಳಿ ಆಗಮಿಸಿದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದ ಪೊಲೀಸರು, ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ ಸೇರಿದಂತೆ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದರು.  ಚಲನಚಿತ್ರಕ್ಕಿಂತ ಕಾವೇರಿ ನೀರು ಹಂಚಿಕೆ ವಿಷಯ ಮುಖ್ಯವಾದದ್ದು. ಆದ್ದರಿಂದ ಚಿತ್ರ ನೋಡಲು ಹೋಗಬೇಡಿ ಎಂದು ಚಿತ್ರ ವೀಕ್ಷಿಸಲು ಹೋಗುತ್ತಿದ್ದವರಲ್ಲಿ ಮನವಿ ಮಾಡಿದುದಾಗಿ ಕರವೇ ಪದಾಧಿಕಾರಿ ಪ್ರವೀಣ್ ಶೆಟ್ಟಿ ನುಡಿದರು.  ಕರ್ನಾಟಕದಲ್ಲಿ ಯಾವುದೇ ಸರ್ಕಾರ ಬರಲಿ, ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್  ತೀರ್ಪನ್ನು ಪೂರ್ತಿಯಾಗಿ ಪಾಲಿಸಬೇಕು ಎಂಬುದಾಗಿ ರಜನೀಕಾಂತ್ ಅವರು ನೀಡಿದ್ದರೆನ್ನಲಾದ ಹೇಳಿಕೆಯ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ’ಕಾಲಾ ಪ್ರದರ್ಶನವನ್ನು ವಿರೋಧಿಸಲು ಮೇ ೨೯ರಂದು ನಿರ್ಧರಿಸಿತ್ತು.  ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಸ್ತುತ ಪರಿಸ್ಥಿತಿಯಲ್ಲಿ ’ಕಾಲಾ ಬಿಡುಗಡೆ ಮಾಡಬೇಡಿ ಎಂದು ಚಿತ್ರ ವಿತರಕರಲ್ಲಿ ಮನವಿ ಮಾಡಿದ್ದರು.  ಕರ್ನಾಟಕ ಹೈಕೋರ್ಟ್ ಜೂನ್ ೫ರಂದು ರಾಜ್ಯ ಸರ್ಕಾರಕ್ಕೆ ಶಾಂತಿಯುತ ರೀತಿಯಲ್ಲಿ ’ಕಾಲಾ ಚಿತ್ರ ಬಿಡುಗಡೆಗೆ ಅಗತ್ಯ ಭದ್ರತೆ ಒದಗಿಸುವಂತೆ ನಿದೇಶನ ನೀಡಿತ್ತು. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರ ನಟ ನೀಡಿದ್ದ ಹೇಳಿಕೆಯಿಂದ ಕೆರಳಿದ ಕನ್ನಡ ಪರ ಸಂಘಟನೆಗಳು ಚಿತ್ರ ಪ್ರದರ್ಶನವನ್ನು ತಡೆಯುವುದಾಗಿ ಬೆದರಿಕೆ ಹಾಕಿದ್ದವು.  ‘ಕಾಲಾ ಬಿಡುಗಡೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿತ್ತು.   ದಕ್ಷಿಣ ಭಾರತದಾದ್ಯಂತ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿರುವ ರಜನೀಕಾಂತ್ ತಾವು ಯಾವುದೇ ತಪ್ಪು ಮಾಡಿಲ್ಲ, ಚಿತ್ರ ಬಿಡುಗಡೆಗೆ ಅಡ್ಡಿ ಮಾಡಬೇಡಿ ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡಿದ್ದರು. ಕರ್ನಾಟಕ ಹೊರತು ಪಡಿಸಿ ವಿಶ್ವಾದ್ಯಂತ ಭಾರಿ ಸಂಭ್ರಮೋತ್ಸಾಹದೊಂದಿಗೆ ಚಿತ್ರ ಬಿಡುಗಡೆಗೊಂಡಿತು.

2018: ನವದೆಹಲಿ: ದೆಹಲಿಯ ವ್ಯಾಪಾರಿಯೊಬ್ಬನಿಂದ ೨೦೦೨ರಲ್ಲಿ ರಕ್ಷಣಾ ಧನದ ಹೆಸರಿನಲ್ಲಿ ೫ ಕೋಟಿ ರೂಪಾಯಿ ಸುಲಿಗೆ ಮಾಡಿದ್ದಕ್ಕಾಗಿ ಪಾತಕಿ ಅಬು ಸಲೇಂಗೆ ಇಲ್ಲಿ ನ್ಯಾಯಾಲಯವೊಂದು ಏಳು ವರ್ಷಗಳ ಕಠಿಣ ಸಜೆ ವಿಧಿಸಿತು.  ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಪ್ರಾಸೆಕ್ಯೂಷನ್ ಮತ್ತು ಅಪರಾಧಿಯ ಪರ ವಕೀಲರ ಅಹವಾಲುಗಳ ಬಳಿಕ ನ್ಯಾಯಾಲಯವು ಅಬು ಸಲೇಂಗೆ ೭ ವರ್ಷಗಳ ಸೆರೆ ವಿಧಿಸುವ ತೀರ್ಪನ್ನು ನೀಡಿತು. ಪ್ರಕರಣದಲ್ಲಿ ಸಲೇಂ ತಪ್ಪಿತಸ್ಥ ಎಂದು ನ್ಯಾಯಾಲಯ ಮೇ ೨೬ರಂದು ತೀರ್ಪು ನೀಡಿತ್ತು.
ದೆಹಲಿಯಲ್ಲಿ ಸಲ್ಲಿಕೆಯಾಗಿದ್ದ ಸುಲಿಗೆ ಪ್ರಕರಣದಲ್ಲಿ, ಸಲೇಂ ವ್ಯಾಪಾರಿಯೊಬ್ಬನಿಂದ ರಕ್ಷಣಾ ಧನದ ರೂಪದಲ್ಲಿ ೫ ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಿದ್ದ ಎಂದು ಆಪಾದಿಸಲಾಗಿತ್ತು. ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ನಿವಾಸಿಯಾದ ಅಶೋಕ್ ಗುಪ್ತ ಅವರು ಸುಲಿಗೆ ಸಂಬಂಧ ದೂರು ದಾಖಲಿಸಿದ್ದರು.

2018: ಮುಂಬೈ: ಮುಂಬೈ ಮಹಾ ನಗರದಲ್ಲಿ ಬೆಳಗ್ಗೆಯಿಂದಲೇ ಜಡಿಮಳೆ ಸುರಿದ ಪರಿಣಾಮವಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಗರದ ಜನಜೀವನ ಅಸ್ತವ್ಯಸ್ತಗೊಂಡಿತು. ಖಾರ್, ಸಯಾನ್, ವರ್ಲಿ ಮುಂತಾದ ಪ್ರದೇಶಗಳಲ್ಲಿ ನೀರು ತುಂಬಿದ್ದು ಜನರು ಮೊಣಕಾಲು ಮಟ್ಟದ ನೀರಿನಲ್ಲಿ ಕಷ್ಟಪಟ್ಟು ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ವರದಿಗಳು ಹೇಳಿದವು.  ಈದಿನ ಬೆಳಗ್ಗೆ ೧೧ರಿಂದ ಮಧ್ಯಾಹ್ನ ೧೨ ಗಂಟೆಯ ವರೆಗೆ ಕುರ್ಲಾದಲ್ಲಿ ೧೫ ಮಿ.ಮೀ., ಚೆಂಬೂರ್‌ನಲ್ಲಿ ೧೩ ಮಿಮೀ., ಗೋರೆಗಾಂವ್‌ನಲ್ಲಿ ೨೬ ಮಿ.ಮೀ., ಮತ್ತು ಮಲಾಡ್‌ನಲ್ಲಿ ೧೮ ಮಿ.ಮೀ. ಮಳೆಯಾಗಿದೆ ಎಂದು ಬಿಎಂಸಿಯ ಸ್ವಯಂಚಾಲಿತ ಹವಾಮಾನ ಕೇಂದ್ರ ತಿಳಿಸಿತು. ಮುಂದಿನ ೪೮ ಗಂಟೆಗಳಲ್ಲಿ ಜಡಿ ಮಳೆ ಮುಂದುವರಿಯುವ ಸೂಚನೆ ಇರುವ ಹಿನ್ನೆಲೆಯಲ್ಲಿ ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ ತನ್ನ ಸಿಬ್ಬಂದಿಯ ಶನಿವಾರ, ಭಾನುವಾರಗಳ ರಜೆಯನ್ನು ರದ್ದು ಪಡಿಸಿತು. ಭಾರತದ ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಮುಂಗಾರು ಮಾರುತ  ಕರಾವಳಿ ಕರ್ನಾಟಕ, ಗೋವಾ ಮತ್ತು ದಕ್ಷಿಣ ಮಹಾರಾಷ್ಟ್ರ ದಾಟಿ ಮುನ್ನುಗ್ಗುತ್ತಿದೆ. ಜೂನ್ ೧೦ರವರೆಗೂ ಉತ್ತರ ಮಹಾರಾಷ್ಟ ಕರಾವಳಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮುಂಬೈಯಲ್ಲಿ ಭಾರೀ ಮಳೆ ಸುರಿದ ಪರಿಣಾಮವಾಗಿ ಈದಿನ ಲಂಡನ್ - ಮುಂಬೈ ನಡುವಣ ಜೆಟ್ ಏರ್ ವೇಸ್‌ನ ವಿಮಾನವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ವರದಿ ತಿಳಿಸಿತು.

2018: ಪುಣೆ: ನಿಷೇಧಿತ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಜೊತೆಗೆ ಸಂಪರ್ಕ ಇದ್ದ ಐವರು ಬುದ್ದಿಜೀವಿ ಕಾರ್ಯಕರ್ತರನ್ನು ಮುಂಬೈ, ದೆಹಲಿ ಮತ್ತು ನಾಗಪುರದಲ್ಲಿ ಬಂಧಿಸಲಾಗಿದ್ದು, ಅವರಿಗೆ ನಕ್ಸಲೀಯ ಪ್ರಮುಖರ ಜೊತೆಗೆ ಸಂಪರ್ಕ ಇದ್ದುದಕ್ಕೆ ಸಂಬಂಧಿಸಿದ ನಿಖರ ಸಾಕ್ಷ್ಯಾಧಾರಗಳು ಲಭಿಸಿವೆ ಎಂದು ಪೊಲೀಸರು ತಿಳಿಸಿದರು.  ಪುಣೆಯ ಶನಿವಾರದ ಕೋಟೆಯಲ್ಲಿ ಕಳೆದ ಡಿಸೆಂಬರ್ ೩೧ರಂದು ನಡೆದ ’ಎಲ್ಗಾರ್ ಪರಿಷದ್ ಸಭೆಗೆ ನಕ್ಸಲೀಯ ನಿಧಿ ಬಳಕೆಯಾಗಿತ್ತು ಎಂದು ಪುಣೆ ನಗರ ಪೊಲೀಸ್ ಜಂಟಿ ಕಮೀಷನರ್ ರವೀಂದ್ರ ಕದಮ್  ವರದಿಗಾರರ ಬಳಿ ಮಾತನಾಡುತ್ತಾ ಹೇಳಿದರು.  ಮುಂಬೈಯ ಖ್ಯಾತ ದಲಿತ ಕಾರ್ಯಕರ್ತ- ಪ್ರಕಾಶಕ ಸುಧೀರ್ ಧವಳೆ, ಖ್ಯಾತ ಮಾನವ ಹಕ್ಕುಗಳ ವಕೀಲ ಸುರೇಂದ್ರ ಗಡ್ಲಿಂಗ್, ಬುಡಕಟ್ಟು ಕಾರ್ಯಕರ್ತ ಮಹೇಶ ರೌತ್ ಮತ್ತು ನಾಗಪುರ ವಿಶ್ವ ವಿದ್ಯಾಲಯದ ಇಂಗ್ಲಿಷ್ ಪ್ರೊಫೆಸರ್ ಶೋಮಾ ಸೆನ್ ಮತ್ತು ನವದೆಹಲಿಯ ಕಾರ್ಯಕರ್ತ ರೋನಾ ವಿಲ್ಸನ್ ಅವರು ಬಂಧಿತರಲ್ಲಿ ಸೇರಿದ್ದಾರೆ.  ವಿಲ್ಸನ್ ಕಂಪ್ಯೂಟರಿನಲ್ಲಿ ಲಭಿಸಿದ ಪತ್ರವೊಂದು ಉನ್ನತ ಮಾವೋವಾದಿ ನಾಯಕ ಮಿಲಿಂದ್ ಟೆಲ್ತುಂಬ್ಡೆ ಬರೆದ ಪತ್ರವಾಗಿದೆ ಎಂದು ಪೊಲೀಸರು ತಿಳಿಸಿದರು.  ಈ ಪತ್ರದಲ್ಲಿ ಟೆಲ್ತುಂಬ್ಡೆ  ಯಶಸ್ವಿಯಾಗಿ ’ಎಲ್ಗಾರ್ ಪರಿಷದ್ ನಡೆಸಿದ ಬಗ್ಗೆ ತೃಪ್ತಿ ವ್ಯಕ್ತ ಪಡಿಸಿರುವುದು ನಮೂದಾಗಿದೆ. ಭಾರಿಪಾ ಬಹುಜನ್ ಮಹಾಸಂಘ (ಬಿಬಿಎಂ) ಅಧ್ಯಕ್ಷ ಪ್ರಕಾಶ ಅಂಬೇಡ್ಕರ್ ಮತ್ತು ಕೆಲವು ಕಾಂಗ್ರೆಸ್ ನಾಯಕರ ಹೆಸರುಗಳೂ ಈ ಪತ್ರದಲ್ಲಿ ಪ್ರಸ್ತಾಪಗೊಂಡಿವೆ ಎಂದು ಪೊಲೀಸರು ತಿಳಿಸಿದರು.   ‘ಬಂಧಿತರಾದ ಈ ಎಲ್ಲರಿಗೂ ಉನ್ನತ ನಕ್ಸಲೀಯ ನಾಯಕರ ಜೊತೆ ಖಚಿತ ಸಂಪರ್ಕಗಳಿವೆ ಎಂಬುದನ್ನು ನಮ್ಮ ತನಿಖೆಯು ಬಹಿರಂಗ ಪಡಿಸಿದೆ. ಪರಿಶೀನೆಗೆ ಒಳಪಡಿಸಲಾದ ಕೆಲವು ದಾಖಲೆಗಳು ಗಡಚಿರೋಲಿ, ಛತ್ತೀಸ್ ಗಢ ಮತ್ತು ಜಾರ್ಖಂಡ್ ನಲ್ಲಿ ಸಂಭವಿಸಿದ ನಕ್ಸಲೀಯ ಘಟನೆಗಳ ಜೊತೆ ಇವರಿಗೆ ಪರೋಕ್ಷ ಸಂಪರ್ಕವಿತ್ತು ಎಂಬ ಸುಳಿವು ನೀಡಿವೆ. ಏನಿದ್ದರೂ ಇನ್ನಷ್ಟು ತನಿಖೆಯಿಂದ ಮಾತ್ರವೇ ಭೀಮಾ-ಕೋರೆಗಾಂವ್ ದಂಗೆಗಳ ಜೊತೆಗೆ ಇವರಿಗೆ ಏನಾದರೂ ನೇರ ಸಂಪರ್ಕಗಳಿದ್ದವೇ ಎಂಬುದು ಬೆಳಕಿಗೆ ಬರಬೇಕಾಗಿದೆ. ಎಲ್ಗಾರ್ ಪರಿಷದ್ ನಡೆದ ಒಂದು ದಿನದ ಬಳಿಕ ಭೀಮಾ-ಕೋರೆಗಾಂವ್ ಗಲಭೆಗಳು ಸಂಭವಿಸಿದ್ದವು ಎಂದು ಕದಮ್ ನುಡಿದರು.  ಗಡ್ಲಿಂಗ್ ಮತ್ತು ವಿಲ್ಸನ್ ಅವರಿಂದ ವಶಪಡಿಸಿಕೊಳ್ಳಲಾದ ಎಲೆಕ್ಟ್ರಾನಿಕ್ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು.  ಎಲ್ಗಾರ್ ಪರಿಷದ್ ಸಭೆಯಲ್ಲಿ ಹಲವಾರು ಸಂಘಟನೆಗಳು ಪಾಲ್ಗೊಂಡಿದ್ದವು. ಆ ಎಲ್ಲ ಸಂಘಟನೆಗಳಿಗೂ ಮಾವೋವಾದಿಗಳ ಸಂಪರ್ಕ ಇತ್ತೆಂದು ಹೇಳಲಾಗದು ಎಂದೂ ಕದಮ್ ಒತ್ತಿ ಹೇಳಿದರು. ಬಂಧಿತರ ಪೈಕಿ ಧವಳೆಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಎಂಟು ದಿನಗಳ ಅವಧಿಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ ಎಂದು ಕದಮ್ ನುಡಿದರು.  ಗಡ್ಲಿಂಗ್, ರೌತ್ ಮತ್ತು ಸೆನ್ ಅವರನ್ನು ಪುಣೆ ಸೆಷನ್ಸ್ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ಅವರು ಹೇಳಿದರು.  ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ ಎಸ್) ಹಳೆ ವಿದ್ಯಾರ್ಥಿ ಹಾಗೂ ಯುಪಿಎ ಸರ್ಕಾರದ ಹಿಂದಿನ  ಪ್ರಧಾನಿಯವರ ಗ್ರಾಮೀಣಾಭಿವೃದ್ಧಿ ಫೆಲೋ ಆಗಿ ಗಡಚಿರೋಲಿ ಜಿಲ್ಲೆಯಲ್ಲಿ ಬುಡಕಟ್ಟು ಜನರ ಮಧ್ಯೆ ಕೆಲಸ ಮಾಡಿರುವ ರೌತ್ ಅವರನ್ನು ನಕ್ಸಲೀಯರ ಬಗ್ಗೆ ಅನುಕಂಪ ಹೊಂದಿರುವ ವ್ಯಕ್ತಿ ಎಂಬ ಅನುಮಾನದಲ್ಲಿ ೨೦೧೩ರಲ್ಲಿ ಗಡಚಿರೋಲಿ ಪೊಲೀಸರು ಬಂಧಿಸಿದ್ದರು. ಪ್ರೊಫೆಸರ್ ಶೋಮಾ ಸೆನ್ ಅವರ ಪತಿ ತುಷಾರ್ ಕಾಂತ್ ಭಟ್ಟಾಚಾರ್‍ಯ ಅವರನ್ನು ಗುಜರಾತ್ ಭಯೋತ್ಪದನೆ ನಿಗ್ರಹ ದಳವು (ಎಟಿಎಸ್) ೨೦೧೭ರ ಆಗಸ್ಟ್ ತಿಂಗಳಲ್ಲಿ ನಕ್ಸಲ್ ಸಂಪರ್ಕ ಇದ್ದುದಕ್ಕಾಗಿ ರಾಷ್ಟ್ರದ್ರೋಹದ ಆಪಾದನೆಯಲ್ಲಿ ಗೀತಾಂಜಲಿ ಎಕ್ಸ್ ಪ್ರೆಸ್ ರೈಲಿನಿಂದ ಬಂಧಿಸಿತ್ತು.  ಬಂಧಿತ ಕಾರ್ಯಕರ್ತರೆಲ್ಲರ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.  ‘ಈ ಬಂಧನಗಳ ಏಕೈಕ ಉದ್ದೇಶ ಅಂಬೇಡ್ಕರ್ ವಾದಿ ಚಳವಳಿಯನ್ನು ಹತ್ತಿಕ್ಕುವುದು ಮತ್ತು ಭೀಮಾ-ಕೋರೆಗಾಂವ್ ದಂಗೆಗಳ ಹಿಂದಿನ ನೈಜ ಅಪರಾಧಿಗಳಾದ  ಸಂಭಾಜಿ ಭಿಡೆ ’ಗುರೂಜಿ ಮತ್ತು ಮಿಲಿಂದ್ ಎಕಬೋಟೆ ಅವರ ಕಡೆಯಿಂದ ಗಮನವನ್ನು ಬೇರೆ ಕಡೆಗೆ ಸೆಳೆಯುವುದು. ತುಳಿತಕ್ಕೆ ಒಳಗಾದವರ ಸಲುವಾಗಿ ಕೆಲಸ ಮಾಡುವವರನ್ನು ’ನಕ್ಸಲೀಯರು ಎಂಬ ಹಣೆಪಟ್ಟಿ ಹಚ್ಚಿ ದಮನಿಸುವುದು ರಾಜ್ಯದ ’ಮೋಡಸ್ ಆಪರೆಂಡಿ ಆಗಿದೆ ಎಂದು ಕಬೀರ್ ಕಲ ಮಂಚ್ (ಕೆಕೆಎಂ) ಕಾರ್‍ಯಕರ್ತ ಹರ್ಷಾಲಿ ಪೋತ್ದಾರ್ ಈ ಬಂಧನಗಳ ಬಗ್ಗೆ ಪ್ರತಿಕ್ರಿಯಿಸುತ್ತಾ ಹೇಳಿದರು.  ಎಡಪಂಥೀಯ ಅಂಬೇಡ್ಕರ್ ವಾದಿ ಗುಂಪುಗಳು ಸೇರಿದಂತೆ ಮಹಾರಾಷ್ಟ್ರದ ವಿವಿಧ ಕಡೆಗಳ ಸುಮಾರು ೨೫೦ಕ್ಕೂ ಹೆಚ್ಚು ಪ್ರಗತಿಪರ ಸಾಮಾಜಿಕ ಸಂಘಟನೆಗಳ ಸಹಸ್ರಾರು ಮಂದಿ ಡಿಸೆಂಬರ್ ೩೧ರಂದು ಪೇಶ್ವಾ ಅಧಿಕಾರ ಕೇಂದ್ರವಾದ ಶನಿವಾರದ ಕೋಟೆಯಲ್ಲಿ ನಡೆದ ’ಎಲ್ಗಾರ್ ಪರಿಷದ್ನಲ್ಲಿ ಪಾಲ್ಗೊಂಡಿದ್ದರು. ೧೮೧೮ರ ಭೀಮಾ -ಕೋರೆಗಾಂವ್ ಕದನದ ಎರಡನೇ ಶತಮಾನದ ಆಚರಣೆ ಸಲುವಾಗಿ ಈ ಸಮಾವೇಶವನ್ನು ಸಂಘಟಿಸಲಾಗಿತ್ತು.  ಸುಮಾರು ೮ ಗಂಟೆಗಳ ಕಾಲ ನಡೆದ ಈ ಸಮಾರಂಭದಲ್ಲಿ ಗುಜರಾತ್ ವಿಧಾನಸಭಾ ಸದಸ್ಯ ಜಿಗ್ನೇಶ್ ವೇವಾನಿ, ರಾಧಿಕಾ ವೇಮುಲ ಮತ್ತು ಜವಾಹರಲಾಲ್ ವಿಶ್ವ ವಿದ್ಯಾಲಯದ (ಜೆಎನ್ ಯು) ವಿದ್ಯಾರ್ಥಿ ನಾಯಕ ಉಮರ್ ಖಲೀದ್ ಪಾಲ್ಗೊಂಡಿದ್ದರು. ಹಲವಾರು ಭಾಷಣಕಾರರು ಬಿಜೆಪಿ ಸರ್ಕಾರ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕಟುವಾಗಿ ಟೀಕಿಸಿದ್ದರು. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ, ಭೀಮಾ -ಕೋರೆಗಾಂವ್ ಕದನದಿಂದ ಸ್ಫೂರ್ತಿ ಪಡೆದು ಆರೆಸ್ಸೆಸ್ ಮತ್ತು ಬಿಜೆಪಿ ಪ್ರತಿನಿಧಿಸುವ ನವ ಪೇಶ್ವಾಯಿ ದಬ್ಬಾಳಿಕೆ ವಿರುದ್ಧ ಹೋರಾಡಲು ಕರೆ ನೀಡಿದ್ದರು.

2018: ಗುವಾಹಟಿ: ಅಸ್ಸಾಮಿನ ಲಖೀಮ್ ಪುರ ಜಿಲ್ಲೆಯಲ್ಲಿ ಜೂನ 6ರ ಬುಧವಾರ ನಡೆದ ಇಂಧನ ಬೆಲೆ ಏರಿಕೆ ವಿರೋಧಿ ಪ್ರತಿಭಟನಾ ಪ್ರದರ್ಶನದಲ್ಲಿ  ೮ ವರ್ಷದ ಬಾಲಕಿಯನ್ನು ಬಲವಂತವಾಗಿ ಪಾಲ್ಗೊಳ್ಳುವಂತೆ ಮಾಡಿದ್ದಕ್ಕಾಗಿ ಅಸ್ಸಾಮ್ ಕಾಂಗ್ರೆಸ್ ವ್ಯಾಪಕ ಟೀಕೆಗೆ ಒಳಗಾಯಿತು. ಅಸ್ಸಾಮ್ ಮಕ್ಕಳ ಹಕ್ಕುಗಳ ರಕ್ಷಣೆಯ ಅಸ್ಸಾಮ್ ರಾಜ್ಯ ಆಯೋಗ ಮತ್ತು ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ವಿವಿಧ ಸಮೂಹಗಳಿಂದ ಅಸ್ಸಾಮ್ ಕಾಂಗ್ರೆಸ್ ಸಿಟ್ಟಿನ ಪ್ರತಿಕ್ರಿಯೆಗಳಿಗೆ ಗುರಿಯಾಯಿತು. ಪ್ರತಿಭಟನೆಯ ವೇಳೆಯಲ್ಲಿ ಪುಟ್ಟ ಬಾಲಕಿಯನ್ನು ಅಡಿಕೆಯ ಹಾಳೆಯಲ್ಲಿ ಕುಳ್ಳಿರಿಸಿ ರಸ್ತೆಗಳಲ್ಲಿ ಬಿಸಿಲ ಝಳದ ಮಧ್ಯೆ ಎಳೆದುಕೊಂಡು ಹೋಗಲಾಗಿತ್ತು. ಹಲವಾರು ಕಾಂಗ್ರೆಸ್ ಸದಸ್ಯರು ಮತ್ತು ಮಗುವಿನ ತಾಯಿ ಬಿಜೆಪಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಎಳೆದೊಯ್ಯಲಾಗುತ್ತಿದ್ದ ಬಾಲಕಿಯ ಹಿಂದಿನಿಂದ ನಡೆದುಕೊಂಡು ಹೋಗಿದ್ದರು.  ಇಂಧನ ಬೆಲೆ ಏರಿಕೆ ವಿರುದ್ಧದ ಕಾಂಗ್ರೆಸ್ ಪ್ರತಿಭಟನಾ ಪ್ರದರ್ಶನದ ಸಂಕೇತವಾಗಿ ನಡೆದ ರಾಜಕೀಯ ಪ್ರದರ್ಶನದಲ್ಲಿ ಪುಟ್ಟ ಮಗುವನ್ನು ದಾಳವಾಗಿ ಬಳಸಿದ್ದಕ್ಕೆ ಹಲವರಿಂದ ತೀವ್ರ ವಿರೋಧ, ಟೀಕೆ ವ್ಯಕ್ತವಾಯಿತು.  ಆದರೆ ಲಖೀಮ್ ಪುರ ಕಾಂಗ್ರೆಸ್ಸಿನ ಮಹಿಳಾ ವಿಭಾಗದ ಸದಸ್ಯೆಯೂ ಆಗಿರುವ ಬಾಲಕಿಯ ತಾಯಿ ’ಇದರಲ್ಲಿ ಏನೂ ತಪ್ಪಿಲ್ಲ. ಇದು ಕೇವಲ ಸಾಂಕೇತಿಕವಾಗಿತ್ತು. ಒಂದು ನಿಮಿಷಕ್ಕಿಂತಲೂ ಕಡಿಮೆ ಮಗುವನ್ನು ಬಳಸಲಾಗಿತ್ತು ಎಂದು ಪ್ರತಿಪಾದಿಸಿದರು. ’ನನ್ನ ಮಗುವನ್ನು ಧೊಕುವಾದಲ್ಲಿ (ಅಡಿಕೆ ಹಾಳೆ) ಕುಳ್ಳಿರಿಸಿ ಎಳೆದುಕೊಂಡು ಹೋದದ್ದು ಅಪರಾಧವೇನೂ ಅಲ್ಲ, ಮಾಧ್ಯಮಗಳು ಇದಕ್ಕೆ ಅತಿ ಪ್ರಚಾರ ನೀಡಿವೆ. ನಾಳೆ ಮಕ್ಕಳನ್ನು ಶಾಲೆಗೆ ಧೊಕುವಾದಲ್ಲಿ ಕರೆದೊಯ್ಯುವ ಸ್ಥಿತಿ ಬರಬಹುದು ಎಂದು ಸೂಚಿಸಲಷ್ಟೇ ಈ ಪ್ರತಿಭಟನೆ ನಡೆಸಲಾಯಿತು ಎಂದು ಆಕೆ ಪ್ರತಿಪಾದಿಸಿದರು.  ಏನಿದ್ದರೂ, ಲಖೀಮ್ ಪುರ ಪೊಲೀಸರು ಘಟನೆ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದು, ಬಾಲಕಿಯ ತಾಯಿಯನ್ನು ಬಂಧಿಸಿ, ಭಾರತೀಯ ದಂಡ ಸಂಹಿತೆ ಮತ್ತು ಅಪ್ರಾಪ್ತ ಮಕ್ಕಳ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆ ೨೦೦೦ದ ವಿವಿಧ ವಿಧಿಗಳ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಲಖೀಮ್ ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ ಸಿಂಗ್ ಹೇಳಿದರು.  ಘಟನೆಗೆ ಸಂಬಂಧಿಸಿದಂತೆ ಅಸ್ಸಾಮ್ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡಾ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ. ಹೇಳಿದರು. ಅಸೋಮ್ ಜತೀಯತಾಬಾದಿ ಯುವ ಛಾತ್ರ ಪರಿಷದ್ ಮತ್ತು ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘದ ಲಖೀಮ್ ಪುರ ಘಟಕಗಳೂ ರಾಜಕೀಯ ಲಾಭಕ್ಕಾಗಿ ಈ ರೀತಿ ಮಗುವನ್ನು ಬಳಸಿದ್ದು ತಿಳಿಗೇಡಿ ಕೃತ್ಯ ಎಂದು ಖಂಡಿಸಿದವು.  ಈ ಮಧ್ಯೆ ಘಟನೆ ಬಗ್ಗೆ ಕಾಂಗ್ರೆಸ್ ಕ್ಷಮೆ ಕೇಳಿತು.  ಮಗುವಿನ ತಾಯಿ ಪಕ್ಷದ ಕಾರ್ಯಕರ್ತೆಯಾಗಿ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ನಮ್ಮಿಂದ ತಪ್ಪಾಗಿದೆ. ಪಕ್ಷದ ಕಾರ್‍ಯಕರ್ತರು ಪ್ರತಿಭಟನೆಯ ವೇಳೆಯಲ್ಲಿ ಮಗುವನ್ನು ಗಮನಿಸುವಲ್ಲಿ ವಿಫಲರಾಗಿದ್ದಾರೆ. ಈ ತಪ್ಪಿಗಾಗಿ ಕಾನೂನು ಪ್ರಕಾರ ಶಿಕ್ಷೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಜೋಯ್ ಪ್ರಕಾಶ್ ದಾಸ್ ಹೇಳಿದ್ದಾರೆ.  ಮೋದಿ ಸರ್ಕಾರವು ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದಕ್ಕಾಗಿ ಕೇಂದ್ರ ಸರ್ಕಾರದ ೪ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ದೇಶಾದ್ಯಂತ ನಡೆಸಲಾದ ’ವಿಶ್ವಾಸಘಾತ ದಿವಸ ಪ್ರತಿಭಟನೆಗಳ ಅಂಗವಾಗಿ ಲಖೀಮ್ ಪುರದಲ್ಲಿ ಈ ಪ್ರದರ್ಶನ ನಡೆಸಲಾಗಿತ್ತು.
2017: ಲಂಡನ್: ಬ್ರಿಟನ್ ಪ್ರಜೆ ಇಯಾನ್ ಟೂತಿಲ್ ಎಂಬುವರು  ಎವರೆಸ್ಟ್ ಶಿಖರವನ್ನು ಏರುವ ಮೂಲಕ ಪ್ರಪಂಚದ ಅತಿ ಎತ್ತರದ ಶಿಖರ ಏರಿದ ಮೊದಲ ಕ್ಯಾನ್ಸರ್ ಪೀಡಿತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲಂಡನ್ನಲ್ಲಿ ನೆಲೆಸಿರುವ ಟೂತಿಲ್ ಅವರು 2015ರಿಂದ ಕರುಳಿನ ಕ್ಸಾನ್ಸರ್ನಿಂದ ಬಳಲುತ್ತಿದ್ದಾರೆಕೆಲ  ತಿಂಗಳು ಮಾತ್ರ ಬದುಕಲಿದ್ದಾರೆ ಎಂದು ವೈದ್ಯರು ಹೇಳಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದವು. ಕ್ಯಾನ್ಸರ್ ಸಹಾಯಾರ್ಥ ಸಂಸ್ಥೆ ಮೆಕ್ಮಿಲನ್ಗಾಗಿ ಅವರು ಯಾತ್ರೆ ಕೈಗೊಂಡಿದ್ದರು. ಇದರ ಮೂಲಕ ಅವರು 26  ಲಕ್ಷ ರೂಪಾಯಿ ಸಂಗ್ರಹಿಸಿದರು. ಇವರು ಎವರೆಸ್ಟ್ ತುತ್ತತುದಿಯನ್ನು ಜೂನ್ 5ರ ಸೋಮವಾರ ತಲುಪಿದ್ದರು.
2017: ಭೋಪಾಲ್‌: ಬಾಲಘಾಟ್ ಪಟಾಕಿ  ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ
ಸ್ಫೋಟದಲ್ಲಿ 20 ಜನ ಮೃತರಾದರು. ಘಟನೆಯಲ್ಲಿ 20 ಜನ ಬೆಂಕಿಗೆ ಆಹುತಿಯಾಗಿ, 10ಕ್ಕೂಹೆಚ್ಚು ಜನ ಗಂಭೀರವಾಗಿ ಗಾಯಗೊಂಡರು. ಕಾರ್ಖಾನೆಯ ಗೋಡೆ ಕುಸಿದು ಬಿದ್ದುದು ಸ್ಫೋಟದ ಭೀಕರತೆಗೆ ಸಾಕ್ಷಿಯಾಯಿತು. ಮಧ್ಯ ಪ್ರದೇಶದ ಭೋಪಾಲ್ನಿಂದ 440 ಕಿ.ಮೀ. ದೂರದಲ್ಲಿರುವ ಬಾಲಘಾಟ್ ಪಟಾಕಿ ಕಾರ್ಖಾನೆಯಲ್ಲಿ ಮಧ್ಯಾಹ್ನ 3ಕ್ಕೆ ಸ್ಫೋಟ ಸಂಭವಿಸಿತು. ಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿದ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ಘೋಷಿಸಿದರು.  ನಿಯಮ ಉಲ್ಲಂಘನೆ ಹಾಗೂ ಸುರಕ್ಷತಾ ಕ್ರಮಗಳಿಲ್ಲದ ಕಾರಣ ದೇಶದ ಹಲವು ಉತ್ಪಾದನಾ ಕಾರ್ಖಾನೆಗಳಲ್ಲಿ ಸ್ಫೋಟದಿಂದ ಕಾರ್ಮಿಕರು ಸಾವಿಗೀಡಾಗುತ್ತಿದ್ದಾರೆ.
2017: ಕಾನ್ಪುರ: ಉತ್ತರಪ್ರದೇಶದ ಕನೌಜ್ ಜಿಲ್ಲೆಯ ಸಿಲೌಪುರ ಗ್ರಾಮದಲ್ಲಿ 66,000 ರೂಪಾಯಿ
ಮೌಲ್ಯದ ಕರೆನ್ಸಿ ನೋಟುಗಳನ್ನು ಆಡು ತಿಂದ ಘಟನೆ ಘಟಿಸಿತು. ಸರ್ವೇಶ್ ಕುಮಾರ್ ಪಾಲ್ ಎಂಬ ರೈತ ತನ್ನ ಪ್ಯಾಂಟ್ ಕಿಸೆಯಲ್ಲಿ  66,000 ರೂಪಾಯಿಗಳನ್ನಿರಿಸಿ ಸ್ನಾನ ಮಾಡಲು ಹೋಗಿದ್ದರು. ಅವು 2000 ರೂಪಾಯಿ ಮುಖಬೆಲೆಯ ನೋಟಿನ ಕಂತೆಗಳಾಗಿದ್ದವು. 'ಸ್ನಾನ ಮುಗಿಸಿ ಬರುವಾಗ ಅವರ ಮನೆಯದ್ದೇ ಆಡು ಕರೆನ್ಸಿ ನೋಟುಗಳನ್ನು ತಿನ್ನುತ್ತಿತ್ತು.  ಓಡೋಡಿ ಬಂದು ಆಡನ್ನು ಅಲ್ಲಿಂದ ಓಡಿಸಿದರೂ 2000 ರೂ. ಮುಖಬೆಲೆಯ ಎರಡೇ ಎರಡು ನೋಟು ಸಿಕ್ಕಿತು. ಅದೂ ಪೂರ್ತಿ ಹರಿದ ಸ್ಥಿತಿಯಲ್ಲಿತ್ತು. 2000 ರೂ. ಮುಖಬೆಲೆಯ ಮೂವತ್ತೊಂದು ನೋಟುಗಳನ್ನು ಆಡು ಆಗಲೇ ತಿಂದಾಗಿತ್ತು ಎಂದು ಸರ್ವೇಶ್ ಹೇಳಿದರು. ನೋಟುಗಳನ್ನು ಆಡು ತಿಂದು ತೇಗಿರುವ ಸುದ್ದಿ ತಿಳಿಯುತ್ತಿದ್ದಂತೆ ನೆರೆಹೊರೆಯವರೆಲ್ಲಾ ಸರ್ವೇಶ್ ಮನೆಗೆ ಬಂದು ಆಡಿನ ಜತೆ ಸೆಲ್ಫಿ ತೆಗೆದುಕೊಂಡರು. ಇನ್ನು ಕೆಲವರು ನೋಟು ತಿಂದ ಆಡು ದೌರ್ಭಾಗ್ಯ ತರುತ್ತದೆ. ಅದನ್ನು ಕಸಾಯಿಖಾನೆಗೆ ಮಾರಿ ಬಿಡಿ ಎಂದು ಸಲಹೆ ನೀಡಿದರು. ಆದರೆ ಪ್ರಾಣಿಗಳ ಮೇಲೆ ಹಿಂಸೆ ಮಾಡುವುದು ಸರಿಯಲ್ಲ, ಅವುಗಳನ್ನು ನಾನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದೇನೆ ಎಂದು ಸರ್ವೇಶ್ ಪ್ರತಿಕ್ರಿಯಿಸಿದರು.

2017: ಟೆಹರಾನ್: ಇರಾನ್ ಸಂಸತ್ ಭವನ ಮತ್ತು ಕ್ರಾಂತಿಕಾರಿ ಮುಖಂಡ ರುಹೊಲ್ಲಾ ಖೋಮೆನಿ
ಸಮಾಧಿ ಮೇಲೆ ಐಸಿಸ್ (ಇಸ್ಲಾಮಿಕ್ ಸ್ಟೇಟ್) ದಾಳಿ ನಡೆಯಿತು. ಸಂಸತ್ ಭವನದೊಳಗೆ ನುಗ್ಗಿದ ದಾಳಿಕೋರರು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಾಟ ನಡೆಸಿದರು. ದಾಳಿಯಲ್ಲಿ 12 ಮಂದಿ ಸಾವಿಗೀಡಾದರು.  ಸಾವಿಗೀಡಾದವರಲ್ಲಿ ಒಬ್ಬರು ಭದ್ರತಾ ಸಿಬ್ಬಂದಿ. 8 ಮಂದಿಗೆ ಗಾಯಗಳಾದವು. ಸಂಸತ್ನೊಳಗೆ ನುಗ್ಗಿದ ದಾಳಿಕೋರರು ಅಲ್ಲಿದ್ದ ಜನರನ್ನು ಬಂಧಿಗಳನ್ನಾಗಿಸಿದರು.  ಅದೇ ಹೊತ್ತಲ್ಲಿ ಖೋಮೆನಿ ಸಮಾಧಿ ಮೇಲೆ ದಾಳಿ ನಡೆಯಿತು. ಆತ್ಮಾಹುತಿ ಬಾಂಬರ್ ಸೇರಿದಂತೆ ನಾಲ್ವರು ಉಗ್ರರು ಖೊಮೇನಿ ಸಮಾಧಿ ಮೇಲೆ ದಾಳಿ ನಡೆಸಿದರು ಎಂದು ಇರಾನ್ ಸುದ್ದಿ ಮಾಧ್ಯಮ ವರದಿ ಮಾಡಿತು. ಸಮಾಧಿ ಮೇಲೆ ನಡೆದ ದಾಳಿಯಲ್ಲಿ ಐವರಿಗೆ ಗಾಯಗಳಾಗಿ, ಒಬ್ಬರು ಹತರಾದರು. ಖೋಮೆನಿ ಸಮಾಧಿ ಧಾರ್ಮಿಕ ಸ್ಥಳವಾಗಿದ್ದು, ದಾಳಿ ಹಿನ್ನೆಲೆಯಲ್ಲಿ ಅಲ್ಲಿಗೆ ಆಗಮಿಸಿದ್ದ ಯಾತ್ರಿಕರನ್ನು ಸುರಕ್ಷಿತ ಸ್ಥಳದಲ್ಲಿರಿಸಲಾಯಿತು. ಖೋಮೆನಿ ಸಮಾಧಿ ಮೇಲೆ ದಾಳಿ ನಡೆಸಿದ ಆತ್ಮಾಹುತಿ ಬಾಂಬರ್ ಮಹಿಳೆ ಎಂದು ಗುರುತಿಸಲಾಯಿತು. ಈಕೆ ಸಮಾಧಿಯಿದ್ದ ಕ್ಷೇತ್ರದ ಬಳಿ ಬಂದು ಬಾಂಬ್ ಸ್ಫೋಟ ನಡೆಸಿರುವುದಾಗಿ ಐಎಸ್ಎನ್ ಸುದ್ದಿ ಸಂಸ್ಥೆ ವರದಿ ಮಾಡಿತು.
2016: ವಾಷಿಂಗ್ಟನ್ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ  ಮಹತ್ವದ ಅಮೆರಿಕ ಭೇಟಿಯಲ್ಲಿ ಅಧ್ಯಕ್ಷ ಬರಾಕ್ ಒಬಾಮ ಜತೆ ಎರಡು ದೇಶಗಳ ಬಾಂಧವ್ಯ ವೃದ್ದಿಗೆ ಮಾತುಕತೆ ನಡೆಸಿದರು. ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಸೇರಿದಂತೆ ಉಪಾಧ್ಯಕ್ಷ ಜೋಯಿ ಬೈಡೆನ್ ಅವರೊಂದಿಗೆ 2 ಗಂಟೆಗೂ ಅಧಿಕ ಕಾಲ ಭೋಜನದ ಜತೆ ದ್ವಿಪಕ್ಷೀಯ ವಿಷಯಗಳ ಕುರಿತು ಮಾತುಕತೆ ನಡೆಸಿದರು. 7 ನೇ ಬಾರಿ ಒಬಾಮಾರನ್ನು ಭೇಟಿ ಮಾಡಿದ ಮೋದಿ ಭಾರತ-ಅಮೆರಿಕ ಆಂತರಿಕ ಅಭಿವೃದ್ಧಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಒಬಾಮ 2015 ರಲ್ಲಿ ಭಾರತಕ್ಕೆ ಭೇಟಿ ನೀಡಿದ ದಿನದಿಂದ ನಿರಂತರವಾಗಿ ಚರ್ಚೆ ನಡೆದಿದೆ ಎಂದು ಹೇಳಿದರು.  ಎರಡು ದೇಶಗಳ ನಡುವೆ ಇರುವ ಸಮಸ್ಯೆಗಳ ಬಗ್ಗೆ ನಿಗದಿತ ಸಮಯದಲ್ಲಿ ಲಭ್ಯವಿರುವ ಸಾಕಷ್ಟು ಅವಕಾಶಗಳ ಮೇಲೆ ಗಮನ ಹರಿಸುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಭದ್ರತೆ ಮತ್ತು ರಕ್ಷಣಾ ಸಹಕಾರ, ಶುದ್ದ ಇಂಧನ ಪಾಲುದಾರಿಕೆ, ಹವಾಮಾನ ಬದಲಾವಣೆ ಮತ್ತು ಆರ್ಥಿಕ ಬೆಳವಣೆಗೆಯಂತಹ ಪ್ರಮುಖ ವಿಷಯಗಳಿಗೆ ಉಪಾಧ್ಯಕ್ಷರ ಹಾಜರಾತಿಯಲ್ಲಿ ಒತ್ತು ನೀಡಿಲಾಗುವುದು ಎಂದಿದ್ದಾರೆ. ಮಾತುಕತೆ ನಂತರ ವೈಟ್ ಹೌಸ್ ಒಳಭಾಗದಲ್ಲಿ ಸುದ್ದಿಗೋಷ್ಠಿದರು. ಇದಕ್ಕೂ ಮೊದಲು ಅಮೆರಿಕವು ಭಾರತದ 200 ಪುರಾತನ ಸಾಂಸ್ಕೃತಿಕ ವಸ್ತುಗಳ ವಾಪಸಾತಿ ಮಾಡಿದ ಬಳಿಕ ಅಮೆರಿಕ ಬುದ್ದಿಜೀವಿಗಳ ಸಂಘದೊಂದಿಗೆ ಕೆಲಕಾಲ ಕಳೆದ ಮೋದಿ ಅವರೊಂದಿಗೆ ಪ್ರಸ್ತುತ ವಿದ್ಯಮಾನಗಳು ಹಾಗೂ ವಿವಿಧ ದೃಷ್ಟಿಕೋನದ ವ್ಯವಹಾರಗಳ ಬಗ್ಗೆ ಚರ್ಚಿಸಿದರು.

2016: ಡೆಹ್ರಾಡೂನ್: ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡಿದ್ದಾಯಿತು. ಈಗ ಮುಸಲ್ಮಾನ ಮುಕ್ತ ಮಾಡುವ ಸಮಯ ಬಂದಿದೆ ಎಂದು ವಿಶ್ವ ಹಿಂದು ಪರಿಷತ್ ನಾಯಕಿ ಸಾದ್ವಿ ಪ್ರಾಚಿ ಹೇಳಿದರು. ಗುಜರಿ ಅಂಗಡಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ರೂರ್ಕೆಯಲ್ಲಿ ಕಳೆದ ವಾರ ಎರಡು ಸಮುದಾಯದ ನಡುವೆ ಸಂಭವಿಸಿದ ಗಲಭೆಯಲ್ಲಿ 32 ಜನ ಗಾಯಗೊಂಡಿದ್ದ ಸ್ಥಳಕ್ಕೆ ತೆರಳಿ ನೊಂದವರನ್ನು ಅವರು ಭೇಟಿ ಮಾಡಿದರು. ಸಂದರ್ಭ ವಿವಾದಾತ್ಮಕ ಹೇಳಿಕೆ ನೀಡಿ, ಭಾರತವನ್ನು ಮುಸಲ್ಮಾನರಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ನಾವು ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದರು. ಇಷ್ಟುದಿನ ನಾವು ಓಲೈಕೆ ತಂತ್ರ ನೋಡಿದೆವು. ಇನ್ನುಮುಂದೆ ಮುಸಲ್ಮಾನರನ್ನು ನೆಲದಿಂದ ತೆರವುಗೊಳಿಸುವುದಷ್ಟೇ ಉಳಿದ ಕಾರ್ಯ ಎಂದರು.

2016: ಬೊಗೊಟಾ: 6 ಸಾವಿರಕ್ಕೂ ಅಧಿಕ ಕೊಲಂಬಿಯಾದ ಜನ ಶಾಂತಿ ಸಂದೇಶದ ಹೆಸರಿನಲ್ಲಿ ಬೆತ್ತಲಾಗಿ ಪ್ರಖ್ಯಾತ ಬೊಗೊಟಾ ಬೊಲಿವಿಯ ಪ್ಲಾಜಾದ ಮುಂದೆ ಸಾಮೂಹಿಕವಾಗಿ ನೆರೆದು ಅಚ್ಚರಿ ಸೃಷ್ಟಿಸಿದರು. ಆದರೆ ನಿಜವಾದ ಕಾರಣ ಏನು ಅಂದರೆ ಅಮೆರಿಕದ ಛಾಯಾಚಿತ್ರಗಾರಕ ಸ್ಪೆನ್ಸರ್ ಟುನಿಕ್ ಫೋಟೋಗ್ರಾಫಿಗೆ ಒಂದೆಡೆ ಸೇರಿದ್ದ ಜನ ಸಾಮೂಹಿಕವಾಗಿ ಬೆತ್ತಲಾದರು.ಕಳೆದ 6 ವರ್ಷಗಳಲ್ಲಿ ಅತ್ಯಂತ ದೊಡ್ಡ ಫೋಟೊ ಶೂಟ್ ಇದು. ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆಯ ವಿರುದ್ದ ಮಾಡುತ್ತಿರುವ ಪ್ರತಿಭಟನೆಯೂ ಈ ಬೆತ್ತಲೆ ಪ್ರದರ್ಶನ ಉದ್ದೇಶಗಳಲ್ಲಿ ಒಂದು ಎಂದು ಬೆತ್ತಲಾದ ಪ್ರತಿಭಟನಾಕಾರರು ಹೇಳಿದರು. ಈ ರೀತಿಯ ಬೆತ್ತಲು ಪ್ರದರ್ಶನ ಒಗ್ಗಟ್ಟು ಮತ್ತು ಪರಿಶುದ್ದತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿರುವ ಕೊಲಂಬಿಯಾ ಜನರ ಫೋಟೋಗಳು ಬೊಗೊಟಾ ವಸ್ತುಸಂಗ್ರಹಾಲಯದಲ್ಲಿ ವರ್ಷಾಂತ್ಯಕ್ಕೆ ಪ್ರದರ್ಶನಗೊಳ್ಳಲಿವೆ.

2016: ಲಖನೌ:  ರಾಮ ಮಂದಿರ ನಿರ್ಮಾಣಕ್ಕೆ ಭಾರತೀಯ ಜನತಾ ಪಾರ್ಟಿಯ ಸಹಮತವಿದ್ದು, ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು. ಬಿಜೆಪಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾರಾಮ ಮಂದಿರ ನಿರ್ಮಾಣ ಬಿಜೆಪಿಯ ಮೊದಲ ಆದ್ಯತೆ.. ಚುನಾವಣಾ ಪ್ರಣಾಳಿಕೆಯಲ್ಲಿ ಕೂಡ ಇದನ್ನು ನಮೂದಿಸಲಾಗಿದೆ. ಮುಂದಿನ ವರ್ಷ ರಾಮ ಮಂದಿರ ತಲೆಯೆತ್ತುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಕುಟುಂಬ ರಾಜಕಾರಣ ಮುಗಿಲು ಮುಟ್ಟಿದ್ದು, ಆರು ವ್ಯಕ್ತಿಗಳು ಮುಖ್ಯಮಂತ್ರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಆಡಳಿತದ ಅತೀ ಸೂಕ್ಷ್ಮ ವಿಷಯಗಳಲ್ಲೂ ಅಖಿಲೇಶ್ ಯಾದವ್ ಅವರ ಕುಟುಂಬ ಸದಸ್ಯರು ಮೂಗು ತೂರಿಸುತ್ತಿರುವುದು ಕಂಡು ಬರುತ್ತಿದೆ ಎಂದು ಎಂದು ಟೀಕಿಸಿದರು.
.2016: ನಟ ಅಕ್ಷಯ್ಕುಮಾರ್ ಮತ್ತೊಮ್ಮೆ ಜಾಕ್ಪಾಟ್ ಹೊಡೆದಿದ್ದಾರೆ. ವರ್ಷದ ಪ್ರಾರಂಭದಲ್ಲಿ ಅವರಏರ್ಲಿಫ್ಟ್ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಅವರ ಮತ್ತೊಂದು ಚಿತ್ರಹೌಸ್ಫುಲ್ 3’ ದಾಖಲೆ ಗಳಿಕೆ ಕಂಡಿತು. ತೆರೆಕಂಡ ನಾಲ್ಕು ದಿನಗಳಲ್ಲಿ 60 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಮಾಡಿತು. ಅಲ್ಲದೆ, ಮೊದಲ ವಾರಾಂತ್ಯದಲ್ಲಿ ಅಧಿಕ ಹಣ ಗಳಿಸಿದ ವರ್ಷದ ಮೊದಲ ಚಿತ್ರವಾಗಿಹೌಸ್ಫುಲ್ 3’ ಹೊರಹೊಮ್ಮಿತು. ಜೂ. 03ರಂದು ಚಿತ್ರ ತೆರೆಕಂಡಿತ್ತು. ಮೊದಲ ದಿನ 15.21 ಕೋಟಿ ರೂ. ಗಳಿಸಿತ್ತು. ವಾರಾಂತ್ಯಕ್ಕೆ 53.31 ಕೋಟಿ ರೂ. ಗಳಿಸಿ, ‘ಫ್ಯಾನ್ಚಿತ್ರದ (52.35 ಕೋ)ದಾಖಲೆಯನ್ನು ಮುರಿದಿತ್ತು. ಇದೀಗಶತಕೋಟಿ ಕ್ಲಬ್ಸೇರುವತ್ತ ಚಿತ್ರ ಮುನ್ನಡೆದಿದೆ. ಈಗಾಗಲೇ ವಿಶ್ವಮಾರುಕಟ್ಟೆಯ ಗಳಿಕೆಯನ್ನೂ ಪರಿಗಣನೆಗೆ ತೆಗೆದುಕೊಂಡರೆ, 100 ಕೋಟಿ ರೂ.ಗಳಿಗೂ ಅಧಿಕ ಹಣ ನಿರ್ಮಾಪಕರಿಗೆ ಸಿಕ್ಕಿದೆ.

2016: ಮೆಕ್ಸಿಕೊ ಸಿಟಿ: ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಮೆಕ್ಸಿಕೋದ ಕರಾವಳಿ ತೀರದಲ್ಲಿ ಸಂಜೆ ವೇಳೆ ಘಟಿಸಿತು. ಪಶ್ಚಿಮ ಮೆಕ್ಸಿಕೋ ನಗರದಿಂದ ಸುಮಾರು 398 ಮೈಲಿ ದೂರದಲ್ಲಿರುವ ಟೂರಿಸ್ಟ್ ರೆಸಾರ್ಟ್ ಬಳಿ ಭೂಮಿ ಕಂಪಿಸಿತು. ಇಲ್ಲಿಂದ ಕೊಂಚ ದೂರದಲ್ಲಿ 5.4 ತೀವ್ರತೆಯ ಮತ್ತೊಂದು ಭೂಕಂಪವಾಯಿತು ಎಂದು ವರದಿ ತಿಳಿಸಿತು.

2016: ನವದೆಹಲಿ: ನಾಟಿಂಗ್ಹ್ಯಾಮ್ ಶೈರ್ ತಂಡದ ರಿಕಿವೆಸ್ಲೆಸ್ ಹಾಗೂ ಮೈಕಲ್ ಲಂಬ್ 39.2 ಓವರ್ಗೆ 342ರನ್ಗಳ ಭರ್ಜರಿ ಜತೆಯಾಟ ಪ್ರದರ್ಶಿಸುವ ಮೂಲಕ ಭಾರತದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಅಳಿಸಿದರು. ನಾಟ್ಸ್ ಹಾಗೂ ನಾಟಿಂಗ್ಹ್ಯಾಮ್ ಶೈರ್ ತಂಡದ ನಡುವಿನ ಪ್ರಥಮ ದರ್ಜೆ ಪಂದ್ಯದಲ್ಲಿ ರನ್ ಮಳೆಯೇ ಹರಿಯಿತು.  ರಿಕಿವೆಸ್ಲೆಸ್ ಕೇವಲ 97 ಎಸೆತದಲ್ಲಿ 146 ರನ್ ಸಿಡಿಸಿದರೆ, ಮೈಕಲ್ ಲಂಬ್ ದಾಖಲೆಯ 184 ರನ್ಬಾರಿಸಿದರು. ಅಂತಿಮವಾಗಿ ನಾಟಿಂಗ್ಹ್ಯಾಮ್ ಶೈರ್ ತಂಡ ಎಂಟು ವಿಕೆಟ್ ನಷ್ಟಕ್ಕೆ 445 ರನ್ ಸಿಡಿಸಿತು. ಸವಾಲು ಬೆನ್ನತ್ತಿದ ನಾಟ್ಸ್ ಕೂಡ ಉತ್ತಮ ಆರಂಭ ಪಡೆಯಿತು. ಪ್ರಬಲ ಹೋರಾಟ ನಡೆಸಿದ ನಾಟ್ಸ್ ಆಟಗಾರರು ನಿಗದಿತ ಓವರ್ಗೆ 425 ರನ್ಗಳಿಸುವ ಮೂಲಕ ಇಪ್ಪತ್ತು ರನ್ಗಳ ಸೋಲನುಭವಿಸಿತು. ಇಂಗ್ಲೆಂಡ್ನಲ್ಲಿ 199ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಶ್ರೀಲಂಕಾ ವಿರುದ್ಧ 318 ರನ್ಗಳ ಜತೆಯಾಟ ಆಡಿ ದಾಖಲೆ ನಿರ್ಮಿಸಿದ್ದರು.

2016: ಹಾಂಗ್ಕಾಂಗ್: ಜಗತ್ತಿನ ಪ್ರಬಲ ರಾಷ್ಟ್ರ ಚೀನಾ ಭಾರತದ ಮೇಲಾದ 2008 26/11 ದಾಳಿಯನ್ನು ಪಾಕಿಸ್ತಾನದ ಉಗ್ರರೇ ನಡೆಸಿದ್ದು ಎಂದು ಬಹಿರಂಗವಾಗಿ ನೀಡಿರುವ ಹೇಳಿಕೆ ಜಾಗತಿಕ ಚರ್ಚೆಗೆ ಕಾರಣವಾಯಿತು. ಈ ದಾಳಿಯಲ್ಲಿ 164 ಜನ ಸಾವನ್ನಪ್ಪಿ 308 ಜನ ಗಾಯಗೊಂಡಿದ್ದರು. ಚೀನಾದ ಪ್ರತಿಷ್ಠಿತ ಮಾಧ್ಯಮವೊಂದು ನಿರ್ಮಿಸಿದ ಕಿರುಚಿತ್ರದಲ್ಲಿ ಎಲ್ಇಟಿ(ಲಷ್ಕರ್--ತೊಯ್ಬಾ) ಮತ್ತು ಇತರ ಉಗ್ರರು ಜಗತ್ತಿನ ಪ್ರಮುಖ ಸ್ಥಳಗಳ ಮೇಲೆ ನಡೆಸಿದ ದಾಳಿ ಕುರಿತಾದ ಕಿರುಚಿತ್ರದಲ್ಲಿ ನೇರವಾಗಿ ಮುಂಬೈ ದಾಳಿ ಬಗ್ಗೆ ಹೇಳಿಕೆ ನೀಡಿತು.
ಇದರೊಂದಿಗೆ ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ದ ಸಮರ ಸಾರಿದ್ದ ವಿಶ್ವಸಂಸ್ಥೆಯೊಂದಿಗೆ ಕೈಜೋಡಿಸಲು ಎಲ್ಲಾ ರಾಷ್ಟ್ರಗಳು ಮುಂದಾದಾಗ ಚೀನಾ ಮಾತ್ರ ಪಾಕಿಸ್ತಾನ ತನ್ನ ಮಿತ್ರನಂತೆ ವರ್ತಿಸಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಗಿರುವ ಸ್ಥಾನಮಾನಕ್ಕೆ ಧಕ್ಕೆ ಬರುವಂತೆ ನಡೆದುಕೊಂಡಿದ್ದ ಚೀನಾ ಇದೀಗ ಕಿರುಚಿತ್ರದ ಮೂಲಕ ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಭಯೋತ್ಪಾದನೆ ವಿರುದ್ದ ಹೋರಾಡಲು ಒಲವು ತೋರಿರುವುದಾಗಿ ಮೇಲ್ನೋಟಕ್ಕೆ ತೋರಿಸಿಕೊಂಡಿತು.
2016: ವಾಷಿಂಗ್ಟನ್: ಕನಿಷ್ಠ ಕೌಶಲಗಳು ಇಲ್ಲದ ಕಾರಣ ಕಂಪ್ಯೂಟರ್ ಸೈನ್ಸ್ ವಿಭಾಗದ 25 ಮಂದಿ ಭಾರತೀಯ ವಿದ್ಯಾರ್ಥಿಗಳಿಗೆ ವೆಸ್ಟರನ್ ಕೆಂಟುಕಿ ವಿವಿಗೇಟ್ಪಾಸ್ನೀಡಿತು. 60 ಭಾರತೀಯ ವಿದ್ಯಾರ್ಥಿಗಳು ಕೆಂಟುಕಿ ವಿವಿ ಕಂಪ್ಯೂಟರ್ ಸೈನ್ಸ್ ಪದವಿಗೆ ಪ್ರವೇಶಕ್ಕೆ ನೋಂದಣಿ ಮಾಡಿಸಿದ್ದರು. ಅವರಲ್ಲಿ 25ಕ್ಕೂ ಹೆಚ್ಚಿನವರು ವಿವಿ ಪ್ರವೇಶ ಪ್ರಕ್ರಿಯೆ ನಿಯಮದಂತೆ ಅಪೇಕ್ಷಿತ ಕೌಶಲಗಳನ್ನು ಹೊಂದಿಲ್ಲ. ಹಾಗಾಗಿನಮ್ಮಲ್ಲಿ ಅಧ್ಯಯನ ಮಾಡಲು ನಿಮಗೆ ಅವಕಾಶ ಕೊಡಲಾಗದು. ಭಾರತದಲ್ಲೇ ನಿಮಗೆ ಇಷ್ಟವಾಗುವಂತಹ ಯಾವುದೇ ಕೋರ್ಸ್ಗಳಿಗೆ ಸೇರಿಕೊಳ್ಳ ಬಹುದುಎಂದು ಕೆಂಟುಕಿ ವಿವಿ ಕಟುವಾಗಿ ಹೇಳಿತು. ಕಂಪ್ಯೂಟರ್ ಸೈನ್ಸ್ ವಿಭಾಗದ ಛೇರ್ವುನ್ ಜೇಮ್್ಸ ಗ್ರೇ ಬಗ್ಗೆ ಪ್ರತಿಕ್ರಿಯಿಸಿ, ಪ್ರವೇಶ ಬಯಸಿದ 40 ರಷ್ಟು ವಿದ್ಯಾರ್ಥಿಗಳು ವಿವಿಯ ಅಗತ್ಯ ಅರ್ಹತೆಗಳನ್ನು ಭರಿಸುವ ನಿಟ್ಟಿನಲ್ಲಿ ಅಸಮರ್ಥರಾಗಿದ್ದಾರೆ ಎಂದು ಖಚಿತವಾಗಿದೆ. ಕೊರತೆಗಳನ್ನು ನಿವಾರಿಸುವ ಸಹಾಯ ಮಾಡಿದ್ದಾಗ್ಯೂ 35 ಮಂದಿ ಪರವಾಗಿಲ್ಲ ಎನಿಸಿದ್ದು, ಉಳಿದ 25 ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಹಿಂದಕ್ಕೆ ಕಳಿಸುವುದು ಅನಿವಾರ್ಯವಾಗಿದೆ ಎಂದರು. ಹಣ ಇದ್ದ ಮಾತ್ರಕ್ಕೆ ವಿದೇಶದ ವಿವಿಗಳಲ್ಲಿ ಓದುತ್ತೇವೆ ಎಂಬ ಭ್ರಮೆ ಬೇಡ, ನಾವು ಅಪೇಕ್ಷಿಸುವಗುಣವೂ ಬೇಕು ಎಂಬಲಕ್ಷ್ಮಣ ರೇಖೆಹಾಕುವ ಮೂಲಕ ಕೆಂಟುಕಿ ವಿವಿ ಹೊಸ ಪಾಠ ಕಲಿಸಿತು.
2016: ಕಾಠ್ಮಂಡು: ಮಹಾರಾಷ್ಟ್ರದ ಪೊಲೀಸ್ ಇಲಾಖೆಯಲ್ಲಿ ಪೇದೆಗಳಾಗಿರುವ ವಿವಾಹಿತ ಜೋಡಿಯೊಂದು ಜಗತ್ತಿನ ಅತಿದೊಡ್ಡ ಪರ್ವತ ಮೌಂಟ್ ಎವರೆಸ್ಟ್ ಹತ್ತಿ ದಾಖಲೆ ನಿರ್ಮಿಸಿತು.  ದಿನೇಶ್ ಮತ್ತು ತಾರಕೇಶ್ವರಿ ರಾಥೋಡ್ ಅಚ್ಚರಿಯ ಸಾಧನೆ ಮಾಡಿರುವ ದಂಪತಿ. ತಾವು ಪರ್ವತಾರೋಹಣ ಮಾಡುವವರೆಗೂ ಪಾಲಕರಾಗುವುದು ಬೇಡ ಎಂದು ನಿರ್ಧರಿಸಿದ್ದ ಜೋಡಿ, ತಮ್ಮ 30ನೇ ವಯಸ್ಸಿನಲ್ಲಿ ಪರ್ವತವೇರಿ ಪತಾಕೆ ಹಾರಿಸಿ ಪಾಲಕರಾಗಲು ತಯಾರಾಗಿದ್ದಾರೆ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ರಫೀಕ್ ಶೇಖ್ ಎಂಬಾತ ಪರ್ವತ ಏರಿ ದಾಖಲೆ ಮಾಡಿದ್ದ. 2006 ರಿಂದ ಪೊಲೀಸ್ ಇಲಾಖೆಯಲ್ಲಿರುವ ದಂಪತಿ ಇದಕ್ಕೂ ಮೊದಲು ಆಸ್ಟ್ರೇಲಿಯದ ಉನ್ನತ ಶಿಖರ ಏರಿದ್ದರು. ಜತೆಗೆ ಸ್ಕೈ ಡೈವಿಂಗ್ನಂತ ಅಪಾಯಕಾರಿ ಕ್ರೀಡೆ ಹಾಗೂ ಪರ್ವತ ಏರಿಕೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಒಟ್ಟಾರೆ ವರ್ಷ 70 ಜನ ಭಾರತೀಯರು ಹಿಮಾಲಯ ಪರ್ವತ ಯಶಸ್ವಿಯಾಗಿ ಏರಿದರು.

2016:ಲಾಸ್ ಏಂಜಲೀಸ್: ಫ್ರೆಂಚ್ ಓಪನ್ ಫೈನಲ್ಸ್ನಲ್ಲಿ ಹೀನಾಯ ಸೋಲು ಕಂಡ ಟೆನಿಸ್ ಆಟಗಾರ್ತಿ ಸೆರೇನಾ ವಿಲಿಯಮ್ಸ್  ಜಗತ್ತಿನ ಅತಿ ಹೆಚ್ಚು ಆದಾಯ ಹೊಂದಿರುವ ಮಹಿಳಾ ಕ್ರೀಡಾಪಟು ಎನಿಸಿಕೊಂಡರು. ಶ್ರೇಷ್ಠ ಟೆನಿಸ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನ ಗಳಿಸಿಕೊಂಡರು. ಸೆರೇನಾ ವಿಲಿಯಮ್ಸ್  ಕಳೆದ 12 ತಿಂಗಳುಗಳಲ್ಲಿ 28.9 ಮಿಲಿಯನ್ ಡಾಲರ್ ಗಳಿಸಿದ್ದರು  ಎಂದು ಮಾಧ್ಯಮವೊಂದು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿತು. ಇದು ಕಳೆದ 11 ವರ್ಷಗಳಿಂದ ಶರಪೋವ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಈಗ ಸೆರೇನಾ ಅಳಿಸಿ ಹಾಕಿದರು. ಒಟ್ಟು 19 ಗ್ರಾಂಡ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸೆರೇನಾ ಅವರು ಸ್ಟೆಫಿಗ್ರಾಫ್ ಅವರ 22 ಗ್ರಾಂಡ್ಸ್ಲಾಮ್ ಗುರಿ ಸರಿದೂಗಿಸುವ ಯತ್ನದಲ್ಲಿದ್ದಾರೆ.

2016: ನವದೆಹಲಿ: ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 29 ಮಂದಿ ಸಾವಿಗೆ ಕಾರಣವಾದ ಮಥುರಾ ಗಲಭೆ ಸಂಬಂಧಿಸಿ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ, ಸಿಬಿಐ ತನಿಖೆಗೆ ಆದೇಶಿಸಲು ನಿರಾಕರಿಸಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಸಿ. ಘೋಷ್ ಮತ್ತು ಅಮಿತವ ರಾಯ್ ಅವರನ್ನೊಳಗೊಂಡ ರಜಾಕಾಲದ ನ್ಯಾಯಪೀಠ ಸಿಬಿಐ ತನಿಖೆಗೆ ಆದೇಶಿಸಲು ಸುಪ್ರೀಂ ಮುಂದಾಗುವುದಿಲ್ಲ. ಸಂಬಂಧ ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿತು. ಭೂ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಇಬ್ಬರು ಪೊಲೀಸ್ ಅಧಿಕಾರಿ ಸೇರಿ 29 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಸಾಕಷ್ಟು ಹಾನಿ ಸಂಭವಿಸಿತ್ತು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸೂಕ್ತವಾಗಿ ಮಾಡುತ್ತಿಲ್ಲ. ತನಿಖೆಯನ್ನು ಕೈಗೊಳ್ಳದೇ ಕಾಲಹರಣ ಮಾಡುತ್ತಿದೆ. ಕಾರಣ ಕೂಡಲೇ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಲಾಗಿತ್ತು

2016: ನವದೆಹಲಿ: ಭಾರತದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ವಾಯುಮಾಲಿನ್ಯ ದಿಂದ ಅವಧಿಗೂ ಮುನ್ನ ಸಾಯುವವರ ಪ್ರಮಾಣ ಹೆಚ್ಚಾಗುತ್ತಿದೆ. ದೆಹಲಿಯಲ್ಲಿ ಪ್ರಮಾಣ ಎಲ್ಲಾ ಕಡೆಗಿಂತ ಹೆಚ್ಚಿದ್ದು, ದೆಹಲಿ ವಾಸಿಗಳ ಸರಾಸರಿ ಆಯಸ್ಸು 6.3 ವರ್ಷ ಕಡಿಮೆಯಾಗುತ್ತಿದೆ ಎಂದು ಸಂಶೋಧನಾ ವರದಿ ತಿಳಿಸಿತು. ಗಾಳಿಯಲ್ಲಿ ಪರ್ಟಿಕ್ಯುಲೇಟ್ ಮ್ಯಾಟರ್ 2.5 ಎಂಬ ಸೂಕ್ಷ್ಮ ಕಣಗಳ ಪ್ರಮಾಣ ಹೆಚ್ಚಾಗುತ್ತಿರುವುದು ಮತ್ತು ಓಜೋನ್ ಪದರದ ಹಾನಿಯಿಂದ ಸೂರ್ಯನ ಅಪಾಯಕಾರಿ ಕಿರಣಗಳು ಮೈಗೆ ತಾಕುತ್ತಿರುವುದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ಉಂಟಾಗುವ ಅನಾಹುತಗಳಿಂದ ವಾರ್ಷಿಕ ಪ್ರಪಂಚದಾದ್ಯಂತ ಸುಮಾರು 3 ಲಕ್ಷ ಜನರು ಮೃತರಾಗುತ್ತಿದ್ದಾರೆ  ದೇಶದಲ್ಲೂ ವಾಯುಮಾಲಿನ್ಯದ ವ್ಯತಿರಿಕ್ತ ಪರಿಣಾಮಗಳಿಂದ ಮೃತರಾಗುವವರ ಪ್ರಮಾಣ ಹೆಚ್ಚಿದೆ, ಜತೆಗೆ ದೇಶವಾಸಿಗಳ ಸರಾಸರಿ ಆಯಸ್ಸು 3.4 ವರ್ಷ ಕಡಿಮೆಯಾಗಿದೆ ಎಂದು ಐಐಟಿ ಮುಂಬೈನ ವಿಜ್ಞಾನಿ ಡಾ. ಸಚಿನ್ ಘುದೆ ತಮ್ಮ ಸಂಶೋಧನಾ ವರದಿಯಲ್ಲಿ ತಿಳಿಸಿದರು.
2016: ಪಟನಾ: ಬಿಹಾರ ಪಿಯುಸಿ ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದ 4 ವಿದ್ಯಾರ್ಥಿಗಳಿಗೆ ನಡೆಸಲಾದ ಮರು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಾಲ್ಕು ವಿದ್ಯಾರ್ಥಿಗಳು ಹಾಗೂ ವಿಶುನ್ ರಾಯ್ ಕಾಲೇಜಿನ ನಿರ್ದೇಶಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಕಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ರೂಬಿ ರಾಯ್ ರಾಜಕೀಯ ಶಾಸ್ತ್ರ ಅಡುಗೆ ಸಬ್ಜೆಕ್ಟ್ ಎಂದ ಬೆನ್ನಲ್ಲೇ ಪಿಯು ಪರೀಕ್ಷಾ ಮಂಡಳಿ 14 ಟಾಪರ್ಗಳಿಗೆ ಮರು ಪರೀಕ್ಷೆ ನಡೆಸಿತ್ತು. ಇದರಲ್ಲಿ ಸೌರಭ್ ಶ್ರೇಷ್ಠ, ರಾಹುಲ್ ಕುಮಾರ್, ರೂಬಿ ರಾಯ್ ಹಾಗೂ ಶಾಲಿನಿ ಮುಂತಾದವರು ಅನುತ್ತೀರ್ಣರಾಗಿದ್ದರು. ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಅಪರಾಧವೆಸಗಿರುವ ಬಗ್ಗೆ ಮಾಹಿತಿ ಇದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ತನಿಖೆ ನಡೆಸಲಾಗುವುದು ಎಂದರು..

2016: ಹೈದರಾಬಾದ್: ದ್ವಿತೀಯ ವರ್ಷಾಚರಣೆ ಅಂಗವಾಗಿ ತೆಲಂಗಾಣದಲ್ಲಿ ಆರೋಹಣ ಮಾಡಲಾದ ಅತೀ ದೊಡ್ಡ ರಾಷ್ಟ್ರಧ್ವಜ ನಾಲ್ಕೇ ದಿನಗಳಲ್ಲಿ ಭಾರಿ ಗಾಳಿಯಿಂದಾಗಿ ಹಾನಿಗೊಳಗಾಯಿತು. ಹಾನಿಯಾದ ಧ್ವಜದ ಬದಲಿಗೆ ಹೊಸ ಧ್ವಜವನ್ನು ಆರೋಹಣ ಮಾಡಲಾಯಿತು. ತೆಲಂಗಾಣ ರಾಜ್ಯವಾಗಿ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ದ್ವಿತೀಯ ವರ್ಷಾಚರಣೆ ಆಚರಿಸಿಕೊಳ್ಳಲಾಗುತ್ತಿತ್ತು. ಇದೀಗ ಆರೋಹಣ ಮಾಡಲಾದ ಧ್ವಜ 65 ಕೆ.ಜಿ ತೂಕದ್ದಾಗಿದ್ದು, ಇಲ್ಲಿನ ಐತಿಹಾಸಿಕ ಹುಸೇನ್ ಸಾಗರ್ ಲೇಕ್ ತಟದಲ್ಲಿರುವ ಸಂಜೀವಿನಿ ಪಾರ್ಕ್ ಬಳಿ ಸ್ಥಾಪಿಸಲಾಗಿದೆ. 291 ಅಡಿ ಉದ್ದದವಿರುವ ಧ್ವಜ ದೇಶದ 2ನೇ ಅತೀ ಎತ್ತರದ ರಾಷ್ಟ್ರಧ್ವಜ ಎನಿಸಿಕೊಂಡಿದೆ. ಭಾರತದ ಅತೀ ಎತ್ತರದ ರಾಷ್ಟ್ರಧ್ವಜ ರಾಂಚಿಯಲ್ಲಿದ್ದು 293 ಅಡಿ ಉದ್ದವಿದೆ. ತೆಲಂಗಾಣ ಸರ್ಕಾರ, 303 ಅಡಿ ಉದ್ದದ ರಾಷ್ಟ್ರಧ್ವಜ ನಿರ್ಮಿಸಿ ಆರೋಹಣ ಮಾಡುವ ಯೋಜನೆ ಹೊಂದಿತ್ತಾದರೂ ಭಾರತೀಯ ವಿಮಾನ ಪ್ರಧಿಕಾರ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.

2016: ವಾಷಿಂಗ್ಟನ್: ಭಾರತದ ಹಲವಡೆಯಿಂದ ಕಳುವಾಗಿ ಅಮೆರಿಕ ಸೇರಿದ್ದ ಸುಮಾರು 67 ಕೋಟಿ ರೂ. ಮೌಲ್ಯದ (100 ಮಿಲಿಯನ್ ಡಾಲರ್) 200 ಅತ್ಯಮೂಲ್ಯ ಕಲಾಕೃತಿಗಳನ್ನು ಅಮೆರಿಕ ಭಾರತಕ್ಕೆ ಹಿಂದಿರುಗಿಸಿತು. ಹಿಂದಿನ ರಾತ್ರಿ ವಾಷಿಂಗ್ಟನ್ ಬ್ಲೇರ್ ಹೌಸ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೊದಿ ಅವರಿಗೆ ಕಲಾಕೃತಿಗಳನ್ನು ಹಸ್ತಾಂತರಿಸಲಾಯಿತು. ಕಲಾಕೃತಿಗಳನ್ನು ಹಣಕ್ಕಾಗಿ ಮಾರಾಟ ಮಾಡಿರಬಹುದು. ಆದರೆ ಇವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಒಂದು ಭಾಗಇವುಗಳನ್ನು ಭಾರತಕ್ಕೆ ಹಸ್ತಾಂತರಿರುವ ಅಮೆರಿಕಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ದನ್ಯವಾದ ಅರ್ಪಿಸಿದರು. ಅಮೆರಿಕ ಹಿಂದಿರುಗಿಸಿರುವ ಕಲಾಕೃತಿಗಳಲ್ಲಿ ಹಲವು ಸುಮಾರು 2000 ವರ್ಷಗಳಷ್ಟು ಹಳೆಯವು. ಚೋಳರ ಕಾಲದ ಕವಿ ಸಂತ ಮನಿಕ್ಕವಿಚವಕರ್ ಪ್ರತಿಮೆಯನ್ನು ಚೆನ್ನೈನ ಶಿವನ್ ದೇವಾಲಯದಿಂದ ಕಳವು ಮಾಡಲಾಗಿತ್ತು. ಇದನ್ನು ಹಿಂದಿರುಗಿಸಲಾಯಿತು. ಜತೆಗೆ ಸುಮಾರು 1000 ವರ್ಷ ಹಳೆಯದಾದ ಗಣೇಶನ ಕಂಚಿನ ವಿಗ್ರಹ ಸೇರಿದಂತೆ ಹಲವು ಪುರಾತನ ಕಲ್ಲಿನ, ಕಂಚಿನ ಮತ್ತು ಟೆರ್ರಾಕೋಟಾದ ವಿಗ್ರಹ ಮತ್ತು ಕಲಾಕೃತಿಗಳನ್ನು ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದೆ.
 2009: ಆಸ್ಕರ್ ವಿಜೇತ ಭಾರತೀಯ ಸಂಗೀತಕಾರ ಎ. ಆರ್. ರಹಮಾನ್ ಅವರಿಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು ಡಿ.ಲಿಟ್ ಗೌರವ ಪದವಿ ಪ್ರದಾನ ಮಾಡಿತು.

2009: ಗೂಗಲ್‌ನಂತಹ ಸಂಸ್ಥೆಯ ಸಹಸಂಸ್ಥಾಪಕರ ಅಚ್ಚುಮೆಚ್ಚಿನ ಗುರುಗಳಾಗಿದ್ದ ರಾಜೀವ್
ಮೊಟ್ವಾನಿ  (47)  ತಮ್ಮ  ಕ್ಯಾಲಿಫೋರ್ನಿಯಾ ನಿವಾಸದ ಈಜುಕೊಳದಲ್ಲಿ ಮುಳುಗಿ ವಿಲಕ್ಷಣ ರೀತಿಯಲ್ಲಿ ಸಾವನ್ನಪ್ಪಿದರು. ಸ್ಟಾನ್‌ಫೊರ್ಡ್ ಯೂನಿವರ್ಸಿಟಿಯ  ಇಂಡಿಯನ್-ಅಮೆರಿಕನ್ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಆಗಿದ್ದ ಮೊಟ್ವಾನಿ ಗೂಗಲ್ ಸಂಸ್ಥಾಪಕರು ಪದವಿ ವಿದ್ಯಾರ್ಥಿಗಳಾಗಿದ್ದಾಗ ಅವರ ಗುರುಗಳಾಗಿದ್ದರು. ಕೇವಲ ಮೂರು ವರ್ಷಗಳ ಹಿಂದಷ್ಟೇ ಖರೀದಿಸಿದ್ದ ಮನೆಯ ಹಿಂಭಾಗದ ಈಜುಕೊಳದಲ್ಲಿ ಅವರು ಜಲಸಮಾಧಿಯಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದವು. ಮಾಹಿತಿ ಆಳಶೋಧದತ್ತ ತಮ್ಮ ಆಸಕ್ತಿ ಹರಿದಾಗ ಈ ವಿಷಯದಲ್ಲಿ ಪರಿಣತಿ ಪಡೆದಿದ್ದ ರಾಜೀವ್ ಈ ವಿಷಯದಲ್ಲಿ ನಿಯಮಿತ ಸಭೆ ಸಂಯೋಜನೆಗೆ ನೆರವಾಗಿದ್ದರು. 'ನಂತರ ನಾನು ಮತ್ತು ಲ್ಯಾರಿ ಗೂಗಲ್‌ಗೆ ದಾರಿಯಾದ ಸಂಶೋಧನೆಗೆ ಒಟ್ಟಾಗಿ ಕೆಲಸ ಮಾಡತೊಡಗಿದಾಗ ನಮ್ಮನ್ನು ಬೆಂಬಲಿಸಲು ರಾಜೀವ್ ಸದಾ ಜೊತೆಗಿದ್ದರು. ತಾಂತ್ರಿಕ ಹಾಗೂ ಸಂಘಟನಾತ್ಮಕ ಸವಾಲುಗಳನ್ನು ಎದುರಿಸಲು ಅವರು ಮಾರ್ಗದರ್ಶಕರಾಗಿದ್ದರು' ಎಂದೂ ಬ್ರಿನ್ ವಿವರಿಸಿದರು. ಜಮ್ಮುವಿನಲ್ಲಿ ಮಾರ್ಚ್ 26, 1962 ರಂದು ಜನಿಸಿದ್ದ ರಾಜೀವ್ ದೆಹಲಿಯ ಶಾಲೆ ಕಾಲೇಜುಗಳಲ್ಲಿ ಓದಿ ಕಾನ್ಪುರದ ಐಐಟಿ ಯಿಂದ 1983ರಲ್ಲಿ ಕಂಪ್ಯೂಟರ್ ಸೈನ್ಸ್  ಪದವಿ ಪಡೆದಿದ್ದರು. 1988ರಲ್ಲಿ ಕ್ಯಾಲಿಫೋರ್ನಿಯಾ-ಬರ್ಕ್‌ಲಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು. ಸ್ಟಾನ್‌ಫೊರ್ಡ್  ಪ್ರೊಫೆಸರ್ ಆಗಿ ಕಂಪ್ಯೂಟರ್ ವಿಜ್ಞಾನ ಇಲಾಖೆಯ  ಪದವಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ 'ಮೈನಿಂಗ್ ಡಾಟಾ ಅಟ್ ಸ್ಟಾನ್‌ಫೋರ್ಡ್ ಪ್ರಾಜೆಕ್ಟ್'  (ಮಿದಾಸ್) ಸ್ಥಾಪಿಸಿದ್ದರು.

2009: ಬಹುಕಾಲದಿಂದ ಎಟುಕದೇ ಉಳಿದಿದ್ದ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಪ್ರಶಸ್ತಿಯನ್ನು ಗೆದ್ದುಕೊಂಡ ಸ್ವಿಜರ್ಲೆಂಡಿನ ರೋಜರ್ ಫೆಡರರ್ ಅವರು ಪ್ಯಾರಿಸ್ಸಿನ ರೋಲಂಡ್ ಗ್ಯಾರೋಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದರು. ಚೊಚ್ಚಲ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಫೆಡರರ್ ಅವರು ತಮ್ಮ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಸಂಖ್ಯೆಯನ್ನು 14ಕ್ಕೆ ಹೆಚ್ಚಿಸಿಕೊಂಡರು. ಮಾತ್ರವಲ್ಲ ಇಷ್ಟೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿರುವ ಅಮೆರಿಕದ ಪೀಟ್ ಸಾಂಪ್ರಾಸ್ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದರು. ರೋಲಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಫೆಡರರ್ 6-1, 7-6, 6-4 ರಲ್ಲಿ ಸ್ವೀಡನ್‌ನ ರಾಬಿನ್ ಸೊಡೆರ್‌ಲಿಂಗ್ ಅವರನ್ನು ಪರಾಭವಗೊಳಿಸಿ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡರು. ವಿಶ್ವದ ಎರಡನೇ ರಾಂಕಿಂಗ್‌ನ ಆಟಗಾರ ಇದರೊಂದಿಗೆ ಎಲ್ಲ ನಾಲ್ಕು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿದ ವಿಶ್ವದ ಆರನೇ ಆಟಗಾರ ಎನಿಸಿಕೊಂಡರು. ಫ್ರೆಡ್ ಪೆರ್ರಿ, ಡಾನ್ ಬಡ್ಜ್, ರಾಡ್ ಲೇವರ್, ರಾಯ್ ಎಮರ್ಸನ್ ಮತ್ತು ಆಂಡ್ರೆ ಅಗಾಸ್ಸಿ ಅವರು ಈ ಸಾಧನೆ ಮಾಡಿದ ಇತರ ಆಟಗಾರರು.

2009: ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಮುಖಂಡ ಪವನ್‌ರಾಜೇ ನಿಂಬಾಳ್ಕರ್ ಮತ್ತು ಅವರ ಕಾರು ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿಯ ಹಿರಿಯ ನಾಯಕ ಹಾಗೂ ಸಂಸದ ಪದಮ್‌ಸಿನ್ಹಾ ಪಾಟೀಲ್ ಅವರನ್ನು ಸಿಬಿಐ ಬಂಧಿಸಿತು. 69 ವರ್ಷದ ಸಂಸದ ಪದಮ್ ಸಿನ್ಹಾ ಪಾಟೀಲ್ ಅವರನ್ನು ರಾತ್ರಿ ಬಂಧಿಸಿದ ನಂತರ ನವಿ ಮುಂಬೈನ ಪನವೇಲ್ ಕೋರ್ಟಿನಲ್ಲಿ ಹಾಜರು ಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಜೂನ್ 14ರವರೆಗೆ ಸಿಬಿಯ ವಶಕ್ಕೆ ನೀಡಲು ಕೋರ್ಟ್ ಆದೇಶಿಸಿತು. ನವಿ ಮುಂಬೈನ ಕಲಂಬೋಲಿ ಪ್ರದೇಶದಲ್ಲಿ 2006ರ ಜೂನ್ 3ರಂದು ಕಾಂಗ್ರೆಸ್ ಮುಖಂಡ ನಿಂಬಾಳ್ಕರ್ ಮತ್ತು ಅವರ ಕಾರು ಚಾಲಕನನ್ನು ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಈ ಸಂಬಂಧ ಪಾರಸ್‌ ಮಲ್ ಜೈನ್ ಹಾಗೂ ಮೋಹನ್ ಶುಕ್ಲಾ ಎಂಬ ಇಬ್ಬರು ಆರೋಪಿಗಳನ್ನು ಈ ಮೊದಲೇ ಬಂಧಿಸಲಾಗಿತ್ತು. ನಿಂಬಾಳ್ಕರ್ ಅವರನ್ನು ಕೊಲೆ ಮಾಡಲು ತಮಗೆ ಸಂಸದ ಪಾಟೀಲ್ ಅವರು 30 ಲಕ್ಷ ರೂಪಾಯಿಗಳ ಸುಪಾರಿ ನೀಡಿದ್ದರು ಎಂಬ ಅಂಶವನ್ನು ಈ ಆರೋಪಿಗಳು ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ಪಾಟೀಲ್ ಅವರನ್ನು ಬಂಧಿಸಲಾಯಿತು ಎಂದು ಸಿಬಿಐ ವಕೀಲರು ತಿಳಿಸಿದರು.

2009: ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕನ ಪಟ್ಟ ಕೊನೆಗೂ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಲಿಯಿತು. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಅಸಮಾಧಾನದಿಂದ ವದಂತಿಗೆ ಗ್ರಾಸ ಒದಗಿಸಿದ್ದ ಸಿದ್ದರಾಮಯ್ಯ ಅಂತಿಮವಾಗಿ ಸಿ.ಎಲ್.ಪಿ ನಾಯಕನ ಪಟ್ಟ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈದಿನ ಸಂಜೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ನೂತನ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರು ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿ.

2009: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಮಿನಿ ಬಸ್ಸೊಂದು ಉರುಳಿ ಬಿದ್ದು ಕನಿಷ್ಠ 26 ಜನರು ಕಾಣೆಯಾದರು. ಇವರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಪೊಲೀಸರು ಹೇಳಿದರು.

2009: ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದ ಎಸ್‌ಎನ್‌ಸಿ ಲಾವಾಲಿನ್ ಲಂಚ ಪ್ರಕರಣ ಹೊಸ ತಿರುವು ಪಡೆದುಕೊಂಡಿತು. ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ರಾಜ್ಯಪಾಲ ಆರ್. ಎಸ್. ಗವಾಯ್ ಸಮ್ಮತಿ ಸೂಚಿಸಿದರು. 1998ರಲ್ಲಿ ವಿಜಯನ್ ಅವರು ವಿದ್ಯುತ್ ಸಚಿವರಾಗಿದ್ದ ಸಮಯದಲ್ಲಿ ಮೂರು ಜಲವಿದ್ಯುತ್ ಯೋಜನೆಗಳಾದ ಪನ್ನಿಯಾರ್, ಚೆಂಕುಲಂ ಮತ್ತು ಪಲ್ಲಿವಸಾಲ್‌ಗಳಲ್ಲಿ ನವೀಕರಣ ಕಾರ್ಯಕ್ಕಾಗಿ ಕೆನಡಾದ ಎಸ್‌ಎನ್‌ಸಿ ಲಾವಾಲಿನ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಈ ಗುತ್ತಿಗೆ ನೀಡಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಮತ್ತು ಅಕ್ರಮಗಳನ್ನು ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆ ನಡೆಸ್ದಿದ ಸಿಬಿಸಿದ್ದ ಸಿಬಿಐ ಈ ವ್ಯವಹಾರದಲ್ಲಿ ಅಕ್ರಮ ನಡೆದಿದ್ದುದನ್ನು ಕಂಡುಕೊಂಡಿತ್ತು ಹಾಗೂ ವಿಜಯನ್ ಅವರನ್ನು 9ನೇ ಆರೋಪಿಯನ್ನಾಗಿ ಪರಿಗಣಿಸಲು ಮುಂದಾಗಿತ್ತು. ಈ ಗುತ್ತಿಗೆಯಿಂದಾಗಿ ರಾಜ್ಯ ಬೊಕ್ಕಸಕ್ಕೆ ಭಾರಿ ಹಾನಿಯಾಗಿದೆ ಎಂದೂ ಸಿಬಿಐ ಹೇಳಿತ್ತು.

2009: 'ಇಂಗ್ಲಿಷ್ ಲ್ಯಾಂಗ್ವೇಜ್ ವರ್ಲ್ಡ್ ಕ್ಲಾಕ್' ಸಂಸ್ಥೆಯ ಪಟ್ಟಿಗೆ ಸೇರಲು ಅಂತಿಮ ಸುತ್ತಿಗೆ ಆಯ್ಕೆಯಾಗಿರುವ 73 ಶಬ್ದಗಳಲ್ಲಿ 'ಜೈಹೋ',  ಹಾಗೂ 'ಸ್ಲಮ್ ಡಾಗ್' ಶಬ್ದಗಳೂ ಸೇರಿದವು.
ಪ್ರಸ್ತುತ ಈ ಪಟ್ಟಿಯಲ್ಲಿ 999,927 ಶಬ್ದಗಳು ಇದ್ದು, ಅಂತಿಮ ಸುತ್ತಿನಲ್ಲಿರುವ ಈ 73 ಶಬ್ದಗಳು ಸೇರಿದರೆ  ಈ ಸಂಖ್ಯೆ 10 ಲಕ್ಷಕ್ಕೆ ಏರಿದಂತಾಗುತ್ತದೆ. ಟೆಕ್ಸಾಸ್ ಮೂಲದ ಜಾಗತಿಕ ಭಾಷಾ ಮೇಲ್ವಿಚಾರಣಾ ಸಂಸ್ಥೆ 'ಇಂಗ್ಲಿಷ್ ಲ್ಯಾಂಗ್ವೇಜ್ ವರ್ಲ್ಡ್ ಕ್ಲಾಕ್' ವಾಡಿಕೆಯಲ್ಲಿರುವ ಶಬ್ದಗಳ ಹೊಸ ಪ್ರವೃತ್ತಿಯನ್ನು ವಿಶ್ಲೇಷಿಸುತ್ತದೆ ಮತ್ತು  ಇಂಗ್ಲಿಷಿನಲ್ಲಿ ಒಂದು ನಿರ್ದಿಷ್ಟ ಮಹತ್ವವನ್ನು ಆಧರಿಸಿ ಶಬ್ದಗಳನ್ನು ಆಯ್ಕೆ ಮಾಡುತ್ತದೆ.

2009: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರಿಗೆ ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯ ಗೌರವ ಡಿ.ಲಿಟ್ ನೀಡಿ ಗೌರವಿಸಿತು. ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಹಿರಿಯ ಉರ್ದು ಲೇಖಕ ಗೋಪಿ ಚಂದ್ ನಾರಂಗ್ ಅವರು ಪದವಿ ನೀಡಿದರು.

2009: ಉಗ್ರಗಾಮಿ ಸಂಘಟನೆ ಜೆಯುಡಿ ಮುಖ್ಯಸ್ಥ ಹಫೀಜ್ ಮಹಮ್ಮದ್ ಸಯೀದ್‌ಗೆ ಮುಂಬೈ ದಾಳಿಗೆ ಸಂಬಂಧಿಸಿದಂತೆ ಸಂಪರ್ಕ ಇರುವ ಬಗ್ಗೆ ಯಾವ ಸಾಕ್ಷ್ಯಾಧಾರವನ್ನೂ ಪಾಕ್ ಸರ್ಕಾರ ಸಲ್ಲಿಸಿರಲಿಲ್ಲ. ಹಾಗಾಗಿ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಲಾಹೋರ್ ಹೈಕೋರ್ಟ್ ತಿಳಿಸಿತು. ಸಯೀದನನ್ನು ಬಂಧಮುಕ್ತಗೊಳಿಸಿದ ಬೆನ್ನಲ್ಲೇ ಹೈಕೋರ್ಟ್ ತನ್ನ ತೀರ್ಪಿನ 29 ಪುಟಗಳ ವಿಸ್ತೃತ ವರದಿಯಲ್ಲಿ ಈ ವಿವರವನ್ನು ತಿಳಿಸಿತು. ಮುಂಬೈ ದಾಳಿಯ ಇನ್ನೊಬ್ಬ ಪ್ರಮುಖ ಆರೋಪಿ ನಿವೃತ್ತ ಕರ್ನಲ್  ನಜೀರ್ ಮೊಹಮ್ಮದನನ್ನೂ ಸಯೀದನ ಜತೆ ಬಿಡುಗಡೆ ಮಾಡಲಾಗಿತ್ತು. ಮುಂಬೈ ದಾಳಿಯ ಪ್ರಮುಖ ಆರೋಪಿಗಳೆಂದು ದಾಖಲಿಸಲಾಗಿದ್ದ ಇಬ್ಬರನ್ನೂ ನಿರ್ದೋಷಿಗಳೆಂದು ಬಿಡುಗಡೆ ಮಾಡಿರುವುದರ ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

2009:  ಎಚ್‌ಐವಿ ಸೋಂಕು ನಿವಾರಣೆಗಾಗಿ ಇಟಲಿಯ ಸಂಶೋಧಕರು ಆಘಾತ ನೀಡು ಮತ್ತು ಕೊಲ್ಲು (ಶಾಕ್ ಅಂಡ್ ಕಿಲ್) ಎಂಬ ನೂತನ ವಿಧಾನ ಕಂಡು ಹಿಡಿದರು. ಇಟಲಿ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರಾಗಿರುವ ಎನ್ರಿಕೊ ಗರಸಿ ಮತ್ತವರ ಸಹೋದ್ಯೋಗಿ ಆಂಡ್ರಿಕೊ ಸವಾರಿನೊ ಜಂಟಿಯಾಗಿ ನಡೆಸಿದ ಈ ಚಿಕಿತ್ಸೆಗೆ 'ಬ್ಯಾರೊಯರ್ ಆಫ್ ಲೆಟೆನ್ಸಿ' ಎಂದು ಹೆಸರಿಸಲಾಯಿತು. ದೇಹದಿಂದ ಎಚ್‌ಐವಿ ಸೋಂಕು ನಿವಾರಿಸಲು ಇದು ಪರಿಣಾಮಕಾರಿ ಔಷಧ ಎಂದು ಅವರು ತಿಳಿಸಿದರು. ಎಚ್‌ಐವಿ-1 ಸೋಂಕು ಜೀವಕೋಶಗಳಲ್ಲಿ ಲೀನವಾಗಿ ಬಿಡುತ್ತದೆ. ಆದರೆ ಅಂತಹ ಕೋಶಗಳನ್ನು 'ಸುಟ್ಟರೆ' ಸೋಂಕು ಕೂಡ ತಾನೆ ತಾನಾಗಿ ನಾಶವಾಗುತ್ತದೆ ಎಂದು ಸಾವರಿನೋ ತಂಡ ತಿಳಿಸಿದೆ. ಈ ವಿಧಾನದ ಬಗ್ಗೆ ವಿಜ್ಞಾನ ವಲಯದಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆಯಂತೆ.  'ರೆಟ್ರಿವೈರಾಲಜಿ' ಪತ್ರಿಕೆಯಲ್ಲಿ ಈ ವೈದ್ಯ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು.

2009: ಸುತ್ತುವರೆದ ಪ್ರಾಸ್ಟೇಟ್ ಗ್ರಂಥಿಗೆ ತಗುಲುವ ಕ್ಯಾನ್ಸರ್ ತಡೆಗಟ್ಟಲು ಹಣ್ಣು, ತರಕಾರಿ, ಕುರಿ ಹಾಗೂ ದನದ ಮಾಂಸ ತಿನ್ನುವಂತೆ ಆಸ್ಟ್ರೇಲಿಯಾದ ತಜ್ಞರು ಸಲಹೆ ಮಾಡಿದರು. ಈ ಪದಾರ್ಥಗಳಲ್ಲಿ ಕೊಬ್ಬು ಕಡಿಮೆ ಇರುತ್ತದೆ ಎಂದೂ ಅವರು ಹೇಳಿದರು. ಪ್ರಾಸ್ಟೇಟ್ ಗ್ರಂಥಿಗೆ ಕ್ಯಾನ್ಸರ್ ತಗುಲಿದ ವ್ಯಕ್ತಿಗಳು ಅನುಸರಿಸಬೇಕಾದ ಪಥ್ಯ ಕುರಿತು ಅಧ್ಯಯನ ನಡೆಸಿರುವ ನ್ಯೂಸೌತ್ ವೇಲ್ಸ್‌ನ ರಾಬರ್ಟ್ ಮಾ ಮತ್ತು ಕೆ.ಚಂಪನ್ ಅವರನ್ನೊಳಗೊಂಡ ತಂಡವು ಈ  ಸಲಹೆ ಮಾಡಿತು. ಡೇರಿ ಉತ್ಪನ್ನಗಳನ್ನು ತಿನ್ನಬಾರದು. ವಿಟಮಿನ್ ಇ ಅಂಶವನ್ನು  ಒಳಗೊಂಡ ಹಸಿರು ಚಹಾ, ಹೂಕೋಸು ಸೇವನೆಯೂ ಒಳ್ಳೆಯದು ಎಂದು ತಂಡ ಹೇಳಿತು. ಈ ಅಧ್ಯಯನದ ವಿವರಗಳು 'ಹ್ಯೂಮನ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್' ನಿಯತಕಾಲಿಕೆಯ ಜೂನ್ ತಿಂಗಳ ಸಂಚಿಕೆಯಲ್ಲಿ ಪ್ರಕಟಗೊಂಡವು.

2009: ಹಂದಿ ಜ್ವರದ (ಎಚ್‌ಐಎನ್‌ಐ) ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮೆಲ್ಬರ್ನ್ ನಗರವು ಜಗತ್ತಿನ ಹಂದಿ ಜ್ವರದ ರಾಜಧಾನಿ ಎಂಬ ಅಪಖ್ಯಾತಿಗೆ ಪಾತ್ರವಾಯಿತು. ಆಸ್ಟ್ರೇಲಿಯಾದಲ್ಲಿ ಒಟ್ಟು 1,006 ಹಂದಿಜ್ವರದ ಪ್ರಕರಣಗಳು ವರದಿಯಾದವು. ಮೆಲ್ಬರ್ನ್ ನಗರದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ 874 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿದವು. ಅಮೆರಿಕದಲ್ಲಿ 11,131 ಪ್ರಕರಣಗಳು ಮತ್ತು ಮೆಕ್ಸಿಕೊದಲ್ಲಿ 5,029 ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳು ಹೇಳಿದವು. ಮೆಕ್ಸಿಕೊಕ್ಕೆ ಹೋಲಿಸಿದರೆ ಮೆಲ್ಬರ್ನ್ ಪಟ್ಟಣ ಚಿಕ್ಕದು ಹಾಗೂ ಜನಸಂಖ್ಯೆಯೂ ಕಡಿಮೆ. ಆದರೆ ಪ್ರತಿ 9,139 ಜನರ ಪೈಕಿ ಒಬ್ಬರಿಗೆ ಹಂದಿ ಜ್ವರ ತಗುಲಿದೆ. ಹಾಗಾಗಿ ಮೆಲ್ಬೋರ್ನ್ ನಗರ ಹಂದಿಜ್ವರದ ರಾಜಧಾನಿ ಎಂಬ ಅಪಖ್ಯಾತಿಗೆ ಒಳಗಾಯಿತು.

2009: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಚೆಂದದ ಸೂಟ್ ಹೊಲಿದು ಕೊಡುತ್ತಿದ್ದ ಶಿಕಾಗೋದ ಪ್ರತಿಷ್ಠಿತ ಕಂಪೆನಿ ಕದ ಮುಚ್ಚಿತು. ಪುರುಷರಿಗೆಂದೇ ವಿಶೇಷ ಸೂಟ್‌ಗಳನ್ನು ಹೊಲಿದು ಕೊಡುತ್ತಿದ್ದ ಹಾರ್ಟ್‌ಮ್ಯಾಕ್ಸ್ ಟುಕ್ಸೆಡೊ ಇನ್ನಿಲ್ಲದಂತೆ ದಿವಾಳಿಯಾಯಿತು. ಇದರ 137 ವರ್ಷಗಳ ಸೇವೆ ಅಂತ್ಯಗೊಂಡಿತು. ಬರಾಕ್ ಒಬಾಮ ಜನವರಿಯಲ್ಲಿ ಅಧ್ಯಕ್ಷ ಪದವಿ ಅಲಂಕರಿಸುವಾಗ ಇದೇ ಹಾರ್ಟ್‌ಮ್ಯಾಕ್ಸ್ ಕಂಪೆನಿ ಅವರಿಗೆ ಅಂದದ-ಸೊಬಗಿನ ಸೂಟು ಹೊಲಿದುಕೊಟ್ಟಿತ್ತು.

2009: ಸೀಸ ಲೇಪಿತ ಆಟಿಕೆಗಳನ್ನು ಚೀನಾದಿಂದ ಆಮದು ಮಾಡಿಕೊಂಡ ತಪ್ಪಿಗಾಗಿ ಅಮೆರಿಕದ ಆಟಿಕೆ ತಯಾರಿಕಾ ಕಂಪೆನಿ ಮೆಟ್ಟಲ್ ಇಂಕ್‌ಗೆ 2.3 ದಶಲಕ್ಷ ಡಾಲರ್ ದಂಡ ವಿಧಿಸಲಾಯಿತು. ಚೀನಾದಿಂದ ಅಪಾಯಕಾರಿ ಉತ್ಪನ್ನಗಳನ್ನು ಆಮದು ಮಾಡಿದ್ದ ಮೆಟ್ಟಲ್ ಮತ್ತು ಇದರ ಸಹವರ್ತಿ ಕಂಪೆನಿ ಫಿಶರ್ ಪ್ರೈಸ್‌ಗೆ ಅಮೆರಿಕದ ಗ್ರಾಹಕ ಉತ್ಪನ್ನ ರಕ್ಷಣಾ ಆಯೋಗ ದಂಡ ವಿಧಿಸಿತು. ಪ್ಲಾಸ್ಟಿಕ್, ಕಾರುಗಳು, ಬಾರ್ಬಿ ಬೊಂಬೆಗೆ ಬಳಸುವ ವಸ್ತುಗಳು ಸೇರಿದಂತೆ ಹಲವು ಆಟಿಕೆಗಳನ್ನು 2007 ರಲ್ಲಿ ಕಂಪೆನಿ ಚೀನಾದಿಂದ ಆಮದು ಮಾಡಿಕೊಂಡಿತ್ತು.

2009: ರೇಡಿಯೊ, ಸೆಲ್ ಫೋನ್, ಇಂಟರ್‌ನೆಟ್ ಹಾಗೂ ಟಿ.ವಿಗಳ ಕಾರ್ಯನಿರ್ವಹಣೆಗೆ ಅತಿ ವೇಗವಾಗಿ ಸಂಕೇತಗಳನ್ನು ಸೆಳೆಯುವ ನಿಸ್ತಂತು ವಾಹಕದ ಅಲ್ಟ್ರಾ ಬ್ರಾಡ್‌ಬ್ಯಾಂಡ್ ಸಾಧನವೊಂದನ್ನು ಭಾರತೀಯ ಮೂಲದ ಅಮೆರಿಕ ವಾಸಿ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದರು. ಎಂಐಟಿಯ ಸಹಾಯಕ ಪ್ರಾಧ್ಯಾಪಕ ರಾಹುಲ್ ಸರ್ಪೇಶ್ಕರ್ ಹಾಗೂ ಅವರ ವಿದ್ಯಾರ್ಥಿ ಸೌಮ್ಯಜಿತ್ ಮಂಡಲ್ ಅವರು ಇದನ್ನು 'ಚಿಪ್' ರೂಪದಲ್ಲಿ ಅಭಿವೃದ್ಧಿಪಡಿಸಿದವರು. ಈ ಚಿಪ್‌ಗಳು ಈಗ ಲಭ್ಯವಿರುವ ಮಾನವ ನಿರ್ಮಿತ ರೇಡಿಯೊ ತರಂಗಾಂತರಗಳನ್ನು ಸೆಳೆಯುವ ಸಂಕೇತಗಳಿಗಿಂತಲೂ ವೇಗವಾಗಿ ಕಾರ್ಯ ನಿರ್ವಹಿಸುತ್ತವೆ. ಈ ತಂತ್ರಜ್ಞಾನವು ಶಬ್ದದ ಅಲೆಗಳನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸಿ ಅವುಗಳನ್ನು ಮಿದುಳಿಗೆ ರವಾನಿಸುವ ರಸಾಯನಿಕ ಕ್ರಿಯೆಯ ತದ್ರೂಪ.

2008: ಸರ್ಬಿಯಾದ ಅನಾ ಇವನೋವಿಕ್ ಅವರು ತಮ್ಮ ವೃತ್ತಿ ಜೀವನದ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ಮುಡಿಗೇರಿಸಲು ಯಶಸ್ವಿಯಾದರು. ಪ್ಯಾರಿಸ್ಸಿನಲ್ಲಿ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಅವರು ಹೊಸ ವಿಕ್ರಮ ಸಾಧಿಸಿದರು. ಈದಿನ ನಡೆದ ಫೈನಲ್ ಪಂದ್ಯದಲ್ಲಿ ಇವನೋವಿಕ್ 6-4, 6-3ರಲ್ಲಿ ರಷ್ಯಾದ ದಿನಾರ ಸಫಿನಾ ಅವರನ್ನು ಮಣಿಸಿದರು. ಕಳೆದ ಬಾರಿ ಇಲ್ಲಿ ಫೈನಲ್ನಲ್ಲಿ ಎಡವಿದ್ದ ಸರ್ಬಿಯನ್ ಚೆಲುವೆ ಈ ಬಾರಿ ಯಾವುದೇ ತಪ್ಪೆಸಗಲಿಲ್ಲ.

2007: ಕೊಲ್ಲಿ ರಾಷ್ಟ್ರಗಳಲ್ಲಿ ಅಪರೂಪವಾದ ಚಂಡಮಾರುತ ಓಮನ್ ಮೇಲೆ ಅಪ್ಪಳಿಸಿದ ಪರಿಣಾಮವಾಗಿ ಮೈಸೂರು ಜಿಲ್ಲೆ ಬಿಸಲವಾಡಿ ಗ್ರಾಮದ ರಂಗಸ್ವಾಮಿ ಅಲಿಯಾಸ್  ಪ್ರಕಾಶನ್ (26) ಸೇರಿ  15 ಜನ ಮೃತರಾಗಿ 8 ಭಾರತೀಯರು ಕಣ್ಮರೆಯಾದರು.

2007: ರಾಜಕೀಯ ಪ್ರಭಾವ ಹೊಂದಿದ ಕೆಲವು ವ್ಯಕ್ತಿಗಳು ಬೆಂಗಳೂರಿನ ಅನೇಕ ಕಡೆ 795 ಕೋಟಿ ರೂಪಾಯಿ ಮೌಲ್ಯದ 54.32 ಎಕರೆ ಸರ್ಕಾರಿ ಭೂಮಿ ಕಬಳಿಸಿರುವುದನ್ನು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಸರ್ಕಾರಿ ಭೂಮಿ ಒತ್ತುವರಿ ಕುರಿತು ತನಿಖೆ ನಡೆಸಿದ ಜಂಟಿ ಸದನ ಸಮಿತಿ ಪತ್ತೆ ಹಚ್ಚಿತು.

2007: ಹಿಂದಿನ ರಾಣೆ ಸರ್ಕಾರದಲ್ಲಿ ವಿದ್ಯುತ್ ಸಚಿವರಾಗಿದ್ದ ದಿಗಂಬರ ಕಾಮತ್ ಅವರನ್ನು ಗೋವಾದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಆಯ್ಕೆಯ ಕಸರತ್ತು ಈದಿನ ನಡುರಾತ್ರಿ ಕೊನೆಗೊಂಡಿತು.

2007: ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳಾದ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗಳಲ್ಲಿ ಸರ್ಚ್ ಎಂಜಿನ್ ಸೇವಾ ಸೌಲಭ್ಯ ಹೊಂದಿರುವ ದೇಶದ ಪ್ರತಿಷ್ಠಿತ ಗುರೂಜಿ ಡಾಟ್ ಕಾಮ್ ಸಂಸ್ಥೆಯು ಕನ್ನಡ ಭಾಷೆಗೂ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿತು.

2007: ಅಸ್ಥಿಮಚ್ಚೆಯ ಕಸಿಗಿಂತ ಹೊಕ್ಕಳಬಳ್ಳಿ ಕಸಿಯಿಂದ ರಕ್ತದ ಕ್ಯಾನ್ಸರ್ ರೋಗಿಗಳು ಬದುಕಿ ಉಳಿಯುವ ಸಾಧ್ಯತೆಗಳು ಹೆಚ್ಚು ಎಂದು ಹ್ಯೂಸ್ಟನ್ ರಕ್ತ ಮತ್ತು ಅಸ್ಥಿ ಮಚ್ಚೆ (ಎಲುವಿನ ಕೊಬ್ಬು) ಕಸಿ ಸಂಶೋಧನಾ ಕೇಂದ್ರದ ಸಂಶೋಧನೆ ಬಹಿರಂಗಪಡಿಸಿತು.

2007: ಅಮೆರಿಕದ ವಿಜ್ಞಾನಿಗಳು ಮಹಿಳೆಯೊಬ್ಬರ ದೇಹದಲ್ಲಿ ಬರ್ಟೊನೆಲ್ಲಾ ರೊಚೆನಿಮೆ ಎಂಬ ಅತ್ಯಂತ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆ ಮಾಡಿದರು. ವೈದ್ಯ ವಿಜ್ಞಾನದಲ್ಲಿ ಈ ಬಗೆಯ ಸೂಕ್ಷ್ಮಜೀವಿ ಪತ್ತೆ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.

2007: ಜಗತ್ತಿನ ಶ್ರೀಮಂತ ರಾಷ್ಟ್ರಗಳು 2050ರ ಹೊತ್ತಿಗೆ ಹಸಿರು ಮನೆಗೆ ಹಾನಿ ಉಂಟು ಮಾಡುವ ಅನಿಲಗಳ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಲು ಬರ್ಲಿನ್ನಿನಲ್ಲಿ ನಡೆದ ಜಿ-8 ರಾಷ್ಟ್ರಗಳ ಸಭೆಯಲ್ಲಿ ನಿರ್ಧರಿಸಿದವು.

 2006: ಸುಪ್ರೀಂಕೋರ್ಟಿನಲ್ಲಿ ಮುಖಭಂಗ ಉಂಟು ಮಾಡಿರುವ ನೈಸ್ ಕಂಪೆನಿಗೆ `ಕರ್ನಾಟಕ ಮೂಲ ಸೌಲಭ್ಯ ಅಭಿವೃದ್ಧಿ ವಿಧೇಯಕ' ಮೂಲಕ ತಿರುಗೇಟು ನೀಡಲು ಮತ್ತು ಮಸೂದೆಯನ್ನು ಜೂನ್ 19ರಂದು ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟದ ತುರ್ತು ಸಭೆ ಒಪ್ಪಿಗೆ ನೀಡಿತು.

2006:  ರಾಯ್ ಬರೇಲಿ ಕ್ಷೇತ್ರದಿಂದ, ಲೋಕಸಭೆಗೆ ಸೋನಿಯಾ ಗಾಂಧಿ ಆಯ್ಕೆಯನ್ನು ಪ್ರಶ್ನಿಸಿ ಸಂತೋಷಕುಮಾರ್ ಶ್ರೀವಾತ್ಸವ ನೇತೃತ್ವದಲ್ಲಿ ವಾರಣಾಸಿಯ ಹತ್ತು ಜನ ವಕೀಲರು ಸುಪ್ರೀಂ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದರು. ಸಂವಿಧಾನದ 102 (1) (ಡಿ) ಕಲಂ ಪ್ರಕಾರ ಯಾವುದೇ ವ್ಯಕ್ತಿಯು ವಿದೇಶದೊಂದಿಗೆ ಸಂಬಂಧ ಹೊಂದಿದ್ದರೆ ಅಥವಾ ವಿದೇಶಕ್ಕೆ ನಿಷ್ಠರಾಗಿದ್ದರೆ ಅಂಥವರು ಸಂಸತ್ತಿನ ಯಾವುದೇ ಸದನದ ಸದಸ್ಯರಾಗಿ ಆಯ್ಕೆಯಾಗಲು ಅರ್ಹರಲ್ಲ; ಸೋನಿಯಾ ಗಾಂಧಿ ಅವರು ನಾಮಪತ್ರ ಸಲ್ಲಿಕೆಯ ಸಂದರ್ಭ ಇಟಲಿಯಲ್ಲಿ ತಮ್ಮ ಪೂರ್ವಜರ ಮನೆಯೊಂದು ತಮ್ಮ ಹೆಸರಿನಲ್ಲಿ ಇರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಅವರಿನ್ನೂ ಆ ದೇಶಕ್ಕೆ ಅಂಟಿಕೊಂಡವರು. ಹೀಗಾಗಿ ಅವರ ಆಯ್ಕೆಯನ್ನು ಅನೂರ್ಜಿತ ಗೊಳಿಸಬೇಕು  ಎಂದು ಅರ್ಜಿದಾರರು ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡರು.

1998: ನಲ್ವತ್ತನಾಲ್ಕು ದಶಲಕ್ಷ ಡಾಲರ್ ಸಾಲದೊಂದಿಗೆ ಭಾರತ ವಿಶ್ವಬ್ಯಾಂಕಿನ ಅತಿ ಹೆಚ್ಚು ಸಾಲ ಪಡೆದ ರಾಷ್ಟ್ರಗಳ ಪಟ್ಟಿಗೆ ಸೇರಿತು.

1997: ತಂಜಾವೂರಿನ ದೇವಾಲಯದ ಯಾಗಶಾಲೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 37 ಜನ ಮೃತರಾದರು.

1982: ದಕ್ಷಿಣ ಲೆಬನಾನಿನಲ್ಲಿ ಇರುವ ಪ್ಯಾಲೆಸ್ಟೈನಿನ ಭದ್ರಕೋಟೆ ಬಿವೋಪೋರ್ಟ್ ಕ್ಯಾಸೆಲ್ ನೆಲೆಯನ್ನು ಇಸ್ರೇಲಿ ಪಡೆಗಳು ತಮ್ಮ ಕೈವಶ ಪಡಿಸಿಕೊಂಡವು.

1974: ಭಾರತೀಯ ಟೆನಿಸ್ ಆಟಗಾರ ಮಹೇಶ ಭೂಪತಿ ಜನ್ಮದಿನ.  ಜಪಾನಿನ ರಿಕಾ ಹಿರಾಕಿ ಜೊತೆ 1999ರಲ್ಲಿ ನಡೆದ ಪಂದ್ಯದಲ್ಲಿ ಫ್ರೆಂಚ್ ಓಪನ್ ಮಿಕ್ಸೆಡ್ ಡಬಲ್ಸ್ ಕ್ರೌನ್ ಗೆದ್ದುಕೊಳ್ಳುವ ಮೂಲಕ ಗ್ರ್ಯಾಂಡ್ ಸ್ಲಾಮ್ ಟೈಟಲನ್ನು ಪಡೆದ ಪ್ರಪ್ರಥಮ ಭಾರತೀಯ ಟೆನಿಸ್ ಆಟಗಾರ ಇವರು.

1956: ಸಾಹಿತಿ ಬೊಳುವಾರು ಐ.ಕೆ. ಜನನ.

1940: ಪ್ರಾಣಿ, ಪಕ್ಷಿ, ಮರಗಿಡ, ಮಣ್ಣು- ಮುಗಿಲು ಮುಂತಾದ ಪ್ರಕೃತಿಯ ನೈಸರ್ಗಿಕ ದೃಶ್ಯಗಳನ್ನು ತಮ್ಮ ಕಲೆಯ ಮೂಲಕ ಅಭಿವ್ಯಕ್ತಿ ಪಡಿಸಿದ ಚಿತ್ರ ಕಲಾವಿದ ವಿಜಯ ಸಿಂಧೂರ ಅವರು ಗಂಗಪ್ಪ- ಬಸಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬನಹಟ್ಟಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದರು.

1929: ರೋಮ್ ನಲ್ಲಿ ಲ್ಯಾಟರನ್ ಒಪ್ಪಂದದ ಪ್ರತಿಗಳ ವಿನಿಮಯದೊಂದಿಗೆ ಸಾರ್ವಭೌಮ ವ್ಯಾಟಿಕನ್ ಸಿಟಿ ರಾಷ್ಟ್ರ ಅಸ್ತಿತ್ವಕ್ಕೆ ಬಂದಿತು. ಈ ಒಪ್ಪಂದಕ್ಕೆ ಬೆನಿಟೋ ಮುಸ್ಸೋಲಿನಿ ಇಟಲಿ ಸರ್ಕಾರದ ಪರವಾಗಿ ಮತ್ತು ಪೋಪ್ ಅವರ ಪರವಾಗಿ ಕಾರ್ಡಿನಲ್ಲಿ ಸೆಕ್ರೆಟರಿ ಪೀಟ್ರೋ ಗ್ಯಾಸ್ಪರ್ರಿ ಫೆಬ್ರುವರಿ 11ರಂದು ಸಹಿ ಹಾಕಿದ್ದರು.

1928: ಸಾಹಿತಿ ಕುಲಕರ್ಣಿ ಬಿಂದು ಮಾಧವ ಜನನ.

1921: ಲಘು ಸಂಗೀತ, ಭಾವಗೀತೆಗಳ ಹಾಡುಗಾರಿಕೆಯನ್ನು ಖ್ಯಾತಿಗೆ ತಂದ ದೇವಂಗಿ ಚಂದ್ರಶೇಖರ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ದೇವಂಗಿಯಲ್ಲಿ ಈದಿನ ಜನಿಸಿದರು.

1911: ಸಾಹಿತಿ ಕುಕ್ಕಿಲ ಕೃಷ್ಣಭಟ್ಟ ಜನನ.

1893: ದಕ್ಷಿಣ ಆಫ್ರಿಕದಲ್ಲಿ ಪ್ರಥಮ ದರ್ಜೆ ಬೋಗಿಯ ಟಿಕೆಟ್ ಪಡೆದುಕೊಂಡಿದ್ದ ಮಹಾತ್ಮ ಗಾಂಧಿಯವರನ್ನು (ಆಗ ಅವರು ಕೇವಲ ಮೋಹನದಾಸ ಕರಮಚಂದ ಗಾಂಧಿ) ರೈಲುಗಾಡಿಯಿಂದ ಹೊರತಳ್ಳಲಾಯಿತು. ಈ ಘಟನೆ ಅವರ ಬದುಕಿನ ಪ್ರಮುಖ ಘಟನೆಯಾಗಿ ಮಾರ್ಪಟ್ಟು `ಅಹಿಂಸಾತ್ಮಕ ಸತ್ಯಾಗ್ರಹ' ಸಿದ್ಧಾಂತದ ಹುಟ್ಟಿಗೆ ಕಾರಣವಾಯಿತು.

1868: ಚಾರ್ಲ್ಸ್ ರೆನ್ನೀ ಮೆಕಿಂತೋಶ್ (1868-1928) ಜನ್ಮದಿನ. ಸ್ಕಾಟ್ ಲ್ಯಾಂಡಿನ ಶಿಲ್ಪಿ ಹಾಗೂ ವಿನ್ಯಾಸಕಾರರಾದ ಇವರು ಗ್ರೇಟ್ ಬ್ರಿಟನ್ನಿನಲ್ಲಿ ಕಲೆ ಮತ್ತು ಕುಶಲ ಕಲೆಗಳ ಚಳವಳಿಯನ್ನು ಬೆಳೆಸಿದವರಲ್ಲಿ ಪ್ರಮುಖ ವ್ಯಕ್ತಿ.
(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment