ನಾನು ಮೆಚ್ಚಿದ ವಾಟ್ಸಪ್

Tuesday, June 30, 2020

ಇಂದಿನ ಇತಿಹಾಸ History Today ಜೂನ್ 30

ಇಂದಿನ ಇತಿಹಾಸ  History Today ಜೂನ್  30   

2020: ನವದೆಹಲಿ: ಕೊರೋನಾವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ೮೦ ಕೋಟಿ ಜನರಿಗೆ ನೆರವಾಗಲು ಪ್ರಧಾನಮಂತ್ರಿ ಗರೀಬ ಕಲ್ಯಾಣ ಅನ್ನ ಯೋಜನೆಯನ್ನು (ಪಿಎಂಜಿಕೆಎವೈ) ನವೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗುವುದು ಮತ್ತು ಉಚಿತ ಪಡಿತರ ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಜೂನ್ 30ರ ಮಂಗಳವಾರ ಪ್ರಕಟಿಸಿದರು. ಇದೇ ವೇಳೆಗೆ ಮಾಸ್ಕ್ ಧರಿಸುವುದು ಮತ್ತು ಅಂತರ ಪಾಲನೆಯನ್ನು ಕಡ್ಡಾಯವಾಗಿ ಅನುಸರಿಸಲು ಅವರು ಜನರನ್ನು ಆಗ್ರಹಿಸಿದರು.  ಅನ್ ಲಾಕ್ ಆರಂಭದ ಮುನ್ನಾದಿನ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಉಚಿತ ಪಡಿತರದ ಜೊತೆಗೆ  ಒಂದು ಕಿಲೋ ಗ್ರಾಂ ಕಡಲೆಕಾಳನ್ನೂ ಒದಗಿಸಲಾಗುವುದು ಎಂದು ಮೋದಿ ಹೇಳಿದರು. ಮುಂದಿನ ಐದು ತಿಂಗಳ ಅವಧಿಗೆ ಪಿಎಂಜಿಕೆಎವೈ ಯೋಜನೆ ವಿಸ್ತರಣೆಯಿಂದ ಬೊಕ್ಕಸದ ಮೇಲೆ ೯೦ ಸಾವಿರ ಕೋಟಿ ರೂಪಾಯಿಗಳ ಹೆಚ್ಚಿನ ಹೊರೆ ಬೀಳುವುದು ಎಂದು ಪ್ರಧಾನಿ ನುಡಿದರು.  ಇನ್ನೂ ಐದು ತಿಂಗಳ ಕಾಲ ೮೦ ಕೋಟಿ ಜನರು ಉಚಿತ ಪಡಿತರ ಪಡೆಯಲಿದ್ದಾರೆ ಎಂದು ಹೇಳಿದ ಪ್ರಧಾನಿ ಕೊರೋನಾವೈರಸ್ ಪ್ರಸರಣ ತಡೆಗಾಗಿ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಜಾರಿಗೊಳಿಸಿದ ದಿನದಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಮಾಡಿದ ಕೆಲಸಗಳನ್ನು ವಿವರಿಸಿದರು. ‘ಪಿಎಂಜಿಕೆಎವೈ ಅಡಿಯಲ್ಲಿ .೭೫ ಲಕ್ಷ ಕೋಟಿ ರೂಪಾಯಿ ಮೊತ್ತದ ಕೊಡುಗೆಯನ್ನು ನಾವು ಪ್ರಕಟಿಸಿದ್ದೆವು. ಕಳೆದ ಮೂರು ತಿಂಗಳಲ್ಲಿ, ನಾವು ೩೧,೦೦೦ ಕೋಟಿ ರೂಪಾಯಿಗಳನ್ನು ೨೦ ಕೋಟಿ ಬಡ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದೇವೆ. ಅಲ್ಲದೆ, ಕೋಟಿಗೂ ಹೆಚ್ಚು ರೈತರ ಬ್ಯಾಂಕು ಖಾತೆಗಳಿಗೆ ೧೮,೦೦೦ ಕೋಟಿ ರೂಪಾಯಿಗಳನ್ನು ಜಮಾ ಮಾಡಿದ್ದೇವೆಎಂದು ಪ್ರಧಾನಿ ನುಡಿದರು. ಮಾರ್ಚ್ ತಿಂಗಳಲ್ಲಿ ಸಾಂಕ್ರಾಮಿಕ ಆರಂಭವಾದಂದಿನಿಂದ ದೇಶವನ್ನು ಉದ್ದೇಶಿಸಿ ಮಾಡಿದ ತಮ್ಮ ಆರನೇ ಭಾಷಣದಲ್ಲಿ ಪ್ರಧಾನಿ ಮೋದಿ ಸಂಪೂರ್ಣವಾಗಿ ಕೊರೋನಾವೈರಸ್ ವಿರುದ್ಧದ ಹೋರಾಟ ಮತ್ತು ಕೊರೋನಾ ಬಿಕ್ಕಟ್ಟಿನ ಪರಿಣಾಮವನ್ನು ಕನಿಷ್ಠಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳ ಮೇಲೆ ಬೆಳಕು ಚೆಲ್ಲಿದರು. ಬೇಗನೇ ದಿಗ್ಬಂಧನ ಜಾರಿಗೊಳಿಸಲು ಸರ್ಕಾರ ಕೈಗೊಂಡ ನಿರ್ಧಾರದ ಪರಿಣಾಮವಾಗಿ ಜಗತ್ತಿನ ಕೊರೋನಾ ಸಾವಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಕಲ್ಯಾಣ ಯೋಜನೆಗಳ ಯಶಸ್ವಿಗಾಗಿ ಪ್ರಧಾನಿಯವರು ರೈತರು ಮತ್ತು ಪ್ರಾಮಾಣಿಕ ತೆರಿಗೆದಾತರು ನೀಡಿದ  ಕೊಡುಗೆಯನ್ನು ಶ್ಲಾಘಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ/ ಬೀಜಿಂಗ್: ತನ್ ೫೯ ಆಪ್ಗಳನ್ನು ಭಾರತ ನಿಷೇಧಿದ್ದಕ್ಕೆ ಪ್ರತಿಯಾಗಿ, ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ತಡೆ ಹಿಡಿಯುವ ಮೂಲಕ ತನ್ನ ದೇಶದಲ್ಲಿ ಭಾರತದ ವೆಬ್ಸೈಟ್ಗಳನ್ನೇ ನೋಡಲು ಸಾಧ್ಯವಾಗದಂತೆ ಮಾಡುವ ಮೂಲಕ ಸೇಡು ತೀರಿಸಿಕೊಂಡಿತು. ಭಾರತವು ೫೯ ಆಪ್ಗಳ ಮೇಲೆ ನಿಷೇಧ ಹೇರಿದ ಬೆನ್ನಲ್ಲೇ ಚೀನಾ ಕ್ರಮ ಕೈಗೊಂಡಿದೆ ಎಂದು 2020 ಜೂನ್ 30ರ ಮಂಗಳವಾರ ವರದಿ ಬಂದಿತು.  ಭಾರತದ ಟಿವಿ ಚಾನೆಲ್ಲುಗಳನ್ನು ಈಗಿನಂತೆಯೇ ಐಪಿ ಟಿವಿ ಮೂಲಕ ನೋಡಬಹುದಾಗಿದ್ದರೂ, ಕಳೆದೆರಡು ದಿನಗಳಿಂದ ಐಫೋನ್ ಮತ್ತು ಡೆಸ್ಕ್ ಟಾಪ್ಗಳಲ್ಲಿ ಎಕ್ಸ್ ಪ್ರೆಸ್ ವಿಪಿಎನ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೀಜಿಂಗಿನಲ್ಲಿರುವ ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿತು. ಸೆನ್ಸಾರ್ಶಿಪ್ ಮೀರಿ ನಿರ್ದಿಷ್ಟ ವೆಬ್ಸೈಟುಗಳಿಗೆ  ಭೇಟಿ ನೀಡಲು ಅನುವು ಮಾಡಿಕೊಡುವ ವಿಪಿಎನ್ಗಳನ್ನೇ ತಡೆ ಹಿಡಿಯಬಲ್ಲ ಅತ್ಯಾಧುನಿಕ ಫೈರ್ವಾಲ್ನ್ನು ಚೀನಾ ಸೃಷ್ಟಿಸಿದೆ ಎಂದು ಹೇಳಲಾಗುತ್ತಿದೆ. ಆನ್ಲೈನ್ ಸೆನ್ಸಾರ್ ಶಿಪ್ ವಿಷಯಕ್ಕೆ ಸಂಬಂಧಿಸಿದಂತೆ ಚೀನಾ ಕುಖ್ಯಾತಿ ಪಡೆದಿದೆ. ಕ್ಸಿ ಜಿನ್ಪಿಂಗ್ ಸರ್ಕಾರವು ಇದನ್ನು ಹೈಟೆಕ್ ವಿಧಾನಗಳೊಂದಿಗೆ ಜಾರಿಗೊಳಿಸುತ್ತಿದೆ. ಉದಾಹರಣೆಯನ್ನು ಕೊಡಬೇಕು ಎಂದರೆ ಸಿಎನ್ ಎನ್ ಅಥವಾ ಬಿಬಿಸಿಯಲ್ಲಿ ಹಾಂಕಾಂಗ್ ಪ್ರತಿಭಟನೆಯ ವಿಷಾರ ಪ್ರಸ್ತಾಪವಾಯಿತು ಎಂದಾದರೆ, ತತ್ಕ್ಷಣವೇ  ವೆಬ್ ಸೈಟುಗಳ ಪರದೆ ಚೀನಾದಲ್ಲಿ ಖಾಲಿಯಾಗಿ ಕಾಣಿಸುತ್ತದೆ. ನಿರ್ದಿಷ್ಟ ವಿಷಯ ಮರೆಯಾದ ಬಳಿಕವಷ್ಟೇ ವೆಬ್ ಸೈಟ್ ಪರದೆ ಕಾಣಿಸಿಕೊಳ್ಳುತ್ತದೆ ಎಂದು ವರದಿ ತಿಳಿಸಿತು. ಚೀನಾದ ಟಿಕ್ ಟಾಕ್, ಶೇರ್ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್ ಮತ್ತು ವಿಚಾಟ್ ಸೇರಿದಂತೆ ೫೯ ಮೊಬೈಲ್ ಆಪ್ಗಳನ್ನು ನಿಷೇಧಿಸಿ ಭಾರತ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ಬೀಜಿಂಗ್: ಚೀನಾ ಸರ್ಕಾರವು ರಾಷ್ಟ್ರದ ಮುಸ್ಲಿಮ್ ಜನಸಂಖ್ಯೆಯನ್ನು ನಿಗ್ರಹಿಸುವ ಸಲುವಾಗಿ ಉಯಿಘರ್ ಮತ್ತಿತರ ಅಲ್ಪಸಂಖ್ಯಾತರಲ್ಲಿ ಜನನ ಪ್ರಮಾಣ ಕಡಿತಗೊಳಿಲು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಹ್ಯಾನ್ ಮತ್ತಿತರ ಜನಾಂಗ ವೃದ್ಧಿಗಾಗಿ ಸಂತಾನ ಹೆಚ್ಚಸಲು ಪ್ರೋತ್ಸಾಹ ನೀಡುತ್ತದೆ ಎಂಬ ಮಾಹಿತಿ ಬಹಿರಂಗಕ್ಕೆ ಬಂದಿದೆ. ಬಲವಂತದ ಜನನ ನಿಯಂತ್ರಣದ ಬಗ್ಗೆ ವೈಯಕ್ತಿಕ ಉಯಿಘರ್ ಮಹಿಳೆಯರು ಮೊತ್ತ ಮೊದಲ ಬಾರಿಗೆ ಮಾತನಾಡಿದ್ದು, ಜನಾಂಗ ದಮನದ ಅಭ್ಯಾಸವು ಹಿಂದೆ ತಿಳಿದಿರುವುದಕ್ಕಿಂತ ಹೆಚ್ಚು ವ್ಯಾಪಕವಾಗಿದೆ ಮತ್ತು ವ್ಯವಸ್ಥಿತವಾಗಿದೆ ಎಂಬುದು ಸರ್ಕಾರದ ಅಂಕಿಅಂಶಗಳು, ರಾಜ್ಯ ದಾಖಲೆಗಳು ಮತ್ತು ೩೦ ಮಾಜಿ ಬಂಧಿತರು, ಅವರ ಕುಟುಂಬ ಸದಸ್ಯರು ಮತ್ತು ಮಾಜಿ ಬಂಧಿತರ ಸಂದರ್ಶನದಿಂದ ಬೆಳಕಿಗೆ ಬಂದಿದೆ.  ಕ್ಸಿನ್ಜಿಯಾಂಗ್ ದೂರದ ಪಶ್ಚಿಮ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆದ ಮುಸ್ಲಿಮ್ ಜನಸಂಖ್ಯಾ ನಿಯಂತ್ರಣ ಅಭಿಯಾವನ್ನು ಕೆಲವು ತಜ್ಞರುಜನಾಂಗೀಯ ನರಮೇಧಎಂದು ಬಣ್ಣಿಸಿದ್ದಾರೆ. ಸರ್ಕಾರವು ನಿಯಮಿತವಾಗಿ ಅಲ್ಪಸಂಖ್ಯಾತ ಮಹಿಳೆಯರನ್ನು ಗರ್ಭಧಾರಣೆಯ ತಪಾಸಣೆಗೆ ಒಳಪಡಿಸುತ್ತದೆ ಮತ್ತು ಗರ್ಭಾಶಯದ ಸಾಧನಗಳು, ಕ್ರಿಮಿನಾಶಕ ಬಳಕೆಯ ಮೂಲಕ ನೂರಾರು ಸಾವಿರ ಗರ್ಭಪಾತಕ್ಕೆ ಒತ್ತಾಯಿಸುತ್ತದೆ ಎಂಬುದನ್ನು ಸಂದರ್ಶನಗಳು ಮತ್ತು ಅಂಕಿಸಂಖ್ಯೆಗಳು ತೋರಿಸಿವೆ.  ಐಯುಡಿಗಳ ಬಳಕೆ ಮತ್ತು ಕ್ರಿಮಿನಾಶಕವು ರಾಷ್ಟ್ರವ್ಯಾಪಿ ಕುಸಿದಿದ್ದರೂ, ಕ್ಸಿನ್ಜಿಯಾಂಗ್ನಲ್ಲಿ ಇದು ತೀವ್ರವಾಗಿ ಏರುತ್ತಿದೆ ಎಂದು ವರದಿ ಹೇಳಿದೆ. ನಿಯಮಗಳ ಪಾಲನೆ ವೈಫಲ್ಯಕ್ಕಾಗಿ ಬಂಧನ ಶಿಬಿರಗಳಲ್ಲಿ ಸಾಮೂಹಿಕ ಬಂಧನಕ್ಕೆ ಗುರಿಪಡಿಸುವ ಮೂಲಕ  ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ.   ಹೆಚ್ಚಿನ ಮಕ್ಕಳನ್ನು ಹೊಂದಿರುವುದು ಜನರನ್ನು ಬಂಧನ ಶಿಬಿರಗಳಿಗೆ ಕಳುಹಿಸಲು ಒಂದು ಪ್ರಮುಖ ಕಾರಣವಾಗಿದೆ ಎಂಬುದು ಸುದ್ದಿ ಸಂಸ್ಥೆಯೊಂದರ ತನಿಖಾ ವರದಿಯಿಂದ ಬಯಲಿಗೆ ಬಂದಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳು ಇರುವ ಪೋಷಕರನ್ನು ಅವರು ಭಾರೀ ಮೊತ್ತದ ದಂಡ ಪಾವತಿಸದೇ ಇದ್ದಲ್ಲಿ ಬಂಧನ ಶಿಬಿರಕ್ಕೆ ಅಟ್ಟಲಾಗುತ್ತದೆ. ಅಡಗಿದ ಮಕ್ಕಳನ್ನು ಹುಡುಕುವ ಸಲುವಾಗಿ ಮನೆಗಳ ಮೇಲೆ ದಾಳಿ ನಡೆಸುವ ಪೊಲೀಸರು ಮನೆಗಳ ಹೆತ್ತವರನ್ನು ಬೆದರಿಸುತ್ತಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಒಂದೇ ದಿನದಲ್ಲಿ ೧೮,೫೨೨ ಜನರಿಗೆ ಕೊರೋನವೈರಸ್ ಸೋಂಕು ದೃಢಪಡುವುದರೊಂದಿಗೆ ಭಾರತದ ಕೋವಿಡ್-೧೯ ಸೊಂಕು ಪ್ರಕರಣಗಳ ಸಂಖ್ಯೆ 2020 ಜೂನ್ 30ರ ಮಂಗಳವಾರ ,೬೬,೮೪೦ಕ್ಕೆ ಏರಿತು. ಇದೇ ವೇಳೆಗೆ ಸಾವಿನ ಸಂಖ್ಯೆ ೧೬೮೮೩ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ.  ಕಳೆದ ೨೪ ಗಂಟೆಗಳಲ್ಲಿ ಸುಮಾರು ,೦೦೦ ಪ್ರಕರಣಗಳನ್ನು ದಾಖಲಿಸಿದ ತಮಿಳುನಾಡು ಸಾಂಕ್ರಾಮಿಕ ರೋU ಅತಿಬಾಧಿತ ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಮರಳಿ ಪಡೆಯುವ ಮೂಲಕ ದೆಹಲಿಯನ್ನು ಹಿಂದಕ್ಕೆ ಹಾಕಿತು. ಕರ್ನಾಟಕವು ಹರಿಯಾಣ ಮತ್ತು ಆಂಧ್ರಪ್ರದೇಶವನ್ನು ಹಿಂದಿಕ್ಕಿ ,೧೦೦ ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿತು. ,೨೦೦ ಕ್ಕೂ ಹೆಚ್ಚು ಕೊರೋನವೈರಸ್ ಸೋಂಕುಗಳನ್ನು ದಾಖಲಿಸಿದ ಮಹಾರಾಷ್ಟ್ರವು ಏಕದಿನದ ಏರಿಕೆಗೆ ಹೆಚ್ಚಿನ ಕೊಡುಗೆ ನೀಡಿದೆ. ದೆಹಲಿಯಲ್ಲಿ ,೦೮೪ ಹೊಸ ಪ್ರಕರಣಗಳು ದಾಖಲಾದವು.  ಒಟ್ಟು ಸೋಂಕಿತರ ಪೈಕಿ ,೩೪,೮೨೧ ಜನರು ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ,೧೫,೧೨೫ ಆಗಿದೆ ಎಂದು ಬೆಳಿಗ್ಗೆ ಗಂಟೆಗೆ ನವೀಕರಿಸಿದ ಮಾಹಿತಿಯ ತಿಳಿಸಿದೆ. "ಹೀಗಾಗಿ, ಇದುವರೆಗೆ ಸುಮಾರು ೫೯.೦೭ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಕೊರೋನವೈರಸ್ ಸೋಂಕು ಸತತ ಏಳನೇ ದಿನ ೧೫,೦೦೦ ಕ್ಕಿಂತ ಹೆಚ್ಚಾಗಿದೆ. ದೇಶವು ಜೂನ್ ರಿಂದ ಇಲ್ಲಿಯವರೆಗೆ ,೭೬,೩೦೫ ಸೋಂಕುಗಳ ಉಲ್ಬಣವನ್ನು ಕಂಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಕಠ್ಮಂಡು: ಹೆಚ್ಚುತ್ತಿರುವ ತಮ್ಮ ಸಮಸ್ಯೆಗಳಿಗೆ ಕಳೆದ ವಾರ ಭಾರತವನ್ನು ದೂಷಿಸಿದ ನೇಪಾಳದ ಪ್ರಧಾನಿ ಕೆಪಿ ಶರ್ಮ ಒಲಿ ಅವರಿಗೆ ಭಾರತ ವಿರೋಧಿ ನಿಲುವು ತಿರುಗುಬಾಣವಾಗಿ ಪರಿಣಮಿಸಿದೆ.  2020 ಜೂನ್ 30ರ ಮಂಗಳವಾರ ನಡೆದ ಆಡಳಿತಾರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದ ಉನ್ನತ ಸಭೆಯಲ್ಲಿ ಭಾರತ ವಿರೋಧಿ ನಿಲುವಿಗಾಗಿ ತೀವ್ರ ಟೀಕೆಗೆ ಗುರಿಯಾದ ಒಲಿ, ಪಕ್ಷದ ನಾಯಕರಿಂದಲೇ ಪದತ್ಯಾಗದ ಒತ್ತಡಕ್ಕೆ ಒಳಗಾದರು.  ಪಕ್ಷದ ಸಭೆಯಲ್ಲಿ ಉನ್ನತ ನಾಯಕರು ಭಾರತ ವಿರೋಧಿ ನಿಲುವಿಗಾಗಿ ಒಲಿ ಅವರನ್ನು ತರಾಟೆಗೆ ತೆಗೆದುಕೊಂಡದ್ದಷ್ಟೇ ಅಲ್ಲ, ತತ್ ಕ್ಷಣ ಪ್ರಧಾನಿ ಪದದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು ಎಂದು ಸುದ್ದಿ ಸಂಸ್ಥೆ ವರದಿಯೊಂದು ತಿಳಿಸಿತು. ಒಲಿ ಅವರು ಕಳೆದ ವಾರ ಭಾರತವು ತಮ್ಮ ಪದಚ್ಯುತಿಗಾಗಿ ಯತ್ನಿಸುತ್ತಿದೆ ಎಂದು ಆಪಾದಿಸಿದ್ದರು. ಪಕ್ಷದ ಸಹ ಅಧ್ಯಕ್ಷರೂ ಆದ ಪುಷ್ಪ ಕಮಲ್ ದಹಲ್ ನೇತೃತ್ವದ ಪ್ರತಿಸ್ಪರ್ಧಿ ಬಣವನ್ನು ಭಾರತ ತಮ್ಮ ವಿರುದ್ಧ ಎತ್ತಿ ಕಟ್ಟುತ್ತಿದೆ ಎಂದು ಒಲಿ ಭಾನುವಾರ ಸಮಾರಂಭ ಒಂದರಲ್ಲಿ ದೂರಿದ್ದರು.  ತಾವು ಪ್ರಕಟಿಸಿರುವ ನೂತನ ರಾಜಕೀಯ ನಕ್ಷೆಯು ನೇಪಾಳದ ದೈತ್ಯ ನೆರೆಯ ದೇಶವನ್ನು ಭ್ರಮನಿರಸನಗೊಳಿಸಿದೆ ಎಂಬ ಕಾರಣಕ್ಕಾಗಿ ತಮ್ಮ ಪ್ರತಿಸ್ಪರ್ಧಿಗಳು ತಮ್ಮ ಕಾಲಕೆಳಗಿನ ಚಾಪೆ ಎಳೆಯಲು ಯತ್ನಿಸುತ್ತಿದ್ದಾರೆ ಎಂದೂ ಒಲಿ ಆಪಾದಿಸಿದ್ದರು. ಆದರೆ ಅವರ ಯತ್ನ ಮಂಗಳವಾರ ಅವರಿಗೇ ತಿರುಗುಬಾಣವಾಯಿತು. ಮಂಗಳವಾರ ನಡೆದ ಪಕ್ಷದ ೪೪ ಸದಸ್ಯ ಸ್ಥಾಯೀ ಸಮಿತಿಯಲ್ಲಿ, ಪುಷ್ಪ ಕಮಲ್ ದಹಲ್, ಮಾಧವ ನೇಪಾಳ, ಝಲಾ ನಾಥ್ ಖನಲ್ ಮತ್ತು ಬಾಮದೇವ ಗೌತಮ್ ಮತ್ತಿತರ ನಾಯಕರು ಒಲಿ ವಿರುದ್ಧ ಮುಗಿಬಿದ್ದು, ಅವರ ಪದತ್ಯಾಗಕ್ಕೆ ಆಗ್ರಹಿಸಿದರು ಎಂದು ವರದಿ ಹೇಳಿದೆ.  ಒಲಿ ಸರ್ಕಾರವು ಮೂಲಭೂತ ಆಡಳಿತದ ವಿಷಯಗಳಲ್ಲಿ ವಿಫಲವಾಗಿದೆ ಮತ್ತು ಗಮನ ಬೇರೆಡೆ ಸೆಳೆಯಲು ವಿನಾಕಾರಣ ಭಾರತವನ್ನು ದೂರುತ್ತಿದೆ ಎಂದು ನಾಯಕರು ವಾದಿಸಿದರು ಎಂದು ಹಿಮಾಲಯನ್ ಟೈಮ್ಸ್  ಪತ್ರಿಕೆಯ ವೆಬ್ ಸೈಟ್ ವರದಿ ತಿಳಿಸಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜೂನ್  30  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

Monday, June 29, 2020

ಇಂದಿನ ಇತಿಹಾಸ History Today ಜೂನ್ 29

ಇಂದಿನ ಇತಿಹಾಸ  History Today ಜೂನ್  29  

2020: ನವದೆಹಲಿ: ಆರು ರಫೇಲ್ ಯುದ್ಧ ವಿಮಾಣಗಳ ಮೊದಲ ಕಂತು ಜುಲೈ ೨೭ರ ಒಳಗಾಗಿ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಇವುಗಳು ಭಾರತೀಯ ವಾಯುಪಡೆಗಳ ಸಮರ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿವೆ. ರಫೇಲ್ ವಿಮಾನಗಳ ಮೊದಲ ಕಂತನ್ನು ಅಂಬಾಲ ವಾಯುನೆಲೆಯಲ್ಲಿ ನಿಲ್ಲಿಸಲಾಗುವುದು ಎಂದು  2020 ಜೂನ್ 29ರ ಸೋಮವಾರ ಸುದ್ದಿ ಮೂಲಗಳು ತಿಳಿಸಿದವು. ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದ ಬಳಿಕ ಚೀನಾದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಭಾರತೀಯ ವಾಯುಪಡೆ ತೀವ್ರ ಎಚ್ಚರಿಕೆ ವಹಿಸಿದೆ. ಘರ್ಷಣೆಯಲಿ ೨೦ ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಉಭಯ ಸೇನೆಗಳೂ ಏಳು ವಾರಗಳಿಂದ ತೀವ್ರ ಗಡಿ ಬಿಕ್ಕಟ್ಟು  ಎದುರಿಸುತ್ತಿವೆ. ಜೂನ್ ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಸಂದರ್ಭದಲ್ಲಿ ಫ್ರಾನ್ಸ್ ಕೊರೋನವೈರಸ್ ಸಾಂಕ್ರಾಮಿಕದ ಹೊರತಾಗಿಯೂ ರಫೇಲ್ ಜೆಟ್ಗಳನ್ನು ಭಾರತಕ್ಕೆ ತಲುಪಿಸಲಾಗುವುದು ಎಂದು ಫ್ಲಾರೆನ್ಸ್ ತಿಳಿಸಿದರು. ರಫೇಲ್ ಜೆಟ್ಗಳ ಆಗಮನದಿಂದ ಭಾರತೀಯ ವಾಯುಪಡೆಯ ಒಟ್ಟಾರೆ ಸಮರ ಸಾಮರ್ಥ್ಯ ಗಮನಾರ್ಹವಾಗಿ ಹೆಚ್ಚುತ್ತದೆ ಮತ್ತು ಭಾರತದ "ವಿರೋಧಿಗಳಿಗೆ" ಸ್ಪಷ್ಟ ಸಂದೇಶದ ರವಾನೆಯಾಗುತ್ತದೆ ಎಂದು ಹೆಸರು  ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೀಜಿಂಗ್: ನವದೆಹಲಿಯಿಂದ ಗುವಾಂಗ್ಝೊವು ನಗರಕ್ಕೆ 2020 ಜೂನ್ 29ರ ಸೋಮವಾರ ಮುಂಜಾನೆ ಹೊರಟ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ರಾಜತಾಂತ್ರಿಕರ ಕುಟುಂಬಗಳು ಸೇರಿದಂತೆ ಹಲವಾರು ಭಾರತೀಯರಿಗೆ ಪಯಣಿಸಲು ಚೀನಾ ಅನುಮತಿ ನಿರಾಕರಿಸಿತು. ಶಾಂಘೈನಿಂದ ಹೊರತು ಜೂನ್ ೨೧ ರಂದು ಬಂದಿಳಿದ ವಿಶೇಷ ವಿಮಾನದಲ್ಲಿ ಇಬ್ಬರು ಭಾರತೀಯರಿಗೆ ಕೊರೋನಾ ಸೋಂಕು ತಟ್ಟಿತ್ತು ಎಂಬ ಕಾರಣಕ್ಕಾಗಿ ಚೀನಾ ಕ್ರಮ ಕೈಗೊಂಡಿತು.  ಇಬ್ಬರು ಭಾರತೀಯರಿಗೆ ಕೋವಿಡ್-೧೯ ಸೋಂಕು ತಗುಲಿದ್ದು ಖಚಿತವಾದ ಬಳಿಕ, ಚೀನೀ ಅಧಿಕಾರಿಗಳು ಭಾರತದಿಂದ ಖಾಲಿ ವಿಮಾನ ಹಾರಾಟಕ್ಕೆ ಮಾತ್ರ ಅನುಮತಿ ನೀಡಿದರು, ಮತ್ತು ದಕ್ಷಿಣದ ಗುವಾಂಗ್ ಝೊವು ನಗರದಲ್ಲಿ ಇಳಿಯಬೇಕಿದ್ದ ಭಾರತೀಯರನ್ನು ವಾಪಾಸು ಕಳುಹಿಸಿದರು. ವಿದೇಶದಲ್ಲಿ ಸಿಲುಕಿರುವ ದೇಶದ ನಾಗರಿಕರ ವಾಪಸಾತಿ ಯೋಜನೆಯಾದ ವಂದೇ ಭಾರತ್ ಮಿಷನ್ ಮೂರನೇ ಹಂತದ ಅಡಿಯಲ್ಲಿ ಭಾರತದಿಂದ ವಿಶೇಷ ವಿಮಾನವು ಇಂದು ಮಧ್ಯಾಹ್ನ ೮೬ ಭಾರತೀಯರೊಂದಿಗೆ ಗುವಾಂಗ್ ಝೊವುಗೆ ಹೊರಟಿತ್ತು. ೧೮೬ ಮಂದಿ ಹಿಂದಿರುಗಿದ ಜೂನ್ ೨೧ರ ವಿಮಾನವು ಶಾಂಘೈ ವಾಪಸಾತಿ ಕಾರ್ಯಾಚರಣೆಯ ಭಾಗವಾಗಿತ್ತು.  ವಿಶೇಷ ವಿಮಾನಯಾನಗಳಲ್ಲಿ ಮತ್ತು ರಾಜತಾಂತ್ರಿಕ ಪಾಸ್ಪೋರ್ಟ್ಗಳಲ್ಲಿ ಸಹ ಭಾರತೀಯರಿಗೆ ಅನುಮತಿ ನೀಡದೇ ಇರುವ ಚೀನಾದ ನಿರ್ಧಾರವು, ಉಭಯ ದೇಶಗಳ ನಡುವಿನ ವಾಣಿಜ್ಯ ವಿಮಾನಗಳು ಶೀಘ್ರದಲ್ಲೇ ಪುನಾರಂಭಗೊಳ್ಳುವ ಸಾಧ್ಯತೆಯಿಲ್ಲ ಎಂಬುದರ ಸೂಚನೆಯಾಗಿದೆ. ಭಾರತೀಯ ರಾಜತಾಂತ್ರಿಕರ ಕುಟುಂಬಗಳಿಗೆ ವಿಮಾನವನ್ನು ಚೀನಾಕ್ಕೆ ಕರೆದೊಯ್ಯಲು ಅನುಮತಿ ನೀಡದೇ ಇರುವ ನಿರ್ಧಾರದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಪತ್ರಿಕಾಸಂಸ್ಥೆಯೊಂದು ಚೀನಾದ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿತ್ತು. ಹಾಲಿ ಗಡಿ ಉದ್ವಿಗ್ನತೆಗೂ ನಿರ್ದಾರಕ್ಕೂ ಸಂಬಂಧವಿದೆಯೇ ಎಂದು ಪತ್ರಿಕಾ ಸಂಸ್ಥೆಯು ಪ್ರಶ್ನಿಸಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ/ ಮುಂಬೈ: ದೇಶದಲ್ಲಿ ೧೬,೪೭೫ ಏಕದಿನ ಸಾವುನೋವುಗಳೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ 2020 ಜೂನ್ 29ರ ಸೋಮವಾರ ,೪೮,೩೧೮ಕ್ಕೆ ಏರಿತು. ಸೋಮವಾರ ಒಂದೇ ದಿನದಲ್ಲಿ ೩೮೦ ಹೊಸ ಸಾವುಗಳು ವರದಿಯಾಗಿದ್ದು, ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ಅನುಸರಿಸಿ ಮಹಾರಾಷ್ಟ್ರ ಸರ್ಕಾರವು ದಿಗ್ಬಂಧನವನ್ನು (ಲಾಕ್ ಡೌನ್) ಜುಲೈ ೩೧ರವರೆಗೆ ವಿಸ್ತರಿಸಿತು. ಕೊರೋನವೈರಸ್ ಸೋಂಕು ದೇಶದಲ್ಲಿ ಸತತ ಆರನೇ ದಿನ ೧೫,೦೦೦ಕ್ಕಿಂತ ಹೆಚ್ಚಾಗಿದೆ. ದೇಶವು ಜೂನ್ ರಿಂದ ಇಲ್ಲಿಯವರೆಗೆ ,೫೭,೭೮೩ ಸೋಂಕುಗಳ ಉಲ್ಬಣವನ್ನು ಕಂಡಿದೆ. ದೇಶದಲ್ಲಿ ಈವರೆಗೆ ಒಟ್ಟು ,೪೮,೩೧೮ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಮೃತರ ಸಂಖ್ಯೆಯು ೧೬,೪೭೫ಕ್ಕೆ ಏರಿಕೆಯಾಯಿತು. ದಿನದಿಂದ ದಿನಕ್ಕೆ ಕೋವಿಡ್-೧೯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ದೇಶದಾದ್ಯಂತ ಕಳೆದ ೨೪ ಗಂಟೆಗಳಲ್ಲಿ ೧೯,೪೫೯ ಹೊಸ ಕೋವಿಡ್ -೧೯ ಪ್ರಕರಣಗಳು ದೃಢಪಟ್ಟಿದ್ದು, ೩೮೦ ಜನರು ಮೃತರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿತು. ಸದ್ಯ ,೧೦,೧೨೦ ಪ್ರಕರಣಗಳು ಸಕ್ರಿಯವಾಗಿದ್ದು, ,೨೧,೭೨೩ ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. "ಹೀಗಾಗಿ, ಇದುವರೆಗೆ ಸುಮಾರು ೫೮.೬೭ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಕೋರ್ ಕಮಾಂಡರ್ಗಳ ನೇತೃತ್ವದಲ್ಲಿ ಭಾರತ ಮತ್ತು ಚೀನೀ ಸೇನಾ ನಿಯೋಗಗಳು ನೈಜ ನಿಯಂತ್ರಣ ರೇಖೆಯ (ಎಲ್ ಎಸಿ) ಉಭಯ ಕಡೆಗಳಲ್ಲೂ ಉದ್ವಿಗ್ನತೆ ಶಮನ ಮತ್ತು ಸೇನಾ ಬಲ ಇಳಿಕೆಯ ಸಲುವಾಗಿ  2020 ಜೂನ್ 30ರ ಮಂಗಳವಾರ ಲಡಾಖ್ ಚುಶುಲ್ನಲ್ಲಿ ಮಾತುಕತೆ ನಡೆಸಲಿವೆ ಎಂದು ಸುದ್ದಿ ಮೂಲಗಳು 2020 ಜೂನ್ 29ರ ಸೋಮವಾರ ತಿಳಿಸಿದವು. ಹಿರಿಯ ಸೇನಾ ಅಧಿಕಾರಿಗಳ ನೇತೃತ್ವದ ನಿಯೋಗಗಳು ಮೇ ಆದಿಯಲ್ಲಿ ಉಭಯ ಪರಮಾಣು ಸಜ್ಜಿತ ರಾಷ್ಟ್ರಗಳ ಮಧ್ಯೆ ಗಡಿ ಬಿಕ್ಕಟ್ಟು ಉದ್ಭವಿಸಿದ ಬಳಿಕ ಮೂರನೇ ಸುತ್ತಿನ ಮಾತುಕತೆ ನಡೆಸಲಿವೆ. ಭಾರತದ ೨೦ ಮಂದಿ ಯೋಧರು ಹುತಾತ್ಮರಾದ ಹಿಂಸಾತ್ಮಕ ಗಲ್ವಾನ್ ಕಣಿವೆ ಘರ್ಷಣೆ ನಡೆದ ಸರಿಯಾಗಿ ಒಂದು ವಾರದ ಬಳಿಕ ಜೂನ್ ೨೨ರಂದು ಸೇನಾ ಅಧಿಕಾರಿಗಳ ಮಟ್ಟದ ಹಿಂದಿನ ಸಭೆ ನಡೆದಿತ್ತು. ಲೆಹ್ ಮೂಲದ ೧೪ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಮತ್ತು ದಕ್ಷಿಣ ಕ್ಷಿನ್ಜಿಯಾಂಗ್ ಸೇನಾ ಪ್ರದೇಶದ ಪಿಎಲ್ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ನೇತೃತ್ವದ ನಿಯೋಗ ಮಟ್ಟದ ಮಾತುಕತೆಗಳಲ್ಲಿ ಎಲ್ಎಸಿಯಾದ್ಯಂತ ಘರ್ಷಣಾ ಸ್ಥಳಗಳಿಂದ ಸೇನೆ ವಾಪಸ್ ಮಾಡುವ ಬಗ್ಗೆ ಸಹಮತಕ್ಕೆ ಬರಲಾಗಿತ್ತು. ಆದಾಗ್ಯೂ, ಚೀನಾವು ಗಲ್ವಾನ್ ಕಣಿವೆ, ಡೆಸ್ಪಾಂಗ್ ಬಯಲು ಪ್ರದೇಶ ಮತ್ತು ಪ್ಯಾಂಗೊಂಗ್ ತ್ಸೊ ಸಮೀಪದ ಫಿಂಗರ್ ಪ್ರದೇಶದಲ್ಲಿ ತನ್ನ ಸೇನಾ ಚಟುವಟಿಕೆಯನ್ನು ಸ್ಥಗಿತಗೊಳಿಸಲಿಲ್ಲ. ಉಭಯ ಸೇನೆಗಳ ಹಿರಿಯ ಅಧಿಕಾರಿಗಳು ಮೊತ್ತ ಮೊದಲಿಗೆ ಜೂನ್ ೬ರಂದು ಮಾತುಕತೆ ನಡೆಸಿದ್ದರು. ಚೀನೀ ಪಡೆಗಳು ಹಲವಾರು ಘರ್ಷಣಾ  ಸ್ಥಳಗಳಿಂದ ಹಿಂದಕ್ಕೆ ಹೋಗಬೇಕು ಎಂಬ ಬೇಡಿಕೆಯನ್ನು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಯಥಾಸ್ಥಿತಿ ಪು:ಸ್ಥಾಪನೆಯಾಗಬೇಕು ಎಂಬುದಾಗಿ ಮಂಗಳವಾರದ ಸಭೆಯಲ್ಲಿ ಭಾರತವು ಒತ್ತಿ ಹೇಳುವ ನಿರೀಕ್ಷೆಯಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

 

ಇಂದಿನ ಇತಿಹಾಸ  History Today ಜೂನ್  29  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ