2019: ನವದೆಹಲಿ: ಭಾರತದ ಮೂರೂ ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ (ತ್ರಿಸೇನಾ ಮಹಾದಂಡನಾಯಕ-
ಚೀಫ್ ಆಫ್ ಡಿಫೆನ್ಸ್ ಸ್ಟಾಫ್- ಸಿಡಿಎಸ್) ಹೊರಹೊಗುತ್ತಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ಕೇಂದ್ರ ಸರ್ಕಾರವು 2019 ಡಿಸೆಂಬರ್ 30ರ ಸೋಮವಾರ
ನೇಮಕ ಮಾಡಿತು. ತ್ರಿಸೇನಾ ಪಡೆಗಳ ಮಹಾದಂಡನಾಯಕ ಭೂಸೇನೆ, ವಾಯುಸೇನೆ ಮತ್ತು ಜಲಪಡೆ – ಈ ಮೂರೂ ಸೇವೆಗಳಿಗೆ
ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿಯೂ ರಕ್ಷಣಾ ಸಚಿವರಿಗೆ ಮುಖ್ಯ ಸೇನಾ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ. ‘ಜನರಲ್ ಬಿಪಿನ್
ರಾವತ್ ಅವರನ್ನು 31.12.2019ರಿಂದ ಜಾರಿಯಾಗುವಂತೆ ತ್ರಿಸೇನಾ ಪಡೆಗಳ ಮಹಾದಂಡನಾಯಕರಾಗಿ (ಸಿಡಿಎಸ್)
ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ. ಮುಂದಿನ ಆದೇಶಗಳವರೆಗೆ ಮತ್ತು ಸೇವಾ ವಿಸ್ತರಣೆಯವರೆಗೆ ಅವರು
ಹುದ್ದೆಯಲ್ಲಿ ಮುಂದುವರೆಯುವರು’ ಎಂದು ರಕ್ಷಣಾ ಸಚಿವಾಲಯದ ಆದೇಶ ತಿಳಿಸಿದೆ. ರಾವತ್ ಅವರು 1978ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದರು ಮತ್ತು
ಪ್ರಸ್ತುತ 2017ರ ಜನವರಿ 1ರಿಂದ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ
ಅಧಿಕಾರಾವಧಿ
2019ರ ಡಿಸೆಂಬರ್ 31ಕ್ಕೆ ಮುಕ್ತಾಯವಾಗಲಿತ್ತು
(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಮುಂಬೈ: ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರ್ಕಾರದಲ್ಲಿ ಸಚಿವ ಸಂಪುಟ . ಎನ್ ಸಿಪಿ
ವಿಸ್ತರಣೆಯಾಯಿತು. ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ 2019 ಡಿಸೆಂಬರ್ 30ರ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್, ದಿಲೀಪ್ ವಾಲ್ಸೆ ಪಾಟೀಲ್, ಧನಂಜಯ್ ಮುಂಡೆ, ವಿಜಯ್ ವಡೆತ್ತಿವಾರ್ ಮುಂತಾದವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ- ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಸಚಿವ ಸಂಪುಟಕ್ಕೆ ಈದಿನ ೩೬ ಶಾಸಕರು ಸಚಿವರಾಗಿ ಸೇರ್ಪಡೆಯಾದರು. (೨೬ ಸಂಪುಟ ದರ್ಜೆ ಮತ್ತು ೧೦ ಮಂದಿ ರಾಜ್ಯ ಸಚಿವರು) ನವೆಂಬರ್ ನಲ್ಲಿ ನಡೆದ ಧಿಡೀರ್ ರಾಜಕೀಯ ಬೆಳವಣಿಗೆಯಲ್ಲಿ ಅಜಿತ್ ಪವಾರ್ ಬಿಜೆಪಿ ಜೊತೆ ಕೈಜೋಡಿಸಿ ಉಪಮುಖ್ಯಮಂತ್ರಿಯಾಗಿದ್ದರು. ಆದರೆ ಎನ್ ಸಿಪಿ ಬೆಂಬಲ ದೊರೆಯದ ಹಿನ್ನಲೆ ಆ ಸರ್ಕಾರ ಪತನಗೊಂಡಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಂ.೭, ಲೋಕಕಲ್ಯಾಣ ಮಾರ್ಗ್ ನಿವಾಸದ
ಬಳಿ 2019 ಡಿಸೆಂಬರ್ 30ರ ಸೋಮವಾರ ಸಂಜೆ ಬೆಂಕಿ ದುರಂತ ಅಪಾಯದ ಗಂಟೆ ಮೊಳಗಿದಾಗ ೧೭ ಅಗ್ನಿಶಾಮಕ ವಾಹನಗಳು ಅಲ್ಲಿಗೆ ಧಾವಿಸಿದವು. ಈ ಅಗ್ನಿ ಆಕಸ್ಮಿಕದ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಸಂಜೆ ೭.೨೫ರ ಸುಮಾರಿಗೆ ಈ ಅವಘಡ ಸಂಭವಿಸಿತು. ಏನಿದ್ದರೂ ಇದೊಂದು ಸಣ್ಣ ಅಗ್ನಿ ಪ್ರಮಾದವಾಗಿತ್ತು. ಶಾರ್ಟ್ ಸರ್ಕ್ಯೂಟ್ ಇದಕ್ಕೆ ಕಾರಣ ಎಂದು ಹೇಳಲಾಯಿತು. ಎಸ್ ಪಿಜಿ ಸ್ವಾಗತ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಅಗ್ನಿ ಅನಾಹುತ ಸಂಭವಿಸಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಶ್ರೀನಗರ: ಸಂವಿಧಾನದ ೩೭೦ನೇ ವಿಧಿರದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ
ಪ್ರದೇಶಗಳಾಗಿ ವಿಭಜಿಸಿದ ಕೇಂದ್ರ ಸರ್ಕಾರದ ಆಗಸ್ಟ್ ೫ರ ನಿರ್ಧಾರದ ಬಳಿಕ ಬಂಧಿಸಲಾಗಿದ್ದ ಐವರು ರಾಜಕೀಯ ನಾಯಕರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ೧೪೮ ದಿನಗಳ ಬಳಿಕ 2019 ಡಿಸೆಂಬರ್ 20ರ ಸೋಮವಾರ ಬಿಡುಗಡೆ ಮಾಡಿತು. ನ್ಯಾಷನಲ್ ಕಾನ್ಫರೆನ್ ಮತ್ತು ಪಿಡಿಪಿಗೆ ಸೇರಿದ ಐವರು ನಾಯಕರು ಕಳೆದ ನಾಲ್ಕು ತಿಂಗಳುಗಳಿಂದ ಮುಂಜಾಗರೂಕತಾ ಬಂಧನದ ಅಡಿಯಲ್ಲಿ ಇದ್ದರು. ಬಂಧಿತ ನಾಯಕರಲ್ಲಿ ಇಶ್ಫಾಖ್ ಜಬ್ಬಾರ್ ಮತ್ತು ಗುಲಾಂ ನಬಿ ಭಟ್ (ಎನ್ಸಿ) ಹಾಗೂ ಬಶೀರ್ ಮೀರ್ ಝಹೂರ್ ಮೀರ್ ಮತ್ತು ಯಾಸಿರ್ ರೇಶಿ (ಪಿಡಿಪಿ) ಅವರು ಸೇರಿದ್ದಾರೆ. ರೇಶಿ ಅವರು ಆಗಿನ ಮುಖ್ಯಮಂತ್ರಿ ಪಿಡಿಪಿ ನಾಯಕಿ ಮಹಬೂಬಾ ಮುಫ್ತಿ ಅವರ ವಿರುದ್ಧ ಬಹಿರಂಗ ಬಂಡಾಯ ಎದ್ದಿದ್ದ ಬಂಡುಕೋರ ನಾಯಕ ಎಂದೇ ಪರಿಗಣಿಸಲ್ಪಟ್ಟಿದ್ದರು.ನವೆಂಬರ್ ೨೫ರಂದು ಪಿಡಿಪಿಯ ದಿಲಾವರ್ ಮೀರ್ ಮತ್ತು ಡೆಮಾಕ್ರಟಿಕ್ ಪಾರ್ಟಿ ನ್ಯಾಷನಲಿಸ್ಟ್ ನಾಯಕ ಗುಲಾಂ ಹಸನ್ ಮೀರ್ ಅವರನ್ನು ೧೧೦ ದಿನಗಳ ಬಂಧನದ ಬಳಿಕ ಕೇಂದ್ರಾಡಳಿತ ಪ್ರದೇಶ ಆಡಳಿತವು ಬಿಡುಗಡೆ ಮಾಡಿತ್ತು. ಅವರು ಮಾಜಿ ಶಾಸಕರಾಗಿದ್ದು ಬಾರಾಮುಲ್ಲಾ ಜಿಲ್ಲೆಯ ನಿವಾಸಿಗಳಾಗಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

No comments:
Post a Comment