2019: ಕೋಲ್ಕತ: ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಣ ಘರ್ಷಣೆಯು ಬ್ಯಾನರ್ಜಿ ಅವರು ರಾಜಭವನದಲ್ಲಿ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಅನಾವರಣಗೊಳಿಸಲು ಬಾರದೇ ತಪ್ಪಿಸಿಕೊಳ್ಳುವುದರೊಂದಿಗೆ 2019
ಡಿಸೆಂಬರ್ 26ರ ಬುಧವಾರ ಹೊಸ ತಿರುವು ಪಡೆಯಿತು. ರಾಜ್ಯಪಾಲ ಮತ್ತು ಮುಖ್ಯಮಂತ್ರಿ ನಡುವಿನ ಘರ್ಷಣೆ ಬಹಿರಂಗಕ್ಕೆ ಬಂದ ಹಲವಾರು ಘಟನೆಗಳು ಕಳೆದ ಐದು ತಿಂಗಳಲ್ಲಿ ನಡೆದಿದ್ದವು. ವಿಶ್ವ ವಿದ್ಯಾಲಯಗಳ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸೇರಿದಂತೆ ಹಲವಾರು ವಿಷಯಗಳಲ್ಲಿ ಅವರು ಘರ್ಷಿಸಿದ್ದರು. ಮಮತಾ ಬ್ಯಾನರ್ಜಿ ಮತ್ತು ರಾಜ್ಯದ ಹಿರಿಯ ಆಡಳಿತಗಾರರಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮದ ಬಗ್ಗೆ ನವೆಂಬರ್ ತಿಂಗಳಲ್ಲೇ ತಿಳಿಸಿಲಾಗಿತ್ತು. ಆದರೂ ಮಮತಾ ಬ್ಯಾನರ್ಜಿ ಅವರು ಗೈರುಹಾಜರಾದದ್ದು ತಮಗೆ ನೋವುಂಟು ಮಾಡಿದೆ ಎಂದು ಧನ್ಕರ್ ಹೇಳಿದರು. ‘ಮುಖ್ಯಮಂತ್ರಿಯಾಗಿ ಅವರಿಗೆ (ಬ್ಯಾನರ್ಜಿ) ಹಲವಾರು ಒತ್ತಡಭರಿತ ಕಾರ್ಯಕ್ರಮಗಳು ಇರುತ್ತವೆ ಎಂಬುದನ್ನು ನಾನು ಆರ್ಥ ಮಾಡಿಕೊಳ್ಳಬಲ್ಲೆ. ಆದರೆ ಅವರು ಪ್ರತಿನಿಧಿಯನ್ನು ಕೂಡಾ ಕಳುಹಿಸಿಕೊಡಲಿಲ್ಲ’ ಎಂದು
ರಾಜ್ಯಪಾಲರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಏನಿದ್ದರೂ, ೨೦೦೧ರಿಂದ ೨೦೦೪ರ ಅವಧಿಯಲ್ಲಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಮಮತಾ ಬ್ಯಾನರ್ಜಿ ಅವರು ತಮ್ಮ ದಿನದ ಮೊದಲ ಟ್ವೀಟಿನಲ್ಲಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದ್ದರು. ‘ಅಟಲ್
ಬಿಹಾರಿ ವಾಜಪೇಯಿ ಜಿ ಅವರಿಗೆ ಅವರ
ಜನ್ಮದಿನದ ಸಂದರ್ಭದಲ್ಲಿ ನನ್ನ ಗೌರವಾರ್ಪಣೆಗಳು. ಅವರು ದೇಶದ ಒಳಿತಿಗಾಗಿ ಪಕ್ಷ ರಾಜಕಾರಣದಿಂದ ಮೇಲೆದ್ದು ನಿಂತ ಮುತ್ಸದ್ದಿ. ನಾವು ಅವರನ್ನು ಕಳೆದುಕೊಂಡಿದ್ದೇವೆ’ ಎಂದು
ಬ್ಯಾನರ್ಜಿ ಟ್ವೀಟ್ ಮಾಡಿದ್ದರು. ವಾಜಪೇಯಿ ಅವರು ಬ್ಯಾನರ್ಜಿ ಅವರ ದಕ್ಷಿಣ ಕೋಲ್ಕತಾದ ಕಾಳಿಘಾಟ್ ನಿವಾಸಕ್ಕೆ ಭೇಟಿ ನೀಡಿ ಅವರ ತಾಯಿಯನ್ನು ಭೇಟಿ ಮಾಡಿದ್ದ ದಿನವನ್ನು ಕೂಡಾ ರಾಜ್ಯಪಾಲ ಧನ್ಕರ್ ಅವರು ಉಲ್ಲೇಖಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದಹಲಿ: ಅಂತರ್ಜಲ ರಕ್ಷಣೆ ಹಾಗೂ ಉತ್ತಮ ನಿರ್ವಹಣೆ ಮತ್ತು ೧೫ ಕೋಟಿ ಗ್ರಾಮೀಣ
ಮನೆಗಳಿಗೆ ಕೊಳವೆ ಮೂಲಕ ನೀರು ಒದಗಿಸುವ ಸಲುವಾಗಿ ಸುಮಾರು ೬೦೦೦ ಕೋಟಿ ರೂಪಾಯಿ ವೆಚ್ಚದ ಅಟಲ್ ಭೂಜಲ ಯೋಜನೆಗೆ ಪ್ರಧಾನಿ ನರೇಂದ್ರಮೋದಿ ಅವರು 2019 ಡಿಸೆಂಬರ್
26ರ ಬುಧವಾರ ವಿಧ್ಯುಕ್ತ
ಚಾಲನೆ ನೀಡಿದರು. ಈಗಾಗಲೇ ಕೇಂದ್ರ ಸಂಪುಟವು ರಾಷ್ಟ್ರೀಯ ಅಟಲ್ ಭೂ ಜಲ ಯೋಜನೆಗೆ
ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾಜಿ
ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೯೫ನೇ ಜನ್ಮ ದಿನಾಚರಣೆ ಅಂಗವಾಗಿ ಈ ಯೋಜನೆಗೆ ಪ್ರಧಾನಿ
ಮೋದಿ ಚಾಲನೆ ನೀಡಿದರು. ೨೦೨೦ರಿಂದ ೨೦೨೫ರೊಳಗೆ ಈ ಮಹತ್ವದ ಯೋಜನೆಯನ್ನು
ಅನುಷ್ಠಾನಗೊಳಿಸಲಾಗುವುದು.
ಕರ್ನಾಟಕ, ಗುಜರಾತ್, ಹರಿಯಣ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಪ್ರದೇಶ ಸೇರಿದಂತೆ ಏಳು ರಾಜ್ಯಗಳ ಕೆಲವು ಆದ್ಯತೆಯ ಪ್ರದೇಶಗಳಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ ಎಂದು ಪ್ರಧಾನಿ ಹೇಳಿದರು. ಅಂತರ್ಜಲ ರಕ್ಷಿಸುವ ಈ ಯೋಜನೆಯಿಂದ ಏಳು
ರಾಜ್ಯಗಳ ೭೮ ಜಿಲ್ಲೆಯ ಸುಮಾರು
೮,೩೫೦ ಗ್ರಾಮ ಪಂಚಾಯ್ತಿಗಳಿಗೆ ಲಾಭವಾಗುವ ನಿರೀಕ್ಷೆ ಇದೆ. ಕೃಷಿ
ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ನೀರಿನ ಪೋಲು ತಡೆಯಲು ನಾವು ತಂತ್ರಜ್ಞಾನವನ್ನು ಬಳಸುವ ಅಗತ್ಯವಿದೆ ಎಂದು ಪಧಾನಿ ಹೇಳಿದರು. ವಾಜಪೇಯಿ ಅವರ ೯೫ನೇ ಜನ್ಮದಿನದ ಅಂಗವಾಗಿ ಹಿಮಾಚಲ ಪ್ರದೇಶದ ರೋಹ್ತಂಗ್ ಪ್ಯಾಸೇಜ್ ಮಾರ್ಗಕ್ಕೆ ’ಅಟಲ್ ಸುರಂಗ’ ಎಂಬುದಾಗಿ ಮೋದಿ ಅವರು ನಾಮಕರಣ ಮಾಡಿದರು. ಕಡಿಮೆ ನೀರು ಬಳಕೆ ಮಾಡುವಂತಹ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಆಗ್ರಹಿಸಿದ ಪ್ರಧಾನಿ ದೈನಂದಿನ ಮನೆ ಬಳಕೆಯಲ್ಲಿ ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿರುವ ನೀರನ್ನು ವ್ಯರ್ಥ ಮಾಡಬೇಡಿ ಎಂದು ಜನತೆಗೆ ಸಲಹೆ ಮಾಡಿದರು. . (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ದೇಶದ ವಿತ್ತ ಪರಿಸ್ಥಿತಿ ಕೆಟದಾಗಿದ್ದು ಅದನ್ನು ಸರಿದಾರಿಗೆ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಬಿಜೆಪಿ ಮುಕ್ತ ಭಾರತ ಎಂಬುದು ವಾಸ್ತವ ರೂಪಕ್ಕೆ ಬರುವ ಸಾಧ್ಯತೆಗಳು ಹೆಚ್ಚು ಎಂದು ಪಕ್ಷದ ಹಿರಿಯ ನಾಯಕ ರಾಜ್ಯಸಭಾ ಸದಸ್ಯ, ಡಾ. ಸುಬ್ರಮಣಿಯನ್ ಸ್ವಾಮಿ ಬಿಜೆಪಿ ವರಿಷ್ಠರಿಗೆ 2019 ಡಿಸೆಂಬರ್ 26ರ ಬುಧವಾರ ಕಠಿಣ ಎಚ್ಚರಿಕೆ ನೀಡಿದರು. ದೇಶದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಂತೆ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಸಲಹೆ ನೀಡುತ್ತಿರುವವರ ವಿರುದ್ದ ಡಾ. ಸ್ವಾಮಿ ಕೆಂಡ ಕಾರಿದರು. ‘ಸಲಹೆಗಾರರು ಪ್ರಧಾನಿಯನ್ನು ಕತ್ತಲೆಯಲ್ಲಿ ಇಟ್ಟಿದ್ದಾರೆ. ಆರ್ಥಿಕತೆಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲು ಈಗ ಏನಾದರೂ ಕ್ರಮ ಕೈಗೊಳ್ಳದೇ ಇದ್ದರೆ ಬಿಜೆಪಿ ಮುಕ್ತ ಭಾರತ ವಾಸ್ತವ ರೂಪದಲ್ಲಿ ಎದುರಾಗಲಿದೆ’ ಎಂದು ಸ್ವಾಮಿ ಕಟು ಭವಿಷ್ಯ ನುಡಿದರು. ಪ್ರಧಾನಮಂತ್ರಿಗಳಿಗೆ ಸಲಹೆ ನೀಡುವವರು ಯಾರು? ಎಂಬುದು ತಮಗೆ ಗೊತ್ತಿಲ್ಲ. ಪ್ರಧಾನಿಗೆ ದೇಶದ ಆರ್ಥಿಕ ಸ್ಥಿತಿ ಗತಿಯ ಸತ್ಯವನ್ನು ಮಾತ್ರ ಅವರು ಹೇಳುತ್ತಿಲ್ಲ ಎಂದು ಬಿಜೆಪಿ ನಾಯಕ ಆಪಾದಿಸಿದರು. ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಈ ಎಚ್ಚರಿಕೆ ನೀಡಿದರು. . (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಲಕ್ನೋ: ವ್ಯಾಪಕ ಪ್ರಮಾಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು
ಕಂಡ ಉತ್ತರ ಪ್ರದೇಶದ ನಾಗರಿಕರಿಗೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವುದಕ್ಕೆ ಬದಲಾಗಿ ಅವುಗಳನ್ನು ರಕ್ಷಿಸಿ, ನಿರ್ವಹಿಸಲು ನೆರವಾಗುವಂತೆ 2019 ಡಿಸೆಂಬರ್ 26ರ ಬುಧವಾರ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರಿ ಆಸ್ತಿಗೆ ಹಾನಿ ಮಾಡಿದ್ದು ಸರಿಯೇ ಎಂಬುದಾಗಿ ಆತ್ಮಾವಲೋಕನ ಮಾಡಿಕೊಳ್ಳುವಂತೆ ಹಿಂಸಾಚಾರ ಎಸಗಿದವರನ್ನು ಕೋರಿದರು. ಇದೇ ವೇಳೆಗೆ ಉತ್ತರ ಪ್ರದೇಶ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದಕ್ಕಾಗಿ ೨೮ ಮಂದಿಗೆ ೧೪
ಲಕ್ಷ ರೂಪಾಯಿ ದಂಡ ವಿಧಿಸಿತು ಮತ್ತು ಶಸ್ತ್ರಾಸ್ತ ಪರವಾನಗಿ ಹೊಂದಿದ್ದ ೫೧೭ ಮಂದಿಗೆ ನೋಟಿಸ್ ಜಾರಿ ಮಾಡಿತು. ಲಕ್ನೋದ
ಲೋಕಭವನದಲ್ಲಿ ನಡೆದ ಸಮಾರಂಭ ಒಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜನರಿಗೆ ಸೂಚಿಸಿದರು. ‘ಉತ್ತಮ ರಸ್ತೆಗಳು, ಸವಲತ್ತುಗಳು ಮತ್ತು ಸ್ವಚ್ಛವಾದ ಒಳಚರಂಡಿ ವ್ಯವಸ್ಥೆಯು ನಾಗರಿಕರ ಹಕ್ಕು ಆಗಿದ್ದರೆ, ಅವುಗಳ ಸಮರ್ಪಕ ನಿರ್ವಹಣೆ ಅವರದ್ದೇ ಜವಾಬ್ದಾರಿ ಕೂಡಾ ಎಂಬುದಾಗಿ ಈ ಪ್ರತಿಭಟನಾ ನಿರತರಿಗೆ
ಹೇಳಲು ನಾನು ಬಯಸುತ್ತೇನೆ’ ಎಂದು
ಮೋದಿ ನುಡಿದರು. ‘ಉತ್ತರಪ್ರದೇಶದಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರಗಳಲ್ಲಿ ಶಾಮೀಲಾಗಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಜನರು ತಾವು ಮಾಡಿದ್ದು ಸರಿಯೇ ಎಂಬುದಾಗಿ ಆತ್ಮವಲೋಕನ ಮಾಡಿಕೊಳ್ಳಬೇಕು’ ಎಂದು
ಪ್ರಧಾನಿ ಹೇಳಿದರು. ಪ್ರಧಾನಿ ಮೋದಿಯವರು ಇದಕ್ಕೆ ಮುನ್ನ ಲೋಕಭವನದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು ಮತ್ತು ಉತ್ತರ ಪ್ರದೇಶದ ರಾಜಧಾನಿಯಲ್ಲಿ ವೈದ್ಯಕೀಯ ವಿಶ್ವವಿದ್ಯಾಲಯಕ್ಕಾಗಿ ಶಿಲಾನ್ಯಾಸವನ್ನೂ ನೆರವೇರಿಸಿದರು. ವಿಶ್ವ ವಿದ್ಯಾಲಯಕ್ಕಾಗಿ ರಾಜ್ಯ ಸರ್ಕಾರವು ೫೦ ಎಕರೆ ಭೂಮಿಯನ್ನು
ಮಂಜೂರು ಮಾಡಿದೆ. . (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಕೋಲ್ಕತ: ಜಾಧವಪುರ ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಘಟಿಕೋತ್ಸವ ಪದವಿ
ಸಮಾರಂಭದಲ್ಲಿ ಸ್ವೀಕಾರದ ವೇಳೆಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ ಪ್ರತಿಯನ್ನು ಹರಿದುಹಾಕಿದ ಘಟನೆ 2019 ಡಿಸೆಂಬರ್ 25ರ ಮಂಗಳವಾರ ಘಟಿಸಿತು. ’ವಿವಾದಾತ್ಮಕ ಕಾಯ್ದೆಯ ವಿರುದ್ಧ ಪ್ರತಿಭಟಿಸುವ ನನ್ನ ಮಾರ್ಗ ಇದು’ ಎಂದು ಘೋಷಿಸಿ ಆ ವಿದ್ಯಾರ್ಥಿನಿ ಕಾಯ್ದೆಯನ್ನು ಹರಿದು ಹಾಕಿದ್ದಾಳೆ ಎಂದು ವರದಿ ತಿಳಿಸಿತು. ತನ್ನನ್ನು ದೆಬೊಸ್ಮಿತ ಚೌಧರಿ ಎಂಬುದಾಗಿ ಸ್ವತಃ ಪರಿಚಯ ಮಾಡಿಕೊಂಡ ವಿಶ್ವ ವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿನಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹರಿದು ತನ್ನ ಪ್ರತಿಭಟನೆಯನ್ನು ವ್ಯಕ್ತ ಪಡಿಸಲು ಸಮಾರಂಭ ತಾಣದಲ್ಲಿ ಉಪ ಕುಲಪತಿ, ಪ್ರೊ-ವಿಸಿ ಮತ್ತು ರಿಜಿಸ್ಟ್ರಾರ್ ಅವರು ಕುಳಿತಿದ್ದ ವೇದಿಕೆ ಮುಂದಿನ ಪೋಡಿಯಂನ್ನೇ ಬಳಸಿಕೊಂಡರು. ಪ್ರಾಮಾಣಿಕ ಪೌರರಿಗೆ ತಮ್ಮ ರಾಷ್ಟ್ರೀಯತೆ ಸಾಬೀತು ಪಡಿಸುವಂತೆ ಮಾಡಿರುವ ಕಾರಣಕ್ಕಾಗಿ ತಾನು ಈ ಕೃತ್ಯ ಎಸಗುತ್ತಿರುವುದಾಗಿ ಚೌಧರಿ ಹೇಳಿದರು. ‘ಯಾವುದೇ ಗೊಂದಲ ಮೂಡುವುದು ಬೇಡ. ನಾನು ಜಾಧವಪುರ ವಿಶ್ವವಿದ್ಯಾಲಯಕ್ಕೆ ಯಾವುದೇ ಅಗೌರವ ತೋರಿಸುತ್ತಿಲ್ಲ. ನನ್ನ ಒಲವಿನ ಸಂಸ್ಥೆಯಲ್ಲಿ ಈ ಪದವಿ ಪಡೆದಿರುವುದಕ್ಕಾಗಿ ನನಗೆ ಹೆಮ್ಮೆ ಇದೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನನ್ನ ಪ್ರತಿಭಟನೆಯನ್ನು ದಾಖಲಿಸಲು ನಾನು ಈ ಪೋಡಿಯಂನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಗೆಳೆಯರು ಘಟಿಕೋತ್ಸವ ಸಮಾರಂಭ ಸ್ಥಳದ ದ್ವಾರದ ಬಳಿ ಧರಣಿ ನಡೆಸುತ್ತಿದ್ದಾರೆ’ ಎಂದು ದೆಬೊಸ್ಮಿತ ಚೌಧರಿ ನುಡಿದರು. . (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ದೇಶದ ವಿತ್ತ ಪರಿಸ್ಥಿತಿ ಕೆಟದಾಗಿದ್ದು ಅದನ್ನು ಸರಿದಾರಿಗೆ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಬಿಜೆಪಿ ಮುಕ್ತ ಭಾರತ ಎಂಬುದು ವಾಸ್ತವ ರೂಪಕ್ಕೆ ಬರುವ ಸಾಧ್ಯತೆಗಳು ಹೆಚ್ಚು ಎಂದು ಪಕ್ಷದ ಹಿರಿಯ ನಾಯಕ ರಾಜ್ಯಸಭಾ ಸದಸ್ಯ, ಡಾ. ಸುಬ್ರಮಣಿಯನ್ ಸ್ವಾಮಿ ಬಿಜೆಪಿ ವರಿಷ್ಠರಿಗೆ 2019 ಡಿಸೆಂಬರ್ 26ರ ಬುಧವಾರ ಕಠಿಣ ಎಚ್ಚರಿಕೆ ನೀಡಿದರು. ದೇಶದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಂತೆ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಸಲಹೆ ನೀಡುತ್ತಿರುವವರ ವಿರುದ್ದ ಡಾ. ಸ್ವಾಮಿ ಕೆಂಡ ಕಾರಿದರು. ‘ಸಲಹೆಗಾರರು ಪ್ರಧಾನಿಯನ್ನು ಕತ್ತಲೆಯಲ್ಲಿ ಇಟ್ಟಿದ್ದಾರೆ. ಆರ್ಥಿಕತೆಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲು ಈಗ ಏನಾದರೂ ಕ್ರಮ ಕೈಗೊಳ್ಳದೇ ಇದ್ದರೆ ಬಿಜೆಪಿ ಮುಕ್ತ ಭಾರತ ವಾಸ್ತವ ರೂಪದಲ್ಲಿ ಎದುರಾಗಲಿದೆ’ ಎಂದು ಸ್ವಾಮಿ ಕಟು ಭವಿಷ್ಯ ನುಡಿದರು. ಪ್ರಧಾನಮಂತ್ರಿಗಳಿಗೆ ಸಲಹೆ ನೀಡುವವರು ಯಾರು? ಎಂಬುದು ತಮಗೆ ಗೊತ್ತಿಲ್ಲ. ಪ್ರಧಾನಿಗೆ ದೇಶದ ಆರ್ಥಿಕ ಸ್ಥಿತಿ ಗತಿಯ ಸತ್ಯವನ್ನು ಮಾತ್ರ ಅವರು ಹೇಳುತ್ತಿಲ್ಲ ಎಂದು ಬಿಜೆಪಿ ನಾಯಕ ಆಪಾದಿಸಿದರು. ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಈ ಎಚ್ಚರಿಕೆ ನೀಡಿದರು. . (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಲಕ್ನೋ: ವ್ಯಾಪಕ ಪ್ರಮಾಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು
2019: ಕೋಲ್ಕತ: ಜಾಧವಪುರ ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಘಟಿಕೋತ್ಸವ ಪದವಿ
ಸಮಾರಂಭದಲ್ಲಿ ಸ್ವೀಕಾರದ ವೇಳೆಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ ಪ್ರತಿಯನ್ನು ಹರಿದುಹಾಕಿದ ಘಟನೆ 2019 ಡಿಸೆಂಬರ್ 25ರ ಮಂಗಳವಾರ ಘಟಿಸಿತು. ’ವಿವಾದಾತ್ಮಕ ಕಾಯ್ದೆಯ ವಿರುದ್ಧ ಪ್ರತಿಭಟಿಸುವ ನನ್ನ ಮಾರ್ಗ ಇದು’ ಎಂದು ಘೋಷಿಸಿ ಆ ವಿದ್ಯಾರ್ಥಿನಿ ಕಾಯ್ದೆಯನ್ನು ಹರಿದು ಹಾಕಿದ್ದಾಳೆ ಎಂದು ವರದಿ ತಿಳಿಸಿತು. ತನ್ನನ್ನು ದೆಬೊಸ್ಮಿತ ಚೌಧರಿ ಎಂಬುದಾಗಿ ಸ್ವತಃ ಪರಿಚಯ ಮಾಡಿಕೊಂಡ ವಿಶ್ವ ವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿನಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹರಿದು ತನ್ನ ಪ್ರತಿಭಟನೆಯನ್ನು ವ್ಯಕ್ತ ಪಡಿಸಲು ಸಮಾರಂಭ ತಾಣದಲ್ಲಿ ಉಪ ಕುಲಪತಿ, ಪ್ರೊ-ವಿಸಿ ಮತ್ತು ರಿಜಿಸ್ಟ್ರಾರ್ ಅವರು ಕುಳಿತಿದ್ದ ವೇದಿಕೆ ಮುಂದಿನ ಪೋಡಿಯಂನ್ನೇ ಬಳಸಿಕೊಂಡರು. ಪ್ರಾಮಾಣಿಕ ಪೌರರಿಗೆ ತಮ್ಮ ರಾಷ್ಟ್ರೀಯತೆ ಸಾಬೀತು ಪಡಿಸುವಂತೆ ಮಾಡಿರುವ ಕಾರಣಕ್ಕಾಗಿ ತಾನು ಈ ಕೃತ್ಯ ಎಸಗುತ್ತಿರುವುದಾಗಿ ಚೌಧರಿ ಹೇಳಿದರು. ‘ಯಾವುದೇ ಗೊಂದಲ ಮೂಡುವುದು ಬೇಡ. ನಾನು ಜಾಧವಪುರ ವಿಶ್ವವಿದ್ಯಾಲಯಕ್ಕೆ ಯಾವುದೇ ಅಗೌರವ ತೋರಿಸುತ್ತಿಲ್ಲ. ನನ್ನ ಒಲವಿನ ಸಂಸ್ಥೆಯಲ್ಲಿ ಈ ಪದವಿ ಪಡೆದಿರುವುದಕ್ಕಾಗಿ ನನಗೆ ಹೆಮ್ಮೆ ಇದೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನನ್ನ ಪ್ರತಿಭಟನೆಯನ್ನು ದಾಖಲಿಸಲು ನಾನು ಈ ಪೋಡಿಯಂನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಗೆಳೆಯರು ಘಟಿಕೋತ್ಸವ ಸಮಾರಂಭ ಸ್ಥಳದ ದ್ವಾರದ ಬಳಿ ಧರಣಿ ನಡೆಸುತ್ತಿದ್ದಾರೆ’ ಎಂದು ದೆಬೊಸ್ಮಿತ ಚೌಧರಿ ನುಡಿದರು. . (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ
History Today ಡಿಸೆಂಬರ್ 25
(2018+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment