Saturday, December 7, 2019

ಇಂದಿನ ಇತಿಹಾಸ History Today ಡಿಸೆಂಬರ್ 07

2019: ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯ ಅತ್ಯಾಚಾರ ಪ್ರಕರಣ ಅಪರಾಧಿ, ಮರಣ ದಂಡನೆಗೆ ಗುರಿಯಾಗಿರುವ ವಿನಯ್ ಶರ್ಮ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿಯವರಿಂದ ತತ್ ಕ್ಷಣವೇ ಹಿಂಪಡೆಯುವುದಾಗಿ ಹೇಳಿ 2019 ಡಿಸೆಂಬರ್ 07ರ ಶನಿವಾರ ತನ್ನ ವಕೀಲರ ಮೂಲಕ ಪತ್ರ ರವಾನಿಸಿದ. ತನ್ನ ಹೆಸರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲಾಗಿರುವ ಅರ್ಜಿಗೆ ನಾನು ಸಹಿ ಹಾಕಿಯೇ ಇಲ್ಲ. ತಿಹಾರ್ ಸೆರೆಮನೆ ಅಧಿಕಾರಿಗಳು ದುರುದ್ದೇಶದಿಂದ ದೆಹಲಿ ಸರ್ಕಾರದ ಜೊತೆಗೆ ಕ್ರಿಮಿನಲ್ ಸಂಚು ಹೂಡಿ ಕಡತ ಕಳುಹಿಸಿದ್ದಾರೆ ಎಂದು ವಿನಯ್ ಶರ್ಮ ತನ್ನ ಪತ್ರದಲ್ಲಿ ತಿಳಿಸಿದ. ತನಗೆ ಮತ್ತು ಇತರ ಆರೋಪಿಗಳಿಗೆ ಕಾನೂನುಬದ್ಧವಾಗಿ ಕೆಲವು ಪರಿಹಾರ ಕೋರುವ ಹಕ್ಕಿದೆ. ಅವುಗಳನ್ನು ಚಲಾಯಿಸುವ ಮುನ್ನವೇ ರೀತಿ ಕಡತ ಕಳುಹಿಸಲಾಗಿದೆ. ಆದ್ದರಿಂದ ತತ್ ಕ್ಷಣವೇ ಅದನ್ನು ಹಿಂದಿರುಗಿಸಬೇಕು ಎಂದು ವಿನಯ್ ಶರ್ಮ ಕೋರಿದ. ಮರಣ ದಂಡನೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ಜಾರಿಗೊಳಿಸಲು ವಿಳಂಬ ಮಾಡುವ ಉದ್ಧೇಶದಿಂದ ರೀತಿ ಮಾಡಲಾಗುತ್ತಿದೆ ಎಂದು ಶರ್ಮ ಮನವಿಗೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಯಿತು. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2019: ಲಕ್ನೋ: ಉನ್ನಾವೋ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳು ಹಚ್ಚಿದ ಕಿಚ್ಚಿನಿಂದ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ 2019 ಡಿಸೆಂಬರ್ 06ರ ಶುಕ್ರವಾರ ರಾತ್ರಿ ಜೀವನ್ಮರಣ ಹೋರಾಟದ ಬಳಿಕ ಸಾವನ್ನಪ್ಪಿದ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಸಾವಿನ ಪ್ರಕರಣವನ್ನು ತ್ವರಿತಗತಿಯ ನ್ಯಾಯಾಲಯ ವಿಚಾರಣೆ ನಡೆಸಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2019 ಡಿಸೆಂಬರ್ 07ರ ಶನಿವಾರ ಪ್ರಕಟಿಸಿದರು. ಯುವತಿಯ ಕುಟುಂಬಕ್ಕೆ ೨೫ ಲಕ್ಷ ರೂಪಾಯಿಗಳ ಪರಿಹಾರ ಮತ್ತು ಒಂದು ಮನೆಯನ್ನೂ ಒದಗಿಸಲಾಗುವುದು ಎಂದು ಅವರು ತಿಳಿಸಿದರು. ಸಾವನ್ನಪ್ಪಿದ ಯುವತಿಯ ಮನೆಯವು ಬಯಸುವ ಯಾವುದೇ ರೀತಿಯ ತನಿಖೆಯನ್ನು ಮಾಡಲಾಗುವುದು, ಯುವತಿ ಹೇಳಿರುವ ಹೆಸರಿನ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವ ಅಪರಾಧಿಗಳನ್ನೂ ಬಿಡಲಾಗುವುದಿಲ್ಲ. ಇದು ರಾಜಕೀಯದ ವಿಷಯವಲ್ಲ ಎಂದು ಯುವತಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಬಳಿಕ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದರು. ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಸಾವು ತೀವ್ರ ನೋವು ತಂದಿದೆ ಎಂದು ಹೇಳಿದ ಮುಖ್ಯಮಂತ್ರಿ ಮೃತಳ ಕುಟುಂಬಕ್ಕೆ ತಮ್ಮ ಸಂತಾಪ ವ್ಯಕ್ತಪಡಿಸಿದರು. ಎಲ್ಲ ಐವರೂ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣವನ್ನು ತ್ವರಿತಗತಿಯ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಆದಿತ್ಯನಾಥ್ ತಮ್ಮ ಹೇಳಿಕೆಯಲ್ಲಿ ತಿಳಿಸಿದರು.  2019 ಡಿಸೆಂಬರ್ 05ರ ಗುರುವಾರ ಬೆಳಗ್ಗೆ ರಾಯ್ ಬರೇಲಿ ನ್ಯಾಯಾಲಯಕ್ಕೆ ವಿಚಾರಣೆ ಸಲುವಾಗಿ ಹೊರಟಿದ್ದ ಸಂತ್ರಸ್ಥ ಮಹಿಳೆಗೆ ಐವರು ಆರೋಪಿಗಳು ಬೆಂಕಿ ಹಚ್ಚಿದ್ದರು. ಅವರ ಪೈಕಿ ಇಬ್ಬರು ಬೆಂಕಿ ಹಚ್ಚುವುದಕ್ಕೆ ಮುನ್ನ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಅಪಾದಿಸಲಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2019: ತಿರುವನಂತಪುರಂ: ಕೇರಳದಲ್ಲಿ ನಡೆದಿದ್ದ ಸಹೋದರಿಯರಿಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಜನರ ಗುಂಪು ಹಿಗ್ಗಾಮುಗ್ಗ ಥಳಿಸಿದ ಘಟನೆ ಪಾಲಕ್ಕಾಡ್ ಜಿಲ್ಲೆಯ ವಲಯಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2019 ಡಿಸೆಂಬರ್ 07ರ ಶನಿವಾರ ಬೆಳಗ್ಗೆ ಘಟಿಸಿತು. ಆರೋಪಿಗಳಲ್ಲಿ ಒಬ್ಬನಾದ ಸಿ. ಮಧು, ಸಾರ್ವಜನಿಕರ ಆಕ್ರೋಶಕ್ಕೆ ತುತಾಗಿದ್ದು, ಸಾರ್ವಜನಿಕರ ದಾಳಿಯಲ್ಲಿ ಗಾಯಗೊಂಡ ಆತನನ್ನು ಪಾಲಕ್ಕಾಡಿನಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅತ್ಯಾಚಾರ ಪ್ರಕರಣದ ಆರೋಪಿ ಮತ್ತು - ಜನರ ಗುಂಪಿನ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯೇ ಹಲ್ಲೆಗೆ ಕಾರಣ ಎಂದು ಪೊಲೀಸರು ಹೇಳಿದರು. ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಥಳಿಸಿದ ಬಳಿಕ ಆತನನ್ನು ರಸ್ತೆಯ ಬದಿಯಲ್ಲಿ ಹಾಗೆಯೇ ಬಿಟ್ಟು ಹೋಗಲಾಗಿತ್ತು ಎಂದು ಪೊಲೀಸರು ತಿಳಿಸಿದರು. ಎರಡು ವರ್ಷದ ಹಿಂದೆ ಕೇರಳವನ್ನು ತಲ್ಲಣಗೊಳಿಸಿದ್ದ ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿತ್ತು. ಆದರೆ ಎಲ್ಲ ಮೂರೂ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯ ಆರೋಪದಿಂದ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಕೇರಳ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2019: ನವದೆಹಲಿ: ಉನ್ನಾವೋ ಜಿಲ್ಲೆಯ ಸಿಂಧುನಗರದಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಸುಟ್ಟುಕೊಂದ ಆರೋಪಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ತಾಯಿಯೊಬ್ಬಳು ತನ್ನ ಆರು ವರ್ಷದ ಮಗಳ ಮೇಲೆಯೇ ಪೆಟ್ರೋಲ್ ಸುರಿದ ಕಳವಳಕಾರಿ ಘಟನೆ 2019 ಡಿಸೆಂಬರ್ 07ರ ಶನಿವಾರ ಘಟಿಸಿತು. ಅಸ್ವಸ್ಥಳಾಗಿರುವ ಬಾಲಕಿಯನ್ನು ಕೂಡಲೇ ದೆಹಲಿಯ ಸಪ್ಧರ್ ಜಂಗ್ ಆಸ್ಪತ್ರೆಗೆ ಸೇರಿಸಲಾಯಿತು. ತುತು ಚಿಕಿತ್ಸಾ ಘಟಕದಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ, ಕೃತ್ಯವೆಸಗಿದ ತಾಯಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಘಟನೆಗೆ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ಉನ್ನಾವೋ ಜಿಲ್ಲೆಯ ಸಿಂಧುನಗರ ಪ್ರಕರಣದ ಸಂತ್ರಸ್ತೆ ಆರೋಪಿಗಳ ಹಲ್ಲೆಯಿಂದ ಶುಕ್ರವಾರ ತಡರಾತ್ರಿ ಕೊನೆಯುಸಿರು ಎಳೆದ ನಂತರದಲ್ಲಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ರೀತಿ ಪ್ರತಿಭಟನೆ ನಡೆಸುತ್ತಿರುವ ವೇಳೆ ತಾಯಿ ಮಗಳ ಮೇಲೆ ಪೆಟ್ರೋಲ್ ಸುರಿದುದು ಈಗ ದೇಶಾದ್ಯಂತ ಕಳವಳವನ್ನು ಹುಟ್ಟುಹಾಕಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2019: ನವದೆಹಲಿ: ನ್ಯಾಯವು ಎಂದಿಗೂ ಸೇಡಿನ ರೂಪವನ್ನು ಪಡೆಯಬಾರದು. ಪ್ರತೀಕಾರವಾದಾಗ ನ್ಯಾಯ ತನ್ನ ಚಾರಿತ್ರ್ಯವನ್ನು ಕಳೆದುಕೊಳ್ಳುತ್ತದೆಪ್ರತೀಕಾರವನ್ನು ನ್ಯಾಯ ಎಂಬುದಾಗಿ ತಪ್ಪಾಗಿ ಭಾವಿಸಿಕೊಳ್ಳಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಶರತ್ ಅರವಿಂದ ಬೋಬ್ಡೆ ಅವರು 2019 ಡಿಸೆಂಬರ್ 07ರ ಶನಿವಾರ ಹೇಳಿದರು. ತೆಲಂಗಾಣದಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕಿಚ್ಚಿಟ್ಟು ಜೀವಂತ ದಹಿಸಿದ್ದ ನಾಲ್ವರು ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಶುಕ್ರವಾರ ನಸುಕಿನಲ್ಲಿ ಎನ್ಕೌಂಟರಿನಲ್ಲಿ ಗುಂಡಿಟ್ಟು ಕೊಂದು ಹಾಕಿದ ಒಂದು ದಿನದ ಬಳಿಕ ರಾಜಸ್ಥಾನ ಹೈಕೋರ್ಟಿನ ಸಮಾರಂಭ ಒಂದರಲ್ಲಿ ನ್ಯಾಯಮೂರ್ತಿ ಬೋಬ್ಡೆ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು. ‘ಕ್ರಿಮಿನಲ್ ವಿಷಯಗಳನ್ನು ಇತ್ಯರ್ಥ ಪಡಿಸುವ ಬಗೆಗಿನ ತನ್ನ ಧೋರಣೆಯಲ್ಲಿನ ಶಿಥಿಲತೆಯನ್ನು ನ್ಯಾಯ ವ್ಯವಸ್ಥೆಯು ಪುನರ್ ಪರಿಶೀಲಿಸಬೇಕು. ಬದಲಾವಣೆಗಳು ಮತ್ತು ಗ್ರಹಿಕೆ ಬಗ್ಗೆ ನ್ಯಾಯಾಂಗ ಅರಿವು ಹೊಂದಿರಬೇಕು ಎಂದು ಸಿಜೆಐ ನುಡಿದರು. ದೇಶದಲ್ಲಿನ ಇತ್ತೀಚಿನ ಘಟನೆಗಳು ಹಳೆಯ ಚರ್ಚೆಯನ್ನೇ ಹೊಸ ಚೈತನ್ಯದೊಂದಿಗೆ ಮುಂಚೂಣಿಗೆ ತಂದಿವೆ. ಅಪರಾಧ ನ್ಯಾಯ ವ್ಯವಸ್ಥೆಯು ತನ್ನ ಕಟ್ಟುನಿಟ್ಟು ಇಲ್ಲದಿರುವಿಕೆ ಮತ್ತು ವಿಷಯ ಇತ್ಯರ್ಥಗೊಳಿಸುವಲ್ಲಿನ ವಿಳಂಬ ಬಗೆಗಿನ ತನ್ನ ಧೋರಣೆ ಮತ್ತು ಸ್ಥಾನವನ್ನು ಮರುಪರಿಶೀಲಿಸಬೇಕಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲಎಂದು ಅವರು ನುಡಿದರು. ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಬಿದ್ದಿರುವ ಭಾರೀ ಸಂಖ್ಯೆಯ ಪ್ರಕರಣಗಳ ಹಿನ್ನೆಲೆಯಲ್ಲಿ ನ್ಯಾಯಾಂಗವು ಜನರಿಗೆ ನ್ಯಾಯ ಒದಗಿಸಲು ಬದ್ಧವಾಗಬೇಕು, ಅದಕ್ಕಾಗಿ ತನ್ನನ್ನು ತಾನು ಬಲಪಡಿಸಿಕೊಳ್ಳಬೇಕು. ವಿವಾದಗಳನ್ನು ತ್ವರಿತವಾಗಿ, ಸಮಾಧಾನಕರವಾಗಿ ಜನರ ಕೈಗೆ ಎಟಕುವ ರೀತಿಯಲ್ಲಿ ಇತ್ಯರ್ಥ ಪಡಿಸಬೇಕು ಮತ್ತು ಸ್ವಯಂ ಸರಿಪಡಿಸಿಕೊಳ್ಳುವ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಬೋಬ್ಡೆ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2019: ಸಿಧಿ/ ದಾಮೋಹ್/ ಮೊವ್: ತೆಲಂಗಾಣದ ಹೈದರಾಬಾದ್ ಮತ್ತು ಉತ್ತರ ಪ್ರದೇಶದ ಉನ್ನಾವೋದಲ್ಲಿ ಯುವತಿಯರ ಮೇಲಿನ ಅತ್ಯಾಚಾರ ಹಾಗೂ ಭಯಾನಕ ಹತ್ಯೆ ಘಟನೆಗಳ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿರುವಂತೆಯೇ ಮಧ್ಯಪ್ರದೇಶ ಸೇರಿದಂತೆ ಇತರೆಡೆಗಳಿಂದಲೂ ಅಂತಹುದೇ ಘಟನೆಗಳು ಘಟಿಸಿರುವ ವರದಿಗಳು ಬಂದವು. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಯುವ ಶಾಲಾ ಶಿಕ್ಷಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದರೆ, ದಾಮೋಹ್ ಜಿಲ್ಲೆಯಲ್ಲಿ ಹದಿ ಹರೆಯದ ಬಾಲಕಿಯೊಬ್ಬಳು ಸ್ಥಳೀಯ ಯುವಕರ ನಿರಂತರ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡೂ ಘಟನೆಗಳು ಗುರುವಾರ ಘಟಿಸಿವೆ ಎಂದು ವರದಿಗಳು ತಿಳಿಸಿದವು. ಇದಕ್ಕೂ ಹೆಚ್ಚಾಗಿ ಸಿಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಎಸ್ ಬೆಳ್ವಂಶಿ ಅವರು ಶುಕ್ರವಾರ ರಾತ್ರಿ ಟಿವಿಯೊಂದಕ್ಕೆಬೈಟ್ನೀಡುತ್ತಾ ಸಂತ್ರಸ್ಥರ ಹೆಸರು ಮತ್ತು ವಿಳಾಸವನ್ನು ಬಹಿರಂಗ ಪಡಿಸಿದ ದುರದೃಷ್ಟಕರ ಘಟನೆಯೂ ಘಟಿಸಿತು. ಇವೆಲ್ಲದರ ಮಧ್ಯೆ ಇಂದೋರಿಗೆ ಸಮೀಪದ ಮೊವ್ನಲ್ಲಿ ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿದ ಆರೋಪಿಯೊಬ್ಬನನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆ ತರುತ್ತಿದ್ದಾಗ ವಕೀಲರು ಹಿಗ್ಗಾಮುಗ್ಗ ಥಳಿಸಿದ ಘಟನೆಯೂ ಘಟಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)




No comments:

Post a Comment