ನಾನು ಮೆಚ್ಚಿದ ವಾಟ್ಸಪ್

Thursday, December 5, 2019

ಇಂದಿನ ಇತಿಹಾಸ History Today ಡಿಸೆಂಬರ್ 05

2019: ನವದೆಹಲಿ: ಕಳೆದ ವರ್ಷ ನಿಪಾಹ್ ಬಾಧಿತ ರೋಗಿಯೊಬ್ಬರ ಆರೈಕೆ ಸಂದರ್ಭ ಅಕಸ್ಮಾತ್ ಸೋಂಕು ತಗುಲಿ ಮೃತರಾದ ಕೇರಳದ 30 ವರ್ಷದ ನರ್ಸ್ ಲಿನಿ ಪಿಎನ್ಗೆ 2019 ಡಿಸೆಂಬರ್ 05ರ ಗುರುವಾರ 'ಫ್ಲೋರೆನ್ಸ್ ನೈಟಿಂಗೇಲ್ ಪುರಸ್ಕಾರ'ವನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಯಿತು. ಶ್ರೇಷ್ಠ ಸೇವೆ ಸಲ್ಲಿಸಿದ ನರ್ಸ್ಗಳ ಕಾರ್ಯವನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ 1973ರಲ್ಲಿ   ಭಾರತ ಸರ್ಕಾರವು  ‘ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ'ಯನ್ನು ಸ್ಥಾಪಿಸಿದ್ದು ದೆಹಲಿಯಲ್ಲಿ ಈದಿನ  ನಡೆದ ಕಾರ್ಯಕ್ರಮದಲ್ಲಿ ಲಿಲಿಯ ಪತಿ ಸಜೀಶ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುರಸ್ಕಾರ ಪ್ರದಾನ ಮಾಡಿದರು. ಜೊತೆಗೆ, ಇತರ 35 ನರ್ಸ್ಗಳಿಗೂ ಪುರಸ್ಕಾರ ಪ್ರದಾನ ಮಾಡಲಾಯಿತು. ಗುಣಮಟ್ಟದ ಆರೋಗ್ಯ ಸೇವೆ ಜನರಿಗೆ ತಲುಪುವ ನಿಟ್ಟಿನಲ್ಲಿ ನರ್ಸ್ಗಳು ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನಾರ್ಹವಾಗಿದೆ.ಆರೋಗ್ಯ ಸೇವೆಯ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿರುವ ನರ್ಸ್ಗಳು ಹಾಗೂ ಇಂದಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಎಲ್ಲಾ ನರ್ಸ್ಗಳೂ ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ರಾಷ್ಟ್ರಪತಿ ಕೋವಿಂದ್ ಶ್ಲಾಘಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ವಾಷಿಂಗ್ಟನ್: ಉಕ್ರೇನ್ಗೆ ನೆರವು ತಡೆ ಹಿಡಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದೋಷಾರೋಪಪ್ರಕ್ರಿಯೆ ಜರುಗಿಸಲಾಗುವುದು ಎಂಬ ಚಾರಿತ್ರಿಕ ಘೋಷಣೆಯನ್ನು ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಸ್ಪೀಕರ್ ನಾನ್ಸಿ ಪೆಲೋಸಿ ಅವರು 2019 ಡಿಸೆಂಬರ್ 05ರ ಗುರುವಾರ ಮಾಡಿದರು. ’ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕ್ರಮವಹಿಸದ ವಿನಃ ಬೇರೆ ಆಯ್ಕೆ ನಮಗೆ ಇಲ್ಲದಂತೆ ಅಧ್ಯಕ್ಷರು ಮಾಡಿದ್ದಾರೆಎಂದು ನಾನ್ಸಿ ಅವರು ದೋಷಾರೋಪ ಪ್ರಕ್ರಿಯೆಯ ಪ್ರಕಟಣೆ ಮಾಡುತ್ತಾ ಹೇಳಿದರು. ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ಡೆಮಾಕ್ರಾಟ್ ಸದಸ್ಯರು ಬಹುಮತ ಹೊಂದಿದ್ದು, ಕ್ರಿಸ್ ಮಸ್ ವೇಳೆಗೆ ನಿರ್ಣಯ ಅಂಗೀಕಾರ ಗೊಳ್ಳುವ ಸಾಧ್ಯತೆ ಇದೆ. ಹಿನ್ನೆಲೆಯಲ್ಲಿ ಟ್ರಂಪ್ ಅವರು ಸೆನೆಟಿನಲ್ಲಿನ್ಯಾಯೋಚಿತತನಿಖೆಯನ್ನು ಎದುರು ನೋಡಬಹುದು ಎಂದು ವರದಿಗಳು ಹೇಳಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಕೇರಳದ ಶಬರಿಮಲೈಯ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟಿನ ೨೦೧೮ರ ಸೆಪ್ಟೆಂಬರ್ ತಿಂಗಳ ತೀರ್ಪು ವಿಷಯಕ್ಕೆ ಸಂಬಂಧಿಸಿದಂತೆ  ಅಂತಿಮ ಅಲ್ಲಎಂಬುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್.. ಬೋಬ್ಡೆ ಅವರು 2019 ಡಿಸೆಂಬರ್ 05ರ ಗುರುವಾರ ಹೇಳಿದರು. ದೇವಾಲಯ ಪ್ರವೇಶಕ್ಕೆ ರಕ್ಷಣೆ ಕೋರಿ ಸುಪ್ರೀಂಕೋರ್ಟಿಗೆ ಕೇರಳದ ಮಹಿಳೆ ಬಿಂದು ಅಮ್ಮಿನಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆಯಲ್ಲಿ ಸಿಜೆಐ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು. ದೇವಾಲಯ ಪ್ರವೇಶಕ್ಕೆ ಋತುಮತಿ ವಯೋಮಾನದ ಮಹಿಳೆಯರು ಸೇರಿದಂತೆ ಎಲ್ಲ ಮಹಿಳೆಯರಿಗೆ ಅವಕಾಶ ನೀಡಿದ ಸುಪ್ರೀಂಕೋರ್ಟಿನ ೨೦೧೮ ಸೆಪ್ಟೆಂಬರ್ ತಿಂಗಳ ತೀರ್ಪು ಜಾರಿ ಮತ್ತು ಅದರ ಅನ್ವಯ ದೇವಾಲಯ ಪ್ರವೇಶ ಬಯಸುವ ಮಹಿಳೆಯರಿಗೆ ಭದ್ರತೆ ಒದಗಿಸುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಬಿಂದು ಅಮ್ಮಿನಿ ತಮ್ಮ ಅರ್ಜಿಯಲ್ಲಿ ಕೋರಿದ್ದರು.ಅಮ್ಮಿನಿ ಪರವಾಗಿ ಹಾಜರಾದ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು ಅರ್ಜಿಯನ್ನು ಪ್ರಸ್ತಾಪಿಸಿ ಪ್ರಸ್ತುತ ಋತುವಿನಲ್ಲಿ ದೇವಾಲಯವನ್ನು ಶೀಘ್ರವೇ ಮುಚ್ಚುವ ಕಾರಣ ವಿಷಯವನ್ನು ಶೀಘ್ರ ವಿಚಾರಣೆಗೆ ಪಟ್ಟಿ ಮಾಡಬೇಕು ಕೋರಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಬೆಂಗಳೂರು: ಕಾಂಗ್ರೆಸ್ ಹಾಗೂ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಇತ್ತೀಚೆಗೆ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದ ಕೆ.ಸಿ.ರಾಮಮೂರ್ತಿ ಅವರು 2019 ಡಿಸೆಂಬರ್ 05ರ ಗುರುವಾರ ಅವಿರೋಧವಾಗಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು.ಡಿಸೆಂಬರ್ ೧೨ರಂದು ರಾಜ್ಯಸಭೆಗೆ ಚುನಾವಣೆ ನಡೆಯಬೇಕಾಗಿತ್ತು. ಆದರೆ, ಚುನಾವಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಸಿ.ರಾಮಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭಾ ಕಾರ್ಯದರ್ಶಿ ಎಂಕೆ ವಿಶಾಲಾಕ್ಷಿ ಘೋಷಿಸಿದರು.ಕೆ.ಸಿ. ರಾಮಮೂರ್ತಿ ಹೊರತುಪಡಿಸಿ ಬೇರೆ ಯಾರೂ ಕೂಡ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಪ್ರತಿಸ್ಪರ್ಧಿಯಾಗಿ ಯಾವ ಅಭ್ಯರ್ಥಿಗಳು ಇಲ್ಲದ ಕಾರಣ ಅಂತಿಮವಾಗಿ ಕೆ ಸಿ ರಾಮಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾದರು.ಅವಿರೋಧವಾಗಿ ಆಯ್ಕೆ ಆಗುತ್ತಿದ್ದಂತೆಯೇ  ಕೆ.ಸಿ. ರಾಮಮೂರ್ತಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ೩೦ರ ಹರೆಯದ ಸಂತ್ರಸ್ಥೆಯ ಮೇಲೆ ಉನ್ನಾವೋ ಜಿಲ್ಲೆಯಲ್ಲಿ ಗುರುವಾರ ನಸುಕಿನಲ್ಲಿ ಐವರು ವ್ಯಕ್ತಿಗಳು ಹಲ್ಲೆ ನಡೆಸಿ ಬೆಂಕಿ ಹಚ್ಚಿದ ಘಟನೆ ಘಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂದಿ ಹಲ್ಲೆಕೋರರ ಪೈಕಿ ಒಬ್ಬ ವ್ಯಕ್ತಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳ ಪೈಕಿ ಒಬ್ಬನಾಗಿದ್ದು, ಆತನನ್ನು ಈವರೆಗೂ ಬಂಧಿಸಲಾಗಿರಲಿಲ್ಲ. ಮಹಿಳೆ ನಸುಕಿನಲ್ಲಿ ರಾಯ್ ಬರೇಲಿಗೆ ನ್ಯಾಯಾಲಯಕ್ಕೆ ಹಾಜರಾಗುವ ಸಲುವಾಗಿ ರೈಲ್ವೇ ನಿಲ್ದಾಣದತ್ತ ಹೊರಟಿದ್ದಾಗ ಹಲ್ಲೆ ನಡೆದಿದೆ. ಆಕೆಯನ್ನು ಆರೋಪಿಗಳ ಮಾರ್ಗ ಮಧ್ಯದಲ್ಲೇ ತಡೆದು ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದರು. ಮಹಿಳೆಯನ್ನು ಲಕ್ನೋ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಶೇಕಡಾ ೬೦ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಉತ್ತರಪ್ರದೇಶ ಪೊಲೀಸ್ ಮುಖ್ಯಸ್ಥ ಒಪಿ ಸಿಂಗ್ ಹೇಳಿದರು. ದಾಳಿ ನಡೆದ ವೇಳೆಯಲ್ಲಿ ಮಹಿಳೆ ತನ್ನ ಮೇಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ಹೊರಟಿದ್ದಳು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಐಎನ್ಎಕ್ಸ್  ಮೀಡಿಯಾ ಪ್ರಕರಣದಲ್ಲಿ ೧೦೦ಕ್ಕೂ ಹೆಚ್ಚು ದಿನಗಳ ಸೆರೆವಾಸದ ಬಳಿಕ  ತಿಹಾರ್ ಸೆರೆಮನೆಯಿಂದ ಬುಧವಾರ ಹೊರಬಂದಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಗುರುವಾರ ದೇಶದ ಆರ್ಥಿಕತೆಯ ವಿಚಾರವನ್ನು ತೆಗೆದುಕೊಂಡು ಕೇಂದ್ರ ಸರ್ಕಾರದತ್ತ ತನ್ನ ವಾಗ್ದಾಳಿಯ ಫಿರಂಗಿಯನ್ನು ತಿರುಗಿಸಿದರು. ’ಆರ್ಥಿಕ ಪರಿಸ್ಥಿತಿ ಏನಾಗಿದೆ ಎಂಬ ಸುಳಿವೇ ಸರ್ಕಾರಕ್ಕೆ ಇಲ್ಲ, ಹೀಗಾಗಿ ಅದು ತಪ್ಪುಗಳ ಮೇಲೆ ತಪ್ಪುಗಳನ್ನು ಎಸಗುತ್ತಿದೆಎಂದು ಚಿದಂಬರಂ ಸೆರೆವಾಸದಿಂದ ಹೊರಬಂದ ಬಳಿಕ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆಸಿದ ತಮ್ಮ ಚೊಚ್ಚಲ ಮಾಧ್ಯಮ ಗೋಷ್ಠಿಯಲ್ಲಿ ಚುಚ್ಚಿದರು. ’ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆ ಬಗ್ಗೆ ಅಸಾಮಾನ್ಯ ಮೌನ ತಾಳಿದ್ದಾರೆ. ಅವರು ಬುರುಡೆ ಬಿಡುವ ಕೆಲಸವನ್ನು ಮಂತ್ರಿಗಳಿಗೆ ವಹಿಸಿದ್ದಾರೆ. ಒಟ್ಟಾರೆ ಪರಿಣಾಮ ಸರ್ಕಾರವು ಆರ್ಥಿಕತೆಯ ಅಸಮರ್ಥ ನಿರ್ವಾಹಕವಾಗಿದೆ ಎಂಬುದು ಆರ್ಥಿಕ ತಜ್ಞರೊಬ್ಬರ ಮಾತುಎಂದು ಪ್ರಧಾನಿ ವಿರುದ್ಧವೂ ಚಿದಂಬರಂ ಹರಿಹಾಯ್ದರು. ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದು ಬಿಡುಗಡೆಗೊಂಡಿರುವ ಕಾಂಗ್ರೆಸ್ ನಾಯಕತಾನು ಏನನ್ನು ಬಿಟ್ಟು ಹೋಗುತ್ತದೋ ಅದು ಬಿಜೆಪಿಯ ಕೊಡುಗೆಯಾಗುತ್ತದೆ. ಅವರು ಬಿಟ್ಟು ಹೋಗುತ್ತಿರುವುದು ಆರ್ಥಿಕತೆಯ ಅವಶೇಷಗಳನ್ನುಎಂದು ಚಾಟಿ ಬೀಸಿದರು.’ಎನ್ಡಿಎ ಸರ್ಕಾರವು ೨೦೧೬ರಿಂದೀಚೆಗೆ ಲಕ್ಷಾಂತರ ಜನರನ್ನು ದಾರಿದ್ರ್ಯ ರೇಖೆಯಿಂದ ಕೆಳಕ್ಕೆ ತಳ್ಳಿದೆ. ರಫ್ತು ಪ್ರಮಾಣ ಕಡಿಮೆಯಾಗಲು ಜಾಗತಿಕ ಆರ್ಥಿಕ ಹಿಂಜರಿತ ಕಾರಣ ಎಂಬುದು ನಿಜವಾದರೂ, ಉಳಿದ ಸಮಸ್ಯೆಗಳು ದೇಶೀಯ. ಬಿಜೆಪಿಯ ಸುಧಾರಣೆಯ ಕಲ್ಪನೆಗಳಲ್ಲಿ ಜಿಡಿಪಿ ಅಪ್ರಸ್ತುತ ಎಂಬ ಕಲ್ಪನೆಯೂ ಸೇರಿದೆ...ಇದು ಬಿಜೆಪಿಯ ಯೋಜನೆಯಾಗಿದ್ದರೆ ನಮ್ಮನ್ನು ದೇವರೇ ಕಾಪಾಡಬೇಕಾಗುತ್ತದೆಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಬೆಂಗಳೂರು: ರಾಜ್ಯದ ೧೫ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಮತದಾನ ಮುಕ್ತಾಯಗೊಂಡು ಅಭ್ಯರ್ಥಿಗಳಹಣೆಬರಹ  ಮತಯಂತ್ರಗಳಲ್ಲಿ ಭದ್ರವಾಗುತ್ತಿದ್ದಂತೆಯೇ ವಿವಿಧ ಮತದಾನೋತ್ತರ ಸಮೀಕ್ಷೆಯ (ಮತಗಟ್ಟೆ ಸಮೀಕ್ಷೆ) ಫಲಿತಾಂಶ ಹೊರಬಿದ್ದಿದ್ದು,  ಭಾರತೀಯ ಜನತಾ ಪಕ್ಷವು (ಬಿಜೆಪಿ) ಭರ್ಜರಿ ಗೆಲುವು ಸಾಧಿಸುವ ಸುಳಿವ ನೀಡಿವೆ.  ಉಪಚುನಾವಣೆಯಲ್ಲಿ ಶೇಕಡಾ ೬೬.೨೫ರಷ್ಟು ಮತ ಚಲಾವಣೆಯಾಯಿತು. ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ ೯ರಿಂದ ೧೨ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದ್ದು, ಕಾಂಗ್ರೆಸ್ ಪಕ್ಷವು ೩ರಿಂದ ಸ್ಥಾನಗಳಲ್ಲಿ ಮತ್ತು ಜೆಡಿಎಸ್ ಸ್ಥಾನದಲ್ಲಿ ಗೆಲುವು ಪಡೆಯುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿದವು. ಸಿ ವೋಟರ್ ಸಮೀಕ್ಷೆಯ ಪ್ರಕಾರ ಯಶವಂತಪುರದಲ್ಲಿ ಬಿಜೆಪಿಯ ಸೋಮಶೇಖರ್ ಗೆ ಮುನ್ನಡೆಯ ಸುಳಿವು ಲಭಿಸಿದ್ದು, ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ಅವರಿಗೆ ಮುಖಭಂಗವಾಗುವ ಸಂಭವ ಇದೆ ಎಂದು ವರದಿ ತಿಳಿಸಿತು. ಮಹಾಲಕ್ಷ್ಮೀ ಲೇಔಟ್ನಲ್ಲಿ ಬಿಜೆಪಿಯ ಗೋಪಾಲಯ್ಯಗೆ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ಗೆ ಹಿನ್ನಡೆ. ಕೆಆರ್ ಪುರಂ ಕ್ಷೇತ್ರದಲ್ಲಿ ಬಿಜೆಪಿಯ ಬೈರತಿ ಬಸವರಾಜ್ ಮುನ್ನಡೆ, ಕಾಂಗ್ರೆಸ್ ನಾರಾಯಣಸ್ವಾಮಿಗೆ ಹಿನ್ನಡೆಯಾಗಲಿದೆ ಎಂದು ಸಿ ವೋಟರ್ ಸಮೀಕ್ಷೆ ಬಹಿರಂಗಪಡಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ).



No comments:

Post a Comment