ಇಂದಿನ ಇತಿಹಾಸ
History Today ಡಿಸೆಂಬರ್ 18
2019: ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಅಕ್ಷಯ್ ಕುಮಾರ್ ಸಲ್ಲಿಸಿದ್ದ ಮರಣದಂಡನೆ ಪುನರ್ ಪರಿಶೀಲನಾ ಕೋರಿಕೆ ಅರ್ಜಿಯನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ 2019 ಡಿಸೆಂಬರ್ 18ರ ಬುಧವಾರ ವಜಾಗೊಳಿಸಿತು. ಆದರೆ
ಶಿಕ್ಷೆ ಜಾರಿ ಸಂಬಂಧವಾಗಿ ಮರಣ ವಾರಂಟ್ (ಬ್ಲ್ಯಾಕ್ ವಾರಂಟ್) ಜಾರಿಗೆ ದೆಹಲಿಯ ವಿಚಾರಣಾ ನ್ಯಾಯಾಲಯ ನಿರಾಕರಿಸಿತು. ಪರಿಣಾಮವಾಗಿ ನಿರ್ಭಯಾ ತಾಯಿ ನ್ಯಾಯಾಲಯದಲ್ಲೇ ಗಳಗಳನೆ ಅತ್ತ ಘಟನೆ ಘಟಿಸಿತು. ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಧಿಸಲಾದ ಮರಣದಂಡನೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟಿನ ೨೦೧೭ರ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಲ್ಲಿಸಿದ್ದ ಅರ್ಜಿಯಲ್ಲಿ ತೀರ್ಪಿನ ಪುನರ್ ಪರಿಶೀಲನೆಗೆ ಆಧಾರವಾದ ಯಾವ ಹೊಸ ಅಂಶವೂ ಇಲ್ಲ. ಅದರಲ್ಲಿ ಹೇಳಿದ ವಿಚಾರಗಳನ್ನು ತನ್ನ ಮುಖ್ಯ ತೀರ್ಪಿನಲ್ಲೇ ಸುಪ್ರೀಂಕೋರ್ಟ್ ಪರಿಗಣಿಸಿದೆ ಎಂದು ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿತು. ನ್ಯಾಯಮೂರ್ತಿಗಳಾದ
ಅಶೋಕ ಭೂಷಣ್ ಮತ್ತು ಎಎಸ್ ಬೋಪಣ್ಣ ಅವರನ್ನೂ ಒಳಗೊಂಡಿರುವ ಪೀಠವು ’ಪುನರ್ ಪರಿಶೀಲನಾ ಅರ್ಜಿಯು ಮರು ವಿಚಾರಣಾ ಮನವಿ ಅಲ್ಲ. ೨೦೧೭ರ ಮುಖ್ಯ ತೀರ್ಪಿನಲ್ಲಿ ಪುನರ್ ಪರಿಶೀಲನೆ ಮಾಡಲು ಬೇಕಾದಂತಹ ಯಾವುದೇ ’ತಪ್ಪುಗಳೂ’
ಕಂಡು ಬಂದಿಲ್ಲ’ ಎಂದು ಹೇಳಿ, ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತು. ಇದರೊಂದಿಗೆ ಅಪರಾಧಿಗಳಿಗೆ ಮರಣದಂಡನೆಯನ್ನು ಸುಪ್ರೀಂಕೋರ್ಟ್ ಮತ್ತೆ ದೃಢ ಪಡಿಸಿತು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ, ದೆಹಲಿಯ ವಿಚಾರಣಾ ನ್ಯಾಯಾಲಯವು ೨೩ರ ಹರೆಯದ ಫಿಸಿಯೋಥೆರೆಪಿ ವಿದ್ಯಾರ್ಥಿನಿ ಮೇಲೆ ೨೦೧೨ರಲ್ಲಿ ಸಾಮೂಹಿಕ ಅತ್ಯಚಾರ ಎಸಗಿ ಕೊಲೆಗೈದ ಪ್ರಕರಣದ ಶಿಕ್ಷಿತ ಅಪರಾಧಿಗಳನ್ನು ಗಲ್ಲಿಗೇರಿಸಲು ತತ್ ಕ್ಷಣ ’ಮರಣ ವಾರಂಟ್’
(ಬ್ಲ್ಯಾಕ್ ವಾರಂಟ್) ಜಾರಿಗೊಳಿಸುವಂತೆ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿತು. ನಾಲ್ವರೂ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ಬ್ಲ್ಯಾಕ್ ವಾರಂಟ್ ಜಾರಿಗೊಳಿಸುವಂತೆ ಪೊಲೀಸರು ಮಾಡಿದ ಮನವಿಯ ಮೇಲಿನ ವಾದ ಆಲಿಸಿ ನ್ಯಾಯಾಧೀಶ ಸತೀಶ್ ಕುಮಾರ್ ಅರೋರ ಅವರು ’ಬ್ಲ್ಯಾಕ್ ವಾರಂಟ್ ಜಾರಿಗೆ ಮುನ್ನ ಶಿಕ್ಷಿತರಲ್ಲಿ ಒಬ್ಬ ಸಲ್ಲಿಸಿರುವ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವವರೆಗೆ ಕಾಯಲು ತಾನು ಬಯಸಿರುವುದಾಗಿ ಹೇಳಿದರು. ‘ಈ ವಾದಗಳನ್ನು ನಾನು
ಆಲಿಸುವುದಿಲ್ಲ. ಕ್ಷಮಾದಾನ ಅರ್ಜಿಗಳು ಇನ್ನೂ ಬಾಕಿ ಉಳಿದಿವೆ ಎಂಬುದು ವಾಸ್ತವಾಂಶ’
ಎಂದು ಆರೋರಾ ತಮ್ಮ ತೀರ್ಪಿನಲ್ಲಿ ತಿಳಿಸಿದರು. ಶಿಕ್ಷಿತ ವ್ಯಕ್ತಿಗಳಿಗೆ ಅವರು ಚಲಾಯಿಸಬಹುದಾದ ಕಾನೂನುಬದ್ಧ ಪರಿಹಾರಗಳ ಬಗ್ಗೆ ವಿವರಿಸಿ ಹೊಸದಾಗಿ ನೋಟಿಸ್ ಜಾರಿ ಮಾಡುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ಆದೇಶ ನೀಡಿದ ಸತೀಶ್ ಕುಮಾರ್ ವಿಚಾರಣೆಯನ್ನು ಜನವರಿ ೭ಕ್ಕೆ ಮುಂದೂಡಿದರು. ನ್ಯಾಯಾಧೀಶರು
ವಿಚಾರಣೆಯನ್ನು ಮುಕ್ತಾಯಗೊಳಿಸುತ್ತಿದ್ದಂತೆಯೇ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದ ಸಂತ್ರಸ್ಥೆಯ ತಾಯಿ ನ್ಯಾಯಾಲಯದಲ್ಲೇ ಗಳಗಳನೆ ಅತ್ತರು. ’ನಮಗೆ ಯಾವ ಹಕ್ಕುಗಳೂ ಇಲ್ಲ.. ನಾವು ಎಲ್ಲಿಗೇ ಹೋಗಲಿ, ಜನರು ಅವರ (ಶಿಕ್ಷಿತರ) ಹಕ್ಕುಗಳ ಬಗ್ಗೆ ಮಾತನಾಡುವುದೇ ಕೇಳಿಸುತ್ತದೆ. ನಮ್ಮ ಹಕ್ಕುಗಳ ಗತಿ ಏನು?’ ಎಂದು ಆಕೆ ಅಳುತ್ತಾ ಪ್ರಶ್ನಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಅಟಾರ್ನಿ ಜನರಲ್
ಕೆಕೆ ವೇಣುಗೋಪಾಲ್ ಅವರು ಭಾರತದ ಸುಪ್ರೀಂಕೋರ್ಟ್ ಕನಿಷ್ಠ ಒಂದು ವಿಷಯದಲ್ಲಾದರೂ ಪಾಕಿಸ್ತಾನಿ ಸುಪ್ರೀಂಕೋರ್ಟ್ನ್ನು ಅನುಸರಿಸಬೇಕು ಎಂದು 2019 ಡಿಸೆಂಬರ್ 18ರ ಬುಧವಾರ ಬಯಸಿದರು. ಪೌರತ್ವ
ತಿದ್ದುಪಡಿ ಕಾಯ್ದೆ ವಿರುದ್ಧದ ವಿಚಾರಣೆ ಕಾಲದಲ್ಲಿ ತಮ್ಮ ಬಯಕೆಯನ್ನು ಪ್ರಕಟಿಸಿದ ವೇಣುಗೋಪಾಲ್ ಅವರು ನ್ಯಾಯಾಲಯ ಕೊಠಡಿಯ ಕೇಂದ್ರದಲ್ಲಿ ಪೋಡಿಯಂ ಇರಬೇಕು, ಆಗ ಒಂದು ಸಮಯದಲ್ಲಿ
ಒಬ್ಬ ವಕೀಲರಿಗೆ ಮಾತ್ರ ವಾದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸುಪ್ರೀಂಕೋರ್ಟಿನಲ್ಲಿ
ಏಕಕಾಲಕ್ಕೆ ಹಲವಾರು ವಕೀಲರು ಮಾತನಾಡುವುದು ಸಂಪೂರ್ಣ ಅನುಚಿತ ಎನಿಸುತ್ತದೆ ಎಂದು ವೇಣುಗೋಪಾಲ್ ನುಡಿದರು. ‘ನಾವು
ಕೂಡಾ ಪಾಕಿಸ್ತಾನದ ಸುಪ್ರೀಂಕೋರ್ಟನ್ನು ಅನುಸರಿಸೋಣ. ಅಲ್ಲಿ ಕೇಂದ್ರ ಭಾಗದಲ್ಲಿ ಒಂದು ಪೋಡಿಯಂ ಇದೆ. ಮತ್ತು ಒಂದು ಸಮಯದಲ್ಲಿ ಒಬ್ಬ ವಕೀಲ ಮಾತ್ರ ವಾದಿಸಬಹುದು. ಇಲ್ಲಿಯಂತೆ ೧೦ ವಕೀಲರು ಒಂದೇ
ವೇಳೆಯಲ್ಲಿ ಮಾತನಾಡುವುದಿಲ್ಲ. ಇದರಿಂದಾಗಿ ನಿಮಗೆ ಏನೂ ಅರ್ಥವಾಗುವುದಿಲ್ಲ’ ಎಂದು
ಹಿರಿಯ ವಕೀಲ ಹೇಳಿದರು. ಅಟಾರ್ನಿ ಜನರಲ್
ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆ ವೇಳೆಯಲ್ಲಿ ಭಾರತ ಸರ್ಕಾರದ ಪರವಾಗಿ ಹಾಜರಾಗಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕಲ್ಪಿಸುವ ಪೌರತ್ವ (ತಿದ್ದುಪಡಿ) ಕಾನೂನಿನ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ 2019 ಡಿಸೆಂಬರ್ 18ರ ಬುಧವಾರ ನಿರಾಕರಿಸಿತು, ಆದರೆ
ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ನಿರ್ಧರಿಸಿತು. ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಮನವಿಗಳನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು. ಭಾರತದ
ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ, ನ್ಯಾಯಮೂರ್ತಿಗಳಾದ
ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನು ಒಳಗೊಂಡ ಪೀಠವು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಲ್ಲಿಸಿದ ಅರ್ಜಿಗಳೂ ಸೇರಿದಂತೆ ಒಟ್ಟು ೫೯ ಅರ್ಜಿಗಳ ವಿಚಾರಣೆಗೆ
2020
ಜನವರಿ
೨೨ನೇ ದಿನಾಂಕವನ್ನು ನಿಗದಿ ಪಡಿಸಿತು. ಪೌರತ್ವ ತಿದ್ದುಪಡಿ ಕಾಯ್ದೆಯ ಉದ್ದೇಶ, ಗುರಿ ಮತ್ತು ವಿವರಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಬೇಕು ಎಂಬುದಾಗಿ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಮಾಡಿದ ಮನವಿಯನ್ನು ಒಪ್ಪಿದ ಪೀಠ, ನಾಗರಿಕರಲ್ಲಿ
ಕಾಯ್ದೆ ಬಗ್ಗೆ ಅರಿವು ಮೂಡಿಸಲು ಶ್ರಾವ್ಯ-ದೃಶ್ಯ (ಆಡಿಯೋ-ವಿಶುವಲ್) ಮಾಧ್ಯಮವನ್ನು ಬಳಸುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಕೆ
ಕೆ ವೇಣುಗೋಪಾಲ್ ಅವರಿಗೆ ಸೂಚಿಸಿತು. ಸಲಹೆಯನ್ನು ಒಪ್ಪಿದ
ವೇಣುಗೋಪಾಲ್ ಅವರು ಸರ್ಕಾರವು ಈ ನಿಟ್ಟಿನಲ್ಲಿ ಅಗತ್ಯ
ಕ್ರಮ ಕೈಗೊಳ್ಳುವುದು ಎಂದು ಹೇಳಿದರು. ವಿಚಾರಣೆ ವೇಳೆಯಲ್ಲಿ ಕೆಲವು ಅರ್ಜಿಗಳಿಗೆ ಸಂಬಂಧಿಸಿದಂತೆ ಹಾಜರಾದ ಕೆಲವು ವಕೀಲರು ನೂತನ ಕಾಯ್ದೆಯ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡುವಂತೆ
ಮನವಿ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಟಾಟಾ ಸನ್ಸ್ ವಿರುದ್ದದ ಕಾನೂನು ಸಮರದಲ್ಲಿ ಸೈರಸ್ ಮಿಸ್ತ್ರಿ ಅವರಿಗೆ 2019
ಡಿಸೆಂಬರ್ 18ರ ಬುಧವಾರಕೊನೆಗೂ ಜಯ ಲಭಿಸಿತು. ಟಾಟಾ ಸನ್ಸ್ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಸೈರಸ್ ಮಿಸ್ತ್ರಿ ಅವರನ್ನು ಮರು ನೇಮಕ ಮಾಡುವಂತೆ ರಾಷ್ಟ್ರೀಯ ಕಂಪೆನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯು (ಎನ್ಸಿಎಲ್ಎಟಿ) ಆದೇಶ ನೀಡಿತು. ಕಾನೂನು ಬಾಹಿರವಾಗಿ ಎನ್. ಚಂದ್ರಶೇಖರನ್ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದೂ ಎನ್ ಸಿಎಲ್ಎಟಿ ತನ್ನ ಆದೇಶದಲ್ಲಿ ತಿಳಿಸಿತು. ತನ್ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಟಾಟಾ ಸನ್ಸ್ ಕಂಪೆನಿಗೆ ನಾಲ್ಕು ವಾರಗಳ ಕಾಲಾವಕಾಶವನ್ನು ನ್ಯಾಯಮಂಡಳಿ ನೀಡಿತು. ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸಿದ್ದನ್ನು ಪ್ರಶ್ನಿಸಿ, ಮಿಸ್ತ್ರಿ ಅವರು ಮುಂಬೈಯ ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯಮಂಡಳಿಯ (ಎನ್ಸಿಎಲ್ಟಿ) ಮೆಟ್ಟಿಲೇರಿದ್ದರು. ತಮ್ಮ ಪದಚ್ಯುತಿ ವಿಷಯದಲ್ಲಿ ಟಾಟಾ ಸನ್ಸ್ ನಿರ್ದೇಶಕ ಮಂಡಳಿ ಮತ್ತು ರತನ್ ಟಾಟಾ ಅವರಿಂದ ದುರ್ನಡತೆ ನಡೆದಿದೆ ಎಂದು ಮಿಸ್ತ್ರಿ ಅವರು ಆಪಾದಿಸಿದ್ದರು. ಅಧ್ಯಕ್ಷನನ್ನು ಪದಚ್ಯುತಿಗೊಳಿಸಲು ಕಾಯ್ದೆಯಲ್ಲಿ ಅವಕಾಶ ಇದೆ. ನಿರ್ದೇಶಕ ಮಂಡಳಿಯ ೯ ಸದಸ್ಯರ ಪೈಕಿ ೭ ಮಂದಿ ಮಿಸ್ತ್ರಿ ಅವರ ಪದಚ್ಯುತಿ ನಿರ್ಧಾರದ ಪರ ಮತ ಚಲಾಯಿಸಿದ್ದರು ಎಂದು ಟಾಟಾ ಸಮೂಹವು ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು. ೨೦೧೮ರ ಜುಲೈ ತಿಂಗಳಲ್ಲಿ ಮಿಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಎನ್ಸಿಎಲ್ಟಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಿಸ್ತ್ರಿ ಅವರು ಎನ್ಸಿ ಎಲೆಟಿಗೆ ಅರ್ಜಿ ಸಲ್ಲಿಸಿದ್ದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಕೇಂದ್ರ ಸರ್ಕಾರವು ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಬಳಿಕ ಇದೇ ಮೊದಲ ಬಾರಿಗೆ 2019 ಡಿಸೆಂಬರ್ 18ರ ಬುಧವಾರ ಶ್ರೀನಗರದ ಜಾಮಿಯಾ ಮಸೀದಿ ಬಾಗಿಲನ್ನು ಪುನಃ ತೆರೆಯಲಾಯಿತು. ಕಳೆದ ೪ ತಿಂಗಳಲ್ಲಿ ಇದೇ ಪ್ರಥಮ ಬಾರಿಗೆ ಅಧಿಕಾರಿಗಳು ಐತಿಹಾಸಿಕ ಜಾಮಿಯಾ ಮಸೀದಿಯ ಬಾಗಿಲು ತೆರೆದಿದ್ದು, ಈ ವಾರ ಪ್ರಾರ್ಥನೆಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿದವು. ಆಗಸ್ಟ್ ೫ರಂದು ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದುಪಡಿಸಿದ ಬಳಿಕ ಮಸೀದಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಸತತ ೧೩೬ ದಿನಗಳ ಬಳಿಕ ಈದಿನ ಮಧ್ಯಾಹ್ನ ಮುಸ್ಲಿಂ ಬಾಂಧವರು ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸುಮಾರು ೧೦೦ ರಿಂದ೧೫೦ ಜನರು ಮಸೀದಿ ಒಳಗೆ ಕೂತು ಪ್ರಾರ್ಥನೆ ಸಲ್ಲಿಸಿದರು. "ಭದ್ರತಾ ಪಡೆಯನ್ನು ತೆರವುಗೊಳಿಸಿದ ಬಳಿಕ ಮಸೀದಿಯನ್ನು ಪುನಃ ತೆರೆಯುವ ಬಗ್ಗೆ ಮಂಗಳವಾರ ಸಭೆ ನಡೆಸಲಾಗಿತ್ತು. ಬುಧವಾರ ಮಧ್ಯಾಹ್ನ(ಜುಹರ್) ಮತ್ತು ತಡ ಮಧ್ಯಾಹ್ನ(ಅಸರ್) ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು. ಮಾರುಕಟ್ಟೆಯನ್ನು ಸಹ ತೆರೆಯಲಾಗಿದ್ದು, ಪರಿಸ್ಥಿತಿ ಸಾಮಾನ್ಯವಾಗಿದೆ," ಎಂದು ಮಸೀದಿಯ ವ್ಯವಸ್ಥಾಪಕ ಮಂಡಳಿಯ ಸದಸ್ಯರೊಬ್ಬರು ತಿಳಿಸಿದರು. ಈ ಪ್ರದೇಶದಲ್ಲಿ ಕೆಲವು ವಾರಗಳ ಬಳಿಕ ಭದ್ರತಾ ನಿರ್ಬಂಧವನ್ನು ತೆರವುಗೊಳಿಸಿದ್ದರೂ ಸಹ, ಸ್ಥಳೀಯ ನಿವಾಸಿಗಳು ಜಾಮಿಯಾ ಮಸೀದಿಗೆ ತೆರಳಲು ನಿರಾಕರಿಸಿದ್ದರು. "ನಾನು ಈದಿನ ನಮಾಜ್ ಮಾಡಿ ಬಂದೆ. ಈಗ ನಾನು ಬಹಳ ಖುಷಿಯಾಗಿದ್ದೇನೆ. ಮುಂದಿನ ಶುಕ್ರವಾರವೂ ನಾನು ಪ್ರಾರ್ಥನೆ ಸಲ್ಲಿಸುತ್ತೇನೆ. ಮತ್ತೆ ಮಸೀದಿ ಬಾಗಿಲನ್ನು ಮುಚ್ಚದಂತೆ ನಾನು ಒಂದು ಮನವಿ ಮಾಡುತ್ತೇನೆ. ಇದು ದೇವರ ಮನೆ. ಇಲ್ಲಿ ನಿಷೇಧಾಜ್ಞೆ ಹೇರಬೇಡಿ," ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

No comments:
Post a Comment