ನಾನು ಮೆಚ್ಚಿದ ವಾಟ್ಸಪ್

Thursday, December 12, 2019

ಇಂದಿನ ಇತಿಹಾಸ History Today ಡಿಸೆಂಬರ್ 12

2019: ನವದೆಹಲಿ: ಅಯೋಧ್ಯೆಯ ವಿವಾದಾತ್ಮಕ ನಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಾರಿ ಸುಗಮಗೊಳಿಸಿ ಅಯೋಧ್ಯಾ ಪ್ರಕರಣದಲ್ಲಿ ಪಂಚ ಸದಸ್ಯ ಸಂವಿಧಾನ ಪೀಠವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಪುನರ್ ಪರಿಶೀಲನಾ ಅರ್ಜಿಗಳನ್ನೂ ಸುಪ್ರೀಂಕೋರ್ಟ್  2019 ಡಿಸೆಂಬರ್ 12ರ ಗುರುವಾರ ವಜಾಗೊಳಿಸಿತು. ಸಂವಿಧಾನ ಪೀಠದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಎಲ್ಲ ೧೮ ಪ್ರಕರಣಗಳನ್ನೂಕೊಠಡಿಯ ಒಳಗೆಪರಿಶೀಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವುಅರ್ಹತೆ ಇಲ್ಲಎಂಬ ನೆಲೆಯಲ್ಲಿ ಅವೆಲ್ಲವನ್ನೂ ವಜಾಗೊಳಿಸಿತು. ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಅಶೋಕ ಭೂಷಣ್, ಎಸ್ ನಜೀರ್ ಮತ್ತು ನಿವೃತ್ತ ಸಿಜೆಐ ರಂಜನ್ ಗೊಗೋಯಿ ಅವರ ಬದಲಿಗೆ ನೇಮಕಗೊಂಡಿದ್ದ ಸಂಜೀವ ಖನ್ನಾ ಅವರು ಪೀಠದ ಇತರ ಸದಸ್ಯರಾಗಿದ್ದರು. ಪೀಠವು ಸೂಕ್ಷ್ಮ ವಿವಾದದಲ್ಲಿ ನಾಲ್ಕು ಮೂಲ ಖಟ್ಲೆಗಳಲ್ಲಿ ಕಕ್ಷಿದಾರರಾಗಿದ್ದವರ ಪುನರ್ ಪರಿಶೀಲನಾ ಅರ್ಜಿಗಳನ್ನು ಮಾತ್ರವೇ ಪರಿಗಣಿಸಿತು.  ಪಂಚ ಸದಸ್ಯ ಸಂವಿಧಾನ ಪೀಠದ ಗುರುವಾರದ ಆದೇಶವು ರಾಮಲಲ್ಲಾನಿಗೆ .೭೭ ಎಕರೆ ವಿವಾದಾತ್ಮಕ ಭೂಮಿಯನ್ನು ನೀಡಿ ನವೆಂಬರ್ ೯ರಂದು ನೀಡಲಾದ ಸರ್ವಾನುಮತದ ತೀರ್ಪಿನ ಅನುಷ್ಠಾನಕ್ಕೆ ಹಾದಿ ಸುಗಮಗೊಳಿಸಿತು. ಸಲ್ಲಿಕೆಯಾಗಿದ್ದ ೧೮ ಪುನರ್ ಪರಿಶೀಲನಾ ಅರ್ಜಿಗಳಲ್ಲಿ ಅರ್ಜಿಗಳನ್ನು ಹಿಂದಿನ ಖಟ್ಲೆಗಳಲ್ಲಿ ಕಕ್ಷಿದಾರರಾಗಿದ್ದವರು ಸಲ್ಲಿಸಿದ್ದರು ಮತ್ತು ಇತರ ಅರ್ಜಿಗಳನ್ನುಮೂರನೇ ಕಕ್ಷಿದಾರರುಸಲ್ಲಿಸಿದ್ದರು.  ಮೂಲಖಟ್ಲೆಯಲ್ಲಿ ಕಕ್ಷಿದಾರರಾಗಿ ಇಲ್ಲದೇ ಇದ್ದವರು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು ಪರಿಗಣಿಸಲು ಪೀಠವು ತಿರಸ್ಕರಿಸಿತು. ’ಮೂರನೇ ಕಕ್ಷಿದಾರರಪೈಕಿ ೪೦ ಮಂದಿ ನಾಗರಿಕ ಹಕ್ಕುಗಳ ಕಾರ್ಯಕರ್ತರೂ ಸೇರಿದ್ದು ಅವರು ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಲು ಒಟ್ಟಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.   ಪುನರ್ ಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸುವುದರೊಂದಿಗೆ ಅರ್ಜಿಗಳ ಮೇಲೆ ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು ಎಂಬುದಾಗಿ ಕಕ್ಷಿದಾರರು ಸಲ್ಲಿಸಿದ್ದ ಮನವಿ ಕೂಡಾ ವಜಾಗೊಂಡಂತಾಗಿದೆ. ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ನವೆಂಬರ್ ೯ರಂದು ನೀಡಿದ ತನ್ನ ಸರ್ವಾನುಮತದ ತೀರ್ಪಿನಲ್ಲಿ ಅಯೋಧ್ಯೆಯ .೭೭ ಎಕರೆ ವಿವಾದಾತ್ಮಕ ಭೂಮಿ ಪೂರ್ಣವಾಗಿ ರಾಮಲಲ್ಲಾಗೆ  (ಬಾಲರಾಮ) ಸೇರಿದ್ದು ಎಂಬುದಾಗಿ ಹೇಳಿ, ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಸುನ್ನಿ ವಕ್ಫ್ ಮಂಡಳಿಗೆ ಎಕರೆ ಪರ್ಯಾಯ ಭೂಮಿಯನ್ನು ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ  ನಿರ್ದೇಶನ ನೀಡಿತ್ತು.
.(ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ:  ಸಂಸತ್ತಿನ ಉಭಯ ಸದನಗಳಲ್ಲಿ ಪ್ರಚಂಡ ಬಹುಮತದೊಂದಿಗೆ ಅಂಗೀಕಾರಗೊಂಡಿರುವ  ‘ಪೌರತ್ವ (ತಿದ್ದುಪಡಿ) ಮಸೂದೆಗೆ (ಸಿಎಬಿ) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2019 ಡಿಸೆಂಬರ್ 12ರ ಗುರುವಾರ ರಾತ್ರಿ ತಮ್ಮ ಅಂಕಿತ ಹಾಕಿದ್ದು, ಅದು ಕಾನೂನು ಆಗಿ ಜಾರಿಯಾಯಿತು. ಅಸ್ಸಾಮ್, ಮೇಘಾಲಯ, ತ್ರಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಭಾರೀ ವಿರೋಧ, ಹಿಂಸಾತ್ಮಕ ಪ್ರತಿಭಟನೆಗಳ ನಡುವೆಯೇ  ಮುಸ್ಲಿಮ್ ಪ್ರಾಬಲ್ಯದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ದೇಶಗಳಿಂದ ಧಾರ್ಮಿಕ ಕಿರುಕುಳಕ್ಕೆ ಗುರಿಯಾಗಿ ಭಾರತಕ್ಕೆ ವಲಸೆ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಭಾರತದ ಪೌರತ್ವವು ಕಾನೂನಿನ ಜಾರಿಯೊಂದಿಗೆ ಲಭಿಸಿತು. ಇದೇ ಮೊದಲ ಬಾರಿಗೆ ಧಾರ್ಮಿಕ ನೆಲೆಯಲ್ಲಿ ಪೌರತ್ವ ಒದಗಿಸುವ ಮಸೂದೆಯನ್ನು ಬಿಜೆಪಿ ನೇತೃತ್ವದ  ಎನ್ ಡಿಎ ಸರ್ಕಾರವು 2019 ಡಿಸೆಂಬರ್ 9ರ ಸೋಮವಾರ ಲೋಕಸಭೆಯಲ್ಲಿ ಮತ್ತು 2019 ಡಿಸೆಂಬರ್ 11ರ ಬುಧವಾರ ರಾಜ್ಯಸಭೆಯಲ್ಲಿ ಮಂಡಿಸಿ , ವಿರೋಧ ಪಕ್ಷಗಳ ತೀವ್ರ ವಿರೋಧ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಪ್ರಬಲ ಸಮರ್ಥನೆಯ ಬಳಿಕ ಪ್ರಚಂಡ ಬಹುಮತದೊಂದಿಗೆ ಉಭಯ ಸದನಗಳ ಅನುಮೋದನೆಯನ್ನೂ ಪಡೆದಿತ್ತು.(ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಕಾವು ಅಸ್ಸಾಮಿನ ರಾಜಧಾನಿ ಗುವಾಹಟಿಯಲ್ಲಿ ತೀವ್ರಗೊಂಡಿದ್ದು 2019 ಡಿಸೆಂಬರ್ 12ರ ಗುರುವಾರ  ಪೊಲೀಸ್ ಗೋಲಿಬಾರಿಗೆ ಮೂರು ಮಂದಿ ಬಲಿಯಾದರು. ಇದೇ ವೇಳೆಗೆ ಪ್ರತಿಭಟನೆ ಹಾಗೂ ಹಿಂಸಾಚಾರ ಮೇಘಾಲಯದ ರಾಜಧಾನಿ ಶಿಲ್ಲಾಂಗ್ ಗೂ ವ್ಯಾಪಿಸಿದೆ ಎಂದು ವರದಿಗಳು ತಿಳಿಸಿದವು. ಅಸ್ಸಾಮಿನ ರಾಜಧಾನಿ ಗುವಾಹಟಿಯಲ್ಲಿ ಹಿಂಸಾಚಾರ ನಿರತ ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಗಾಯಗೊಂಡ ಕನಿಷ್ಠ ಮೂವರು ಗಾಯಗೊಂಡಿದ್ದು, ಬಳಿಕ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದರು. ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ತರುವಾಗಲೇ ಆತ ಸಾವನ್ನಪ್ಪಿದ್ದು, ಇನ್ನೊಬ್ಬ ವ್ಯಕ್ತಿ ಗಾಯಗಳ ಪರಿಣಾಮವಾಗಿ ಚಿಕಿತ್ಸೆ ಕಾಲದಲ್ಲಿ ಸಾವನ್ನಪ್ಪಿದ ಎಂದು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದರು. ಹಿಂಸಾಚಾರ ಮುಂದುವರೆದ ಹಿನ್ನೆಲೆಯಲ್ಲಿ ಅಸ್ಸಾಂ ರಾಜಧಾನಿಗೆ ಸೇನೆಯನ್ನು ಕರೆಸಲಾಗಿದೆ. ಪೊಲೀಸರು ಮತ್ತು ಅರೆ ಸೇನಾ ಪಡೆಗಳ ಜೊತೆಗೆ ಸಹಸ್ರಾರು ಪ್ರತಿಭಟನಕಾರರು ನೇರ ಸಂಘರ್ಷಕ್ಕೆ ಇಳಿದಿದ್ದಾರೆ ಎಂದು ವರದಿಗಳು ಹೇಳಿವೆ..(ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ
:
 ಮುಸ್ಲಿಂ ಬಾಹುಳ್ಯವಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ದೇಶಗಳಿಂದ ಕಿರುಕುಳದ ಕಾರಣಕ್ಕಾಗಿ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ನಿರಾಶ್ರಿತರಿಗೆ 
ಭಾರತೀಯಪೌರತ್ವ ಒದಗಿಸುವಪೌರತ್ವ (ತಿದ್ದುಪಡಿ) ಮಸೂದೆಯನ್ನು ಪ್ರಶ್ನಿಸಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್)  2019 ಡಿಸೆಂಬರ್  12ರ ಗುರುವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತು.  ಇದೇ ವೇಳೆಗೆ ಬಾಂಗ್ಲಾದೇಶದ ಗೃಹ ಸಚಿವ ಆಸಾದುಜ್ಜಾಮಾನ್ ಖಾನ್ ಮತ್ತು  ವಿದೇಶಾಂಗ ಸಚಿವ .ಕೆ.ಅಬ್ದುಲ್ ಮೊಮೆನ್ ತಮ್ಮ ಭಾರತ ಭೇಟಿಯನ್ನು ರದ್ದು ಪಡಿಸಿದರು. ಪೌರತ್ವ (ತಿದ್ದುಪಡಿ) ಮಸೂದೆಗೆ ಲೋಕಸಭೆಯು ವಿಪಕ್ಷಗಳ ಭಾರೀ ಪ್ರತಿಭಟನೆಯ ಸೋಮವಾರ ತನ್ನ ಅನುಮೋದನೆ ನೀಡಿದ್ದರೆ, ರಾಜ್ಯಸಭೆಯು ಬುಧವಾರ ತನ್ನ ಒಪ್ಪಿಗೆ ನೀಡಿದ್ದು, ಇದರೊಂದಿಗೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಲಭಿಸಿದೆ. ರಾಷ್ಟ್ರಪತಿಗಳ ಅಂಕಿತದೊಂದಿಗೆ ಮಸೂದೆ ಶಾಸನವಾಗಿ ಜಾರಿಗೆ ಬರಲಿದೆಸಂವಿಧಾನವು ನೀಡಿರುವ ಸಮಾನತೆಯ ಮೂಲಭೂತ ಹಕ್ಕನ್ನು ಮಸೂದೆಯು ಉಲ್ಲಂಘಿಸಿದೆ ಎಂದು ಐಯುಎಂಎಲ್ ಸುಪ್ರೀಂಕೋರ್ಟಿಗೆ ಸಲ್ಲಿಸಿದ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತು. ಬಾಂಗ್ಲಾದೇಶದ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೊಮೆನ್ ಅವರು ಭಾರತದ ವಿದೇಶಾಂಗ ಸಚಿವಾಲಯವು ಆಯೋಜಿಸಿದ್ದ ದೆಹಲಿ ಮಾತುಕತೆಗೆ ಕೆಲವೇ ಗಂಟೆಗಳ ಮುನ್ನ ಗುರುವಾರ ತಮ್ಮ ಭಾರತ ಭೇಟಿಯನ್ನು ರದ್ದು ಪಡಿಸಿದರು. ಅದಾದ ಕೆಲವು ಗಂಟೆಗಳ ಬಳಿಕ ಬಾಂಗ್ಲಾದೇಶದ ಗೃಹ ಸಚಿವ ಅಸಾದುಜ್ಜಾಮಾನ್ ಖಾನ್ ಅವರು ತಮ್ಮ ಶಿಲ್ಲಾಂಗ್ ಶುಕ್ರವಾರದ ಖಾಸಗಿ ಭೇಟಿಯನ್ನು ರದ್ದು ಪಡಿಸಿರುವುದಾಗಿ ಪ್ರಕಟಿಸಿದರು. ಕಿರುಕುಳಕ್ಕೆ ಒಳಗಾದ ನೆಲೆಯಲ್ಲಿ ಭಾರತಕ್ಕೆ ವಲಸೆ ಬಂದ ಮೂರು ರಾಷ್ಟ್ರಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಕಲ್ಪಿಸುವ ಮಸೂದೆಗೆ ಭಾರತದ ಸಂಸತ್ತು ದಾರಿ ಸುಗಮಗೊಳಿಸಿದ ಒಂದು ದಿನದ ಬಳಿಕ ಬೆಳವಣಿಗೆ ನಡೆದಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)



No comments:

Post a Comment