ನಾನು ಮೆಚ್ಚಿದ ವಾಟ್ಸಪ್

Saturday, December 28, 2019

ಇಂದಿನ ಇತಿಹಾಸ History Today ಡಿಸೆಂಬರ್ 28

2019: ಮೊಗಾಡಿಶು: ಸೋಮಾಲಿಯಾದ ರಾಜಧಾನಿ ಮೊಗಾಡಿಶುವಿನ ಜನನಿಬಿಡ ಚೆಕ್ ಪಾಯಿಂಟಿನಲ್ಲಿ 2019 ಡಿಸೆಂಬರ್ 28ರ ಶನಿವಾರ ಬಾಂಬ್ ತುಂಬಿದ್ದ ವಾಹನವೊಂದು ಸ್ಫೋಟಗೊಂಡು ೯೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡರು. ಇತ್ತೀಚಿನ ದಿನಗಳಲ್ಲೇ ಅತ್ಯಂತ ಭೀಕರವಾದ ದಾಳಿಗೆ ಬಲಿಯಾದವರಲ್ಲಿ ೧೭ ಮಂದಿ ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಇಬ್ಬರು ಟರ್ಕಿ ರಾಷ್ಟ್ರೀಯರು ಸೇರಿದ್ದಾರೆ ಎಂದು ವರದಿ ತಿಳಿಸಿತು.ಬಾಂಬ್ ಭರಿತ ವಾಹನದ ಸ್ಫೋಟದ ಪರಿಣಾಮವಾಗಿ ಧ್ವಂಸಗೊಂಡಿರುವ ಮಿನಿಬಸ್ ಒಂದರ ರಕ್ತಸಿಕ್ತ ಅವಶೇಷಗಳಿಂದ ಮೃತರ ಶವಗಳನ್ನು ರಕ್ಷಣಾ ಸಿಬ್ಬಂದಿ ಸಾಗಿಸಿದರು ಎಂದು ವರದಿ ಹೇಳಿತು. ಮೃತರ ಸಂಖ್ಯೆ ೯೦ಕ್ಕೂ ಹೆಚ್ಚಿರಬಹುದು ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದು ತಿಳಿಸಿದೆ. ೧೭ ಪೊಲಿಸ್ ಅಧಿಕಾರಿಗಳೂ ಸೇರಿದಂತೆ ೯೦ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ ಎಂದು ಸೋಮಾಲಿ ಸಂಸತ್ ಸದಸ್ಯರೊಬ್ಬರು ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ
:
ಕಾಂಗ್ರೆಸ್ ಪಕ್ಷದ ೧೩೫ನೇ ಸ್ಥಾಪನಾ ದಿನದ ಅಂಗವಾಗಿ 2019 ಡಿಸೆಂಬರ್ 28ರ
ಶನಿವಾರ ನಡೆದ ಸಮಾರಂಭದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಮತ್ತು ಪ್ರಸ್ತಾಪಿತ ರಾಷ್ಟ್ರೀಯ ಪೌರ ನೋಂದಣಿಯನ್ನು (ಎನ್ಆರ್ಸಿ) ನೋಟು ಅಮಾನ್ಯೀಕರಣಕ್ಕೆ ಹೋಲಿಕೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಉಗ್ರ ವಾಕ್ ಪ್ರಹಾರ ನಡೆಸಿದರು. ಎನ್ಪಿಆರ್ ಮತ್ತು ಎನ್ಆರ್ಸಿ ಕಸರತ್ತುಗಳನ್ನುನೋಟ್ಬಂದಿ ನಂ. (ನೋಟು ಅಮಾನ್ಯೀಕರಣ ನಂ.) ಎಂಬುದಾಗಿ ಬಣ್ಣಿಸಿದ ರಾಹುಲ್ ಕಸರತ್ತುಗಳು ನೋಟು ಅಮಾನ್ಯೀಕರಣಕ್ಕಿಂತಲೂ  ಗಂಡಾಂತರಕಾರಿ ಆಗಲಿವೆಎಂದು ಎಚ್ಚರಿಸಿದರು. ಎನ್ಪಿಆರ್ ಮತ್ತು ಪ್ರಸ್ತಾಪಿತ ಎನ್ಆರ್ಸಿ ವಿರುದ್ಧ ಶನಿವಾರ ರಾಷ್ಟ್ರಾದ್ಯಂತಧ್ವಜ ಮೆರವಣಿಗೆಗಳನ್ನು ನಡೆಸಿ ಪ್ರತಿಭಟನೆ ನಡೆಸುವ ಮೂಲಕಸಂವಿಧಾನ ರಕ್ಷಿಸಿ- ಭಾರತ ರಕ್ಷಿಸಿಸಂದೇಶವನ್ನು ಕಾಂಗ್ರೆಸ್ ಪಕ್ಷವು ಜನರಿಗೆ ರವಾನಿಸಿತು.ಮುಂಬೈ, ದೆಹಲಿ, ಕೋಲ್ಕತ ಮತ್ತು ಜೈಪುರ ಸೇರಿದಂತೆ ವಿವಿಧ ನಗರಗಳಲ್ಲಿ ಸರ್ಕಾರದಜನ ವಿರೋಧಿ ನೀತಿಗಳನ್ನುಪ್ರತಿಭಟಿಸಲು ಮತ್ತು ತಿದುಪಡಿ ಮಾಡಲಾದ ಪೌರತ್ವ  ಕಾಯ್ದೆ, ಎನ್ಪಿಆರ್ ಮತ್ತು ಎನ್ಆರ್ಸಿಯನ್ನು ಹಿಡಿದುಕೊಂಡು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಬೀದಿಗಳಿಗೆ ಇಳಿದರು. ‘ ಕಸರತ್ತಿನ ಮೂಲ ಕಲ್ಪನೆ ಎಲ್ಲ ಬಡ ಜನರಿಗೆ ನೀವು ಭಾರತೀಯರೋ ಅಥವಾ ಅಲ್ಲವೋ ಎಂಬುದಾಗಿ ಪ್ರಶ್ನಿಸುವುದಾಗಿದೆಎಂದು ರಾಹುಲ್ ಗಾಂಧಿಯವರು ಏಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ೧೩೫ನೇ ಸ್ಥಾಪನಾ ದಿನದ ಅಂಗವಾಗಿ ನಡೆದ ಧ್ವಜಾರೋಹಣದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಅಸ್ಸಾಂ ರಾಜ್ಯವನ್ನು ಹಿಂಸೆಯತ್ತ ತಳ್ಳುವ ಭೀತಿಯನ್ನು ತಂದೊಡ್ಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ಡಿಸೆಂಬರ್ 28ರ ಶನಿವಾರ ಕಳವಳ ವ್ಯಕ್ತ ಪಡಿಸಿದರು. ‘ಬಿಜೆಪಿಯ ನೀತಿಗಳ ಪರಿಣಾಮವಾಗಿ ಅಸ್ಸಾಂ ಮತ್ತು ಹಿಂಸೆಯ ಹಾದಿಗೆ ವಾಪಸಾಗುತ್ತಿದೆ ಎಂಬ ಭೀತಿ ನನಗಿದೆಎಂದು ತಿದ್ದುಪಡಿ ಮಾಡಲಾದ ಪೌರತ್ವ ಕಾಯ್ದೆಯನ್ನು ಉಲ್ಲೇಖಿಸುತ್ತಾ ರಾಹುಲ್ ಹೇಳಿದರು. ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ (ಎಎಎಸ್ಯು) ಪ್ರತಿನಿಧಿಗಳು ಮತ್ತು ಅಸ್ಸಾಂ ರಾಜ್ಯ ಸರ್ಕಾರ ಹಾಗೂ ಭಾರತ ಸರ್ಕಾರದ ಮಧ್ಯೆ ದಾಖಲೆ ರಹಿತ ವಲಸೆಗಾರರ ವಿರುದ್ಧ ಸಹಿ ಹಾಕಲಾದ ಅಸ್ಸಾಂ ಒಪ್ಪಂದದ ಸ್ಫೂರ್ತಿಯನ್ನು ಹಾಳುಗೆಡವಬಾರದು. ಒಪ್ಪಂದದ ಪರಿಣಾಮವಾಗಿಯೇ ಅಸ್ಸಾಮಿನಲ್ಲಿ ಶಾಂತಿ ಸ್ಥಾಪನೆಗೊಂಡಿತ್ತು ಎಂದು ಕಾಂಗ್ರೆಸ್ ನಾಯಕ ನುಡಿದರು. ‘ಬಿಜೆಪಿ ಎಲ್ಲಿಗೇ ಹೋಗಲಿ, ಅಲ್ಲಿ ದ್ವೇಷವನ್ನು ಹರಡುತ್ತದೆ. ಅಸ್ಸಾಮಿನಲ್ಲಿ ಯುವಕರು ಪ್ರತಿಭಟಿಸುತ್ತಿದ್ದಾರೆ, ಇತರ ರಾಜ್ಯಗಳಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ. ನೀವು ಏಕೆ ಗುಂಡು ಹಾರಿಸಬೇಕು ಮತ್ತು ಅವರನ್ನು ಕೊಲ್ಲಬೇಕು? ಬಿಜೆಪಿಯು ಜನರ ದನಿಯನ್ನು ಕೇಳಲು ಬಯಸುವುದಿಲ್ಲಎಂದು ಗುವಾಹಟಿಯಲ್ಲಿ ಆಸ್ವಿತ ರಖ್ಯಾರ್ ಸಾಂಬೇಕ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಹುಲ್ ಗಾಂಧಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ
: ಉತ್ತರಪ್ರದೇಶದ ಲಕ್ನೋದಲ್ಲಿ ಇಬ್ಬರು ಬಂಧಿತ ಕಾರ್ಯಕರ್ತರ ಕುಟುಂಬ ಭೇಟಿ   ಸದಸ್ಯರನ್ನು  ಮಾಡಲು ಹೊರಟಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಡೆದ ಪೊಲೀಸರು ಅವರೊಂದಿಗೆ ಒರಟಾಗಿ ವರ್ತಿಸಿದರೆಂದು ಆಪಾದಿಸಲಾದ ನಾಟಕಿಯ ಘಟನೆ 2019 ಡಿಸೆಂಬರ್ 28ರ ಶನಿವಾರ ಘಟಿಸಿತು. ಪ್ರಿಯಾಂಕಾ ಅವರು ನಗರದಲ್ಲಿ ನಡೆದ ಪೌರತ್ವ  ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ವೇಳೆಯಲ್ಲಿ ಬಂಧಿತರಾಗಿದ್ದ ಇಬ್ಬರು ಕಾರ್ಯಕರ್ತರ ಮನೆಗೆ ಭೇಟಿ ನೀಡುವ ಸಲುವಾಗಿ ಹೊರಟಿದ್ದರು. ಸುದ್ದಿ ಸಂಸ್ಥೆಯ ವರದಿ ಪ್ರಕಾರ ಪ್ರಿಯಾಂಕಾ ಗಾಂಧಿ ಅವರು ಪ್ರತಿಭಟನೆಗಳ ವೇಳೆಯಲ್ಲಿ ಬಂಧಿತರಾದ ಸದಾಫ್ ಜಫರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಎಸ್ಆರ್ ದಾರಾಪುರಿ ಅವರ ಕುಟುಂಬಗಳನ್ನು ಭೇಟಿ ಮಾಡಬಯಸಿದ್ದರು. ತಾವು ಪಯಣಿಸುತ್ತಿದ್ದ ವಾಹನವನ್ನು ದಿಢೀರನೆ ಅಡ್ಡಗಟ್ಟಲಾಯಿತು ಮತ್ತು ವಾಹನ ಮುಂದಕ್ಕೆ ಹೋಗದಂತೆ ಪೊಲೀಸರು ತಡೆದರು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.‘ಪೊಲೀಸರ ಮಾತುಗಳನ್ನು  ನಿರ್ಲಕ್ಷಿಸಿ ಪಕ್ಷ ಕಾರ್ಯಕರ್ತರೊಬ್ಬರ ಸ್ಕೂಟರ್ ಏರಿ ನಾನು ಪಯಣ ಮುಂದುವರೆಸಿದೆ. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಸ್ಕೂಟರನ್ನೂ ತಡೆಯಲಾಯಿತು. ನಾನು ಇಳಿದು ನಡೆದುಕೊಂಡು ಹೊರಟೆ. ಆದರೆ ಪ್ರಯೋಜನವಾಗಲಿಲ್ಲ. ಪೊಲೀಸರು ಮತ್ತೆ ಅಡ್ಡಗಟ್ಟಿದರು. ಅಡ್ಡಗಟ್ಟಿದ ಮಹಿಳಾಪೇದೆ ನನ್ನೊಂದಿಗೆ ಒರಟಾಗಿ ನಡೆದುಕೊಂಡರು ಎಂದು ಪ್ರಿಯಾಂಕಾ ದೂರಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


2019: ನವದೆಹಲಿ: ತಮ್ಮ ಮಿತಿಗೆ ಸೀಮಿತ ಪಡಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು 2019 ಡಿಸೆಂಬರ್ 28ರ ಶನಿವಾರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ತಿರುವನಂತಪುರಂನಲ್ಲಿ ಸಲಹೆ ಮಾಡಿದರು. ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಯ ದೇಶದ ವಿವಿಧ ಕಡೆಗಳಲ್ಲಿ ಹಿಂಸೆಗೆ ತಿರುಗಿದ್ದನ್ನು ಅನುಸರಿಸಿ ಜನರಲ್ ರಾವತ್ ಅವರು ಗುರುವಾರ  ಜನಸಮೂಹವನ್ನು ಕಿಚ್ಚಿಡುವಿಕೆ ಮತ್ತು ಹಿಂಸಾಚಾರದತ್ತ ಒಯ್ಯುವವರು ಜನ ನಾಯಕರಲ್ಲಎಂಬುದಾಗಿ ಹೇಳಿದ್ದರು.  ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳನ್ನು ಗುರುವಾರ ಟೀಕಿಸಿದ್ದ ಜನರಲ್ ಬಿಪಿನ್ ರಾವತ್ ಅವರು ಅಸಮರ್ಪಕ ದಿಕ್ಕಿನತ್ತ ಜನ ಸಮೂಹವನ್ನು  ಒಯ್ಯುತ್ತಿರುವುದಕ್ಕಾಗಿ ನಾಯಕತ್ವವನ್ನು ಪ್ರಶ್ನಿಸಿದ್ದರು. ಚಿದಂಬರಂ ಅವರು ನಿವೃತ್ತರಾಗುತ್ತಿರುವ ಸೇನಾ ಮುಖ್ಯಸ್ಥ ರಾವತ್ ಅವರಿಗೆರಾಜಕಾರಣಿಗಳು ಸೇನಾ ಅಧಿಕಾರಿಗಳಿಗೆ ಅವರ ಕೆಲಸ ಮಾಡುವ ಬಗೆ ಹೇಗೆ ಎಂದು ಹೇಳುವುದಿಲ್ಲಎಂದು ಶನಿವಾರ ನೆನಪಿಸಿದರು. ‘ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಮತ್ತು ಸೇನಾ ಜನರಲ್ಗಳಿಗೆ ಸರ್ಕಾರವನ್ನು ಬೆಂಬಲಿಸುವಂತೆ ಹೇಳಲಾಗುತ್ತಿದೆ. ಇದು ನಾಚಿಕೆಗೇಡು. ನೀವು ಸೇನಾ ಮುಖ್ಯಸ್ಥರಾಗಿದ್ದೀರಿ ಮತ್ತು ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ನಾನು ಜನರಲ್ ರಾವತ್ ಅವರಿಗೆ ಮನವಿ ಮಾಡಬಯಸುತ್ತೇನೆಎಂದು ಚಿದಂಬರಂ ಅವರು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಕಾಂಗ್ರೆಸ್ ಸಂಘಟಿಸಿದ್ದ ಪ್ರದರ್ಶನದಲ್ಲಿ ಮಾತನಾಡುತ್ತಾ ಹೇಳಿದರು. ಯುದ್ಧ ಮಾಡುವುದು ಹೇಗೆ ಎಂದು ನಿಮಗೆ ಹೇಳುವುದು ಹೇಗೆ ನಮ್ಮ ಕೆಲಸ ಅಲ್ಲವೋ ಹಾಗೆಯೇ ರಾಜಕಾರಣಿಗಳಿಗೆ ನಾವು ಏನು ಮಾಡಬೇಕು ಎಂದು ಹೇಳುವುದು ಸೇನೆಯ ಕೆಲಸವಲ್ಲಎಂದು ಕಾಂಗ್ರೆಸ್ ನಾಯಕ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)







No comments:

Post a Comment