2019: ರಾಂಚಿ: ಬಹುಹಂತಗಳಲ್ಲಿ ನಡೆದ ನಿರ್ಣಾಯಕ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) 2019 ಡಿಸೆಂಬರ್ 23ರ ಸೋಮವಾರ ಪರಾಭವಗೊಂಡಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಲು ಹೇಮಂತ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)-ಕಾಂಗ್ರೆಸ್- ಆರ್ಜೆಡಿ ಮೈತ್ರಿಕೂಟವು ಸಜ್ಜಾಯಿತು. ೮೧ ಸದಸ್ಯ ಬಲದ ವಿಧಾನಸಭೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ 30 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ್ದು, ಕಾಂಗ್ರೆಸ್ (16) ಮತ್ತು
ಆರ್ಜೆಡಿ ಜೊತೆಗಿನ ಅದರ ಮೈತ್ರಿಕೂಟವು ಒಟ್ಟು ೪೭ ಸ್ಥಾನಗಳಲ್ಲಿ ವಿಜಯ/ಮುನ್ನಡೆ ಸಾಧಿಸುವುದರೊಂದಿಗೆ ಬಹುಮತಕ್ಕೆ ಬೇಕಾದ ೪೧ ಮ್ಯಾಜಿಕ್ ಸಂಖ್ಯೆಯನ್ನು ನಿರಾಯಾಸವಾಗಿ ದಾಟಿತು.
೨೦೧೪ರ ಚುನಾವಣೆಯಲ್ಲಿ
೩೭ ಸ್ಥಾನಗಳನ್ನು ಗೆದ್ದು ಮಿತ್ರ ಪಕ್ಷದ ಬೆಂಬಲದೊಂದಿಗೆ ಅಧಿಕಾರಕ್ಕೆ ಏರಿದ್ದ ಬಿಜೆಪಿ, ಈ ಬಾರಿ ೨೫
ಸ್ಥಾನಗಳಲ್ಲಿ ಮಾತ್ರ ಗೆಲುವು/ ಮುನ್ನಡೆ ದಾಖಲಿಸಿದೆ. ಮುಖ್ಯಮಂತ್ರಿ ರಘುಬರದಾಸ್ ಸೋಲೊಪ್ಪಿಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದರು.
ಜಾರ್ಖಂಡ್ ಮುಕ್ತಿ
ಮೋರ್ಚಾದ ಯುವ ನಾಯಕ ಹೇಮಂತ ಸೊರೇನ್ ಅವರು ಬರ್ಹೇಟ್ ಮತ್ತು ಡುಮ್ಕಾ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದರು. ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಉದಯಿಸುತ್ತಿದ್ದಂತೆಯೇ ತಮ್ಮ ಪ್ರಥಮ ಪ್ರತಿಕ್ರಿಯೆ ನೀಡಿದ ಹೇಮಂತ್ ಸೊರೇನ್ ’ಜಾರ್ಖಂಡ್ ಜನತೆಗೆ ಧನ್ಯವಾದ’ ಅರ್ಪಿಸಿದರು. ’ಜಾಖಂಡ್ ಜನತೆ ಸ್ಪಷ್ಟ ಜನಾದೇಶ ನೀಡಿದ್ದಾರೆ ಮತ್ತು ನಾನು ಅವರಿಗೆ ಕೃತಜ್ಞನಾಗಿದ್ದೇನೆ’ ಎಂದು
ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಮುಜಾಫ್ಫರನಗರ: ನೂತನ ಪೌರತ್ವ ಕಾಯ್ದೆ ವಿರೋಧೀ ಪ್ರತಿಭಟನೆಗಳ ವೇಳೆಯಲ್ಲಿ
2019: ಮುಜಾಫ್ಫರನಗರ: ನೂತನ ಪೌರತ್ವ ಕಾಯ್ದೆ ವಿರೋಧೀ ಪ್ರತಿಭಟನೆಗಳ ವೇಳೆಯಲ್ಲಿ
ಹಿಂಸೆಯಲ್ಲಿತೊಡಗಿದವರಿಂದ ಆಸ್ತಿಪಾಸ್ತಿ ನಷ್ಟವನ್ನು ವಸೂಲು ಮಾಡುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿದ್ದ ಭರವಸೆ ಕಾರ್ಯಗತಗೊಂಡಿದ್ದು, ರಾಜ್ಯ ಸರ್ಕಾರವು ಹಿಂಸಾತ್ಮಕ ಚಳವಳಿಯಲ್ಲಿ ಶಾಮೀಲಾದವರನ್ನು ಗುರುತಿಸಲು ಆರಂಭಿಸುತ್ತಿದ್ದಂತೆಯೇ ಮುಜಾಫ್ಫರನಗರದಲ್ಲಿ ೬೭ಕ್ಕೂ ಹೆಚ್ಚು ಅಂಗಡಿಗಳಿಗೆ 2019 ಡಿಸೆಂಬರ್
23ರ ಸೋಮವಾರ ಬೀಗಮುದ್ರೆ
ಜಡಿಯಲಾಯಿತು. ಬೀಗಮುದ್ರೆ ಹಾಕಲಾಗಿರುವ ಅಂಗಡಿಗಳು ಹಿಂಸಾತ್ಮಕ ಪ್ರತಿಭಟನಕಾರರಿಗೆ ಸೇರಿದವುಗಳು ಎಂದು ಹೇಳಲಾಗಿದ್ದು, ತನಿಖೆಯ ವೇಳೆಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಶಾಮೀಲಾದದ್ದು ದೃಢಪಟ್ಟರೆ ಅವರ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸರ್ಕಾರೀ ವಕ್ತಾರರು ತಿಳಿಸಿದರು. ‘ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ ಮತ್ತು ಸರ್ಕಾರಿ ಮತ್ತು ಖಾಸಗಿ ಆಸ್ತಿಪಾಸ್ತಿಗಳನ್ನು ನಾಶಪಡಿಸಲಾಗಿದೆ. ನಾವು ಈ ವಿಚಾರದಲ್ಲಿ ಕಟ್ಟುನಿಟ್ಟಾಗಿ
ವ್ಯವಹರಿಸುತ್ತೇವೆ. ಸಾರ್ವಜನಿಕ ಸೊತ್ತುಗಳ ಹಾನಿಯಲ್ಲಿ ತೊಡಗಿದವರ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕುವ ಮೂಲಕ ನಷ್ಟವನ್ನು ತುಂಬಿಸಿಕೊಳ್ಳಲಾಗುವುದು’ ಎಂದು
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಕಟಿಸಿದ ಕೆಲವೇ ದಿನಗಳಲ್ಲಿ ಸರ್ಕಾರ ಈ ಕಾರ್ಯಾಚರಣೆ ಕೈಗೊಂಡಿತು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಪೌರತ್ವ ಕಾಯ್ದೆಯ ವಿರುದ್ಧ ದೆಹಲಿಯ ರಾಜಘಾಟ್‌ನ ಮಹಾತ್ಮ ಗಾಂಧಿ ಸಮಾಧಿಸ್ಥಳದಲ್ಲಿ ಸಂಘಟಿಸಲಾದ ಪ್ರತಿಭಟನಾ ’ಸತ್ಯಾಗ್ರಹ’ದಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರ ಸಂವಿಧಾನದ ಪೀಠಿಕೆಯನ್ನು ಓದಿ ಹೇಳಿದರು. ಮುಖ್ಯಮಂತ್ರಿಗಳಾದ ಕಮಲ್ನಾಥ್ (ಮಧ್ಯಪ್ರದೇಶ) ಮತ್ತು ಅಶೋಕ್ ಗೆಹ್ಲೋಟ್ (ರಾಜಸ್ಥಾನ) ಅವರು ಕಾಂಗ್ರೆಸ್ ’ಸತ್ಯಾಗ್ರಹ’ದಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳನ್ನು ರಕ್ಷಿಸುವಂತೆ ಕರೆ ನೀಡಿದರು. ‘ಬಿಜ್ನೋರಿನಲ್ಲಿ ಕಣ್ಣಾಲಿ ತುಂಬಿದ ತಾಯಿಯೊಬ್ಬಳು ’ನನ್ನ ಮಗ ರಾಷ್ಟ್ರಕ್ಕಾಗಿ ಸತ್ತಿದ್ದಾನೆ’ ಎಂದು
ಹೇಳಿದಳು. ಈ ಕ್ರಾಂತಿಯಲ್ಲಿ ಮೃತರಾದ
ಜನರ ಹೆಸರಿನಲ್ಲಿ, ಬಿಜ್ನೋರಿನಲ್ಲಿ ಐದು ಮಕ್ಕಳ ತಂದೆಯೊಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಮಲಗಿದ್ದಾರೆ, ಮಕ್ಕಳು ಅವರಿಗಾಗಿ ಕಾಯುತ್ತಿದ್ದಾರೆ - ಇವರ ಹೆಸರಿನಲ್ಲಿ ನಾವು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ನಾವು ಭರವಸೆ ನೀಡುತ್ತೇವೆ’ ಎಂದು
ಪ್ರಿಯಾಂಕಾ ಗಾಂಧಿ ವಾದ್ರಾ ರಾಜಘಾಟ್ನಲ್ಲಿ ಹೇಳಿದರು. ಬಿಜೆಪಿ
ಸರ್ಕಾರದ ನಿರ್ಧಾರದ ವಿರುದ್ಧ ವ್ಯಾಪಕ ಅಸಮಾಧಾನ ಇದೆ. ರಾಷ್ಟ್ರಾದ್ಯಂತ ಜನರು, ವಿಶೇಷವಾಗಿ ಯುವಜನರು, ಭಾರತದಲ್ಲಿ ಇದೇ ಮೊದಲ ಬಾರಿಗೆ ಪೌರತ್ವಕ್ಕೆ ಧರ್ಮವನ್ನು
ಆಧಾರವನ್ನಾಗಿ ಮಾಡಿದ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ರಿಯಾದ್: ಸೌದಿ ಅರೇಬಿಯಾದ ಮೂಲದ ವಾಷಿಂಗ್ಟನ್ ಪೋಸ್ಟ್ ಪತ್ರಕರ್ತ ಜಮಾಲ್
ಖಶೋಗಿಯವರನ್ನು ಹತ್ಯೆ ಮಾಡಿದ್ದ ಐವರಿಗೆ ಸೌದಿ ನ್ಯಾಯಾಲಯ 2019 ಡಿಸೆಂಬರ್ 23ರ ಸೋಮವಾರ ಗಲ್ಲು ಶಿಕ್ಷೆ ವಿಧಿಸಿತು. ಆದರೆ ಇಬ್ಬರು ಪ್ರಮುಖ ಆರೋಪಗಳಿಗಳನ್ನು ದೋಷಮುಕ್ತಗೊಳಿಸಿತು. ಸೌದಿ
ಅರೇಬಿಯಾ ರಾಜಮನೆತನದ ಟೀಕಾಕಾರರಾಗಿದ್ದ ಜಮಾಲ್ ಖಶೋಗಿಯನ್ನು ಕಳೆದ ಅಕ್ಟೋಬರಿನಲ್ಲಿ ಟರ್ಕಿಯ ಇಸ್ತಾಂಬುಲ್ನಲ್ಲಿರುವ ಸೌದಿ ಅರೇಬಿಯಾದ ರಾಯಭಾರ ಕಚೇರಿಯೊಳಗೆ ಹತ್ಯೆ ಮಾಡಲಾಗಿತ್ತು. "ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದ ಐವರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದೆ,” ಎಂಬುದಾಗಿ ಸರ್ಕಾರಿ ವಕೀಲ ಶಲಾನ್ ಅಲ್ ಶಲಾನ್ ಹೇಳಿದರು. ರಾಜಮನೆತನದ ನ್ಯಾಯಾಲಯದ ಮಾಧ್ಯಮ ಮುಖ್ಯಸ್ಥ ಸೌದ್ ಅಲ್ ಖತಾನಿ ನಿರ್ದೇಶನದ ಮೇರೆಗೆ ಗುಪ್ತಚರ ಇಲಾಖೆ ಉಪ ಮುಖ್ಯಸ್ಥ ಅಹಮದ್
ಅಲ್ ಅಸ್ಸಿರಿ ಹತ್ಯೆಯ ಮೇಲುಸ್ತುವಾರಿ ವಹಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಇಬ್ಬರನ್ನೂ ಆರೋಪದಿಂದ ಮುಕ್ತಗೊಳಿಸಲಾಯಿತು. ಕೊಲೆ ನಡೆದ ಸಮಯದಲ್ಲಿ ಇಸ್ತಾಂಬುಲ್ನ ರಾಯಭಾರಿಯಾಗಿದ್ದ ಮೊಹಮ್ಮದ್ ಅಲ್ ಒತೈಬಿಯನ್ನೂ ನ್ಯಾಯಾಲಯ ದೋಷಮುಕ್ತಗೊಳಿಸಿದ್ದು, ಜೈಲಿನಿಂದ ಬಿಡುಗಡೆ ಮಾಡಲಾಯಿತು. ಒಟ್ಟಾರೆ ೧೧ ಆರೋಪಿಗಳಲ್ಲಿ ಐವರಿಗೆ
ಗಲ್ಲು ಶಿಕ್ಷೆ, ಮೂರು ಜನರಿಗೆ ೨೪ ವರ್ಷಗಳ ಜೈಲು
ಶಿಕ್ಷೆ ವಿಧಿಸಲಾಗಿದ್ದು, ಉಳಿದವರನ್ನು ಆರೋಪಮುಕ್ತಗೊಳಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)2019: ರಿಯಾದ್: ಸೌದಿ ಅರೇಬಿಯಾದ ಮೂಲದ ವಾಷಿಂಗ್ಟನ್ ಪೋಸ್ಟ್ ಪತ್ರಕರ್ತ ಜಮಾಲ್
No comments:
Post a Comment