ನಾನು ಮೆಚ್ಚಿದ ವಾಟ್ಸಪ್

Friday, December 27, 2019

ಇಂದಿನ ಇತಿಹಾಸ History Today ಡಿಸೆಂಬರ್ 27

ನವದೆಹಲಿ: ಕೇಂದ್ರ ಸರ್ಕಾರವು ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಕಡಿತಗೊಂಡಿದ್ದ ಮೊಬೈಲ್ ಇಂಟರ್ ನೆಟ್ ಸೇವೆಗಳು, ಲಡಾಖ್ ಜಿಲ್ಲೆಯು ಸಹಜ ಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾರ್ಗಿಲ್ನಲ್ಲಿ 2019 ಡಿಸೆಂಬರ್ 27ರ ಶುಕ್ರವಾರ ಪುನಾರಂಭಗೊಂಡವು. ಕಾರ್ಗಿಲ್ನಲ್ಲಿ ಕಳೆದ ನಾಲ್ಕು ತಿಂಗಳುಗಳಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದೇ ಪರಿಸ್ಥಿತಿ ಸಂಪೂರ್ಣವಾಗಿ ಸಹಜಗೊಂಡಿರುವ ಕಾರಣ ಮೊಬೈಲ್ ಅಂತರ್ಜಾಲ ಸೇವೆಗಳನ್ನು ಪುನಃಸ್ಥಾಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಸ್ಥಳೀಯ ಧಾರ್ಮಿಕ ನಾಯಕರು ಸವಲತ್ತನ್ನು ದುರುಪಯೋಗ ಮಾಡದಂತೆ ಜನರಿಗೆ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.  ಕಾರ್ಗಿಲ್ನಲ್ಲಿ ಬ್ರಾಡ್ ಬ್ಯಾಂಡ್ ಸೇವೆಗಳು ಮುನ್ನವೇ ಆರಂಭಗೊಂಡಿದ್ದವು. ಸಂವಿಧಾನದ ೩೭೦ನೇ ವಿಧಿ ರದ್ದುಪಡಿಸುವ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಪ್ರಕಟಿಸುವುದಕ್ಕೆ ಕೆಲವು ಗಂಟೆಗಳ ಮುನ್ನ ಆಗಸ್ಟ್ ೫ರಂದು ಅಧಿಕಾರಿಗಳು ಸ್ಥಿರ ದೂರವಾಣಿ ಮತ್ತು ಮೊಬೈಲ್ ಫೋನ್ ಸೇವೆಗಳ ಸಂಪರ್ಕ ಲೈನುಗಳನ್ನು ಕಿತ್ತು ಹಾಕಿದ್ದರು. ಪ್ರತ್ಯೇಕತಾವಾದಿ ರಾಜಕಾರಣಿಗಳ ಉನ್ನತ ಮತ್ತು ಎರಡನೇ ಹಂತದ ನಾಯಕರನ್ನೂ ಮುಂಜಾಗರೂಕತಾ ಕ್ರಮವಾಗಿ ವಶಕ್ಕೆ ಪಡೆದರೆ, ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲ ಮತ್ತು ಮೆಹಬೂಬ ಮುಫ್ತಿ ಸೇರಿದಂತೆ ಮುಖ್ಯಪ್ರವಾಹದ ನಾಯಕರನ್ನು ಸ್ಥಾನಬದ್ಧತೆ ಇಲ್ಲವೇ ಗೃಹಬಂಧನಕ್ಕೆ ಒಳಪಡಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ಹೈದರಾಬಾದ್: ಅಮರಾವತಿ ಪ್ರದೇಶದ ರೈತರ ಪ್ರಬಲ ಪ್ರತಿಭಟನೆಯ ಮಧ್ಯೆ, ರಾಜ್ಯದ ಆಡಳಿತಾತ್ಮಕ ರಾಜಧಾನಿಯನ್ನು ಅಮರಾವತಿಯಿಂದ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸುವ ನಿರ್ಧಾರ ಜಾರಿಯನ್ನು ವಿಳಂಬಗೊಳಿಸಲು ಆಂದ್ರ ಪ್ರದೇಶ ಸರ್ಕಾರವು 2019 ಡಿಸೆಂಬರ್ 27ರ ಶುಕ್ರವಾರ ನಿರ್ಧರಿಸಿತು. ವಿಷಯಕ್ಕೆ ಸಂಬಂಧಿಸಿದಂತೆ ಸಮಗ್ರ ಪರಿಶೀಲನೆಗಾಗಿ ಉನ್ನತಾಧಿಕಾರ ಸಮಿತಿಯೊಂದರನ್ನು ರಚಿಸಲೂ ರಾಜ್ಯ ಸಚಿವ ಸಂಪುಟವು ನಿರ್ಧರಿಸಿತು. ಸಮಿತಿಯು ನಿರ್ಧಾರದ ಅನುಷ್ಠಾನದಿಂದ ಉದ್ಭವಿಸಬಹುದಾದ ವಿಷಯಗಳ ಬಗೆಗೂ ಪರಿಶೀಲನೆ ನಡೆಸಲಿದೆ. ಆಡಳಿತದ ವಿಕೇಂದ್ರೀಕರಣದ ಭಾಗವಾಗಿ, ವಿಶಾಖಪಟ್ಟಣದಲ್ಲಿ ಆಡಳಿತಾತ್ಮಕ (ಕಾರ್ಯಾಂಗ) ರಾಜಧಾನಿ, ಅಮರಾವತಿಯಲ್ಲಿ ಶಾಸಕಾಂಗ ರಾಜಧಾನಿ ಮತ್ತು ಕರ್ನೂಲ್ನಲ್ಲಿ ನ್ಯಾಯಾಂಗ ರಾಜಧಾನಿ- ಹೀಗೆ ಮೂರು ರಾಜಧಾನಿಗಳನ್ನು ಸೃಷ್ಟಿಸಲು ಶಿಫಾರಸು ಮಾಡಿ ನಿವೃತ್ತ ಐಎಎಸ್ ಅಧಿಕಾರಿ ಜಿ ಎನ್ ರಾವ್ ನೇತೃತ್ವದ ಆರು ಸದಸ್ಯರ ತಜ್ಞ ಸಮಿತಿಯು ನೀಡಿದ ವರದಿಯನ್ನು ಸಚಿವ ಸಂಪುಟ ಸಭೆಯು ಅನುಮೋದಿಸಿತು. ಸಂಪುಟ ಸಭೆಯ ಬಳಿಕ, ವರದಿಗಾರರ ಜೊತೆ ಮಾತನಾಡಿದ ಮಾಹಿತಿ ಮತ್ತು ಸಾರ್ವಜನಿಕ ಬಾಂಧವ್ಯಗಳ ಸಚಿವ ಪೆರ್ನಿ ವೆಂಕಟ್ರಾಮಯ್ಯ ಯಾನೆ ನಾನಿ ಅವರುಮೂರು ರಾಜಧಾನಿಗಳ ರಚನೆಗಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸುವ ಹೊಣೆಯನ್ನು ಬೋಸ್ಟನ್ ಕನಸಲ್ಟಿಂಗ್ ಗ್ರೂಪ್ (ಬಿಸಿಜಿ) ಖಾಸಗಿ ಕನ್ಸಲ್ಟೆನ್ಸಿ ಸಂಸ್ಥೆಗೆ ವಹಿಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತುಎಂದು ಹೇಳಿದರು. ‘ಬಿಸಿಜಿಯು ತನ್ನ ವರದಿಯನ್ನು ಜನವರಿ ಮೊದಲ ವಾರದಲ್ಲಿ ಸಲ್ಲಿಸುವ ನಿರೀಕ್ಷೆ ಇದೆ. ಬಳಿಕ, ರಾಜ್ಯ ಸರ್ಕಾರವು ಉಭಯ ವರದಿಗಳನ್ನು ಅಧ್ಯಯನ ಮಾಡಲು  ಉನ್ನತಾಧಿಕಾರ ಸಮಿತಿಯನ್ನು ರಚಿಸುವುದು ಮತ್ತು ಆಮೇಲೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದುಎಂದು ಅವರು ನುಡಿದರು.೨೦೧೪ರಲ್ಲಿ ರಾಜ್ಯ ಪುನರ್ ವಿಂಗಡಣೆಗಾಗಿ ಕೇಂದ್ರವು ಶಿವರಾಮ ಕೃಷ್ಣನ್ ಸಮಿತಿ ರಚಿಸಿದ್ದನ್ನು ಉಲೇಖಿಸಿದ ಅವರು, ಸಮಿತಿಯು ಅಭಿವೃದ್ಧಿಗಾಗಿ ಅಧಿಕಾರ ವಿಕೇಂದ್ರೀಕರಣಕ್ಕೆ ಶಿಫಾರಸು ಮಾಡಿತ್ತು ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಬಡವರ ಮೇಲಿನ ಹೊರೆ (ಟ್ಯಾಕ್ಸ್)’ ಎಂಬುದಾಗಿ ಆಪಾದಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 2019 ಡಿಸೆಂಬರ್ 27ರ ಶುಕ್ರವಾರ ಪ್ರಬಲವಾಗಿ ತರಾಟೆಗೆ ತೆಗೆದುಕೊಂಡ ಬಿಜೆಪಿರಾಹುಲ್ ಗಾಂಧಿಯವರು ೨೦೧೯ರ ಸಾಲಿನ ವರ್ಷದ ಸುಳ್ಳುಗಾರಎಂದು ಜರೆಯಿತು. ‘ರಾಹುಲ್ ಗಾಂಧಿಯವರು ತಮ್ಮ ಸುಳ್ಳುಗಳಿಂದ ಜನರನ್ನು ಮುಜುಗರಕ್ಕೆ ಈಡು ಮಾಡಿದ್ದಲ್ಲದೆ ತಮ್ಮ ಪಕ್ಷವನ್ನು ಕೂಡಾ ಮುಜುಗರಗೊಳ್ಳುವಂತೆ ಮಾಡಿದ್ದಾರೆಎಂದು ಬಿಜೆಪಿ ಹೇಳಿತು. ‘ಕಾಂಗ್ರೆಸ್ ಪಕ್ಷವು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಜನರನ್ನು ದಾರಿತಪ್ಪಿಸುತ್ತಾ ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೇಳುವಂತೆ ಮಾಡಿದೆ. ಆದರೆ ನೂತನ ಪೌರತ್ವ ಕಾಯ್ದೆ ಮತ್ತು ಎನ್ಪಿಆರ್ಗೆ ಸಂಬಂಧಿಸಿದಂತೆ ಜನರು ಸರ್ಕಾರದ ಜೊತೆ ಇದ್ದಾರೆಎಂದು ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಒತ್ತಿ ಹೇಳಿದರು.  ‘ ಪ್ರಕ್ರಿಯೆಗಳಿಗೆ ಯಾವುದೇ ಹಣಕಾಸಿನ ಅಥವಾ ಆರ್ಥಿಕ ವರ್ಗಾವಣೆಯ ಅಗತ್ಯವಿಲ್ಲ ಮತ್ತು ಎನ್ಪಿಆರ್ ಮಾಹಿತಿಯನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಗುರುತಿಸಲು ಬಳಸಲಾಗುತ್ತದೆಎಂದು ಜಾವಡೇಕರ್ ಹೇಳಿದರು. ‘ತೆರಿಗೆಸಂಗ್ರಹಿಸುವುದು ವಿರೋಧ ಪಕ್ಷದ ಸಂಸ್ಕೃತಿ. ’ಜಯಂತಿ ತೆರಿಗೆಇರಬಹುದು,’೨ಜಿ ತೆರಿಗೆಇರಬಹುದು, ’ಕಲ್ಲಿದ್ದಲು ತೆರಿಗೆಇರಬಹುದುಎಂದು ಕಾಂಗೆಸ್ ಪಕ್ಷಕ್ಕೆ ಸಚಿವರು ಎದಿರೇಟು ನೀಡಿದರು. ರಾಷ್ಟ್ರೀಯ ಜನಸಂಖ್ಯಾ ನೋಂದಣಿಯು (ಎನ್ಪಿಆರ್) ೨೦೧೦ರಲ್ಲೂ ನಡೆದಿತ್ತು ಎಂದೂ ಅವರು ಬೊಟ್ಟು ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ಶಿಮ್ಲಾ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2019 ಡಿಸೆಂಬರ್ 27ರ ಶುಕ್ರವಾರ ವಿರೋಧಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ವದಂತಿಗಳನ್ನು ಹರಡುತ್ತಾ ಜನರನ್ನು ದಾರಿತಪ್ಪಿಸಿ ದೇಶದ ಶಾಂತಿಯನ್ನು ಕದಡುತ್ತಿವೆ ಎಂದು ಆಪಾದಿಸಿದರು. ಹಿಮಾಚಲ ಪ್ರದೇಶದಲ್ಲಿ ಜೈರಾಮ್ ಥಾಕೂರ್ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಸಂಘಟಿಸಲಾಗಿದ್ದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾಪೌರತ್ವ (ತಿದ್ದುಪಡಿ) ಕಾಯ್ದೆಯು ಅಲ್ಪಸಂಖ್ಯಾತರನ್ನು ಪೌರತ್ವ ವಂಚಿತರನ್ನಾಗಿ ಮಾಡುವುದಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಖಾತರಿ ನೀಡಿದ್ದಾರೆಎಂದು ಹೇಳಿದರು. ‘ಕಾಂಗೆಸ್ ಮತ್ತು ಕಂಪೆನಿಯು ಅದು (ಪೌರತ್ವ ತಿದ್ದುಪಡಿ ಕಾಯ್ದೆ) ಅಲ್ಪಸಂಖ್ಯಾತರು, ಮುಸ್ಲಿಮ್ ಬಾಂಧವರನ್ನು ಪೌರತ್ವ ವಂಚಿತರನ್ನಾಗಿ ಮಾಡುತ್ತದೆ ಎಂಬುದಾಗಿ ವದಂತಿಗಳನ್ನು ಹರಡುತ್ತಿವೆಎಂದು ಹೇಳಿದ ಅಮಿತ್ ಶಾಕಾಯ್ದೆಯಲ್ಲಿ ಅಂತಹ ಒಂದೇ ಒಂದು ವಿಧಿ ಇದ್ದರೆ ಅದನ್ನು ತೋರಿಸಿಕೊಡಿ ಎಂದು ನಾನು ರಾಹುಲ್ ಬಾಬಾ (ಗಾಂಧಿ) ಅವರಿಗೆ ಸವಾಲು ಹಾಕುತ್ತೇನೆಎಂದು ಹೇಳಿದರು. ‘ಇಂತಹ ಅಪಪ್ರಚಾರವನ್ನು ನಿಲ್ಲಿಸಿಎಂದು ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದ ಅವರು, ’ನಿಮ್ಮ ಬಳಿ ವಾಸ್ತವಾಂಶಗಳು ಇದ್ದರೆ ಆಗ ಜನರ ಮುಂದೆ ಹೋಗಿಎಂದು ನುಡಿದರು. ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆಎಂದು ಅವರು ಪುನರುಚ್ಚರಿಸಿದರು. ಉಭಯ ರಾಷ್ಟ್ರಗಳು ತಮ್ಮ ತಮ್ಮ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸುವ ಸಲುವಾಗಿ ೧೯೫೦ರಲ್ಲಿ ಭಾರತ ಮತ್ತು ಪಾಕಿಸ್ತಾನ ಸಹಿ ಮಾಡಿದ ನೆಹರೂ -ಲಿಯಾಖತ್ ಒಪ್ಪಂದವನ್ನು ಉಲ್ಲೇಖಿಸಿದ ಬಿಜೆಪಿ ಮುಖ್ಯಸ್ಥಭಾರತವು ಅಲ್ಪಸಂಖ್ಯಾತರ ರಕ್ಷಣೆ ಮಾಡುವುದು ಸಂವಿಧಾನವೇ ನಮಗೆ ವಹಿಸಿದ ಕರ್ತವ್ಯವಾದ್ದರಿಂದ ಅದನ್ನು ಪಾಲಿಸುವ ಮೂಲಕ ಒಪ್ಪಂದವನ್ನು ಅಕ್ಷರಶಃ ಜಾರಿ ಮಾಡಿತುಎಂದು ಹೇಳಿದರು. ಆದಾಗ್ಯೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಜನಸಂಖ್ಯೆ ಕ್ರಮವಾಗಿ ಶೇಕಡಾ ಮತ್ತು ಶೇಕಡಾ ೭ಕ್ಕೆ ಕುಸಿಯಿತು ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ
: ದೆಹಲಿಯ ರಕ್ತ ಹೆಪ್ಪುಗಟ್ಟಿಸುವ ಚಳಿಯ ಮಧ್ಯೆಯೂ ಭಾರೀ ಸಂಖ್ಯೆಯಲ್ಲಿ
ಜಾಮಾ  ಮಸೀದಿಯಲ್ಲಿ  2019 ಡಿಸೆಂಬರ್ 27ರ ಶುಕ್ರವಾರ ಜಮಾಯಿಸಿದ ನೂರಾರು ಮಂದಿ ಪ್ರಾರ್ಥನೆಯ ಬಳಿಕ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಪ್ರತಿಭಟನೆ ವ್ಯಕ್ತ ಪಡಿಸಿದರು. ಹಳೆ ನಗರದ ಮಸೀದಿಯ ಹೊರಭಾಗದಲ್ಲಿ ಜಮಾಯಿಸಿದ ಪ್ರತಿಭಟನಕಾರರು ನೂತನ ಪೌರತ್ವ (ತಿದ್ದುಪಡಿ) ಕಾನೂನು ಮತ್ತು  ಉದ್ದೇಶಿತ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಇಸ್ ದೇಶ್ ಕೊ ಎನ್ಆರ್ಸಿಎನ್ಪಿಆರ್ ನಹೀ ಚಾಹಿಯೇ. ಇಸ್ ದೇಶ್ ಕೊ ರೋಜ್ಗಾರ್ ಚಾಹಿಯೇ. ಇಸ್ ದೇಶ್ ಕೋ ಅಮಾನ್ ಔರ್ ಶಾಂತಿ ಚಾಹಿಯೇ ( ದೇಶಕ್ಕೆ ಎನ್ಆರ್ಸಿ, ಎನ್ಪಿಆರ್ ಬೇಕಾಗಿಲ್ಲ, ದೇಶಕ್ಕೆ  ನೌಕರಿಗಳು ಬೇಕು, ದೇಶಕ್ಕೆ ಶಾಂತಿ ಮತ್ತು ಸೌಹಾರ್ದತೆ ಬೇಕುಎಂದು ಪ್ರತಿಭಟನೆಕಾರನೊಬ್ಬರು ಹೇಳಿದರು.
ಸಂವಿಧಾನ ರಕ್ಷಿಸಿ, ಭಾರತವನ್ನು ವಿಭಜಿಸಬೇಡಿಎಂಬ ಘೋಷಣೆಗಳಿದ್ದ ಭಿತ್ತಿ ಫಲಕಗಳನ್ನು ಹಿಡಿದುಕೊಂಡಿದ್ದ ಪ್ರತಿಭಟನಕಾರರು ಶಾಂತಿಯುತರಾಗಿ ಇರುವಂತೆ ಜನತೆಗೆ ಮನವಿ ಮಾಡಿದರು. ಕಾಂಗೆಸ್ ನಾಯಕಿ ಅಲ್ಕಾ ಲಂಬಾ ಹಾಗೂ ದೆಹಲಿಯ ಮಾಜಿ ಶಾಸಕ ಶೋಯಿಬ್ ಇಕ್ಬಾಲ್ ಅವರು ಪ್ರದರ್ಶನಕಾರರಲ್ಲಿ ಸೇರಿದ್ದರು. ‘ರಾಷ್ಟ್ರ ಮತ್ತು ಸಂವಿಧಾನಕ್ಕಾಗಿ ಪ್ರಜಾಪ್ರಭುತ್ವದ ದನಿ ಎತ್ತರಿಸುವುದು ಅತ್ಯಂತ ಅಗತ್ಯ. ಕೇಂದ್ರ ಸರ್ಕಾರವೊಂದು ಸರ್ವಾಧಿಕಾರಿಯಾಗುವಂತಿಲ್ಲ ಮತ್ತು ಜನರ ಮೇಲೆ ಕಾರ್ಯಸೂಚಿಗಳನ್ನು ಹೇರುವಂತಿಲ್ಲಎಂದು ಲಂಬಾ ನುಡಿದರು. ದೆಹಲಿಯ ಇತರ ಸ್ಥಳಗಳಲ್ಲೂ ಪ್ರತಿಭಟನೆಗಳು ನಡೆದವು. ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರ ಬಿಡುಗಡೆಗೆ ಒತ್ತಾಯಿಸಿ ಪ್ರಧಾನಿಯವರ ನಿವಾಸಕ್ಕೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದ ಬಳಿಕ, ದೆಹಲಿ ಮೆಟ್ರೋ ರೈಲು ನಿಗಮವು (ಡಿಎಂಆರ್ಸಿ) ಪ್ರಧಾನಿ ನಿವಾಸಕ್ಕೆ ಸಮೀಪದ ಲೋಕಕಲ್ಯಾಣ ಮಾರ್ಗ್ (ಎಲ್ಕೆಎಂ) ಮೆಟ್ರೋ ನಿಲ್ದಾಣದ ದ್ವಾರಗಳನ್ನು ಮುಚ್ಚಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ
ಇತಿಹಾಸ  History Today ಡಿಸೆಂಬರ್ 27  (2018+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)




No comments:

Post a Comment