Monday, December 9, 2019

ಇಂದಿನ ಇತಿಹಾಸ History Today ಡಿಸೆಂಬರ್ 09

2019: ಬೆಂಗಳೂರು: ರಾಜ್ಯದ ೧೫ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ೧೨ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ  2019 ಡಿಸೆಂಬರ್ 09ರ ಸೋಮವಾರ ಭರ್ಜರಿ ಬಹುಮತ ಗಳಿಸಿತು. ಇದರೊಂದಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಮೂರುವರೆ ವರ್ಷಗಳ ಕಾಲ ಭದ್ರವಾದಂತಾಯಿತು. ಕಾಂಗ್ರೆಸ್ ಕೇವಲ ಸ್ಥಾನ ಗೆದ್ದರೆ, ಜನತಾದಳ (ಎಸ್) ಶೂನ್ಯಸ್ಥಾನ ಗಳಿಸಿತು. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಯಿತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಪಚುನಾವಣೆಯಲ್ಲಿ ಎಂಟು ಸ್ಥಾನಗಳಲ್ಲಿ ಗೆಲ್ಲಲೇಬೇಕಾದ ಅನಿರ್ವಾಯತೆಗೆ ಸಿಲುಕಿತ್ತು. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಕನಿಷ್ಠ ೧೧೨ ಶಾಸಕರ ಅಗತ್ಯವಿತ್ತು. ಇದೀಗ ಉಪಚುನಾವಣೆಯಲ್ಲಿ ೧೨ ಸ್ಥಾನಗಳಲ್ಲಿ ಜಯ ಸಾಧಿಸುವುದರೊಂದಿಗೆ ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿ ಬಲ ೧೧೭ಕ್ಕೆ ಏರಿತು. ೧೦೫ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ವಿಧಾನಸಭೆಯಲ್ಲಿ ಸರಳ ಬಹುಮತ ಸಾಬೀತುಪಡಿಸಲು ೧೧೨ ಶಾಸಕರ ಅಗತ್ಯವಿತ್ತು. ಹಾಲಿ ೨೨೨ ಸದಸ್ಯಬಲದ ( ಕ್ಷೇತ್ರಗಳಿಗೆ ಉಪಚುನಾವಣೆ ಇನ್ನಷ್ಟೇ ಘೋಷಣೆಯಾಗಬೇಕಿದೆ) ವಿಧಾನಸಭೆಯಲ್ಲಿ ಬಿಜೆಪಿ ಪ್ರಸ್ತುತ ೧೧೭ ಸಂಖ್ಯಾಬಲ ಹೊಂದಿದೆ. ಕಾಂಗ್ರೆಸ್ ೬೮, ಜೆಡಿಎಸ್ ೩೪ ಸ್ಥಾನ ಹೊಂದಿವೆ.. ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತ ಹೊಂದಿದ್ದು, ಬಿಎಸ್ ಯಡಿಯೂರಪ್ಪ ಸಿಎಂ ಕುರ್ಚಿ ಭದ್ರವಾದಂತಾಯಿತು. ೧೫ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂಬತ್ತು ಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಜೆಡಿಎಸ್ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇದರಿಂದ ಮತ್ತೆ ಅಧಿಕಾರದ ಗದ್ದುಗೆ ಏರಬೇಕೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಕುಮಾರಸ್ವಾಮಿ ಲೆಕ್ಕಾಚಾರ ತಲೆಕೆಳಗಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಸುದೀರ್ಘವಾದ ಚರ್ಚೆ, ಮಾತಿನ ಚಕಮಕಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಬಲ ಸಮರ್ಥನೆಯ ಬಳಿಕ  ಲೋಕಸಭೆಯು ಪೌರತ್ವ (ತಿದ್ದುಪಡಿ) ಮಸೂದೆಯನ್ನು 2019 ಡಿಸೆಂಬರ್ 09ರ ಸೋಮವಾರ ಅಂಗೀಕರಿಸಿತು. ಮತ ವಿಭಜನೆಯಲ್ಲಿ ಮಸೂದೆಯ ಪರವಾಗಿ 311 ಮತ್ತುವಿರುದ್ಧವಾಗಿ 80 ಮತಗಳು ಬಂದವು.  ವಿರೋಧ ಪಕ್ಷಗಳು ಸಂವಿಧಾನ ವಿರೋಧಿ ಎಂಬುದಾಗಿ ಮಸೂದೆಯನ್ನು ಬಣ್ಣಿಸಿದರೂ, ಅಮಿತ್ ಶಾ ಅವರು ಮಸೂದೆಯನ್ನು ಪ್ರಬಲವಾಗಿ ಸಮರ್ಥಿಸಿ ಅದು ಸಂವಿಧಾನ ವಿರೋಧಿಯೂ ಅಲ್ಲ, ಅಲ್ಪಸಂಖ್ಯಾತರ ವಿರೋಧಿಯೂ ಅಲ್ಲ ಎಂದು ಪ್ರತಿಪಾದಿಸಿದರು. ಚರ್ಚೆಯ ಮಧ್ಯೆ ಒಂದು ಹಂತದಲ್ಲಿ ಅಸಾದುದದೀನ್ ಓವೈಸಿ ಅವರು ಮಸೂದೆಯ ಪ್ರತಿಯನ್ನು ಹರಿದು ಚಿಂದಿ ಮಾಡಿ ಎಸೆದರು. ಮಸೂದೆ 2019 ಡಿಸೆಂಬರ್ 12ರ ಮಂಗಳವಾರ ರಾಜ್ಯಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. ಇದಕ್ಕೆ ಮುನ್ನ ಬೆಳಗ್ಗೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ಮಧ್ಯೆ, ಸದನವು ಮಸೂದೆ ಮಂಡನೆ ಪರವಾಗಿ ಬಹುಮತ ವ್ಯಕ್ತ ಪಡಿಸಿದ ಬಳಿಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಇದು ಅಲ್ಪಸಂಖ್ಯಾತ ವಿರೋಧಿ ಮಸೂದೆಯಲ್ಲದೆ ಬೇರೇನಲ್ಲಎಂಬ ಕಾಂಗೆಸ್ ಪಕ್ಷದ ಕಟು ಟೀಕೆಯನ್ನು ತಳ್ಳಿಹಾಕಿದ ಅಮಿತ್ ಶಾಮಸೂದೆಯು ಶೇಕಡಾ .೦೦೧ ರಷ್ಟು ಕೂಡಾ ದೇಶದ ಅಲ್ಪ ಸಂಖ್ಯಾತ ವಿರೋಧಿ ಅಲ್ಲಎಂದು ಪ್ರತಿಪಾದಿಸಿದರು. ಮಸೂದೆ ಮಂಡನೆ ಮಾಡಬೇಕೇ ಅಥವಾ ಬೇಡವೇ ಎಂಬುದಾಗಿ ನಡೆದ ವಾಗ್ವಾದಗಳ ಬಳಿಕ ಸಭಾಧ್ಯಕ್ಷ ಬಿರ್ಲಾ ಅವರು ಮಸೂದೆ ಮಂಡನೆ ವಿಚಾರವನ್ನು ತೀರ್ಮಾನಿಸಲು ಮತ ವಿಭಜನೆಗೆ ನಿರ್ಧರಿಸಿದರು. ಮಸೂದೆ ಮಂಡನೆ ಪರವಾಗಿ ೨೯೩ ಮತ್ತು ವಿರೋಧವಾಗಿ ೮೨ ಮತಗಳು ಬಂದವು. ಬಳಿಕ ಗೃಹ ಸಚಿವರು ಮಸೂದೆಯನ್ನು ಮಂಡಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಬೆಂಗಳೂರು: ಕರ್ನಾಟಕದಲ್ಲಿ ೧೫ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬಿರುಗಾಳಿಗೆ ತತ್ತರಿಸಿ ಕೇವಲ ಸ್ಥಾನ ಗೆಲ್ಲುವ ಮೂಲಕ ಹೀನಾಯ ಸೋಲು ಅನುಭವಿಸುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಸಿದ್ದರಾಮಯ್ಯ ಮತ್ತು ದಿನೇಶ ಗುಂಡೂರಾವ್ 2019 ಡಿಸೆಂಬರ್ 09ರ ಸೋಮವಾರ ತಲೆದಂಡ ತೆತ್ತರು. ಸೋಲಿನ ನೈತಿಕ ಹೊಣೆ ಹೊತ್ತುಹಿರಿಯ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಅವರು ಪಕ್ಷದ ಶಾಸಕಾಂಗ ಪಕ್ಷ (ಸಿಎಲ್ಪಿ) ನಾಯಕತ್ವ ಮತ್ತು ವಿಧಾನಸಭಾ ವಿರೋಧ ಪಕ್ಷದ ನಾಯಕತ್ವಕ್ಕೆ  ರಾಜೀನಾಮೆ ಪ್ರಕಟಿಸಿದರೆ, ಇನ್ನೋರ್ವ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಕಳೆದ ವಾರ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ೧೫ ಸ್ಥಾನಗಳ ಪೈಕಿ ೧೨ ಗೆದ್ದು ಭರ್ಜರಿ ಜಯಭೇರಿ ಭಾರಿಸಿದರೆ, ಕಾಂಗ್ರೆಸ್ ಕೇವಲ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಇನ್ನುಳಿದ ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾದರೆ ಜನತಾದಳ (ಎಸ್) ಒಂದು ಸ್ಥಾನವನ್ನೂ ಗೆಲ್ಲಲಿಲ್ಲ.  ‘ಪ್ರಜಾಪ್ರಭುತ್ವದಲ್ಲಿ ನಾವು ಜನರ ತೀರ್ಪನ್ನು ಅಂಗೀಕರಿಸಬೇಕು. ಜನರು ತೀರ್ಪು ಕೊಟ್ಟಿದ್ದಾರೆ, ನಾವು ಅದನ್ನು ಗೌರವಿಸಬೇಕು. ಅನರ್ಹರಿಗೆ ಮತದಾರರು ಪಾಠ ಕಲಿಸುತ್ತಾರೆ ಎಂಬುದಾಗಿ ನಾವು ನಿರೀಕ್ಷಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಸುಳ್ಳಾಯಿತು. ಆದ್ದರಿಂದ ನಾನು ಜನರ ತೀರ್ಪನ್ನು ಅಂಗೀಕರಿಸಿದ್ದೇನೆಎಂದು ಫಲಿತಾಂಶಗಳು ಪ್ರಕಟವಾದ ಬಳಿಕ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಅಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಮರಿಗೆ ಪರ್ಯಾಯ ನಿವೇಶನವಾಗಿ ಎಕರೆ ಭೂಮಿ ಮಂಜೂರು ಮಾಡುವಂತೆ ಮಾಡಲಾಗಿರುವ ನವಂಬರ್ ೯ರ ಆದೇಶವನ್ನು ಪ್ರಶ್ನಿಸಿ ಅಖಿಲ ಭಾರತ ಹಿಂದೂ ಮಹಾಸಭಾ 2019 ಡಿಸೆಂಬರ್ 09ರ ಸೋಮವಾರ ಸುಪ್ರೀಂಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ದಾಖಲಿಸಿತು. ಮುಸ್ಲಿಮ್ ಕಕ್ಷಿದಾರರು ಎಂದೂ ಪರ್ಯಾಯ ನಿವೇಶನ ನೀಡುವಂತೆ ಪ್ರಾರ್ಥಿಸಿಲ್ಲ, ಆದ್ದರಿಂದ ಪೀಠವು ಮುಸ್ಲಿಮರಿಗೆ ಪರ್ಯಾಯ ಭೂಮಿ ಮಂಜೂರು ಮಾಡುವಲ್ಲಿ ಕಕ್ಷಿದಾರರ ಪ್ರಾರ್ಥನೆಯನ್ನು ಮೀರಿ ಮುಂದುವರೆಯಬಾರದಾಗಿತ್ತು ಎಂದು ವಕೀಲ ವಿಷ್ಣು ಶಂಕರ್ ಜೈನ್ ಮೂಲಕ ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಯಲ್ಲಿ ಹಿಂದೂ ಮಹಾಸಭಾವು ಪ್ರತಿಪಾದಿಸಿತು. ಹಿಂದೂಗಳು ೧೯೩೪, ೧೯೪೯ ಮತ್ತು ೧೯೯೨ರಲ್ಲಿ ಕೆಲವು ತಪ್ಪು ಮಾಡಿದ್ದಾರೆಂಬ ನೆಲೆಯಲ್ಲಿ, ಸಂತೈಸುವ ಸಲುವಾಗಿ ಹಿಂದೂಗಳ ಧಾರ್ಮಿಕ ಸ್ಥಳವನ್ನು ಧ್ವಂಸಗೊಳಿಸಿದವರಿಗೆ ಇಂತಹ ಅಕ್ರಮ ಕೃತ್ಯ ಎಸಗಿದ್ದಕ್ಕಾಗಿ ಎಕರೆ ಭೂಮಿ ಮಂಜೂರು ಮಾಡಬಾರದಾಗಿತ್ತುಎಂದು ಅರ್ಜಿ ಹೇಳಿತು. ಕಕ್ಷಿದಾರರು ಕೇಳದೇ ಇದ್ದ ಪರಿಹಾರವನ್ನು ನೀಡಲು ೧೪೨ನೇ ವಿಧಿಯ ಅಡಿಯಲ್ಲಿ ಸುಪ್ರೀಂಕೋರ್ಟ್ ತನ್ನ ಅಧಿಕಾರಗಳನ್ನು ಚಲಾಯಿಸಬಾರದಾಗಿತ್ತು ಎಂದು ಅರ್ಜಿದಾರರು ಹೇಳಿದರು. ೧೪೨ನೇ ವಿಧಿಯು ಸುಪ್ರೀಂಕೋರ್ಟಿಗೆ ಸಂಪೂರ್ಣ ನ್ಯಾಯ ಒದಗಿಸಲು ಯಾವುದೇ ಆದೇಶ ನೀಡುವ ಅಧಿಕಾರವನ್ನು ನೀಡಿದೆ. ಜಮೀಯತ್-ಉಲೇಮಾ- ಹಿಂದ್ ಸೇರಿದಂತೆ ಮುಸ್ಲಿಮ್ ಕಕ್ಷಿದಾರರು ಮತ್ತು ಆಲ್ ಇಂಡಿಯಾ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಬೆಂಬಲದೊಂದಿಗೆ ವೈಯಕ್ತಿಕ ಅರ್ಜಿದಾರರು ಈ ಮೊದಲೇ ತೀರ್ಪಿನ ವಿರುದ್ಧ ತಮ್ಮ ಪುನರ್ ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದರು.  (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ಲಕ್ನೋ: ಉನ್ನಾವೋ ಅತ್ಯಾಚಾರ ಸಂತ್ರಸ್ಥ ಮಹಿಳೆಯ ಸಾವಿನ ಹಿನ್ನೆಲೆಯಲ್ಲಿ ವ್ಯಕ್ತವಾಗುತ್ತಿರುವ ತೀವ್ರ ಜನಾಕ್ರೋಶದ ಮಧ್ಯೆ,  ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧ ಪ್ರಕರಣಗಳ ಕ್ಷಿಪ್ರ ಇತ್ಯರ್ಥಕ್ಕಾಗಿ ೨೧೮ ತ್ವರಿತ ನ್ಯಾಯಾಲಯಗಳನ್ನು  (ಫಾಸ್ಟ್ ಟ್ರ್ಯಾಕ್  ಕೋರ್ಟ್) ಸ್ಥಾಪಿಸುವುದಾಗಿ ಉತ್ತರ ಪ್ರದೇಶ ಸರ್ಕಾರವು 2019 ಡಿಸೆಂಬರ್ 09ರ ಸೋಮವಾರ ಪ್ರಕಟಿಸಿತು. ಉನ್ನಾವೋ ಸಂತ್ರಸ್ಥೆಯ ಅಂತ್ಯಕ್ರಿಯೆ ನಡೆದ ಒಂದು ದಿನದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ರಾಜ್ಯದಲ್ಲಿ ಪ್ರಸ್ತುತ ಮಕ್ಕಳ ವಿರುದ್ಧದ ೪೨,೩೮೯ ಲೈಂಗಿಕ ಅಪರಾಧ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಬಿದ್ದಿದ್ದರೆ, ಮಹಿಳೆಯರ ವಿರುದ್ಧದ ೨೫,೭೪೯ ಅತ್ಯಾಚಾರ ಹಾಗೂ ಲೈಂಗಿಕ ಅಪರಾಧ ಪ್ರಕರಣಗಳು ನೆನೆಗುದಿಯಲ್ಲಿವೆ ಎಂದು ಉತ್ತರ ಪ್ರದೇಶ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಹೇಳಿದರು. ಭಾರೀ ಸಂಖ್ಯೆಯ ಪ್ರಕರಣಗಳು ನೆನೆಗುದಿಯಲ್ಲಿ ಬಿದ್ದ ಹಿನ್ನೆಲೆಯಲ್ಲಿ ಅವುಗಳ ಕ್ಷಿಪ್ರ ವಿಲೇವಾರಿಗಾಗಿ ೨೧೮ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು, ಇವುಗಳಲ್ಲಿ ೧೪೪ ನ್ಯಾಯಾಲಯಗಳು ಮಹಿಳೆಯರ ವಿರುದ್ಧದ ಅತ್ಯಾಚಾರ/ ಲೈಂಗಿಕ ಅಪರಾಧ ಪ್ರಕರಣಗಳ ವಿಚಾರಣೆ ನಡೆಸಲಿವೆ ಎಂದು ಅವರು ನುಡಿದರು. ಲೈಂಗಿಕ ಅಪರಾಧಗಳ ವಿರುದ್ದ ಮಕ್ಕಳ ಸಂರಕ್ಷಣೆ (ಪೋಸ್ಕೊ) ಕಾಯ್ದೆಯ ಅಡಿಯಲ್ಲಿ ಮಕ್ಕಳ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳ ವಿಚಾರಣೆಗಾಗಿ ಇಂತಹ ೭೪ ಹೊಸ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ವಿವರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)



No comments:

Post a Comment