2019: ಬೆಂಗಳೂರು: ಕರ್ನಾಟಕದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಿಂದ ತಪ್ಪಿಸಿಕೊಳ್ಳಲು ಪಾಸ್ ಪೋರ್ಟ್ ಇಲ್ಲದೆಯೇ ಭಾರತದಿಂದ ಪರಾರಿಯಾಗಿರುವ ವಿವಾದಾತ್ಮಕ ’ದೇವ ಮಾನವ’ ನಿತ್ಯಾನಂದ ಸೆಂಟ್ರಲ್ ಲ್ಯಾಟಿನ್ ಅಮೆರಿಕದ ಈಕ್ವಡೋರ್ನಲ್ಲಿ ದ್ವೀಪವೊಂದನ್ನು ಖರೀದಿಸಿ ಅದಕ್ಕೆ ’ಕೈಲಾಸ’ ಎಂಬ ಹೆಸರು ಇಟ್ಟು ಅದನ್ನು ಭೂಮಿಯ ಮೇಲಿನ ಮಹಾನ್ ಹಿಂದೂ ರಾಷ್ಟ್ರ ಎಂಬುದಾಗಿ ಹೇಳಿಕೊಂಡಿರುವುದು 2019 ಡಿಸೆಂಬರ್ 03ರ ಮಂಗಳವಾರ ವರದಿಯಾಯಿತು. ‘ಕೈಲಾಸ’ ರಾಷ್ಟ್ರಕ್ಕೆ ಸ್ವಂತ ಪಾಸ್ ಪೋರ್ಟ್ ಇದ್ದು, ಅದಕ್ಕಾಗಿ ’ನೇಷನ್’ ಹೆಸರಿನ ಸ್ವಂತ ವೆಬ್ ಸೈಟ್ ಒಂದನ್ನು ಕೂಡಾ ಆರಂಭಿಸಲಾಗಿದೆ ಎಂದು ವರದಿ ಹೇಳಿತು. ’ಕೈಲಾಸವು
ತಮ್ಮ ಸ್ವಂತ ರಾಷ್ಟ್ರಗಳಲ್ಲಿಯೇ ಅಧಿಕೃತವಾಗಿ ಹಿಂದುತ್ವ ಆಚರಣೆಯ ಹಕ್ಕನ್ನು ಕಳೆದುಕೊಂಡ, ವಿಶ್ವಾದ್ಯಂತದಿಂದ ಹೊರತಳ್ಳಲ್ಪಟ್ಟ ಹಿಂದುಗಳಿಂದ ಸೃಷ್ಟಿಯಾಗಿರುವ ಗಡಿರಹಿತವಾದ ಸ್ವತಂತ್ರ ನೂತನ ರಾಷ್ಟ್ರ ಎಂಬುದಾಗಿ ವೆಬ್ ಸೈಟ್ ಬಣ್ಣಿಸಿದೆ’
ಎಂದು ದೃಢಪಡದ ವರದಿಗಳು ತಿಳಿಸಿದವು. ‘ಕೈಲಾಸ ರಾಷ್ಟ್ರ’ವು ಸ್ವಂತ ಪಾಸ್
ಪೋರ್ಟ್ ಹೊಂದಿದೆ ಎಂದು ತಿಳಿಸಲಾಗಿದ್ದು ನಿತ್ಯಾನಂದ ಈಗಾಗಲೇ ಅದರ ಮಾದರಿಯನ್ನು ಅಂತರ್ಜಾಲದಲ್ಲಿ ಬಿಡುಗಡೆ ಮಾಡಿರುವುದಾಗಿ ಹೇಳಲಾಯಿತು.‘ನೂತನ ರಾಷ್ಟ್ರವು ದೇಗುಲ ಆಧಾರಿತ ಪರಿಸರ ವ್ಯವಸ್ಥೆ, ಮೂರನೇ ಕಣ್ಣಿನ ಹಿಂದಿನ ವಿಜ್ಞಾನ, ಯೋಗ, ಧ್ಯಾನ ಮತ್ತು ಗುರುಕುಲ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುತ್ತದೆ ಎಂದು ವೆಬ್ ಸೈಟ್ ಹೇಳಿದೆ. ಇಷ್ಟೇ ಅಲ್ಲ, ಸಾರ್ವತ್ರಿಕ ಆರೋಗ್ಯ ಕಾಳಜಿ, ಉಚಿತ ಶಿಕ್ಷಣ, ಉಚಿತ ಆಹಾರ ಮತ್ತು ಎಲ್ಲರಿಗೂ ದೇಗುಲ ಆಧಾರಿತ ಜೀವನ ಶೈಲಿಯನ್ನು ಒದಗಿಸುತ್ತದೆ ಎಂದೂ ವೆಬ್ ಸೈಟ್ ತಿಳಿಸಿದೆ ಎನ್ನಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಅಂಡಮಾನ್ ನಿಕೋಬಾರ್ ದ್ವೀಪಸಮೂಹದ ಬಳಿಗೆ ಅನುಮತಿ ಇಲ್ಲದೆ ಪ್ರವೇಶಿಸಿದ್ದ ಚೀನೀ ಸಂಶೋಧನಾ ನೌಕೆಯೊಂದನ್ನು ಇತ್ತೀಚೆಗೆ ಭಾರತೀಯ ಜಲ ಪ್ರದೇಶದಿಂದ ದೂರಕ್ಕೆ
ದಬ್ಬಲಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್ ಬೀರ್ ಸಿಂಗ್ ಅವರು 2019 ಡಿಸೆಂಬರ್ 04ರ ಮಂಗಳವಾರ ಇಲ್ಲಿ ಹೇಳಿದರು. ಚೀನೀ ಸಂಶೋಧನಾ ನೌಕೆಯು ಯಾವುದೇ ಕಾರ್ಯಾಚರಣೆ ನಡೆಸಲು ಅನುಪತಿ ಪಡೆದಿರಲಿಲ್ಲ ಎಂದು ನುಡಿದ ಅವರು ಅನುಮತಿ ಇಲ್ಲದೆ ಭಾರತೀಯ ಜಲ ಪ್ರದೇಶ ಪ್ರವೇಶಿಸುವುದರ
ವಿರುದ್ಧ ಎಚ್ಚರಿಕೆ ನೀಡಿದರು. ‘ನಮ್ಮ ವಿಶೇಷ ಆರ್ಥಿಕ ವಲಯದಲ್ಲಿ (ಇಇಝಡ್) ನೀವು ಏನಾದರೂ ಮಾಡುವುದಿದ್ದರೆ ನೀವು ನಮಗೆ ತಿಳಿಸಬೇಕು ಮತ್ತು ಅನುಮತಿ ಪಡೆಯಬೇಕು ಎಂಬುದು ನಮ್ಮ ನಿಲುವು’ ಎಂದು ಡಿಸೆಂಬರ್ ೪ರಂದು ನಡೆಯುವ ನೌಕಾ ದಿನಕ್ಕೆ ಮುಂಚಿತವಾಗಿ ಮಂಗಳವಾರ ನಡೆಸಿದ ತಮ್ಮ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಸಿಂಗ್ ನುಡಿದರು. ಸಮುದ್ರ ಕಾನೂನಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಸಮಾವೇಶದ ಪ್ರಕಾರ, ಯಾವುದೇ ರಾಷ್ಟ್ರವೊಂದರ ವಿಶೇಷ ಆರ್ಥಿಕ ವಲಯವು ಅದರ ಕರಾವಳಿಯಿಂದ ೨೦೦ ನಾಟಿಕಲ್ ಮೈಲುಗಳಷ್ಟು ದೂರಕ್ಕೆ ವ್ಯಾಪಿಸಿದೆ ಮತ್ತು ಈ ಸಮುದ್ರ ವಲಯದಲ್ಲಿ
ನೈಸರ್ಗಿಕ ಸಂಪನ್ಮೂಲಗಳ ಅನ್ವೇಷಣೆ, ಬಳಕೆ, ಸಂರಕ್ಷಣೆ ಮತ್ತು ನಿರ್ವಹಣೆಯನ್ನು ಮಾಡುವ ಸಾರ್ವಭೌಮ ಹಕ್ಕುಗಳನ್ನು ಆ ರಾಷ್ಟ್ರವು ಹೊಂದಿರುತ್ತದೆ.
ಚೀನೀ ನೌಕೆ ಶಿ ಯಾನ್ ೧,
ಸೆಪ್ಟೆಂಬರ್ ತಿಂಗಳಲ್ಲಿ ಪೋರ್ಟ್ ಬ್ಲೇರ್ ಸಮೀಪ ಕೆಲವು ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬಂದಿತ್ತು ಮತ್ತು
ತತ್ ಕ್ಷಣವೇ ಅಲ್ಲಿಂದ ದೂರಕ್ಕೆ ತೆರಳುವಂತೆ ಅದಕ್ಕೆ ಸೂಚನೆ ನೀಡಲಾಯಿತು ಎಂದು ಸಿಂಗ್ ವಿವರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಕೋರಿ
2019: ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಕೋರಿ
ಕಾಂಗ್ರೆಸ್ನಾಯಕ ಪಿ. ಚಿದಂಬರಂ ಅವರು ಸಲ್ಲಿಸಿರುವ ಅರ್ಜಿಯ ಮೇಲಿನ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ 2019 ಡಿಸೆಂಬರ್ 04ರ ಬುಧವಾರ ಪ್ರಕಟಿಸಲಿದೆ. ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ಪೀಠವು, ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್ ನವೆಂಬರ್ ೧೫ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಮೇಲಿನ ವಾದ- ಪ್ರತಿವಾದ ಆಲಿಸಿದ ಬಳಿಕ ನವೆಂಬರ್ ೨೮ರಂದು ತನ್ನ
ತೀರ್ಪನ್ನು ಕಾಯ್ದಿರಿಸಿತ್ತು. ವಿಚಾರಣೆಯ ಕಾಲದಲ್ಲಿ ೭೪ರ ಹರೆಯದ ಮಾಜಿ ವಿತ್ತ ಸಚಿವರು ಈಗಲೂ ಪ್ರಭಾವಶಾಲಿಯಾಗಿದ್ದು ಕಸ್ಟಡಿಯಲ್ಲಿ ಇದ್ದಾಗಲೇ ಪ್ರಕರಣದ ನಿರ್ಣಾಯಕ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಲ್ಲವರಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ವಾದಿಸಿತ್ತು. ಸಂಸ್ಥೆಯು ಬುಡರಹಿತ ಆರೋಪಗಳನ್ನು ಮಾಡುವ ಮೂಲಕ ತನ್ನ ವೃತ್ತಿ ಮತ್ತು ಗೌರವವನ್ನು ನಾಶ ಪಡಿಸಲು ಸಾಧ್ಯವಿಲ್ಲ ಎಂದು ಚಿದಂಬರಂ ಉತ್ತರಿಸಿದ್ದರು. ಜಾರಿ ನಿರ್ದೇಶನಾಲಯ ಪರ ಹಾಜರಾಗಿದ್ದ ಸಾಲಿಸಿಟರ್
ಜನರಲ್ ತುಷಾರ ಮೆಹ್ತ ಅವರು ಚಿದಂಬರಂ ಮನವಿಯನ್ನು ವಿರೋಧಿಸಿ, ಹಣ ವರ್ಗಾವಣೆಯಂತಹ ಆರ್ಥಿಕ
ಅಪರಾಧಗಳು ಗಂಭೀರ ಸ್ವರೂಪದವಾಗಿವೆ. ಅವುಗಳು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲ, ವ್ಯವಸ್ಥೆ ಮೇಲಿನ ಜನರ ನಂಬಿಕೆಯನ್ನೇ ಅಲುಗಾಡಿಸುತ್ತವೆ. ಅದರಲ್ಲೂ ಅಧಿಕಾರದಲ್ಲಿ ಇರುವವರು ಇಂತಹ ಅಪರಾಧ ಎಸಗಿದಾಗ ಅದರ ಪರಿಣಾಮ ಇನ್ನೂ ಹೆಚ್ಚು ಎಂದು ವಾದಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿವಾಸದಲ್ಲಿ ಸಂಭವಿಸಿದ ಭದ್ರತಾ ಲೋಪದ ಘಟನೆಯ ಹಿನ್ನೆಲೆಯಲ್ಲಿ ಮೂರು ಮಂದಿ ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಉನ್ನತ ಮಟ್ಟದ ತನಿಖೆಗೆ ಆಜ್ಞಾಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2019 ಡಿಸೆಂಬರ್ 03ರ ಮಂಗಳವಾರ
ರಾಜ್ಯಸಭೆಯಲ್ಲಿ ಪ್ರಕಟಿಸಿದರು. ವಿಶೇಷ ಭದ್ರತಾ ಗುಂಪು (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್- ಎಸ್ಪಿಜಿ) ಕಾಯ್ದೆ ತಿದ್ದುಪಡಿ ಮೇಲಿನ ಕೋಲಾಹಲಕಾರೀ ಚರ್ಚೆಯ ಕೊನೆಯಲ್ಲಿ ಈ ಪ್ರಕಟಣೆ ಮಾಡಿದ
ಅಮಿತ್ ಶಾ ’ಇದು ಕೇವಲ ಕಾಕತಾಳೀಯ ಘಟನೆ’ ಎಂದು ಹೇಳಿದರು. ಗಾಂಧಿ ಕುಟುಂಬದ ಸದಸ್ಯರ ಭದ್ರತೆಗೆ ಸಂಬಂಧಿಸಿದಂತೆ ಸದನದಲ್ಲಿ ವ್ಯಕ್ತವಾದ ಕಳವಳಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ ’ಸರ್ಕಾರವು ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದೆ ಮತ್ತು ಉನ್ನತ ಮಟ್ಟದ ತನಿಖೆಗೆ ಆಜ್ಞಾಪಿಸಿದೆ. ಯಾರೂ ಅವಕಾಶಗಳನ್ನು ತೆಗೆದುಕೊಳ್ಳಲು ಸರ್ಕಾರ ಬಯಸುವುದಿಲ್ಲ’ ಎಂದು
ಅವರು ನುಡಿದರು.ಪ್ರಿಯಾಂಕಾ
ಗಾಂಧಿ ಅವರ ನಿವಾಸಕ್ಕೆ ಕರಿಯ ಟಾಟಾ ಸಫಾರಿ ಇತ್ತೀಚೆಗೆ ಭದ್ರತಾ ಸಿಬ್ಬಂದಿಯಿಂದ ತಪಾಸಣಾ ತಡೆ ಇಲ್ಲದೆ ಪ್ರವೇಶಿಸಿದ್ದು ಹೇಗೆ ಎಂಬುದನ್ನು ಕೂಡಾ ಶಾ ಸದನದಲ್ಲಿ ವಿವರಿಸಿದರು.
ಭದ್ರತಾ ಲೋಪ ಎಂಬುದಾಗಿ ಪರಿಗಣಿಸಲಾದ ಘಟನೆ ಬಗ್ಗೆ ಕಾಂಗ್ರೆಸ್ ಪಕ್ಷವು ತೀವ್ರ ಕಳವಳ ವ್ಯಕ್ತ ಪಡಿಸಿತ್ತು. ಘಟನೆಯು ನವೆಂಬರ್ ೨೫ರಂದು ವರದಿಯಾಗಿತ್ತು ಎಂದು ನುಡಿದ ಶಾ ಘಟನಾವಳಿಗಳ ವಿವರ
ನೀಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಸತತ ನಾಲ್ಕನೇ ಬಾರಿ ಎಲ್ಪಿಜಿ ಸಿಲಿಂಡರ್ ದರದಲ್ಲಿ ಏರಿಕೆ ಕಂಡುಬಂದಿದ್ದು, ೧೪.೨ ಕೆಜಿ
ಸಿಲಿಂಡರ್ ಮೇಲೆ ೧೩.೫೦ ರೂ.
ಬೆಲೆ ಹೆಚ್ಚಳವಾಯಿತು. ಇಂಡಿಯನ್
ಆಯಿಲ್ ಕಂಪನಿಯ ಪ್ರಕಾರ, ದೇಶಾದ್ಯಂತ ನಿತ್ಯ ೩೦ ಲಕ್ಷ ಸಿಲಿಂಡರ್
ವಿತರಣೆ ಆಗುತ್ತಿದೆ. ನವದೆಹಲಿಯಲ್ಲಿ ೧೪.೨ ಕೆಜಿ
ಸಬ್ಸಿಡಿ ರಹಿತ ಸಿಲಿಂಡರ್ ೬೯೫ ರೂ.ಗೆ ಲಭ್ಯವಾಗುತ್ತಿದ್ದು,
ಮುಂಬಯಿಯಲ್ಲಿ ೬೬೫, ಚೆನ್ನೈಯಲಲಿ ೭೧೪ ರೂ. ಮತ್ತು ಕೋಲ್ಕತ್ತಾದಲ್ಲಿ ೭೨೫ ರೂ.ಗೆ ಮಾರಾಟ
ಆಗುತ್ತಿದೆ. ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವ ಇಂಧನ ಚಿಲ್ಲರೆ ವ್ಯಾಪಾರಿಗಳು ದಿನದಿಂದ ದಿನಕ್ಕೆ ಬೆಲೆಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ಕಳೆದ ತಿಂಗಳು ಸುಮಾರು ೭೬ ರೂ. ಹೆಚ್ಚಳವಾಗಿದ್ದರೆ
ಅಕ್ಟೋಬರ್ ಮತ್ತು ಸೆಪ್ಟೆಂಬರಿನಲ್ಲಿ ತಲಾ ೧೫ ರೂ. ಏರಿಕೆಯಾಗಿದೆ
ಎಂದು ವರದಿಗಳು ತಿಳಿಸಿದವು. ಈ ತಿಂಗಳ ಪ್ರಾರಂಭದಲ್ಲೇ ೧೩.೫೦ ರೂ.
ಹೆಚ್ಚಳವಾಗಿದ್ದು, ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಡಾಲರ್ ಮತ್ತು ರೂಪಾಯಿ ವಿನಿಮಯ ದರದ ಮೇಲೆ ಎಲ್.ಪಿ.ಜಿ. ಬೆಲೆ
ನಿರ್ಧಾರವಾಗುತ್ತದೆ. ಈರುಳ್ಳಿ ದರ ಏರಿಕೆ ಆಗುತ್ತಿರುವುದರ
ನಡುವೆಯೇ ಅಡುಗೆ ಇಂಧನ ಅನಿಲ ಬೆಲೆ ಹೆಚ್ಚಾಗಿರುವುದು ಗ್ರಾಹಕರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಬಡತನ ನಿಯಂತ್ರಣಕ್ಕೆ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಗ್ರಾಮೀಣ ಮಟ್ಟದಲ್ಲಿ ಬಡತನ ಇನ್ನೂ ಏರಿದೆ ಎಂದು ಅಂಕಿ ಅಂಶಗಳು ಹೇಳಿವೆ. ೧೯೮೦ರ ಬಳಿಕ ಭಾರತ ಅಭಿವೃದ್ಧಿಯ ಹಳಿಯಲ್ಲಿದ್ದರೂ, ಗ್ರಾಮೀಣ ಬಡತನ ಏರುತ್ತಿರುವುದು ನಿಜಕ್ಕೂ ಒಂದು ಸವಾಲಾಗಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಗ್ರಾಮೀಣ ಬಡತನ
ಏರಿರುವ ಕುರಿತ ಅಂಕಿಅಂಶಗಳನ್ನು 2019 ಡಿಸೆಂಬರ್ 03ರ ಮಂಗಳವಾರ ಬಹಿರಂಗ
ಪಡಿಸಿತು. ಅಂಕಿಸಂಖ್ಯೆಗಳ
ಪ್ರಕಾರ ೨೦೧೧-೧೨ರ ಅವಧಿಯಲ್ಲಿ ಗ್ರಾಮೀಣ ಬಡತನ ಶೇ.೪ರಷ್ಟು ಏರಿಕೆ
ಕಂಡಿದ್ದರೆ, ೨೦೧೭-೧೮ರಲ್ಲಿ ಗ್ರಾಮೀಣ ಬಡತನ ಶೇ.೩೦ರಷ್ಟು ಏರಿಕೆ
ಕಂಡಿದೆ. ಇದೇ ಅವಧಿಯಲ್ಲಿ ನಗರ ಬಡತನ ಶೇ.೫ರಷ್ಟು ಮತ್ತು
ಶೇ.೯ರಷ್ಟು ಇಳಿಕೆ ಕಂಡಿದೆ. ಒಟ್ಟಾರೆ ಲೆಕ್ಕಾಚಾರದ ಪ್ರಕಾರ ೨೦೧೭-೧೮ರ ಅವಧಿಯಲ್ಲಿ ಬಡತನ ಶೇ.೨೩ರಷ್ಟು ಇದೆ
ಎಂದು ಹೇಳಲಾಗಿದೆ. ಸದ್ಯದ ಮಾಹಿತಿ ಪ್ರಕಾರ ದೇಶದಲ್ಲಿ ೩ ಕೋಟಿ ಮಂದಿ
ಬಡತನ ರೇಖೆಗಿಂತ ಕೆಳಗಿನವರು ಎಂದು ಹೇಳಲಾಯಿತು. ಅತಿ ಹೆಚ್ಚು ಬಡತನ ದೊಡ್ಡ ರಾಜ್ಯಗಳಾದ ಜಾರ್ಖಂಡ್, ಬಿಹಾರ, ಒಡಿಶಾದಲ್ಲೇ ಇದೆ. ಬಿಹಾರದಲ್ಲಿ ೨೦೧೧-೧೨ರಲ್ಲಿ ಗ್ರಾಮೀಣ ಬಡತನ ಶೇ.೧೭ರಷ್ಟು ಇದ್ದರೆ,
೨೦೧೭-೧೮ರಲ್ಲಿ ಶೇ.೫೦.೪೭ಕ್ಕೆ
ಏರಿದೆ. ಜಾರ್ಖಂಡ್ನಲ್ಲಿ ಶೇ.೮.೬ರಷ್ಟು
ಏರಿಕೆಯಾಗಿದ್ದರೆ, ಒಡಿಶಾದಲ್ಲಿ ಶೇ.೮.೧ರಷ್ಟು
ಏರಿಕೆಯಾಗಿದೆ. ಜಾರ್ಖಂಡ್ ಮತ್ತು ಒಡಿಶಾದಲ್ಲಿ ಶೇ.೪೦ರಷ್ಟಕ್ಕಿಂತಲೂ ಹೆಚ್ಚು
ಮಂದಿ ಬಡತನ ರೇಖೆಗಿಂತ ಕೆಳಗಿನವರು ಎಂದು ಹೇಳಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
No comments:
Post a Comment