Sunday, December 22, 2019

ಇಂದಿನ ಇತಿಹಾಸ History Today ಡಿಸೆಂಬರ್ 22

2019: ನವದೆಹಲಿ: ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭುಗಿಲೆದ್ದಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಮಧ್ಯೆ, ದೆಹಲಿಯ ರಾಮಲೀಲಾ ಮೈದಾನದಲ್ಲಿ 2019 ಡಿಸೆಂಬರ್ 22 ಭಾನುವಾರ ನಡೆದ ಬೃಹತ್ ಸಭೆಯಲ್ಲಿ  ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿಎನ್ಆರ್ಸಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಗೂ ಮುಸ್ಲಿಮರಿಗೂ ಯಾವುದೇ ಸಂಬಂಧವೂ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಟೀಕಾಕಾರರನ್ನು ತರಾಟೆಗೆ ತೆಗೆದುಕೊಳ್ಳಲು ಭಾರತೀಯ ಜನತಾಪಕ್ಷವು ಸಂಘಟಿಸಿದ್ದಆಭಾರ್ ಸಭೆಯನ್ನು ಬಳಸಿಕೊಂಡ ಪ್ರಧಾನಿ, ತಮ್ಮ ಪ್ರತಿಸ್ಪರ್ಧಿಗಳು ತಿದ್ದುಪಡಿಗೊಂಡಿರುವ ಪೌರತ್ವ ಕಾಯ್ದೆ ಬಗ್ಗೆ ಮುಸ್ಲಿಮರನ್ನು ದಾರಿ ತಪ್ಪಿಸಿ ಜನರಲ್ಲಿ ಭೀತಿ ಹುಟ್ಟು ಹಾಕಲು ಯತ್ನಿಸುತ್ತಿದ್ದಾರೆ ಎಂದು ಆಪಾದಿಸಿದರು. ತಮ್ಮ ಸರ್ಕಾರದ ಯಾವುದೇ ಕಾರ್ಯಕ್ರಮಗಳು ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯವನ್ನೂ ಮಾಡಿಲ್ಲ. ಪೌರತ್ವ ಕಾನೂನು ಮತ್ತು ಉದ್ದೇಶಿತ ರಾಷ್ಟ್ರೀಯ ಪೌರ ನೋಂದಣಿಗೂ ಭಾರತೀಯ ಮುಸ್ಲಿಮರಿಗೂ ಯಾವ ಸಂಬಂಧವೂ ಇಲ್ಲ ಎಂದು ಮೋದಿ ಹೇಳಿದರು. ‘ ಸರ್ಕಾರವು ಜನರ ಹಕ್ಕುಗಳನ್ನು ಕಿತ್ತುಕೊಳ್ಳಲು ಕಾನೂನು ತಂದಿದೆ ಎಂದು ಸುಳ್ಳನ್ನು ಹರಡಲಾಗುತ್ತಿದೆಎಂದು ಹೇಳಿದ ಪ್ರಧಾನಿ ತಮ್ಮ ಕೆಲಸದಲ್ಲಿ ಏನಾದರೂ ತಾರತಮ್ಯ ನಡೆದಿದ್ದರೆ ಪತ್ತೆ ಹಚ್ಚಿ ಎಂದು ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕಿದರು. ಚುನಾವಣೆಯಲ್ಲಿ ತಮಗೆ ಸವಾಲು ಹಾಕಲು ಆಗಲಿಲ್ಲ ಎಂದು ಪ್ರತಿಸ್ಪರ್ಧಿಗಳು ಈಗ ವದಂತಿಗಳನ್ನು ಹರಡುವ ಮೂಲಕ ರಾಷ್ಟ್ರವನ್ನು ಒಡೆಯಲು ಹೊರಟಿದ್ದಾರೆ ಎಂದು ಮೋದಿ ಹೇಳಿದರು. ಯಾವುದೆ ಪ್ರತಿಸ್ಪಧಿ ಪಕ್ಷಗಳ ಹೆಸರನ್ನೂ ಹೇಳದ ಪ್ರಧಾನಿ, ’ನಕಲಿ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಉನ್ನತ ಸ್ಥಾನಗಳಲ್ಲಿ ಇದ್ದವರು ಜನರನ್ನು ಪ್ರಚೋದಿಸುತ್ತಿದ್ದಾರೆಎಂದು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರನಟ ಅಮಿತಾಭ್ ಬಚ್ಚನ್ ಅವರು ಅಸ್ವಾಸ್ಥ್ಯದ ಕಾರಣ 2019 ಡಿಸೆಂಬರ್ 23ರ ಸೋಮವಾರ ನಡೆಯಲಿರುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ. ಬಚ್ಚನ್ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಬೇಕಾಗಿತ್ತು. ‘ಜ್ವರದಿಂದ ಮಲಗಿದ್ದೇನೆ. ಪ್ರಯಾಣಕ್ಕೆ ಅನುಮತಿ ಇಲ್ಲ.. ದೆಹಲಿಯಲ್ಲಿ ಸೋಮವಾರ ನಡೆಯಲಿರುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ದುರದೃಷ್ಟಕರ... ನನ್ನ ವಿಷಾದಗಳು...’ ಎಂದು ಅಮಿತಾಭ್ ಬಚ್ಚನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 2019 ಡಿಸೆಂಬರ್ 22ರ ಭಾನುವಾರ ಪ್ರಕಟಿಸಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ದೆಹಲಿಯ ವಿಜ್ಞಾನಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ವಿಜೇತರಿಗೆ ಪ್ರದಾನ ಮಾಡಲಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿತು. ಇದಕ್ಕೆ ಮುನ್ನ ಅಮಿತಾಭ್ ಬಚ್ಚನ್ ಅವರು ತಮ್ಮನ್ನು ಪ್ರತಿಷ್ಠಿತ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದರು. ’ಹರಿದು ಬರುತ್ತಿರುವ ಅಭಿನಂದನೆಗಳ ಔದಾರ್ಯಕ್ಕೆ ಉತ್ತರಿಸಲು ಪದಗಳೇ ಸಿಗುತ್ತಿಲ್ಲ. ಪದಗಳಿಗಾಗಿ ತಡಕಾಡುತ್ತಿದ್ದೇನೆ.. ನಾನು ಅತ್ಯಂತ ಕೃತಜ್ಞನಾಗಿದ್ದೇನೆ ಮತ್ತು ಅತ್ಯಂತ ವಿನೀತನಾಗಿದ್ದೇನೆ...ನನ್ನ ಪ್ರಾಮಾಣಿಕ ಕೃತಜ್ಞತೆಗಳು. ಮನಸ್ಸಿನಲ್ಲಿ ಏನಿದೆಯೋ ಗೊತ್ತಾಗುತ್ತಿಲ್ಲ.. ಬಹುಶಃ ಎಂದಿಗೂ ಗೊತ್ತಾಗುವುದಿಲ್ಲ.. ಕೃತಜ್ಞತೆಗಳು ಮತ್ತು ಅತ್ಯಂತ ವಿನಮ್ರತೆಯ ಭಾವನೆ .. ಇವತ್ತು ಸರ್ವೋಚ್ಚ ಎನ್ನಿಸುತ್ತಿದೆ.. ಮತ್ತು ಪ್ರೀತಿಯೊಂದಿಗೆಎಂದ ಬಚ್ಚನ್ ಬರೆದಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹದಗೆಡುತ್ತಿರುವ ದೇಶದ ಆರ್ಥಿಕ ಸ್ಥಿತಿ ಬಗೆಗಿನ ಯುವಕರ ಸಿಟ್ಟಿನಿಂದ ತಪ್ಪಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರುದ್ವೇಷದ ಹಿಂದೆ ಅಡಗಿಕೊಂಡಿದ್ದಾರೆಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ಡಿಸೆಂಬರ್ 22ರ ಭಾನುವಾರ ಆಪಾದಿಸಿದರು. ದೆಹಲಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಧೋರಣೆಯನ್ನು ಟೀಕಿಸಿದ ಬೆನ್ನಲ್ಲೇ ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ಅವರು ಉಭಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಕೆಲವು ದಿನಗಳಿಂದ ಭಾರತದಿಂದ ಹೊರಗಿದ್ದ ರಾಹುಲ್ ಗಾಂಧಿ, ’ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಭಾರತದ ಯುವಕರ ಭವಿಷ್ಯವನ್ನು ನಾಶ ಪಡಿಸಿದ್ದಾರೆಎಂದು ಟೀಕಿಸಿದರು. ‘ಮೋದಿ ಮತ್ತು ಶಾ ಅವರು ಹೆಚ್ಚುತ್ತಿರುವ ನಿರುದ್ಯೋಗ ಮತ್ತು ದೇಶದ ಆರ್ಥಿಕ ದುಃಸ್ಥಿತಿ ಹಿನ್ನೆಲೆಯಲ್ಲಿ ಯುವಕರ ಸಿಟ್ಟಿನಿಂದ ತಪ್ಪಿಸಿಕೊಳ್ಳಲುದ್ವೇಷದ ಹಿಂದೆ ಅಡಗಿದ್ದಾರೆಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ದೂರಿದರು. ‘ಭಾರತದ ಪ್ರೀತಿಯ ಯುವಕರೇ, ಮೋದಿ ಮತ್ತು ಶಾ ನಿಮ್ಮ ಭವಿಷ್ಯವನ್ನು ನಾಶ ಪಡಿಸಿದ್ದಾರೆ. ಉದ್ಯೋಗದ ಅಭಾವ ಮತ್ತು ತಾವು ಆರ್ಥಿಕತೆಗೆ ಮಾಡಿರುವ ಹಾನಿಯ ಬಗೆಗಿನ ನಿಮ್ಮ ಸಿಟ್ಟನ್ನು ಅವರು ಎದುರಿಸಲಾರರು. ಅದಕ್ಕಾಗಿ ಅವರು ನಮ್ಮ ಒಲವಿನ ಭಾರತವನ್ನು ವಿಭಜಿಸುತ್ತಿದ್ದಾರೆ ಮತ್ತು ದ್ವೇಷದ ಹಿಂದೆ ಅವಿತಿದ್ದಾರೆಎಂದು ರಾಹುಲ್ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ಮುಂಬೈಯ ಹೊರವಲಯ ವಿಲೆ ಪಾರ್ಲೆಯಲ್ಲಿ ವಸತಿ ಕಟ್ಟಡವೊಂದರಲ್ಲಿ 2019 ಡಿಸೆಂಬರ್ 22ರ ಭಾನುವಾರ ರಾತ್ರಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು ರಾತ್ರಿ 11 ಗಂಟೆಯ ವೇಳೆಗೆ ಬೆಂಕಿಯನ್ನು ಆರಿಸಲಾಯಿತು. ಐದು ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದರು. ವಿಲೇ ಪಾರ್ಲೆಥಿ (ಪಶ್ಚಿಮ) ೧೩ ಅಂತಸ್ತುಗಳ ಲಭ ಶ್ರಿವಾಲಿ ಕಟ್ಟಡದ ಮತ್ತು ೮ನೇ ಮಹಡಿಯಲ್ಲಿ ರಾತ್ರಿ .೧೦ರ ಅಂದಾಜಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿ ಹೇಳಿದರು.ಕನಿಷ್ಠ -೧೦ ಅಗ್ನಿಶಾಮಕ ವಾಹನಗಳು ನೀರಿನ ಟ್ಯಾಂಕರುಗಳ ಜೊತೆಗೆ ೧೦ ನಿಮಿಷಗಳ ಒಳಗಾಗಿ ಸ್ಥಳಕ್ಕೆ ಧಾವಿಸಿದವು ಎಂದು ಅವರು ನುಡಿದರು. ‘ಕಟ್ಟಡದಲ್ಲಿ ಬಹಳಷ್ಟು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಭೀತಿ ಪಡಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ ನಾಲ್ವರನ್ನು ರಕ್ಷಿಸಲಾಗಿದೆ ಎಂದು ಅವರು ಇದಕ್ಕೆ ಮುನ್ನ ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)




No comments:

Post a Comment