ನಾನು ಮೆಚ್ಚಿದ ವಾಟ್ಸಪ್

Saturday, December 21, 2019

ಇಂದಿನ ಇತಿಹಾಸ History Today ಡಿಸೆಂಬರ್ 21

ನವದೆಹಲಿ: ಉತ್ತರ ಪ್ರದೇಶದ ರಾಮಪುರ ಪಟ್ಟಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭುಗಿಲೆದ್ದ ಹೊಸ ಪ್ರತಿಭಟನೆ ಹಿಂಸಾಚಾರದಲ್ಲಿ ಮೃತನಾದ ವ್ಯಕ್ತಿ ಸೇರಿದಂತೆ  2019 ಡಿಸೆಂಬರ್ 21ರ ಶನಿವಾರದವರೆಗೆ ರಾಜ್ಯದಲ್ಲಿ ಹಿಂಸಾಚಾರಗಳಿಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿತು. ಮಧ್ಯೆ ಯಾವುದೇ ಭಾರತೀಯನ ಹಳೆಯ ದಾಖಲೆಗಳಿಗಾಗಿ ಕಿರುಕುಳ ನೀಡಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟ ಪಡಿಸಿತು.  ರಾಜ್ಯದಲ್ಲಿ ಹಿಂಸಾಚಾರಕ್ಕೆ ಬಲಿಯಾದವರಲ್ಲಿ ಒಬ್ಬ ಬಾಲಕನೂ ಸೇರಿದ್ದಾನೆ.  ರಾಮಪುರದಲ್ಲಿ 2019 ಡಿಸೆಂಬರ್ 21ರ ಶನಿವಾರ ಸುಮಾರು ಎರಡು ಗಂಟೆ ಕಾಲ ಕಲ್ಲು ತೂರಾಟ ಮತ್ತು ಬೆಂಕಿ ಹಚ್ವುವ ಕೃತ್ಯದಲ್ಲಿ ತೊಡಗಿದ್ದ ಹಿಂಸಾಚಾರ ನಿರತ ಪ್ರತಿಭಟನಕಾರರ ಗುಂಪು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದರು. ಕಾನ್ಪುರದಲ್ಲೂ ಪ್ರತಿಭಟನಕಾರರು ಕಲ್ಲೆಸೆತದಲ್ಲಿ ತೊಡಗಿದ್ದು, ಪೊಲೀಸರು ಅವರ ಮೇಲೆ ಅಶ್ರುವಾಯು ಪ್ರಯೋಗಿಸಿದರು ಎಂದು ವರದಿಗಳು ಹೇಳಿವೆ. ಮುಸ್ಲಿಮ್ ಧಾರ್ಮಿಕ ಮುಖಂಡರು ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದನ್ನು ಅನುಸರಿಸಿ, ಯಾವುದೇ ಪ್ರದರ್ಶನಕ್ಕೆ ಆಡಳಿತವು ಅನುಮತಿ ನಿರಾಕರಿಸಿದ ಬಳಿಕ ಹಿಂಸಾಚಾರ ಸಂಭವಿಸಿದ್ದು, ಸ್ಥಳಕ್ಕೆ ಹೆಚ್ಚುವರಿ ಕೇಂದ್ರೀಯ ಅರೆ ಸೇನಾ ಪಡೆಗಳು ಧಾವಿಸಿದವು. ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿ, ಸರ್ಕಾರವು ಪ್ರತಿಯೊಬ್ಬ ನಾಗರಿಕನಿಗೂ ರಕ್ಷಣೆ ಒದಗಿಸುತ್ತದೆ ಎಂದು ಹೇಳಿದರು.  ‘ಇಂತಹ ಪ್ರತಿಭಟನೆಗಳಿಂದ ಯಾವುದೇ ಲಾಭವಿಲ್ಲ, ಸಾರ್ವಜನಿಕ ಆಸ್ತಿ ನಾಶ, ಜನರಿಗೆ ಹಾನಿಯಾಗುತ್ತದೆ ಅಷ್ಟೆಎಂದು ಅವರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದರು. ಇದಕ್ಕೆ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಿದ್ದರು. 2019 ಡಿಸೆಂಬರ್ 20ರ ಶುಕ್ರವಾರದ ಹಿಂಸಾಚಾರದಲ್ಲಿ ಮೀರತ್ನಲ್ಲಿ ಮಂದಿ, ಕಾನ್ಪುರ, ಬಿಜ್ನೋರ್, ಫಿರೋಜಾಬಾದಿನಲ್ಲಿ ತಲಾ ಇಬ್ಬರು ಮತ್ತು ಮುಜಾಫ್ಫರನಗರ, ಸಂಭಲ್ ಮತ್ತು ವಾರಾಣಸಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದರು. ವಾರಾಣಸಿಯಲ್ಲಿ ಪೊಲೀಸ್ ಲಾಠಿ ಪ್ರಹಾರದ ಬಳಿಕ ಸಂಭವಿಸಿದ ಕಾಲ್ತುಳಿತದಲ್ಲಿ ವರ್ಷದ ಒಬ್ಬ ಬಾಲಕ ಸಾವನ್ನಪ್ಪಿದ್ದ. ೨೮ ವರ್ಷದ ಯುವಕನೊಬ್ಬ ಲಕ್ನೋದಲ್ಲಿ ಗುರುವಾರದ ಹಿಂಸಾಚಾರಕ್ಕೆ ಬಲಿಯಾಗಿದ್ದ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ/ ಮುಂಬೈ: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ರಾಷ್ಟ್ರವಾಪಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೇಳುತ್ತಿದ್ದಂತೆಯೇ,  ಕಾಯ್ದೆ ವಿಚಾರವಾಗಿ ರಾಷ್ಟ್ರವ್ಯಾಪಿ ಸಮೂಹ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲು ಬಿಜೆಪಿ 2019 ಡಿಸೆಂಬರ್ 21ರ ಶನಿವಾರ ನಿರ್ಧರಿಸಿತು. ಇದೇ ವೇಳೆಗೆ ಕಾಯ್ದೆ ಪರವಾಗಿ ಪ್ರದರ್ಶನಗಳೂ  ನಡೆಯಲು ಆರಂಭವಾದವು.  ಮುಂಬೈಯ ದಾದರ್  ರೈಲ್ವೇ ನಿಲ್ದಾಣದ ಹೊರಭಾಗದಲ್ಲಿ 2019 ಡಿಸೆಂಬರ್ 21ರ ಶನಿವಾರ ನೂರಾರು ಮಂದಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಪ್ರದರ್ಶನ ನಡೆಸಿದರುಪ್ರದರ್ಶನಕಾರರು ಕಾಯ್ದೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿ ಘೋಷಣೆಗಳನ್ನು ಕೂಗಿದರುಪ್ರದರ್ಶನವನ್ನು ಸಂಘಟಿಸಿದಸಂವಿಧಾನ ಸಂಮಾನ ಮಂಚ್ಜನತೆಗೆ ಶಾಂತಿಯುತವಾಗಿಯೇ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಪ್ರಕ್ರಿಯೆಯನ್ನು ಬೆಂಬಲಿಸುವಂತೆ ಮನವಿ ಮಾಡಿತು. ಶಿಕ್ಷಣ ತಜ್ಞರ ಬೆಂಬಲ: ಮಧ್ಯೆ, ದೇಶಾದ್ಯಂತದ ವಿವಿಧ ವಿಶ್ವ ವಿದ್ಯಾಲಯಗಳ ಸುಮಾರು ೧೦೦೦ ಮಂದಿ ಶಿಕ್ಷಣ ತಜ್ಞರು ಶನಿವಾರ ಪೌರತ್ವ ತಿದುಪಡಿ ಕಾಯ್ದೆಯನ್ನು ಬೆಂಬಲಿಸಿ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡಿದರು. ಬಿಜೆಪಿಯಿಂದ ಸಮೂಹ ಸಂಫರ್ಕ: ಏತನ್ಮಧ್ಯೆ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ದೇಶಾದ್ಯಂತ ಕೋಟಿ ಕುಟುಂಬಗಳನ್ನು ಸಂಪರ್ಕಿಸಲು ನಿರ್ಧರಿಸಿತು.  (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ಹೈದರಾಬಾದ್:  ಹೈದರಾಬಾದ್ ಪಶುವೈದ್ಯೆ ಮೇಲಿನ ಅತ್ಯಾಚಾರ-ಹತ್ಯೆ ಆರೋಪಿಗಳ ಶವಗಳ ಮರು ಪರೀಕ್ಷೆಯನ್ನು ೪೮ ಗಂಟೆಗಳ ಒಳಗಾಗಿ ನಡೆಸುವಂತೆ ತೆಲಂಗಾಣ ಹೈಕೋರ್ಟ್ 2019 ಡಿಸೆಂಬರ್ 21ರ ಶನಿವಾರ ಆದೇಶ ನೀಡಿತು. ನಾಲ್ಕು ಮಂದಿ ಅತ್ಯಾಚಾರ- ಹತ್ಯೆ ಆರೋಪಿಗಳನ್ನು ಡಿಸೆಂಬರ್ ೬ರಂದು ಪೊಲೀಸರು ಎನ್ ಕೌಂಟರಿನಲ್ಲಿ ಕೊಂದು ಹಾಕಿದ್ದರು.  ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ .ಅಭಿಷೇಕ್ ರೆಡ್ಡಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ವಿಧಿ ವಿಜ್ಞಾನ ತಜ್ಞರ ತಂಡವು ಸಾವನ್ನಪ್ಪಿರುವ ಆರೋಪಿಗಳ ಮರು ಶವ ಪರೀಕ್ಷೆಯನ್ನು ಡಿಸೆಂಬರ್ ೨೩ರ ಸಂಜೆ ಗಂಟೆಗೆ ಮುನ್ನ ನಡೆಸಬೇಕು ಎಂದು ನಿರ್ದೇಶನ ನೀಡಿತು.  ಶವಪರೀಕ್ಷೆಯ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಮತ್ತು ಸಾವನ್ನಪ್ಪಿರುವ ಆರೋಪಿಗಳ ಶವಗಳನ್ನು ಅವರ ಕುಟುಂಬ ಸದಸ್ಯರಿಗೆ ಒಪ್ಪಿಸಬೇಕು ಎಂದು ಪೀಠವು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಗೆ ಆಜ್ಞಾಪಿಸಿತು.  ಮೊಹಮ್ಮದ್ ಆರಿಫ್, ಜೊಲ್ಲು ನವೀನ್, ಜೊಲ್ಲು ಶಿವ ಮತ್ತು ಚಿಂತಕುಂಟ ಚೆನ್ನಕೇಶವುಲು - ನಾಲ್ಕು ಆರೋಪಿಗಳು ನವೆಂಬರ್ ೨೭ರಂದು ಹೈದರಾಬಾದಿನ ಹೊರವಲಯದಲ್ಲಿ ೨೬ರ ಹರೆಯದ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಂದು ಹಾಕಿದ್ದರು ಎಂದು ಆಪಾದಿಸಲಾಗಿತ್ತು. ಪೊಲೀಸರು ಅವರನ್ನು ಬಂಧಿಸಿ ನವೆಂಬರ್ ೨೭ರಂದು ಸ್ಥಳೀಯ ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಿದ್ದರು. ಹೆಚ್ಚಿನ ತನಿಖೆಗಾಗಿ ಪೊಲೀಸರು ಆರೋಪಿಗಳನ್ನು ಡಿಸೆಂಬರ್ ೪ರವರೆಗೆ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಅವರನ್ನು ಶಾದ್ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಟನಪಳ್ಳಿಗೆ ಡಿಸೆಂಬರ್ ೬ರಂದು ಅವರ ಅಪರಾಧದ ದೃಶ್ಯಾವಳಿಯ ಮರುಸೃಷ್ಟಿ ಸಲುವಾಗಿ ಕರೆದೊಯ್ಯಲಾಗಿತ್ತು. ಘಟನಾಸ್ಥಳದಲ್ಲಿ ಆರೋಪಿಗಳು ಪೊಲೀಸ್ ಸಿಬ್ಬಂದಿಯ ಶಸ್ತ್ರಾಸ್ತ್ರ ಕಿತ್ತುಕೊಂಡು ಅವರತ್ತ ಗುಂಡು ಹಾರಿಸಿದಾಗ, ಅದಕ್ಕೆ  ಪ್ರತಿಯಾಗಿ ಪೊಲೀಸರು ಗುಂಡಿಟ್ಟು ಅವರನ್ನು ಕೊಂದು ಹಾಕಿದ್ದರು. ಆರೋಪಿಗಳ ಶವಗಳನ್ನು ಮೂರು ದಿನಗಳ ಬಳಿಕ ಡಿಸೆಂಬರ್ ೯ರಂದು ಹೈದರಾಬಾದಿನ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಮತ್ತು ಮಹಬೂಬ್ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಶವಪರೀಕ್ಷೆ ನಡೆಸಿ ಬಳಿಕ ಶವಗಳನ್ನು ಅಲ್ಲಿನ ಶವಾಗಾರದಲ್ಲಿ ಇರಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)



No comments:

Post a Comment