Thursday, December 26, 2019

ಇಂದಿನ ಇತಿಹಾಸ History Today ಡಿಸೆಂಬರ್ 26

2019: ನವದೆಹಲಿ: ಅಪರೂಪದ ಕಂಕಣ ಸೂರ್ಯಗ್ರಹಣ  ಡಿಸೆಂಬರ್ 26ರ ಗುರುವಾರ ಬೆಳಗ್ಗೆ ೮ಗಂಟೆಗೆ ಆರಂಭವಾಗಿ, ೧೧.೧೫ಕ್ಕೆ ಮುಕ್ತಾಯವಾಯಿತು. ಈ ಬಾರಿ ಅತಿ ಹೆಚ್ಚು ಸ್ಪಷ್ಟವಾಗಿ ಗ್ರಹಣ ಕರ್ನಾಟಕದ ಮಂಗಳೂರು, ಮೈಸೂರು ಹಾಗೂ ಮಡಿಕೇರಿ ಭಾಗದಲ್ಲಿ ಗೋಚರಿಸಿದ್ದು ವಿಶೇಷವಾಗಿತ್ತು. ಸೌದಿ ಅರೇಬಿಯಾದ ರಿಯಾದ್ ನಲ್ಲಿ ಮೊದಲಿಗೆ ಭಾಗಶಃ ಸೂರ್ಯಗ್ರಹಣ ಗೋಚರಿಸಿತ್ತು. ಭಾರತದಲ್ಲಿ ಅತ್ಯಪರೂಪದ ಕಂಕಣ ಸೂರ್ಯಗ್ರಹಣ ಮೊದಲು ಕೇರಳದ ಚೆರ್ವತ್ತೂರಿನಲ್ಲಿ ಗೋಚರವಾಯಿತು. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಜನರು ಬಾನಂಗಳದಲ್ಲಿ ನಡೆದ ಕಂಕಣ ಸೂರ್ಯಗ್ರಹಣದ ಕೌತುಕವನ್ನು ಸೌರ ಕನ್ನಡಕಗಳನ್ನು ಧರಿಸಿ ಕಣ್ತುಂಬಿಕೊಂಡರು. ವರ್ಷದ ಕಂಕಣ ಸೂರ್ಯಗ್ರಹಣ ಬೆಳಗ್ಗೆ ೯.೦೪ ನಿಮಿಷಕ್ಕೆ ಗೋಚರವಾಗಿದ್ದು, ಗರಿಷ್ಠ ಪ್ರಮಾಣದಲ್ಲಿ ೧೦.೪೭ರ ಸುಮಾರಿಗೆ ಗೋಚರವಾಗತೊಡಗಿತ್ತು. ಪೂರ್ಣ ಪ್ರಮಾಣದಲ್ಲಿ ಶಾಂತಸಾಗರದ ಗುವಾಂನಲ್ಲಿ ೧೨.೩೦ಕ್ಕೆ ಕೊನೆಯದಾಗಿ ಸೂರ್ಯಗ್ರಹಣ ಗೋಚರವಾಗಿ ಮುಕ್ತಾಯವಾಗಿತ್ತು. ಕಂಕಣ ಸೂರ್ಯಗ್ರಹಣ ಪೂರ್ಣ, ಭಾಗಶಃ ಹಾಗೂ ಉಂಗುರಾಕೃತಿ ಸೇರಿದಂತೆ ಮೂರು ವಿಧದಲ್ಲಿ ಕಣ್ಸೆಳೆಯಿತು. ಸೂರ್ಯಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಹೋಮ, ಹವನ ನಡೆಯಿತು. ಬಹುತೇಕ ದೇವಾಲಯಗಳನ್ನು ಸೂರ್ಯಗ್ರಹಣ ಸಮಯದಲ್ಲಿ ಮುಚ್ಚಲಾಗಿದ್ದು, ಸೂರ್ಯಗ್ರಹಣ ಮೋಕ್ಷದ ಬಳಿಕ ಶುದ್ದಿಕಾರ್ಯ ನಡೆಸಿ ಪೂಜೆ, ಪುನಸ್ಕಾರ ಆರಂಭಿಸಿದ್ದವು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ’ಜನಸಮೂಹವನ್ನು ಕಿಚ್ಚಿಡುವಿಕೆ ಮತ್ತು ಹಿಂಸಾಚಾರಕ್ಕೆ ಮುನ್ನಡೆಸುವವರು ’ ನಾಯಕರಲ್ಲ  ಎಂಬುದಾಗಿ  ಹೇಳುವ  ಮೂಲಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು 2019 ಡಿಸೆಂಬರ್ 26ರ ಗುರುವಾರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಚರ್ಚೆಗೆ ಮಧ್ಯಪ್ರವೇಶ ಮಾಡಿದ್ದು, ಅವರ ಹೇಳಿಕೆಗೆ ವಿರೋಧ ಪಕ್ಷಗಳು ಕೆಂಡಾಮಂಡಲ ಸಿಟ್ಟು ಪ್ರದರ್ಶಿಸಿದವು. ದೆಹಲಿಯಲ್ಲಿ ಸಮಾರಂಭ ಒಂದರಲ್ಲಿ ಮಾತನಾಡುತ್ತಿದ್ದ ರಾವತ್ ಅವರುನಾಯಕತ್ವ ಎಂದರೆ ಮುನ್ನಡೆಸುವುದಕ್ಕೆ ಸಂಬಂಧಿಸಿದ್ದು. ನೀವು ಮುಂದಕ್ಕೆ ಸಾಗಿದಾಗ ಎಲ್ಲರೂ ಪ್ರತಿಯೊಬ್ಬರೂ ಹಿಂಬಾಲಿಸುತ್ತಾರೆ.. ಅದು ಅಷ್ಟೊಂದು ಸರಳವಲ್ಲ, ಸಂಕೀರ್ಣ ವಿಚಾರಎಂದು ನುಡಿದರು. ‘ಜನರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವವರು ನಾಯಕರು. ಜನರನ್ನು ನಾವು ಈಗ ನೋಡುತ್ತಿರುವಂತೆ ವಿಶ್ವ ವಿದ್ಯಾಲಯ ಮತ್ತು ಕಾಲೇಜು ವಿದಾರ್ಥಿಗಳ ದೊಡ್ಡ ಸಮೂಹವನ್ನು ಅಸಮರ್ಪಕ ದಿಕ್ಕಿಗೆ ಮುನ್ನಡೆಸುವವರು ನಾಯಕರಲ್ಲನಮ್ಮ ನಗರಗಳು ಮತ್ತು ಪಟ್ಟಣಗಳಲ್ಲಿ ಜನ ಸಮೂಹವನ್ನು ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದತ್ತ ಮುನ್ನಡೆಸುತ್ತಿರುವ ಮಾರ್ಗ, ಇದು ನಾಯಕತ್ವ ಅಲ್ಲಎಂದು ರಾವತ್ ಹೇಳಿದರುಡಿಸೆಂಬರ್ ೩೧ರಂದು ನಿವೃತ್ತರಾಗಲಿರುವ ರಾವತ್ ಅವರು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳ ವಿರುದ್ಧ ಮಾತನಾಡಿರುವುದು ಇದೇ ಪ್ರಥಮ. ವಿವಾದಾತ್ಮಕ ಕಾಯ್ದೆ ವಿರುದ್ಧ ನಡೆದಿರುವ ದೇಶವ್ಯಾಪಿ ಪ್ರತಿಭಟನೆಗಳಲಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಸಂಭವಿಸಿದ ಘರ್ಷಣೆಗಳಲ್ಲಿ ಸುಮಾರು ೨೦ ಮಂದಿ ಮೃತರಾಗಿದ್ದು, ಬಹುತೇಕ ಸಾವುಗಳು ಉತ್ತರಪ್ರದೇಶದಲ್ಲಿ ಸಂಭವಿಸಿವೆ. ಕರ್ನಾಟಕದಲ್ಲಿಯೂ ಇಬ್ಬರು ಸಾವನ್ನಪ್ಪಿದ್ದಾರೆ.  (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ
:
ದೇಶದಲ್ಲಿನಬಂಧನ ಕೇಂದ್ರಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ 
ಮತ್ತು  ಬಿಜೆಪಿ ಕದನ ನಡೆಸುತ್ತಿದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿಡಿಯೋ ಸಹಿತವಾದಪ್ರಧಾನಿಯ ಸುಳ್ಳು (ಜೂಟ್) ಅವಹೇಳನಕ್ಕೆ ಭಾರತೀಯ ಜನತಾ ಪಕ್ಷವು ೨೦೧೧ರ ಪಿಐಬಿ ಪತ್ರಿಕಾ ಹೇಳಿಕೆ ಪ್ರದರ್ಶಿಸುವ ಮೂಲಕ  2019 ಡಿಸೆಂಬರ್ 26ರ ಗುರುವಾರ ಎದಿರೇಟು ನೀಡಿತು. ಮೊದಲಿಗೆಕದನಆರಂಭಿಸಿದ ರಾಹುಲ್ ಗಾಂಧಿಯವರು ಎಡಿಟ್ ಮಾಡಲಾದ ವಿಡಿಯೋ ದೃಶ್ಯಾವಳಿ ಒಂದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಭಾಗವಿದ್ದ ಪತ್ರಿಕಾ ತುಣುಕಿನ ಜೊತೆಗೆ ಲಗತ್ತಿಸಿ ಟ್ವೀಟ್ ಮಾಡಿದ್ದರು. ಭಾರತದಲ್ಲಿ ಬಂಧನ ಕೇಂದ್ರಗಳು ಇಲ್ಲ ಎಂಬುದಾಗಿ ಪ್ರಧಾನಿ ಮಾಡಿದ ಭಾಷಣದ ವರದಿ ಪತ್ರಿಕಾ ತುಣುಕಿನಲ್ಲಿ ಇತ್ತು. ಜೂಟ್, ಜೂಟ್, ಜೂಟ್ ಪದಗಳ ಜೊತೆಗೆ ಹ್ಯಾಷ್ಟ್ಯಾಗ್ ಲಗತ್ತಿಸಿದ್ದ ಮಾಜಿ ಕಾಂಗ್ರೆಸ್ ಅಧ್ಯಕ್ಷರುಆರ್ಎಸ್ಎಸ್ ಪ್ರಧಾನಿಯವರು ಭಾರತ ಮಾತೆಗೆ ಸುಳ್ಳು ಹೇಳುತ್ತಿದ್ದಾರೆಎಂದು ಹಿಂದಿಯಲ್ಲಿ ಅಡಿಟಿಪ್ಪಣಿ ಬರೆದಿದ್ದರು. ಎರಡು ಗಂಟೆಗಳ ಒಳಗಾಗಿ, ಬಿಜೆಪಿ ಇದಕ್ಕೆ ಪ್ರತಿಕ್ರಿಯಿಸಿತು. ಪಕ್ಷದ ಐಟಿ ಸೆಲ್ ಉಸ್ತುವಾರಿ ವಹಿಸಿರುವ ಅಮಿತ್ ಮಾಳವೀಯ ಅವರು ೩೬೨ ಅಕ್ರಮ ವಲಸೆಗಾರರನ್ನು ಅಸ್ಸಾಮಿನ ಬಂಧನ ಶಿಬಿರಗಳಿಗೆ ಕಳುಹಿಸಲಾಗಿದೆ ಎಂಬ ಶೀರ್ಷಿಕೆ ಸಹಿತವಾದ ಪತ್ರಿಕಾ ಮಾಹಿತಿ ಬ್ಯೂರೋದ (ಪಿಐಬಿ) ೨೦೧೧ರ ಪತ್ರಿಕಾ ಪ್ರಕಟಣೆಯ ಸ್ಕ್ರೀನ್ ಶಾಟ್ನ್ನು ಟ್ವೀಟ್ ಮಾಡಿದರು.  ‘ರಾಹುಲ್ ಗಾಂಧಿ. ಅಸ್ಸಾಮಿನಲ್ಲಿ ೩೬೨ ಅಕ್ರಮ ವಲಸೆಗಾರರನ್ನುಬಂಧನ ಶಿಬಿರಗಳಿಗೆಕಳುಹಿಸಲಾಗಿದೆ ಎಂಬುದಾಗಿ ಪ್ರತಿಪಾದಿಸಿ ಕಾಂಗ್ರೆಸ್ ಸರ್ಕಾರವು ಬಿಡುಗಡೆ ಮಾಡಿದ ೨೦೧೧ರ ಪತ್ರಿಕಾ ಪ್ರಕಟಣೆಯನ್ನು ನೋಡಿದ್ದೀರಾ? ಕೇವಲ ಭಾರತವು ನಿಮ್ಮನ್ನು ಪದೇ ಪದೇ ತಿರಸ್ಕರಿಸಿದೆ ಎಂಬ ಕಾರಣಕ್ಕಾಗಿ ನೀವು ಅದನ್ನು ನಿಮ್ಮ ದ್ವೇಷ ರಾಜಕಾರಣ ಮತ್ತು ಭೀತಿಹರಡುವ ಮೂಲಕ ನಾಶ ಪಡಿಸಲು ಟೊಂಕ ಕಟ್ಟಿದ್ದೀರಿಎಂದು ಮಾಳವೀಯ ಅವರು ತಮ್ಮ ಭಾವಚಿತ್ರ ಸಹಿತವಾದ ಟ್ವೀಟಿನಲ್ಲಿ ಎದಿರೇಟು ನೀಡಿದರು.  (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2019: ಹೈದರಾಬಾದ್
:
  ರಾಜ್ಯದ ಆಡಳಿತಾತ್ಮಕ (ಕಾರ್ಯಾಂಗ) ರಾಜಧಾನಿಯನ್ನು  ವಿಶಾಖಪಟ್ಟಣಕ್ಕೆ  ಸ್ಥಳಾಂತರಿಸುವ
  ನಿರ್ಧಾರಕ್ಕೆ ಅನುಮೋದನೆ ನೀಡುವ ನಿರೀಕ್ಷೆಯ ಹಿನ್ನೆಲೆಯಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರು 2019 ಡಿಸೆಂಬರ್ 27ರ ಶುಕ್ರವಾರ ಸಚಿವ ಸಂಪುಟ ಸಭೆ ಕರೆದಿದ್ದು, ಮುಂಜಾಗರೂಕತಾ ಕ್ರಮವಾಗಿ ಹಿರಿಯ ತೆಲುಗುದೇಶಂ ಪಕ್ಷದ (ಟಿಡಿಪಿ) ನಾಯಕರನ್ನು 2019 ಡಿಸೆಂಬರ್ 26ರ ಗುರುವಾರ  ಗೃಹ ಬಂಧನದಲ್ಲಿ ಇರಿಸಲಾಯಿತು ಮತ್ತು ಅಮರಾವತಿಯಲ್ಲಿ ಯಾವುದೇ ಪ್ರತಿಭಟನೆ ನಿಯಂತ್ರಿಸಲು ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು.  ಆಡಳಿತಾತ್ಮಕ ರಾಜಧಾನಿಯನ್ನು ವಿಶಾಖಪಟ್ಟಣ, ಶಾಸಕಾಂಗ ರಾಜಧಾನಿಯನ್ನು ಅಮರಾವತಿ ಮತ್ತು ನ್ಯಾಯಾಂಗ ರಾಜಧಾನಿಯನ್ನು ಕರ್ನೂಲಿನಲ್ಲಿ ಸ್ಥಾಪಿಸುವ ಪ್ರಸ್ತಾಪವನ್ನು ಮುಖ್ಯಮಂತ್ರಿಯವರು ಕಳೆದ ವಾರ ವಿಧಾನಸಭೆಯಲ್ಲಿ ಘೋಷಿಸಿದಂದಿನಿಂದ ಇಡೀ ರಾಜಧಾನಿ ಪ್ರದೇಶ ಅಸಮಾಧಾನದಿಂದ ಕುದಿಯುತ್ತಿತ್ತು.  ಹಿರಿಯ ಟಿಡಿಪಿ ನಾಯಕರಾದ ವಿಜಯವಾಡದ ಸಂಸತ್ ಸದಸ್ಯ ಕೇಸಿನೇನಿ ಶ್ರೀನಿವಾಸ್ ಯಾನೆ ನಾನಿ ಮತ್ತು ವಿಧಾನಪರಿಷತ್ ಸದಸ್ಯ ಬುದ್ಧ ವೆಂಕಣ್ಣ ಅವರು ರಾಜಧಾನಿ ಸ್ಥಳಾಂತರದ ವಿರುದ್ಧ ೨೯ ಗ್ರಾಮಗಳ ರೈತರು ಸಂಘಟಿಸಿರುವಮಹಾ ಧರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುರುವಾರ ಅಮರಾವತಿಗೆ ಹೊರಟಿದ್ದಾಗ ಅವರನ್ನು ಗೃಹ ಬಂಧನಕ್ಕೆ ಒಳಪಡಿಸಲಾಯಿತು.  ತೆಲುಗುದೇಶಂ ಸಂಸತ್ ಸದಸ್ಯರು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮಾಡಲು ಕೋರಲಿದ್ದಾರೆ ಎಂದು ಕೇಸಿನೇನಿ ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಸಚಿವ ಸಂಪುಟವು ಪ್ರಸ್ತುತ ರಾಜಧಾನಿಯನ್ನು ಸ್ಥಳಾಂತರಿಸುವ ನಿರ್ಧಾರವನ್ನು ಕೈಗೊಂಡರೆ ಡಿಸೆಂಬರ್ ೨೮ರಂದು ರಾಜ್ಯವ್ಯಾಪಿ ಬಂದ್ ಆಚರಿಸಲು ಕೂಡಾ ತೆಲುಗುದೇಶಂ ಪಕ್ಷವು ಕರೆ ಕೊಟ್ಟಿದೆ. ತಜ್ಞರ ಸಮಿತಿಯೊಂದು ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಸೃಷ್ಟಿಸುವ ಬಗ್ಗೆ ಶಿಫಾರಸು ಮಾಡಿದೆ. ‘ನಾವು ಸಚಿವ ಸಂಪುಟದ ನಿರ್ಧಾರಕ್ಕಾಗಿ ಕಾಯುತ್ತೇವೆ. ಆಡಳಿತ ಅಥವಾ ಕಾರ್ಯಾಂಗ ರಾಜಧಾನಿಯನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸುವ ತನ್ನ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಪುಟ ನಿರ್ಧರಿಸಿದರೆ, ನಾವು ಶನಿವಾರ ರಾಜ್ಯವ್ಯಾಪಿ ಹರತಾಳಕ್ಕೆ ಕರೆ ಕೊಡಬೇಕಾಗುತ್ತದೆಎಂದು ಹಿರಿಯ ತೆಲುಗುದೇಶಂ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಪ್ರತಿಪತಿ ಪುಲ್ಲ ರಾವ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


2019: ನವದೆಹಲಿ: ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು (ಆಪ್) ತಿದ್ದುಪಡಿಗೊಂಡಿರುವ ಪೌರತ್ವ
ಕಾಯ್ದೆ  ಬಗ್ಗೆ ಗೊಂದಲ ಸೃಷ್ಟಿಸುತ್ತಿವೆ ಎಂದು 2019 ಡಿಸೆಂಬರ್ 26ರ ಗುರುವಾರ ಇಲ್ಲಿ ಆಪಾದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಕಾಂಗ್ರೆಸ್ ಪಕ್ಷದ ನೆರವಿನೊಂದಿಗೆ ಹಿಂಸಾಚಾರಕ್ಕೆ ಕಾರಣವಾದಟುಕಡೆ ಟುಕಡೆ ಗ್ಯಾಂಗ್ನ್ನು ಶಿಕ್ಷಿಸಲು ಇದು ಸಕಾಲ. ದೆಹಲಿಯ ಜನತೆ ಅವರಿಗೆ ಶಿಕ್ಷೆ ವಿಧಿಸಬೇಕುಎಂದು ಹೇಳಿದರು. ದೆಹಲಿ ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದ ಭಾಷಣದ ಅಂಶಗಳನ್ನು ಕೈಗೆತ್ತಿಕೊಂಡು ಉಭಯ ಪಕ್ಷಗಳ ವಿರುದ್ಧ ತಮ್ಮ ದಾಳಿಯನ್ನು ಮುಂದುವರೆಸಿದರು. ತಿದ್ದುಪಡಿಗೊಂಡ ಪೌರತ್ವ ಕಾಯ್ದೆ ವಿರುದ್ಧ ದೆಹಲಿಯಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೇಳಲು ಉಭಯ ಪಕ್ಷಗಳು ಸೃಷ್ಟಿಸಿದ ಗೊಂದಲವೇ ಕಾರಣ ಎಂದು ಅಮಿತ್ ಶಾ ಆಪಾದಿಸಿದರು.  ೨೦೧೬ರಲ್ಲಿ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ಆರ್ಎಸ್ಎಸ್  ವಿದ್ಯಾರ್ಥಿ ವಿಭಾಗವಾದ ಎಬಿವಿಪಿ ಮತ್ತು ವಿದ್ಯಾರ್ಥಿಗಳ ಗುಂಪೊಂದರ ಮಧ್ಯೆ ಘರ್ಷಣೆ ಸಂಭವಿಸಿದ ಸಂದರ್ಭದಲ್ಲಿ  ಟುಕಡೆ ಟುಕಡೆ ಗ್ಯಾಂಗ್ಚಾಟೂಕ್ತಿ ಅಥವಾ  ನುಡಿಗಟ್ಟನ್ನು ಬಿಜೆಪಿಯು ಸೃಷ್ಟಿಸಿತ್ತು.  ಎಡಪಕ್ಷಗಳ ವಿದ್ಯಾರ್ಥಿಗಳು ರಾಷ್ಟ್ರವನ್ನು ತುಂಡು ತುಂಡಾಗಿ ಒಡೆಯುವಂತೆ ಘೋಷಣೆಗಳನ್ನು ಕೂಗಿದರು ಎಂದು ಎಬಿವಿಪಿ ಆಪಾದಿಸಿತ್ತು ಮತ್ತು ಪೊಲೀಸರಿಗೆ ದೂರು ನೀಡಿತ್ತು. ಇದು ಹಲವಾರು ವಿದ್ಯಾರ್ಥಿಗಳನ್ನು ರಾಷ್ಟ್ರದ್ರೋಹದ ಆಪಾದನೆಯಲ್ಲಿ ಬಂಧಿಸಿ ಸೆರೆಮನೆಗೆ ಕಳುಹಿಸಲು ಕಾರಣವಾಗಿತ್ತು. ಪೊಲೀಸ್ ದಮನ ಕಾರ್ಯಾಚರಣೆಯನ್ನು ಟೀಕಿಸಿದ್ದ ವಿರೋಧ ಪಕ್ಷಗಳಿಗೆ ಉತ್ತರ ನೀಡಿದ್ದ ಬಿಜೆಪಿವಿರೋಧ ಪಕ್ಷಗಳು ರಾಷ್ಟ್ರವನ್ನು ವಿಭಜಿಸಲು ಹೊರಟಿದ್ದ ವ್ಯಕ್ತಿಗಳನ್ನು ಬೆಂಬಲಿಸಿವೆಎಂದು ಆಪಾದಿಸಿತ್ತು.  ಬಳಿಕ ಬಿಜೆಪಿ ನಾಯಕರು ಹಲವಾರು ಬಾರಿ ವಿರೋಧ ಪಕ್ಷಗಳನ್ನು ಗುರಿಯಾಗಿಟ್ಟುಟುಕಡೆ ಟುಕಡೆ ಗ್ಯಾಂಗ್ಚಾಟೂಕ್ತಿಯನ್ನು ಪ್ರಯೋಗಿಸುತ್ತಲೇ ಬಂದಿದೆ.  (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)




No comments:

Post a Comment