Thursday, December 19, 2019

ಇಂದಿನ ಇತಿಹಾಸ History Today ಡಿಸೆಂಬರ್ 19

2019: ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ಮೂರು ನೆರೆ ರಾಷ್ಟ್ರಗಳಲ್ಲಿ ೨೦೧೪ಕ್ಕೂ ಮುನ್ನ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ವಲಸೆ ಬಂದಿರುವ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯು ಪೌರತ್ವ ಒದಗಿಸುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ 2019 ಡಿಸೆಂಬರ್ 19ರ ಗುರುವಾರ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಕಾಲದಲ್ಲಿ ಗುಂಡೇಟಿಗೆ 3 ಮಂದಿ ಬಲಿಯಾಗಿ ಹಲವರು ಗಾಯಗೊಂಡರು.  ರಾಷ್ಟ್ರವ್ಯಾಪಿ, ಪ್ರತಿಭಟನೆ, ಮೆರವಣಿಗೆ, ಸಭೆಗಳು ಉತ್ತರ ಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಹಲವೆಡೆ ಹಿಂಸೆಗೆ ತಿರುಗಿದವು. ಉತ್ತರಪ್ರದೇಶದಲ್ಲಿ ಒಂದು ಸಾವು ಸಂಭವಿಸಿ, ಜನ ಗಾಯಗೊಂಡರೆ, ಕರ್ನಾಟಕದ ಮಂಗಳೂರಿನಲ್ಲಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆದು 14 ಮಂದಿ  ಗಾಯಗೊಂಡ ರು. ಪೊಲೀಸ್ ಗೋಲಿಬಾರಿಗೆ ಇಬ್ಬರು ಬಲಿಯಾಗಿದ್ದು, ಹಿಂಸಾಚಾರದ ಬಳಿಕ ಕರ್ಫ್ಯೂ ಜಾರಿಗೊಳಿಸಲಾಯಿತು.  ಪ್ರತಿಭಟನೆಗಳ ಪರಿಣಾಮವಾಗಿ ದೆಹಲಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ೧೯ ವಿಮಾನಗಳ ಸಂಚಾರ ರದ್ದಾಯಿತು. ಗುರುಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮವಾಗಿ ೧೬ ವಿಮಾನಗಳ ಪಯಣ ವಿಳಂಬಗೊಂಡಿತು. ಜಂತರ್-ಮಂತರ್ ನಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ವಿವಿಧ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಕೆಂಪುಕೋಟೆ ಬಳಿ ನಿಷೇಧಾಜ್ಞೆ ಉಲ್ಲಂಘಿಸಿದವರನ್ನು ಪೊಲೀಸರು ಬಂಧಿಸಿದರೂ, ಬಳಿಕ ಪ್ರತಿಭಟನಕಾರರ ಸಂಖ್ಯೆ ಹೆಚ್ಚುತ್ತಲೇ ಹೋಯಿತು.  ಮಧ್ಯೆ, ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದಲ್ಲಿ ಭಾನುವಾರ ಸಂಭವಿಸಿದ ಹಿಂಸಾಚಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಲಾಠಿ ಪ್ರಯೋಗಿಸದಂತೆ ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸರಿಗೆ ಕಠಿಣ ಸಂದೇಶ ನೀಡಿತು. ವಿದ್ಯಾರ್ಥಿಗಳಿಗೂ ಬೀದಿಗೆ ಇಳಿಯುವ ಮುನ್ನ ಕಾನೂನನ್ನು ಓದಿಕೊಳ್ಳುವಂತೆ ಸೂಚಿಸಿತು. ಗುವಾಹಟಿ ಹೈಕೋರ್ಟ್ ಗುರುವಾರ ಸಂಜೆ ಗಂಟೆಯ ಒಳಗಾಗಿ ಇಂಟರ್ ನೆಟ್ ಸಂಪರ್ಕ ಪುನಃಸ್ಥಾಪನೆ ಮಾಡುವಂತೆ ಅಸ್ಸಾಮ್ ಸರ್ಕಾರಕ್ಕೆ ಆಜ್ಞಾಪಿಸಿದ್ದು, ಶುಕ್ರವಾರದ ವೇಳೆಗೆ ಇಂಟರ್ ನೆಟ್ ಪುನಸ್ಥಾಪನೆ ಮಾಡಲಾಗುವುದು ಎಂದು ಅಸ್ಸಾಮ್ ಸರ್ಕಾರದ ಸಚಿವ ಹಿಮಂತ ಬಿಸ್ವ ಸರ್ಮಗುರುವಾರ ರಾತ್ರಿ ತಿಳಿಸಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ನವದೆಹಲಿ
:
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆಯಲ್ಲಿ ಜಾಮಿಯಾ 
ಮಿಲ್ಲಿಯಾಇಸ್ಲಾಮಿಯಾ ವಿಶ್ವ ವಿದ್ಯಾಲಯದಲ್ಲಿ ಸಂಭವಿಸಿದ ಹಿಂಸಾಚಾರದ ವಾಸ್ತವಾಂಶ ಪತ್ತೆಗೆ ಸಮಿತಿ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಪೊಲೀಸರಿಗೆ ದೆಹಲಿ ಹೈಕೋರ್ಟ್  2019 ಡಿಸೆಂಬರ್ 19ರ ಗುರುವಾರ ನೋಟಿಸ್ ಜಾರಿ ಮಾಡಿತು. ಆದಾಗ್ಯೂ, ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ಪೀಠವು ಬಂಧನ ಸೇರಿದಂತೆ ಯಾವುದೇ ಬಲ ಪ್ರಯೋಗದಿಂದ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಲು ಯಾವುದೇ ಆದೇಶವನ್ನೂ ನೀಡಲಿಲ್ಲ. ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಲು ಹೈಕೋರ್ಟ್ ನಿರಾಕರಿಸಿದ ಬಳಿಕ ವಕೀಲರ ಗುಂಪೊಂದುಶೇಮ್ ಶೇಮ್ (ನಾಚಿಕೆಗೇಡು) ಎಂಬುದಾಗಿ ಘೋಷಣೆಗಳನ್ನು ಕೂಗಿತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಕಾಲದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ನೆರವು ಮತ್ತು ಪರಿಹಾರ ಒದಗಿಸುವಂತೆ ಕೋರಿದ್ದ ಆರು ಅರ್ಜಿಗಳ ಮೇಲಿನ ಸುದೀರ್ಘ ವಾದ ಮಂಡನೆಯ ಬಳಿಕ ನ್ಯಾಯಾಲಯವು ನೋಟಿಸುಗಳನ್ನು ಜಾರಿಗೊಳಿಸಲು ಆಜ್ಞಾಪಿಸಿತು. ಅರ್ಜಿದಾರರೊಬ್ಬರ ಪರವಾಗಿ ಹಾಜರಾಗಿದ್ದ ವಕೀಲರುಪ್ರತಿಭಟನೆಯ ವೇಳೆಯಲ್ಲಿ ಒಬ್ಬ ವಿದ್ಯಾರ್ಥಿ ತನ್ನ ದೃಷ್ಟಿಯನ್ನು ಕಳೆದುಕೊಂಡಿರುವುದಾಗಿ ವರದಿಗಳು ತಿಳಿಸಿವೆ. ೪೩೨ ಅಶ್ರುವಾಯು ಶೆಲ್ಲುಗಳನ್ನು ಪ್ರಯೋಗಿಸಲಾಗಿದ್ದು ಇದು ೨೦೧೨ರಿಂದೀಚೆಗೆ ಅತ್ಯಂತ ಹೆಚ್ಚಿನ ಪ್ರಮಾಣದ ಅಶ್ರುವಾಯು ಶೆಲ್ ಪ್ರಯೋಗಎಂದು ಹೇಳಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ನವದೆಹಲಿ:  ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಮಧ್ಯೆಕಾಂಗ್ರೆಸ್  ವಿರುದ್ಧ ಭಾರತೀಯ ಜನತಾ ಪಕ್ಷವು (ಬಿಜೆಪಿ) 2019 ಡಿಸೆಂಬರ್ 19ರ ಗುರುವಾರ ತನ್ನ ಬತ್ತಳಿಕೆಯಿಂದಪೌರತ್ವಕ್ಕೆ ಡಾ. ಮನಮೋಹನ್ ಸಿಂಗ್ ಬೆಂಬಲ ಹೊಸ ವಿಡಿಯೋ ಬಾಣವನ್ನು ಹೊರತೆಗೆದು ಪ್ರಯೋಗಿಸಿತು. ಪಾಕಿಸ್ತಾನ, ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕೆ ಬೆಂಬಲವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾತನಾಡಿದ ಹಳೆಯ ವಿಡಿಯೋವನ್ನು ಬಿಜೆಪಿ ನಾಯಕರು ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರಕ್ಕೆ ಹರಿಯಬಿಟ್ಟರು. ಸಂಸತ್ತಿನ ೨೦೦೩ರ ವಿಡಿಯೋಗಳ ಸಂಗ್ರಹದಿಂದ ಡಾ. ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಲ್ಲಿ ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಮಾತನಾಡಿದ ವಿಡಿಯೋ ದೃಶ್ಯಾವಳಿಯನ್ನು ಬಿಜೆಪಿ ಬಹಿರಂಗಗೊಳಿಸಿತು. ‘೨೦೦೩ರಲ್ಲಿ, ರಾಜ್ಯಸಭೆಯಲ್ಲಿ ಮಾತನಾಡುತ್ತಾ, ಆಗ ವಿರೋಧ ಪಕ್ಷದ ನಾಯಕರಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ನೆರೆಯ ರಾಷ್ಟ್ರಗಳಲ್ಲಿ ಕಿರುಕುಳ ಎದುರಿಸುತ್ತಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ವಿಚಾರದಲ್ಲಿ ಉದಾರವಾದ ಧೋರಣೆ ಅನುಸರಿಸಬೇಕು ಎಂದು ಹೇಳಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಮಾಡಿರುವುದು ಅದನ್ನೇಎಂದು ಟ್ವೀಟ್ ಮಾಡಿದ ಬಿಜೆಪಿ ಟ್ವೀಟಿಗೆ ಮನಮೋಹನ್ ಸಿಂಗ್ ಭಾಷಣದ ವಿಡಿಯೋ ದೃಶ್ಯಾವಳಿಯನ್ನು ಲಗತ್ತಿಸಿತು. ವಿಡಿಯೋದಲ್ಲಿ ಡಾ. ಸಿಂಗ್ ಅವರು ಹೀಗೆ ಹೇಳಿದ್ದು ಕೇಳಿಸುತ್ತದೆ: ’ ವಿಷಯಕ್ಕೆ ಸಂಬಂಧಿಸಿದಂತೆ, ಮೇಡಮ್, ನಾನು ನಿರಾಶ್ರಿತರನ್ನು ಕಾಣುವ ರೀತಿ ಬಗ್ಗೆ ಕೆಲವೊಂದು ವಿಚಾರಗಳನ್ನು ಹೇಳಬಯಸುತ್ತೇನೆ. ನಮ್ಮ ದೇಶದ ವಿಭಜನೆಯ ಬಳಿಕ, ಬಾಂಗ್ಲಾದೇಶದಂತಹ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರು ಕಿರುಕುಳಗಳನ್ನು ಎದುರಿಸಿದ್ದಾರೆ, ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ನಮ್ಮ ರಾಷ್ಟ್ರದಲ್ಲಿ ಆಶ್ರಯ ಕೋರಿರುವ  ಇಂತಹ ದುರದೃಷ್ಟಕರ ಜನರಿಗೆ ನೆರವಾಗಬೇಕಾದದ್ದು ನಮ್ಮ ನೈತಿಕ ಹೊಣೆಗಾರಿಕೆಯಾಗುತ್ತದೆ. ದುರದೃಷ್ಟಕರ  ವ್ಯಕ್ತಿಗಳಿಗೆ ಪೌರತ್ವ ನೀಡಿಕೆಯ ಬಗೆಗಿನ ನಮ್ಮ ಧೋರಣೆ ಹೆಚ್ಚು ಉದಾರವಾಗಿರಬೇಕು...’  ೨೦೦೩ರಲ್ಲಿ, ಮನಮೋಹನ್ ಸಿಂಗ್ ಅವರು ಮಾತುಗಳನ್ನು ಹೇಳಿದಾಗ, ಆಗ ಉಪ ಪ್ರಧಾನಿ ಮತ್ತು ಗೃಹ ಸಚಿವರಾಗಿದ್ದ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಸರ್ಕಾರದ ಕಡೆಯ ಆಸನಗಳಲ್ಲಿ ಮುಂಭಾಗದ ಸಾಲಿನಲ್ಲಿದ್ದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ಲಕ್ನೋ: ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡುವ ಪ್ರತಿಭಟನಾಕಾರರ  
ಆಸ್ತಿಯನ್ನು ಜಪ್ತಿ  ಮಾಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2019 ಡಿಸೆಂಬರ್ 19ರ ಗುರುವಾರ ಎಚ್ಚರಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಲಕ್ನೋ, ಸಂಭಲ್  ಮತ್ತು ಮಾವೋನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನಾಕಾರು ಹಲವು ವಾಹನ, ಪೊಲೀಸ್ ಔಟ್ ಪೋಸ್ಟ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಶಾಂತಿ ಕದಡಲು ಯತ್ನಿಸುವ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಯೋಗಿ ಆದಿತ್ಯನಾಥ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯಗಳನ್ನು ನಾನು ಸಹಿಸುವುದಿಲ್ಲ. ಹಿಂಸಾಚಾರದಲ್ಲಿ ತೊಡಗಿರುವವರನ್ನು ಗುರುತಿಸಿ, ಅವರ ಆಸ್ತಿ ಜಪ್ತಿ ಮಾಡಿ, ಹರಾಜು ಹಾಕಲಾಗುವುದು ಎಂದು ಯೋಗಿ ಎಚ್ಚರಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)
2019: ಮಂಗಳೂರು
:
ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ 
ಪ್ರತಿಭಟನೆಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲಿ ನಗರ ಪೊಲೀಸ್ ಕಮಿಷನರ್ ಹರ್ಷ ಅವರು 2019 ಡಿಸೆಂಬರ್ 19ರ ಗುರುವಾರ ವಾಟ್ಸಪ್ ಗ್ರೂಪ್ ಅಡ್ಮಿನ್ಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸುದ್ದಿಗಳನ್ನು ಹಾಗೂ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧವೂ ಸಹ ನಗರ ಪೊಲೀಸ್ ಕಮಿಷನರ್ ಅವರು ಎಚ್ಚರಿಸಿದರು. ಈ ಬಗ್ಗೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಣೆ ಹೊರಡಿಸಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳು ಹರಿದಾಡುತಿವೆ, ಇಂತಹ ಸಂದೇಶಗಳ ಮೇಲೆ ನಿಗಾ ಇರಿಸಲಾಗಿದೆ. ಇಂತಹ ಸಂದೇಶಗಳನ್ನು ಹರಡುವ ಗ್ರೂಪ್ ಅಡ್ಮಿನ್ ಗಳ ಮೇಲೆ ಐಪಿಸಿ ಸೆಕ್ಷನ್ ೧೫೩ (), ೨೯೫ ಅಡಿಯಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)



No comments:

Post a Comment