2019: ಇಸ್ಲಾಮಾಬಾದ್:
ಪಾಕಿಸ್ತಾನದ ಮಾಜಿ
ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರಿಗೆ ವಿಶೇಷ ನ್ಯಾಯಾಲಯವು 2019 ಡಿಸೆಂಬರ್ 17ರ ಮಂಗಳವಾರ ಮರಣದಂಡನೆ
ವಿಧಿಸಿತು. ಇದರೊಂದಿಗೆ
ಮರಣದಂಡನೆ ಶಿಕ್ಷೆಗೆ ಗುರಿಯಾದ ಪಾಕಿಸ್ತಾನದ ಮೊದಲ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೆ ಮುಷರಫ್ ಪಾತ್ರರಾದರು.
ಪೇಶಾವರ ಹೈಕೋರ್ಟ್
ಮುಖ್ಯ ನ್ಯಾಯಮೂರ್ತಿ ವಖಾರ್ ಅಹಮದ್ ಸೇಠ್ ನೇತೃತ್ವದ ತ್ರಿಸದಸ್ಯ ಪೀಠವು ಬಹುಕಾಲದಿಂದ ವಿಚಾರಣೆ ನಡೆಯುತ್ತಿದ್ದ ದೇಶದ್ರೋಹ ಆರೋಪದ ಪ್ರಕರಣದ ಬಗ್ಗೆ ತೀರ್ಪು
ಪ್ರಕಟಿಸಿತು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದವು. ನವೆಂಬರ್ ೩, ೨೦೦೭ರಲ್ಲಿ ದೇಶದ
ಮೇಲೆ ಸಂವಿಧಾನಬಾಹಿರವಾಗಿ ತುರ್ತುಸ್ಥಿತಿ ಹೇರಲಾದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಿತು. ಪ್ರಸ್ತುತ ದುಬೈಯಲ್ಲಿ ನೆಲೆಸಿರುವ
ಮುಷರಫ್, ೧೯೯೯ರಿಂದ ೨೦೦೮ರವರೆಗೆ ಪಾಕಿಸ್ತಾನದ ಸರ್ವಾಧಿಕಾರಿಯಾಗಿದ್ದರು. ಡಿಸೆಂಬರ್ ೨೦೧೩ರಂದು ಮುಷರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಾರ್ಚ್ ೩೧, ೨೦೧೪ರಂದು ನ್ಯಾಯಾಲಯ ಆರೋಪಿ ಎಂದು ಗುರುತಿಸಿತು. ಅದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರ ಪೂರ್ಣ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ವಿವಿಧ ವೇದಿಕೆಗಳಲ್ಲಿ ಹಲವು ದೋಷಾರೋಪಗಳು ಸಲ್ಲಿಕೆಯಾದ ಕಾರಣ ವಿಚಾರಣೆ ಸಾಕಷ್ಟು ಸಮಯ ತೆಗೆದುಕೊಂಡಿತು. ಮಾರ್ಚ್ ೨೦೧೬ರಂದು ಮುಷರಫ್ ಪಾಕಿಸ್ತಾನದಿಂದ ಪರಾರಿಯಾದರು.
ಮುಷರಫ್ ವಿರುದ್ಧದ ದೋಷಾರೋಪ ವಿಚಾರಣೆಗೆಂದು ನ್ಯಾಯಮೂರ್ತಿ ಸೇಠ್ ನೇತೃತ್ವದಲ್ಲಿ ಸಿಂಧ್ ಹೈಕೋರ್ಟಿನ ನ್ಯಾಯಮೂರ್ತಿ
ನಜರ್ ಅಕ್ಬರ್ ಮತ್ತು ಲಾಹೋರ್ ಹೈಕೋರ್ಟಿನ ನ್ಯಾಯಮೂರ್ತಿ
ಶಾಹಿದ್ ಕರೀಂ ನೇತೃತ್ವದಲ್ಲಿ ನ್ಯಾಯಪೀಠ ರಚಿಸಲಾಯಿತು. ನವೆಂಬರ್ ೧೯ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದ ವಿವಿಧೆಗಳಲ್ಲಿ ಹಿಂಸಾತ್ಮಕಗಲಭೆಗಳು ಮುಂದುವರೆದಿರುವಂತೆಯೇ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ೧೨ ವಿರೋಧ ಪಕ್ಷಗಳ
ನಿಯೋಗವೊಂದು 2019 ಡಿಸೆಂಬರ್ 17ರ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯೆಯನ್ನ್ದು ಹಿಂತೆಗೆದುಕೊಳ್ಳಲು ಸರ್ಕಾರಕ್ಕೆ ಸೂಚಿಸುವಂತೆ ಒತ್ತಾಯಿಸಿತು. ರಾಷ್ಟ್ರಪತಿಯವನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಸೋನಿಯಾ ಗಾಂಧಿ ’ಸರ್ಕಾರವು ಜನರ ದನಿಗಳನ್ನು ದಮನಿಸಿ, ಅವರಿಗೆ ಸ್ವೀಕಾರಾರ್ಹವಲ್ಲದ ಶಾಸನಗಳನ್ನು ತರುತ್ತಿದೆ ಎಂದು ಆಪಾದಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಇಡೀ ರಾಷ್ಟ್ರವೇ ಚಳವಳಿ ನಡೆಸುತ್ತಿದೆ. ವಿರೋಧ
ಪಕ್ಷಗಳು ಈಶಾನ್ಯ ಭಾರತ ಮತ್ತು ದೆಹಲಿಯಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿರುವ ದಮನ ಕಾರ್ಯಾಚರಣೆ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತಿವೆ ಎಂದು ಅವರು ನುಡಿದರು. ಮಂಗಳವಾರ ಪೊಲೀಸರು ದೆಹಲಿಯ ಸೀಲಂಪುರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದ ಗುಂಪಿನ ಮೇಲೆ ಆಶ್ರುವಾಯು ಶೆಲ್ ಪ್ರಯೋಗಿಸಿದ್ದಾರೆ. ಒಂದು ದಿನ ಹಿಂದಷ್ಟೇ ದಕ್ಷಿಣ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಆವರಣದಲ್ಲಿ ಮೆರವಣಿಗೆಕಾರರ ಮೇಲೆ ಪೊಲೀಸರು ಬಲ ಪ್ರಯೋಗಿಸಿದ್ದರು ಎಂದು
ವಿಪಕ್ಷ ನಿಯೋಗ ಹೇಳಿತು. ಪರಿಸ್ಥಿತಿ
ಅತ್ಯಂತ ಗಂಭೀರವಾಗಿದೆ. ಪ್ರಜಾತಾಂತ್ರಿಕ
ಹಕ್ಕು ಚಲಾಯಿಸುತ್ತಿರುವ ಶಾಂತಿಯುತ ಪ್ರತಿಭಟನಕಾರರ ಜೊತೆಗೆ ಪೊಲೀಸರು ವ್ಯವಹರಿಸುತ್ತಿರುವ ರೀತಿ ನಮಗೆ ಕಳವಳ ಉಂಟು ಮಾಡಿದೆ ಎಂದು ಸೋನಿಯಾ ಗಾಂಧಿ ಮತ್ತು ಇತರ ವಿರೋಧಿ ನಾಯಕರು ಹೇಳಿದರು. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಮಹಿಳಾ ವಸತಿಗೃಹಗಳಿಗೆ ಪೊಲೀಸ್ ಸಿಬ್ಬಂದಿ ನುಗ್ಗಿದರು ಮತ್ತು ವಿದ್ಯಾರ್ಥಿನಿಯರನ್ನು ಯಾವುದೇ ಕರುಣೆಯೂ ಇಲ್ಲದೆ ಥಳಿಸಿದರು ಎಂದು ಸೋನಿಯಾ ನುಡಿದರು. ’ಪೊಲೀಸರು ಮಹಿಳಾ ವಸತಿ ಗೃಹಕ್ಕೆ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿನಿಯರನ್ನು ಹೊರಕ್ಕೆ ಎಳೆದು ಥಳಿಸಿದ್ದಕ್ಕೆ ದೆಹಲಿ ಉದಾಹರಣೆಯಾಗಿದೆ. ಅವರು ವಿದ್ಯಾರ್ಥಿಗಳನ್ನು ಕರುಣೆಯಿಲ್ಲದೆ ಹೊಡೆದಿದ್ದಾರೆ. ಜನರ ದನಿಗಳನ್ನು ದಮನಿಸುವ ವಿಚಾರ ಬಂದಾಗ ಮೋದಿ ಸರ್ಕಾರಕ್ಕೆ ಜನರ ಬಗ್ಗೆ ಯಾವ ಅನುಕಂಪವೂ ಇರುವುದಿಲ್ಲ ಎಂಬುದನ್ನು ನೀವು ಕಂಡಿದ್ದೀರಿ ಎಂದು ಕಾಂಗ್ರೆಸ್ ನಾಯಕಿ ನುಡಿದರು. . (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಹಲವಾರು ವದಂತಿಗಳು ನಾಗರಿಕ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬ ಪ್ರತಿಭಟನಕಾರನಿಗೆ ಬೆತ್ತದಿಂದ ಥಳಿಸುತ್ತಿದ್ದ ಹಾಗೂ ಕೆಲವು ಮಹಿಳೆಯರು ಪೆಟ್ಟು ತಿನ್ನುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಯತ್ನಿಸುತ್ತಿದ್ದುದನ್ನು ತೋರಿಸುತ್ತಿದ್ದ ಫೊಟೋ ಒಂದಕ್ಕೆ ಸಂಬಂಧಿಸಿದುದಾಗಿದ್ದು, ಫೊಟೋದಲ್ಲಿ ಪೆಟ್ಟಿನ ಸುರಿಮಳೆ ಎದುರಿಸುತ್ತಿದ್ದ ವ್ಯಕ್ತಿ ಒಬ್ಬ ನಾಗರಿಕ ಎಂದು ಹಲವರು ಪ್ರತಿಪಾದಿಸಿದ್ದರು. ಆದರೆ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ವದಂತಿಯನ್ನು ನಿರಾಕರಿಸಿದ್ದು,
ಪೆಟ್ಟಿನ ಸುರಿಮಳೆ ಎದುರಿಸುತ್ತಿದ್ದ ವ್ಯಕ್ತಿ ನಾಗರಿಕನಲ್ಲ, ಪೊಲೀಸ್ ಕಾನ್ಸ್ಟೇಬಲ್ ಎಂದು ಸ್ಪಷ್ಟ 2019 ಡಿಸೆಂಬರ್
17ರ ಮಂಗಳವಾರ ಪಡಿಸಿದರು. ಪೆಟ್ಟು ತಿಂದ ವ್ಯಕ್ತಿ ಆಗ್ನೇಯ ಜಿಲ್ಲಾ ಪೊಲೀಸ್ ಕಾನ್ಸ್ಟೇಬಲ್ ಎಂಬುದಾಗಿ ಗುರುತಿಸಲಾಗಿದ್ದು, ಲಾಠಿಯಿಂದ ಹೊಡೆಯುತ್ತಿದ್ದ ವ್ಯಕ್ತಿ ರಾಜಕೀಯ ಸಂಘಟನೆಯೊಂದರ ವಿದ್ಯಾರ್ಥಿ ವಿಭಾಗದ ಕಾರ್ಯಕರ್ತ ಎಂಬುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಗುರುತಿಸಿದರು. ಜಿಲ್ಲೆಯ ಆಟೋ ಕಳವು ನಿಗ್ರಹ ದಳ ಅಥವಾ ಎಎಟಿಎಸ್
ತಂಡದ ಸದಸ್ಯರು ಪತ್ತೆ ತಂಡದ ಸದಸ್ಯರಾಗಿರುವುದರಿಂದ ಈ ಪೊಲೀಸ್ ಕಾನ್ಸ್ಟೇಬಲ್ಗಳು ಸಮವಸ್ತ್ರ ಧರಿಸಿರುವುದಿಲ್ಲ ಎಂದು ಆಗ್ನೇಯ ಜಿಲ್ಲಾ ಪೊಲೀಸ್ ಉಪ ಕಮೀಷನರ್ ಚಿನ್ಮಯ್
ಬಿಸ್ವಾಲ್ ಹೇಳಿದರು. ಅಪರಾಧಗಳ ಪತ್ತೆಗಾಗಿ ಪತ್ತೇದಾರಿಕೆ ಕಾರ್ಯ ನಿರ್ವಹಿಸುವುದರಿಂದ ಎಎಟಿಎಸ್ ಸದಸ್ಯರು ಸಾಮಾನ್ಯವಾಗಿ ನಾಗರಿಕ ದುಸ್ತಿನಲ್ಲಿಯೇ ಇರುತ್ತಾರೆ ಎಂದು ಬಿಸ್ವಾಲ್ ನುಡಿದರು. ಪೆಟ್ಟು ತಿಂದ ಪೊಲೀಸ್ ಕಾನ್ಸ್ಟೇಬಲ್ ೩೦ರ ಹರೆಯದಲ್ಲಿದ್ದು, ಭದ್ರತಾ ಕಾರಣಗಳನ್ನು ನೀಡಿ ಆತನ ಗುರುತು ಬಹಿರಂಗಗೊಳಿಸಲು ಪೊಲೀಸ್ ಅಧಿಕಾರಿ ನಿರಾಕರಿಸಿದರು. . (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ೨೦೧೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್ ಎ ಬೋಬ್ಡೆ 2019 ಡಿಸೆಂಬರ್
17ರ ಮಂಗಳವಾರ ಹಿಂದೆ ಸರಿದರು ಮತ್ತು ವಿಷಯದ ವಿಚಾರಣೆಯನ್ನು 2019 ಡಿಸೆಂಬರ್ 18ರ ಬುಧವಾರಕ್ಕೆ ಮುಂದೂಡಿದರು. ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಗೆ ಬುಧವಾರ ಬೆಳಗ್ಗೆ ೧೦.೩೦ಗಂಟೆಗೆ ಪೀಠ
ರಚಿಸುವುದಾಗಿಯೂ, ನೂತನ ಪೀಠವು ಮಧ್ಯಾಹ್ನ ೨ ಗಂಟೆಗೆ ಮರಣದಂಡನೆ
ವಿರುದ್ಧ ಅಕ್ಷಯ್ ಕುಮಾರ್ ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿಯೂ ಸಿಜೆಐ ತಿಳಿಸಿದರು. ಒಮ್ಮೆ ತಮ್ಮ ಸಹೋದರ ಸಂಬಂಧಿ ಸಂತ್ರಸ್ಥೆಯ ಪರವಾಗಿ ಹಾಜರಾಗಿದ್ದರು. ಆದ್ದರಿಂದ ಈ ಪ್ರಕರಣದ ವಿಚಾರಣೆಯಿಂದ
ಹಿಂದೆ ಸರಿಯುವೆ ಎಂದು ಸಿಜೆಐ ನುಡಿದರು. ನ್ಯಾಯಮೂರ್ತಿಗಾದ ಆರ್. ಭಾನುಮತಿ ಮತ್ತು ಆಶೋಕ ಭೂಷಣ್ ಅವರು ಮಂಗಳವಾರ ಸುಪ್ರೀಂಕೋರ್ಟ್ ಪೀಠದಲ್ಲಿದ್ದ ಇತರ ಇಬ್ಬರು ನ್ಯಾಯಮೂರ್ತಿಗಳಾಗಿದ್ದರು. . (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment