Friday, December 6, 2019

ಇಂದಿನ ಇತಿಹಾಸ History Today ಡಿಸೆಂಬರ್ 06

2019: ಹೈದರಾಬಾದ್: ತೆಲಂಗಾಣದ ಪಶುವೈದ್ಯೆ, ೨೬ರ ಹರೆಯದ ದಿಶಾ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಜೀವಂತವಾಗಿ ದಹಿಸಿ ಕೊಂದ ಪೈಶಾಚಿಕ ಘಟನೆಯ ಕ್ಷಿಪ್ರ ತನಿಖೆಗಾಗಿ ತ್ವರಿತ ನ್ಯಾಯಾಲಯ ರಚಿಸುವಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಆಜ್ಞಾಪಿಸಿದ್ದರ ನಡುವೆಯೇ, ಘಟನೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದಿನಲ್ಲಿ ಅತ್ಯಾಚಾರ ಹಾಗೂ ಕೊಲೆ ನಡೆದ ತಾಣದಲ್ಲಿಯೇ  2019 ಡಿಸೆಂಬರ್ 06ರ ಶುಕ್ರವಾರ ನಸುಕಿನಲ್ಲಿ ಪೊಲೀಸರು ಎನ್ಕೌಂಟರಿನಲ್ಲಿ ಗುಂಡು ಹಾರಿಸಿ ಕೊಲೆಗೈದರು.  ಎನ್ ಕೌಂಟರಿನಲ್ಲಿ ಹತರಾದ ನಾಲ್ವರು ಆರೋಪಿಗಳನ್ನು ಮೊಹಮ್ಮದ್ ಆರಿಫ್, ನವೀನ್, ಶಿವ, ಮತ್ತು ಚೆನ್ನಕೇಶವಲು ಎಂಬುದಾಗಿ ಗುರುತಿಸಲಾಯಿತು.. ಶಾದ್ ನಗರದ ಚತನಪಲ್ಲಿಯಲ್ಲಿ ನಸುಕಿನ ಸುಮಾರು ೩ರಿಂದ .೩೦ ಗಂಟೆ ನಡುವಣ ಅವಧಿಯಲ್ಲಿ ಘಟನೆ ಘಟಿಸಿತು.  ಘಟನೆಯ ಬಗ್ಗೆ ಒಂದೆಡೆ ದೇಶವ್ಯಾಪಿ ಸಂಭ್ರಮ ಮನೆ ಮಾಡಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ತೀವ್ರವಾಗಿ ನಡೆಯಿತು.  ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯವು ಘಟನೆ ಬಗ್ಗೆ ವರದಿ ನೀಡುವಂತೆ ತೆಲಂಗಾಣ ಸರ್ಕಾರಕ್ಕೆ ಸೂಚನೆ ನೀಡಿತು. ಮಾನವ ಹಕ್ಕುಗಳ ಆಯೋಗ ಕೂಡಾ ಘಟನೆಯ ಬಗ್ಗೆ ಅನುಮಾನಗಳನ್ನು ವ್ಯಕ್ತ ಪಡಿಸಿದ್ದು, ಸ್ವ ಇಚ್ಛೆಯ ಪ್ರಕರಣ ದಾಖಲಿಸಿಕೊಂಡಿತು. ಈದಿನ ನಸುಕಿನಲ್ಲಿ ಸಂಭವಿಸಿದ ಘಟನಾವಳಿಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸೈಬರಾಬಾದ್ ಪೊಲೀಸ್ ಕಮೀಷನರ್ ವಿಸಿ ಸಜ್ಜನರ್ ಅವರು ಮಾನವ ಹಕ್ಕುಗಳ ಆಯೋಗದ ಅನುಮಾನ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ’ಕಾನೂನು ತನ್ನ ಕರ್ತವ್ಯ ನಿರ್ವಹಿಸಿದೆ ಎಂದಷ್ಟೇ ನಾನು ಹೇಳಬಲ್ಲೆಎಂದು ನುಡಿದರು. ‘ಘಟನೆಯ ಬಗ್ಗೆ ರಾಜ್ಯ ಸರ್ಕಾರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೇರಿದಂತೆ ಸಂಬಂಧ ಪಟ್ಟ ಎಲ್ಲರಿಗೂ ನಾವು ಉತ್ತರ ನೀಡಬಲ್ಲೆವುಎಂದು ಸಜ್ಜನರ್ ಹೇಳಿದರುನಸುಕಿನಲ್ಲಿ ಸಂಭವಿಸಿದ ಘಟನೆಯ ಬಗ್ಗೆ ವಿವರಗಳನ್ನು ನೀಡಿದ ಸಜ್ಜನರ್ಪೊಲೀಸರು ಆರೋಪಿಗಳನನ್ನು ತನಿಖೆಯ ಅಂಗವಾಗಿ ಘಟನಾ ಸ್ಥಳಕ್ಕೆ ಕರೆತಂದಿದ್ದರು ಎಂದು ಹೇಳಿದರು. ‘ಅತ್ಯಾಚಾರ, ಕೊಲೆ ಘಟನೆಯಲ್ಲಿ ಸಾವನ್ನಪ್ಪಿದ ೨೬ರ ಹರೆಯದ ಮಹಿಳೆಯು ಬಿಟ್ಟಿರಬಹುದಾಗ ವಸ್ತುಗಳನ್ನು ಪತ್ತೆ ಹಚ್ಚುವ ಸಲುವಾಗಿ ನಾವು ಅವರನ್ನು ನುಸುಕಿನಲ್ಲಿ ಘಟನಾ ಸ್ಥಳಕ್ಕೆ ಕರೆತಂದಿದ್ದೆವು. ನಮಗೆ ಅಲ್ಲಿ ಮಹಿಳೆಯ ಸೆಲ್ ಫೋನ್, ಕೈಗಡಿಯಾರ ಮತ್ತು ಪವರ್ ಬ್ಯಾಂಕ್ ಲಭಿಸಿತುಎಂದು ಅವರು ನುಡಿದರು. ಬಳಿಕ ಆರೋಪಿಗಳು ದಿಢೀರನೆ ಪೊಲೀಸರ ಮೇಲೆ ಬಡಿಗೆ, ಕಲ್ಲು ಹಾಗೂ ನಮ್ಮಿಂದಲೇ ಕಸಿದುಕೊಂಡ ಶಸ್ತ್ರಗಳಿಂದ ದಾಳಿ ನಡೆಸಲು ಆರಂಭಿಸಿದರು. ಕಿತ್ತುಕೊಂಡಿದ್ದ ಬಂದೂಕಿನಿಂದ ಪೊಲೀಸರತ್ತ ಗುಂಡನ್ನೂ ಹಾರಿಸಿದರು. ಅಧಿಕಾರಿಗಳು ಶರಣಾಗತರಾಗುವಂತೆ ಅವರಿಗೆ ಆಜ್ಞಾಪಿಸಿದರು. ಆದರೆ ಆರೋಪಿಗಳು ಗುಂಡು ಹಾರಿಸುವುದನ್ನು ಮುಂದುವರೆಸಿದರು ಮತ್ತು ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು. ಆಗ ಪೊಲೀಸರು ಅವರತ್ತ ಗುಂಡುಹಾರಿಸಿದರು ಮತ್ತು ಘರ್ಷಣೆಯಲ್ಲಿ ಅವರು ಸಾವನ್ನಪ್ಪಿದರುಎಂದು ಸಜ್ಜನರ್ ವಿವರಿಸಿದರು. ಸಂಪೂರ್ಣ ಘಟನಾವಳಿ ೧೦-೧೫ ನಿಮಿಷಗಳ ಕಾಲ ನಡೆಯಿತುಎಂದು ಪೊಲೀಸ್ ಕಮೀಷನರ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)


2019: ಕಾನ್ಪುರ:  ಪೊಲೀಸರನ್ನು ಸಂಪರ್ಕಿಸಿದರೆ ಪುನಃ ಅತ್ಯಾಚಾರ ಎಸಗುತ್ತೇವೆ, ನಿನ್ನ ವಿಡಿಯೋಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತೇವೆ ಎಂಬುದಾಗಿ ಎಚ್ಚರಿಕೆ ನೀಡಿದಿಗ್ಬಂಧನದಿಂದ ಹೊರ ತಳ್ಳುವುದಕ್ಕೆ ಮುನ್ನ ತನ್ನನ್ನು  ಲೈಂಗಿಕ ಗುಲಾಮಳನ್ನಾಗಿಇಟ್ಟುಕೊಂಡಿದ್ದರು ಎಂದು 2019 ಡಿಸೆಂಬರ್ 05ರ ಗುರುವಾರ ದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿರುವ ಉನ್ನಾವೋ ಸಂತ್ರಸ್ಥೆ ತನ್ನ ದೂರಿನಲ್ಲಿ ತಿಳಿಸಿದರು. ಲಾಲ್ಗಂಜ್ ಪೊಲೀಸರಿಗೆ ಸಲ್ಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್)  ವಿವರಗಳನ್ನು ನೀಡಿರುವ ಮಹಿಳೆ, ’ರಾಯ್ ಬರೇಲಿಯಲ್ಲಿ ದಿಗ್ಬಂಧನದಲ್ಲಿ ಇಡಲಾಗಿದ್ದ ಮನೆಯಲ್ಲಿ ಹೊರಕ್ಕೆ ಇಣುಕಿ ನೋಡಲು ಕೂಡಾ ನನಗೆ ಬಿಡುತ್ತಿರಲಿಲ್ಲಎಂದು ಹೇಳಿದ್ದಾರೆ. ಗುರುವಾರ ನಸುಕಿನಲ್ಲಿ ರಾಯ್ ಬರೇಲಿಗೆ ನ್ಯಾಯಾಲಯಕ್ಕೆ ಹಾಜರಾಗುವ ಸಲುವಾಗಿ ಹೊರಟಿದ್ದಾಗ  ತಡೆದು ಅತ್ಯಾಚಾರ ಎಸಗಿದ್ದ ಆರೋಪಿಗಳು ಆಕೆಯ ಮೇಲೆ ಹಲ್ಲೆ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಸುಮಾರು ಒಂದು ಕಿಮೀ ದೂರ ನೆರವಿವಾಗಿ ಕೂಗುತ್ತಾ ಓಡಿದ್ದ ಮಹಿಳೆಯನ್ನು ಬಳಿಕ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಶೇಕಡಾ ೬೦ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿರುವುದಾಗಿ ಪೊಲೀಸರು ತಿಳಿಸಿದ್ದರು.  ತನಗೆ ಹಾಕಿದ್ದ ಬೆದರಿಕೆಗಳನ್ನು ನಿರ್ಲಕ್ಷಿಸಿದ್ದ ಮಹಿಳೆ ಮಾರ್ಚ್ ೫ರಂದು ಉನ್ನಾವೋ ಜಿಲ್ಲೆಯ ಬಿಹಾರ್ ಬಹ್ತಾ ಪೊಲೀಸ್ ಠಾಣೆಯಲ್ಲಿ ಮತ್ತು ಮರುದಿನ ಲಾಲ್ ಗಂಜ್ (ರಾಯ್ ಬರೇಲಿ) ಪೊಲೀಸ್ ಠಾಣೆಯಲ್ಲಿ ಇನ್ನೊಂದು -ಹೀಗೆ ಎರಡು ಎಫ್ಐಆರ್ಗಳನ್ನು ದಾಖಲಿಸಿದ್ದರು.  ತಾನು ಪ್ರೀತಿಸಿದ್ದ ಮತ್ತು ಮದುವೆಯಾಗುವುದಾಗಿ ತನಗೆ ವಚನ ನೀಡಿದ್ದ ಶಿವಮ್ ತ್ರಿವೇದಿ ತಾನು ಬಯಸಿದ್ದ ನ್ಯಾಯ ಮತ್ತು ಪ್ರತಿಷ್ಠೆಯನ್ನು ಹಲವಾರು ಬಾರಿ ದರೋಡೆ ಮಾಡಿದ್ದಎಂದು ಆಕೆ ಮ್ಯಾಜಿಸ್ಟ್ರೇಟರ ಮುಂದೆ ಪ್ರತಿಪಾದಿಸಿದ್ದರು. ಅದೇ ವ್ಯಕ್ತಿ ಗುರುವಾರ ಆಕೆಗೆ ಬೆಂಕಿ ಹಚ್ಚಿದ್ದ. ಎಫ್ಐಆರ್ ವಿವರಗಳ ಪ್ರಕಾರ ಮನೆಯಿಂದ ಹೊರಕ್ಕೆ ತಳ್ಳುವ ಮುನ್ನ ಗುರುವಾರ ಆಕೆಯನ್ನು ಪುನಃ ಥಳಿಸಲಾಗಿತ್ತು ಮತ್ತು ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಲಕ್ನೋದ ಮಹಿಳಾ ಆಯೋಗದ ಅಧ್ಯಕ್ಷರಿಗೆ ನೀಡಿದ ದೂರಿನಲ್ಲೂ ಅತ್ಯಾಚಾರ ಸಂತ್ರಸ್ಥೆ ಇದೇ ಮಾಹಿತಿಯನ್ನು ನೀಡಿದ್ದಾರೆ.  (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)
2019: ನವದೆಹಲಿ: ಇಡೀ ದೇಶದ ಗಮನ ಸೆಳೆದಿದ್ದ ೨೦೧೨ರ  ನಿರ್ಭಯಾ ಪ್ರಕರಣದ ಪ್ರಮುಖ ಅತ್ಯಾಚಾರಿ ವಿನಯ್ ಶರ್ಮ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸುವಂತೆ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕೇಂದ್ರ ಗೃಹ ಇಲಾಖೆ  2019 ಡಿಸೆಂಬರ್ 06ರ ಶುಕ್ರವಾರ ಶಿಫಾರಸು ಮಾಡಿತು. ತೆಲಂಗಾಣ ಮೂಲದ ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕಿಚ್ಚಿಟ್ಟು ಕೊಲೆಗೈದ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಈದಿನ ನಸುಕಿನಲ್ಲಿ ಎನ್ಕೌಂಟರ್ನಲ್ಲಿ ಕೊಂದು ಹಾಕಿದ ಘಟನೆಯ ಬೆನ್ನಲ್ಲೇ, ನಿರ್ಭಯಾ ಕುಟುಂಬವೂ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಮಾಡಿದ ಮನವಿಯನ್ನು ಗಮನಿಸಿ ಕೇಂದ್ರ ಕ್ರಮ ಕೈಗೊಂಡಿತು. ಕಾಕತಾಳೀಯವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡಾ ಅಪ್ರಾಪ್ತರ ಮೇಲಿನ ಲೈಂಗಿಕ ಹಲ್ಲೆ ಪ್ರಕರಣಗಳಲ್ಲಿ ಅಪರಾಧಿಗಳ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ಪರಿಗಣಿಸುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಈದಿನ ಹೇಳಿದ್ದರು. ಅರೆ ವೈದ್ಯಕೀಯ ವಿದ್ಯಾರ್ಥಿನಿ, ೨೩ರ ಹರೆಯದನಿರ್ಭಯಾಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಪ್ರಕರಣದಲ್ಲಿ ಮರಣದಂಡೆಗೆ ಗುರಿಯಾಗಿರುವ ಅಪರಾಧಿ ವಿನಯ್ ಶರ್ಮ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದ. ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ್ದ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕಡತವನ್ನು ಗೃಹ ಇಲಾಖೆಗೆ ಕಳುಹಿಸಿದ್ದರು. ಮತ್ತು ಗೃಹ ಇಲಾಖೆಯು ಅಂತಿಮ ನಿರ್ಧಾರಕ್ಕಾಗಿ ಅದನ್ನು ರಾಷ್ಟ್ರಪತಿಯವರಿಗೆ ಕಳುಹಿಸಿತು. ಕ್ಷಮೆಕೋರಿಕೆ ಅರ್ಜಿಯನ್ನು ತಿರಸ್ಕರಿಸುವಂತೆ ಗೃಹ ಸಚಿವಾಲಯವು ಶಿಫಾರಸು ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬರೆದ ಪತ್ರದಲ್ಲಿ ೨೩ರ ಹರೆಯದ ಅರೆವೈದ್ಯಕೀಯ ವಿದ್ಯಾರ್ಥಿನಿಯ ತಾಯಿ, ಈದಿನ ಅಪರಾಧಿಯ ಕ್ಷಮೆ ಕೋರಿಕೆ ಅರ್ಜಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿದ್ದರು. ’ಮರಣದಂಡನೆ ಜಾರಿಯನ್ನು ತಪ್ಪಿಸುವ ಮತ್ತು ನ್ಯಾಯ ದೊರಕದಂತೆ ಮಾಡುವ ಉದ್ದೇಶ ಪೂರ್ವಕ ಯತ್ನ ಕ್ಷಮಾದಾನ ಕೋರಿಕೆ ಅರ್ಜಿಎಂದು ಆಕೆ ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)


No comments:

Post a Comment