
2019: ನವದೆಹಲಿ: ಲೋಕಸಭೆಯಲ್ಲಿ ಬೆಂಬಲ ನೀಡಿದ್ದ ಶಿವಸೇನೆಯ ’ಯು ಟರ್ನ್’ ಸುಳಿವು,

2019: ಲಕ್ನೋ: ಬನಾರಸ್ ಹಿಂದೂ ವಿಶ್ವ ವಿದ್ಯಾಲಯದ (ಬಿಎಚ್‌ಯು) ಸಂಸ್ಕೃತ ವಿದ್ಯಾ ಧರ್ಮ

2019: ಹೆಲ್ಸಿಂಕಿ: ಫಿನ್ಲೆಂಡ್ ದೇಶದ ಪ್ರಧಾನಿಯಾಗಿ
೩೪ ವರ್ಷ ವಯಸ್ಸಿನ ಸನ್ನಾ ಮರಿನ್ 2019
ಡಿಸೆಂಬರ್ 10ರ ಮಂಗಳವಾರ ಆಯ್ಕೆಯಾದರು. ಇವರು ಜಗತ್ತಿನ ಅತಿ
ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಂಸತ್ತಿನ ೨೦೦ ಸದಸ್ಯರ ಪೈಕಿ ೯೯ ಸದಸ್ಯರು ಸನ್ನಾ ಮರಿನ್
ನಾಮನಿರ್ದೇಶನದ ಪರವಾಗಿ ಮತ್ತು ೭೦ ಸದಸ್ಯರು ವಿರುದ್ಧ ಮತ ಹಾಕಿದ್ದರು. ಮೂವತ್ತು ಸದಸ್ಯರು ಮತದಾನ
ಪ್ರಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ. ’ಪ್ರತಿ ಮಗುವೂ
ಬಯಸಿದ ಸಾಧನೆ, ಎತ್ತರಕೆ ಬೆಳೆಯಲು ಅನುವಾಗುವ ಸಮಾಜವನ್ನು ನಿರ್ಮಾಣ ಮಾಡಲು ಬಯಸುತ್ತೇನೆ. ಅಲ್ಲಿ
ಪ್ರತಿಯೊಬ್ಬ ವ್ಯಕ್ತಿಯೂ ಅತ್ಯಂತ ಗೌರವದಿಂದ ಬದುಕಿ, ಬಾಳುವರು.’ ಎಂದು ಮರಿನ್ ಟ್ವೀಟಿಸಿದರು. ಫಿನ್ಲೆಂಡಿನಲ್ಲಿ ನಡೆದ ’ಪೋಸ್ಟಲ್ ಸ್ಟ್ರೈಕ್’ ನಿರ್ವಹಣೆಯಲ್ಲಿ
ಸರ್ಕಾರ ಎಡವಿದೆ ಎಂದು ಮೈತ್ರಿ ಪಕ್ಷ ಸೆಂಟ್ರೆ ಪಾರ್ಟಿ ಅವಿಶ್ವಾಸ ಮಂಡಿಸಿದ ಪರಿಣಾಮ ಸೋಶಿಯಲ್ ಡೆಮೊಕ್ರಾಟ್
ಪಕ್ಷದ ಪ್ರಧಾನಿ ಅಂಟಿ ರಿನೆ ಕೆಳದವಾರ ರಾಜೀನಾಮೆ
ನೀಡಿದ್ದರು. ಸಂಸತ್ತಿನ ಅನುಮೋದನೆಯ ಬಳಿಕ ಫಿನ್ಲೆಂಡಿನ ಅಧ್ಯಕ್ಷರು ಮರಿನ್ ಅವರ ಐದು ಮೈತ್ರಿ ಪಕ್ಷಗಳ
ಸಂಪುಟಕ್ಕೆ ನಾಮನಿರ್ದೇಶನ ಮಾಡಲಿದ್ದಾರೆ. ಸಂಪುಟವು ೧೨ ಮಂದಿ ಮಹಿಳಾ ಸಚಿವರು ಮತ್ತು ೭ ಮಂದಿ ಪುರುಷ
ಸಚಿವರನ್ನು ಹೊಂದಲಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)2019: ನವದೆಹಲಿ: ಭಾರತದ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಅಮೆರಿಕದ ಧಾರ್ಮಿಕಸ್ವಾತಂತ್ರ್ಯದ ಹಕ್ಕುಗಳ ಆಯೋಗ ನೀಡಿರುವ ಹೇಳಿಕೆ ಅಸಮರ್ಪಕ, ಅನಗತ್ಯ ಮತ್ತು ಅಧಿಕಾರ ವ್ಯಾಪ್ತಿ ಮೀರಿದ್ದು ವಿದೇಶಾಂಗ ವ್ಯವಹಾರಗಳ ಸಚಿವಾಲಯ 2019 ಡಿಸೆಂಬರ್ 10ರ ಮಂಗಳವಾರ ತಿರುಗೇಟು ನೀಡಿತು. ಅಮೆರಿಕದ ಆಯೋಗವು ತನಗೆ ಅಧಿಕಾರ ವ್ಯಾಪ್ತಿ ಇಲ್ಲದ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷಪಾತದ ಹೇಳಿಕೆ ನೀಡಿದೆ ಎಂದು ಭಾರತ ಹೇಳಿತು. ‘ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಮಸೂದೆಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯು ಸಮರ್ಪಕವೂ ಅಲ್ಲ ಅಪೇಕ್ಷಿತವೂ ಅಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು. ‘ಪೌರತ್ವ ತಿದ್ದುಪಡಿ ಮಸೂದೆಯಾಗಲೀ, ಇಲ್ಲವೇ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಪ್ರಕ್ರಿಯೆಯಾಗಲೀ ಭಾರತದ ಯಾವುದೇ ಮತ ನಂಬಿಕೆಯ ಯಾರೇ ನಾಗರಿಕನನ್ನು ಪೌರತ್ವ ವಂಚಿತನನ್ನಾಗಿ ಮಾಡುವುದಿಲ್ಲ’ ಎಂದು ಅವರು ನುಡಿದರು. ‘ಯುಎಸ್‌ಸಿಐಆರ್‌ಎಫ್‌ನ ನಿಲುವು, ಅದರ ಹಿಂದಿನ ದಾಖಲೆಗಳನ್ನು ಅಧ್ಯಯನ ಮಾಡಿದರೆ ಅಚ್ಚರಿಯದೇನೂ ಅಲ್ಲ. ಆದಾಗ್ಯೂ, ಆಯೋಗವು ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಪೂರ್ವಾಗ್ರಹಗಳಿಗೆ ಅನುಗುಣವಾಗಿ ಪಕ್ಷಪಾತದ ವರ್ತನೆ ತೋರಿರುವುದು ವಿಷಾದನೀಯ. ವಿಷಯಕ್ಕೆ ಸಂಬಂಧಿಸಿದಂತೆ ಅದಕ್ಕೆ ಅತ್ಯಲ್ಪ ಜ್ಞಾನ ಇದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಅದಕ್ಕೆ ಈ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ಅಧಿಕಾರ ವ್ಯಾಪ್ತಿ ಕೂಡಾ ಇಲ್ಲ’ ಎಂದು ರವೀಶ್ ಕುಮಾರ್ ಹೇಳಿದರು. ಲೋಕಸಭೆಯು 2019 ಡಿಸೆಂಬರ್ 09ರ ಸೋಮವಾರ ಮಧ್ಯರಾತ್ರಿಗೆ ಸ್ವಲ್ಪ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಧಾರ್ಮಿಕ ಕಿರುಕುಳದ ಹಿನ್ನೆಲೆಯಲ್ಲಿ ಭಾರತಕ್ಕೆ ಬರುವ ಮುಸ್ಲಿಮೇತರ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಮಸೂದೆಗೆ ತನ್ನ ಅಂಗೀಕಾರವನ್ನು ನೀಡಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
No comments:
Post a Comment