2019: ನವದೆಹಲಿ:
ಭಾರತದ ಪ್ರಪ್ರಥಮ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ನೇಮಕಕ್ಕೆ ಕೇಂದ್ರ ಸಚಿವ ಸಂಪುಟವು ಮಂಗಳವಾರ ದಾರಿ ಸುಗಮಗೊಳಿಸಿತು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು (ಸಿಡಿಎಸ್) ನಾಲ್ಕು ಸ್ಟಾರ್ ಜನರಲ್ ಆಗಿರಲಿದ್ದು, ರಕ್ಷಣಾ ಸಚಿವಾಲಯದಲ್ಲಿ ಸೇನಾ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು 2019 ಡಿಸೆಂಬರ್ 24ರ ಮಂಗಳವಾರ ಇಲ್ಲಿ ಪ್ರಕಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಾವಡೇಕರ್ ಅವರು ’ಸಿಡಿಎಸ್ ನೇಮಕಾತಿಯು ಭಾರತದ ಉನ್ನತ ರಕ್ಷಣಾ ನಿರ್ವಹಣೆಯಲ್ಲಿ ಪ್ರಮುಖ ಸುಧಾರಣೆಯಾಗಿದೆ’ ಎಂದು
ಹೇಳಿದರು. ಸಿಡಿಎಸ್ ಅವರು ಸೇವಾ ಮುಖ್ಯಸ್ಥರಿಗೆ ಸಮಾನವಾದ ವೇತನ ಮತ್ತು ಭತ್ಯೆಗಳನ್ನು ಪಡೆಯಲಿದ್ದಾರೆ. ಚೊಚ್ಚಲ
ಸಿಡಿಎಸ್ ಹೆಸರನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲವಾದರೂ, ಸೇನಾ ದಂಡನಾಯಕ ಬಿಪಿನ್ ರಾವತ್ ಹೆಸರು ಈ ಹುದ್ದೆಗೆ ಮುಂಚೂಣಿ
ಹರಿದಾಡುತ್ತಿದೆ. ಅವರು ಸೇನಾ ಮುಖ್ಯಸ್ಥರಾಗಿ ಡಿಸೆಂಬರ್ ೩೧ರಂದು ನಿವೃತ್ತರಾಗಲಿದ್ದಾರೆ. ಸಿಡಿಎಸ್ ಅವರು ಮೂರೂ (ಭೂ, ವಾಯು, ಜಲ) ಸೇವಾ ಮುಖ್ಯಸ್ಥರಿಗೆ ಮಾರ್ಗದರ್ಶನ ಮಾಡಲಿದ್ದಾರೆ ಮತ್ತು ಘರ್ಷಣೆಗಳ ವೇಳೆಯಲ್ಲಿ ಹೊಸ ಆದೇಶಗಳನ್ನು ನೀಡಬಹುದು. ಪ್ರಧಾನಿ ನರೇಂದ್ರ ಮೋದಿ ಅವರಿಂದ ನೇಮಕಗೊಂಡ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದ ಅನುಷ್ಠಾನ ಸಮಿತಿಯು ಸಿಡಿಎಸ್ಗಾಗಿ ಚಾರ್ಟರ್ನ್ನು ಸಿದ್ಧ ಪಡಿಸಿದ್ದು ಸಿಡಿಎಸ್ ಅವರು ಸರ್ಕಾರಕ್ಕೆ ಸೇನಾ ವಿಷಯಗಳಲ್ಲಿ ಸಲಹೆ ನೀಡಲಿರುವ ಏಕ ವ್ಯಕ್ತಿಯಾಗಲಿದ್ದಾರೆ ಎಂದು ವಿವರಿಸಿದೆ.
ಕೆ. ಸುಬ್ರಮಣ್ಯಮ್ ನೇತೃತ್ವದ ಕಾರ್ಗಿಲ್ ಪುನರ್ ಪರಿಶೀಲನಾ ಸಮಿತಿಯು ಮಾಡಿದ ಶಿಫಾರಸಿಗೆ ಅನುಗುಣವಾಗಿ ಈ ನೇಮಕಾತಿ ಪ್ರಕ್ರಿಯೆ
ನಡೆದಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ನವದೆಹಲಿ: ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರವು ತನ್ನ
ಎರಡನೇಅವಧಿಯಲ್ಲಿ ಚಾಲನೆ ನೀಡಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಯೋಜನೆ ಮತ್ತು ಜನಗಣತಿಗೆ ಕೇಂದ್ರ ಸಚಿವ ಸಂಪುಟವು 2019 ಡಿಸೆಂಬರ್ 24ರ ಮಂಗಳವಾರ ಒಟ್ಟು ೧೩,೦೦೦ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಜನಗಣತಿಗೆ ಮುಂಚಿತವಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ನವೀಕರಿಸುವ ನಿರ್ಧಾರಕ್ಕೆ ತನ್ನ ಒಪ್ಪಿಗೆ ನೀಡಿತು. ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನವೀಕರಣದ ಪ್ರಕ್ರಿಯೆ ಕಾಲದಲ್ಲಿ ಯಾವುದೇ ದಾಖಲೆಗಳು ಅಥವಾ ಬಯೋಮೆಟ್ರಿಕ್ಸ್ ಪಡೆಯಲಾಗುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಕೇಂದ್ರ ಸಚಿವ ಸಂಪುಟ ನಿರ್ಧಾರವನ್ನು ಪ್ರಕಟಿಸುತ್ತಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಿವಾದಾತ್ಮಕ ರಾಷ್ಟ್ರೀಯ ಪೌರ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವರು ’ಮುಂಬರುವ ಎನ್‌ಪಿಆರ್, ೨೦೧೦ರಲ್ಲಿ ಯುಪಿಎ ಸರ್ಕಾರ ನಡೆಸಿದ್ದ ಎನ್ಪಿಆರ್ ಗಿಂತ ಯಾವುದೇ ರೀತಿಯಲ್ಲೂ ಭಿನ್ನವಾಗಿರುವುದಿಲ್ಲ’ ಎಂದು ಹೇಳಿದರು. ೨೦೨೧ರ ಫೆಬ್ರುವರಿಯಲ್ಲಿ ಆರಂಭವಾಗಲಿರುವ ಜನಗಣತಿಗೆ ಮುನ್ನ ೨೦೨೦ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವಣ ಅವಧಿಯಲ್ಲಿ ಎನ್ಪಿಆರ್ ನವೀಕರಣ ಪ್ರಕ್ರಿಯೆಯು ನಡೆಯಲಿದೆ. ಸರ್ಕಾರವು ಎನ್ಪಿಆರ್ ಮತ್ತು ಜನಗಣತಿಗೆ ಒಟ್ಟು ೧೩,೦೦೦ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ. ಈ ಪೈಕಿ ೮,೭೫೪ ಕೋಟಿ ರೂಪಾಯಿಗಳು ಜನಗಣತಿಗೆ ಮತ್ತು ೩೯೪೧ ಕೋಟಿ ರೂಪಾಯಿಗಳು ಎನ್ಪಿಆರ್ಗೆ ಎಂದು ಜಾವಡೇಕರ್ ಹೇಳಿದರು. ಎಲ್ಲ ರಾಜ್ಯಗಳೂ ಈಗಾಗಲೇ ಎನ್ಪಿಆರ್ ನವೀಕರಣ ಪ್ರಕ್ರಿಯೆ ನಡೆಸಲು ಒಪ್ಪಿದ್ದು, ಅವರ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಸಚಿವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಮಧ್ಯೆ ಯಾವುದೇ ಸಂಬಂಧ ಇಲ್ಲ. ಎನ್ಪಿಆರ್ನಲ್ಲಿ ಸಂಗ್ರಹಿಸಲಾಗುವ ಮಾಹಿತಿಯನ್ನು ಎನ್ಆರ್ಸಿಗಾಗಿ ಬಳಸಲಾಗುವುದಿಲ್ಲ ಮತ್ತು ಎನ್ ಆರ್ ಸಿ ವಿಚಾರ
ಸಧ್ಯಕ್ಕೆ ಚರ್ಚೆ ಇಲ್ಲ ಎಂದು ಎಂದು
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2019 ಡಿಸೆಂಬರ್
24ರ ಮಂಗಳವಾರ ಇಲ್ಲಿ
ಸ್ಪಷ್ಟ ಪಡಿಸಿದರು. ಭಾರತದಲ್ಲಿ ವಾಸವಾಗಿರುವ ಎಲ್ಲರ ಸಮಗ್ರ ಗುರುತು ಮಾಹಿತಿ ನೆಲೆಯಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್ಪಿಆರ್) ಡಿಜಿಟಲ್ ನವೀಕರಣ ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದ ಕೆಲವೇ ಗಂಟೆಗಳಲ್ಲಿ ಗೃಹ ಸಚಿವರು ಈ ಸ್ಪಷ್ಟನೆ ನೀಡಿದರು.
ಪಶ್ಚಿಮ ಬಂಗಾಳ ಮತ್ತು ಕೇರಳದ ಸಚಿವರು ಎನ್ಪಿಆರ್ ಮಾಹಿತಿ ಸಂಗ್ರಹ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಸುದ್ದಿ ಸಂಸ್ಥೆ ಒಂದರ ಜೊತೆಗಿನ ಸಂದರ್ಶನದಲ್ಲಿ ಮಾತನಾಡುತ್ತಾ ಗೃಹಸಚಿವರು ಈ ಹೇಳಿಕೆ ನೀಡಿದರು.
ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ನಿರ್ಧಾರವನ್ನು ಆಲ್ ಇಂಡಿಯಾ ಮಜ್ಲಿಸ್ -ಇ-ಇತ್ತೇಹಾದುಲ್ ಮುಸ್ಲಿಮೀನ್
ನಾಯಕ ಅಸದುದ್ದೀನ್ ಓವೈಸಿ ಕೂಡಾ ಸಮರ್ಥಿಸಿದ್ದರು. ‘ಈ ನಿರ್ಧಾರವನ್ನು ಪುನರ್
ಪರಿಶೀಲಿಸಿ ಎಂಬುದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೂ ನನ್ನ ಸರಳವಾದ ಮನವಿ’ ಎಂದು ಅಮಿತ್ ಶಾ ಹೇಳಿದರು. ಉಭಯ
ರಾಜ್ಯಗಳ ಮುಖ್ಯಮಂತ್ರಿಗಳ ಈ ನಿರ್ಧಾರವು ಸರ್ಕಾರಿ
ಯೋಜನೆಗಳ ಲಾಭ ಪಡೆಯುವ ಬಡವರಿಗೆ ಘಾಸಿ ಉಂಟು ಮಾಡಲಿದೆ ಎಂದು ಶಾ ಹೇಳಿದರು. ‘ಅಗತ್ಯವಿದ್ದಲ್ಲಿ
ಮನವೊಲಿಸುವ ಸಲುವಾಗಿ ನಾನು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರರನ್ನು ಭೇಟಿಮಾಡುವೆ’ ಎಂದೂ
ಗೃಹ ಸಚಿವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ತಿರುವನಂತಪುರಂ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆ
ಸಂದರ್ಭಮಂಗಳೂರಿನಲ್ಲಿ ಪೊಲೀಸರು ಗುಂಡು ಹಾರಿಸಿದ್ದನ್ನು ಖಂಡಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾರಿಗೆ ಮುತ್ತಿಗೆ ಹಾಕಿ ಕಲ್ಲು ತೋರಿ ಪ್ರತಿಭಟನೆ ನಡೆಸಿದ ಘಟನೆ ಕೇರಳದ ಕಣ್ಣೂರಿನಲ್ಲಿ 2019 ಡಿಸೆಂಬರ್ 24ರ ಮಂಗಳವಾರ ಘಟಿಸಿತು. ಕೇರಳ ಪ್ರವಾಸದಲ್ಲಿರುವ ಬಿಎಸ್ ಯಡಿಯೂರಪ್ಪ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ, ಕಲ್ಲುತೂರಾಟ ನಡೆದಿತ್ತು. ಈ ವೇಳೆ ಪೊಲೀಸರು ಹಾರಿಸಿದ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದರು. ಕಣ್ಣೂರಿನಲ್ಲಿ ಬಿಎಸ್ ಯಡಿಯೂರಪ್ಪ ಅವರು ದೇವಸ್ಥಾನಕ್ಕೆ ಭೇಟಿ ನೀಡುವ ವೇಳೆ ಡಿವೈಎಫ್ ಐ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿತು. ಯಡಿಯೂರಪ್ಪ ಅವರ ಕಾರಿನ ಮೇಲೆ ಕಲ್ಲು ತೂರಾಟವೂ ನಡೆದಿದೆ ಎಂದು ವರದಿ ತಿಳಿಸಿತು. ಕಣ್ಣೂರಿನ ಸಮೀಪದ ತಳಿಪರಂಬ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಯಡಿಯೂರಪ್ಪ ತೆರಳಿದ್ದರು. ಅಲ್ಲಿ ವಿಶೇಷ ಪೂಜೆ ಮುಗಿಸಿ ವಾಪಸ್ಸಾಗುವ ವೇಳೆ ಅವರ ಕಾರನ್ನು ಅಡ್ಡಗಟ್ಟಿದ ಪ್ರತಿಭಟನಾಕಾರರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿತು. ಯಡಿಯೂರಪ್ಪ ಅವರ ಕಾರಿಗೆ ಪ್ರತಿಭಟನಾಕಾರನೊಬ್ಬ ಅಡ್ಡ ಮಲಗಿ ಕಾರನ್ನು ತಡೆದ, ಚಾಲಕ ಚಾಕಚಕ್ಯತೆಯಿಂದ ಆತನನ್ನು ತಪ್ಪಿಸಿ ಮುಂದೆ ವಾಹನ ಮುಂದೆ ಚಲಾಯಿಸಿದರು ಎಂದು ವರದಿ ಹೇಳಿತು. ಹಿಂದಿನ ದಿನ ರಾತ್ರಿ ಯಡಿಯೂರಪ್ಪ ಕೇರಳಕ್ಕೆ ತಲುಪಿದಾಗಲೂ ಸಹ ಕೆಲವರು ಬಂದು ಪ್ರತಿಭಟನೆ ನಡೆಸಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

No comments:
Post a Comment