ನಾನು ಮೆಚ್ಚಿದ ವಾಟ್ಸಪ್

Sunday, April 1, 2018

ಇಂದಿನ ಇತಿಹಾಸ History Today ಮಾರ್ಚ್ 31

ಇಂದಿನ ಇತಿಹಾಸ History Today  ಮಾರ್ಚ್ 31
2018: ನವದೆಹಲಿ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನಿರ್ವಹಣೆ ಮಂಡಳಿ ಮತ್ತು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿಗೆ ನೀರು ಹಂಚಿಕೆಯ ಮೇಲೆ ನಿಗಾ ಇರಿಸಲು ಕಾವೇರಿ ಜಲ ನಿಯಂತ್ರಣ ಸಮಿತಿ ರಚಿಸುವ ನಿಟ್ಟಿನಲ್ಲಿಯೋಜನೆ ರೂಪಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಉದ್ದೇಶ ಪೂರ್ವಕ ಅವಿಧೇಯತನ ತೋರಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯ ನಿಂದನೆ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತು.  ರೈತರ ಹಿತಾಸಕ್ತಿಗಳು ಮತ್ತು ರಾಜ್ಯದ ವಿಶಾಲ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕೇಂದ್ರ ನಿರಾಕರಿಸಿದೆ ಎಂದು ತಮಿಳುನಾಡು ತನ್ನ ಆರ್ಜಿಯಲ್ಲಿ ಆಪಾದಿಸಿತು.  ಕಾವೇರಿ ಜಲ ವಿವಾದಗಳ ನ್ಯಾಯಾಧಿಕರಣದ ೨೦೦೭ರ ಆದೇಶದ ಪ್ರಕಾರ ನಿರ್ವಹಣಾ ಮಂಡಳಿ ಮತ್ತು ಜಲ ನಿಯಂತ್ರಣ ಸಮಿತಿ ರಚನೆಗೆ ಯೋಜನೆ ರೂಪಿಸುವಂತೆ ಕೇಂದ್ರಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದೂ ಅರ್ಜಿಯು ಸುಪ್ರೀಂಕೋರ್ಟನ್ನು ಕೋರಿತು.  ಕಾವೇರಿ ಜಲ ವಿವಾದಗಳ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಗಳ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ನೀಡಿದ್ದ ಫೆಬ್ರುವರಿ ೧೬ರ ತೀರ್ಪಿನ ಪ್ರಕಾರ ಕೇಂದ್ರ ಸರ್ಕಾರವು ವಾರಗಳ ಒಳಗಾಗಿಯೋಜನೆ ರೂಪಿಸಬೇಕಾಗಿತ್ತು. ಇದಕ್ಕಾಗಿ ಸುಪ್ರೀಂಕೋರ್ಟ್ ನೀಡಿದ್ದ ಗಡುವು ಮಾರ್ಚ್ ೨೯ಕ್ಕೆ ಮುಕ್ತಾಯಗೊಂಡಿದೆ.  ಗಡುವು ಮುಕ್ತಾಯಗೊಳ್ಳುವದರ ಹಿಂದಿನ ದಿನ ಕೇಂದ್ರವು ತೀರ್ಪಿನ ಜಾರಿಗೆ ತಿಂಗಳ ಕಾಲಾವಧಿ ನೀಡುವಂತೆ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಕರ್ನಾಟಕದಲ್ಲಿ ಮೇ ೧೨ರಂದು ವಿಧಾನಸಭಾ ಚುನಾವಣೆ ಇರುವುದರಿಂದ ಕಾವೇರಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯವನ್ನು ಚುನಾವಣೆ ಬಳಿಕವೇ ಕೈಗೆತ್ತಿಕೊಳ್ಳಲು ಕೇಂದ್ರ ಬಯಸಿದೆ. ಇದಲ್ಲದೆ ಫೆಬ್ರುವರಿ ೧೬ರ ತೀರ್ಪಿಗೆ ಸಂಬಂಧಿಸಿದ ಕೆಲವು ಅಂಶಗಳ ಬಗ್ಗೆ ಸ್ಪಷ್ಟನೆಗಳನ್ನು ಕೇಂದ್ರ ಕೋರಿತ್ತು.. ನ್ಯಾಯಾಧಿಕರಣ ಹೇಳಿದಂತೆ ಕೇವಲ ತಾಂತ್ರಿಕ ಸಮಿತಿ ಬದಲು ಅದಕ್ಕೆ ಹೊರತಾದ ಆಡಳಿತಾತ್ಮಕ ಮತ್ತು ತಾಂತ್ರಿಕ ತಜ್ಞರ ಸಮಿತಿ ರಚಿಸಬಹುದೇ? ನಿಟ್ಟಿನಲ್ಲಿ ನ್ಯಾಯಾಧಿಕರಣದ ಶಿಫಾರಸುಗಳಿಂದ ಸ್ವಲ್ಪ ಭಿನ್ನವಾಗಿ ಯೋಜನೆಯನ್ನು ತಾನು ರೂಪಿಸಬಹುದೇ ಎಂಬ ಬಗೆಗೂ ಕೇಂದ್ರವು ಸುಪ್ರೀಂಕೋರ್ಟಿನ ಬಳಿ ಸ್ಪಷ್ಟನೆ ಕೇಳಿತ್ತು.  ನ್ಯಾಯಾಧಿಕರಣವು ಶಿಫಾರಸು ಮಾಡಿದ ಕೆಲಸಗಳಿಗೆ ಭಿನ್ನವಾದ ಕೆಲಸ ನಿರ್ವಹಿಸುವಂತೆ  ನಿರ್ವಹಣಾ ಮಂಡಳಿಗೆ ತಾನು ಸೂಚಿಸಬಹುದೇ ಎಂದೂ ಕೇಂದ್ರವು ಸುಪ್ರೀಂಕೋರ್ಟಿನ್ನು ಕೇಳಿತ್ತು. ತಮಿಳುನಾಡು ಮತ್ತು ಕರ್ನಾಟಕದ ಮಧ್ಯೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ೧೯೫೬ರ ಆಂತರ ರಾಜ್ಯ ನದಿ ಜಲ ವಿವಾದ ಮಂಡಳಿ ಕಾಯ್ದೆಯ ಸೆಕ್ಷನ್ ಪ್ರಕಾರ ಯೋಜನೆ ರೂಪಿಸುವ ಬಗ್ಗೆ ಕೂಡಾ ಅದು ಸುಪ್ರೀಂಕೋರ್ಟ್ ಅಭಿಪ್ರಾಯವನ್ನು ಕೋರಿದೆ. ತಮಿಳುನಾಡು ೨೦೦೭ರ ನ್ಯಾಯಾಧಿಕರಣ ತೀರ್ಪಿನ ಪ್ರಕಾರವೇ ನಿರ್ವಹಣಾ ಮಂಡಳಿ ಸ್ಥಾಪನೆಗೆ ಆಗ್ರಹಿಸಿದ್ದರೆ, ಕರ್ನಾಟಕವು ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಮುಂದಾಳುತ್ವದ ಸಮಿತಿಯ ನೇತೃತ್ವದಲ್ಲಿ ಎರಡು :ಂತದ ಯೋಜನೆ ರೂಪಿಸಲು ಬಯಸಿತ್ತು. ಈ ವಾರ ನ್ಯಾಯಾಲಯದ ಕಲಾಪ ಮುಕ್ತಾಯವಾದ ಬಳಿಕ ಕೇಂದ್ರ ಸರ್ಕಾರವು ಸಲ್ಲಿಸಿದ್ದ ಅರ್ಜಿ ಇತ್ಯರ್ಥಗೊಳ್ಳಲು ಬಾಕಿ ಉಳಿದಿತ್ತು.  ತಮಿಳುನಾಡು ತನ್ನ ವಕೀಲ ಜಿ. ಉಮಾಪತಿ ಮೂಲಕ ಸುಪ್ರೀಂಕೋರ್ಟ್ ರಿಜಿಸ್ಟ್ರಿಯಲ್ಲಿ ಈದಿನ ಬೆಳಗ್ಗೆ ಸುಪ್ರೀಂಕೋರ್ಟ್ ಕಾರ್ಯಾರಂಭ ಮಾಡುತ್ತಿದ್ದಂತೆಯೇ ತನ್ನ ನ್ಯಾಯಾಲಯ ನಿಂದನೆ ಅರ್ಜಿಯನ್ನು ಸಲ್ಲಿಸಿತು. ಫೆಬ್ರುವರಿ ೧೬ರ ತೀರ್ಪಿನಲ್ಲಿ ಯೋಜನೆ ರೂಪಿಸುವ ನಿಟ್ಟಿನಲ್ಲಿ ಯಾವುದೇ ಕಾಲಾವಕಾಶ ವಿಸ್ತರಣೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತು.  ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೊಳಿಸಲೇಬೇಕಾದ ಬದ್ಧತೆ ಕೇಂದ್ರ ಸರ್ಕಾರದ ಮೇಲಿದೆ. ತೀರ್ಪಿನ ಪ್ರಕಾರ ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿಯನ್ನು ಕೇಂದ್ರ ಸರ್ಕಾರವು ತಿಂಗಳುಗಳ ಒಳಗಾಗಿ ರಚಿಸಬೇಕು. ಅದು ನಿಟ್ಟಿನಲ್ಲಿಯ ಯಾವುದೇ ದೃಢ ಕ್ರಮ ಕೈಗೊಂಡಿಲ್ಲ ಎಂದೂ ತಮಿಳುನಾಡು ತನ್ನ ಅರ್ಜಿಯಲ್ಲಿ ತಿಳಿಸಿತು.  ಅತ್ಯಂತ ತಡವಾಗಿ, ಮೂರು ವಾರಗಳ ಬಳಿಕ ಕೇಂದ್ರ ಸರ್ಕಾರವು ಕಕ್ಷಿದಾರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆಯನ್ನು ೨೦೧೮ರ ಮಾರ್ಚ್ ರಂದು ಕರೆದಿತ್ತು. ಸಭೆಯ ಮೂಲಕ ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿ ರಚನೆ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಲಿಲ್ಲ ಎಂದು ಅದು ಹೇಳಿತು. ಮಾರ್ಚ್ ೨೩, ಮಾರ್ಚ್ ೨೧ ಮತ್ತು ಮಾರ್ಚ್ ೨೩ರಂದು ತಮಿಳುನಾಡು ಪದೇ ಪದೇ ಕೇಂದ್ರಕ್ಕೆ ಪತ್ರಗಳನ್ನು ಬರೆದು ಕಾವೇರಿ ನಿರ್ವಹಣಾ ಮಂಡಳಿಯನ್ನು ಆರು ವಾರಗಳ ಕಾಲಮಿತಿಯೊಳಗಾಗಿ ರಚಿಸುವ ಮೂಲಕ ಜೂನ್ ೧ರಿಂದ ಆರಂಭವಾಗುವ ನೀರಾವರಿ ಕಾಲದಲ್ಲಿ ರೈತರು ಯಾವುದೇ ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಕೋರಿತ್ತು ಎಂದು ಅದು ಸುಪ್ರೀಂಕೋರ್ಟಿಗೆ ತಿಳಿಸಿತು.

2018: ಬೆಂಗಳೂರು: ಕೈಯಲ್ಲಿ ಪದವಿ ಪತ್ರ, ಕೊರಳಲ್ಲಿ ಸ್ಟೆತೋಸ್ಕೋಪ್ ಧರಿಸಿರುವ ಸೀರೆಯುಟ್ಟ ಮಹಿಳೆ. ಇದು ಗೂಗಲ್ಡೂಡಲ್ನಲ್ಲಿ ಈದಿನ  ಪ್ರಕಟಗೊಂಡ ಚಿತ್ರ.   ಚಿತ್ರದಲ್ಲಿರುವವರು ಭಾರತದ ಮೊದಲ ವೈದ್ಯೆ ಆನಂದಿ ಗೋಪಾಲ್ಜೋಷಿ.  ಮಹಾರಾಷ್ಟ್ರದ ಕಲ್ಯಾಣದಲ್ಲಿ 1865ರಂದು ಜನಿಸಿದ ಆನಂದಿ ಅವರ 153ನೇ ಜನ್ಮದಿನಕ್ಕೆ ಗೂಗಲ್ಡೂಡಲ್ಮೂಲಕ ಗೌರವಿಸಿತು. ಭಾರತದಲ್ಲಿ ಅನೇಕ ಕಟ್ಟುಪಾಡುಗಳ ನಡುವೆ ಮಹಿಳೆ ಶಾಲೆಗೆ ಹೋಗುವುದೂ ಕಠಿಣವಾಗಿದ್ದ 19ನೇ ಶತಮಾನದಲ್ಲಿ ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದು ದೇಶದ ಮೊದಲ ವೈದ್ಯೆ ಎಂಬ ಹೆಮ್ಮೆಗೆ ಪಾತ್ರರಾದವರು ಆನಂದಿ ಗೋಪಾಲ್ಜೋಷಿ.  ತನ್ನ 9ನೇ ವಯಸ್ಸಿನಲ್ಲಿಯೇ ಬಾಲ್ಯ ವಿವಾಹವಾದ ಆನಂದಿ ಅವರ ಬೆಂಬಲಕ್ಕೆ ನಿಂತವರು ಪತಿ ಗೋಪಾಲ್ರಾವ್ಜೋಷಿ. ಅಂಚೆ ಇಲಾಖೆಯಲ್ಲಿ ಕ್ಲರ್ಕ್ಆಗಿದ್ದ ಗೋಪಾಲ್ರಾವ್ಆನಂದಿಗಿಂತ ವಯಸ್ಸಿನಲ್ಲಿ 20 ವರ್ಷ ಹಿರಿಯ. ಪ್ರಗತಿಪರ ಚಿಂತನೆಯನ್ನು ಹೊಂದಿದ್ದ ಅವರು ಆನಂದಿಗೆ ಶಿಕ್ಷಣ ಕೊಡಿಸುವಲ್ಲಿ ಪ್ರಮುಖಪಾತ್ರ ವಹಿಸಿದರು. ಇಂಗ್ಲಿಷ್‌, ಸಂಸ್ಕೃತ ಹಾಗೂ ಮರಾಠಿ ಭಾಷೆ ಓದುವುದುಬರೆಯುವುದನ್ನು ಅವರೇ ಕಲಿಸಿದರು.  ಕಲಿಕೆಯ ಫಲವಾಗಿ ತನ್ನ ಮುಂದಿನ ಗುರಿಯನ್ನು ಕಂಡುಕೊಂಡ ಆನಂದಿ ವೈದ್ಯಕೀಯ ಶಿಕ್ಷಣ ಪಡೆಯಲು ಅಮೆರಿಕಕ್ಕೆ ತೆರಳಿದರು. ಆಗ ಆಕೆಗೆ 19 ವರ್ಷ. ಪದವಿ ಪಡೆದು 1886ರಲ್ಲಿ ಭಾರತಕ್ಕೆ ಮರಳಿದ ಆನಂದಿ ಕೊಲ್ಲಾಪುರದ ಆಲ್ಬರ್ಟ್ಎಡ್ವರ್ಡ್ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳ ವಿಭಾಗದ ಮುಖ್ಯಸ್ಥೆಯಾಗಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದರುವೃತ್ತಿ ಆರಂಭಿಸಿದ ಒಂದೇ ವರ್ಷದಲ್ಲಿ ಕ್ಷಯರೋಗದಿಂದಾಗಿ1887 ಫೆ.26ರಂದು ಮೃತಪಟ್ಟರು.  ಆಗ ಆನಂದಿ ಅವರಿಗೆ 22 ವರ್ಷ.

2018: ಕೋಲ್ಕತ: ಪಶ್ಚಿಮ ಬಂಗಾಳ ಚುನಾವಣಾ ಆಯೋಗವು (ಎಸ್ ಇಸಿ) ರಾಜ್ಯದಲ್ಲಿ ಮೂರು ಹಂತಗಳ ಪಂಚಾಯತ್ ಚುನಾವಣೆಯನ್ನು ಪ್ರಕಟಿಸಿತು.  ಮೇ೧, ಮತ್ತು ೫ರಂದು ಮೂರು ಹಂತಗಳಲ್ಲಿ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ನಡೆಯಲಿದೆ, ಮೇ ೮ರಂದು ಮತಗಳ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಕಮೀಷನರ್ .ಕೆ. ಸಿಂಗ್ ವರದಿಗಾರರಿಗೆ ತಿಳಿಸಿದರು.  ರಾಜ್ಯ ಚುನಾವಣಾ ಆಯೋಗವು ವಾರಾರಂಭದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಪಂಚಾಯತ್ ಚುನಾವಣಾ ಸಿದ್ಧತೆಗಳ ಬಗ್ಗೆ ಚರ್ಚಿಸಿತ್ತು. ವರದಿಗಳ ಪ್ರಕಾರ, ಮಾಲ್ದಾ, ಮುರ್ಶಿದಾಬಾದ್ ಮತ್ತು ನಾಡಿಯಾ ಸೇರಿದಂತೆ ಜಿಲ್ಲೆಗಳಲ್ಲಿ ಚುನಾವಣೆ ಎರಡನೇ ಹಂತದಲ್ಲಿ ನಡೆಯಬಹುದು ಎನ್ನಲಾಯಿತು.  ದಕ್ಷಿಣ ಬಂಗಾಳದಲ್ಲಿ ಚುನಾವಣೆ ಮೂರನೇ ಹಂತದಲ್ಲಿ ನಡೆಯಬಹುದು ಎನ್ನಲಾಯಿತು.  ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ತೃಣಮೂಲ ಕಾಂಗ್ರೆಸ್ ಹೇಗೆ ಹಾಳುಗೆಡವಿದೆ ಎಂದು ತಿಳಿಯಲು ಪಶ್ಚಿಮ ಬಂಗಾಳಕ್ಕೆ ಪಂಚಾಯತ್ ಚುನಾವಣೆ ವೇಳೆಯಲ್ಲಿ ೫೦ ಮಂದಿ ವೀಕ್ಷಕರನ್ನು ಕಳುಹಿಸುವಂತೆ ಬಿಜೆಪಿ ನಾಯಕ ಮುಕುಲ್ ರಾಯ್ ಅವರು ಚುನಾವಣಾ ಆಯೋಗಕ್ಕೆ ಕಳೆದ ತಿಂಗಳು ಮನವಿ ಮಾಡಿದ್ದರು. ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ಹೆಚ್ಚಿನ ಮಹತ್ವ ಪಡೆಯಿತು. ಇತರ ಬಿಜೆಪಿ ನಾಯಕರೊಂದಿಗೆ ಮುಖ್ಯ ಚುನಾವಣಾ ಕಮೀಷನರ್ ಓಂ ಪ್ರಕಾಶ ರಾವತ್ ಅವರನ್ನು ಭೇಟಿ ಮಾಡಿದ್ದ ರಾಯ್, ಪಶ್ಚಿಮ ಬಂಗಾಳದಲ್ಲಿ ಪ್ರತ್ಯೇಕ ಮಾದರಿಯ ಚುನಾವಣಾ ಭದ್ರತಾ ವ್ಯವಸ್ಥೆ ರೂಪಿಸಬೇಕು ಎಂದು ಮನವಿ ಮಾಡಿದ್ದರು. ‘ಪಂಚಾಯತ್ ಚುನಾವಣೆಗಳನ್ನು ಚುನಾವಣಾ ಆಯೋಗದ ಅಡಿಯಲ್ಲಿ ನಡೆಸಲಾಗುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಆದರೆ ಚುನಾವಣೆಯನ್ನು ಅಧ್ಯಯನ ಮಾಡಿ ಬಂಗಾಳದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಹೇಗೆ ಹಾಳುಗೆಡವಲಾಗುತ್ತಿದೆ ಎಂಬುದನ್ನು ಅರಿಯಲು ಕೇಂದ್ರ ವೀಕ್ಷಕರನ್ನು ಕಳುಹಿಸುವಂತೆ ಮತ್ತು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಮ ಬಂಗಾಳಕ್ಕಾಗಿ ಪ್ರತ್ಯೇಕ ಮಾದರಿಯ ಭದ್ರತಾ ವ್ಯವಸ್ಥೆ ರಚಿಸುವಂತೆ ನಾವು ಮನವಿ ಮಾಡಿದ್ದೇವೆ ಎಂದು ಅವರು ನುಡಿದರು.

2018: ಮುಂಬೈ: ಕರ್ನಾಟಕದಲ್ಲಿ ಆಳುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರು  ಇಲ್ಲಿ ಹೇಳಿದರು.  ಮಾಧ್ಯಮ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾದೇಶಿಕ ಪ್ರತಿಷ್ಠೆಯನ್ನು ಪ್ರೇರಿಸಿರುವ ಕಾರಣ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಎದುರಿಸುವ ಪ್ರಶ್ನೆ ಇಲ್ಲ ಎಂದು ನುಡಿದರು.  ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಗುರುತಾಗಿ ರಾಜ್ಯ ಧ್ವಜವನ್ನು ಅದರ ಮಧ್ಯದಲ್ಲಿ ರಾಜ್ಯ ಲಾಂಛನ ಸಹಿತವಾಗಿ ರೂಪಿಸುವ ನಿರ್ಣಯದ ಮೂಲಕ ದಕ್ಷಿಣದದಲ್ಲಿ ರಾಜ್ಯಕ್ಕೆ ಪ್ರತಿಷ್ಠೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಂದುಕೊಟ್ಟಿದ್ದಾರೆ. ಧ್ವಜಕ್ಕೆ ಇದೀಗ ಕೇಂದ್ರ ಗೃಹ ಸಚಿವಾಲಯವು ಒಪ್ಪಿಗೆ ನೀಡಬೇಕಾಗಿದೆ ಎಂದು ಚಿಕ್ಕಾಬಳ್ಳಾಪುರ ಸಂಸತ್ ಸದಸ್ಯ ನುಡಿದರು. ಇಷ್ಟೊಂದು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವುದರ ಹೊರತಾಗಿಯೂ ರಾಜ್ಯದ ಆರ್ಥಿಕ ಸ್ಥಿತಿಯು ಹಣಕಾಸು ಜವಾಬ್ದಾರಿಯನ್ನು ಎಂದೂ ಮೀರಿ ಹೋಗಲಿಲ್ಲ. ಜೊತೆಗೆ ಎಲ್ಲ ಘೋಷಿತ ಕಾರ್ಯಕ್ರಮಗಳೂ ಜಾರಿಯಾಗಿವೆ ಎಂದು ಮೊಯ್ಲಿ ಹೇಳಿದರು. ೨೦೧೩ರಲ್ಲಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು  ಯುಪಿಎ ಸರ್ಕಾರವು ತಿರಸ್ಕರಿದ್ದು ಏಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೊಯ್ಲಿ, ’ಹೆಚ್ಚಿನ ವಿವರಗಳಿಗಾಗಿ ಮುಂದೂಡಲಾಗಿತ್ತೇ ಹೊರತು ಪ್ರಸ್ತಾಪವನ್ನು ಎಂದೂ ತಿರಸ್ಕರಿಸಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಯೂ ಆದ ಮೊಯ್ಲಿ ಹೇಳಿದರು.

2018: ನವದೆಹಲಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ತಮ್ಮ ಪಕ್ಷ ನೇತೃತ್ವದ ಕೇಂದ್ರ ಸರ್ಕಾರವನ್ನು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ತರಾಟೆಗೆ ತೆಗೆದುಕೊಂಡರು.  ಸರ್ಕಾರಿ ಸ್ವಾಮ್ಯದ ಪ್ರಮುಖ ವಿಮಾನಯಾನ ಸಂಸ್ಥೆಯನ್ನುಕುಟುಂಬದ ಬೆಳ್ಳಿಗೆ ಹೋಲಿಸಿದ ಸ್ವಾಮಿ ಅದರ ಮಾರಾಟ ಕುರಿತ ತಮ್ಮ ಕಳವಳವನ್ನು ವ್ಯಕ್ತ ಪಡಿಸಲು ಟ್ವಿಟ್ಟರ್ ಖಾತೆಯನ್ನು ಬಳಸಿದರು. ‘ಕುಟುಂಬದ ಬೆಳ್ಳಿಯನ್ನು ತೊರೆಯುವುದು ನಷ್ಟ ನಿವಾರಣೆಯ ಕ್ರಮವಲ್ಲ ಎಂದು ಹೇಳಿದ ಅವರುಏರ್ ಇಂಡಿಯಾ ಮಾರಾಟ ಪ್ರಸ್ತಾಪದ ಹಿಂದೆ ಹಗರಣದ ಸಾಧ್ಯತೆ ಇದೆ ಎಂದು ಹೇಳಿದರು.  ಏರ್ ಇಂಡಿಯಾದ ಪ್ರಸ್ತಾಪಿತ ಮಾರಾಟದಲ್ಲಿ ಇನ್ನೊಂದು ಹಗರಣದ ವಾಸನೆ ಇದೆ. ಕುಟುಂಬದ ಬೆಳ್ಳಿಯನ್ನು ಮಾರಾಟ ಮಾಡುವುದು ನಷ್ಟ ನಿವಾರಣೆಯಲ್ಲ. ಯಾರು ಏನು ಮಾಡುತ್ತಿದ್ದಾರೆ ಎಂದು ನಾನು ಗಮನಿಸುತ್ತಿದ್ದೇನೆ. ಇದರಲ್ಲಿ ಏನಾದರೂ ದಂಡನೀಯ ದೋಷ ಇದೆಯೇ ಎಂದು ನೋಡುತ್ತೇನೆ, ಏನಾದರೂ ದೋಷ ಕಂಡಲ್ಲಿ ಖಾಸತಿ ಕ್ರಿಮಿನಲ್ ಕಾಯ್ದೆಯಡಿ ದೂರು ದಾಖಲಿಸುತ್ತೇನೆ ಎಂದು ಸ್ವಾಮಿ ಟ್ವೀಟ್ ಮಾಡಿದರು.  ‘ವ್ಯವಹಾರದ ಮೇಲೆ ಅತ್ಯಂತ ನಿಕಟ ನಿಗಾ ಇರಿಸಿದ್ದೇನೆ. ಅಗತ್ಯ ಬಿದ್ದಲ್ಲಿ ಕ್ರಿಮಿನಲ್ ದೂರು ನೀಡುವುದಷ್ಟೇ ಅಲ್ಲ, ಏನಾದರ ಹಗರಣ ಕಂಡರೆ ಕೋರ್ಟಿಗೂ ಒಯ್ಯುತ್ತೇನೆ ಎಂದು ಅವರು ಟ್ವೀಟಿಸಿದರು. ವ್ಯವಹಾರದ ಬಗ್ಗೆ ಗುಮಾನಿ ವ್ಯಕ್ತ ಪಡಿಸಿದವರು ಸ್ವಾಮಿ ಒಬ್ಬರೇ ಅಲ್ಲ. ತೃಣ ಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ವ್ಯವಹಾರದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು.  ‘ರಾಷ್ಟ್ರ ರತ್ನವಾಗಿರುವ ಏರ್ ಇಂಡಿಯಾವನ್ನು ಮಾರಾಟ ಮಾಡಲು ಸರ್ಕಾರ ಆಸಕ್ತಿ ವ್ಯಕ್ತ ಪಡಿಸಿರುವ ಬಗೆಗಿನ ಮಾಧ್ಯಮ ವರದಿಗಳನ್ನು ಓದಿ ನನಗೆ ಬೇಸರವಾಗಿದೆ ಎಂದು ಅವರು ಹೇಳಿದ್ದರು.  ‘ನಾವು ಇದನ್ನು ಪ್ರಬಲವಾಗಿ ವಿರೋಧಿಸುತ್ತೇವೆ ಮತ್ತು ಆದೇಶವನ್ನು ತತ್ ಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಬಯಸುತ್ತೇವೆ. ಸರ್ಕಾರವು ನಮ್ಮ ರಾಷ್ಟ್ರವನ್ನು ಮಾರಾಟಮಾಡಲು ಬಿಡಬಾರದು ಎಂದು ಅವರು ಹೇಳಿದ್ದರು. ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರೂ ಏರ್ ಇಂಡಿಯಾ ಖಾಸಗೀಕರಣ ವಿರುದ್ಧ ಆಕ್ಷೇಪ ವ್ಯಕ್ತ ಪಡಿಸಿದರು.  ಕ್ರಮದ ಬಗ್ಗೆ ಆಘಾತ ವ್ಯಕ್ತ ಪಡಿಸಿದ ಅವರುಸರ್ಕಾರವು ಶೇಕಡಾ ೭೬ರಷ್ಟು ಇಕ್ವಿಟಿಯನ್ನು ಮಾರಾಟ ಮಾಡಿ, ಕಂಪೆನಿಯ ಶೇಕಡಾ ೫೨ರಷ್ಟು ಸಾಲವನ್ನು ಉಳಿಸಿಕೊಳ್ಳುವುದೇ? ಇದು ಕೆಲವು ಖಾಸಗಿ ಏಜೆಂಟರಿಗೆ ಲಾಭ ಮಾಡಿಕೊಡುವ ಹುನ್ನಾರವಲ್ಲವೇ?’ ಎಂದು ಪ್ರಶ್ನಿಸಿದರು.  ನಾಗರಿಕ ವಿಮಾನಯಾನ ಸಚಿವಾಲಯವು ಏರ್ ಇಂಡಿಯಾ ಮಾರಾಟ ಯತ್ನಕ್ಕೆ ಘಟಕಗಳ ಒಕ್ಕೂಟಕ್ಕೆ ಅನುಮತಿ ಕೊಟ್ಟಿದೆ. ಒಕ್ಕೂಟವು ಶೇಕಡಾ ೨೦ ಶೇರಿನೊಂದಿಗೆ ಒಬ್ಬ ಮುಖ್ಯ ಸದಸ್ಯನನ್ನು ಹೊಂದಿರುತ್ತದೆ.
ಏರ್ ಇಂಡಿಯಾದ ಶೇಕಡಾ ೭೬ರಷ್ಟು ಇಕ್ವಿಟಿಯನ್ನು ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡಲು ಸರ್ಕಾರ ಪ್ರಸ್ತಾಪಿಸಿದೆ. ಆದರೆಏರ್ ಇಂಡಿಯಾ ಹೆಸರನ್ನು ಉಳಿಸಿಕೊಳ್ಳಬೇಕು ಮತ್ತು ವಿಮಾನಯಾನ ಸಂಸ್ಥೆಯ ನಿಯಂತ್ರಣ ಭಾರತೀಯ ರಾಷ್ಟ್ರೀಯರ ಕೈಯಲ್ಲೇ ಇರಬೇಕು ಎಂಬ ಷರತ್ತನ್ನು ಅದು ವಿಧಿಸಿದೆ.  ಕನಿಷ್ಠ ೫೦೦೦ ಕೋಟಿ ರೂಪಾಯಿಗಳ ಆಸ್ತಿ ಉಳ್ಳ ಕಂಪೆನಿಗಳು ಮಾತ್ರವೇ ಏರ್ ಇಂಡಿಯಾಕ್ಕಾಗಿ ಬಿಡ್ ಮಾಡಬಹುದು ಮತ್ತು ಮುಖ್ಯ ಸದಸ್ಯರು ಪಾವತಿ ಮಾಡುವ ಬಂಡವಾಳದಲ್ಲಿ ಶೇಕಡಾ ೫೧ರಷ್ಟನ್ನು ತೊಡಗಿಸಿರಬೇಕು ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿತು. ವಿಮಾನಯಾನ ಸಂಸ್ಥೆಯ ಖಾಸಗೀಕರಣಕ್ಕೆ ಸರ್ಕಾರ ಬದ್ಧವಾಗಿದ್ದು, ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಸ್ವಂತ್ ಸಿನ್ಹ ಅವರು ಏರ್ ಇಂಡಿಯಾವು ಡಿಸೆಂಬರ್ ವೇಳೆಗೆ ಖಾಸಗಿ ಕೈಗಳಲ್ಲಿ ಇರುತ್ತದೆ ಎಂದು ಹೇಳಿದರು.

2018: ಛತ್ರ ಜಾರ್ಖಂಡ್: ಸಿಬಿಎಸ್ ಪ್ರಶ್ನೆ ಪತ್ರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಛತ್ರದಲ್ಲಿನ ಖಾಸಗಿ ಕೋಚಿಂಗ್ ಕೇಂದ್ರ ಒಂದರ ಇಬ್ಬರು ನಿರ್ದೇಶಕರು ಸೇರಿದಂತೆ ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್ ೩೧ರಿಂದ ಇಲ್ಲಿಯವರೆಗೆ ೧೦ ಮತ್ತು ೧೧ನೇ ತರಗತಿಯ ವಿದ್ಯಾರ್ಥಿಗಳು ಸೇರಿದಂತೆ ೧೨ ಜನರನ್ನು ಜಾರ್ಖಂಡಿನ ಛತ್ರದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದರು. ವಾರಾರಂಭದಲ್ಲಿ ೧೦ನೇ ತರಗತಿಯ ಗಣಿತ ಮತ್ತು ೧೨ನೇ ತರಗತಿಯ ಅರ್ಥಶಾಸ್ತ್ರ (ಇಕನಾಮಿಕ್ಸ್) ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಬಳಿಕ ಪರೀಕ್ಷಾ ಮಂಡಳಿ ತೀವ್ರ ಟೀಕೆಗೆ ಗುರಿಯಾಗಿತ್ತು. ಪೊಲೀಸರು ಮಾರ್ಚ್ ೩೦ರಂದು ೧೦ನೇ ತರಗತಿಯ ವಿದ್ಯಾರ್ಥಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ ೩೧ರಂದು ಬಂಧಿಸಲಾದ ವಿದ್ಯಾರ್ಥಿಗಳಲ್ಲಿ ನಾಲ್ವರು ಜಿಲ್ಲೆಯ ವಿವಿಧ ಶಾಲೆಗಳಿಗೆ ಸೇರಿದವರು ಎಂದು ಪೊಲೀಸರು ಹೇಳಿದರು. ಛತ್ರದ ನವೋದಯ ವಿದ್ಯಾಲಯ ಕ್ಯಾಂಪಸ್ಸಿನಲ್ಲಿ ೧೧ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ. ಈತ ಸೋರಿಕೆಯಾದ ಪ್ರಶ್ನೆ ಪತ್ರಿಕೆಯ ಉತ್ತರಗಳಿದ್ದ ಚೀಟಿಗಳನ್ನು ಶಾಲೆಯ ಬಾತ್ ರೂಮ್ ನಲ್ಲಿ ಬಚ್ಚಿಟ್ಟಿದ್ದ. ಇಬ್ಬರು ವಿದ್ಯಾರ್ಥಿಗಳನ್ನು ಪಾಟ್ನಾದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಕೋಚಿಂಗ್ ಕೇಂದ್ರದ ಇಬ್ಬರು ವಿದ್ಯಾರ್ಥಿಗಳನ್ನೂ ಬಂಧಿಸಲಾಗಿದೆ ಎಂದು ಅವರು ನುಡಿದರು.

2018: ಲಕ್ನೋ: ದೇಶದಲ್ಲಿ ಪ್ರತಿಮೆಗಳನ್ನು ಧ್ವಂಸಗೈಯುವ ದುಷ್ಕೃತ್ಯವನ್ನು ಕಿಡಿಗೇಡಿಗಳು ಇನ್ನೂ ಮುಂದುವರೆಸಿದರು.  ಉತ್ತರಪ್ರದೇಶದಲ್ಲಿ ೨೪ ಗಂಟೆಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳನ್ನು  ನಾಶಪಡಿಸಲಾಯಿತು. ಸಿದ್ಧಾರ್ಥನಗರದ ಗೊಹಾನಿಯಾದಲ್ಲಿ  ಹಿಂದಿನ  ರಾತ್ರಿ ಪ್ರತಿಮೆ ಧ್ವಂಸಗೈಯಲಾಗಿದ್ದು, ಈದಿನ  ಬೆಳಗ್ಗೆ ಅಲಹಾಬಾದಿನಲ್ಲಿ ಪ್ರತಿಮೆಗೆ ಹಾನಿ ಎಸಗಲಾಯಿತು.  ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿ, ತತ್ ಕ್ಷಣ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದವು.  ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ ಸೇರಿದಂತೆ ದೇಶದ ವಿವಿಧೆಡೆ ಮಹಾತ್ಮ ಗಾಂಧೀಜಿ ಸೇರಿದಂತೆ ರಾಷ್ಟ್ರ ನಾಯಕರ ಪ್ರತಿಮೆಗಳನ್ನು ಕಿಡಿ ಗೇಡಿಗಳು ಹಾನಿ ಮಾಡಿದ್ದರು.  ಪ್ರತಿಮೆ ಹಾನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದ್ದರು.

2018: ನವದೆಹಲಿ: ರಾಜಕಾರಣಿಯಾಗಿ ಪರಿವರ್ತನೆಗೊಂಡ ಕ್ರಿಕೆಟಿಗ ಹಾಗೂ ಪಂಜಾಬಿನ ಪ್ರವಾಸೋದ್ಯಮ ಸಚಿವ ನವಜೋತ್ ಸಿಂಗ್ ಸಿಧು ಅವರ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಸ್ತಂಭನಗೊಳಿಸಿತು. ಆದಾಯ ತೆರಿಗೆ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧು ಅವರ ಮೇಲ್ಮನವಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಐಟಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. ಆದರೆ ಸಿಧು ಅವರು ಪಾವತಿ ಮಾಡಬೇಕಾದ ತೆರಿಗೆಯ ಮೊತ್ತವನ್ನು ಬಹಿರಂಗಪಡಿಸಲು ನಿರಾಕರಿಸಿದರು.  ತಮ್ಮ ಆದಾಯದ ಮೊತ್ತವನ್ನು ಸಮರ್ಥಿಸಿಕೊಳ್ಳಲು ಸೂಕ್ತ ದಾಖಲೆ ನೀಡುವಲ್ಲಿ ಹಾಗೂ ತೆರಿಗೆ ಪಾವತಿಸಲು ವಿಫಲರಾದ ಹಿನ್ನೆಲೆಯಲ್ಲಿ ಸಿಧು ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಸಿಧು ಅವರು ೫೨ ಲಕ್ಷ ರೂ.ಗಳ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಹಿಂದೆ ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು.

2018: ನವದೆಹಲಿ: ಸಿಬಿಎಸ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತು.  ೧೫ರ ಹರೆಯದ ವಿದ್ಯಾರ್ಥಿ ರೋಹನ್ ಮ್ಯಾಥ್ಯೂ ಅವರು ೧೦ನೇ ತರಗತಿಯ ಗಣಿತ ಪರೀಕ್ಷೆ ಪತ್ರಿಕೆ ಸೋರಿಕೆಯ ವರದಿಗಳನ್ನು ಆಧರಿಸಿ ವಿಷಯದ ಮರುಪರೀಕ್ಷೆ ನಡೆಸಲು ಸಿಬಿಎಸ್ ಕೈಗೊಂಡ ನಿರ್ಧಾರವನ್ನು ರದ್ದು ಪಡಿಸುವಂತೆ ಸುಪ್ರೀಂಕೋರ್ಟಿಗೆ ಮನವಿ ಮಾಡಿದರು. ಕೇರಳದ ಶಾಲೆಯೊಂದರ ೧೦ನೇ ತರಗತಿಯ ವಿದ್ಯಾರ್ಥಿಯಾದ ಮ್ಯಾಥ್ಯೂ ಅವರುದೆಹಲಿಯಲ್ಲಿನ ದೃಢಪಡಿಸಲಾಗದ ಊಹಾಪೋಹಗಳನ್ನು ಆಧರಿಸಿ ೧೦ನೇ ತರಗತಿಯ ಗಣಿತ ಪರೀಕ್ಷೆಯನ್ನು ರದ್ದು ಪಡಿಸಲು ಸಿಬಿಎಸ್ ಕೈಗೊಂಡ ನಿರ್ಧಾರ, ಭಾರತ ಮತ್ತು ವಿದೇಶಗಳಲ್ಲಿ ಮಾರ್ಚ್ ೨೮ರಂದು ಪರೀಕ್ಷೆಗೆ ಹಾಜರಾಗಿದ್ದ ೧೬ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ಮಸುಕುಗೊಳಿಸಿದೆ ಎಂದು ವಾದಿಸಿದರು. ಪ್ರಶ್ನೆ ಪತ್ರಿಕೆಗಳ ವ್ಯವಸ್ಥಿತ ಮತ್ತು ವ್ಯಾಪಕ ಸೋರಿಕೆಯ ಸಾಕ್ಷ್ಯಾಧಾರ ಇಲ್ಲದೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಯನ್ನೇ ರದ್ದು ಪಡಿಸುವುದು ಸಮಸ್ಯೆಗೆ ಪರಿಹಾರವಲ್ಲ ಎಂದು ಮ್ಯಾಥ್ಯೂ ಅವರನ್ನು ಪ್ರತಿನಿಧಿಸಿದ ವಕೀಲರಾದ ಲಿಝ್ ಮ್ಯಾಥ್ಯೂ ಮತ್ತು ರಘೆಂತ್ ಬಸಂತ್ ವಾದಿಸಿದರು.  ‘೧೯೮೪ರಲ್ಲಿದಿ ಕರಾಟೆ ಕಿಡ್ ಚಿತ್ರದಲ್ಲಿ ಯುವ ವಿದ್ಯಾರ್ಥಿಯೊಬ್ಬನ ಶಿಕ್ಷಕಕೆಟ್ಟ ವಿದ್ಯಾರ್ಥಿ ಎಂಬುದು ಇಲ್ಲ, ಆದರೆ ಕೆಟ್ಟ ಶಿಕ್ಷಕ ಮಾತ್ರ ಇರುತ್ತಾನೆ ಎನ್ನುತ್ತಾನೆ ಎಂಬುದನ್ನು ನ್ಯಾಯಾಲಯದಲ್ಲಿ ಉಲ್ಲೇಖಿಸಿದ ವಕೀಲ ಮ್ಯಾಥ್ಯೂ ಶಿಕ್ಷಕ ಎಷ್ಟೇ ಕೆಟ್ಟವನಿರಲಿ, ಒಳ್ಳೆಯವನಿರಲಿ ಅಂತಿಮವಾಗಿ ತನ್ನ ಸಾಧನೆಯನ್ನು ತೋರುವ ಹೊಣೆಗಾರಿಕೆ ವಿದ್ಯಾರ್ಥಿಯ ಮೇಲೆಯೇ ಬೀಳುತ್ತದೆ ಎಂದು ಹೇಳಿದರು.  ‘ಒಂದು ಕೇಂದ್ರದಲ್ಲಿ ಘಟಿಸಿದ ಘಟನೆಯೊಂದಕ್ಕಾಗಿ, ವ್ಯಾಪಕವಾಗಿ ಪರೀಕ್ಷಾ ವ್ಯವಸ್ಥೆಯೇ ಕೆಟ್ಟದ್ದಕ್ಕೆ ಸಾಕ್ಷ್ಯಾಧಾರ ಇಲ್ಲದಿರುವಾಗ ಇಡೀ ವಿದ್ಯಾರ್ಥಿ ಸಮುದಾಯವನ್ನೇ ಶಿಕ್ಷಿಸುವುದು ನಿರಂಕುಶ ಮತ್ತು ಅಕ್ರಮ ಎಂದು ಅರ್ಜಿ ಪ್ರತಿಪಾದಿಸಿತು.  ಅರ್ಜಿಯನ್ನು  ಬೆಳಗ್ಗೆ ಸುಪ್ರೀಂಕೋರ್ಟಿನ ರಿಜಿಸ್ಟ್ರಿಯಲ್ಲಿ ದಾಖಲು ಮಾಡಲಾಯಿತು.  ತುರ್ತು ವಿಚಾರಣೆಗಾಗಿ ಅರ್ಜಿಯು ಮಾರ್ಚ್ 2ರ ಸೋಮವಾರ ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದ ಮುಂದೆ ಬರಲಿದೆ.

2018: ಮಾಸ್ಕೋ: ಇಂಗ್ಲೆಂಡ್ನಲ್ಲಿ ರಷ್ಯಾದ ಮಾಜಿ ಬೇಹುಗಾರ ಮತ್ತು ಅವರ ಪುತ್ರಿಗೆ ವಿಷವುಣಿಸಿದ ಘಟನೆಗೆ ಸಂಬಂಧಿಸಿದಂತೆ ರಷ್ಯಾ ಮತ್ತು ಬ್ರಿಟನ್ನಡುವಣ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿತು.  ಮಾಸ್ಕೋದಲ್ಲಿರುವ ಬ್ರಿಟಿಷ್ದೂತಾವಾಸದಿಂದ 50ಕ್ಕೂ ಹೆಚ್ಚು ರಾಜತಾಂತ್ರಿಕ ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ವಾಪಸ್ಕರೆಸಿಕೊಳ್ಳುವಂತೆ ಬ್ರಿಟನ್ಗೆ ರಷ್ಯಾ ತಾಕೀತು ಮಾಡಿತು.  ರಷ್ಯಾ ಈಗಾಗಲೇ 23 ಬ್ರಿಟಿಷ್ರಾಜತಾಂತ್ರಿಕ ಸಿಬ್ಬಂದಿಗಳನ್ನು ಗಡೀಪಾರು ಮಾಡಿತ್ತು. ರಷ್ಯಾದ ಮಾಜಿ ಬೇಹುಗಾರ ಸೆರ್ಗಿ ಸ್ಕ್ರಿಪಾಲ್ಮತ್ತು ಅವರ ಪುತ್ರಿ ಯೂಲಿಯಾಗೆ ವಿಷವುಣಿಸಿದ ಘಟನೆ ಬಳಿಕ ಎರಡೂ ದೇಶಗಳ ಬಾಂಧವ್ಯ ತೀರಾ ಹಳಸಿತ್ತು.  ಅವರಿಬ್ಬರ ಮೇಲಿನ ದಾಳಿಗೆ ರಷ್ಯಾವೇ ಹೊಣೆ ಎಂದು ಬ್ರಿಟನ್ದೂರಿದರೆ, ಬ್ರಿಟನ್ಹೊಣೆಯೆಂದು ರಷ್ಯಾ ಆರೋಪಿಸಿತ್ತು. ಎರಡನೇ ಜಾಗತಿಕ ಸಮರದ ವೇಳೆ ಐರೋಪ್ಯ ದೇಶದೊಳಕ್ಕೆ ಕಳ್ಳಸಾಗಣೆಯಾಗಿದ್ದ ರಷ್ಯಾ ನಿರ್ಮಿತ ಮಿಲಿಟರಿ ಗ್ರೇಡ್ರಾಸಾಯನಿಕ ಅಸ್ತ್ರವನ್ನು ಬಳಸಿ ಇಬ್ಬರ ಕೊಲೆಗೆ ಯತ್ನ ನಡೆದಿದೆ ಎಂದು ಬ್ರಿಟನ್ದೂಷಿಸಿತ್ತು.  ಆದರೆ ಇದು ಪೂರ್ವ-ಪಶ್ಚಿಮದ ಬಾಂಧವ್ಯಗಳನ್ನು ಹಾಳುಗೆಡವಿ ಮಾಸ್ಕೋವನ್ನು ಒಂಟಿಯಾಗಿಸುವ ಪಾಶ್ಚಾತ್ಯರ ಸಂಚು ಎಂದು ರಷ್ಯಾ ದೂರಿತು.  ರಷ್ಯಾದ ವಿದೇಶಾಂಗ ಸಚಿವಾಲಯ ಬ್ರಿಟಿಷ್ರಾಯಭಾರಿ ಲಾರಿ ಬ್ರಿಸ್ಟೋವ್ ಅವರನ್ನು ಕರೆಸಿಕೊಂಡು ಒಂದು ತಿಂಗಳೊಳಗೆ ದೂತಾವಾಸದ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವಂತೆ ಸೂಚಿಸಿತ್ತು. ಬ್ರಿಟನ್ಬೆಂಬಲಿಸಿರುವ ಇತರ ದೇಶಗಳ 23 ಮಂದಿ ರಾಯಭಾರ ಸಿಬ್ಬಂದಿಗಳನ್ನೂ ರಷ್ಯಾ ಉಚ್ಚಾಟಿಸಿತು.  ರಷ್ಯಾದ ಕ್ರಮ ವಿಷಾದನೀಯ ಎಂದು ಬ್ರಿಟನ್ಹೇಳಿತು.
2009: ನವದೆಹಲಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ 'ಪದ್ಮ ಪ್ರಶಸ್ತಿ' ಪುರಸ್ಕಾರ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು 2009ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು.

2009: ಗ್ರೀಸ್‌ನ ಮೆಸ್ಸಿನಿಕೊಸ್ ಗಲ್ಫ್‌ನಲ್ಲಿ 30 ಕಿ.ಮೀ ಈಜುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಮುಂಬೈನ ಸ್ವಪ್ನಾಲಿ ಯಾದವ್ ಅವರು ಈ ಸಾಧನೆ ಮಾಡಿದ ವಿಶ್ವದ ಕಿರಿಯ ಬಾಲಕಿ ಎಂಬ ಗೌರವಕ್ಕೆ ಪಾತ್ರರಾದರು.

2009: 1993 ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ವಿಧಿಸಿದ ಶಿಕ್ಷೆ ವಜಾಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ, ಬಾಲಿವುಡ್ ನಟ ಸಂಜಯ್ ದತ್ ಅವರು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡರು. ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸಿದ ಸಂಜಯ್, 'ಎಸ್‌ಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಾಗದಿದ್ದರೂ ಲಖನೌ ತೊರೆಯುವುದಿಲ್ಲ. ಇದು ನನ್ನ ತಂದೆಯ ಸ್ಥಳ. ನಾನು ಈ ಕ್ಷೇತ್ರಕ್ಕೆ ಋಣಿ. ಏನೇ ಆದರೂ ಇಲ್ಲಿಂದ ಕದಲುವುದಿಲ್ಲ' ಎಂದು ಪ್ರತಿಕ್ರಿಯಿಸಿದರು.

2009: ಭಾರತೀಯ ಮೂಲದ ಐಟಿ ಉದ್ಯೋಗಿಯೊಬ್ಬ ಮೂವರು ಮಕ್ಕಳು ಸೇರಿದಂತೆ ಕುಟುಂಬದ ಐದು ಮಂದಿಯನ್ನು ಗುಂಡಿಟ್ಟು ಕೊಂದು ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಅಮೆರಿಕದ ಸಾಂಟಾ ಕ್ಲಾರಾದಲ್ಲಿ ನಡೆಯಿತು. ದೇವರಾಜನ್ ಈ ಕೃತ್ಯ ನಡೆಸಿದ ವ್ಯಕ್ತಿ. ಅಮೆರಿಕದಲ್ಲಿ ಐಟಿ ಉದ್ಯೋಗಿಗಳಾಗಿದ್ದ ದೇವರಾಜನ್ ಮತ್ತು ಅಶೋಕನ್ ಈ ಇಬ್ಬರು ತಮಿಳುನಾಡಿನ ನಿಲಗಿರಿ ಜಿಲ್ಲೆಯ ಅಯ್ಯನ್‌ಕೊಲ್ಲೈ ಗ್ರಾಮದವರು. ಇವರು ಮಲಯಾಳಿ ಭಾಷಿಕರು. 'ನನ್ನ ಅಳಿಯ ದೇವರಾಜನ್ ಹಾಗೂ ನನ್ನ ಮಗ ಅಶೋಕನ್ ನಡುವೆ ಜಗಳ ನಡೆದಿತ್ತು. ಊಟದ ವೇಳೆ ದೇವರಾಜನ್ ಸಿಟ್ಟಿನಿಂದ, ಅಶೋಕನ್, ಸೊಸೆ ಸುಚಿತ್ರಾ, ಸುಚಿತ್ರಾ ಪುತ್ರಿ ನೇಹಾ, ನನ್ನ ಪುತ್ರಿ ಅಭಾ, ಅವರ ಮಕ್ಕಳಾದ ಅಖಿಲ್ ಮತ್ತು ಅಹಾನಾ ಅವರ ಮೇಲೆ ಗುಂಡು ಹಾರಿಸಿದ' ಎಂದು ದೇವರಾಜ್ ಅವರ ಮಾವ ನಿವೃತ್ತ ಶಾಲಾ ಶಿಕ್ಷಕ ಅಪ್ಪು ಮಾಸ್ತರ್ ಚೆನ್ನೈಯಲ್ಲಿ ತಿಳಿಸಿದರು.

2009: ವಿಶ್ವದ ಏಳು ಅಚ್ಚರಿಗಳಂತೆಯೇ ದೇಶದ ಏಳು ಅದ್ಭುತಗಳು ಪ್ರಕಟಗೊಂಡವು. ದೇಶದ ಏಳು ಅಚ್ಚರಿಗಳ ಆಯ್ಕೆ ಅಭಿಯಾನದಲ್ಲಿ ಅಮರ ಪ್ರೇಮ ಸ್ಮಾರಕ ತಾಜ್‌ಮಹಲ್‌ಗೆ ಅಗ್ರ ಸ್ಥಾನ! ನಂತರದ ಆರು ಸ್ಥಾನಗಳನ್ನು ಕೋನಾರ್ಕದ ಸೂರ್ಯದೇಗುಲ, ಮದುರೆ ಮೀನಾಕ್ಷಿ ದೇವಸ್ಥಾನ, ಖಜುರಾಹೋ, ಕೆಂಪು ಕೋಟೆ, ಜೈಸಲ್ಮೇರ್ ಅರಮನೆ, ನಲಂದಾ ವಿಶ್ವವಿದ್ಯಾಲಯ ಹಾಗೂ ಗುಜರಾತ್‌ನ ಕಛ್ ಜಿಲ್ಲೆಯ ದೇಶದ ಅತಿದೊಡ್ಡ ಪ್ರಾಚ್ಯವಸ್ತು ತಾಣ ಧೊಲವಿರಾ ಅಲಂಕರಿಸಿದವು. ದೇಶದ ವಾಸ್ತುಶಿಲ್ಪ ಪರಂಪರೆ ಗುರುತಿಸುವ ಉದ್ದೇಶದಿಂದ ಎನ್‌ಡಿಟಿವಿ ಸುದ್ದಿ ವಾಹಿನಿ ಈ ಅಭಿಯಾನ ನಡೆಸಿತ್ತು. ಆಯ್ಕೆ ಮಂಡಳಿಯಲ್ಲಿ ಹೋಟೆಲ್ ಉದ್ಯಮಿ ಶ್ರೀಜಿ ಅರವಿಂದ್ ಸಿಂಗ್ ಮೇವಾರ್, ಕಲಾವಿದರಾದ ಅಂಜೊಲಿ ಇಳಾ ಮೆನನ್ ಹಾಗೂ ಸರೋದ್ ಮಾಂತ್ರಿಕ ಅಮ್ಜದ್ ಅಲಿ ಖಾನ್ ಸೇರಿದಂತೆ 12 ಸದಸ್ಯರು ಇದ್ದರು. ದೇಶದಲ್ಲಿ ನೆಚ್ಚಿನ ಅಚ್ಚರಿಯ ತಾಣಗಳಿಗೆ ಮತ ಹಾಕುವಂತೆ ರೇಡಿಯೊ, ದೂರದರ್ಶನ, ಮುದ್ರಣ ಮಾಧ್ಯಮ ಹಾಗೂ ಇಂಟರ್‌ನೆಟ್ ಮೂಲಕ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿತ್ತು. ಬಾಲಿವುಡ್ ತಾರಾ ರಂಗಿನೊಂದಿಗೆ ಈದಿನ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಾರತದ ಏಳು ಅಚ್ಚರಿಗಳನ್ನು ಪ್ರಕಟಿಸಲಾಯಿತು. ಬಚ್ಚನ್ ಪರಿವಾರವೂ ಕಾರ್ಯಕ್ರಮಕ್ಕೆ ಆಗಮಿಸಿತ್ತು. ಅಲ್ಲದೇ ದಕ್ಷಿಣದ ಸೂಪರ್‌ಸ್ಟಾರ್ ಕಮಲ್ ಹಾಸನ್, ಕೊಳಲು ಮಾಂತ್ರಿಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಉದ್ಯಮಿ ರಜನ್ ನಂದಾ ಕೂಡ ಭಾಗವಹಿಸಿದ್ದರು.

2009: ಸಂಗೀತ ಆಲಿಸುವಿಕೆ ಮನುಷ್ಯನ ಒತ್ತಡವನ್ನು ಶಮನ ಮಾಡಬಲ್ಲ ಗುಣವಿರುವ ಹವ್ಯಾಸಗಳಲ್ಲೊಂದು. ಆದರೆ ಇತ್ತೀಚಿನ ಅಧ್ಯಯನವೊಂದು ಓದುವ ಹವ್ಯಾಸ ಜನರು ಅನುಭವಿಸುತ್ತಿರುವ ಮಾನಸಿಕ ಒತ್ತಡವನ್ನು ಪರಿಣಾಮಕಾರಿಯಾಗಿ ಹಾಗೂ ವೇಗವಾಗಿ ನಿವಾರಿಸುತ್ತದೆ ಎಂದು ಹೇಳಿತು. ಓದುವುದು ಮನಸನ್ನು ಹಗುರಗೊಳಿಸಲು ಇರುವ ಒಂದು ಉತ್ತಮ ಮಾರ್ಗ ಎಂಬುದನ್ನು ಸಂಶೋಧಕರು ಅಧ್ಯಯನದ ಮೂಲಕ ಪತ್ತೆಹಚ್ಚಿದ್ದಾರೆ. ಕೇವಲ ಆರು ನಿಮಿಷಗಳ ಓದು ನಮ್ಮ ಒತ್ತಡದ ಮೂರನೇ ಎರಡು ಭಾಗವನ್ನು ಕಡಿಮೆ ಮಾಡಬಹುದು ಎಂದು 'ದಿ ಡೈಲಿ ಟೆಲಿಗ್ರಾಫ್' ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿತು. ಮನುಷ್ಯನು ಓದಿನ ಮೇಲೆ ಗಮನ ಕೇಂದ್ರೀಕರಿಸಿದಾಗ ಅದು ಅವನ ಮನಸ್ಸನ್ನು ಸಾಹಿತ್ಯಿಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಇದರಿಂದಾಗಿ ಅವನ ಮಾನಸಿಕ ಒತ್ತಡಗಳೆಲ್ಲ ದೂರವಾಗಿ ಮನಸು ಹಗುರವಾಗುತ್ತದೆ ಎಂದು ಸಂಶೋಧಕರು ಹೇಳಿದರು.

2009: ಒಂದು ದಶಕಕ್ಕಿಂತಲೂ ಹೆಚ್ಚು ಕಾಲದ ಸತತ ಪರಿಶ್ರಮದ ಬಳಿಕ ಅಮೆರಿಕದ ಎಂಜಿನಿಯರುಗಳು 3.5 ಶತಕೋಟಿ ಡಾಲರ್ ವೆಚ್ಚದಲ್ಲಿ ವಿಶ್ವದ ಅತಿ ಶಕ್ತಿಯುತ ಲೇಸರ್ ಕಿರಣಗಳ ಅಭಿವೃದ್ಧಿ ಸಂಶೋಧನೆ ಪೂರ್ಣಗೊಳಿಸಿರುವುದಾಗಿ ವಾಷಿಂಗ್ಟನ್‌ನಲ್ಲಿ ಪ್ರಕಟಿಸಿದರು. ಒಂದು ಹೈಡ್ರೋಜನ್ ಬಾಂಬ್ ಮತ್ತು ಸೂರ್ಯನಲ್ಲಿ ಅಡಕವಾಗಿರುವ ಶಕ್ತಿಯಷ್ಟೇ ಪ್ರಮಾಣದಲ್ಲಿ ಶಕ್ತಿಯನ್ನು ಹೊಂದುವ ಸಾಮರ್ಥ್ಯವನ್ನು ಈ ಲೇಸರ್ ಕೂಡ ಹೊಂದಿದೆ. ಕ್ಯಾಲಿಫೋರ್ನಿಯಾದಲ್ಲಿರುವ ಲಾರೆನ್ಸ್ ಲಿವರ್‌ಮೋರ್ ರಾಷ್ಟ್ರೀಯ ಪ್ರಯೋಗಾಲಯದಲ್ಲಿನ ನ್ಯಾಷನಲ್ ಇಗ್ನಿಷನ್ ಫೆಸಿಲಿಟಿಗೆ (ಎನ್‌ಐಎಫ್)ಗೆ ಅಮೆರಿಕದ ಸಂಯುಕ್ತ ಇಂಧನ ಇಲಾಖೆ ಅಧಿಕೃತ ಪ್ರಮಾಣಪತ್ರ ನೀಡಿದೆ. ಸೂರ್ಯನ ಮಧ್ಯದಲ್ಲಿ ಸೃಷ್ಟಿಯಾಗುವ ಉಷ್ಣತೆ ಹಾಗೂ ಒತ್ತಡವನ್ನು ಈ ಲೇಸರ್ ಮೂಲಕ ಸೃಷ್ಟಿಸಬಹುದು ಎಂದು ನಂಬಿರುವುದಾಗಿ ವಿಜ್ಞಾನಿಗಳು ಹೇಳಿದರು. ಎನ್‌ಐಎಫ್ ಒಟ್ಟು 192 ಲೇಸರ್ ಬೀಮ್‌ಗಳನ್ನು ಒಳಗೊಂಡಿದೆ. ಈ ಲೇಸರ್‌ನ್ನು ಹೆಚ್ಚು ಶಕ್ತಿ ಹಾಗೂ ಹೆಚ್ಚು ಸಾಂದ್ರತೆಯ ಅವಶ್ಯಕತೆ ಇರುವ ಭೌತಶಾಸ್ತ್ರದ ಪ್ರಯೋಗಗಳಲ್ಲಿ ಬಳಸುವ ನಿರೀಕ್ಷೆ ವಿಜ್ಞಾನಿಗಳದು.

2008: ಜಾಗತಿಕ ಕ್ರೀಡಾ ಉತ್ಸವ ಒಲಿಂಪಿಕ್ ಕೂಟದ ಜ್ಯೋತಿಯ ಪಯಣಕ್ಕೆ ಅಧಿಕೃತ ಚಾಲನೆ ಲಭಿಸಿತು. ಚೀನಾದ ಅಧ್ಯಕ್ಷ ಹು ಜಿಂಟಾವೊ ಅವರು ಬೀಜಿಂಗಿನ ತಿಯಾನನ್ಮೆನ್ ಚೌಕದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜ್ಯೋತಿಯ ಜಾಗತಿಕ ರಿಲೇಗೆ ಚಾಲನೆ ನೀಡಿದರು. ಜಿಂಟಾವೊ ಅವರು ಅಡೆತಡೆ ಓಟದಲ್ಲಿ (ಹರ್ಡಲ್ಸ್) ಒಲಿಂಪಿಕ್ ಚಾಂಪಿಯನ್ ಎನಿಸಿರುವ ಚೀನಾದ ಅಥ್ಲೀಟ್ ಲಿಯು ಕ್ಸಿಯಾಂಗ್ ಅವರಿಗೆ ಜ್ಯೋತಿಯನ್ನು ಹಸ್ತಾಂತರಿಸಿದರು. ಇದರೊಂದಿಗೆ ಒಲಿಂಪಿಕ್ ಜ್ಯೋತಿಯ ವಿಶ್ವ ಪಯಣ ಆರಂಭವಾಯಿತು. ಒಲಿಂಪಿಕ್ನ ಸಂಪ್ರದಾಯದಂತೆ ಗ್ರೀಕಿನಲ್ಲಿ ಹಿಂದಿನ ವಾರ ಜ್ಯೋತಿಯನ್ನು ಬೆಳಗಿಸಲಾಗಿತ್ತು. ಅದನ್ನು ವಿಶೇಷ ವಿಮಾನದಲ್ಲಿ ಈದಿನ ಬೆಳಗ್ಗೆ ಚೀನಾಕ್ಕೆ ತರಲಾಯಿತು. ಸ್ಥಳೀಯ ಕಾಲಮಾನ ಬೆಳಗ್ಗೆ 9 ಕ್ಕೆ ಚೀನಾ ತಲುಪಿದ ಜ್ಯೋತಿಯನ್ನು ಬಳಿಕ ನಡೆದ ಸಮಾರಂಭದಲ್ಲಿ ಜಿಂಟಾವೊ ಮತ್ತೆ ಬೆಳಗಿಸಿದರು.

2008: ಏಪ್ರಿಲ್ ಒಂದರಿಂದ ಜಾರಿಗೆಯಾಗಬೇಕಿದ್ದ `ಮೌಲ್ಯಾಧಾರಿತ ತೆರಿಗೆ ಪದ್ಧತಿ'ಯನ್ನು ರಾಜ್ಯ ಸರ್ಕಾರ ಅನಿರ್ದಿಷ್ಟಾವಧಿಗೆ ಮುಂದೂಡಿತು. `ಸ್ವಯಂ ಘೋಷಿತ ತೆರಿಗೆ' ಪದ್ಧತಿಯ ಅನ್ವಯ ತೆರಿಗೆ ಪಾವತಿಸಲು ನಾಗರಿಕರಿಗೆ ಅವಕಾಶ ಕಲ್ಪಿಸಿತು. ಇದರಿಂದ ನಗರದ ಲಕ್ಷಾಂತರ ಮಂದಿ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ರಾತ್ರಿ ಮಹತ್ವದ ಸಭೆ ನಡೆಸಿದ ರಾಜ್ಯಪಾಲರು, ಚುನಾಯಿತ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಸಿವಿಎಸ್ ಪದ್ಧತಿ ಜಾರಿಯನ್ನು ಮುಂದೂಡಲು ನಿರ್ಧರಿಸಿದರು.

2008: `ಮಹದಾಯಿ ಯೋಜನೆಯ ವಿವಾದವನ್ನು ನೀವೇ ಬಗೆಹರಿಸಿ, ನ್ಯಾಯಮಂಡಳಿ ಬೇಡವೇ ಬೇಡ' ಎಂದು ಕರ್ನಾಟಕ ಸುಪ್ರೀಂಕೋರ್ಟಿಗೆ ಮನವಿ ಮಾಡಿತು. `ಕುಡಿಯುವ ನೀರಿಗಾಗಿ ಕೇವಲ ಏಳು ಟಿಎಂಸಿ ನೀರು ಬಳಸಿಕೊಳ್ಳುವ ಯೋಜನೆಯ ವಿವಾದದ ಇತ್ಯರ್ಥಕ್ಕಾಗಿ ನ್ಯಾಯಮಂಡಳಿ ಯಾಕೆ ಬೇಕು? ಇದರಿಂದ ಇನ್ನಷ್ಟು ಕಾಲಹರಣವೇ ಹೊರತು ಸಮಸ್ಯೆಗೆ ಪರಿಹಾರ ಸಿಗಲಾರದು' ಎಂದು ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ವಾದಿಸಿದರು. ಮಹದಾಯಿ ಖಟ್ಲೆಯಲ್ಲಿ ನಾರಿಮನ್ ಇದೇ ಮೊದಲ ಬಾರಿ ಕರ್ನಾಟಕವನ್ನು ಪ್ರತಿನಿಧಿಸಿದರು.

2008: ಹೊಗೇನಕಲ್ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಆಡಿದ ಪ್ರಚೋದನಾಕಾರಿ ಮಾತುಗಳಿಂದ ಕರ್ನಾಟಕ ಕೆರಳಿತು. ಕನ್ನಡ ಪರ ಸಂಘಟನೆಗಳ ಆಕ್ರೋಶ ಉಗ್ರ ಸ್ವರೂಪದ ಪ್ರತಿಭಟನೆಗಳ ಮೂಲಕ ಸಿಡಿಯಿತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೊದಲಾದ ಪಕ್ಷಗಳು ಕರುಣಾನಿಧಿ ಅವರ ಹೇಳಿಕೆಯನ್ನು ಒಕ್ಕೊರಲಿನಿಂದ ಖಂಡಿಸಿದವು. ತಮಿಳು ಚಲನಚಿತ್ರ ಪ್ರದರ್ಶನ ನಡೆಯುತ್ತಿದ್ದ ಬೆಂಗಳೂರಿನ ಚಿತ್ರಮಂದಿರಗಳ ಮೇಲೆ ದಾಳಿ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೋರಾಟದ ಬಿಸಿಯನ್ನು ಏರಿಸಿದರು.

2008: ಸೈಕಲ್ ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ಕಳ್ಳನೊಬ್ಬನನ್ನು ಊರವರೇ ಸೇರಿ ಕಲ್ಲು ಹೊಡೆದು ಕೊಂದ ಘಟನೆ ಗುಜರಾತಿನ ನರ್ಮದಾ ಜಿಲ್ಲೆಯ ಓಪ್ರಾ ಗ್ರಾಮದಲ್ಲಿ ನಡೆಯಿತು. ಸುಮಾರು 15ರಿಂದ 20 ಮಂದಿ ಗ್ರಾಮಸ್ಥರು ಆರೋಪಿ ಭಾರತ್ ತದ್ವಿ ಎಂಬಾತನನ್ನು ಹಿಡಿದು ಥಳಿಸುತ್ತಿದ್ದ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದರು ಹಾಗೂ ಆತನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತನಾದ.

2008: ಪ್ರಪಂಚದಲ್ಲಿ ಕ್ಯಾಥೋಲಿಕ್ ಕ್ರೈಸ್ತರಿಗಿಂತಲೂ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿದವು. ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿದ್ದ ಜನಾಂಗ ಎಂಬ ಖ್ಯಾತಿಯಿಂದ ಕ್ಯಾಥೋಲಿಕ್ ಕ್ರೈಸ್ತರು ಮೊದಲ ಬಾರಿಗೆ ಹಿಂದೆ ಸರಿದರು ಎಂದು ವ್ಯಾಟಿಕನ್ನಿನ ವರದಿಗಳು ತಿಳಿಸಿದವು. ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಶೇಕಡಾ 19.2ರಷ್ಟು ಪಾಲು ಹೊಂದಿದ್ದರೆ ಕ್ಯಾಥೋಲಿಕ್ ಕ್ರೈಸ್ತರು ಶೇ.17.4ರಷ್ಟು ಪ್ರಮಾಣದಲ್ಲಿ ಇದ್ದಾರೆ ಎಂದು ವರದಿ ಹೇಳಿತು. ಆದರೆ 2006ರ ಅಂಕಿ ಅಂಶಗಳ ಅನುಸಾರ ಕ್ರೈಸ್ತರ ಎಲ್ಲ ಪಂಗಡಗಳು ಅಂದರೆ, ಆರ್ಥೋಡಕ್ಸ್ ಚರ್ಚುಗಳು, ಆಂಗ್ಲಿಕನ್ನರು ಮತ್ತು ಪ್ರೊಟೆಸ್ಟಂಟ್ಸ್ ಪಂಗಡದವರು ಒಟ್ಟುಗೂಡಿದರೆ ಅವರ ಸಂಖ್ಯೆ ಶೇಕಡಾ 33ರಷ್ಟಾಗುತ್ತದೆ. ಮುಸ್ಲಿಂ ಪಂಗಡದಲ್ಲಿ ಜನನ ಪ್ರಮಾಣ ಏರುತ್ತಿರುವುದೇ ಇದಕ್ಕೆ ಕಾರಣ. ಇದು ಅಧಿಕೃತವಾದ ಸುದ್ದಿ ಎಂದು ವ್ಯಾಟಿಕನ್ನಿನ 2008ನೇ ವಾರ್ಷಿಕ ಪುಸ್ತಕದ ಅಂಕಿಅಂಶಗಳ ಸಂಗ್ರಹಕಾರ ಮಾನ್ ಸಿಗ್ನೋರ್ ವಿಟ್ಟೋರಿಯಾ ಫೋರ್ಮೆಂಟಿ ಹೇಳಿದರು.

2008: ರಾಷ್ಟ್ರಪತಿ ಆಡಳಿತದಲ್ಲಿ ಅಧ್ಯಕ್ಷ ಮುಷರಫ್ ಅವರ ಕೆಂಗಣ್ಣಿಗೆ ಗುರಿಯಾಗಿ ಗೃಹಬಂಧನಕ್ಕೆ ಒಳಗಾಗಿ ಬಿಡುಗಡೆಗೊಂಡ ಸುಪ್ರಿಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಇಫ್ತಿಕರ್ ಚೌಧರಿ ಅವರಿಗೆ ಅವರ ಸ್ವಗ್ರಾಮ ಕ್ವೆಟ್ಟಾದಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಯಿತು. ಐದು ತಿಂಗಳಿನಿಂದ ಗೃಹ ಬಂಧನದಲ್ಲಿದ್ದ ಇಫ್ತಿಕರ್ ಹಾಗೂ ಅವರ ಒಂಬತ್ತು ಜನ ಸಹೋದ್ಯೋಗಿಗಳನ್ನು ಹೊಸ ಪ್ರಧಾನಿ ಜಿಲಾನಿ ಅವರ ಆದೇಶದ ಮೇರೆಗೆ ಹಿಂದಿನ ವಾರ ಬಿಡುಗಡೆಗೊಳಿಸಲಾಗಿತ್ತು.

2008: ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಸಹೋದರ ಶಹಬಾಜ್ ಷರೀಫ್ ಅವರನ್ನು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದರು.

2008: ಪಾಕಿಸ್ಥಾನ ಸಚಿವ ಸಂಪುಟಕ್ಕೆ ಸೇರ್ಪಡೆಯಾದ 24 ಜನ ಸದಸ್ಯರಿಗೆ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ಯುಸೂಫ್ ರಝಾ ಜಿಲಾನಿ ಸಮಾರಂಭದಲ್ಲಿ ಪಾಲ್ಗೊಂಡ್ದಿದರು. ಪ್ರಮುಖ ಖಾತೆಗಳು ಪಾಕಿಸ್ಥಾನ ಪೀಪಲ್ಸ್ ಪಕ್ಷದ ಪಾಲಾದವು. ಅಧ್ಯಕ್ಷ ಮುಷರಫ್ ಅವರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಿಪಿಪಿಯ 11 ಸದಸ್ಯರು ಹಾಗೂ ಪಿಎಂಎಲ್-ಎನ್ ಪಕ್ಷದ 9 ಸದಸ್ಯರು, ಅವಾಮಿ ನ್ಯಾಷನಲ್ ಪಕ್ಷದ ಇಬ್ಬರು ಹಾಗೂ ಜಮಾಯಿತ್ ಉಲೆಮಾ-ಎ-ಇಸ್ಲಾಂ ಮತ್ತು ಬುಡಕಟ್ಟು ಪ್ರದೇಶದ ತಲಾ ಒಬ್ಬೊಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

2008: ಉತ್ತರ ಅಮೆರಿಕದಲ್ಲಿರುವ ಭಾರತೀಯ ಮತ್ತು ಇತರ ಏಷ್ಯಾ ಮೂಲದವರ ವಾರಪತ್ರಿಕೆ ವತಿಯಿಂದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರಿಗೆ `2007ರ ವರ್ಷದ ವ್ಯಕ್ತಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಲಾಂ ಬಾಂಬೆ, ಮಿಸ್ಸಿಸಿಪ್ಪಿ ಮಸಾಲ ಹಾಗೂ ಮಾನ್ಸೂನ್ ವೆಡ್ಡಿಂಗ್ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದ ಮೀರಾ ಅವರು ಕಳೆದ ಹಲವು ವರ್ಷಗಳಿಂದ ಚಲನಚಿತ್ರ ಕ್ಷೇತ್ರಕ್ಕೆ (ಬಾಲಿವುಡ್ನಿಂದ ಹಾಲಿವುಡ್ ತನಕ) ಸಲ್ಲಿಸಿದ ಸೇವೆ ಗುರುತಿಸಿ ಅನಿವಾಸಿ ಏಷ್ಯನ್ನರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ನೀಡಲಾಯಿತು. ಹಿಂದಿನ ವರ್ಷದ ಪ್ರಶಸ್ತಿ ವಿಜೇತೆ ಪೆಪ್ಸಿಕೋ ಕಂಪೆನಿ ಅಧ್ಯಕ್ಷೆ ಮತ್ತು ಸಿಇಓ ಇಂದ್ರಾ ನೂಯಿ ಅವರು ಮೀರಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

2008: ಬಾಗ್ದಾದ್ ನಗರದ ಮೇಲೆ ಅಮೆರಿಕ ವಾಯು ಸೇನೆ ನಡೆಸಿದ ದಾಳಿಯಲ್ಲಿ 41 ಮಂದಿ ಹತರಾದರು.

2008: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿನ ಭೂ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ನಟ ಅಮಿತಾಬ್ ಬಚ್ಚನ್ ವಿರುದ್ಧ ತನಿಖೆಗೆ ಆದೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಭೂಮಿ ಖರೀದಿಗೆ ಸಂಬಂಧಿಸಿದಂತೆ ಬಚ್ಚನ್ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್, ಸಿವಿಲ್ ಅಥವಾ ಕಂದಾಯ ಪ್ರಕರಣಗಳನ್ನು ಜರುಗಿಸಲಾಗದು ಎಂದು ಹೇಳಿದ ಅಲಹಾಬಾದ್ ಹೈಕೋರ್ಟಿನ ತೀರ್ಪು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಈ ಅರ್ಜಿ ಸಲ್ಲಿಸಿತ್ತು. 2007ರ ಡಿಸೆಂಬರ್ 11ರಂದು ಈ ತೀರ್ಪು ನೀಡಿದ್ದ ಹೈಕೋರ್ಟ್, ಬಚ್ಚನ್ ಅವರು ತಾವಾಗಿ ಯಾವುದೇ ವಂಚನೆ ಮಾಡಿಲ್ಲ ಅಥವಾ ಕಂದಾಯ ದಾಖಲೆಗಳನ್ನು ತಿದ್ದಿಲ್ಲ ಎಂದು ಹೇಳಿತ್ತು. ಬಾರಾಬಂಕಿ ಜಿಲ್ಲೆಯ ದೌಲತ್ ಪುರದಲ್ಲಿ ತಮ್ಮ ಹೆಸರಿಗೆ ನಿಗದಿಯಾದ ಭೂಮಿಯ ಹಂಚಿಕೆಯನ್ನು ರದ್ದುಪಡಿಸಿ ಫೈಜಾಬಾದಿನ ಹೆಚ್ಚುವರಿ ಆಯುಕ್ತರು ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ ಬಚ್ಚನ್ ಅವರು ಹೈಕೋರ್ಟಿನ ಮೊರೆ ಹೋಗಿದ್ದರು.

2008: ಬೆಂಗಳೂರು ನಗರದ ಆರ್. ವಿ. ಎಂಜಿನಿಯರಿಂಗ್ ಕಾಲೇಜಿನ `ಪ್ರಾಜೆಕ್ಟ್ ವ್ಯೋಮಾ' ತಂಡ ನಿರ್ಮಿಸಿದ ಮಾನವ ರಹಿತ ರಿಮೋಟ್ ಕಂಟ್ರೋಲ್ ಸರಕು ಸಾಗಣೆ ವಿಮಾನವನ್ನು ನಗರದಲ್ಲಿ ನಡೆದ ಸಮಾರಂಭದಲ್ಲಿ ಅನಾವರಣ ಗೊಳಿಸಲಾಯಿತು. ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಿಭಾಗದ ಆರು ಮಂದಿ ವಿದ್ಯಾರ್ಥಿಗಳಾದ ಹರ್ಷವರ್ಧನ, ಧೀರಜ್ ವಿಶ್ವನಾಥ್, ಬಿ.ಎಲ್. ನವೀನ್, ಬೃಂದಾ ಮೆಹ್ತಾ, ಡೆಬೊಲಿನಾ ಸೇನ್, ಆನಂದ ಹೊಳಲಿ ಅವರು ತಾವು ಅವಿಷ್ಕರಿಸಿದ ವಿಮಾನವನ್ನು ಪ್ರದರ್ಶಿಸಿದರು.

2008: ಬೆಂಗಳೂರಿನ `ಪರಿಷ್ಕೃತ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)- 2015'ರ ರದ್ದತಿ ಕೋರಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿತು. ಈ ಸಂಬಂಧ, ಸರ್ಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಪಾಲಿಕೆ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿ ಎಂ ಆರ್ ಡಿ ಎ) ಸೇರಿದಂತೆ ಇತರ ಪ್ರತಿವಾದಿಗಳಿಗೆ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ರವಿ ಮಳೀಮಠ ಅವರನ್ನು ಒಳಗೊಂಡ ವಿಭಾಗೀಯ ಪೀಠವು ನೋಟಿಸ್ ಜಾರಿಗೆ ಆದೇಶಿಸಿತು. ಈ ಯೋಜನೆಯ ರದ್ದತಿ ಕೋರಿ ಬೆಂಗಳೂರುನಗರದ ಸಿಟಿಜನ್ಸ್ ಏ(ಆ)ಕ್ಷನ್ ಫೋರಂ, ಸದಾಶಿವನಗರ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ಅನೇಕ ಮಂದಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಬಿ ಎಂ ಆರ್ ಡಿ ಎ ರೂಪಿಸಿದ್ದ ನಿಯಮಕ್ಕೆ ವ್ಯತಿರಿಕ್ತವಾಗಿ ಬಿಡಿಎ ಮನಸೋಇಚ್ಛೆ 2007ರ ಜೂನ್ 25ರಂದು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅರ್ಜಿದಾರರು ದೂರಿದ್ದರು. 1995ರಲ್ಲಿ ಬೆಂಗಳೂರು ನಗರದಲ್ಲಿ ಹಸಿರು ವಲಯವು ಶೇ 56ರಷ್ಟಿತ್ತು. ಆದರೆ ಈ ಯೋಜನೆಯಿಂದಾಗಿ ಹಸಿರು ವಲಯ ಶೇ 35ಕ್ಕೆ ಇಳಿದಿದೆ. ಅಷ್ಟೇ ಅಲ್ಲದೆ ಗಗನಚುಂಬಿ ಕಟ್ಟಡಗಳಿಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ನಗರದಲ್ಲಿ ಜನಸಾಂದ್ರತೆ ಹೆಚ್ಚಾಗುವ ಸಂಭವವಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಈ ಮೊದಲು ವಾಣಿಜ್ಯ ಹಾಗೂ ವಸತಿ ಸಂಕೀರ್ಣಕ್ಕೆ ಭಿನ್ನವಾದ ಸ್ಥಳವನ್ನು ಗುರುತು ಮಾಡಲಾಗಿತ್ತು. ಆದರೆ ಈಗ ಎಲ್ಲವನ್ನೂ ಮಿಶ್ರ ಮಾಡಲಾಗಿದೆ. ಈ ರೀತಿ ಒಟ್ಟಿಗೆ ಎಲ್ಲ ಸಂಕೀರ್ಣಗಳಿಗೆ ಅನುಮತಿ ನೀಡಿದರೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಜಲಮಂಡಳಿಯ ತಜ್ಞರು ವರದಿ ನೀಡಿದ್ದಾರೆ. ಆದರೆ ಇದನ್ನು ಕೂಡ ಬಿಡಿಎ ಕಡೆಗಣಿಸಿದೆ ಎಂಬುದು ಅರ್ಜಿದಾರರ ದೂರು. ಹೀಗೆ ತನ್ನ ಕಾರ್ಯವ್ಯಾಪ್ತಿ ಮೀರಿ ಬಿಡಿಎ ಜಾರಿ ಮಾಡಿದ ಯೋಜನೆಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

2008: ಪ್ರಿಯಂವದಾ ಅವರ ಇಂಗಿತದಂತೆ 1999ರಲ್ಲಿ ಬರೆದಿದ್ದ ಉಯಿಲು ಆಕ್ಷೇಪಿಸುವ ಬಿರ್ಲಾ ಕುಟುಂಬದ ಹಕ್ಕು ನಿರಾಕರಿಸಿ, ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ದಿವಂಗತ ಪ್ರಿಯಂವದಾ ಬಿರ್ಲಾ ಅವರು ಬಿಟ್ಟು ಹೋದ ರೂ 5000 ಕೋಟಿ ಸ್ಥಿರಾಸ್ತಿ ಮೇಲೆ ಒಡೆತನ ಸಾಧಿಸುವ ಬಿರ್ಲಾ ಕುಟುಂಬದ ಯತ್ನಕ್ಕೆ ಇದರಿಂದ ಇನ್ನೊಂದು ಹಿನ್ನಡೆ ಉಂಟಾಯಿತು. ಪ್ರಿಯಂವದಾ ಅವರ ಇಂಗಿತದಂತೆ 1999ರಲ್ಲಿ ಬರೆದಿದ್ದ ಉಯಿಲು ಆಕ್ಷೇಪಿಸಿದ ಬಿರ್ಲಾ ಕುಟುಂಬದ ಹಕ್ಕು ನಿರಾಕರಿಸಿ, ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಈ ಮೂಲಕ ಬಿರ್ಲಾ ಕುಟುಂಬದ ಮೂರು ಅಹವಾಲು ತಳ್ಳಿ ಹಾಕಿತು. ಎಂ. ಪಿ. ಬಿರ್ಲಾ ಮತ್ತು ಅವರ ಪತ್ನಿ ಪ್ರಿಯಂವದಾ ಬಿರ್ಲಾ ತಮ್ಮ ಸಂಪತ್ತನ್ನು ಧರ್ಮಾರ್ಥ ಉದ್ದೇಶಕ್ಕೆ ಬಿಟ್ಟುಕೊಟ್ಟಿದ್ದರು. ಪತಿಯ ಮರಣಾನಂತರ, ಪ್ರಿಯಂವದಾ ಅವರು 1999ರಲ್ಲಿ ತಮ್ಮ ರೂ 5000 ಕೋಟಿಗಳ ಸ್ಥಿರಾಸ್ತಿಯನ್ನು ತಮ್ಮ ಚಾರ್ಟರ್ಡ್ ಅಕೌಂಟಂಟ್ ಆರ್. ಎಸ್. ಲೋಧಾ ಅವರಿಗೆ ವರ್ಗಾಯಿಸಿದ್ದರು. ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಮೇಲ್ಮನವಿಗಳನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಸ್. ಬಿ. ಸಿನ್ಹಾ ನೇತೃತ್ವದ ಪೀಠವು ಈ ತೀರ್ಪು ನೀಡಿತು. ಕೆ. ಕೆ. ಬಿರ್ಲಾ, ಬಿ.ಕೆ. ಬಿರ್ಲಾ ಮತ್ತು ಯಶೋವರ್ಧನ್ ಬಿರ್ಲಾ ಕುಟುಂಬದ ಸದಸ್ಯರಿಗೆ ತಲಾ ರೂ 2.5 ಲಕ್ಷದಂತೆ ರೂ 10 ಲಕ್ಷ ದಂಡ ವಿಧಿಸಲಾಯಿತು.

2008: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಚೆನ್ನೈಯಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ವೀರೇಂದ್ರ ಸೆಹ್ವಾಗ್ ಅವರು ಭಾರತದ ನಂಬರ್ ಒನ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈದಿನ ಬಿಡುಗಡೆಗೊಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ರಾಂಕಿಂಗ್ ಪಟ್ಟಿಯಲ್ಲಿ ದೆಹಲಿಯ `ಡ್ಯಾಶಿಂಗ್' ಬ್ಯಾಟ್ಸ್ಮನ್ 12ನೇ ಸ್ಥಾನ ಪಡೆದರು. ಚೆನ್ನೈ ಪಂದ್ಯದಲ್ಲಿ 278 ಎಸೆತಗಳಲ್ಲಿ ತ್ರಿಶತಕ ಗಳಿಸಿ ವಿಶ್ವದಾಖಲೆ ನಿರ್ಮಿಸಿದ `ವೀರೂ' ಅವರ ರೇಟಿಂಗ್ ಪಾಯಿಂಟ್ ಶೇ 17 ರಷ್ಟು ಏರಿಕೆ ಕಂಡಿತು. ಅವರು ಈ ಹಿಂದೆ 25ನೇ ಸ್ಥಾನದಲ್ಲಿದ್ದರು.

2007: ಕರ್ನಾಟಕ ಸರ್ಕಾರದ ಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಚಾವ್ಲಾ ಮತ್ತು ಕೇಂದ್ರ ಸಚಿವಾಲಯದ ಕಾರ್ಯದರ್ಶಿ ಪಿ.ಎಸ್. ಪಾಂಡೆ ಅವರನ್ನು ಸಾರ್ವಜನಿಕ ಆಡಳಿತ ಸೇವೆಗೆ ನೀಡಲಾಗುವ 2005-06 ಸಾಲಿನ ಪ್ರಧಾನ ಮಂತ್ರಿ ಅವರ ಶ್ರೇಷ್ಠತೆಯ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಸುಗಮ ಸಂಗೀತ ಮತ್ತು ನೃತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಎಚ್. ಆರ್. ಲೀಲಾವತಿ ಅವರ ಪತಿ, ಸಂಗೀತ ಕಲಾವಿದ ಎಸ್. ಜಿ. ರಘುರಾಂ (76) ಮೈಸೂರಿನಲ್ಲಿ ನಿಧನರಾದರು. 1983ರಲ್ಲಿ ಅಮೆರಿಕದಲ್ಲಿ ನಡೆದ ಪ್ರಥಮ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾವಗೀತೆ ಹಾಡಿದ ಮೊದಲ ಕನ್ನಡಿಗರು ಎಂಬ ಕೀರ್ತಿಗೆ ರಘುರಾಂ ಭಾಜನರಾಗಿದ್ದರು. 1007ರಲ್ಲಿಸಂಗೀತ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಲಭಿಸಿತ್ತು.

2006: ಬೆಂಗಳೂರು ಗಾಂಧಿ ನಗರದ ಲಕ್ಷ್ಮೀಪುರದ ಕೊಳೆಗೇರಿಯಲ್ಲಿ 80 ವರ್ಷದ ವೃದ್ಧೆ, 6 ವರ್ಷದ ಬಾಲಕಿ ಮತ್ತು 10 ವರ್ಷದ ಬಾಲಕ ಸೇರಿದಂತೆ 16 ಮಂದಿಗೆ ಹುಚ್ಚುನಾಯಿಯೊಂದು ಕಚ್ಚಿತು.

2006: ವೈಯಕ್ತಿಕ ವೈಷಮ್ಯದಿಂದ ಒಂದೇ ಕುಟುಂಬದ 10 ಮಂದಿಯನ್ನು ಸಜೀವ ದಹಿಸಿದ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ವಿಜಾಪುರ ಜಿಲ್ಲೆ ಇಂಡಿ ತಾಲ್ಲೂಕಿನ ಬಾರದೋಳ ಗ್ರಾಮದ 10 ಮಹಿಳೆಯರು ಸೇರಿ 25 ಮಂದಿಗೆ ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆ ಮತ್ತು ತಲಾ 10 ಸಾವಿರ ರೂಪಾಯಿಗಳ ದಂಡ ವಿಧಿಸಿತು. ವಿಜಾಪುರ ಸೆಷನ್ಸ್ ನ್ಯಾಯಾಲಯದ ಆದೇಶ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಚಿದಾನಂದ ಉಲ್ಲಾಳ ಮತ್ತು, ಜಗನ್ನಾಥ ಅವರ ವಿಭಾಗೀಯ ಪೀಠ ಪುರಸ್ಕರಿಸಿತು.

2006: ಮೆಟ್ರೊ ರೈಲು ಮತ್ತು ನೀರು ಪೂರೈಕೆ ಹಾಗೂ ಒಳಚರಂಡಿ ನಿರ್ಮಾಣದ ಬೆಂಗಳೂರಿನ ಎರಡು ಯೋಜನೆಗಳಿಗೆ ಒಟ್ಟು 2777 ಕೋಟಿ ರೂಪಾಯಿ ಸಾಲ ನೀಡಲು ಜಪಾನ್ ಸರ್ಕಾರ ಒಪ್ಪಿಗೆ ನೀಡಿತು. ಯೋಜನೆ ಅನುಷ್ಠಾನಕ್ಕೆ ಇನ್ನೊಂದು ಅಡ್ಡಿ ನಿವಾರಣೆ ಆಯಿತು.

2001: ಇಂದೋರಿನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಮೂರನೆಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 34ನೇ ರನ್ ಗಳಿಕೆಯೊಂದಿಗೆ ಸಚಿನ್ ತೆಂಡೂಲ್ಕರ್ ಅವರು ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ 10,000 ರನ್ನುಗಳ ಸಾಧನೆ ಮಾಡಿದ ಪ್ರಥಮ ಕ್ರಿಕೆಟ್ ಆಟಗಾರ ಎನಿಸಿದರು. ಇದು ಅವರ 266ನೇ ಪಂದ್ಯ.

2001: ನಾಲ್ಕು ಸಲಿಂಗ ಜೋಡಿಗಳು (ಮೂರು ಪುರುಷ ಹಾಗೂ ಒಂದು ಮಹಿಳಾ) ಆಮ್ಸ್ಟರ್ಡ್ಯಾಮ್ನ ಸಿಟಿ ಹಾಲ್ನಲ್ಲಿ ಮದುವೆ ಉಂಗುರ ವಿನಿಮಯ ಮಾಡಿಕೊಂಡವು. ರಾಷ್ಟವೊಂದರಿಂದ ಮಾನ್ಯತೆ ಪಡೆದ ಮೊತ್ತ ಮೊದಲನೆಯ ಸಲಿಂಗ ವಿವಾಹ ಸಮಾರಂಭ ಇದಾಯಿತು.

1981: ಭಾರತೀಯ ಸಂಜಾತ ಅಮೆರಿಕನ್ ವಿಜ್ಞಾನಿ ಆನಂದ ಚಕ್ರವರ್ತಿ ಅವರು ನೂತನ ಏಕಕೋಶ ಜೀವಿ ಸೃಷ್ಟಿಗಾಗಿ ಪೇಟೆಂಟ್ ಪಡೆದರು. ಒಂದು ಜೀವಂತ ಕಣಕ್ಕೆ ಸಿಕ್ಕಿದ ಮೊದಲ ಪೇಟೆಂಟ್ ಇದು. ಈ ಬ್ಯಾಕ್ಟೀರಿಯಾವು ಕಚ್ಚಾ ತೈಲವನ್ನು ವಿಭಜಿಸುವ ಸಾಮರ್ಥ್ಯ ಹೊಂದಿದೆ.

1955: ಕಲಾವಿದ ರಂಗರಾಜು ಸೆ.ನಾ. ಜನನ.

1954: ಕರ್ನಾಟಕ ಸಂಗೀತ ಕಲಾವಿದೆ ಕದಳಿ ಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಸರ್ವ ಮಂಗಳಾ ಶಂಕರ್ ಅವರು ಎಸ್. ಸಿ. ರಾಜಶೇಖರ್- ಪಾರ್ವತಮ್ಮ ದಂಪತಿಯ ಮಗಳಾಗಿ ಶ್ರೀರಂಗಪಟ್ಟಣದಲ್ಲಿ ಜನಿಸಿದರು.

1942: ಕಲಾವಿದ ಅನಂತ ತೇರದಾಳ ಜನನ.

1901: ಆಸ್ಟ್ರೊ-ಹಂಗೆರಿ ಸಾಮ್ರಾಜ್ಯದ ಕಾನ್ಸುಲ್ ಜನರಲ್ ಎಮಿಲ್ ಜೆಲಿನಿಕ್ಗಾಗಿ ಗೋಟ್ಲೀಬ್ ಡೈಮ್ಲರ್ ಹೊಚ್ಚ ಹೊಸ ಮಾದರಿಯ ಕಾರನ್ನು ನಿರ್ಮಿಸಿದ. ಜೆಲಿನಿಕ್ ಅದಕ್ಕೆ ತನ್ನ ಪುತ್ರಿ `ಮರ್ಸಿಡಿಸ್' ಹೆಸರನ್ನೇ ಇರಿಸಿದ. ಮರ್ಸಿಡಿಸ್ ಕಾರುಗಳ ಆರಂಭ ಆದದ್ದು ಹೀಗೆ.

1889: ಪ್ಯಾರಿಸ್ಸಿನಲ್ಲಿ ಐಫೆಲ್ ಗೋಪುರವನ್ನು ಉದ್ಘಾಟಿಸಲಾಯಿತು. ಗೋಪುರದ ವಿನ್ಯಾಸಕಾರ ಗಸ್ಟಾವ್ ಐಫೆಲ್ ಗೋಪುರದ ಶಿಖರದಲ್ಲಿ ಫ್ರೆಂಚ್ ಧ್ವಜವನ್ನು ಅರಳಿಸಿದ. ಈ ಗೋಪುರ ನಿರ್ಮಾಣಕ್ಕೆ 2 ವರ್ಷ, 2 ತಿಂಗಳು, 2 ದಿನಗಳು ಬೇಕಾದವು.

1878: ಜಾನ್ ಆರ್ಥರ್ `ಜಾಕ್' ಜಾನ್ಸನ್ ಜನ್ಮದಿನ. ಜಾಗತಿಕ ಹೆವಿ ವೈಟ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ್ನು ಪಡೆದುಕೊಂಡ ಪ್ರಪ್ರಥಮ ಕರಿಯ ವ್ಯಕ್ತಿ ಈತ.

No comments:

Post a Comment