ನಾನು ಮೆಚ್ಚಿದ ವಾಟ್ಸಪ್

Monday, April 9, 2018

ಇಂದಿನ ಇತಿಹಾಸ History Today ಏಪ್ರಿಲ್ 08

ಇಂದಿನ ಇತಿಹಾಸ History Today ಏಪ್ರಿಲ್ 08

2018: ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ):  ಮಾನಿಕಾ ಬಾತ್ರ ಅವರ ಸ್ಫೂರ್ತಿಯುತ ಆಟದೊಂದಿಗೆ ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡವು ಗೋಲ್ಡ್ ಕೋಸ್ಟ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಾರಿತ್ರಿಕ ಸ್ವರ್ಣ ಪದಕವನ್ನು ತಂದುಕೊಟ್ಟಿತು. ಇದರೊಂದಿಗೆ ಪ್ರತಿಷ್ಠಿತ ೨೦೧೮ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಏಳನೇ ಚಿನ್ನದ ಪದಕ ಗೆದ್ದಿತು. ಮಹಿಳೆಯರ ಟೇಬಲ್ ಟೆನಿಸ್ ತಂಡ ವಿಭಾಗದಲ್ಲಿ ಭಾರತೀಯ ಮಹಿಳಾ ತಂಡವು ಫೈನಲ್ ಮುಖಾಮುಖಿಯಲ್ಲಿ ಬಾರಿ ಸ್ವರ್ಣ ಗೆದ್ದಿದ್ದ ಸಿಂಗಾಪುರ ವಿರುದ್ಧ ಭಾರತ -೧ರ ಅಂತರದ ಭರ್ಜರಿ ಗೆಲುವು ದಾಖಲಿಸಿತು.  ಭಾರತದ ಪರ ಮಾನಿಕಾ ಬಾತ್ರಾ, ಮಧುರಿಕಾ ಪಾಟ್ಕರ್, ಮೌಮಾ ದಾಸ್ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ೨೦೧೦ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನಿಸ್ ವಿಭಾಗದಲ್ಲಿ ಪದಾರ್ಪಣೆಗೈದಿರುವ ಭಾರತ ಇದು ಎರಡನೇ ಬಾರಿಗೆ ಫೈನಲ್ಗೇರಿದ ಸಾಧನೆ ಮಾಡಿತ್ತು.  ವಿಶ್ವ ನಂ. ಶ್ರೇಯಾಂಕದ ಟಿಯಾನ್ವೀ ಫೆಂಗ್ ವಿರುದ್ಧ ೧೧-, -೧೧, -೧೧, ೧೧-, ೧೧-೭ರ ಅಂತರದ ಕಠಿಣ ಗೆಲುವು ದಾಖಲಿಸಿದ ಮಾನಿಕಾ ಬಾತ್ರಾ ಭಾರತಕ್ಕೆ - ಅಂತರದ ಮುನ್ನಡೆ ಒದಗಿಸಿಕೊಟ್ಟರು. ಬಳಿಕ ಮಧುರಿಕಾ ಪಾಟ್ಕರ್ ವಿರುದ್ಧ ೧೩-೧೧, ೧೧-, ೧೧-೬ರ ಅಂತರದಲ್ಲಿ ಗೆಲುವು ದಾಖಲಿಸಿದ ಸಿಂಗಾಪುರದ ಮೆಂಗ್ಯು ಯು ಸಮಬಲ ದಾಖಲಿಸಿದರು.  ಆಮೇಲೆ ಡಬಲ್ಸ್ನಲ್ಲಿ ಮೌಮಾ ದಾಸ್ ಮತ್ತು ಮಧುರಿಕಾ ಪಾಟ್ಕರ್ ಅವರು ಯಿಹಾನ್ ಝೋ ಮತ್ತು ಮೆಂಗ್ಯು ಯು ವಿರುದ್ಧ ೧೧-, ೧೧-, -೧೧, ೧೧-೭ರ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಪದಕದ ನಿರೀಕ್ಷೆ ಮೂಡಿಸಿದರು. ಮಾನಿಕಾ ತನ್ನ ಎರಡನೇ ಪಂದ್ಯದಲ್ಲಿ ಯಿಹಾನ್ ಝೋ ವಿರುದ್ಧ ೧೧-, ೧೧-,೧೧-೭ರ ಅಂತರದ ಗೆಲುವು ದಾಖಲಿಸುವ ಮೂಲಕ ಭಾರತಕ್ಕೆ ಚಿನ್ನದ ಪದಕ ಒದಗಿಸಿಕೊಡುವಲ್ಲಿ ನೆರವಾದರು.

2018: ಇಸ್ಲಾಮಾಬಾದ್:  ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಸಂಚುಕೋರ ಹಫೀಜ್ ಸಯೀದ್ ನೇತೃತ್ವದ ಜಮಾತ್ -ಉದ್-ದವಾ ಮತ್ತು ಇತರ ಭಯೋತ್ಪಾದಕ ಗುಂಪುಗಳು ಹಾಗೂ  ಒಳಾಡಳಿತ ಸಚಿವಾಲಯದ ನಿಗಾ ಪಟ್ಟಿಯಲ್ಲಿನ ವ್ಯಕ್ತಿಗಳ ವಿರುದ್ಧ ಶಾಶ್ವತ ನಿಷೇಧ ವಿಧಿಸುವ ಬಗ್ಗೆ ಪಾಕಿಸ್ತಾನ ಸರ್ಕಾರ ಚಿಂತಿಸುತ್ತಿದೆ ಎಂದು ವರದಿಗಳು ತಿಳಿಸಿದವು.   ನಿಷೇಧಿತ ಸಂಘಟನೆಗಳು ಮತ್ತು ಒಳಾಡಳಿತ ಸಚಿವಾಲಯದ ನಿಗಾ ಪಟ್ಟಿಯಲ್ಲಿ ಈಗಾಗಲೇ ಇರುವ ವ್ಯಕ್ತಿಗಳನ್ನು ಕಾಯಂ ನಿಷೇಧಕ್ಕೆ ಒಳಪಡಿಸುವ ಅಧ್ಯಕ್ಷೀಯ ಆದೇಶದ (ಸುಗ್ರೀವಾಜ್ಞೆ) ಸ್ಥಾನದಲ್ಲಿ ಮಸೂದೆಯೊಂದನ್ನು ತರಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿದವು. ಕಾನೂನು ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಬಗ್ಗೆ ವರದಿ ಮಾಡಿರುವ  ಡಾನ್ ೧೯೯೭ರ ಭಯೋತ್ಪಾದನೆ ನಿಗ್ರ ಕಾಯ್ದೆಗೆ (ಎಟಿಎ) ತಿದ್ದುಪಡಿ ಮಾಡುವ ಕರಡು ಮಸೂದೆಯನ್ನು ಸೋಮವಾರ ಆರಂಭವಾಗುವ ನ್ಯಾಷನಲ್ ಅಸೆಂಬ್ಲಿಯಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ತಿಳಿಸಿತು. ಪ್ರಸ್ತಾಪಿತ ಕರಡು ತಿದ್ದುಪಡಿ ಮಸೂದೆಯನ್ನು ರಚಿಸುವ ಪ್ರಕ್ರಿಯೆಯಲ್ಲಿ ಕಾನೂನು ಸಚಿವಾಲಯ ಇದೀಗ ತೊಡಗಿಸಿಕೊಂಡಿದೆ ಎಂದು ವರದಿ ಹೇಳಿತು.  ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣ ಕೊಡುವವರ ಮೇಲೆ ನಿಗಾ ಇಡಲಾಗುವ ಅಂತಾರಾಷ್ಟ್ರೀಯ ಕಂದು ಪಟ್ಟಿಯಲ್ಲಿ ಪಾಕಿಸ್ತಾನವನ್ನೂ ಸೇರಿಸಲು ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿ ಮುಂದಿಟ್ಟ ಪ್ರಸ್ತಾಪವನ್ನು ಹಣಕಾಸು ಕ್ರಮ ಕಾರ್ಯಪಡೆ (ಎಫ್ ಟಿಎಫ್) ಫೆಬ್ರುವರಿ ತಿಂಗಳಲ್ಲಿ  ಅನುಮೋದಿಸಿರುವ ಹಿನ್ನೆಲೆಯಲ್ಲಿ ಆಗಿರುವ ಹಾನಿ ನಿಯಂತ್ರಣ ಕ್ರಮವಾಗಿ ಎಟಿಎ ತಿದ್ದುಪಡಿ ಕರಡು ತಯಾರಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎಂದು ವರದಿ ಹೇಳಿತು. ಇದಕ್ಕೆ ಮುನ್ನ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪಟ್ಟಿ ಮಾಡಿದ ಸಮೂಹಗಳನ್ನು ೧೨೦ ದಿನಗಳ ಅವಧಿ ಮುಗಿಯುವುದಕ್ಕೆ ಮುನ್ನವೇ ನಿಷೇಧ ಪಟ್ಟಿಗೆ ಸೇರ್ಪಡೆ ಮಾಡಲು ಎಟಿಎಗೆ ತಿದ್ದುಪಡಿ ಮಾಡಿ ಅಧ್ಯಕ್ಷ ಮಮ್ನೂನ್ ಹುಸೇನ್ ಅವರು ಸುಗ್ರೀವಾಜ್ಞೆ ಹೊರಡಿಸಿದ್ದರು.  ನ್ಯಾಷನಲ್ ಅಸೆಂಬ್ಲಿಯು ಇದನ್ನು ಇದನ್ನು ಇನ್ನೂ ನಾಲ್ಕು ತಿಂಗಳ ಅವಧಿಗೆ ವಿಸ್ತರಿಸಬಹುದಾಗಿದ್ದು, ಬಳಿಕ ಅದನ್ನು ನ್ಯಾಷನಲ್ ಅಸೆಂಬ್ಲಿ ಮತ್ತು ಸೆನೆಟ್ ಎರಡೂ ಸದನಗಳಲ್ಲಿ ಹೆಚ್ಚಿನ ವಿಸ್ತರಣೆಗಾಗಿ ಮಂಡಿಸಬಹುದು.  ಸುಗ್ರೀವಾಜ್ಞೆ ಮೂಲಕ ಎಟಿಎಯ ಸೆಕ್ಷನ್ ೧೧-ಬಿಗೆ ತಿದ್ದುಪಡಿಗಳನ್ನು ಮಾಡಲಾಗಿದ್ದು, ಸೆಕ್ಷನ್ ೧೧ಇಇ ಪಟ್ಟಿಗೆ ಸೇರಿಸಬಹುದಾದ ವ್ಯಕ್ತಿಗಳ ಬಗ್ಗೆ ವಿವರಣೆ ನೀಡಿದೆ. ಎರಡೂ ಸೆಕ್ಷನಗಳಿಗೆಎಎ ಸಬ್ ಸೆಕ್ಷನ್ನುಗಳನ್ನು ಸೇರಿಸಲಾಗಿದೆ.  ಸಬ್ ಸೆಕ್ಷನ್ ಪ್ರಕಾರ ವಿಶ್ವಸಂಸ್ಥೆ (ಭದ್ರತಾ ಮಂಡಳಿ) ಕಾಯ್ದೆ ೧೯೪೮ ಪಟ್ಟಿ ಮಾಡಿರುವ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಮೊದಲ ಶೆಡ್ಯೂಲ್ (ಸಂಘಟನೆಗಳು) ಮತ್ತು ನಾಲ್ಕನೇ ಶೆಡ್ಯೂಲ್ಗಳಲ್ಲಿ (ವ್ಯಕ್ತಿಗಳು) ಸೇರ್ಪಡೆ ಮಾಡಲಾಗುವುದು. ಕರಡು ಮಸೂದೆಯ ಜೊತೆಗೆ ಪಾಕಿಸ್ತಾನವು ಗೊತ್ತಿರುವ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ಸಮಗ್ರ ಮಾಹಿತಿಯನ್ನು ಸಿದ್ಧ ಪಡಿಸಲಿದೆ. ಇದು ರಾಷ್ಟ್ರದ ಹಣಕಾಸು ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಘಟನೆಗಳಿಗೆ ಲಭಿಸಲಿದೆ. ಹೀಗಾಗಿ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ನಿಧಿ ಒದಗಿಸುವುದರ ವಿರುದ್ಧ ಆಡಳಿತವನ್ನು ಬಲಗೊಳಿಸಲಿದೆ.  ಎಟಿಗೆ ಮಾಡಲಾಗುವ ತಿದ್ದುಪಡಿಯು ತನಿಖಾಧಿಕಾರಿಗಳಿಗೆ ಭಯೋತ್ಪಾದನೆ ಪ್ರಕರಣಗಳಲ್ಲಿ ಆರ್ಥಿಕ ನೆರವು ಒದಗಿಸುವ ಮೂಲಗಳ ಮೇಲೆ ನಿಗಾ ಇಟ್ಟು ತನಿಖೆ ನಡೆಸುವ ಬಗ್ಗೆ ತರಬೇತಿ ನೀಡಲು ಅವಕಾಶ ಮಾಡಿಕೊಡಲಿದೆ.  ಅಧ್ಯಕ್ಷರು ಹೊರಡಿಸಿದ ಸುಗ್ರೀವಾಜ್ಞೆಯನ್ನು ಈಗಾಗಲೇ ಸಯೀದ್ ಇಸ್ಲಾಮಾಬಾದ್ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದಾನೆ. ಬಾಹ್ಯ ಒತ್ತಡಕ್ಕೆ ಮಣಿದು ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಆದ್ದರಿಂದ ಇದು ರಾಷ್ಟ್ರದ ಸಾರ್ವಭೌಮತ್ವಕ್ಕೆ ವಿರುದ್ಧವಾದ, ಪೂರ್ವಾಗ್ರಹ ಪೀಡಿತ ಆದೇಶವಾಗಿದೆ, ಸಂವಿಧಾನದಲ್ಲಿ ತಿಳಿಸಲಾಗಿರುವ ಮೂಲಭೂತ ಹಕ್ಕುಗಳಿಗೂ ಇದು ವ್ಯತಿರಿಕ್ತವಾಗಿದೆ ಎಂದೂ ಸಯೀದ್ ವಾದಿಸಿದ್ದಾನೆ.  ಸಯೀದನ ಹೆಸರನ್ನು ೨೦೦೮ರ ಡಿಸೆಂಬರಿನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ೧೨೬೭ರಲ್ಲಿ ಪಟ್ಟಿ ಮಾಡಲಾಗಿದೆ.  ಸಯೀದನ ಜಮಾತ್ ಉದ್ ದವಾ ಸಂಘಟನೆಯು ಲಷ್ಕರ್ --ತೊಯ್ಬಾದ ಮುಂಚೂಣಿ ಸಂಘಟನೆಯಾಗಿದ್ದು, ಮುಂಬೈಯಲ್ಲಿ ೧೬೬ ಮಂದಿಯನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯನ್ನು ಸಂಘಟನೆಯೇ ರೂಪಿಸಿತ್ತು ಎಂದು ಹೇಳಲಾಗಿದೆ. ಅಮೆರಿಕವು ೨೦೧೪ರ ಜೂನ್ ತಿಂಗಳಲ್ಲಿ ಇದನ್ನು ವಿದೇಶೀ ಭಯೋತ್ಪಾದಕ ಸಂಘಟನೆ ಎಂಬುದಾಗಿ ಘೋಷಿಸಿತ್ತು.  ಪತ್ರಿಕೆಯು ಸಂಪರ್ಕಿಸಿದಾಗ ಪ್ರಧಾನಿಯ ವಿಶೇಷ ಸಹಾಯಕ ಬ್ಯಾರಿಸ್ಟರ್ ಝಫರುಲ್ಲಾ ಖಾನ್ ಅವರುಎಟಿಎಗೆ ತಿದ್ದುಪಡಿ ಒಳಾಡಳಿತ ಸಚಿವಾಲಯಕ್ಕೆ ಸಂಬಂಧಪಟ್ಟ ವಿಷಯ. ಕಾನೂನು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ನಯಗಳಿಗೆ ಅನುಗುಣವಾಗಿ ನಡೆಯುವ ಖಾತರಿಯನ್ನು ಮೊದಲೇ ನೀಡಿರುವುದರಿಂದ ಕಾನೂನು ಏನನ್ನೂ ಹೊಸದಾಗಿ ಸೇರಿಸುವುದಿಲ್ಲ ಎಂದು ಹೇಳಿದರು.

2018: ಕಿಬಿಥು (ಅರುಣಾಚಲ ಪ್ರದೇಶ):  ಅರುಣಾಚಲ ಪ್ರದೇಶದ ಗಡಿಯಲ್ಲಿರುವ ವ್ಯೂಹಾತ್ಮಕವಾಗಿ ಸೂಕ್ಷ್ಮವಾಗಿರುವ ಅಸಾಫಿಲಾ ಪ್ರದೇಶದಲ್ಲಿ ಭಾರತದ ಸೇನೆ ಅತಿಕ್ರಮಣ ನಡೆಸಿದೆ ಎಂದು ಚೀನಾ ಹೊಸದಾಗಿ ಕ್ಯಾತೆ ತೆಗೆಯಿತು.  ಆದರೆ ಚೀನಾ ಆರೋಪವನ್ನು ತಳ್ಳಿಹಾಕಿರುವ ಭಾರತದ ಅಸಾಫಿಲಾ ಭಾರತಕ್ಕೆ ಸೇರಿದ ಜಾಗ ಎಂದು ಸ್ಪಷ್ಟ ಪಡಿಸಿತು. ಚೀನಾವು ಮಾರ್ಚ್ ೧೫ರಂದು ಇಲ್ಲಿ ನಡೆದ ಗಡಿ ಸಿಬ್ಬಂದಿ ಸಭೆಯಲ್ಲಿ (ಬಿಪಿಎಂ) ವಿಷಯವನ್ನು ಪ್ರಸ್ತಾಪಿಸಿದೆ. ಆದರೆ ಭಾರತೀಯ ಸೇನೆ ಅದನ್ನು ತಿರಸ್ಕರಿಸಿತು.  ಅರುಣಾಚಲ ಪ್ರದೇಶದ ಮೇಲಿನ ಸುಬಾನ್ಸಿರಿ ಭಾರತಕ್ಕೆ ಸೇರಿದ್ದಾಗಿದ್ದು, ಇಲ್ಲಿ ಭಾರತೀಯ ಸೇನೆ ಯಾವಾಗಲೂ ನಿಯಮಿತವಾಗಿ ಪಹರೆಗಳನ್ನು ನಡೆಸುತ್ತಿರುತ್ತದೆ ಎಂದು ಭಾರತ ದೃಢಪಡಿಸಿತು.  ಭಾರತವು ಅತಿಕ್ರಮಿತ ಪ್ರದೇಶದಲ್ಲಿ ಪಹರೆ ನಡೆಸುತ್ತಿದೆ ಎಂಬುದಾಗಿ ಚೀನಾ ಹೇಳಿದ್ದು ಅದು ಬಳಸಿದ ಪದಗಳಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತ ಪಡಿಸಿತು.  ‘ಅಸಾಫಿಲಾದಲ್ಲಿ ನಮ್ಮ ಪಹರೆಯನ್ನು ಚೀನಾ ಪ್ರತಿಭಟಿಸಿದ್ದು ಅಚ್ಚರಿಯ ವಿಷಯವಾಗಿದೆ. ಪ್ರದೇಶದಲ್ಲಿ ಚೀನಾವು ಅತಿಕ್ರಮಣಗಳನ್ನು ನಡೆಸಿದ ಹಲವಾರು ನಿದರ್ಶನಗಳಿದ್ದು, ಭಾರತವು ಅವುಗಳನ್ನು ಗಂಭೀರವಾಗಿ ತೆಗೆದುಕೊಂಡಿತ್ತು ಎಂದು ಮೂಲ ಹೇಳಿತು. ಉಭಯ ರಾಷ್ಟ್ರಗಳ ನಡುವಣ ನೈಜ ನಿಯಂತ್ರಣ ರೇಖೆ (ಎಲ್ ಎಸಿ) ಬಗ್ಗೆ ವಿಭಿನ್ನ ಕಲ್ಪನೆಗಳಿರುವ ಹಿನ್ನೆಲೆಯಲ್ಲಿ, ಬಿಪಿಎಂ ವ್ಯವಸ್ಥೆಯ ಪ್ರಕಾರ ಉಭಯ ಕಡೆಗಳೂ ಅತಿಕ್ರಮಣದ ಘಟನೆU ಬಗ್ಗೆ ತಮ್ಮ ಪ್ರತಿಭಟನೆಯನ್ನು ದಾಖಲಿಸಬಹುದು.   ಚೀನಾದ ಪೀಪಲ್ಸ್ ಆರ್ಮಿಯ ನಿಯೋಗವು ಭಾರತೀಯ ಪಡೆಗಳು ಅಸಾಫಿಲಾದಲ್ಲಿ ನಡೆಸುತ್ತಿರುವ ಪಹರೆಯನ್ನು ನಿರ್ದಿಷ್ಟವಾಗಿ ಪ್ರಸ್ತಾಪಿಸಿಇಂತಹ ಉಲ್ಲಂಘನೆಗಳು ಪ್ರದೇಶದಲ್ಲಿ ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ಧತೆಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಹೇಳಿತು. ಏನಿದ್ದರೂ, ಚೀನೀ ಪ್ರತಿಭಟನೆಯನ್ನು ತಿರಸ್ಕರಿಸಿದ ಭಾರತವು ನೈಜ ನಿಯಂತ್ರಣ ರೇಖೆಯ ಹೊಂದಾಣಿಕೆ ಬಗ್ಗೆ ತನ್ನ ಪಡೆಗಳಿಗೆ ಸ್ಪಷ್ಟ ಅರಿವಿದ್ದು, ಸೇನೆಯು ಎಲ್ ಎಸಿ ವರೆಗೆ ತನ್ನ ಪಹರೆಯನ್ನು ಮುಂದುವರೆಸುವುದು ಎಂದು  ಖಂಡತುಂಡವಾಗಿ ಹೇಳಿತು. ಕಳೆದ ಡಿಸೆಂಬರ್ ೨೧, ೨೨ ಮತ್ತು ೨೩ರಂದು ಭಾರತವು ಅಸಾಫಿಲಾದಲ್ಲಿ ಫಿಶ್ಟೈಲ್ ೧ರ ಬಳಿ ದೊಡ್ಡ ಪ್ರಮಾಣದಲ್ಲಿ ಪಹರೆ ನಡೆಸಿತು ಎಂಬುದು ಚೀನಾದ ನಿರ್ದಿಷ್ಟ ಆರೋಪ. ಗಡಿ ಪ್ರಕ್ಷುಬ್ಧತೆಗಳನ್ನು ನಿವಾರಿಸಿಕೊಳ್ಳಲು ಭಾರತ ಮತ್ತು ಚೀನಾ ಪಡೆಗಳು ಬಿಪಿಎಂಗಳನ್ನು ನಡೆಸುತ್ತಿರುತ್ತವೆ.  ನೈಜ ನಿಯಂತ್ರಣ ರೇಖೆಯಲ್ಲಿ ಅರುಣಾಚಲ ಪ್ರದೇಶದ ಬುಮ್ ಲಾ ಮತ್ತು ಕಿಬಿಥು, ಸಿಕ್ಕಿಮ್ ದೌಲತ್ ಬೇಗ ಒಲ್ಡಿ ಮತ್ತು ಲಡಾಖ್ ಛುಶುಲ್ ಹಾಗೂ ಸಿಕ್ಕಿಮ್ ನಾಥು ಲಾ ಸೇರಿ ಐದು ಬಿಪಿಎಂ ಪಾಯಿಂಟ್ ಗಳಿವೆ.  ಮಾರ್ಚ್ ೧೫ರಂದು ಕಿಬಿಥು ಪ್ರದೇಶದ ಚೀನಾ ಕಡೆಯ ದೈಮಾಯಿ ಪೋಸ್ಟ್ನಲ್ಲಿ ಬಿಪಿಎಂ ನಡೆದಿತ್ತು.  ಭಾರತವು ಕಳೆದ ವರ್ಷ ಡಿಸೆಂಬರಿನಲ್ಲಿ ಟ್ಯುಟಿಂಗ್ನಲ್ಲಿ ತನ್ನ ರಸ್ತೆ ನಿರ್ಮಾಣ ತಂಡ ಇಟ್ಟಿದ್ದ ರಸ್ತೆ ನಿರ್ಮಾಣ ಉಪಕರಣವನ್ನು ಹಾನಿಪಡಿಸಿದ್ದುದಾಗಿಯೂ ಚೀನಾ ಬಿಪಿಎಂನಲ್ಲಿ ಆಕ್ಷೇಪಿಸಿತ್ತು. ಭಾರತೀಯ ಸೇನೆ ಆರೋಪವನ್ನು ನಿರಾಕರಿಸಿತ್ತು ಎಂದು ಮೂಲಗಳು ಹೇಳಿದವು. ಕಳೆದ ಡಿಸೆಂಬರ್ ತಿಂಗಳ ಕೊನೆಯ ವಾರ ಚೀನೀ ಸೇನೆಯ ರಸ್ತೆ ನಿರ್ಮಾಣ ತಂಡವು ಟುಟಿಂಗ್ ಪ್ರದೇಶದಲ್ಲಿ ನೈಜ ನಿಯಂತ್ರಣ ರೇಖೆಯ ಒಳಕ್ಕೆ ಭಾರತೀಯ ಪ್ರದೇಶದಲ್ಲಿ ಸುಮಾರು ಒಂದು ಕಿಮೀಯಷ್ಟು ಸಾಗಿ ಬಂದಿತ್ತು.  ಭಾರತೀಯ ಪಡೆಗಳು ಚಟುವಟಿಕೆ ಸ್ಥಗಿತಗೊಳಿಸುವಂತೆ ಸೂಚಿಸಿದ ಬಳಿಕ ಚೀನೀ ರಸ್ತೆ ನಿರ್ಮಾಣ ತಂಡ ವಾಪಸಾಗಿತ್ತು.

2018: ಚೆನ್ನೈ :  ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿ  ತಮಿಳುನಾಡು ಚಿತ್ರರಂಗ ವಾಲುವಾರ ಕೊಟ್ಟಮ್ನಲ್ಲಿ ಒಂದು ದಿನದ ಪ್ರತಿಭಟನೆ ನಡೆಸಿದ್ದು, ಖ್ಯಾತ ನಟರಾದ ರಜನಿಕಾಂತ್ ಮತ್ತು ಕಮಲಹಾಸನ್ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.  ಕಾವೇರಿ ನದಿ ನೀರು ನಿರ್ವಹಣೆ ಮಂಡಳಿಯನ್ನು ಕೇಂದ್ರ ಸರ್ಕಾರ ರಚಿಸಬೇಕು ಎಂದು ತಮಿಳುನಾಡು ಚಿತ್ರನಟರ ಸಂಘದ ವತಿಯಿಂದ  ನಡೆದ ಪ್ರತಿಭಟನಾ ಸಭೆ ಆಗ್ರಹಿಸಿತು. ರಜನಿಕಾಂತ್ ಅವರು ಮಾತನಾಡಿತಮಿಳುನಾಡು ಒಕ್ಕೊರಲ ಧ್ವನಿಯಿಂದ ಕೇಳುತ್ತಿದೆ. ಪ್ರಧಾನ ಮಂತ್ರಿಗಳು ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಒತ್ತಾಯಿಸಿದರು.  ’ಜನರೆಲ್ಲಾ ಇಲ್ಲಿ ದಾಹದಿಂದಿರುವಾಗ ಐಪಿಎಲ್ ಆಟ ಆಡಬೇಕೆ?. ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಕನಿಷ್ಠ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿಯಬೇಕು  ಎಂಬುದು ನನ್ನ ಮನವಿ ಎಂದು ರಜನಿಕಾಂತ್ ನುಡಿದರು.   ಪ್ರತಿಭಟನೆಯಲ್ಲಿ ಕಮಲಹಾಸನ್, ವಿಕ್ರಂ,ವಿಜಯ್, ವಿಶಾಲ್,ಸೂರ್ಯ ಸೇರಿದಂತೆ ನೂರಾರು ನಟ, ನಟಿಯರು  ಭಾಗಿಯಾಗಿದ್ದರು.    ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್, ಎಲ್ಲರೂ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆ ನೀಡಿದರು.  ರೈತರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವುದು ಖೇದಕರ. ಒಂದು ವೇಳೆ ಚೆನ್ನೈನಲ್ಲಿ ಪಂದ್ಯಾವಳಿಯನ್ನು ನಿಲ್ಲಿಸಲು ಆಗದಿದ್ದರೂ ಆಟಗಾರರು ರೈತರ ಬೆಂಬಲಕ್ಕೆ ನಿಲ್ಲಬೇಕು. ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ನಿಲ್ಲಬೇಕು. ಇದಕ್ಕಾಗಿ ಪಂದ್ಯ ಆಡುವ ವೇಳೆ ಆಟಗಾರರು, ಪ್ರೇಕ್ಷಕರು ಕಪ್ಪು ಪಟ್ಟಿ ಧರಿಸಬೇಕು ಎಂದು ಅವರು ಆಗ್ರಹಿಸಿದರು.  ಕಾವೇರಿ ನಿರ್ವಹಣಾ ಮಂಡಳಿಯನ್ನು ಕೇಂದ್ರ ಸರಕಾರ ರಚಿಸದಿದ್ದರೆ, ತಮಿಳುನಾಡಿನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದೂ ರಜನಿಕಾಂತ್ ಎಚ್ಚರಿಸಿದರು.  ಅಣ್ಣಾ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ಮೂಲದ ಎಂ.ಕೆ. ಸೂರಪ್ಪ ಅವರನ್ನು ನೇಮಿಸಿರುವುದಕ್ಕೂ ರಜನಿಕಾಂತ್ ವಿರೋಧ ವ್ಯಕ್ತಪಡಿಸಿದರು.  ಶಿಕ್ಷಣ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಅಣ್ಣಾ ವಿವಿಗೆ ಸಂದರ್ಭದಲ್ಲಿ ಕರ್ನಾಟಕದವರನ್ನು ನೇಮಿಸಿದ್ದು ಸೂಕ್ತವಲ್ಲ ಎಂದು ರಜನಿಕಾಂತ್ ಹೇಳಿದರು.  ನೀವು ಹೋರಾಟದಲ್ಲಿ ಭಾಗಿಯಾಗಿರುವ ಕಾರಣ ಕರ್ನಾಟಕದಲ್ಲಿ ನಿಮ್ಮ ಸಿನಿಮಾಗಳ ಕಲೆಕ್ಷನ್ ಮೇಲೆ ಪರಿಣಾಮ ಬೀರಿದರೆ ಎಂಬ ಪತ್ರಕರ್ತರ ಪ್ರಶ್ನೆಗೆನಾನು ಸರಿಯಾದ ಕಾರಣಕ್ಕಾಗಿ ಚಳವಳಿ ಮಾಡುತ್ತಿದ್ದೇನೆ  ಎಂದು ರಜನಿಕಾಂತ್ ಉತ್ತರಿಸಿದರು.

2018: ನವದೆಹಲಿ: ಕೇಂದ್ರ ಸರ್ಕಾರವನ್ನು ದಲಿತವಿರೋಧಿ ಎಂಬುದಾಗಿ ಇಲ್ಲಿ ಬಣ್ಣಿಸಿದ ಕಾಂಗ್ರೆಸ್, ಬಿಜೆಪಿಯ ದಲಿತ ಸಂಸತ್ ಸದಸ್ಯರ ಟೀಕೆಗಳು ದಲಿತ ವಿರೋಧಿ ಕೇಂದ್ರ ಸರ್ಕಾರವನ್ನು ಅನಾವರಣಗೊಳಿಸಿವೆ ಎಂದು ಹೇಳಿತು.  ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮಮೌನವನ್ನು ಮುರಿದು ಬಿಜೆಪಿ ದಲಿತ ಸಂಸದರ ಕಳಕಳಿಗೆ ಸ್ಪಂದಿಸಲಿ ಎಂದೂ ಅದು ಛೇಡಿಸಿತು.  ಐವರು ಬಿಜೆಪಿ ದಲಿತ ಸಂಸದರ ಹೇಳಿಕೆಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಅವರುಮೋದಿ ಸರ್ಕಾರವು ಭಾರತವನ್ನುದಲಿತ ಮುಕ್ತವನ್ನಾಗಿ ಮಾಡಲು ಕೆಲಸ ಮಾಡುತ್ತಿದೆ ಎಂಬುದನ್ನು ಬಿಜೆಪಿ ದಲಿತ ಸಂಸದರ ಹೇಳಿಕೆಗಳು ಸಾಬೀತು ಪಡಿಸಿವೆ ಎಂದು ನುಡಿದರು.  ಬಿಜೆಪಿ ದಲಿತ ಸಂಸತ್ ಸದಸ್ಯರಾದ ಉದಿತ್ ರಾಜ್, ಸಾವಿತ್ರಿ ಬಾಯಿ ಫುಲೆ, ಛೋಟೆ ಲಾಲ್ ಖರ್ವಾರ್, ಅಶೋಕ ಕುಮಾರ್ ದೊಹ್ರೆ ಮತ್ತು ಯಶವಂತ್ ಸಿಂಗ್ ಅವರ ಹೇಳಿಕೆಯು ಸರ್ಕಾರದ ಉದ್ದುದ್ದ ಪ್ರತಿಪಾದನೆಗಳನ್ನುಟೊಳ್ಳು ಮಾಡಿವೆ ಎಂದು ಶೆರ್ಗಿಲ್ ಹೇಳಿದರು.  ಆಳುವ ಪಕ್ಷದ ಸಂಸತ್ ಸದಸ್ಯರು ಕೂಡಾ ದಲಿತರ ಭಯ ಮತ್ತು ಕಳವಳವನ್ನು ಒತ್ತಿ ಹೇಳಿರುವುದರಿಂದ  ಪರಿಶಿಷ್ಟ ಜಾತಿಗಳ ಪರಿಸ್ಥಿತಿ ಹೇಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು ಎಂದು ಅವರು ನುಡಿದರು.  ಮೋದಿ ಅವರ ೨೦೧೪ರಚಾಯ್ ಪೇ ಚರ್ಚಾ ಚುನಾವಣಾ ಪ್ರಚಾರ ಮತ್ತುಮನ್ ಕಿ ಬಾತ್ ಮಾಸಿಕ ರೇಡಿಯೋ ಭಾಷಣಗಳನ್ನು ತರಾಟೆಗೆ ತೆಗೆದುಕೊಂಡ ಶೆರ್ಗಿಲ್ ಅವರುಮೋದಿ ಅವರು ತಮ್ಮದೇ ಪಕ್ಷದ ದಲಿತ ಸಂಸದರ ಜೊತೆ ಚರ್ಚೆ ನಡೆಸಲಿ ಮತ್ತು ಅವರ ಮನ್ ಕಿ ಬಾತ್ ಆಲಿಸಲಿ ಎಂದು ಹೇಳಿದರು.  ಸರ್ಕಾರದ ನಿಷ್ಕಾಳಜಿ ಮತ್ತು ನಿಷ್ಕ್ರಿಯತೆ ಪರಿಣಾಮವಾಗಿ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಂದಾಗಿ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಈಗ ಸ್ವತಃ ಬಿಜೆಪಿ ಸಂಸದರೇ ಮೋದಿ ಸರ್ಕಾರವು ಸಮುದಾಯದ ಏಳಿಗೆಗಾಗಿ ಏನೂ ಮಾಡಿಲ್ಲ, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಚುಚ್ಚಿತು.  ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಬಗ್ಗೆ ಪ್ರಧಾನಿಯವರು ತಮ್ಮ ಮೌನ ಮುರಿಯಲೇಬೇಕು. ಪ್ರಧಾನಿ ಮೋದಿ ಅವರು ದಲಿತ ಮುಕ್ತ ಭಾರತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂಬ ಸಂಶಯವನ್ನು ಅವರದೇ ಪಕ್ಷವಾದ ಬಿಜೆಪಿಯ ಸಂಸದರ ಹೇಳಿಕೆಗಳು ಸಾಬೀತು ಪಡಿಸಿವೆ, ಅವರು ಪ್ರಸ್ತಾಪಿಸಿದ ವಿಷಯಗಳಿಗೆ ಪ್ರಧಾನಿ ಸ್ಪಂದಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು.  ಮೋದಿ ಅವರದಲಿತ ವಿರೋಧಿ ಮನೋಭಾವ ಮತ್ತು ನೀತಿಗಳನ್ನು ಬಿಜೆಪಿ ಸಂಸದರು ಬಯಲುಗೊಳಿಸಿದ್ದಾರೆ.  ಶೇಕಡಾ ೫೦ರಷ್ಟು ದಲಿತರು ಮತ್ತು ಬುಡಕಟ್ಟು ಜನರು ಇರುವ ಗ್ರಾಮಗಳಲ್ಲಿ ಒಂದಿರುಳು ವಾಸ ಮಾಡುವಂತೆ ಪಕ್ಷದ ಸಂಸದರಿಗೆ ನಿರ್ದೇಶನ ನೀಡಿರುವ ಮೋದಿ ಅವರು ಇಂತಹ ಪಿಆರ್ ಸ್ಟಂಟ್ ಗಳ ಬದಲಿಗೆ ಮೊದಲು ತಮ್ಮ ಪಕ್ಷದ ದಲಿತ ಸಂಸದರನ್ನು ಮನೆಗೆ ಕರೆಸಿ ಅವರ ಕಷ್ಟಗಳನ್ನು ಕೇಳಿ ತಿಳಿಯಲಿ ಎಂದು ಕಾಂಗ್ರೆಸ್ ಹೇಳಿತು.

2018:  ಬೆಂಗಳೂರು: ೨೦೧೯ರ ಚುನಾವಣೆಯಲಿ ಬಿಜೆಪಿ ಗೆಲ್ಲುವುದನ್ನು ಮರೆತು ಬಿಡಿ, ಸಂಯುಕ್ತ ವಿರೋಧ ಪಕ್ಷದ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಾರಾಣಸಿ ಸ್ಥಾನವನ್ನು ಕೂಡಾ ಕಳೆದುಕೊಳ್ಳಬಹುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಲ್ಲಿ ಹೇಳಿದರು.  ವಿರೋಧ ಪಕ್ಷಗಳ ಏಕತೆ ಬಗ್ಗೆ ತಮ್ಮ ವಿಶ್ವಾಸವನ್ನು ವ್ಯಕ್ತ ಪಡಿಸಿದ ರಾಹುಲ್ ತಮ್ಮ ಪಕ್ಷ, ಎಸ್ಪಿ ಮತ್ತು ಬಿಎಸ್ಪಿ ಒಂದಾದಲ್ಲಿ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ದೂರದ ಮಾತು. ಸ್ವತಃ ಮೋದಿಯವರೂ ತಮ್ಮ ವಾರಾಣಸಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ನುಡಿದರು.  ವೈಯಕ್ತಿಕ ಮತ್ತು ಪ್ರಾದೇಶಿಕ ಆಶಯಗಳ ಹಿನ್ನೆಲೆಯಿದ್ದರೂ ಮೈತ್ರಿಕೂಟದ ಅಂಗಪಕ್ಷಗಳನ್ನು ಸೇರಿಸಿಕೊಳ್ಳುವ ಮತ್ತು ನಿಭಾಯಿಸುವ ವಿಚಾರದಲ್ಲಿ ಅತೀವ ವಿಶ್ವಾಸ ವ್ಯಕ್ತ ಪಡಿಸಿದ ಕಾಂಗ್ರೆಸ್ ಅಧ್ಯಕ್ಷ, ’ಹಲವು ವರ್ಷಗಳಲ್ಲಿ ಕಾಣದ ಕುಸಿತ ಆಡಳಿತಾರೂಢ ಪಕ್ಷಕ್ಕೆ ಎದುರಾಗಲಿದೆ ಎಂದು ಹೇಳಿದರು.  ಪ್ರಾಮಾಣಿಕವಾಗಿ ಮುಂದಿನ ಚುನಾವಣೆಯನ್ನು ಬಿಜೆಪಿ ಗೆಲ್ಲುವುದು ಎಂದು ನಾನು ಭಾವಿಸುವುದಿಲ್ಲ. ಹಾಗೆಯೇ ೨೦೧೯ರಲ್ಲೂ ನಾವು ಮಾಮೂಲು ಸ್ಥಿತಿಗೆ ಹಿಂದಿರುಗುತ್ತೇವೆ ಎಂದು ದಲಿತ ಸಿಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ರಾಹುಲ್ ನುಡಿದರು.  ಎರಡು ಮೂಲ ವಿಚಾರಗಳಿವೆ. ಒಮ್ಮೆ ವಿಪಕ್ಷಗಳ ಏಕತೆ ಒಂದು ಹಂತ ತಲುಪಿದೊಡನೆಯೇ ಅವರಿಗೆ ಚುನಾವಣೆಗಳನ್ನು ಗೆಲ್ಲುವುದು ಸಾಧ್ಯವಾಗುವುದೇ ಇಲ್ಲ. ಈಗ ವಿರೋಧಿ ಏಕತೆ ಒಂದು ಹಂತಕ್ಕೆ ಬಂದಿದೆ. ಇದು ಅತ್ಯಂತ ಸರಳ ಎಂದು ರಾಹುಲ್ ಮಾಧ್ಯಮ ಮಂದಿ ಜೊತೆಗೆ ಮಾತನಾಡುತ್ತಾ ಹೇಳಿದರು.  ಉತ್ತರ ಪ್ರದೇಶ, ಬಿಹಾರದಲ್ಲಿನ ವಿಪಕ್ಷ ಏಕತೆಯ ಯತ್ನಗಳು, ತಮಿಳುನಾಡಿನಲ್ಲಿ ಡಿಎಂಕೆ, ತೃಣಮೂಲ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಗಳ ಜೊತೆಗಿನ ಏಕತೆಯ ಬಗ್ಗೆ ಪ್ರಸ್ತಾಪಿಸಿದ ರಾಹುಲ್ಅವರು (ಬಿಜೆಪಿ) ಎಲ್ಲಿ  ಸ್ಥಾನಗಳನ್ನು ಗೆಲ್ಲುತ್ತಾರೆ?’ ಎಂದು ಪ್ರಶ್ನಿಸಿದರು.   ಇನ್ನು ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಪಂಜಾಬಿನಲ್ಲಿ ನಾವು ಗೆಲ್ಲುತ್ತೇವೆ. ಹಲವಾರು ವರ್ಷಗಳಲ್ಲಿ ಕಾಣದೇ ಇದ್ದಂತಹ ರೀತಿಯಲ್ಲಿ ಅವರು ಪತನವಾಗುವುದನ್ನು ನೀವು ಕಾಣುತ್ತೀರಿ ಎಂದು ರಾಹುಲ್ ನುಡಿದರು.  ಮೇ ೧೨ರಂದು ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಮುಂಚಿತವಾಗಿ ಹಮ್ಮಿಕೊಂಡಿರುವಜನಾಶೀರ್ವಾದ ಯಾತ್ರೆ ಆರನೇ ಸುತ್ತಿನ ಅಭಿಯಾನದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದಾರೆ. ಪ್ರತಿಯೊಂದು ಪಕ್ಷ ಮತ್ತು ನಾಯಕರ ವಿಭಿನ್ನ ಆಶಯಗಳ ಹಿನ್ನೆಲೆಯಲ್ಲಿ ವಿಪಕ್ಷಗಳ ಏಕತೆ ಬಗ್ಗೆ ಗುಮಾನಿ ವ್ಯಕ್ತ ಪಡಿಸಿ ಕೇಳಲಾದ ಪ್ರಶ್ನೆಗೆ ರಾಹುಲ್ ಗಾಂಧಿ ಅವರುಅದೆಲ್ಲವನ್ನೂ ನಾವು ನಿವಾರಿಸಿಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.  ನಾವು ಅದನ್ನೆಲ್ಲ ನಿಭಾಯಿಸುತ್ತೇವೆ. ಕಾಂಗ್ರೆಸ್ಸಿಗೆ ಜನರನ್ನು ಹೇಗೆ ಒಯ್ಯಬೇಕು ಎಂದು ಗೊತ್ತಿದೆ. ನಾವು ಅಹಂ ಮನೋಭಾವದ ಜನರಲ್ಲ. ನಾವು ಜನರನ್ನು ದಮನಿಸುವುದಿಲ್ಲ ಮತ್ತು ಜನರ ಜೀವನವನ್ನು ಹಾಳುಗೆಡವುದಿಲ್ಲ. ಆದ್ದರಿಂದ ನಾವು ನಿಭಾಯಿಸಬಲ್ಲೆವು ಎಂದು ರಾಹುಲ್ ನುಡಿದರು.  ’ಮೂಲ ಪ್ರಶ್ನೆ ಏನೆಂದರೆ ರಾಷ್ಟ್ರವನ್ನು ಮೋದಿ ಮತ್ತು ಆರೆಸ್ಸೆಸ್ ತಂದಿಟ್ಟಿರುವ ಅವ್ಯವಸ್ಥೆಯಿಂದ ಪಾರು ಮಾಡುವುದು ಹೇಗೆ ಎಂಬುದು ಎಂದು ಅವರು ಹೇಳಿದರು.
ಯಾವುದೇ ತೃತೀಯ ರಂಗ ಉದಯಿಸುವ ಸಾಧ್ಯತೆಗಳನ್ನು ಅವರು ತಳ್ಳಿ ಹಾಕಿದರು.  ಆರೆಸ್ಸೆಸ್ ಸಿಟ್ಟು ಮತ್ತು ದ್ವೇಷವನ್ನು ಹುಟ್ಟುಹಾಕುತ್ತಿದೆ ಎಂದು ಆಪಾದಿಸಿದ ರಾಹುಲ್, ’ಜನರನ್ನು ಅವರು ಏನನ್ನು ಹೇಳುತ್ತಾರೋ ಅದಕ್ಕಾಗಿ ಕೊಲ್ಲಲಾಗುತ್ತಿದೆ, ಇದಕ್ಕೆ ಕೊನೆ ಹಾಡಬೇಕಾದ ಅಗತ್ಯ ಇದೆ ಎಂದು ಹೇಳಿದರು.  ಸ್ವಲ್ಪ ಗದ್ದಲ ಇರುವಂತಹ ಆದರೆ ದ್ವೇಷರಹಿತವಾದ ಸಹಜ ರಾಜಕೀಯ ಪರಿಸರ ಮತ್ತೆ ಬರಬೇಕಾದ ಅಗತ್ಯ ಇದೆ ಎಂದು ರಾಹುಲ್ ನುಡಿದರು.  ೨೦೧೪ರ ಚುನಾವಣೆಯ ಬಳಿಕ ಮೋದಿ ಅವರಿಗೆಅತ್ಯಂತ ಉತ್ತಮ ಅವಕಾಶ ಲಭಿಸಿತ್ತು. ರಾಷ್ಟ್ರಕ್ಕಾಗಿ ಬೇಕಾದಷ್ಟು ಮಾಡಬಹುದಾಗಿತ್ತು ಎಂದು ರಾಹುಲ್ ಹೇಳಿದರು.  ಉತ್ತರ ಪ್ರದೇಶದಲ್ಲಿ ವಿಪಕ್ಷ ಒಗ್ಗಟ್ಟನ್ನು ಮುರಿಯುತ್ತೇವೆ, ತಮಗೆ ಉತ್ತರ ಪ್ರದೇಶದ ರಾಜಕೀಯ ಗೊತ್ತಿದೆ ಎಂಬ ಬಿಜೆಪಿಯ ವಿಶ್ವಾಸವನ್ನುತಮಾಷೆ ಎಂದು ಬಣ್ಣಿಸಿದ ರಾಹುಲ್, ಮೂರು ಪಕ್ಷಗಳು (ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್) ಒಂದಾದಾಗ, ಬಿಜೆಪಿ ಕೇವಲ ಸ್ಥಾನ ಗೆಲ್ಲುತ್ತದೆ, ಅದೂ ಕೇವಲ ಅದೃಷ್ಟದಿಂದ ಎಂದು ಕಾಂಗ್ರೆಸ್ ಅಧ್ಯಕ್ಷ ನುಡಿದರು.

2018: ಬೆಂಗಳೂರು: ಕನ್ನಡದ ಹಿರಿಯ ನಿರ್ದೇಶಕ, ರಂಗಕರ್ಮಿ ಟಿ.ಎಸ್‌. ರಂಗಾ (69) ಬೆಂಗಳೂರಿನ ಎನ್‌.ಆರ್‌.ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಬೆಳಗ್ಗೆ ನಿಧನರಾದರು.  ಹಲವು ವರ್ಷಗಳಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಪತ್ನಿ ಅಶ್ವಿನಿ, ಮಗಳು ತನ್ವಿತಾ, ಅಳಿಯ ಮತ್ತು ಅಪಾರ ಅಭಿಮಾನಿಗಳು, ಶಿಷ್ಯವೃಂದವನ್ನು ಅವರು ಅಗಲಿದರು.
ಹಿರಿಯ ನಟ ಸುಂದರ್ರಾಜ್‌, ನಿರ್ದೇಶಕ ಟಿ.ಎಸ್‌.ನಾಗಾಭರಣ ಸೇರಿದಂತೆ ಸಿನಿಮಾ ರಂಗದಲ್ಲಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಸಂಜೆಯೇ ಬೆಂಗಳೂರಿನಲ್ಲಿ ಮೃತರ ಅಂತ್ಯಕ್ರಿಯೆ ಕೂಡ ನೆರವೇರಿತು.  ರಂಗಭೂಮಿಯ ಮೂಲಕ ರಂಗಾ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ಬಿ.ವಿ.ಕಾರಂತ್ಗರಡಿಯಲ್ಲಿ ಪಳಗಿದ್ದ ಇವರು, ಹಯವದನ, ಸತ್ತವರ ನೆರಳು ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು.  ಪ್ರಯೋಗ ಎಂಬ ತಮ್ಮದೇ ತಂಡ ಕಟ್ಟಿಕೊಂಡು ಹಲವು ನಾಟಕಗಳನ್ನೂ ಆಡಿದ್ದರು.  ರಂಗಭೂಮಿ ಜತೆಗೆ ಸಿನಿಮಾ ರಂಗದ ನಂಟೂ ಹೊಂದಿದ್ದ ಇವರು, ‘ಗೀಜಗನ ಗೂಡುಚಿತ್ರದ ಮೂಲಕ ಸ್ಯಾಂಡಲ್ವುಡ್ಪ್ರವೇಶ ಮಾಡಿದರು. ಇದು ಇವರ ಚೊಚ್ಚಲು ನಿರ್ದೇಶನದ ಸಿನಿಮಾ. ಸಿನಿಮಾ ಭಾರತೀಯ ಪನೋರಮಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಮೊದಲ ಚಿತ್ರ. ಉತ್ತರ ಕರ್ನಾಟಕದ ಬಗ್ಗೆ ಅಪಾರ ಒಲವು ಹೊಂದಿದ್ದ ಇವರು, ‘ಸಾವಿತ್ರಿಚಿತ್ರದ ಮೂಲಕ ಅಲ್ಲಿನ ಜನರ ಸ್ಥಿತಿಗತಿ ಹಿಡಿದಿಟ್ಟಿದ್ದರು.  ಕನ್ನಡದಲ್ಲಿ ಮಾತ್ರವಲ್ಲ, ಬಾಲಿವುಡ್ನಲ್ಲೂ ಒಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಗಿಧ್‌ (ರಣಹದ್ದುಗಳು) ಹೆಸರಿನಲ್ಲಿ ಮೂಡಿ ಬಂದ ಚಿತ್ರದಲ್ಲಿ ಓಂ ಪುರಿ, ನಾನಾ ಪಾಟೇಕರ್‌, ಸ್ಮಿತಾ ಸೇರಿದಂತೆ ಖ್ಯಾತ ಕಲಾವಿದರು ನಟಿಸಿದ್ದಾರೆ. ಟಿ.ಎಸ್‌.ನಾಗಾಭರಣ ನಿರ್ದೇಶನದ, 1978ರಲ್ಲಿ ತೆರೆಕಂಡಗ್ರಹಣಸಿನಿಮಾದ ಚಿತ್ರಕಥೆಗಾಗಿ ರಂಗಾ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೇ, ಹಲವು ಸಾಕ್ಷ್ಯ ಚಿತ್ರಗಳ ನಿರ್ಮಾಣದ ಜತೆಗೆ ನಿರ್ದೇಶನ ಕೂಡ ಮಾಡಿದ ಹೆಗ್ಗಳಿಕೆ ಇವರದ್ದು.

2009: ಗೃಹಸಚಿವ ಪಿ.ಚಿದಂಬರಮ್ ಅವರತ್ತ ಬೂಟು ಎಸೆದ ಪತ್ರಕರ್ತ ಜರ್ನೈಲ್ ಸಿಂಗ್ ಅವರು ಹಿಂದಿ ದಿನಪತ್ರಿಕೆ 'ದೈನಿಕ್ ಜಾಗರಣ್' ವಿಶೇಷ ಪ್ರತಿನಿಧಿಯಾಗಿದ್ದು, ಪತ್ರಿಕೆಯು ಈದಿನ ತನ್ನ ಮೊದಲ ಪುಟದಲ್ಲಿ ಜರ್ನೈಲ್ ವರ್ತನೆಗೆ ಕ್ಷಮೆಯಾಚಿಸಿತು. ಜರ್ನೈಲ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಭರವಸೆಯನ್ನೂ ಪತ್ರಿಕೆ ನೀಡಿತು. ಈದಿನದ ಸಂಚಿಕೆಯ ಮೊದಲ ಪುಟದಲ್ಲಿ ಪತ್ರಿಕೆಯು 'ಜರ್ನೈಲ್ ಸಿಂಗ್ ಬೇಜವಾಬ್ದಾರಿ ವರ್ತನೆಗೆ ಪತ್ರಿಕೆಯು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಜರ್ನೈಲ್ ವರ್ತನೆ ದೈನಿಕ್ ಜಾಗರಣ್ ಪತ್ರಿಕೆಯ ನೀತಿ, ನಿಯಮ, ಸಂಪ್ರದಾಯ ಹಾಗೂ ಮೌಲ್ಯಕ್ಕೆ ವಿರುದ್ಧವಾದುದು. ಈ ವರ್ತನೆ ಸರ್ಕಾರ, ಗೃಹಸಚಿವರ ಭಾವನೆಗಳನ್ನು ಘಾಸಿಗೊಳಿಸಿದೆ. ಅದಕ್ಕಾಗಿ ನಾವು ಕ್ಷಮೆ ಯಾಚಿಸುತ್ತೇವೆ' ಎಂದು ಬರೆಯಿತು.

2009: ಇಟಲಿಯ ಲಕ್ವಿಲಾ ನಗರದಲ್ಲಿ ಹಿಂದಿನ ದಿನ ಸಂಭವಿಸಿದ ಭೂಕಂಪದಲ್ಲಿ ಮೃತರಾದವರ ಸಂಖ್ಯೆ 250ಕ್ಕೆ ಏರಿತು. ಭೂಕಂಪ ಸಂಭವಿಸಿದ 30 ಗಂಟೆಗಳ ನಂತರ ಅವಶೇಷಗಳಡಿ ಕಸೂತಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿದ್ದ ಮರಿಯಾ ಡಿ-ಅಂಟೋನ್ ಎಂಬ 98 ವರ್ಷದ ಅಜ್ಜಿಯನ್ನು ರಕ್ಷಣಾ ಯೋಧರು ಸುರಕ್ಷಿತವಾಗಿ ಹೊರತೆಗೆದರು.

2009: ಜವಹರಲಾಲ್ ನೆಹರು ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್) ಅಧ್ಯಕ್ಷ ಪ್ರೊ. ಸಿ.ಎನ್.ಆರ್.ರಾವ್ ಅವರು ರಷ್ಯಾದ ಪ್ರತಿಷ್ಠಿತ 'ಆರ್ಡರ್ ಆಫ್ ಫ್ರೆಂಡ್‌ಶಿಪ್' ಗೌರವಕ್ಕೆ ಪಾತ್ರರಾದರು. ರಷ್ಯಾ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದ ವ್ಯಕ್ತಿಗಳಿಗೆ ಈ ಗೌರವವನ್ನು ನೀಡಲಾಗುತ್ತದೆ. 2007ರ ಸಾಲಿನ ಗೌರವವನ್ನು ಸಿ.ಎನ್.ಆರ್.ರಾವ್ ಅವರಿಗೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿತು.

2009: ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಈದಿನ ರಾತ್ರಿ ನಡೆದ ಸಮಾರಂಭದಲ್ಲಿ ಜೈನ ಧರ್ಮ, ಸಾಹಿತ್ಯ, ಕಲಾಸೇವೆ ಪರಿಗಣಿಸಿ 2009 ನೇ ಸಾಲಿಗೆ 9 ಮಂದಿಗೆ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಚಾವುಂಡರಾಯ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಕವಿ ಜಿನದತ್ತ ದೇಸಾಯಿ, ಮೈಸೂರು ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ಪ್ರಾಧ್ಯಾಪಕಿ ಡಾ. ಪದ್ಮಾವತಮ್ಮ, ಡಾ. ಸರೋಜ ಪ್ರೇಮಸುಮನ್ ಜೈನ್, ಸಂಶೋಧಕ ಡಾ.ವೈ. ಉಮಾನಾಥ ಶೆಣೈ, ಡಾ. ಬಾಹುಬಲಿ ಹಂದೂರ ಅವರಿಗೆ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ, ಶಾಂತಿ ನಾಥ ಕೆ. ಹೋತಪೇಟ ಅವರಿಗೆ ಗೋಮಟೇಶ್ವರ ವಿದ್ಯಾಪೀಠ ಮಾಧ್ಯಮ ಪ್ರಶಸ್ತಿ, ನೃತ್ಯ ಕಲಾವಿದ ಶ್ರೀಧರ್ ಜೈನ್ ಅವರಿಗೆ ಗೋಮಟೇಶ್ವರ ವಿದ್ಯಾಪೀಠ ಸಾಂಸ್ಕೃತಿಕ ಪ್ರಶಸ್ತಿ ಹಾಗೂ ಎಂ.ವಿ. ಶೇಷಾಚಲ ಅವರಿಗೆ ಎ.ಆರ್. ನಾಗರಾಜು ಪ್ರಶಸ್ತಿ ನೀಡಿ ಗೌರವಿಸಲಾಯಿತು.

2009: ಕೋಲಾರದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಹಾಗೂ ಬೆಂಗಳೂರಿನ ಮಾಸ್ತಿ ಪ್ರಶಸ್ತಿ ಸಮಿತಿ ಜಂಟಿಯಾಗಿ ನಡೆಸಿದ 'ಮಾಸ್ತಿ ಕಾದಂಬರಿ ಪುರಸ್ಕಾರ-2008' ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಸುಳ್ಯದ ಲೇಖಕ ಡಾ. ಬಿ.ಪ್ರಭಾಕರ ಶಿಶಿಲ ಅವರ 'ನದಿ ಎರಡರ ನಡುವೆ' ಕಾದಂಬರಿಗೆ ಪ್ರಥಮ ಬಹುಮಾನ, ಧಾರವಾಡದ ಲೇಖಕಿ ಪ್ರೊ. ದಮಯಂತಿ ನರೇಗಲ್ಲ ಅವರ 'ತೇರನೆಳೆಯ ಬಾರ ತಂಗಿ' ಕಾದಂಬರಿಗೆ ದ್ವಿತೀಯ ಬಹುಮಾನ, ಶಿವಮೊಗ್ಗದ ಲೇಖಕ ರವಿ ಸಸಿತೋಟ ಅವರ 'ಸ್ಥಿತ್ಯಂತರ' ಕಾದಂಬರಿಗೆ ತೃತೀಯ ಬಹುಮಾನ ಬಂದಿತು. ಮಂಡ್ಯದ ಪಾಂಡವಪುರದ ಲೇಖಕ ಪಿ.ಅಬ್ದುಲ್ ಸತ್ತಾರ್ ಅವರ 'ರಾಜ ಒಡೆಯರ್' ಕಾದಂಬರಿಗೆ ವಿಶೇಷ ಪುರಸ್ಕಾರ ಬಂದಿತು ಎಂದು ಕೋಲಾರದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಪ್ರಕಟಿಸಿದರು.

2008: ವರ್ಜೀನಿಯಾ ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ ಗುಂಡು ಹಾರಾಟ ಪ್ರಕರಣದ ವರದಿಗೆ ಲಭಿಸಿದ ಪ್ರಶಸ್ತಿಯೂ ಸೇರಿದಂತೆ ಒಟ್ಟು 14 ಪ್ರಶಸ್ತಿಗಳ ಪೈಕಿ 6 ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ `ದಿ ವಾಷಿಂಗ್ಟನ್ ಪೋಸ್ಟ್' ಪ್ರಸಕ್ತ ಸಾಲಿನ ಪ್ರತಿಷ್ಠಿತ `ಪುಲಿಟ್ಜರ್ ಪ್ರಶಸ್ತಿ' ವಿಜೇತರಲ್ಲಿ ಅಗ್ರಸ್ಥಾನಕ್ಕೆ ಏರಿತು. ಸುದ್ದಿ ಸ್ಫೋಟ ವರ್ಗಕ್ಕೆ (ಬ್ರೇಕಿಂಗ್ ನ್ಯೂಸ್) ನೀಡಲಾಗುವ ಪ್ರಶಸ್ತಿಯು ವರ್ಜೀನಿಯಾ ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ ಭೀಕರ ಗುಂಡು ಹಾರಾಟ ಪ್ರಕರಣದ ವರದಿಗಳಿಗಾಗಿ `ಪೋಸ್ಟ್' ಸಿಬ್ಬಂದಿಗೆ ಲಭಿಸಿತು. ಅಂತಾರಾಷ್ಟ್ರೀಯ ವರದಿಗಳ ವರ್ಗದಲ್ಲಿಪೋಸ್ಟ್ ನ ಸ್ಟೀವ್ ಫೈನಾರು ಅವರು ಇರಾಕಿನ ಖಾಸಗಿ ಭದ್ರತಾ ಕಾಂಟ್ರಾಕ್ಟರುಗಳಿಗೆ ಸಂಬಂಧಿಸಿದಂತೆ ಬರೆದ ವರದಿಗೆ ಲಭಿಸಿತು. ವಿವರಣಾತ್ಮಕ ವರದಿಗೆ ನೀಡಲಾಗುವ ಪ್ರಶಸ್ತಿಯನ್ನು ಗೆದ್ದುಕೊಂಡ ನ್ಯೂಯಾರ್ಕ್ ಟೈಮ್ಸ್, ತನಿಖಾ ವರದಿಗಾಗಿ ನೀಡಲಾಗುವ ಪ್ರಶಸ್ತಿಯನ್ನು ಚಿಕಾಗೋ ಟ್ರಿಬ್ಯೂನ್ ಜೊತೆಗೆ ಹಂಚಿಕೊಂಡಿತು. ಪಾಕಿಸ್ಥಾನದಲ್ಲಿ ಜನಿಸಿ, ಬ್ಯಾಂಕಾಕಿನಲ್ಲಿ ನೆಲೆಸಿದ ಛಾಯಾಗ್ರಾಹಕ ಆಡ್ರೀಸ್ ಲತೀಫ್ ಅವರು ಸುದ್ದಿ ಸ್ಫೋಟ ವರ್ಗದಲ್ಲಿ ಛಾಯಾಗ್ರಹಣಕ್ಕೆ ನೀಡಲಾಗುವ ಪ್ರಶಸ್ತಿಯನ್ನು `ರಾಯಿಟರ್ಸ್'ಗೆ ದಕ್ಕಿಸಿಕೊಟ್ಟರು. ಬಾಡಿಗೆ ವಿಡಿಯೋಗ್ರಾಫರನಾಗಿ ಹೋಗಿ ಮ್ಯಾನ್ಮಾರಿನಲ್ಲಿ ಪ್ರದರ್ಶನ ಕಾಲದಲ್ಲಿ ತೀವ್ರವಾಗಿ ಗಾಯಗೊಂಡ ಜಪಾನಿನ ವಿಡಿಯೋಗ್ರಾಫರನನ್ನು ಸೆರೆಹಿಡಿದ ಛಾಯಾಚಿತ್ರಕ್ಕೆ ಈ ಪ್ರಶಸ್ತಿ ಲಭಿಸಿತು. ಇನ್ವೆಸ್ಟರ್ಸ್ ಬಿಸಿನೆಸ್ ಡೈಲಿಯ ಮೈಕೆಲ್ ರಮೀರೆಝ್ ಅವರು ಸಂಪಾದಕೀಯ ಕಾರ್ಟೂನಿಗಾಗಿ ಪುಲಿಟ್ಜರ್ ಪ್ರಶಸ್ತಿ ಗೆದ್ದುಕೊಂಡರು. ಅತ್ಯುತ್ತಮ ಟೀಕೆಗೆ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿಯು ಬೋಸ್ಟನ್ ಗ್ಲೋಬಿನ ಮಾರ್ಕ್ ಫೀನೀ ಅವರಿಗೆ ಮತ್ತು ಫೀಚರ್ ಫೋಟೋಗ್ರಫಿಗಾಗಿ ನೀಡಲಾಗುವ ಪ್ರಶಸ್ತಿಯು ಕಾಂಕಾರ್ಡ್ ಮಾನಿಟರಿನ ಪ್ರೆಸ್ಟನ್ ಗನ್ನಾವೇ ಅವರಿಗೆ ಲಭಿಸಿತು.

2008: ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ಟ್ಯಾಕ್ಸಿ ಸೇವೆ ಒದಗಿಸುವ `ವಿ-ಲಿಂಕ್' ಟ್ಯಾಕ್ಸಿ ಸಂಸ್ಥೆಯು ರಾತ್ರಿ ನಗರದ ಖಾಸಗಿ ಹೋಟೆಲಿನಲ್ಲಿ ಆಯೋಜಿಸ್ದಿದ ಟ್ಯಾಕ್ಸಿ ಸೇವೆ ಉದ್ಘಾಟನಾ ಸಮಾರಂಭಕ್ಕೆ ನುಗ್ಗಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೀಠೋಪಕರಣಗಳನ್ನು ಒಡೆದು ಹಾಕಿ ದಾಂಧಲೆ ನಡೆಸಿದರು. ಸುಮಾರು 40 ಮಂದಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಒಮ್ಮೆಲೆ ನುಗ್ಗಿದ ಪರಿಣಾಮ ಕಾರ್ಯಕ್ರಮ ಆಯೋಜಕರು ಮತ್ತು ಸಭಿಕರು ಆತಂಕಕ್ಕೆ ಒಳಗಾದರು. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ಟ್ಯಾಕ್ಸಿ ಸೇವೆಯನ್ನು ಮುಂಬೈ ಮೂಲದ `ವಿ-ಲಿಂಕ್' ಸಂಸ್ಥೆಗೆ ನೀಡಿದ್ದರಿಂದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಡಿ (ಕೆಎಸ್ಟಿಡಿಸಿ) ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗರಿಗೆ ಭಾರಿ ಅನ್ಯಾಯವಾಗುತ್ತದೆ. ಸಾವಿರಾರು ಚಾಲಕರು ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಕಾರ್ಯಕರ್ತರು ಆರೋಪಿಸಿದರು.

2008: ಆಗಸ್ಟ್ ತಿಂಗಳಲ್ಲಿ ನಡೆಯುವ ಬೀಜಿಂಗ್ ಒಲಿಂಪಿಕ್ ಕೂಟದ ಜ್ಯೋತಿಯ ಮೆರವಣಿಗೆಗೆ ವಿಶ್ವದ ವಿವಿಧ ಭಾಗಗಳಲ್ಲಿ ವ್ಯಕ್ತವಾದ ವಿರೋಧವು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ನಿದ್ದೆಗೆಡಿಸಿತು. ಪ್ರತಿಭಟನಕಾರರಿಂದ ರಕ್ಷಿಸಲು ಪ್ಯಾರಿಸ್ಸಿನ ಬೀದಿಯ ಕೆಲವು ಕಡೆಗಳಲ್ಲಿ ಜ್ಯೋತಿಯನ್ನು ಬಸ್ಸಿನಲ್ಲಿ ಕೊಂಡೊಯ್ಯಲಾಯಿತು.

2008: ಬೀಜಿಂಗ್ ಒಲಿಂಪಿಕ್ ಕೂಟದ ಜ್ಯೋತಿಯ ಮೆರವಣಿಗೆ ವೇಳೆ ಸೂಕ್ತ ಭದ್ರತೆಯನ್ನು ಖಾತರಿಪಡಿಸಲು `ರೆಡ್ ಗಾರ್ಡ್' ಕಮಾಂಡೊಗಳಿಗೆ ಅವಕಾಶ ಮಾಡಿಕೊಡಬೇಕೆಂಬ ಚೀನಾದ ಕೋರಿಕೆಯನ್ನು ಭಾರತ ತಳ್ಳಿಹಾಕಿತು.

2008: ಪಕ್ಷದ ಮುಖ ವಾಣಿ `ಸಾಮ್ನಾ'ದ ಸಂಪಾದಕೀಯದಲ್ಲಿ 2 ದಿನಗಳ ಹಿಂದಷ್ಟೇ ನಟ ಅಮಿತಾಭ್ ಬಚ್ಚನ್ ಅವರನ್ನು ಟೀಕಿಸಿದ್ದ ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ, ದಿಢೀರ್ ತಮ್ಮ ನಿಲುವು ಬದಲಿಸಿ, ಬಚ್ಚನ್ ಅವರನ್ನು `ದೇಶದ ಸೂಪರ್ ಸ್ಟಾರ್' ಎಂದು ಕೊಂಡಾಡಿದರು. `ಅಮಿತಾಬ್ ಕೇವಲ ಒಂದು ರಾಜ್ಯದ ತಾರೆ ಅಲ್ಲ. ಅವರು ಇಡೀ ರಾಷ್ಟ್ರದ ಸೂಪರ್ ಸ್ಟಾರ್. ಆದ್ದರಿಂದ ಅವರನ್ನು ಪ್ರಾದೇಶಿಕ ವಿವಾದದಲ್ಲಿ ಸಿಕ್ಕಿಸುವುದು ಸರಿಯಲ್ಲ' ಎಂದು ಠಾಕ್ರೆ ಈದಿನ ಸಂಪಾದಕೀಯದಲ್ಲಿ ಬರೆದರು.

2008: ತಿರುಮಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ತಮಿಳು ನಟಿ ಹಾಗೂ `ಶಿವಾಜಿ' ಚಲನಚಿತ್ರ ಖ್ಯಾತಿಯ ಶ್ರೇಯಾ ಶರಣ್ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನಿಗೆ ಶ್ರೇಯಾ ಅವರು ಕಪಾಳಕ್ಕೆ ಬಾರಿಸಿದ ಘಟನೆ ನಡೆಯಿತು. ಇದರಿಂದ ಉತ್ತೇಜಿತರಾದ ಅಭಿಮಾನಿಗಳೂ ಆ ವ್ಯಕ್ತಿಗೆ ಧರ್ಮದೇಟುಗಳನ್ನು ನೀಡಿದರು.

2008: `ಯಾವುದೇ ದೃಷ್ಟಿಯಿಂದ ನೋಡಿದರೂ ನಾನು ಮುಂಬೈಗೆ ಹೊರಗಿನವನಲ್ಲ. ಮುಂಬೈ ಬಿಟ್ಟು ನಾನು ಕದಲುವುದೂ ಇಲ್ಲ. ಬೇರೆಲ್ಲಿಗಾದರೂ ಹೋಗುವ ಪ್ರಶ್ನೆಯೂ ಇಲ್ಲ' ಎಂದು ರಾಜ್ ಠಾಕ್ರೆ ಅವರ ಎಂ ಎನ್ ಎಸ್ ತಮ್ಮ ವಿರುದ್ಧ ಹೂಡಿದ ಚಳವಳಿಯಿಂದ ನೊಂದ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮುಂಬೈಯಲ್ಲಿ ಘೋಷಿಸಿದರು.

2008: ಬಹುಸಂಖ್ಯೆಯಲ್ಲಿರುವ ವೈದ್ಯರು ಸೇರಿದಂತೆ ಬ್ರಿಟನ್ನಿಗೆ ವಲಸೆ ಹೋದ ಸಾವಿರಾರು ಭಾರತೀಯ ವೃತ್ತಿಪರರ ಪರವಾಗಿ ಬ್ರಿಟನ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. `ಅತ್ಯಂತ ಕೌಶಲ್ಯ ಹೊಂದಿರುವವರ ವಲಸೆ ಯೋಜನೆ'ಯ (ಎಚ್ ಎಸ್ ಎಂ ಪಿ) ನಿಯಮಾವಳಿ ಹಾಗೂ ಷರತ್ತುಗಳನ್ನು ಸರ್ಕಾರ ಬದಲಿಸುವಂತಿಲ್ಲ ಎಂದು ಕೋರ್ಟ್ ಹೇಳಿತು. ಬ್ರಿಟನ್ ಸರ್ಕಾರ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ 2002ರ ಜನವರಿಯಲ್ಲಿ `ಎಚ್ ಎಸ್ ಎಂ ಪಿ' ಜಾರಿಗೊಳಿಸಿತ್ತು. ವೈದ್ಯರು, ಎಂಜನಿಯರರು, ತಂತ್ರಜ್ಞರು ಸೇರಿದಂತೆ ಉನ್ನತ ಶಿಕ್ಷಣ ಪಡೆದವರಿಗೆ ವೀಸಾ ನೀಡಲು ಆರಂಭಿಸಿತು. ಈ ಯೋಜನೆಯಡಿ ಬ್ರಿಟನ್ನಿಗೆ ವಲಸೆ ಹೋದವರಲ್ಲಿ ಭಾರತೀಯರ ಸಂಖ್ಯೆಯೇ ಅಧಿಕ. ಆದರೆ, 2006ರ ನವೆಂಬರಿನಲ್ಲಿ ಬ್ರಿಟನ್ ಸರ್ಕಾರ ಈ ಯೋಜನೆಗೆ ಏಕಾಏಕಿ ತಿದ್ದುಪಡಿ ತಂದಿತು. ಇದನ್ನು ಪ್ರಶ್ನಿಸಿ `ಎಚ್ ಎಸ್ ಎಂ ಪಿ' ವೇದಿಕೆ ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದ ಬ್ರಿಟನ್ ಹೈಕೋರ್ಟ್, ಈ ಯೋಜನೆಯಡಿ ಸಾವಿರಾರು ವೃತ್ತಿಪರರು ಬ್ರಿಟನ್ನಿಗೆ ವಲಸೆ ಬಂದಿರುವುದರಿಂದ ಸರ್ಕಾರ ಈಗ ಅದನ್ನು ಬದಲಿಸುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿತು.

2007: ಅಮೆರಿಕದ ಕೋಟ್ಯಧೀಶ ಚಾರ್ಲ್ಸ್ ಸಿಮೋನಿಯೀ ಅವರು ರಷ್ಯದ ಇಬ್ಬರು ಗಗನಯಾನಿಗಳೊಂದಿಗೆ ಬಾಹ್ಯಾಕಾಶಕ್ಕೆ ಏರಿದರು. ಅವರನ್ನು ಹೊತ್ತ ಸೋಯುಜ್ ಟಿಎಂಎ-10 ಗಗನನೌಕೆಯು ಕಝಕಸ್ತಾನದ ಬೈಕನೂರ್ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಗೊಂಡಿತು.

2007: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕಾಯಕಯೋಗಿ ಡಾ. ಶಿವಕುಮಾರ ಸ್ವಾಮೀಜಿ ಅವರ ನೂರನೇ ಜನ್ಮ ಶತಮಾನೋತ್ಸವಕ್ಕೆ ಚಾಲನೆ ನೀಡಿದರು. ವಿದ್ಯುನ್ಮಾನ ಗುಂಡಿಯನ್ನು ಒತ್ತಿ ವೇದಿಕೆಯ ಮೇಲೆ ಏಕ ಕಾಲದಲ್ಲಿ 100 ದೀಪಗಳನ್ನು ಬೆಳಗುವ ಮೂಲಕ ಸ್ವಾಮೀಜಿಗೆ ಶುಭ ಕೋರಿದರು.

2007: ಮುಂಬೈ ಮಹಾನಗರದ ರೂಪದರ್ಶಿ ಸರಾಹ್ ಜೇನ್ ಅವರು ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ `ಭಾರತ ಸುಂದರಿ' ಆಗಿಯೂ, ಪೂಜಾ ಚಿಟ್ಗೋಪಕರ್ ಅವರು `ಭಾರತ ಭೂ ಸುಂದರಿ' ಆಗಿಯೂ ಆಯ್ಕೆಯಾದರು.

2007: ಭಾರತ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರದ ಜೈವಿಕ ವಿಜ್ಞಾನ ಪ್ರಯೋಗಾಲಯದಲ್ಲಿ ತಪಾಸಣೆಯ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು. ಬಾಹ್ಯಾಕಾಶ ನೌಕೆಯಲ್ಲಿ ಬ್ಯಾಕ್ಟೀರಿಯಾ, ಬೂಷ್ಟು ಮತ್ತಿತರ ಸೂಕ್ಷ್ಮಾಣು ಜೀವಿಗಳನ್ನು ಸಾಮಾನ್ಯ ತಪಾಸಣಾ ಕ್ರಮಕ್ಕಿಂತ ಬೇಗ ಗುರುತಿಸಬಹುದು. ಇದಕ್ಕೆ `ಲೊಕಾರ್ಡ್ ಪಿಟಿಎಸ್' ಎಂದು ಹೆಸರಿಸಲಾಗಿದೆ. ಇದು `ಲ್ಯಾಬ್ ಆನ್ ಚಿಪ್ ಅಪ್ಲಿಕೇಷನ್ ಡೆವಲಪ್ಮೆಂಟ್- ಸಣ್ಣ ತಪಾಸಣಾ ವ್ಯವಸ್ಥೆ' ಎಂಬುದರ ಸಂಕ್ಷಿಪ್ತ ರೂಪ. ನಾಸಾದ ಅಂತರಿಕ್ಷ ನೌಕೆ `ಡಿಸ್ಕವರಿ'ಯಲ್ಲಿ 2006ರ ಡಿಸೆಂಬರ್ 9ರಂದು ಈ ವ್ಯವಸ್ಥೆಯ ಬಳಕೆಗೆ ಚಾಲನೆ ನೀಡಿದ್ದರೂ ಆ ನಂತರ ಇದರ ಬಳಕೆ ಆಗಿರಲಿಲ್ಲ. ಸುನೀತಾ ಅವರೇ ಅ ಸಂದರ್ಭದಲ್ಲಿ ಲೊಕಾರ್ಡ್ ಪಿಟಿಎಸ್ ಉಪಕರಣ ವ್ಯವಸ್ಥೆ ರೂಪಿಸಿದ್ದರು.

2007: ರಸ್ತೆ ಅಪಘಾತದಲ್ಲಿ ಮೃತನಾದ ವ್ಯಕ್ತಿಯ ಪರಿಹಾರ ಧನ ಪಡೆಯಲು ಯಾರೂ ವಾರಸುದಾರರಿಲ್ಲದೇ ಹೋದಲ್ಲಿ, ಆ ವ್ಯಕ್ತಿಯ ವಿವಾಹಿತ ಪುತ್ರಿಗೆ ಅದನ್ನು ಪಡೆಯುವ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ವಿವಾಹಿತ ಪುತ್ರಿಯೂ ಪರಿಹಾರ ಧನ ಪಡೆಯಬಹುದು ಎಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಎಸ್. ಎಚ್. ಕಪಾಡಿಯಾ ಅವರನ್ನು ಒಳಗೊಂಡ ಪೀಠವು ಹೇಳಿತು.

2007: ಒರಿಸ್ಸಾದ ಪುರಿಯ ಗಜಪತಿ ಮಹಾರಾಜ ದಿವ್ಯಸಿಂಹ ದೇವ ಅವರನ್ನು ಮದುವೆಯಾದ ಮೂರು ವರ್ಷಗಳ ಬಳಿಕ ಮಹಾರಾಣಿ ಲೀಲಾವತಿ ಪಟ್ಟ ಮಹಾದೇವಿ ಅವರು ಇದೇ ಮೊದಲ ಬಾರಿಗೆ ಬಿಗಿ ಬಂದೋಬಸ್ತಿನ ಮಧ್ಯೆ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದರು. ಈ ಪುಣ್ಯಕ್ಷೇತ್ರದಲ್ಲಿ 12ನೇ ಶತಮಾನದಲ್ಲಿ ನಡೆಯುತ್ತಿದ್ದ ರಾಜಮನೆತನದ ಈ ಧಾರ್ಮಿಕ ಕಾರ್ಯಕ್ರಮ 40 ವರ್ಷಗಳ ಬಳಿಕ ನಡೆಯಿತು.

2006: ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವಾಗ ಕೇಂದ್ರೀಯ ಶಿಕ್ಷಣ ಸಂಸ್ಥೆಗಳು, ಐಐಎಂಗಳು ಮತ್ತು ಐಐಟಿಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಪ್ರಸ್ತಾವ ಮುಂದಿಟ್ಟದ್ದಕ್ಕೆ ವಿವರಣೆ ನೀಡುವಂತೆ ಚುನಾವಣಾ ಆಯೋಗವು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಅವರಿಗೆ ನೋಟಿಸ್ ನೀಡಿತು.

2006: ಲಾಭದ ಹುದ್ದೆ ವಿವಾದದ ಹಿನ್ನೆಲೆಯಲ್ಲಿ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಪ್ರತಿಷ್ಠಾನ, ಇಂದಿರಾಗಾಂಧಿ ಸ್ಮಾರಕ ಪ್ರತಿಷ್ಠಾನ ಮತ್ತು ಜವಾಹರ ಭವನ ಪ್ರತಿಷ್ಠಾನಗಳ ಅಧ್ಯಕ್ಷ ಸ್ಥಾನಗಳಿಗೂ ರಾಜೀನಾಮೆ ಸಲ್ಲಿಸಿದರು.

2006: ಮಂಡಲ್ ಆಯೋಗ ಪ್ರಕರಣದ ತನ್ನ ತೀರ್ಪನ್ನು ದೃಢಪಡಿಸಿದ ಸುಪ್ರೀಂಕೋರ್ಟ್ ಸಾಮಾನ್ಯ ವರ್ಗದಿಂದ ಆಯ್ಕೆಯಾದ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಯನ್ನು ಇತರೆ ಹಿಂದುಳಿದ ವರ್ಗಗಳ ಕೋಟಾದ ಅಡಿ (ಒಬಿಸಿ ಕೋಟಾ) ನೇಮಕಗೊಂಡವರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿತು.

2001: ಜಾರ್ಜಿಯಾದ ಆಗಸ್ಟಾದಲ್ಲಿ `ಆಗಸ್ಟಾ ಮಾಸ್ಟರ್ಸ್' ಗೆಲ್ಲುವ ಮೂಲಕ ಟೈಗರ್ ವುಡ್ಸ್ ಅವರು ಏಕ ಕಾಲಕ್ಕೆೆ ಎಲ್ಲ ನಾಲ್ಕು ಪ್ರಮುಖ ಚಾಂಪಿಯನ್ ಶಿಪ್ಪುಗಳನ್ನು ಗೆದ್ದ ಮೊದಲ ಗಾಲ್ಫ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1973: ಜಗತ್ತಿನ ಖ್ಯಾತ ಕಲಾವಿದರಲ್ಲಿ ಒಬ್ಬರಾದ ಪಾಬ್ಲೋ ಪಿಕಾಸೋ ಫ್ರಾನ್ಸಿನ ಮೌಗಿನ್ಸಿನಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು. 20ನೇ ಶತಮಾನದ ಆಧುನಿಕ ಕಲೆಗೆ ಇವರು ಮಹತ್ವದ ಕಾಣಿಕೆ ಸಲ್ಲಿಸಿದರು.

1968: ಕಲಾವಿದ ಚಂದ್ರಶೇಖರ ಎ.ಪಿ. ಜನನ.

1965: ಕಲಾವಿದೆ ನಂದಿನಿ ಕೆ. ಮೆಹ್ತಾ ಜನನ.

1955: ಕಲಾವಿದ ಅಪ್ಪಗೆರೆ ತಿಮ್ಮರಾಜು ಜನನ.

1950: ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಪಾಕಿಸ್ತಾನದ ಲಿಯಾಖತ್ ಅಲಿ ಖಾನ್ ಭಾರತ ಮತ್ತು ಪಾಕಿಸ್ಥಾನದ ನಿರಾಶ್ರಿತರ ವಾಪಸಾತಿಗೆ ಸಂಬಂಧಿಸಿದ `ದೆಹಲಿ ಒಪ್ಪಂದ'ಕ್ಕೆ ಸಹಿ ಹಾಕಿದರು.

1939: ಸಿಪಿಕೆ ಎಂದೇ ಖ್ಯಾತರಾಗಿರುವ ಪ್ರೊ.ಸಿ.ಪಿ. ಕೃಷ್ಣಕುಮಾರ್ ಈದಿನ ಹುಟ್ಟಿದರು. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಸಿಪಿಕೆ ಕಾವ್ಯ, ವಿಮರ್ಶೆ, ಅನುವಾದ, ವಿಡಂಬನೆ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ 250ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆೆ. ರಾಜ್ಯ ಸಾಹಿತ್ಯ ಅಕಾಡೆಮಿ, ಜಾನಪದ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1929: ಭಾರತೀಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ದೆಹಲಿಯ ಕೇಂದ್ರೀಯ ಶಾಸನಸಭೆಯಲ್ಲಿ ಬಾಂಬ್ ಸ್ಫೋಟಿಸಿದರು. ಭಾರತೀಯ ಪ್ರಜೆಗಳ ಮುಖ್ಯವಾಗಿ ಕಾರ್ಮಿಕರ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸುವ ಸಾರ್ವಜನಿಕ ಸುರಕ್ಷತೆ ಮತ್ತು ಕಾರ್ಮಿಕ ವಿವಾದಗಳ ಮಸೂದೆಯನ್ನು ಪ್ರತಿಭಟಿಸಿ ಅವರು ಈ ಕೃತ್ಯ ಎಸಗಿದರು.

1924: ಹಿಂದೂಸ್ಥಾನಿ ಸಂಗೀತದ ಅದ್ಭುತ ತಾರೆ ಎನಿಸಿದ್ದ ಕುಮಾರ ಗಂಧರ್ವ (8-4-1924ರಿಂದ 12-1-1992) ಅವರು ಸಂಗೀತಗಾರ ಸಿದ್ದರಾಮಯ್ಯ- ಗುರುಸಿದ್ದವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಸೂಳೆಭಾವಿಯಲ್ಲಿ ಜನಿಸಿದರು. ಜನ್ಮಜಾತ ಪ್ರತಿಭೆಯಾಗಿದ್ದ ಕುಮಾರ ಗಂಧರ್ವ ಅವರು ಐದು ವರ್ಷದವನಿದ್ದಾಗಲೇ ದಾವಣಗೆರೆಯಲ್ಲಿ ಪ್ರಥಮ ಸಂಗೀತ ಕಚೇರಿ ನೀಡಿದರು. ಹನ್ನೊಂದನೆಯ ವಯಸ್ಸಿನಲ್ಲಿ ಅಲಹಾಬಾದಿನಲ್ಲಿ ಸಂಗೀತ ಸಮ್ಮೇಳನದಲ್ಲಿ ಕಾಫಿ ರಾಗವನ್ನು ಅರ್ಧ ಗಂಟೆ ಹಾಡಿ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿದರು. ಗೀತವರ್ಷ (ಮಳೆಗಾಲ), ಗೀತ ಹೇಮಂತ (ಚಳಿಗಾಲ), ಗೀತ ವಸಂತ (ವಸಂತ ಕಾಲ) ಇವು ಋತುಮಾನಗಳಿಗೆ ಅನುಗುಣವಾಗಿ ಹಾಡಲು ಕುಮಾರ ಗಂಧರ್ವ ನೀಡಿದ ವಿಶಿಷ್ಟ ಹೊಸ ರಾಗಗಳು. ಸೂರದಾಸ, ಕಬೀರದಾಸ, ಮೀರಾ ಭಜನೆಗಳ ಗುಚ್ಛ, ಅನೂಪರಾಗ ವಿಲಾಸ ಇವೆಲ್ಲ ಅವರ ಹತ್ತು ವರ್ಷಗಳ ಸಂಶೋಧನೆಯ ಫಲವಾಗಿ ಮೂಡಿದ ಹೊಸ ರಾಗಗಳು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕಾಳಿದಾಸ ಸಮ್ಮಾನ, ಉಜ್ಜಯನಿ ವಿಕ್ರಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಇತ್ಯಾದಿ ಸೇರಿದಂತೆ ಅವರಿಗೆ ಲಭಿಸಿದ ಪ್ರಶಸ್ತಿಗಳಿಗೆ ಲೆಕ್ಕ ಇಲ್ಲ.

1894: ಭಾರತದ ಖ್ಯಾತ ಕಾದಂಬರಿಕಾರ ಬಂಕಿಮ್ ಚಂದ್ರ ಚಟರ್ಜಿ (1838-1894) ಅವರು ಕೊಲ್ಕತಾ (ಕೋಲ್ಕತ್ತಾ) (ಆಗಿನ ಕಲಕತ್ತಾ)ದಲ್ಲಿ ತಮ್ಮ 55ನೇ ವಯಸ್ಸಿನಲ್ಲಿ ನಿಧನರಾದರು. ಅವರ `ಆನಂದಮಠ' ಕೃತಿಯ `ವಂದೇ ಮಾತರಂ' ಭಾರತೀಯ ಸ್ವಾತಂತ್ರ್ಯ ಸಮರದಲ್ಲಿ ಮುಖ್ಯ ಸ್ಫೂರ್ತಿ ಮಂತ್ರವಾಯಿತು. ಮುಂದೆ ಭಾರತದ ರಾಷ್ಟ್ರೀಯ ಗೀತೆ ಕೂಡಾ ಆಯಿತು.

No comments:

Post a Comment