Showing posts with label ಕವನ. Show all posts
Showing posts with label ಕವನ. Show all posts

Thursday, December 18, 2025

PARYAYA: ಸುವರ್ಣ ಸೌಧದ ಕಾರಂಜಿ ಕೇಳುತ್ತಿದೆ…

 ಸುವರ್ಣ ಸೌಧದ ಕಾರಂಜಿ ಕೇಳುತ್ತಿದೆ…

ಇದು ಸುವರ್ಣ ನೋಟ

ಕುಂದಾ ನಗರಿ ಎಂಬುದಾಗಿಯೇ ಹೆಸರು ಪಡೆದಿರುವ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನ ಸಂದರ್ಭದ ಚಿತ್ರಗಳನ್ನು ತೆಗೆಯುವ ಸಲುವಾಗಿಯೇ ಬೆಳಗಾವಿಗೆ ತೆರಳಿದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ʼಪರ್ಯಾಯ ಡಾಟ್‌ ಕಾಮ್‌ʼ ವೆಬ್‌ಸೈಟಿಗೆ ಕೆಲವೊಂದು ಚಿತ್ರಗಳನ್ನು ಕಳುಹಿಸಿದ್ದಾರೆ. 

ಸುವರ್ಣ ಸೌಧದ ಮುಂಭಾಗದಲ್ಲಿ ಇತ್ತೀಚೆಗೆ ನಿರ್ಮಿಸಲಾಗಿರುವ ಸುಂದರ ಕಾರಂಜಿಗಳ ಚಿತ್ರಗಳು ಅವು. ಆ ಚಿತ್ರಗಳು ಮತ್ತು ಅಧಿವೇಶನ ಕುರಿತು ಹಿರಿಯ ಪತ್ರಕರ್ತ ನೆತ್ರಕೆರೆ ಉದಯಶಂಕರ ಪದ್ಯವೊಂದನ್ನು ಬರೆದರು.

ಆ ಕವನ ಇಲ್ಲಿದೆ:

ಶೀರ್ಷಿಕೆ: ಸುವರ್ಣ ಸೌಧದ ಕಾರಂಜಿ ಕೇಳುತ್ತಿದೆ…


ಮೈಯ ನಡುಗಿಸುವ ಚಳಿಯಲಿ|
ಚರ್ಚೆ ನಡೆದಿದೆ ಕಾವೇರಿ ಸದನದಿ|
ಕುಂದ ನಗರಿಯ ಭವ್ಯಸೌಧದ|
ಒಳ ಸಭಾಂಗಣದಿ||

ಚಂದದಿಂದಲಿ ತಕ ತಕನೆ ಕುಣಿದಿದೆ|
ಮಂದ ಬೆಳಕಿನ ನಡುವೆ ನೀರಿನ|
 
ಭವ್ಯ ವರ್ಣದ ಛಾಪು ಚೆಲ್ಲುತ|
ದಿವ್ಯ ಕಾರಂಜಿ||

ಹಾಡು ಹಗಲಲಿ ನಡೆವ ಮಾತಿನ|
ಜೋರು ಚರ್ಚೆಯ ಬಳಿಕ ಬರುವುದೇ|
ನಾಕು ಜನಕನುಕೂಲವಾಗುವ|
ಖಚಿತ ಆಡಳಿತ? ||

ಮುಗಿಲು ಮುಟ್ಟಿದ ಕಾಡಿ|
ಕೆಣಕುವ ಅಟ್ಟಹಾಸದ ಭ್ರಷ್ಟ|
ಬಲಗಳ ಮೆಟ್ಟಿಹಾಕುವ ಶುಭ್ರ|
ವರ್ಣದ ಜಗ ಜಟ್ಟಿ ನಿರ್ಧಾರ? ||

ಹಾಲು ಬಂದಿತೇ ಬೆಣ್ಣೆ ಬಂದಿತೇ|
ವಿಷವು ಬಂದಿತೇ ಅಮೃತ|
ಬಂದಿತೆ ಕೋಪತಾಪದ ಬಿರುಸು|
ಮಾತಿನ ಮಥನ ಕಾಲದಲಿ? ||

ಕೋಟಿ ಜನರ ಸಂಕಷ್ಟ ನೀಗುವ|
ಮೇಟಿ ಮಾಡುವ ಕೃಷಿಕ|
ಮಂದಿಯ ತಾಪ ಕಳೆವ|
ವಿವೇಕ ಮೆರೆವುದೇ ಚರ್ಚೆಕಾಲದಲಿ? ||

ಈ ಕವನ ಮತ್ತು ಅದರ ವಿಶ್ಲೇಷಣೆಯ ವಿಡಿಯೋ  👇👇  ಇಲ್ಲಿದೆ. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌  ( https://youtu.be/VmUnrkngtQE ) ಕ್ಲಿಕ್‌ ಮಾಡಿರಿ.  ಮೇಲಿನ ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.


PARYAYA: ಸುವರ್ಣ ಸೌಧದ ಕಾರಂಜಿ ಕೇಳುತ್ತಿದೆ…:   ಸುವರ್ಣ ಸೌಧದ ಕಾರಂಜಿ ಕೇಳುತ್ತಿದೆ … ಇದು ಸುವರ್ಣ ನೋಟ ಕುಂ ದಾ ನಗರಿ ಎಂಬುದಾಗಿಯೇ ಹೆಸರು ಪಡೆದಿರುವ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧ...

Tuesday, July 24, 2018

10 ವರ್ಷ ಹಿಂದೆಯೇ ‘ಮಂಗಳ’ಕ್ಕೆ ಹೋಗಿದ್ದ!


·         10  ವರ್ಷ ಹಿಂದೆಯೇ ‘ಮಂಗಳ’ಕ್ಕೆ ಹೋಗಿದ್ದ!

·         ಹೌದು. ಅನುಪಕೃಷ್ಣ  ಈಗಲ್ಲ, ದಶಕದಷ್ಟು ಹಿಂದೆಯೇ ಮಂಗಳ ಗ್ರಹಕ್ಕೆ ಹೋಗಿದ್ದ.
·         ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.

ನಾನು ವಿಜ್ಞಾನಿಯಾದೆ

ನನಗೆ ಒಂದು ಕನಸುಬಿತ್ತು
ಆದೆ ನಾನು ದೊಡ್ಡ ವಿಜ್ಞಾನಿ
ಇಳಿದೆ ಮಂಗಳಗ್ರಹದಲ್ಲಿ
ತೆಗೆದ ಅದರ ಚಿತ್ರವನ್ನು
ಮತ್ತೆ ಮರಳಿದೆ ಅಲ್ಲಿಂದ
ನನ್ನ ನೋಡಲು ನೆರೆದರು ಜನರೆಲ್ಲ
ಉಬ್ಬಿದೆ ನಾನು ಹರುಷದಲಿ
ಅಮ್ಮ ಕರೆದರು ರಭಸದಲಿ.

- ಅನುಪ ಕೃಷ್ಣ ಭಟ್ ನೆತ್ರಕೆರೆ
Posted 8th June 2008 by PARYAYA
Labels: Poems/ Kavana


0

ಇದು 2008ರ ಜೂನ್ 8ರಂದು ಪರ್ಯಾಯ ಬ್ಲಾಗಿನಲ್ಲಿ ಅವನೇ ಚಿತ್ರಿಸಿದ ಮೇಲಿನ ಚಿತ್ರ ಸಹಿತವಾಗಿ ಪ್ರಕಟವಾದ ಕವನ.