ನಾನು ಮೆಚ್ಚಿದ ವಾಟ್ಸಪ್

Sunday, April 22, 2018

ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲು: ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ


ಮಕ್ಕಳ ಮೇಲಿನ ಅತ್ಯಾಚಾಕ್ಕೆ ಗಲ್ಲು:
ಸುಗ್ರೀವಾಜ್ಞೆಗೆ ರಾಷ್ಟ್ರಪತಿ
ಅಂಕಿತ

ನವದೆಹಲಿ: ಹನ್ನೆರಡು ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆವಿಧಿಸುವ ಕಠಿಣ ಕಾನೂನು ಜಾರಿಗೆ ತರಲು ಕೇಂದ್ರ ಸರಕಾರ ಹೊರಡಿಸಿದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ಅವರು 22 ಏಪ್ರಿಲ್ 2018ರ ಭಾನುವಾರ ಅಂಕಿತ ಹಾಕಿದರು.

ಇದರಿಂದಾಗಿ ಈದಿನದಿಂದಲೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಜಾರಿಗೆ ಬಂದಂತಾಗಿದೆ.

 ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ)ಗೆ ತಿದ್ದುಪಡಿ ಮಾಡಲು ಸುಗ್ರೀವಾಜ್ಞೆ ತರಲಾಗಿದ್ದು, ಐದು ದಿನಗಳ ವಿದೇಶ ಪ್ರವಾಸಕ್ಕಾಗಿ ತೆರಳಿದ್ದ ಪ್ರಧಾನಿ ಮೋದಿ 21 ಏಪ್ರಿಲ್ 2018ರ ಶನಿವಾರ ದೆಹಲಿಗೆ ವಾಪಸಾದ ಒಂದೆರಡು ಗಂಟೆಗಳಲ್ಲೇ ಕೇಂದ್ರ ಸಚಿವ ಸಂಪುಟ ತುರ್ತು ಸಭೆ ನಡೆಸಿ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿ ಅದನ್ನು ರಾಷ್ಟ್ರಪತಿಗಳ  ಅಂಕಿತಕ್ಕಾಗಿ ಕಳುಹಿಸಿದ್ದರು.

ಜಮ್ಮು ಮತ್ತು ಕಾಶ್ಮೀರದ ಕಥುವಾ,  ಗುಜರಾತಿನ ಸೂರತ್ನಗರದಲ್ಲಿ ನಡೆದ ಮಕ್ಕಳ ಮೇಲಿನ ಹಾಗೂ ಉನ್ನಾವ್ ಯುವತಿ ಮೇಲಿನ ಅತ್ಯಾಚಾರ ಪ್ರಕರಣಗಳ ಬಿಸಿ ತಾರಕಕ್ಕೇರಿರುವ ಬೆನ್ನಲ್ಲೇ ಸುಗ್ರೀವಾಜ್ಞೆ ಹೊರಡಿಸಲಾಯಿತು.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಂತಹ ಗರಿಷ್ಠ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಈಗಾಗಲೇ ಅಸ್ತಿತ್ವದಲ್ಲಿರುವಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಗೆ (ಪೋಸ್ಕೊ) ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿದೆ.

ಇದರೊಂದಿಗೆ ಅಪರಾಧ ಕಾಯ್ದೆ, ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ), ಸಾಕ್ಷ್ಯಗಳ ಸಂರಕ್ಷಣಾ ಕಾಯ್ದೆ ಕೂಡ ತಿದ್ದುಪಡಿಯಾಗಲಿವೆ.

ಎಲ್ಲೆಲ್ಲಿ ಏನೇನು ಬದಲಾವಣೆ?
ಕ್ರಿಮಿನಲ್ಕಾನೂನು
ಮಹಿಳೆಯರ ಮೇಲಿನ ಅತ್ಯಾಚಾರ: ಇನ್ನು ಮುಂದೆ ಕನಿಷ್ಠ 10 ವರ್ಷ ಸೆರೆವಾಸದ ಶಿಕ್ಷೆ. ಇದುವರೆಗೆ ಕನಿಷ್ಠ ಏಳು ವರ್ಷವಿತ್ತು, ಇನ್ನು ಮುಂದೆ ಇದು ಜೀವಾವಧಿವರೆಗೂ ವಿಸ್ತರಿಸಬಹುದು.
16 ವರ್ಷದೊಳಗಿನ ಸಂತ್ರಸ್ತೆ : ಶಿಕ್ಷೆಯ ಪ್ರಮಾಣ ಈಗಿರುವ 10ರಿಂದ 20 ವರ್ಷ ಅಥವಾ ಜೀವಾವಧಿವರೆಗೂ ವಿಸ್ತರಣೆ.
16 ವರ್ಷದೊಳಗಿನ ಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರ‌: ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ.
12 ವರ್ಷದೊಳಗಿನ ಮಕ್ಕಳು ಮರಣದಂಡನೆ.
12 ವರ್ಷದೊಳಗಿನ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರಗಲ್ಲುಶಿಕ್ಷೆ.
ಸಂಪೂರ್ಣ ತನಿಖೆಗೆ 2 ತಿಂಗಳ ಗಡುವು
ವಿಚಾರಣೆಗೆ 2 ತಿಂಗಳ ಕಾಲಾವಧಿ
ಮೇಲ್ಮನವಿಯ ಇತ್ಯರ್ಥಕ್ಕೆ ಆರು ತಿಂಗಳ ಗಡುವು

No comments:

Post a Comment