Saturday, March 24, 2018

ಇಂದಿನ ಇತಿಹಾಸ History Today ಮಾರ್ಚ್ 23

          ಇಂದಿನ ಇತಿಹಾಸ History Today  ಮಾರ್ಚ್ 23
2018: ನವದೆಹಲಿ: ರಾಜ್ಯಸಭೆಯ ೫೯ ಸ್ಥಾನಗಳಿಗಾಗಿ  ರಾಜ್ಯ ವಿಧಾನಮಂಡಲಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ ಎರಡನೇ ಸ್ಥಾನ ಗಳಿಸಿತು.  ಕರ್ನಾಟಕದಲ್ಲಿ ೩ ಸ್ಥಾನಗಳನ್ನು ಕಾಂಗ್ರೆಸ್ ಮತ್ತು ೧ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡವು.  ೫೯ ಸ್ಥಾನಗಳ ಪೈಕಿ ಬಿಜೆಪಿ 28, ಕಾಂಗ್ರೆಸ್ ೧೦,  ಏಐಟಿಸಿ ೪, ಬಿಜೆಡಿ ೩, ಟಿಆರ್ ಎಸ್ ೩, ಆರ್ ಜೆಡಿ ೨, ಟಿಡಿಪಿ ೨, ವೈಎಸ್ ಆರ್ ಸಿಪಿ ೧, ಜೆಡಿ(ಯು) ೨, ಸಮಾಜವಾದಿ ಪಕ್ಷ ೧ ಮತ್ತು ಇತರರು ೩ ಸ್ಥಾನಗಳನ್ನು ಗೆದ್ದುಕೊಂಡರು.  ಉತ್ತರ ಪ್ರದೇಶದ ೧೦ ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ಒಂದು ಸ್ಥಾನವನ್ನು ಸಮಾಜವಾದಿ ಪಕ್ಷ ಬಗಲಿಗೆ ಹಾಕಿಕೊಂಡಿದೆ. ಇದರೊಂದಿಗೆ ರಾಜ್ಯಸಭೆಗೆ ೫೯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳೊಂದಿಗೆ ಅಗ್ರಗಣ್ಯ ಸ್ಥಾನವನ್ನು ಪಡೆಯಿತು. ೧೦ ಸ್ಥಾನ ಪಡೆದ ಕಾಂಗ್ರೆಸ್ ೨ನೇ ಸ್ಥಾನ ಪಡೆಯಿತು.  ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಆಯ್ಕೆಯಾದವರು: ಅರುಣ್ ಜೇಟ್ಲಿ, ಅಶೋಕ ಬಾಜಪೇಯಿ, ವಿಜಯ ಪಾಲ್ ಸಿಂಗ್ ತೋಮರ್, ಸಕಲ್ ದೀಪ್ ರಾಜ್‌ಭರ್, ಕಾಂತ ಕರ್ದಮ್, ಅನಿಲ್ ಜೈನ್, ಹರ್ನಾತ್ ಸಿಂಗ್ ಯಾದವ್ ಮತ್ತು ಜಿವಿಎಲ್ ನರಸಿಂಹ ರಾವ್. ಸಮಾಜವಾದಿ ಪಕ್ಷದಿಂದ ಜಯಾ ಬಚ್ಚನ್ ಅವರು ವಿಜಯಿಯಾದರು. ಎಲ್ಲ ಬಿಜೆಪಿ ಅಭ್ಯರ್ಥಿಗಳು ೩೯ ಮತಗಳನ್ನು ಪಡೆದರೆ, ಸಮಾಜವಾದಿ ಪಕ್ಷದ ಜಯಾ ಬಚ್ಚನ್ ೩೮ ಮತಗಳನ್ನು ಪಡೆದರು.  ೨೪೫ ಸದಸ್ಯ ಬಲದ ರಾಜ್ಯಸಭೆಯಲ್ಲಿ ಪ್ರಸ್ತುತ ಬಿಜೆಪಿ ನೇತೃತ್ವದ ಎನ್ ಡಿಎ ೭೮ ಸ್ಥಾನಗಳನ್ನು ಹೊಂದಿದ್ದರೆ, ಕಾಂಗೆಸ್ ನೇತೃತ್ವದ ಯುಪಿಎ ೫೭ ಸ್ಥಾನಗಳನ್ನೂ, ಇತರರು ೯೯ ಸ್ಥಾನಗಳನ್ನೂ ಹೊಂದಿದ್ದರು.  ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ಸಿನ ಅಭ್ಯರ್ಥಿಗಳಾದ ಎಲ್. ಹನುಮಂತಯ್ಯ, ನಸೀರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ರಾಜ್ಯಸಭೆಗೆ ಆಯ್ಕೆಯಾದರು. ಚುನಾವಣಾ ಅಧಿಕಾರಿ ಕಾಂಗ್ರೆಸ್ ಜೊತೆ ಶಾಮೀಲಾಗಿದ್ದಾರೆ ಎಂದು ಆಪಾದಿಸಿದ ಬಳಿಕ ಜೆಡಿ(ಎಸ್) ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿತ್ತು. ರಾಜೀವ್ ಚಂದ್ರಶೇಖರ್ ಅವರು ಈದಿನದ ಗೆಲುವಿನೊಂದಿಗೆ ಸತತ ಮೂರನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು.  ಆದರೆ ಬಿಜೆಪಿ ಸಂಸದರಾಗಿ ರಾಜ್ಯಸಭೆ ಪ್ರವೇಶಿಸಿದ್ದು ಇದು ಮೊದಲನೇ ಬಾರಿ.  ೧೦ ರಾಜ್ಯಗಳಲ್ಲಿ ೫೮ ಸ್ಥಾನಗಳ ಪೈಕಿ ೩೩ ಅಭ್ಯರ್ಥಿಗಳು ಮಾರ್ಚ್ ೧೫ರಂದು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಪ್ರಕಟಿಸಲಾಗಿತ್ತು. ಉಳಿದ ೨೫ ಸ್ಥಾನಗಳಿಗೆ ೬ ರಾಜ್ಯಗಳಲ್ಲಿ ಈದಿನ ಚುನಾವಣೆ ನಡೆದಿತ್ತು. ರವಿಶಂಕರ ಪ್ರಸಾದ್ ಮತ್ತು ಪ್ರಕಾಶ ಜಾವಡೇಕರ್ ಸಹಿತವಾಗಿ ಏಳು ಕೇಂದ್ರ ಸಚಿವರು ಅವಿರೋಧ ಆಯ್ಕೆಯಾದವರಲ್ಲಿ ಸೇರಿದ್ದರು.  ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಜಾರ್ಖಂಡ್, ಛತ್ತೀಸ್ ಗಢ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈದಿನ ಚುನಾವಣೆ ನಡೆಯಿತು. ಛತ್ತೀಸ್ ಗಢದ ಏಕೈಕ ರಾಜ್ಯಸಭಾ ಸ್ಥಾನವನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್‍ಯದರ್ಶಿ ಸರೋಜ್ ಪಾಂಡೆ ಗೆದ್ದುಕೊಂಡರು.  ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ ಎಸ್ ಎಲ್ಲ ಮೂರೂ ಸ್ಥಾನಗಳನ್ನು ಗೆದ್ದುಕೊಂಡರೆ, ಜಾಖಂಡಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ೧ ಸ್ಥಾನ ಹಂಚಿಕೊಂಡವು.  ಪಶ್ಚಿಮ ಬಂಗಾಳದಲ್ಲಿ ನಾಲ್ವರು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳು ಒಬ್ಬ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದರು.  ತೃಣಮೂಲ ಕಾಂಗ್ರೆಸ್ ಬೆಂಬಲದೊಂದಿಗೆ ಕಾಂಗ್ರೆಸ್ಸಿನ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಚುನಾಯಿತರಾದರೆ, ಮೊಹಮ್ಮದ್ ನದಿಮುಲ್ ಹಕ್, ಶಂತನು ಸೆನ್, ಅಭೀರ್ ರಂಜನ್ ಬಿಸ್ವಾಸ್ ಮತ್ತು ಸುಭಾಸಿಸ್ ಚಕ್ರಬೊರ್ತಿ ಅವರು ಟಿಎಂಸಿಯಿಂದ ಆಯ್ಕೆಯಾದರು.  ಉತ್ತರ ಪ್ರದೇಶದಲ್ಲಿ ಮತಗಳ ಎಣಿಕೆ ಎರಡು ಗಂಟೆಗಳಷ್ಟು ವಿಳಂಬವಾಗಿ ಆರಂಭಗೊಂಡಿತು. ’ಮತದಾನಕ್ಕೆ ಸಂಬಂಧಿಸಿದಂತೆ ಬಂದ ಕೆಲವು ದೂರುಗಳ ಹಿನ್ನೆಲೆಯಲ್ಲಿ ಮತಗಳ ಎಣಿಕೆಯನ್ನು ತಡೆ ಹಿಡಿಯಲಾಯಿತು ಎಂದು ಉತ್ತರ ಪ್ರದೇಶದ ಜಂಟಿ ಚುನಾವಣಾ ಅಧಿಕಾರಿ ಆರ್.ಸಿ. ರೈ ಹೇಳಿದರು.  ಉತ್ತರ ಪ್ರದೇಶದ ೪೦೩ ಶಾಸಕರ ಪೈಕಿ ೪೦೦ ಶಾಸಕರು ಮತದಾನದಲ್ಲಿ ಪಾಲ್ಗೊಂಡಿದ್ದರು. ಬಿಎಸ್ಪಿಯ ಮುಖ್ತಾರ್ ಅನ್ಸಾರಿ ಮತ್ತು ಸಮಾಜವಾದಿ ಪಕ್ಷದ ಶಾಸಕ ಹರಿ ಓಂ ಯಾದವ್ ಅವರು ಸೆರೆಮನೆಯಲ್ಲಿ ಇರುವುದರಿಂದ ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಬಿಜ್ನೋರಿನ ನೂರ್ ಪುರ ಕ್ಷೇತ್ರವು ಬಿಜೆಪಿ ಶಾಸಕ ಲೋಕೇಂದ್ರ ಪ್ರತಾಪ್ ಸಿಂಗ್ ನಿಧನದ ಕಾರಣ ಖಾಲಿಯಾಗಿತ್ತು.  ಜನತಾದಳ (ಯು) ಶರದ್ ಯಾದವ್ ಬಣದ ರಾಜ್ಯ ಅಧ್ಯಕ್ಷ ಎಂ.ಪಿ. ವೀರೇಂದ್ರ ಕುಮಾರ್ ಅವರು ಈದಿನ ಕೇರಳದಿಂದ ರಾಜ್ಯಸಭೆಗೆ ಆಯ್ಕೆಯಾದರು. ವೀರೇಂದ್ರ ಕುಮಾರ್ ಅವರಿಗೆ ಸಿಪಿಐ (ಎಂ) ನೇತೃತ್ವದ ಎಲ್ ಡಿಎಫ್ ಬೆಂಬಲ ನೀಡಿದ್ದು ೮೯ ಮತಗಳು ಲಭಿಸಿದರೆ, ವಿರೋಧಿ ಯುಡಿಎಫ್ ಅಭ್ಯರ್ಥಿಗೆ ೪೦ ಮತಗಳು ಲಭಿಸಿದವು.  ಕರ್ನಾಟಕದಲ್ಲಿ ಅಕ್ರಮ ಮತದಾನ ಆರೋಪ:  ಕರ್ನಾಟಕದಲ್ಲಿ ಚುನಾವಣಾ ಅಧಿಕಾರಿ ಆಡಳಿತಾರೂಢ ಕಾಂಗ್ರೆಸ್ ಜೊತೆಗೆ ಶಾಮೀಲಾಗಿದ್ದಾರೆ ಎಂದು ಆಪಾದಿಸಿದ ಜನತಾದಳ (ಎಸ್) ರಾಜ್ಯದಲ್ಲಿ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿತ್ತು. ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು ಅಡ್ಡ ಮತದಾನ ಮಾಡಿದ ಬಳಿಕ ಚುನಾವಣಾ ಅಧಿಕಾರಿ ಅವರಿಗೆ ಮರುಮತದಾನ ಮಾಡಲು ಅವಕಾಶ ನೀಡಿದರು ಎಂದು ಜೆಡಿ (ಎಸ್) ಆಪಾದಿಸಿತು.  ಏನಿದ್ದರೂ, ಜನತಾದಳ ಆರೋಪವನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತದಾನ ಮಾಡುವ ಮುನ್ನವೇ ಪಕ್ಷದ ಇಬ್ಬರು ಶಾಸಕರಿಗೆ ತಾವು ಮತಪತ್ರದಲ್ಲಿ ’ತಪ್ಪು ಮಾಡಿದೆವು ಎಂದು ಅರಿವಾಗಿತ್ತು. ಹೀಗಾಗಿ ಅವರು ಇನ್ನೊಂದು ಮತಪತ್ರ ತೆಗೆದುಕೊಂಡು ಮತದಾನ ಮಾಡಿದರು. ಹೀಗೆ ಮತಪತ್ರ ಪಡೆಯಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಪ್ರತಿಪಾದಿಸಿದರು.  ಕರ್ನಾಟಕದ ಚುನಾವಣಾ ಕಣದಲ್ಲಿ ೪ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದಿಂದ ಮೂವರು ಮತ್ತು ಬಿಜೆಪಿ ಹಾಗೂ ಜನತಾದಳ (ಎಸ್) ಪಕ್ಷಗಳಿಂದ ತಲಾ ಒಬ್ಬರಂತೆ ಒಟ್ಟು ಐವರು ಅಭ್ಯರ್ಥಿಗಳಿದ್ದರು.  ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿದ್ದಾಗ, ಜನತಾದಳ (ಎಸ್) ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ಸಿನ ಇಬ್ಬರು ಹಿರಿಯ ಶಾಸಕರು ಮತಪತ್ರದಲ್ಲಿ ಬೇರೆ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಹಾಕುವ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಅಡ್ಡ ಮತದಾನ ಮಾಡಿದ್ದರು ಎಂದು ಹೇಳಿದರು.  ಆದರೆ ಆಡಳಿತ ಪಕ್ಷದ ಏಜೆಂಟರ ಮನವಿ ಮೇರೆಗೆ ಚುನಾವಣಾ ಅಧಿಕಾರಿ ಬಳಿಕ ಇಬ್ಬರೂ ಶಾಸಕರಿಗೆ ಹೊಸ ಮತಪತ್ರ ನೀಡಿ ಪುನಃ ಮತದಾನ ಮಾಡಲು ಅವಕಾಶ ಕಲ್ಪಿಸಿದರು ಎಂದು ಕುಮಾರ ಸ್ವಾಮಿ ವರದಿಗಾರರಿಗೆ ತಿಳಿಸಿದರು.  ‘ಅಕ್ರಮ ಮತದಾನ ನಡೆಯುತ್ತಿದ್ದು ಇದನ್ನು ನಾವು ಪ್ರತಿಭಟಿಸುತ್ತಿದ್ದೇವೆ ಎಂದು ಅವರು ನುಡಿದರು. ಚುನಾವಣಾ ವೀಕ್ಷಕರಿಗೆ ಚುನಾವಣೆ ಪ್ರಕ್ರಿಯೆ ರದ್ದು ಪಡಿಸುವಂತೆ ಮನವಿ ಮಾಡಲಾಗಿದೆ ಎಂದೂ ಅವರು ಹೇಳಿದರು.  ಕಾಗೋಡು ತಿಮ್ಮಪ್ಪ ಮತ್ತು ಚಿಂಚನಸೂರ್ ಅವರಿಬ್ಬರೂ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಮತದಾನ ಮಾಡಬಯಸಿದ್ದರು. ಆದರೆ ಚುನಾವಣಾ ಅಧಿಕಾರಿ ಸರ್ಕಾರದ ಜೊತೆ ಶಾಮೀಲಾಗಿದ್ದಾರೆ ಎಂದು ಅವರು ದೂರಿದರು. ಕುಮಾರ ಸ್ವಾಮಿ ಆರೋಪವನ್ನು ನಿರಾಕರಿಸಿದ ಸಿದ್ದರಾಮಯ್ಯ ’ಅವರು (ಜೆಡಿ-ಎಸ್) ಭ್ರಮನಿರಸನಗೊಂಡಂತೆ ಕಾಣುತ್ತಿದೆ. ಅವರು ಎಲ್ಲ ಪ್ರಯತ್ನ ಮಾಡಿದರು. ಅವರು ಕೋರ್ಟಿಗೂ (ಏಳು ಮಂದಿ ಜೆಡಿ-ಎಸ್ ಬಂಡಾಯ ಶಾಸಕರ ವಿಷಯಕ್ಕೆ ಸಂಬಂಧಿಸಿದಂತೆ) ಹೋದರು. ಕೋರ್ಟಿನಲ್ಲಿ ವಿಫಲಗೊಂಡರು. ಈಗ ಭ್ರಮನಿರಸನಗೊಂಡು ಈ ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
2018: ನವದೆಹಲಿ: ೨೦ ಮಂದಿ ಆಮ್ ಆದ್ಮಿ ಪಕ್ಷದ (ಆಪ್) ಶಾಸಕರನ್ನು ಅನರ್ಹಗೊಳಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೊರಡಿಸಿದ್ದ ಪ್ರಕಟಣೆಯನ್ನು ದೆಹಲಿ ಹೈಕೋರ್ಟ್ ರದ್ದು ಪಡಿಸಿತು.  ಸಂಸದೀಯ ಕಾರ್ಯದರ್ಶಿಗಳ ಹುದ್ದೆಯನ್ನು ಹೊಂದುವ ಮೂಲಕ ಈ ಶಾಸಕರು ಲಾಭದ ಹುದ್ದೆ ಹೊಂದಿರುವ ಆಪಾದನೆಯ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ಭಾರತದ ಚುನಾವಣಾ ಆಯೋಗವು (ಇಸಿಐ) ಶಿಫಾರಸು ಮಾಡಿದ್ದುದನ್ನು ಅನುಸರಿಸಿ ರಾಷ್ಟ್ರಪತಿ ಈ ಪ್ರಕಟಣೆ ಹೊರಡಿಸಿದ್ದರು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಚಂದ್ರಶೇಖರ್ ಅವನ್ನು ಒಳಗೊಂಡ ಪೀಠವು ಸೂಕ್ತವಾಗಿ ಅಹವಾಲು ಮಂಡನೆಗೆ ಅವಕಾಶ ನೀಡಿ ಹೊಸದಾಗಿ ಮರುಪರಿಶೀಲಿಸುವಂತೆ ನಿರ್ದೇಶಿಸಿ ವಿಷಯವನ್ನು ಭಾರತದ ಚುನಾವಣಾ ಆಯೋಗಕ್ಕೆ ವಾಪಸ್ ಕಳುಹಿಸಿತು.  ಅರ್ಹತೆಯ ಬಗ್ಗೆ ತಮ್ಮ ವಾದ ಮಂಡನೆಗೆ ಅವಕಾಶ ನೀಡದ ಅಥವಾ ಮೌಖಿಕ ಅಹವಾಲು ಮಂಡಿಸಲು ಅವಕಾಶ ನೀಡದೇ, ಚುನಾವಣಾ ಆಯೋಗವು ಜನವರಿ ೧೯ರಂದು ಮಾಡಿರುವ ಶಿಫಾರಸು ಮೌಲ್ಯ ರಹಿತವಾದ ಶಿಫಾರಸು ಎಂದು ಕೋರ್ಟ್ ಹೇಳಿತು.  ಚುನಾವಣಾ ಆಯೋಗದ ಮುಂದೆ ತಮ್ಮ ನಿಲುವನ್ನು ವಿವರಿಸಲು ಅವಕಾಶವನ್ನೇ ನೀಡದೇ ಇರುವುದರಿಂದ ಭಾರತದ ಚುನಾವಣಾ ಆಯೋಗವು ರಾಷ್ಟ್ರಪತಿಗೆ ಮಾಡಿರುವ ಶಿಫಾರಸು ಸಹಜ ನ್ಯಾಯದ ಸಂಪೂರ್ಣ ಉಲ್ಲಂಘನೆ ಎಂದು ಶಾಸಕರು ನ್ಯಾಯಾಲಯಕ್ಕೆ ತಿಳಿಸಿದ್ದರು.  ತಮ್ಮ ಶಿಫಾರಸನ್ನು ಸಮರ್ಥಿಸಿದ್ದ ಭಾರತದ ಚುನಾವಣಾ ಆಯೋಗವು ಶಾಸಕರು ತಾವು ಲಾಭದ ಹುದ್ದೆ ಹೊಂದಿಲ್ಲ ಎಂದು ಪ್ರತಿಪಾದಿಸುವಂತಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿತ್ತು.  ಜನವರಿ ೨೪ರಂದು ಹೈಕೋರ್ಟ್ ಪ್ರಕಟಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಆದರೆ, ಜನವರಿ ೨೯ರವರೆಗೆ ಉಪಚುನಾವಣೆ ದಿನಾಂಕಗಳನ್ನು ಘೋಷಿಸದಂತೆ ಚುನಾವಣಾ ಆಯೋUವನ್ನು ನಿರ್ಬಂಧಿಸಿತ್ತು. ಜೊತೆಗೆ, ಅನರ್ಹತೆ ಪ್ರಶ್ನಿಸಿ ಶಾಸಕರು ಸಲ್ಲಿಸಿರುವ ಅರ್ಜಿ ಬಗ್ಗೆ ಉತ್ತರ ಸಲ್ಲಿಸುವಂತೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.  ಹೈಕೋರ್ಟ್ ತೀರ್ಪಿನಿಂದ ಆಮ್ ಆದ್ಮಿ ಪಕ್ಷಕ್ಕೆ ಸಧ್ಯಕ್ಕೆ ಭಾರಿ ನಿರಾಳತೆ ಲಭಿಸಿತು.  ಲಾಭದಾಯಕ ಹುದ್ದೆ ಹೊಂದಿರುವರೆಂಬ ಆರೋಪಕ್ಕೆ ಗುರಿಯಾಗಿದ್ದ  ಇಪ್ಪತ್ತು ಆಪ್ ಶಾಸಕರು ಸರಕಾರದ ಒಂದು ಪೈಸೆಯನ್ನು ಕೂಡ ಸಂಭಾವನೆಯಾಗಿ ತೆಗೆದುಕೊಂಡಿಲ್ಲ; ಆದುದರಿಂದ ಅವರ ಅನರ್ಹತೆ ಸರಿಯಲ್ಲ ಎಂದು ಆಪ್ ವಾದಿಸಿತ್ತು.  ಸತ್ಯ ಗೆದ್ದಿದೆ- ಕೇಜ್ರಿವಾಲ್:  ‘ಸತ್ಯ ಗೆದ್ದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಟ್ವೀಟ್ ಮಾಡಿದ್ದಾರೆ. ದೆಹಲಿಯ ಚುನಾಯಿತ ಪ್ರತಿನಿಧಿಗಳನ್ನು ಅಸಮರ್ಪಕ ರೀತಿಯಲ್ಲಿ ಅನರ್ಹಗೊಳಿಸಲಾಗಿತ್ತು. ದೆಹಲಿ ಹೈಕೋರ್ಟ್ ಜನರಿಗೆ ನ್ಯಾಯ ಒದಗಿಸಿದೆ. ಇದಕ್ಕಾಗಿ ನಾನು ದೆಹಲಿಯ ಜನರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.  ಆದರೆ, ‘ಇದು ತಾತ್ಕಾಲಿಕ ತೀರ್ಪು. ಎಎಪಿ ಶಾಸಕರು ಸಂಭ್ರಮಿಸುವಂತಿಲ್ಲ. ಅವರು ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಪ್ರತಿಕ್ರಿಯಿಸಿದರು.
2018: ಪ್ಯಾರಿಸ್‌ : ನೈಋತ್ಯ ಫ್ರಾನ್ಸ್ಸೂಪರ್ಮಾರ್ಕೆಟಿನ ಒಂದೇ ಸ್ಥಳದಲ್ಲಿ ಈದಿನ ಎರಡು ಪ್ರತ್ಯೇಕ ಘಟನೆಗಳಲ್ಲಿ  ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ಹಾರಾಟದಲ್ಲಿ ಇಬ್ಬರು ಮೃತರಾಗಿ ಹಲವರು ಒತ್ತೆ ಸೆರೆಗೆ ಸಿಲುಕಿದರು. ದಾಳಿಕೋರನು ತಾನು ಐಸಿಸ್ಉಗ್ರ ಸಂಘಟನೆಗೆ ನಿಷ್ಠೆ ಹೊಂದಿರುವವನು ಎಂದು ಹೇಳಿಕೊಂಡಿರುವುದಾಗಿ ವರದಿಯಾಯಿತು. ಅಪರಿಚಿತ ಶಸ್ತ್ರಧಾರಿ ದಾಳಿಕೋರನು ಹಲವು ಮಂದಿಯನ್ನು ಸೂಪರ್ಮಾರ್ಕೆಟ್ಒಳಗೆ ಒತ್ತೆ ಸೆರೆಯಲ್ಲಿ ಇರಿಸಿಕೊಂಡ ಮತ್ತು ತಾನು ಐಸಿಸ್ಉಗ್ರ ಸಂಘಟನೆಗೆ ನಿಷ್ಠೆ ಹೊಂದಿರುವವನೆಂದು ಹೇಳಿಕೊಂಡ ಎಂಬುದಾಗಿ ಬಿಎಫ್ಎಂ  ಟಿವಿ ಫ್ರೆಂಚ್ಅಧಿಕಾರಿಗಳನ್ನು ಉಲ್ಲೇಖೀಸಿ ವರದಿ ಮಾಡಿತು.  ದಿ ಯೂರೋಪ್‌ 1 ರೇಡಿಯೋ ಕೂಡ ದಾಳಿಕೋರ ಉಗ್ರನು ಸೂಪರ್ಮಾರ್ಕೆಟ್ನಲ್ಲಿ ಹಲವರನ್ನು ಒತ್ತೆ ಸೆರೆಯಲ್ಲಿರಿಸಿಕೊಂಡಿದ್ದು ಆತನ ಗುಂಡಿಗೆ ಇಬ್ಬರು ಬಲಿಯಾಗಿರುವುದಾಗಿ ದೃಢೀಕರಿಸಿತು.  ಎಎಫ್ಪಿ ವರದಿಯ ಪ್ರಕಾರ ಕ್ಯಾರ್ಕೆಸೋನ್ಪಟ್ಟಣದಲ್ಲಿ ಬಂದೂಕುಧಾರಿ ದಾಳಿಕೋರನು ಒಬ್ಬ ಪೊಲೀಸ್ಸಿಬ್ಬಂದಿಗೆ ಗುಂಡೆಸೆದಿದ್ದಾನೆ; ಸೂಪರ್ಮಾರ್ಕೆಟ್ನಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿ ಹಲವರನ್ನು ತನ್ನ ಒತ್ತೆಸೆರೆಯಲ್ಲಿ ಇರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿತು. ದಾಳಿಕೋರನು ಬೆಳಗ್ಗೆ  ಸುಮಾರು 11.15 ಹೊತ್ತಿಗೆ ಸೂಪರ್ಮಾರ್ಕೆಟ್ಪ್ರವೇಶಿಸಿದ.  ಅಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿದ ಎಂದು ಟ್ರೆಬಿಸ್ಪ್ರಕರಣದ ಬಗ್ಗೆ ಮೂಲಗಳು ತಿಳಿಸಿದವು.  ಘಟನೆಯನ್ನು ಅನುಸರಿಸಿ ಸೂಪರ್ಮಾರ್ಕೆಟ್ಪ್ರದೇಶಕ್ಕೆ ಈಗ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಯಿತು.
2018: ನವದೆಹಲಿ:  ನಕಲಿ ದಾಖಲೆಗಳ ಆಧಾರದಲ್ಲಿ ಕಿಸಾನ್ಕ್ರೆಡಿಟ್ಕಾರ್ಡ್‌ (ಕೆಸಿಸಿ) ಮತ್ತು ಮೀನು ಸಾಕಣೆ ಸಾಲಗಳನ್ನು ನೀಡುವ ಮೂಲಕ ಐಡಿಬಿಐ ಬ್ಯಾಂಕಿಗೆ 445.32 ಕೋಟಿ ರೂ. ವಂಚನೆ ಎಸಗಿದ ಆರೋಪದ ಮೇಲೆ ಸಿಬಿಐ, ಐಡಿಬಿಐ ಬ್ಯಾಂಕಿನ ಓರ್ವ ಮಾಜಿ ಜನರಲ್ಮ್ಯಾನೇಜರ್ಮತ್ತು ಇತರ 30 ಮಂದಿಯ ವಿರುದ್ಧ  ಕೇಸು ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದರು.  2009ರಿಂದ 2012 ವರೆಗಿನ ಅವಧಿಯಲ್ಲಿ ಒಟ್ಟು 21 ಸಮೂಹಗಳಲ್ಲಿ ಒಳಗೊಂಡ 220 ಸಾಲಗಾರರಿಗೆ 192.98 ಕೋಟಿ ರೂ. ಸಾಲವನ್ನು ಮಾಜಿ ಜನರಲ್ಮ್ಯಾನೇಜರ್ಬಟ್ಟು ರಾಮ ರಾವ್ಅವರೊಂದಿಗಿನ ಕ್ರಿಮಿನಲ್ಸಂಚಿನಲ್ಲಿ ನಕಲಿ ದಾಖಲೆಗಳು ಮತ್ತು ಅತ್ಯಧಿಕ ಮೌಲ್ಯ ನಿಗದಿಸಲ್ಪಟ್ಟ ಹೆಚ್ಚುವರಿ ನಕಲಿ  ಭದ್ರತೆಗಳ ಆಧಾರದಲ್ಲಿ ನೀಡಲಾಗಿತ್ತು. ಮರುಪಾವತಿಯಾಗದ ಸಾಲ 2017 ಸೆ.30 ಪ್ರಕಾರ 445.32 ಕೋಟಿ ರೂ.ಗೆ ಬೆಳೆದಿತ್ತು. ಮೂಲಕ ಅದು ಅನುತ್ಪಾದಕ ಆಸ್ತಿ (ಎನ್ಪಿಎ) ಎಂದು ಪರಿಗಣಿತವಾಗಿತ್ತು.  ಸಾಲಗಾರರು ಬೃಹತ್ಮೊತ್ತದ ಸಾಲವನ್ನು ನಕಲಿ ದಾಖಲೆಗಳ ಆಧಾರದಲ್ಲಿ ಪಡೆಯುವಲ್ಲಿ ಐಡಿಬಿಐ ಬ್ಯಾಂಕಿನ ಬಶೀರ್ಬಾಗ್ಶಾಖೆಗೆ ನಿಯೋಜಿತರಾಗಿದ್ದ ರಾವ್‌, ಚೀಫ್ ಜನರಲ್ಮ್ಯಾನೇಜರ್‌ (ನಿವೃತ್ತ) ಆರ್ದಾಮೋದರನ್‌ (ದಕ್ಷಿಣ ಚೆನ್ನೈ) ಮತ್ತು ಬ್ಯಾಂಕಿನ ಮೌಲ್ಯ ವಿಶ್ಲೇಷಕ ಮಂಡಳಿಯ ಸದಸ್ಯರು ಶಾಮೀಲಾಗಿ ಕ್ರಿಮಿನಲ್ಸಂಚು ನಡೆಸಿದ್ದರು ಎಂದು ಸಿಬಿಐ ಹೇಳಿತು. ಸಾಲದ ಹಣವನ್ನು ಸಾಲಗಾರರು ನಿರ್ದಿಷ್ಟ ಉದ್ದೇಶಗಳಿಗೆ ಬಳಸದೆ ದುರುಪಯೋಗ ಮಾಡಿದ್ದಾರೆ ಎಂದು ಸಿಬಿಐ ಹೇಳಿತು.

2017: ನವದೆಹಲಿ: ಭಾರತೀಯ ಸೇನೆಯಲ್ಲಿನ ಹುಳುಕುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಗೊಳಿಸಿದ್ದ ಗಡಿ ಭದ್ರತಾ ಪಡೆಯ (ಬಿಎಸ್ಎಫ್‌) ಯೋಧ ತೇಜ್ಬಹದ್ದೂರ್ಯಾದವ್ಅವರು ಮೃತರಾಗಿದ್ದಾರೆ ಎಂಬ ಬಿಎಸ್ಎಫ್ಮತ್ತು ಯಾದವ್ಅವರ ಪತ್ನಿ ತಳ್ಳಿಹಾಕಿದರು. ಯಾದವ್ಅವರನ್ನು ಹೋಲುವ ಯೋಧರೊಬ್ಬರು ಮೃತಪಟ್ಟಂತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿನ ದಿನ ಹರಿದಾಡುತ್ತಿತ್ತು. ಯೋಧ ಕಣ್ಣು ಮುಚ್ಚಿರುವ ಹಾಗೂ ಮೂಗಿನಿಂದ ರಕ್ತ ಒಸರುತ್ತಿರುವ ಚಿತ್ರ ಫೇಸ್ಬುಕ್‌, ಟ್ವಿಟರ್ನಲ್ಲಿ ವೈರಲ್ಆಗಿತ್ತು. ಚಿತ್ರದೊಂದಿಗೆ ಯಾದವ್ಮೃತಪಟ್ಟಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆದರೆ, ಸುದ್ದಿಯನ್ನು ಬಿಎಸ್ಎಫ್ಮತ್ತು ಯಾದವ್ಪತ್ನಿ ಈದಿನ ತಳ್ಳಿಹಾಕಿದರು. ಯಾದವ್ಆರೋಗ್ಯವಾಗಿದ್ದಾರೆ ಎಂದು ಅವರು ಹೇಳಿದರು.ತೇಜ್ಬಹದ್ದೂರ್ ಯಾದವ್ಅವರು ಮೃತಪಟ್ಟಿದ್ದಾರೆ ಎಂಬುದು ಸುಳ್ಳು ಸುದ್ದಿ. ಅವರು ಸದ್ಯ ಆರೋಗ್ಯವಾಗಿದ್ದಾರೆ. ಅವರು ಈಗ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿದ್ದಾರೆಎಂದು ಬಿಎಸ್ಎಫ್ವಕ್ತಾರ ಶುಭೇಂದು ಭಾರದ್ವಾಜ್ತಿಳಿಸಿದರು.
2017: ನವದೆಹಲಿ: ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್‌) ಮಾಜಿ ಪ್ರಚಾರಕ ಸ್ವಾಮಿ ಅಸೀಮಾನಂದ ಅವರಿಗೆ ಹೈದರಾಬಾದ್ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ವಿಶೇಷ ನ್ಯಾಯಾಲಯವು  ಜಾಮೀನು ನೀಡಿತು. ಸದ್ಯ ಜೈಪುರ ಜೈಲಿನಲ್ಲಿರುವ ಅಸೀಮಾನಂದ ಅವರು ಕಾರಾಗೃಹದ ನಿಯಮಗಳನ್ನು ಪೂರೈಸಿ ಶೀಘ್ರದಲ್ಲೇ ಜೈಲಿನಿಂದ ಹೊರಬರಲಿದ್ದಾರೆ ಎಂದು ಅವರ ವಕೀಲ ಮನ್ಬೀರ್ರಾಥಿ ತಿಳಿಸಿದರು. ‘2014 ಸಂಜೋತಾ ಎಕ್ಸ್ಪ್ರೆಸ್ಸ್ಫೋಟ ಪ್ರಕರಣದಲ್ಲಿ ಇತ್ತೀಚೆಗೆ ಅವರಿಗೆ ಜಾಮೀನು ಸಿಕ್ಕಿದೆ. ಈಗ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕಿರುವುದರಿಂದ ಅವರು ಜೈಲಿನಿಂದ ಬಿಡುಗಡೆಯಾಗುವ ಕಾಲ ಹತ್ತಿರವಾಗಿದೆಎಂದು ವಕೀಲರು ಹೇಳಿದರು. 2007ರಲ್ಲಿ ನಡೆದಿದ್ದ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ಅಸೀಮಾನಂದ ಅವರನ್ನು  ಇದೇ ವರ್ಷದ ಮಾ.8 ರಂದು ವಿಶೇಷ ನ್ಯಾಯಾಲಯವು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಘಟನೆಯಲ್ಲಿ ಮೂರು ಜನ ಸಾವನ್ನಪ್ಪಿ 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
2017: ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಾಲ್ಕು ದಿನಗಳಿಂದ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಈದಿನ ಹಿಂತೆಗೆದುಕೊಂಡರು. ಪ್ರತಿಭಟನಾಕಾರ ಪರವಾಗಿ ಕೆಲ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿದರು. ಏಪ್ರಿಲ್‌ 10ರಂದು ಸಭೆ ನಡೆಸಿ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ಪಡೆಯಲಾಯಿತು.  ನಾಲ್ಕು ದಿನಗಳಿಂದ ಸ್ವಾತಂತ್ರ್ಯ ಉದ್ಯಾನ ಹಾಗೂ ಶೇಷಾದ್ರಿ ರಸ್ತೆಯಲ್ಲಿ ಬೀಡುಬಿಟ್ಟಿದ್ದ ಪ್ರತಿಭಟನಾಕಾರರು ಈದಿನ ರಾತ್ರಿ ತಂತಮ್ಮ ಊರುಗಳಿಗೆ ಹೋಗಲು ನಗರ ರೈಲು ನಿಲ್ದಾಣ ಹಾಗೂ ಬಸ್ನಿಲ್ದಾಣದಲ್ಲಿ ಜಮಾಯಿಸಿದ್ದರು.
2017: ಚೆನ್ನೈ: ತಮಿಳಿನ ಹಿರಿಯ ಲೇಖಕ ಅಶೋಕ ಮಿತ್ರನ್ (85) ಅವರು ಚೆನ್ನೈಯಲ್ಲಿ ನಿಧನರಾದರು. ಮಿತ್ರನ್ಅವರು 200ಕ್ಕೂ ಹೆಚ್ಚು ಸಣ್ಣ ಕತೆಗಳು, 8 ಕಾದಂಬರಿಗಳು ಹಾಗೂ ಸುಮಾರು 15 ಕಥನಗಳನ್ನು ರಚಿಸಿದ್ದಾರೆ. ಸ್ವಾತಂತ್ರ್ಯೋತ್ತರ ತಮಿಳು ಸಾಹಿತ್ಯಕ್ಕೆ ಅವರ ಕೊಡುಗೆ ಮಹತ್ವವಾದುದು ಎಂದು ವಿಮರ್ಶಕರು ಗುರುತಿಸಿದ್ದಾರೆ. ಅವರ ಕತೆಗಳು ಕನ್ನಡ, ಇಂಗ್ಲಿಷ್‌, ಹಿಂದಿ, ಮಲಯಾಳ, ತೆಲುಗು ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. 1931ರಲ್ಲಿ ಸಿಕಂದರಾಬಾದ್ನಲ್ಲಿ ಜನಿಸಿದ ಮಿತ್ರನ್‌ 1952ರಲ್ಲಿ ಚೆನ್ನೈಗೆ ಬಂದು ನೆಲೆಸಿದರು. 1996ರಲ್ಲಿ ಅವರಅಪ್ಪಾವಿನ್ ಸ್ನೇಗಿದರ್‌’ ಸಣ್ಣ ಕತೆಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 1977ರಲ್ಲಿ ಪ್ರಕಟಗೊಂಡದಿ ಎಯ್ಟೀನ್ತ್ಪ್ಯಾರಲಲ್‌’ ಅವರ ಜನಪ್ರಿಯ ಕಾದಂಬರಿಗಳಲ್ಲೊಂದು.
2017: ನವದೆಹಲಿ: ಸೀಟು ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಕುಪಿತಗೊಂಡ ಶಿವಸೇನೆ ಸಂಸದ ರವೀಂದ್ರ ಗಾಯಕವಾಡ ಏರ್ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಲ್ಲಿ 25 ಬಾರಿ ಹಲ್ಲೆ ಮಾಡಿದ ಘಟನೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ಘಟಿಸಿತು.  ಪುಣೆಯಿಂದ ಹೊರಟ ಏಐ 852 ವಿಮಾನ ನವದೆಹಲಿ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10.30ಕ್ಕೆ ಇಳಿಯುತ್ತಿದ್ದಂತೆ ಘಟನೆ ಘಟಿಸಿತು.  ಗಾಯಕವಾಡ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದರು, ಆದರೆ ಎಕಾನಮಿ ಕ್ಲಾಸ್ ಸೀಟನ್ನು ಏರ್ಇಂಡಿಯಾ ನೀಡಿತ್ತು. ವಿಚಾರವಾಗಿ ಕುಪಿತಗೊಂಡ  ಗಾಯಕ ವಾಡ ವಿಮಾನದಿಂದ ಕೆಳಗಿಳಯಲು ನಿರಾಕರಿಸಿ ಗಲಾಟೆ ಮಾಡಿದರು. ಈ ಸಂದರ್ಭ ಪ್ರಶ್ನಿಸಿದ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಮಹಾರಾಷ್ಟ್ರದ ಒಸ್ಮಾನಾಬಾದ್ನಿಂದ ಲೋಕಸಭೆಗೆ ಆಯ್ಕೆಯಾಗಿರುವ ಗಾಯಕವಾಡ ಅವರ ದುಂಡಾವರ್ತನೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಯಿತು. ಆದರೆ ತನ್ನ ನಡೆಯನ್ನು ಸಮರ್ಥಿಸಿಕೊಂಡ ಸಂಸದ, ವಿಮಾನ ಸಿಬ್ಬಂದಿ ತಪ್ಪು ಮಾಡಿದ್ದು ಅಲ್ಲದೆ, ತಮ್ಮನ್ನೇ ಪ್ರಶ್ನಿಸಿದ್ದಾರೆ. ಹಾಗಾಗಿ 25 ಬಾರಿ ಚಪ್ಪಲಿಯಲ್ಲಿ ಥಳಿಸಿದ್ದೇನೆ ಎಂದರು.  ಗಾಯಕವಾಡ ವಿರುದ್ಧ ಏರ್ಇಂಡಿಯಾ ದೂರು ದಾಖಲಿಸಿದೆ.

2017: ನವದೆಹಲಿ: ಆರ್.ಕೆ.ನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಶಶಿಕಲಾ ಮತ್ತು . ಪನ್ನೀರ ಸೆಲ್ವಂ ಬಣಕ್ಕೆ ಚುನಾವಣಾ ಆಯೋಗ ಪ್ರತ್ಯೇಕ ಹೆಸರು ಮತ್ತು ಪ್ರತ್ಯೇಕ ಚಿಹ್ನೆಯನ್ನು ನೀಡಿತು.  ಎಐಎಡಿಎಂಕೆ ಪಕ್ಷದ ಚಿಹ್ನೆಯನ್ನು ಚುನಾವಣಾ ಆಯೋಗ ಹಿಂದಿನ ದಿನ  ಮುಟ್ಟುಗೋಲು ಹಾಕಿಕೊಂಡಿತ್ತು. ಹಿನ್ನೆಲೆಯಲ್ಲಿ ಎರಡೂ ಬಣಗಳಿಗೆ ಪ್ರತ್ಯೇಕ ಚಿಹ್ನೆ ನೀಡಲಾಯಿತು. ಶಶಿಕಲಾ ಬಣಕ್ಕೆಹ್ಯಾಟ್’ (ಟೋಪಿ) ಚಿತ್ರವನ್ನು ಚಿಹ್ನೆಯಾಗಿ ಬಳಸಲು ಮತ್ತು ಎಐಎಡಿಎಂಕೆ (ಅಮ್ಮ) ಹೆಸರನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಾಯಿತು. ಓ ಪನ್ನೀರ ಸೆಲ್ವಂ ಬಣಕ್ಕೆವಿದ್ಯುತ್ ಕಂಬವನ್ನು ಚುನಾವಣಾ ಚಿಹ್ನೆಯಾಗಿ ಮತ್ತು ಎಐಎಡಿಎಂಕೆ (ಪುರುಚ್ಚಿತಲೈವಿ ಅಮ್ಮ) ಹೆಸರನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಾಯಿತು. ಹಿಂದಿನ ರಾತ್ರಿ ಚುನಾವಣಾ ಆಯೋಗ ಉಭಯ ಬಣಗಳಿಗೂ ಪತ್ಯೇಕ ಹೆಸರು ಮತ್ತು ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿತ್ತು. ಈದಿನ ಉಭಯ ಬಣಗಳ ಆಯ್ಕೆಗಳನ್ನು ಪರಿಶೀಲಿಸಿದ ಆಯೋಗ ಅಂತಿಮ ಅನುಮತಿ ನೀಡಿತು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದಾಗಿ ತೆರವಾಗಿರುವ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಚಿಹ್ನೆ ಮತ್ತು ಪಕ್ಷದ ಹೆಸರು ಬಳಕೆ ಮಾಡಿಕೊಳ್ಳುವ ಸಂಬಂಧ ಗೊಂದಲ ಉಂಟಾಗಿತ್ತು. ಪನ್ನೀರ ಸೆಲ್ವಂ ಬಣದ ಪರವಾಗಿ . ಮಧುಸೂಧನನ್ ಅವರು ಈದಿನ  ನಾಮ ಪತ್ರ ಸಲ್ಲಿಸಿದರೆ, ಶಶಿಕಲಾ ಬಣದ ಪರವಾಗಿ ಟಿ.ಟಿ.ವಿ. ದಿನಕರನ್ ಹಾಗೂ ಡಿಎಂಕೆಯ ಮಾರುತು ಗಣೇಶ್ ಸ್ಪರ್ಧಿಸುತ್ತಿದ್ದಾರೆ.
2009: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದಾವಣಗೆರೆ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ 'ಭಾರತ ನಿರ್ಮಾಣ ರಾಲಿ'ಯಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್‌ ಪರ ಪ್ರಚಾರಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ದೇಶದಲ್ಲಿ ನಡೆದ ಮೊದಲ ಕಾಂಗ್ರೆಸ್ ರಾಲಿ ಇದು.

2009: ಪ್ರಚೋದಿತ ಭಾಷಣದಿಂದ ಚುನಾವಣಾ ಆಯೋಗ ಹಾಗೂ ಇತರೆ ಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಬಿಜೆಪಿ ಯುವ ನಾಯಕ ವರುಣ್ ಗಾಂಧಿಯವರು ಪಿಲಿಭಿಟ್ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಲಿದ್ದಾರೆ ಎಂದು ಪಕ್ಷದ ವಕ್ತಾರರು ಪ್ರಕಟಿಸಿದರು. ಪ್ರಚೋದನಾಕಾರಿ ಭಾಷಣದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವರುಣ್ ಅವರನ್ನು ಲೋಕಸಭಾ ಚುನಾವಣೆಗೆ ಸ್ಫರ್ಧಿಸದಂತೆ ನಿರ್ಬಂಧ ಹೇರಲು ಬಿಜೆಪಿಗೆ ಸಲಹೆ ನೀಡಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪಕ್ಷದ ವಕ್ತಾರ ಬಲ್‌ಬೀರ್ ಅವರು ವರುಣ್ ತಮ್ಮ ಪಕ್ಷದ ಅಭ್ಯರ್ಥಿಯಾಗಿಯೇ ಮುಂದುವರಿಯುತ್ತಾರೆ ಎಂದು ಪ್ರತಿಪಾದಿಸಿದರು.

2009: ಕಳೆದ ನವೆಂಬರ 26ರಂದು ಮುಂಬೈ ಮೇಲೆ ದಾಳಿ ಮಾಡಿ ಸೆರೆ ಸಿಕ್ಕ ಭಯೋತ್ಪಾದಕ ಅಜ್ಮಲ್ ಅಮಿರ್ ಕಸಾಬ್ ಇದೇ ಪ್ರಥಮ ಬಾರಿಗೆ ತಾನು ಪಾಕಿಸ್ಥಾನದ ನಾಗರಿಕ ಎಂಬುದನ್ನು ಒಪ್ಪಿಕೊಂಡ. ಬಂಧನದಲ್ಲಿರುವ ಕಸಾಬ್‌ನನ್ನು ಸೆಷನ್ಸ್ ನ್ಯಾಯಾಧೀಶ ಎಂ. ಎಲ್. ತಹಿಲಿಯಾನಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದಾಗ ತಾನು ಪಾಕಿಸ್ಥಾನದ ಫರೀದ್ ಕೋಟೆಯವನು ಎಂದು ತಿಳಿಸಿದ.

2009: ಆರು ವರ್ಷಗಳ ಕಾಯುವಿಕೆಯ ನಂತರ ವಾಣಿಜ್ಯನಗರಿ ಮುಂಬೈಯಲ್ಲಿ ವಿಶ್ವದ ಅತ್ಯಂತ ಅಗ್ಗದ ಕಾರು ನ್ಯಾನೊ ಬಿಡುಗಡೆಯಾಯಿತು. ಸವಾಲು, ಅನುಮಾನ, ಆತಂಕಗಳ ನಡುವೆ ಕನಸಿನ ಕೂಸು ನನಸಾಯಿತು. ಭಾರತೀಯರ ಕನಸು ಬಜೆಟ್ಟು ಎರಡಕ್ಕೂ ಸರಿದೂಗುವಂತಹ ಅಗ್ಗದ ಕಾರೊಂದನ್ನು ನೀಡುವ ಭರವಸೆಯನ್ನು ಟಾಟಾ ಕಂಪೆನಿಯು ಈಡೇರಿಸಿತು. 'ನಾವು ಭರವಸೆ ಉಳಿಸಿಕೊಂಡಿದ್ದೇವೆ' ಎಂದು ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಹೇಳಿದರು. ಮುಂಬೈಯ ತಾಜ್ ಮಹಲ್ ಪ್ಯಾಲೇಸ್ ಅಂಡ್ ಟವರ್ಸ್‌ ಹೋಟೆಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರಿನ ವಾಣಿಜ್ಯ ಬಿಡುಗಡೆಯ ಕುರಿತು ಟಾಟಾ ಕಂಪೆನಿ ಮಾಹಿತಿ ನೀಡಿತು. ನವೆಂಬರಿನಲ್ಲಷ್ಟೇ ಭಯೋತ್ಪಾದಕರ ದಾಳಿಗೆ ತುತ್ತಾಗಿ ವಿಶ್ವದ ಗಮನ ಸೆಳೆದಿದ್ದ ಈ ತಾಣ ವಿಶ್ವದ ಅತಿ ಅಗ್ಗದ ಕಾರಿನ ಮಾಹಿತಿಯ ಕಣಜದಂತೆ ಗಮನ ಸೆಳೆಯಿತು. ನ್ಯಾನೊ ಸ್ಟಾಂಡರ್ಡ್, ಡಿಲಕ್ಸ್ ಮತ್ತು ಲಕ್ಷುರಿ ಎಂಬ ಮೂರು ಶ್ರೇಣಿಗಳಲ್ಲಿ ಲಭ್ಯವಾಗಲಿದ್ದು ಮೂಲ ಮಾದರಿಯ ಕಾರಿನ ಬೆಲೆಯನ್ನು ಲಕ್ಷಕ್ಕೇ ಸೀಮಿತಗೊಳಿಸಲು ಯತ್ನಿಸಲಾಯಿತು. ರಾಜಗಾಂಭೀರ್ಯದ ಕ್ರಿಸ್ಟಲ್ ಕೋಣೆಯಲ್ಲಿ ಕಾಣಿಸಿಕೊಂಡ ಪುಟ್ಟ ನ್ಯಾನೊ ತನ್ನ ಇಳಿಜಾರಿನ ಛಾವಣಿ, ನಾಲ್ವರಿಗಷ್ಟೇ ಸ್ಥಳ ನೀಡುವ ಪುಟ್ಟ ಒಳಮೈನಿಂದ ಎಲ್ಲರ ಗಮನ ಸೆಳೆಯಿತು. ಈ ಪುಟ್ಟ ಕಾರಿನ ಉದ್ದ 3.1 ಮೀಟರ್, ಅಗಲ 1.5 ಮೀಟರ್ ಮತ್ತು ಎತ್ತರ 1.6 ಮೀಟರ್.

2008: ಮಂಜೇಶ್ವರ ಗೋವಿಂದ ಪೈ ಅವರ 125ನೇ ಜನ್ಮದಿನಾಚರಣೆ ಮತ್ತು `ಗಿಳಿವಿಂಡು' ಕಟ್ಟಡ ಸಂಕೀರ್ಣದ ಶಿಲಾನ್ಯಾಸ ಸಮಾರಂಭವನ್ನು ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಡಾ.ಎಂ.ವೀರಪ್ಪ ಮೊಯಿಲಿ ಅವರು ಕಾಸರಗೋಡಿನ ಮಂಜೇಶ್ವರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.

2008: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯ ಆರ್ಭಟ ಮುಂದುವರೆಯಿತು. ಮಳೆಯಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಮೂವರು ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗುಲ್ಬರ್ಬ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಒಬ್ಬರು ಸೇರಿ ಒಟ್ಟು ಏಳು ಮಂದಿ ಮೃತರಾದರು. ಕುರಿ, ಕೋಳಿ ಹಾಗೂ ಅಪಾರ ಪ್ರಮಾಣದ ಬೆಳೆಗೆ ಹಾನಿಯಾಗಿ ಭಾರೀ ನಷ್ಟ ಸಂಭವಿಸಿತು. ಅಕಾಲಿಕ ಮಳೆಯಿಂದಾಗಿ ಉತ್ತರ ಕರ್ನಾಟಕದ ರೈತರು ಇನ್ನಿಲ್ಲದ ಸಂಕಷ್ಟಕ್ಕೆ ಒಳಗಾದರು. ಬೆಳೆದು ನಿಂತಿದ್ದ ಜಯಧರ ಹತ್ತಿ, ಬಿಳಿಜೋಳ, ಗೋಧಿ, ಕಡಲೆ, ಕುಸುಬಿ, ಕೆಂಪು ಮೆಣಸಿನಕಾಯಿ ಬೆಳೆಗಳೆಲ್ಲ ಮಳೆಗೆ ಆಹುತಿಯಾದ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು.

2008: 700- 900 ಕಿ.ಮೀ. ದೂರದವರೆಗೆ ಕ್ರಮಿಸಬಲ್ಲ ಘನ ಇಂಧನ ಚಾಲಿತ `ಅಗ್ನಿ-1' ಕ್ಷಿಪಣಿಯ ಪರೀಕ್ಷೆ ಒರಿಸ್ಸಾದ ಬಾಲಸೋರಿಗೆ ಸಮೀಪದ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ನಡೆಯಿತು. ಬೆಳಗ್ಗೆ 10.15ರ ಸಮಯದಲ್ಲಿ ಸಂಚಾರಿ ಉಡಾವಣಾ ವೇದಿಕೆಯಿಂದ (ಮೊಬೈಲ್ ಲಾಂಚರ್) ಕ್ಷಿಪಣಿ ಉಡಾಯಿಸಲಾಯಿತು. `ಅಗ್ನಿ-1' ಭಾರತೀಯ ಸೇನೆಗೆ ಪೂರೈಸಿರುವ ಏಕೈಕ ಘನ ಇಂಧನ ಕ್ಷಿಪಣಿ. ಪ್ರತಿ ಕ್ಷಿಪಣಿಯ ಸಾಮರ್ಥ್ಯ ಒರೆಗಲ್ಲಿಗೆ ಹಚ್ಚಲು ಡಿ ಆರ್ ಡಿ ಒ ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ನಡೆಸುವುದು.
2007ರ ಅಕ್ಟೋಬರಿನಲ್ಲಿ ವ್ಹೀಲರ್ ದ್ವೀಪದಿಂದಲೇ `ಅಗ್ನಿ-1'ರ ಪರೀಕ್ಷೆ ನಡೆಸಲಾಗಿತ್ತು. ದೇಶೀಯವಾಗಿ ನಿರ್ಮಿತವಾದ ಅಗ್ನಿ 15 ಮೀಟರ್ ಎತ್ತರವಾಗಿದ್ದು, 12 ಟನ್ ತೂಕವಿದೆ. 1000 ಕೆ.ಜಿ. ತೂಕದ ಶಸ್ತ್ರ ಹಾಗೂ ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಕ್ಷಿಪಣಿಗಿದೆ.

2008: ಹೂಳು ತುಂಬಿ, ಮಲಿನಗೊಂಡಿದ್ದ ಶತಮಾನದಷ್ಟು ಹಳೆಯದಾದ ಕಲ್ಯಾಣಿಯ ಹೂಳು ತೆಗೆಯುವ ಮೂಲಕ ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಗ್ರಾಮಸ್ಥರು ಮಹತ್ವದ ಕಾರ್ಯ ಕೈಗೊಂಡರು. ನೂರಕ್ಕೂ ಹೆಚ್ಚು ಮಂದಿಯ ತಂಡಗಳು ಮೂರು ದಿನಗಳಿಂದ ಎಡೆ ಬಿಡದೆ ಕಲ್ಯಾಣಿ ಬದಿ ಎತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡವು. ನೇಕಾರರು, ಕೃಷಿಕರು ವ್ಯಾಪಾರಿಗಳು ತಮ್ಮ ಕಸುಬನ್ನೇ ಮರೆತು ಕಲ್ಯಾಣಿ ಸ್ವಚ್ಛ ಕಾರ್ಯದಲ್ಲಿ ತಲ್ಲೀನರಾದರು. ಮಕ್ಕಳು ಮುದುಕರೆನ್ನದೆ ಗ್ರಾಮದ ಎಲ್ಲಾ ವರ್ಗದ ಜನ ಈ ಕಲ್ಯಾಣಿಯ ಬದಿ ಎತ್ತುವ ಕೆಲಸದಲ್ಲಿ ತೊಡಗಿದರು. ಕೊಳವೆ ಬಾವಿಗಳೇ ಇಲ್ಲದ ಕಾಲದಲ್ಲಿ, ನೂರು ವರ್ಷಗಳ ಹಿಂದೆ ಕೊಡಿಯಾಲದ ಸಾವುಕಾರ ಲಕ್ಷ್ಮಯ್ಯ ಊರಿನ ಋಣ ತೀರಿಸಲಿಕ್ಕಾಗಿ ಈ ಕಲ್ಯಾಣಿ ನಿರ್ಮಿಸಿದ್ದರು. ಇಡೀ ಊರಿಗೆ ಇದು ನೀರಿನ ಮೂಲವೂ ಆಗಿತ್ತು. 170 ಚದುರ ಅಡಿ ವಿಸ್ತಾರದ, ಸುಮಾರು 50 ಅಡಿ ಆಳದ ಕಲ್ಯಾಣಿಯನ್ನು ಚುರಕಿ ಗಾರೆ ಹಾಗೂ ಕಲ್ಲು ಚಪ್ಪಡಿ ಬಳಸಿ ನಿರ್ಮಿಸಲಾಗಿತ್ತು. ಕಲ್ಯಾಣಿ ಬತ್ತಿ ಹೋಗದಂತೆ ಕೂಗಳತೆಯ ದೂರದಲ್ಲಿ ನೀರಿನ ಕಟ್ಟೆ ನಿರ್ಮಿಸಿ, ಅಲ್ಲಿಂದ ನೀರಿನ ಪೂರಣವಾಗುವಂತೆ ಮಾಡಲಾಗಿತ್ತು. ಇದು ಕಲ್ಯಾಣಿ ನಿರ್ಮಸಿದವರ ದೂರದೃಷ್ಟಿಗೆ ಹಿಡಿದ ಕನ್ನಡಿ. ಒಂದಾನೊಂದು ಕಾಲದಲ್ಲಿ ಊರಿನ ನೀರಿನ ಆಕರವಾಗಿದ್ದ ಈ ಕಲ್ಯಾಣಿಯು ಹೂಳು ತುಂಬಿ ನೀರು ಬಗ್ಗಡವಾಗಿತ್ತು. ಹತ್ತು ವರ್ಷಗಳಿಂದ ನೀರು ಬಳಕೆಗೆ ಬಾರದಷ್ಟು ಮಲಿನಗೊಂಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮಸ್ಥರು ಯುವಕರನ್ನು ಕಟ್ಟಿಕೊಂಡು, ಸರ್ಕಾರದ ನೆರವಿಗೆ ಕಾಯದೆ ಸ್ವಪ್ರೇರಣೆಯಿಂದ ಕಲ್ಯಾಣಿಯ ಮಲಿನ ತೊಳೆಯಲು ಟೊಂಕ ಕಟ್ಟಿ ನಿಂತರು.

2008: ದೆಹಲಿ- ಚಂಡೀಗಢ-ಅಮೃತಸರ ಮಾರ್ಗದ ಪ್ರಯಾಣ ಸಮಯವನ್ನು ಅರ್ಧದಷ್ಟು ಉಳಿಸುವ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು ರೈಲ್ವೆ ಇಲಾಖೆಯು ಜಾಗತಿಕ ಟೆಂಡರ್ ಆಹ್ವಾನಿಸಿತು. ಸದ್ಯ ದೆಹಲಿ ಮತ್ತು ಅಮೃತಸರ ನಡುವಿನ 520 ಕಿ.ಮೀ. ದೂರವನ್ನು ಶತಾಬ್ದಿ ಎಕ್ಸ್ ಪ್ರೆಸ್ ಐದುವರೆ ಗಂಟೆಯಲ್ಲಿ ಕ್ರಮಿಸುವುದು. ಇದೇ ಮಾರ್ಗದಲ್ಲಿ ಗಂಟೆಗೆ 300 ಕಿ.ಮೀ. ವೇಗದಲ್ಲಿ ಪ್ರಸ್ತಾವಿತ ಅತೀ ವೇಗದ ಅಥವಾ ಬುಲೆಟ್ ರೈಲನ್ನು ಓಡಿಸುವ ಸಲುವಾಗಿ ಪೂರ್ವಭಾವಿ ಸಮೀಕ್ಷೆ ನಡೆಸಲು ಟೆಂಡರ್ ಕರೆಯಲಾಯಿತು.

2008: ಸೇಂಟ್ ಪೀಟರ್ ಎಂದೇ ಕರೆಯಲಾಗುವ ಅಪೋಸ್ತ್ಲೇ ಪೀಟರ್ ಮೊದಲ ಪೋಪ್ ಆಗಿರಲಿಲ್ಲ ಹಾಗೂ ಈತ ಎಂದೂ ರೋಮ್ ನಗರಕ್ಕೆ ಕಾಲಿಟ್ಟಿರಲೇ ಇಲ್ಲ ಎಂದು ಹೊಸ ಸಾಕ್ಷ್ಯಚಿತ್ರವೊಂದು ಪ್ರತಿಪಾದಿಸಿತು. ಚಾನಲ್-4ರಲ್ಲಿ ಪ್ರಸಾರವಾದ ಈ ಸಾಕ್ಷ್ಯಚಿತ್ರದಲ್ಲಿ ಈ ಕುರಿತ ಹಲವಾರು ಅಂಶಗಳು ವ್ಯಕ್ತವಾದವು. ಪಶ್ಚಿಮದಲ್ಲಿ ಕ್ರೈಸ್ತ ಮತ ಪ್ರಸಾರ ಮಾಡಬೇಕೆಂಬ ಏಕೈಕ ಉದ್ದೇಶದಿಂದ ವ್ಯಾಟಿಕನ್ ನಗರ ಜಗತ್ತನ್ನು ದಿಕ್ಕುತಪ್ಪಿಸಿದೆ ಎಂದು ಪ್ರಮುಖ ಶಿಕ್ಷಣವೇತ್ತರು ಈ ಸಾಕ್ಷ್ಯಚಿತ್ರದಲ್ಲಿ ಆಪಾದಿಸಿದರು. ಸೇಂಟ್ ಪೀಟರ್ ಅವರ ಅಂತ್ಯಸಂಸ್ಕಾರ ರೋಮ್ನಲ್ಲಿ ನಡೆಯಿತು ಎಂಬ ಸಂಗತಿಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಈ ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸಿರುವ ಆಕ್ಸ್ ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯದ ಡಾ. ರೋಬರ್ಟ್ ಬೆಕ್ ಫೋರ್ಡ್ ಹೇಳಿದರು. ವಿಶ್ವದ ರೋಮ್ ಸಮುದಾಯದ ಮೇಲೆ ನಂಬಿಕೆ ಹುಟ್ಟಿಸುವ ದಿಸೆಯಲ್ಲಿ ಸರಿಸುಮಾರು 2 ಸಾವಿರ ವರ್ಷಗಳ ಕೆಳಗೆ ಸೇಂಟ್ ಪೀಟರನನ್ನು ಇಲ್ಲಿ ಸಮಾಧಿ ಮಾಡಲಾಯಿತು ಎಂಬ ಅಂತೆ ಕಂತೆಗಳನ್ನು ಹೆಣೆಯಲಾಗಿದೆ ಎಂದು ಬೆಕ್ ಫೋರ್ಡ್ ಹೇಳಿರುವುದಾಗಿ `ದಿ ಸಂಡೇ ಟೆಲಿಗ್ರಾಫ್' ವರದಿ ಮಾಡಿತು.

2007: ಬೆಂಗಳೂರಿನ ಕೋಟೆ ಶ್ರೀರಾಮಸೇವಾ ಮಂಡಲಿಯ ಸ್ಥಾಪಕ `ಎಸ್.ವಿ. ನಾರಾಯಣಸ್ವಾಮಿ ರಾವ್' ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ (2007) ಹಿರಿಯ ಗಾಯಕ ವಿದ್ವಾನ್ ನೇದನೂರಿ ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು.

2007: ಹಿರಿಯ ಕವಿ ಡಾ. ಎನ್. ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರನ್ನು 2007ನೇ ಸಾಲಿನ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಇರಾಕಿನಲ್ಲಿ ಇರುವ ಅಮೆರಿಕದ ಪಡೆಗಳ ವಾಪಸಾತಿಯನ್ನು ನಾಲ್ಕು ತಿಂಗಳಲ್ಲಿ ಆರಂಭಿಸಲು ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರಿಗೆ ಅವಕಾಶ ಒದಗಿಸುವ ಡೆಮಾಕ್ರಾಟಿಕ್ ಯೋಜನೆಗೆ ಸೆನೆಟ್ ಸಮಿತಿಯ ಅನುಮೋದನೆ ಲಭಿಸಿತು. ಇರಾಕ್ ಮತ್ತು ಆಫ್ಘಾನಿಸ್ಥಾನದಲ್ಲಿನ ಸಮರಗಳಿಗೆ ನಿಧಿ ಒದಗಿಸುವುದನ್ನು ಮುಂದುವರೆಸಲು ಅವಕಾಶ ನೀಡುವ 121.6 ಶತಕೋಟಿ ಡಾಲರ್ ಮೊತ್ತದ ಮಸೂದೆಗೆ ಸೆನೆಟ್ ಹಣಕಾಸು ಸಂಬಂಧಿತ ಸಮಿತಿ ಅನುಮೋದನೆ ನೀಡಿತು. ಆದರೆ ಅಮೆರಿಕದ ಎಲ್ಲ ಯುದ್ಧ ಪಡೆಗಳನ್ನು 2008ರ ಮಾರ್ಚ್ 31 ರ ಒಳಗಾಗಿ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಗಡುವನ್ನೂ ವಿಧಿಸಿತು. ಇಂತಹುದೇ ಪ್ರಸ್ತಾವಕ್ಕೆ ಮಂಜೂರಾತಿ ನೀಡಲು ಸೆನೆಟ್ ವಾರದ ಹಿಂದೆ ವಿಫಲಗೊಂಡಿತ್ತು.

2007: ಪಾಕಿಸ್ಥಾನದ ಖ್ಯಾತ ಕ್ರಿಕೆಟ್ ತರಬೇತುದಾರ ಬಾಬ್ ವೂಲ್ಮರ್ ಸಾವಿನ ಸುತ್ತ ಹಬ್ಬಿದ ಬಿರುಗಾಳಿಯ ನಡುವೆ ದಿಕ್ಕು ತೋಚದೆ ಕಂಗೆಟ್ಟಿದ್ದ ಜಮೈಕಾ ಪೊಲೀಸರು ಕೊನೆಗೂ `ಇದು ಕೊಲೆ' ಎಂಬ ತೀರ್ಮಾನಕ್ಕೆ ಬಂದರು.

2007: ಕೋಲಾರ ಮೂಲದ ಭಾರತೀಯ ತೈಲ ನಿಗಮದ (ಐಓಸಿ) ಮಾರಾಟ ಅಧಿಕಾರಿ ಎಸ್. ಮಂಜುನಾಥ ಅವರ ಹತ್ಯೆ ಪ್ರಕರಣದ ಎಲ್ಲ 8 ಆರೋಪಿಗಳನ್ನು ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲಾ ನ್ಯಾಯಾಲಯ `ತಪ್ಪಿತಸ್ಥರು' ಎಂದು ಘೋಷಿಸಿತು. ಲಖನೌ ಐಐಎಂನಿಂದ ಪದವಿ ಪಡೆದಿದ್ದ ಮಂಜುನಾಥ 2005ರ ನವೆಂಬರ್ 19ರಂದು ಕೊಲೆಯಾಗಿದ್ದರು. ಕಲಬೆರಕೆ ಪೆಟ್ರೋಲ್ ಮಾರಾಟ ಮಾಡಿದ್ದಕ್ಕಾಗಿ ಪರವಾನಗಿ ರದ್ದು ಪಡಿಸಿದ್ದಕ್ಕಾಗಿ ಪವನ್ ಪೆಟ್ರೋಲ್ ಪಂಪ್ ಮಾಲೀಕರ ಮಗ ಪವನ್ ಕುಮಾರ್ ಕೆಲವು ಹಂತಕರ ನೆರವಿನಿಂದ ಮಂಜುನಾಥ ಅವರ ಕೊಲೆ ಮಾಡಿಸಿದ್ದ. ಕೆಲದಿನಗಳ ನಂತರ ಮಂಜುನಾಥನ ಶವ ಪಕ್ಕದ ಸೀತಾಪುರ ಜಿಲ್ಲೆಯಲ್ಲಿ ಪತ್ತೆಯಾಗಿತ್ತು.

2007: ನಕಲಿ ಛಾಪಾಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿ ಮತ್ತು ಆತನ ನಾಲ್ವರು ಸಹಚರರನ್ನು (ಇರ್ಫಾನ್ ಅಹಮದ್, ವಜೀರ್ ಅಹಮದ್ ಸೈಲಿಕ್ ಮತ್ತು ಪ್ರದೀಪ ಕುಮಾರ್) ಅಪರಾಧಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯ ಪರಿಗಣಿಸಿತು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ವಿಶ್ವನಾಥ ಅಗಡಿ ಅವರು ಈ ತೀರ್ಪನ್ನು ಪ್ರಕಟಿಸಿದರು.

2007: ವಿಶೇಷ ಆರ್ಥಿಕ ವಲಯ (ಎಸ್ ಇ ಜೆಡ್) ಸ್ಥಾಪನೆ ಕುರಿತಂತೆ ಸಚಿವರ ತಂಡ (ಜಿ ಎಫ್ ಎಂ) ಅಧ್ಯಯನ ನಡೆಸಿ ವರದಿ ನೀಡುವವರೆಗೆ ಹೊಸ ಎಸ್ ಇ ಜೆಡ್ ಸ್ಥಾಪನೆಗೆ ಭೂಮಿ ವಶಪಡಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ ಎಂದು ಕೈಗಾರಿಕಾ ರಾಜ್ಯ ಸಚಿವ ಅಶ್ವಿನಿ ಕುಮಾರ ತಿಳಿಸಿದರು.

2006: ಲಾಭದಾಯಕ ಹುದ್ದೆಯ ವಿವಾದದ ಉರುಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಲೋಕಸಭಾ ಸದಸ್ಯತ್ವ ಮತ್ತು ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ `ತಲೆದಂಡ' ಒಪ್ಪಿಸಿದರು. ಸೋನಿಯಾಗಾಂಧಿ ರಕ್ಷಣೆಗೆ ಯುಪಿಎ ಸರ್ಕಾರ ಇನ್ನೇನು ಸುಗ್ರೀವಾಜ್ಞೆ ಹೊರಡಿಸಲಿದೆ ಎಂಬ ನಿರೀಕ್ಷೆಯ ನಡುವೆಯೇ ಕಾಂಗ್ರೆಸ್ ಅಧ್ಯಕ್ಷೆ ಅನಿರೀಕ್ಷಿತ ನಿರ್ಧಾರದ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು ವಕೀಲರ ತಂಡದ ಜತೆ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಒಂಭತ್ತು ಪುಟಗಳ ದೀರ್ಘ ಮನವಿ ಪತ್ರ ಸಲ್ಲಿಸಿ ಸೋನಿಯಾಗಾಂಧಿ ಹೊಂದಿರುವ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಸ್ಥಾನ ಲಾಭದಾಯಕ ಹುದ್ದೆಯಾಗಿರುವ ಕಾರಣ ಸಂವಿಧಾನದ 102ನೇ ವಿಧಿ ಪ್ರಕಾರ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಕೋರಿದ್ದು ಇದಕ್ಕೆ ಕಾರಣವಾಯಿತು. ಸೋನಿಯಾ ದಾರಿಯನ್ನೇ ಅನುಸರಿಸಿದ ಕಾಂಗ್ರೆಸ್ ಸಂಸದ ಕರಣ್ ಸಿಂಗ್ ಅವರೂ ತಮ್ಮ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.

2006: ಶಾಸಕರ ಸದಸ್ಯತ್ವ ರದ್ದು ಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಜನತಾದಳದ (ಎಸ್) 39 ಮಂದಿ ಶಾಸಕರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ವಿಧಾನಸಭೆ ಅಧ್ಯಕ್ಷ ಕೃಷ್ಣ ಸದನದಲ್ಲಿ ಪ್ರಕಟಿಸಿದರು. ಶಾಸಕ ವಾಟಾಳ್ ನಾಗರಾಜ್ ಮತ್ತಿತರರು ಈ ಅರ್ಜಿ ಸಲ್ಲಿಸಿದ್ದರು.

2006: ತನ್ನ ಗೆಳತಿಯ ಕತ್ತು ಹಿಸುಕಿ ಕೊಂದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಲೆ ಹ್ಯೂ ಅಂಗ್ (27) ಎಂಬ ವ್ಯಕ್ತಿಗೆ ಆತನ ಕೋರಿಕೆ ಮೇರೆಗೆ ಹನಾಯ್ ನ್ಯಾಯಾಲಯ ಮರಣದಂಡನೆ ವಿಧಿಸಿತು. 2004ರ ಜುಲೈ ತಿಂಗಳಲ್ಲಿ ಹೊ ಚಿ ಮಿನ್ ನಗರದಲ್ಲಿ ಗೆಳತಿಯ ಜೊತೆಗೆ ಕಾರು ಓಡಿಸುತ್ತಿದ್ದಾಗ ಅಪಘಾತ ಸಂಭವಿಸಿತು. ಆಗ ಆತನನ್ನು ಬಿಟ್ಟು ಪರಾರಿಯಾಗಲು ಯತ್ನಿಸ್ದಿದಕ್ಕಾಗಿ ಗೆಳತಿಯನ್ನು ಕತ್ತು ಹಿಚುಕಿ ಕೊಲೆ ಮಾಡಿದ್ದ. ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಪಾಪಪ್ರಜ್ಞೆಯಿಂದ ಕೊರಗುತ್ತಿದ್ದ ಆತ ಮೇಲ್ಮನವಿ ಸಲ್ಲಿಸಿ ಮರಣದಂಡನೆ ವಿಧಿಸಲು ಕೋರಿದ. ಆತನ ಮೊರೆಗೆ ನ್ಯಾಯಾಲಯ ಓಗೊಟ್ಟು ಮರಣದಂಡನೆ ದಯಪಾಲಿಸಿತು.

2006: ವಿಶ್ವಮಟ್ಟದ ಪೈಪೋಟಿ ಎದುರಿಸಲು ಬ್ರಿಟನ್ ಅರ್ಥವ್ಯವಸ್ಥೆಯನ್ನು ಸಜ್ಜುಗೊಳಿಸುವುದಕ್ಕಾಗಿ ಬ್ರಿಟಿಷ್ ಹಣಕಾಸು ಸಚಿವ ಗೋರ್ಡಾನ್ ಬ್ರೌನ್ ಅವರಿಗೆ ಸಲಹೆ ನೀಡಲು ರಚಿಸಲಾದ ಸಮಿತಿಯಲ್ಲಿ ಭಾರತದ ಪ್ರಮುಖ ಉದ್ಯಮಿ ಟಾಟಾ ಸಮೂಹದ ರತನ್ ಟಾಟಾ ಸೇರ್ಪಡೆಯಾದರು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯ ಮಹಿಳೆಯರ 50 ಮೀ. ರೈಫಲ್ ವಿಭಾಗದಲ್ಲಿ ಭಾರತದ ಅನುಜಾ ಜಂಗ್ ಸ್ವರ್ಣ ಪದಕ ಗೆದ್ದುಕೊಂಡರು.

2001: ರಷ್ಯದ ಬಾಹ್ಯಾಕಾಶ ನಿಲ್ದಾಣ `ಮೀರ್' (ರಷ್ಯದಲ್ಲಿ ಈ ಶಬ್ದಕ್ಕೆ ಶಾಂತಿ ಮತ್ತು ಜಗತ್ತು ಎಂಬ ಅರ್ಥಗಳಿವೆ.) 15 ವರ್ಷಗಳ ಸೇವೆಯ ಬಳಿಕ ಆಸ್ಟ್ರೇಲಿಯಾ ಮತ್ತು ಚಿಲಿ ನಡುವಣ ಜನವಸತಿ ರಹಿತ ಫೆಸಿಫಿಕ್ ಸಾಗರದಲ್ಲಿ ಬಿತ್ತು. ಇದು ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಬಾಹ್ಯಾಕಾಶ ನಿಲ್ದಾಣವಾಗಿ ಕಾರ್ಯ ನಿರ್ವಹಿಸಿತು.

1983: ಮೊತ್ತ ಮೊದಲ ಬಾರಿಗೆ ಖಾಯಂ ಕೃತಕ ಹೃದಯ ಕಸಿ ಮಾಡಿಸಿಕೊಂಡ ಡಾ. ಬಾರ್ನಿ ಕ್ಲಾರ್ಕ್ ಅವರು ಯುನಿವರ್ಸಿಟಿ ಉಟಾಹ್ ಮೆಡಿಕಲ್ ಸೆಂಟರಿನಲ್ಲಿ ಮೃತರಾದರು. ಕೃತಕ ಹೃದಯದೊಂದಿಗೆ ಅವರು 112 ದಿನಗಳ ಕಾಲ ಬದುಕಿದ್ದರು.

1980: ಭಾರತದ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ್ನು ಗೆದ್ದುಕೊಂಡ ಪ್ರಥಮ ಭಾರತೀಯ ಎನಿಸಿಕೊಂಡರು. ಅವರು ಸೋಲಿಸಿದ್ದು ಇಂಡೋನೇಸಿಯಾದ ಲೀಮ್ ಸ್ವೀ ಕಿಂಗ್ ಅವರನ್ನು.

1955: ಕಲಾವಿದ ತಿಮ್ಮಯ್ಯ ಸಿ.ಎಂ. ಜನನ.

1951: ಹಲವಾರು ರಂಗಸಂಸ್ಥೆಗಳನ್ನು ಕಟ್ಟಿ, ನಿರ್ದೇಶಕರಾಗಿ ಹಲವಾರು ಮಂದಿ ಶ್ರೇಷ್ಠ ನಾಟಕಕಾರರ ನಾಟಕಗಳನ್ನು ರಂಗಭೂಮಿಗೆ ತಂದ ರಂಗಕರ್ಮಿ ಪ್ರಸನ್ನ ಅವರು ಪ್ರಹ್ಲಾದಾಚಾರ್ಯ- ಹೇಮಾವತಿ ಬಾಯಿ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ಜನಿಸಿದರು. ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಬಹುಮಾನ, ಪು.ತಿ.ನ. ಪುರಸ್ಕಾರ, ಚದುರಂಗ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಪ್ರಸನ್ನ ಅವರಿಗೆ ಸಂದಿವೆ.

1931: ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ್ ಅವರನ್ನು ಗಲ್ಲಿಗೇರಿಸಲಾಯಿತು.

1928: ಕಲಾವಿದ ಬಿ.ಆರ್. ಶೇಷಾದ್ರಿ ಜನನ.

1919: ಕಲಾವಿದ ಸುಗಂಧ ರಾಮನ್ ಜನನ.

1919: ಬೆನಿಟೋ ಮುಸ್ಸೋಲಿನಿ ಇಟಾಲಿಯನ್ ಫ್ಯಾಸಿಸ್ಟ್ ಪಾರ್ಟಿಯನ್ನು ಮಿಲಾನಿನಲ್ಲಿ ಸ್ಥಾಪಿಸಿದ. ಮುಸ್ಸೋಲಿನಿ ಈ ಪಾರ್ಟಿಗೆ `ಫ್ಯಾಸಿ ಡಿ ಕೊಂಬಾಟ್ಟಿಮೆಂಟೋ' ಎಂದು ಹೆಸರಿಟ್ಟ. ಇದರೊಂದಿಗೆ `ಫ್ಯಾಸಿಸಂ' ಜನ್ಮತಳೆಯಿತು.

1910: ಭಾರತದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜವಾದಿ ನಾಯಕ ರಾಮ್ ಮನೋಹರ ಲೋಹಿಯಾ ಹುಟ್ಟಿದ ದಿನ. ಲೋಹಿಯಾ ಅವರು 1952ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಪ್ರಜಾ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು.

1910: ಅಕಿರಾ ಕುರೊಸಾವಾ ಹುಟ್ಟಿದ ದಿನ. ಜಪಾನಿನ ಚಿತ್ರ ನಿರ್ದೇಶಕರಾದ ಇವರು `ರಾಶೊಮೋನ್' `ಸೆವೆನ್ ಸಮುರಾಯಿ' ಚಿತ್ರಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದರು.

1899: ಗೋವಾವನ್ನು ಪೋರ್ಚುಗೀಸ್ ಆಡಳಿತದಿಂದ ಮುಕ್ತಗೊಳಿಸುವ ಸಲುವಾಗಿ ಹೋರಾಡಿದ ಭಾರತೀಯ ಪತ್ರಕರ್ತ, ಕವಿ, ಸ್ವಾತಂತ್ರ್ಯ ಹೋರಾಟಗಾರ ಟೆಲೋ ಡಿ ಮಸ್ಕರೇಙಸ್ (1899-1979) ಜನ್ಮದಿನ.

1893: ಕಲಾವಿದ ಎನ್.ವಿ. ಚಿನ್ನಾಚಾರಿ ಜನನ.

No comments:

Post a Comment