ನಾನು ಮೆಚ್ಚಿದ ವಾಟ್ಸಪ್

Saturday, July 20, 2019

ಇಂದಿನ ಇತಿಹಾಸ History Today ಜುಲೈ 20

             ಇಂದಿನ ಇತಿಹಾಸ History Today ಜುಲೈ 20
2019: ನವದೆಹಲಿ:  ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ್ದ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರು  ಈದಿನ  ನವದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರುಅವರಿಗೆ ೮೧ ವರ್ಷ ವಯಸ್ಸಾಗಿತ್ತುಕೇರಳದ ಮಾಜಿ ರಾಜ್ಯಪಾಲ ಹಾಗೂ ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದೀಕ್ಷಿತ್ ಅವರುಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಚುನಾವಣಾ ರಾಜಕೀಯಕ್ಕೆ ಮರುಪದಾರ್ಪಣೆ ಮಾಡಿದ್ದರು ಮತ್ತು  ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಲೋಕಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು.  ದೀಕ್ಷಿತ್ ಅವರನ್ನು ಕೆಲವು ದಿನಗಳ ಹಿಂದೆ ರಾಷ್ಟ್ರದ ರಾಜಧಾನಿಯ ಎಸ್ಕಾರ್ಟ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತುಅವರು ಹೃದಯಸ್ಥಂಭನಕ್ಕೆ ಒಳಗಾಗಿ ಮಧ್ಯಾಹ್ನ .೫೫ರ ಸುಮಾರಿಗೆ ಕೊನೆಯುಸಿರು ಎಳೆದರುಹೃದಯ ಸ್ಥಂಭನಕ್ಕೆ ಒಳಗಾಗಿದ್ದ ಶೀಲಾ ದೀಕ್ಷಿತ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಜುಲೈ ೨೦ರ ಬೆಳಗ್ಗೆ ಓಕ್ಲಾದ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ ಕರೆತರಲಾಗಿತ್ತು’ ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿತು. ಫೋರ್ಟಿಸ್ ಎಸ್ಕಾಟ್ಸ್ ಹಾರ್ಟ್ ಇನ್ಸ್ಟಿಟ್ಯೂಟಿನ ಅಧ್ಯಕ್ಷ ಡಾ ಆಶೋಕ ಸೇಥ್ ನೇತೃತ್ವದ ತಜ್ಞ ವೈದ್ಯರ ತಂಡ ದೀಕ್ಷಿತ್ ಅವರಿಗೆ ಅತ್ಯಾಧುನಿಕ ಚಿಕಿತ್ಸೆ ಒದಗಿಸಿತುತಾತ್ಕಾಲಿಕವಾಗಿ ಅವರ ಸ್ಥಿತಿ ಸ್ಥಿರಗೊಂಡಿತ್ತುಏನಿದ್ದರೂಉಸಿರಾಟ ಸ್ಥಿರಗೊಳಿಸುವ ಎಲ್ಲ ಪ್ರಯತ್ನಗಳ ಹೊರತಾಗಿಯೂ ಅವರಿಗೆ ಇನ್ನೊಮ್ಮೆ ಹೃದಯಸ್ಥಂಭನ ಸಂಭವಿಸಿ ಜುಲೈ ೨೦ರ ಮಧ್ಯಾಹ್ನ .೫೫ ಗಂಟೆಯ  ವೇಳೆಗೆ ಅವರು ನಿಧನರಾದರು ಎಂದು ಹೇಳಿಕೆ ತಿಳಿಸಿತು.  ಮೂರು ಬಾರಿ ಮುಖ್ಯಮಂತ್ರಿಯಾಗಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸುಭದ್ರವಾಗಿ ಕಟ್ಟಿದ್ದ ದೀಕ್ಷಿತ್ ಅವರು ೧೯೯೮-೨೦೧೩ರ ಅವಧಿಯಲ್ಲಿ ಪ್ರಶ್ನಾತೀತ ನಾಯಕಿಯಾಗಿದ್ದುಅವರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು ರಾಜಧಾನಿಯಲ್ಲಿ ಪ್ರಭಾವಶಾಲಿ ಪಕ್ಷವಾಗಿ ಬೆಳೆದಿತ್ತು೨೦೧೩ರಲ್ಲಿ ಹಾಲಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಎದುರು ಸೋಲುವವರೆಗೂ ಅವರ ದೆಹಲಿಯ ಅಜೇಯ ನಾಯಕಿಯಾಗಿದ್ದರುಶೀಲಾ ದೀಕ್ಷಿತ್ ಅವರು ೧೯೮೪-೧೯೮೯ರ ಅವಧಿಯಲ್ಲಿ ಕನೌಜ್ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು ಮತ್ತು ೧೯೮೬-೧೯೮೯ರ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು೧೯೯೮ರಲ್ಲಿ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಲಾಲ್ ಬಿಹಾರಿ ತಿವಾರಿ ಅವರನ್ನು ಪರಾಭವಗೊಳಿಸುವ ಮೂಲಕ ದೆಹಲಿಯಲ್ಲಿ ಅವರ ರಾಜಕೀಯ ಜೀವನ ಆರಂಭವಾಗಿತ್ತುನಂತರದ ವರ್ಷವೇ ಅವರು ದೆಹಲಿಯ ಮುಖ್ಯಮಂತ್ರಿಯಾಗಿದ್ದರು.  ೧೯೯೮-೨೦೦೩ರ ಅವಧಿಯಲ್ಲಿ  ದೀಕ್ಷಿತ್ ಅವರು ಗೋಲೆ ಮಾರ್ಕೆಟ್ ವಿಧಾನಸಭಾ ಕ್ಷೇತ್ರವನ್ನು ಮತ್ತು ೨೦೦೮ರಲ್ಲಿ ನವದೆಹಲಿ ಸಂಸದೀಯ ಕ್ಷೇತ್ರವನ್ನು  ಪ್ರತಿನಿಧಿಸಿದ್ದರು.   ಚುನಾವಣೆಗಳ ಕಾಲದಲ್ಲಿ ಪ್ರತಿಬಾರಿಯೂ ಅವರು ತಮ್ಮ ಹಳೆಯ ಗೋಲೆ ಮಾರ್ಕೆಟ್ ಸ್ಥಾನದ ಮೂಲಕ ಕಾಲ್ನಡಿಗೆ ಮೂಲಕ ಪ್ರಚಾರವನ್ನು ಆರಂಭಿಸಿದ್ದರು ಮತ್ತು ಕಾಲ್ನಡಿಗೆ ವೇಳೆಯಲ್ಲೇ ತಮ್ಮ ಮತದಾರರನ್ನು ಭೇಟಿ ಮಾಡುತ್ತಿದ್ದರುದೆಹಲಿ ಜನರ ಜೊತೆಗಿನ ಅವರ ಬಾಂಧವ್ಯ ಅಪ್ರತಿಮವಾದದ್ದು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದರುದೆಹಲಿಯಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದೀಕ್ಷಿತ್ ಅವರು ಹಲವಾರು ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು.   ಯೋಜನೆಗಳು ದೆಹಲಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದವುಅವರ ಆಡಳಿತದಲ್ಲಿ ದೆಹಲಿ ಸರ್ಕಾರದ ಅಧಿಕಾರಿಗಳನ್ನು  ಸರ್ಕಾರವು ಪ್ರಮುಖ ಸುಧಾರಣೆಗಳಿಗೆ ಹೊಣೆಗಾರರನ್ನಾಗಿ ಮಾಡುತ್ತಿತ್ತು.  ವಿದ್ಯುತ್ ರಂಗದಲ್ಲಿ ಸುಧಾರಣೆಗಳನ್ನು ತಂದ ಅವರು ಸರಣಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಿದರುಅವರ ಅವಧಿಯಲ್ಲಿ ನಗರದ ಮೂಲಭೂತ ವ್ಯವಸ್ಥೆಗಳು ಗಣನೀಯವಾಗಿ ಸುಧಾರಣೆಗೊಂಡವು ಎಂದು ದೀಕ್ಷಿತ್ ಸಂಪುಟದಲ್ಲಿದ್ದ ಮಾಜಿ  ಮುಖ್ಯ ಕಾರ್ಯದಶಿಯೊಬ್ಬರು ನುಡಿದರು೨೦೧೩ರಲ್ಲಿ ದೆಹಲಿಯಲ್ಲಿನ ಪರಾಭವದ ಬಳಿಕ ಕೂಡಾ ದೀಕ್ಷಿತ್ ಅವರು ಸದಸ್ಯರಾಗಿ ಅವರು ಕಾಂಗ್ರೆಸ್ ಬತ್ತಳಿಕೆಯ ಪ್ರಮುಖ ಅಸ್ತ್ರವಾಗಿದ್ದರು೨೦೧೪ರ ಮಾರ್ಚ್ ತಿಂಗಳಲ್ಲಿ ಅವರು ಕೇರಳ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರುಆದರೆ ಒಂದು ತಿಂಗಳ ಒಳಗಾಗಿ ರಾಜೀನಾಮೆ ನೀಡಿದರು೨೦೧೭ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಯಿತುಆದರೆ ಬಳಿಕ ಅದನ್ನು ಹಿಂತೆಗೆದುಕೊಳ್ಳಲಾಯಿತು೨೦೧೯ರ ಜನವರಿಯಲ್ಲಿ ಲೋಕಸಭಾ ಚುನಾವಣೆಗೆ ಮುನ್ನ ದೀಕ್ಷಿತ್ ಅವರನ್ನು ದೆಹಲಿ ಕಾಂಗ್ರೆಸ್ಸಿನ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಿಸಲಾಯಿತುದೆಹಲಿ ಈಶಾನ್ಯ ಕ್ಷೇತ್ರದಿಂದ ಲೋಕಸಭೆಗೆ ಅವರು ಸ್ಪರ್ಧಿಸಿದರುಆದರೆ ಜಯ ಸಿಗಲಿಲ್ಲಆದರೆ  ಬಾರಿ ಶೀಲಾ ದೀಕ್ಷಿತ್ ಅವರು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಮೂಲ್ಯ ಭಾಗವಾಗಿದ್ದರುಕಾಂಗ್ರೆಸ್ ಪಕ್ಷವು ದೆಹಲಿಯಲ್ಲಿ ಪ್ರಬಲ ಬೇರುಗಳನ್ನು ಹೊಂದಿರಲು ದೀಕ್ಷಿತ್ ಅವರೇ ಕಾರಣ’ ಎಂದು ಕಾಂಗ್ರೆಸ್ಸಿನ ಮಾಜಿ ಸಚಿವರೊಬ್ಬರು ನುಡಿದರುಹಿರಿಯ ರಾಜಕಾರಣಿಯಾದ ದೀಕ್ಷಿತ್ ಅವರು ಲೋಕಸಭಾ ಚುನಾವಣೆ ಕಾಲದಲ್ಲಿ ಪಕ್ಷದ ದೆಹಲಿ ಘಟಕದ ಮುಖ್ಯಸ್ಥರಾಗಿದ್ದರುರಾಜಧಾನಿಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಅವರನ್ನು ನಗರ ಘಟಕದ ಅಧ್ಯಕ್ಷರಾಗಿ  ವರ್ಷ ಜನವರಿಯಲ್ಲಿ ಅಜಯ್ ಮಾಕನ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಬಳಿಕ ನೇಮಿಸಲಾಗಿತ್ತು.
ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದುದರ ಹೊರತಾಗಿಯೂ ಶೀಲಾ ದೀಕ್ಷಿತ್ ಅವರು ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದು ಮಾತ್ರವೇ ಅಲ್ಲ ದೆಹಲಿಯಲ್ಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ವಿರುದ್ಧ ಈಶಾನ್ಯ ದೆಹಲಿ ಸ್ಥಾನಕ್ಕಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು.೬೬ ಲಕ್ಷ ಮತಗಳ ಅಂತರದಿಂದ ಅವರು ಪರಾಭವಗೊಂಡಿದ್ದರುಕಾಂಗ್ರೆಸ್ ಪಕ್ಷವು ದೆಹಲಿಯ ಎಲ್ಲ ಏಳೂ ಸ್ಥಾನಗಳನ್ನು ಬಿಜೆಪಿಯ ಎದುರು ಭಾರೀ ಅಂತರಗಳೊಂದಿಗೆ ಸೋತಿತುಆದರೆ ದೀಕ್ಷಿತ್ ನಾಯಕತ್ವವು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು (ಆಪ್ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಸಫಲವಾಯಿತುದೆಹಲಿಯಲ್ಲಿ ಕಾಂಗ್ರೆಸ್ ಪರಾಭವದ ಬಳಿಕ ಶೀಲಾ ದೀಕ್ಷಿತ್ ಅವರು ನೈತಿಕ ಹೊಣೆ ಹೊತ್ತು ಪಕ್ಷಾಧ್ಯಕ್ಷತೆಗೆ ರಾಜೀನಾಮೆ ನೀಡಿದರುಆದರೆ ಪಕ್ಷವು ಅದನ್ನು ಅಂಗೀಕರಿಸಲಿಲ್ಲಪ್ರಧಾನಿ ಮೋದಿ ಶೋಕದೆಹಲಿಯ ಅಭಿವೃದ್ಧಿಯಲ್ಲಿ ಶೀಲಾ ದೀಕ್ಷಿತ್ ಅವರ ಕೊಡುಗೆ ಅಪಾರವಾದದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಟ್ಟರಿನಲ್ಲಿ ಬಣ್ಣಿಸಿದರುಶೀಲಾ ದೀಕ್ಷಿತ್ ಜಿ ಅವರ ನಿಧನನಿಂದ ತೀವ್ರ ಬೇಸರಗೊಂಡಿದ್ದೇನೆಆತ್ಮೀಯ ನಡೆ ನುಡಿಯ ವ್ಯಕ್ತಿತ್ವ ಹೊಂದಿದ್ದ ಅವರು ದೆಹಲಿಯ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪಗಳುಓಂ ಶಾಂತಿ’ ಎಂದು ಮೋದಿ ಟ್ವೀಟ್ ಮಾಡಿದರುಹಿರಿಯ ನಾಯಕಿಯ ನಿಧನದ ಸುದ್ದಿ ಕೇಳಿ ವಿಹ್ವಲಗೊಂಡಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

2019: ನವದೆಹಲಿ:  ಪ್ರಮುಖ ಬದಲಾವಣೆ ಒಂದರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು  ಗುಜರಾತಿನ ಮಾಜಿ ಮುಖ್ಯಮಂತ್ರಿ ಹಾಗೂ ಮಧ್ಯಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲರಾಗಿ ವರ್ಗಾವಣೆ ಮಾಡಿದರು.  ಇದರ ಜೊತೆಗೆ ಪಶ್ಚಿಮ ಬಂಗಾಳತ್ರಿಪುರಮಧ್ಯಪ್ರದೇಶಬಿಹಾರ ಮತ್ತು ನಾಗಾಲ್ಯಾಂಡ್ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದರು. ರಾಷ್ಟ್ರಪತಿಯವರು ಮಧ್ಯಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರನ್ನು ವರ್ಗಾವಣೆ ಮಾಡಿ ಉತ್ತರ ಪ್ರದೇಶದ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ ಎಂದು ರಾಷ್ಟ್ರಪತಿಯವರ ಪ್ರಕಟಣೆ ತಿಳಿಸಿತು. ರಾಷ್ಟ್ರಪತಿಯವರ ಪ್ರಕಟಣೆಯ ಪ್ರಕಾರ ಬಿಹಾರದ ಹಾಲಿ ರಾಜ್ಯಪಾಲ ಲಾಲ್ ಜಿ ಟಂಡನ್ ಅವರನ್ನು ವರ್ಗಾವಣೆ ಮಾಡಿಮಧ್ಯಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. ಬಿಹಾರದ ರಾಜ್ಯಪಾಲರಾಗಿ ಲಾಲ್ ಜಿ ಟಂಡನ್ ಅವರ ಸ್ಥಾನಕ್ಕೆ ಫಗು ಚೌಹಾಣ್ ಅವರನ್ನು ನೇಮಿಸಲಾಯಿತು. ಇದರ ಹೊರತಾಗಿ ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರಾಗಿ ಸುಪ್ರೀಂಕೋರ್ಟಿನ ಹಿರಿಯ ವಕೀಲ ಜಗದೀಪ ಧನಕರ್ ಅವರನ್ನು  ಕೇಸರಿನಾಥ ತ್ರಿಪಾಠಿ ಅವರ ಸ್ಥಾನದಲ್ಲಿ ನೇಮಿಸಲಾಯಿತು.  ೬೮ರ ಹರೆಯದ ಧನ್ಕರ್ ಅವರು ೧೯೯೦-೧೯೯೧ರಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಉಪ ಸಚಿವರಾಗಿದ್ದರು೨೦೦೩ರಲ್ಲಿ ಅವರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸದಸ್ಯರಾಗಿ ಸೇರ್ಪಡೆಯಾಗಿದ್ದರು.   ತ್ರಿಪುರಾ ರಾಜ್ಯಪಾಲರಾಗಿ ಬಿಜೆಪಿ ಸದಸ್ಯ ರಮೇಶ್ ಬೈಸ್ ಅವರನ್ನು ರಾಷ್ಟ್ರಪತಿಯವರು ನೇಮಕ ಮಾಡಿದ್ದಾರೆಹಾಲಿ ರಾಜ್ಯಪಾಲ ಕಪ್ತಾನ್ ಸಿಂಗ್ ಸೋಳಂಕಿ ಅವರ ಸ್ಥಾನಕ್ಕೆ ಬೈಸ್ ಅವರನ್ನು ನೇಮಕ ಮಾಡಲಾಯಿತು. ನಾಗಾ ಶಾಂತಿ ಮಾತುಕತೆಗಳಲ್ಲಿ ಸರ್ಕಾರದ ಪ್ರತಿನಿಧಿ ಹಾಗೂ ಸಂಭಾಷಣಕಾರರಾಗಿದ್ದ ಆರ್.ಎನ್ರವಿ ಅವರನ್ನು ನಾಗಾಲ್ಯಾಂಡ್ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. ನೂತನ ರಾಜ್ಯಪಾಲರ ನೇಮಕಾತಿಗಳು ಅವರು ತಮ್ಮ ಹುದ್ದೆಗಳ ಹೊಣೆ ವಹಿಸಿಕೊಳ್ಳುವ ದಿನದಿಂದ ಜಾರಿಗೆ ಬರುತ್ತವೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು. ಆನಂದಿಬೆನ್ ಅವರ ನೇಮಕದೊಂದಿಗೆ ೧೯೫೦ರಲ್ಲಿ ರಾಜ್ಯಸ್ಥಾಪನೆಯಾದ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶವು ಮಹಿಳಾ ರಾಜ್ಯಪಾಲರನ್ನು ಪಡೆದಿದೆ೧೯೪೭ರಲ್ಲಿ ಸರೋಜಿನಿ ನಾಯ್ಡು ಅವರು ಆಗ ಯನೈಟೆಡ್ ಪ್ರಾವಿನ್ಸಸ್ ಎಂಬುದಾಗಿ ಪರಿಚಿತವಾಗಿದ್ದ ರಾಜ್ಯದ ಮೊತ್ತ ಮೊದಲ ರಾಜ್ಯಪಾಲರಾಗಿದ್ದರು ವಾರಾರಂಭದಲ್ಲಿ ಹಾಲಿ ರಾಜ್ಯಸಭಾ ಸದಸ್ಯೆ ಅನಸೂಯಾ ಉಯ್ಕಿ ಮತ್ತು ಹಿರಿಯ ಬಿಜೆಪಿ ನಾಯಕ ಬಿಸ್ವಾಸ್ ಭೂಷಣ್ ಹರಿಚಂದನ್ ಅವರನ್ನು ಕ್ರಮವಾಗಿ ಛತ್ತೀಸ್ಗಢ ಮತ್ತು ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕ ಮಾಡಲಾಗಿತ್ತು.

2019: ಪಂಡೋರಿ (ಜಮ್ಮು ಮತ್ತು ಕಾಶ್ಮಿರ): ಕಾಶ್ಮೀರ ವಿಷಯ ಇತ್ಯರ್ಥವಾಗಿಯೇ ಆಗುತ್ತದೆಭೂಮಿಯ ಮೇಲಿನ ಯಾವ ಶಕ್ತಿಯೂ ಅದನ್ನು  ತಡೆಯಲು ಸಾಧ್ಯವಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಲ್ಲಿ ದೃಢ ಪಡಿಸಿದರುಕಾಶ್ಮೀರವು ನನ್ನ ಹೃದಯದಲ್ಲಿದೆ ಮತ್ತು ಸರ್ಕಾರವು ಅದನ್ನು ಭಾರತದ ಸ್ವರ್ಗವನ್ನಾಗಿ ಮಾತ್ರವಲ್ಲ ಜಗತ್ತಿನ ಪ್ರವಾಸೀ ಸ್ವರ್ಗವನ್ನಾಗಿ ಮಾಡಲು ಬಯಸಿದೆ’ ಎಂದು ಸಿಂಗ್ ಹೇಳಿದರುರಕ್ಷಣಾ ಸಚಿವರು ಇದಕ್ಕೆ ಮುನ್ನ ೧೯೯೯ರ ಕಾರ್ಗಿಲ್ ಸಮರದ್ಲಿ ಹುತಾತ್ಮರಾದ ಯೋಧರ ಸ್ಮಾರಕಕ್ಕೆ ತೆರಳಿ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರುಭಾರತವು ’ಆಪರೇಷನ್ ವಿಜಯ್ ೨೦ನೇ ವರ್ಷಾಚರಣೆ ನೆನಪಿಗಾಗಿ ಜಮ್ಮು ಮತ್ತು ಕಾಶ್ಮೀರದ ಡ್ರಾಸ್ ವಿಭಾಗದಲ್ಲಿ  ಸ್ಮಾರಕವನ್ನು ನಿರ್ಮಿಸಿ ರಾಷ್ಟ್ರಕ್ಕೆ ಅರ್ಪಿಸಲಾಗಿದೆರಾಜನಾಥ್ ಸಿಂಗ್ ಅವರು ಸಾಂಬಾ ಜಿಲ್ಲೆಯಲ್ಲಿನ ಕಥುವಾ ಮತ್ತು ಬಸಂತರದ ಉಜಿಹ್ನಲ್ಲಿ ಗಡಿ ರಸ್ತೆಗಳ ಸಂಘಟನೆಯು (ಬಾರ್ಡರ್ ರೋಡ್ಸ್ ಆರ್ಗನೈಸೇಷನ್ಬಿಆರ್ನಿರ್ಮಿಸಿರುವ ಎರಡು ಸೇತುವೆಗಳನ್ನೂ ಉದ್ಘಾಟಿಸಿದರುಕಥುವಾದಲ್ಲಿ ಉಜಿಹ್ ನದಿಯ ಮೇಲೆ ನಿರ್ಮಿಸಲಾಗಿರುವ  ಸೇತುವೆಗಳನ್ನು ೫೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆಬಿಆರ್ ಈವರೆಗೆ ನಿರ್ಮಿಸಿರುವ ಸೇತುವೆಗಳಲ್ಲೇ ಅತ್ಯಂತ ಉದ್ದದ ಸೇತುವೆ ಇದಾಗಿದೆಕಥುವಾದಲ್ಲಿ ಮಾತನಾಡುತ್ತಾ ಸಚಿವರು ’ಕಾಶ್ಮೀರ ವಿಷಯವು ಇತ್ಯರ್ಥವಾಗಿಯೇ ಆಗುತ್ತದೆ ಮತ್ತು ಭೂಮಿಯ ಮೇಲಿನ ಯಾವ ಶಕ್ತಿಯೂ ಅದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು. ’ಮಾತುಕತೆಗಳ ಮೂಲಕ ಆಗದಿದ್ದರೆಆಗ ಏನು ಮಾಡಬೇಕು ಎಂದು ನಮಗೆ ಗೊತ್ತಿದೆ’ ಎಂದು ಅವರು ನುಡಿದರುಗೃಹಸಚಿವರಾಗಿ ವಿಷಯದ ಇತ್ಯರ್ಥಕ್ಕಾಗಿ ’ತಥಾಕಥಿತ ನಾಯಕರನ್ನು’ ಮಾತುಕತೆಗೆ ಬರುವಂತೆ ತಾನು ಪದೇ ಪದೇ ಮನವಿ ಮಾಡಿದ್ದುದಾಗಿ ಸಿಂಗ್ ಪ್ರತಿಪಾದಿಸಿದರುಹಿಂದಿನ ಸರ್ಕಾರದಲ್ಲಿ ಸಿಂಗ್ ಅವರು ಗೃಹ ಸಚಿವರಾಗಿದ್ದರು.  ಜಮ್ಮು ಮತ್ತು ಕಾಶ್ಮೀರದಲ್ಲಿ ತ್ವರಿತ ಅಭಿವೃದ್ದಿ ಮತ್ತು ಸಮೃದ್ಧಿ ಸ್ಥಾಪನೆಗೆ ನಾವು ಬಯಸುತ್ತೇವೆ ಎಂದು ಅವರು ನುಡಿದರು.

2019: ವಾರಾಣಸಿ
ಸೋನಭದ್ರ ಜಿಲ್ಲೆಯ ಉಂಭಾ ಗ್ರಾಮದಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಯ ಸಂತ್ರಸ್ಥರನ್ನು ಕಡೆಗೂ ಭೇಟಿ ಮಾಡಿ ಸಾಂತ್ವನ ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಅವರು ಮೃತರ ಕುಟುಂಬಗಳಿಗೆ ತಲಾ ೨೫ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಆಗ್ರಹಿಸಿದರುಕಾಂಗ್ರೆಸ್ ಪಕ್ಷವು ಸಂತ್ರಸ್ಥರಿಗೆ ತಲಾ ೧೦ ಲಕ್ಷ ರೂಪಾಯಿಗಳನ್ನು ನೀಡುವುದು ಎಂದೂ ಅವರು ಪ್ರಕಟಿಸಿದರುವಾರಾಣಸಿಯಿಂದ ೪೦ ಕಿಮಿ ನೈಋತ್ಯಕ್ಕೆ ಇರುವ ಚುನಾರ್ ಕೋಟೆಯ ಅತಿಥಿಗೃಹದಲ್ಲಿ ಸಂತ್ರಸ್ಥ ಕುಟುಂಬಗಳನ್ನು ಭೇಟಿ ಮಾಡಿದ ಪ್ರಿಯಾಂಕಾ ಅವರು ’ಈಗ ವಾಪಸ್ ಹೋಗುತ್ತಿದ್ದೇನೆಆದರೆ ಗ್ರಾಮಸ್ಥರ ಭೇಟಿಗೆ ಮತ್ತೆ ಬರುತ್ತೇನೆ’ ಎಂದು ಹೇಳಿದರುಚುನಾರ್ ಕೋಟೆಯಲ್ಲಿ ಕಳೆದ ರಾತ್ರಿ ಪ್ರಿಯಾಂಕಾ ಅವರನ್ನು ಮಿರ್ಜಾಪುರ ಜಿಲ್ಲಾ ಅಧಿಕಾರಿಗಳು ದಿಗ್ಬಂಧನಕ್ಕೆ ಒಳಪಡಿಸಿದ್ದರುಮಿರ್ಜಾಪುರವನ್ನು ಹೊರತು ಪಡಿಸಿ ತಾವು ಇಷ್ಟ ಪಟ್ಟ ಕಡೆ ಹೋಗಲು ಪ್ರಿಯಾಂಕಾ ಅವರು ಸ್ವತಂತ್ರರಾಗಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಶನಿವಾರ ಹೇಳಿದ್ದಕ್ಕೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಪ್ರತಿಕ್ರಿಯಿಸಿದ ಪ್ರಿಯಾಂಕಾ ಅವರು ’ಸೋನಭದ್ರ ಗುಂಡಿನ ಘರ್ಷಣೆ ಸಂತ್ರಸ್ಥರ ಕುಟಂಬಗಳನ್ನು  ಭೇಟಿ ಮಾಡದಂತೆ ನನ್ನನ್ನು ತಡೆಯಲು ಯತ್ನಿಸಿದ್ದ ಅಧಿಕಾರಿಗಳು ಈಗ  ನನ್ನನ್ನು ಬಂಧಿಸಲಾಗಿಲ್ಲ ಎಂದು ಹೇಳಿದ್ದಾರೆ ಮತ್ತು ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರಳು ಎಂದಿದ್ದಾರೆನಾನು ಕುಟುಂಬಗಳನ್ನು ಭೇಟಿ ಮಾಡಿದ್ದೇನೆ ಮತ್ತು ಈಗ ವಾಪಸ್ ಹೋಗುತ್ತಿದ್ದೇನೆಆದರೆ ಮತ್ತೆ ಬರುತ್ತೇನೆ ಎಂಬುದಾಗಿ ಅವರಿಗೆ ಹೇಳಲು ಇಚ್ಛಿಸುತ್ತೇನೆ’ ಎಂದು ನುಡಿದರು.

2019: ಕೇರಳ: ಕೇರಳದ  ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು ಹಲವಡೆ ಪ್ರವಾಹ ಸ್ಥಿತಿ ಉಂಟಾಯಿತು. ಭಾರತೀಯ ಹವಾಮಾನ ಇಲಾಖೆಯು ಜುಲೈ 22ರವರೆಗೆ ಕಟ್ಟೆಚ್ಚರವನ್ನು ಘೋಷಿಸಿತು. ಏಳು ಮಂದಿ ಮೀನುಗಾರರು ಕಣ್ಮರೆಯಾಗಿದ್ದು, ಎರಡು ಜಿಲ್ಲೆಗಳಲ್ಲಿ ಪರಿಹಾರ ಶಿಬಿರಗಳನ್ನು ತೆರೆಯಲಾಯಿತು. ನೈಋತ್ಯ ಮುಂಗಾರು ತೀವ್ರಗೊಂಡ ಪರಿಣಾಮವಾಗಿ ಸತತ ಎರಡನೇ ದಿನವೂ ಜಡಿಮಳೆ ಸುರಿಯಿತು. ಕಣ್ಮರೆಯಾಗಿರುವ ಮೀನುಗಾರರು ವಿಳ್ಹಿಂಜಮ್ ಮತ್ತು ಕೊಲ್ಲಂನ ಶಕ್ತಿಕುಲ್ನಗರದಿಂದ ಪ್ರತ್ಯೇಕ ದೋಣಿಗಳಲ್ಲಿ ಸಮುದ್ರದತ್ತ ತೆರಳಿದ್ದರು ಎಂದು ಸುದ್ದಿ ಮೂಲಗಳು ತಿಳಿಸಿದವು. ಕಾಸರಗೋಡು, ಇಡುಕ್ಕಿ, ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಸೂಚಿಸಿತು.

2018: ನವದೆಹಲಿ: ಇಡೀ ರಾಷ್ಟ್ರವೇ ಕುತೂಹಲದಿಂದ ವೀಕ್ಷಿಸುತ್ತಿದ್ದ ಅವಿಶ್ವಾಸ ನಿರ್ಣಯದ ಅಗ್ನಿ
ಪರೀಕ್ಷೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಯ ಗಳಿಸುವುದರ ಜೊತೆಗೇ ೨೦೨೪ರಲ್ಲಿ ಮತ್ತೊಮ್ಮೆ ಅವಿಶ್ವಾಸ ನಿರ್ಣಯ ಮಂಡಿಸುವಂತೆ ವಿಪಕ್ಷಗಳಿಗೆ ಸವಾಲು ಎಸೆದರು.  ತೆಲುಗುದೇಶಂ ಪಕ್ಷವು (ಟಿಡಿಪಿಇತರ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಸದನವು ಧ್ವನಿಮತದಿಂದ ತಿರಸ್ಕರಿಸಿತುಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದಾಗ ಒಟ್ಟು ೪೫೧ ಮತಗಳ ಪೈಕಿ ೧೨೬ ಮತಗಳು ನಿರ್ಣಯದ ಪರವಾಗಿಯೂ೩೨೫ ಮತಗಳು ನಿರ್ಣಯಕ್ಕೆ ವಿರುದ್ಧವಾಗಿಯೂ ಬಂದವುಇದಕ್ಕೂ ಮುನ್ನ ನಿರ್ಣಯದ ಪರವಾಗಿರುವವರು ಹೌದು ಎಂಬುದಾಗಿಯೂವಿರುದ್ಧವಾಗಿರುವವರು ಇಲ್ಲ ಎಂಬುದಾಗಿಯೂ ಸೂಚಿಸುವಂತೆ ಸುಮಿತ್ರಾ ಮಹಾಜನ್ ಸೂಚಿಸಿದಾಗ ಧ್ವನಿ ಮತವು ನಿರ್ಣಯಕ್ಕೆ ವಿರುದ್ಧವಾಗಿ ಮೂಡಿ ಬಂತು.  ತೆಲುಗುದೇಶಂ ಪಕ್ಷವು ಇತರ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಮಂಡಿಸಿದ ಅವಿಶ್ವಾಸ ನಿರ್ಣಯ ಮೇಲಿನ ಇಡೀ ದಿನದ ಚರ್ಚೆಗೆ ಬಳಿಕ ಒಂದೂವರೆ ಗಂಟೆಗಳ ಸುದೀರ್ಘ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ ’೨೦೨೪ರವರೆಗೂ ತಾವೇ ಅಧಿಕಾರದಲ್ಲಿ ಮುಂದುವರೆಯುವುದಾಗಿ’ ಪರೋಕ್ಷವಾಗಿ ಸೂಚಿಸಿದ್ದಲ್ಲದೆ೨೦೨೪ರಲ್ಲಿ ಇನ್ನೊಮ್ಮೆ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ವಿಪಕ್ಷಗಳಿಗೆ ಸವಾಲು ಹಾಕಿದರು.  ತಮ್ಮ ಬಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ಪುಂಖಾನುಪುಂಖವಾಗಿ ತರಾಟೆಗೆ ತೆಗೆದುಕೊಂಡ ಅವರುರೈತರಿಗೆ ಬೆಂಬಲ ಬೆಲೆ ಏರಿಕೆಯಿಂದ ಹಿಡಿದುತ್ರಿವಳಿ ತಲಾಖ್ ಮಸೂದೆಯವರೆಗೆ ತಮ್ಮ ನೇತೃತ್ವದ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರುದೇಶಾದ್ಯಂತ ರಸ್ತೆಗಳ ನಿರ್ಮಾಣವಾಗುತ್ತಿರುವ ಬಗ್ಗೆಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿದ್ದುಲಕ್ಷಾಂತರ ಉದ್ಯೋಗ ಸೃಷ್ಟಿ ಸೇರಿದಂತೆ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಮುಂದಿಟ್ಟರು.  ರಾಷ್ಟ್ರದ ೧೨೫ ಕೋಟಿ ಜನರು ಮಾತ್ರವೇ ಪ್ರಧಾನಿ ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳಬೇಕುಯಾರನ್ನು ಪದಚ್ಯತಿಗೊಳಿಸಬೇಕು ಎಂದು ತೀರ್ಮಾನಿಸುತ್ತಾರೆ ಎಂದು ಅವರು ನುಡಿದರುರಾಹುಲ್ ಗಾಂಧಿ ಅವರ ಆಲಿಂಗನ ರಾಜಕೀಯಸೋನಿಯಾ ಗಾಂಧಿ ಅವರ ಸಂಖ್ಯೆಗಳ ಲೆಕ್ಕಾಚಾರವನ್ನೂ ತರಾಟೆಗೆ ತೆಗೆದುಕೊಂಡರುಆಂಧ್ರ ಪ್ರದೇಶದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ನೀಡಿದ ಭರವಸೆ ಈಡೇರಿಸಲು ಸರ್ಕಾರ ಈಗಲೂ ಬದ್ಧ ಎಂದು ಅವರು ನುಡಿದರು.  ನಾವು ರಾಷ್ಟ್ರದ ಜನರ ಸಲುವಾಗಿ ಮಾಡಲು ಸಾಧ್ಯವಿರುವುದೆಲ್ಲವನ್ನೂ ಮಾಡುತ್ತೇವೆ೨೦೨೪ರಲ್ಲಿ ಇನ್ನೊಂದು ಅವಿಶ್ವಾಸ ನಿರ್ಣಯವನ್ನು ತನ್ನಿ ಎಂಬುದಾಗಿ ನಾನು ನಿಮಗೆ ಸೂಚಿಸುತ್ತೇನೆ’ ಎಂಬುದಾಗಿ ಹೇಳುವ ಮೂಲಕ ಪ್ರಧಾನಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. ಚರ್ಚೆ ಆರಂಭಕ್ಕೆ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ’ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇಂದು ಅತ್ಯಂತ ಮಹತ್ವದ ದಿನ’ ಎಂದು ಟ್ವೀಟ್ ಮಾಡಿದ್ದರುಅವಿಶ್ವಾಸ ನಿರ್ಣಯವು ಒಡಿಶಾದ ಜನರಿಗೆ ಒಳ್ಳೆಯದಲ್ಲ ಎಂದು ಹೇಳಿ ಬಿಜು ಜನತಾ ದಳವು (ಬಿಜೆಡಿಲೋಕಸಭೆಯಿಂದ ಸಭಾತ್ಯಾಗ ಮಾಡಿತ್ತು.  ಪಕ್ಷದ ಪರವಾಗಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ ಮೊದಲಿಗರಾಗಿ ಮಾತನಾಡಿದ ತೆಲುಗುದೇಶಂ ಪಕ್ಷದ (ಟಿಡಿಪಿಜಯದೇವ ಗಲ್ಲಾ ಅವರು ಆಂಧ್ರ ಪ್ರದೇಶಕ್ಕೆ ವಿಶೇಷ ಕೆಟಗರಿ ಸ್ಥಾನಮಾನ (ಎಸ್ ಸಿಎಸ್ನೀಡುವಂತೆ ಪುನಃ ಆಗ್ರಹಿಸಿದರು.  ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ  ಅವಿಶ್ವಾಸ ನಿರ್ಣಯದಿಂದಾಗಿ ಬೀಳುವುದಿಲ್ಲ ಎಂದು ಪ್ರತಿಕ್ರಿಯಿಸಿದ ಎನ್ ಡಿಎ ಮಿತ್ರ ಪಕ್ಷ ಶಿವ ಸೇನಾ ಲೋಕಸಭಾ ಕಲಾಪದಿಂದ ಹೊರಗುಳಿಯುವುದಾಗಿ ಮೊದಲೇ ಪ್ರಕಟಿಸಿತ್ತು.
ಸರ್ಕಾರದ ವಿರುದ್ಧ ಪ್ರಬಲ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮಗೆ ಸರ್ಕಾರದ ಮೇಲೆ ಯಾವುದೇ ಸಿಟ್ಟಿಲ್ಲ ಎಂದು ಹೇಳಿ ನೇರವಾಗಿ ಪ್ರಧಾನಿ ರಾಹುಲ್ ಗಾಂಧಿ ಅವರ ಬಳಿಗೆ ತೆರಳಿ ಅವರನ್ನು ಆಲಿಂಗಿಸಿದ್ದರು.  ರಾಹುಲ್ ಗಾಂಧಿ ಅವರ  ವರ್ತನೆಗೆ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಗರಂ ಆಗಿದ್ದರುತಾವು ಆಲಿಂಗನಕ್ಕೆ ವಿರೋಧಿಯಲ್ಲಆದರೆ ಇದು ಸಂಸದೀಯ ವರ್ತನೆಗೆ ವಿರುದ್ಧ ಎಂದು ಅವರು ಆಕ್ಷೇಪಿಸಿದ್ದರು.  ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಸರ್ಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅವಿಶ್ವಾಸ ನಿರ್ಣಯದ ಪರಿಸ್ಥಿತಿ ಎದುರಿಸಿದ್ದು ಇದೇ ಮೊದಲುಇಡೀ ದೇಶದ ಕಣ್ಣು ಶುಕ್ರವಾರ ಸಂಪೂರ್ಣವಾಗಿ ಲೋಕಸಭಾ ಕಲಾಪದ ಮೇಲಿತ್ತು. ಆಂಧ್ರಪ್ರದೇಶದಕ್ಕೆ ವಿಶೇಷ ಸ್ಥಾನ ಮಾನ ನೀಡಲಾಗಿಲ್ಲ ಮತ್ತು ಸಾಕಷ್ಟು ಹಣ ಒದಗಿಸಲಾಗಿಲ್ಲ ಎಂಬ ಕಾರಣಕ್ಕಾಗಿ ತೆಲುಗುದೇಶಂ ಪಕ್ಷವು ತಂದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯು ಇನ್ನೂ ಮುಂದಕ್ಕೆ ಸಾಗಿ ರಫೇಲ್ ವ್ಯವಹಾರದಿಂದ ಹಿಡಿದು ಗುಂಪು ಹಿಂಸಾಚಾರದವರೆಗೆ ದೇಶದ ಹಲವಾರು ವಿಷಯಗಳನ್ನು ತನ್ನ ಮಡಿಲಿಗೆ ಸೆಳೆದುಕೊಂಡಿತ್ತುಸದಸ್ಯರ ವಾಗ್ವಾದದ ಪರಿಣಾಮವಾಗಿ ಸದನ ಎರಡು ಬಾರಿ ಮುಂದೂಡಿಕೆಯಾಯಿತುಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಟಕೀಯ ’ಆಲಿಂಗನ ರಾಜಕೀಯಕ್ಕೂ ಸದನ ಸಾಕ್ಷಿಯಾಯಿತು. 

2018: ನವದೆಹಲಿಅವಿಶ್ವಾಸ ನಿರ್ಣಯದ ಸದನ ಪರೀಕ್ಷೆ ಸರ್ಕಾರಕ್ಕಲ್ಲಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಎಂದು ಲೋಕಸಭೆಯಯಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರುಪೂರ್ಣ ಪ್ರಮಾಣದ ಬಹುಮತವನ್ನು ಪಡೆದ ಸರ್ಕಾರದ ಜೊತೆಗೆ ನಿಲ್ಲುವಂತೆ ಮತ್ತು ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸುವಂತೆ ಸಂಸದರಿಗೆ ಮನವಿ ಮಾಡಿದರುತೆಲುಗುದೇಶಂ ಪಕ್ಷವು ಇತರ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ನಡೆದ ಇಡೀದಿನ ಚರ್ಚೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ಸದಸ್ಯರು ಮಾಡಿದ ವಾಕ್ ಪ್ರಹಾರಕ್ಕೆ ಪ್ರಧಾನಿ ಉತ್ತರಿಸಿದರು. ಇಡೀ ದಿನ ಕಲಾಪವನ್ನು ನಡೆಸಿಕೊಟ್ಟ ಲೋಕಸಭಾಧ್ಯಕ್ಷರ ತಾಳ್ಮೆಯನ್ನು ಶ್ಲಾಘಿಸಿದ ಪ್ರಧಾನಿ ’ಅವಿಶ್ವಾಸ ನಿರ್ಣಯವು ಪ್ರಜಾಪ್ರಭುತ್ವದ ಶಕ್ತಿ ರಾಷ್ಟ್ರದಲ್ಲಿ ರಾಜಕೀಯ ಹೇಗೆ ಆಟವಾಡುತ್ತದೆ ಎಂಬುದನ್ನು ನೋಡಲೂ ಇದು ಉತ್ತಮ ಅವಕಾಶ’ ಎಂದು ಮೋದಿ ನುಡಿದರುಅಭಿವೃದ್ಧಿಗೆ ವಿರೋಧ ಹಾಗೂ ನಕಾರಾತ್ಮಕತೆಯನ್ನು ನಾನು ಗಮನಿಸಬಲ್ಲೆನಮ್ಮ ಅಭಿಪ್ರಾಯವನ್ನು ಮುಂದಿಡಲು ಇದು ಉತ್ತಮವಕಾಶ ಎಂದು ನಾನು ನಂಬುವೆಆದರೆ ರಾಷ್ಟ್ರವು ಇತರರು ಪ್ರಯೋಗಿಸುತ್ತಿರುವ ನಕಾರಾತ್ಮಕತೆ ಮತ್ತು ಅಭಿವೃದ್ಧಿ ವಿರೋಧಿರಾಜಕೀಯವನ್ನೂ ಗಮನಿಸುತ್ತಿದೆ ಎಂದು ಪ್ರಧಾನಿ ಹೇಳಿದರು.   ಅವಿಶ್ವಾಸ ನಿರ್ಣಯ ಏಕೆ ಎಂದು ಹಲವರು ಅಚ್ಚರಿ ಪಡುತ್ತಿದ್ದಾರೆವಿರೋಧ ಪಕ್ಷಗಳು ಚರ್ಚೆಯನ್ನು ವಿಳಂಬಿಸಲು ಯತ್ನಿಸುತ್ತಿವೆ ಎಂಬುದಾಗಿ ನುಡಿದ ಮೋದಿ ’ಚರ್ಚೆಯನ್ನು ವಿಳಂಬಿಸುವುದರಿಂದ ಭೂಕಂಪ ಸಂಭವಿಸುತ್ತದೆಯೇಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದರು.  ರಾಹುಲ್ ಗಾಂಧಿಯವರ ಅಪ್ಪುಗೆ ನೀತಿಯನ್ನೂ ಪ್ರಸ್ತಾಪಿಸಿದ ಪ್ರಧಾನಿ, ’ನನ್ನನ್ನು ಅಪ್ಪಿಕೊಳ್ಳಲು ರಾಹುಲ್ ಗಾಂಧಿ ಅವರಿಗಿದ್ದ ಅವಸರ ನನ್ನನ್ನು ಅಚ್ಚರಿಗೊಳಿಸಿದೆನೀವು ಜನರು ಮತ್ತು ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇರಿಸಬೇಕುನನ್ನನ್ನು ಅಪ್ಪಿಕೊಳ್ಳಲು ಜನರು ಧಾವಿಸಿದ್ದಾರೆಅವರಿಗೆ ಏನವಸರ?’ ಎಂದು ಪ್ರಶ್ನಿಸಿದರು.  ೨೦೧೯ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಪ್ರಧಾನಿಯಾಗುವೆ ಎಂಬುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆಆದರೆ ಕಷ್ಟ ಪಟ್ಟ ಇತರರ ಗತಿ ಏನುಎಂದು ಪ್ರಶ್ನಿಸುವ ಮೂಲಕ ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆಯ ಮಹತ್ವಾಕಾಂಕ್ಷೆಯನ್ನು ಮೋದಿ ತರಾಟೆಗೆ ತೆಗೆದುಕೊಂಡರು.  ‘ಪ್ರಧಾನಿಯವರು ೧೫ ನಿಮಿಷಕ್ಕಿಂತ ಹೆಚ್ಚು ಕಾಲ ಸದನದಲ್ಲಿ ನಿಲ್ಲಲು ಶಕ್ತರಾಗಿಲ್ಲ ಎಂದು ಕೆಲವರು ಹೇಳುತ್ತಾರೆನಾನು ಇಲ್ಲಿ ನಿಂತಿದ್ದೇನೆ ಮತ್ತು ಕೆಲಸ ಮಾಡಿದ್ದೇನೆ ಎಂಬ ಹೆಮ್ಮೆ ನನಗಿದೆಲೆಕ್ಕಾಚಾರಕ್ಕೆ ಮೊದಲೇ ಜನರು ನನ್ನ ಪೀಠದತ್ತ ಬಂದು ನಾನು ನಿಲ್ಲಬೇಕೆಂದು ಬಯಸುತ್ತಾರೆಯಾರನ್ನಾದರೂ ಕುಳಿತುಕೊಳ್ಳುವಂತೆ ಅಥವಾ ಹೋಗುವಂತೆ ಯಾರೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅವರು ಅರಿಯಬೇಕುಇದನ್ನು ನಿರ್ಧರಿಸುವುದು ರಾಷ್ಟ್ರ’ ಎಂದು ಮೋದಿ ನುಡಿದರು.  ಇದು ಸರ್ಕಾರಕ್ಕೆ ಸದನ ಪರೀಕ್ಷೆಯಲ್ಲಕಾಂಗ್ರೆಸ್ಸಿಗೆ ಸದನ ಪರೀಕ್ಷೆಅವಿಶ್ವಾಸ ನಿರ್ಣಯವು ಅವರಿಗೆ ಅವರ ಸದಸ್ಯರನ್ನು ಒಟ್ಟಿಗೆ ಇರಿಸಿಕೊಳ್ಳಲು ಅವಕಾಶಮೋದಿಯನ್ನು ಕಿತ್ತು ಹಾಕುವುದಷ್ಟೇ ಗುರಿನೀವು ಸರ್ಕಾರದ ಮೇಲೆ ಅವಿಶ್ವಾಸ ಇಟ್ಟಿರುವಷ್ಟೇ ನಿಮ್ಮ ಮಿತ್ರ ಪಕ್ಷಗಳುಗೆಳೆಯರ ಮೇಲೆ ವಿಶ್ವಾಸ ಇಡಿ ಎಂದು ಮೋದಿ ಸೂಚಿಸಿದರು.  ನಮಗೆ ಇಲ್ಲಿ ಸಂಖ್ಯೆ ಇದೆ೧೨೫ ಕೋಟಿ ಜನರ ಆಶೀರ್ವಾದವೂ ಇದೆಕಳೆದ ನಾಲ್ಕು ವರ್ಷಗಳಿಂದ ವೋಟ್ ಬ್ಯಾಂಕ್ ಬಗ್ಗೆ ಚಿಂತಿಸದೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾರ್ಗದಲ್ಲಿ ನಾವು ಸಾಗುತ್ತಿದ್ದೇವೆ ಎಂದು ವಿರೋಧ ಪಕ್ಷ ಸದಸ್ಯರ ಪ್ರತಿಭಟನೆ ಮಧ್ಯೆ ಪ್ರಧಾನಿ ನುಡಿದರು.  ಟಿಡಿಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ನುಗ್ಗಿದರುಬಿಜೆಪಿ ಮತ್ತು ವಿರೋಧಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತುಪ್ರಧಾನಿಯವರು ಕೇವಲ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದಾರೆಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಮಾತನಾಡುತ್ತಿಲ್ಲ ಎಂದು ತೆಲುಗುದೇಶಂ ಸದಸ್ಯರು ಆಕ್ಷೇಪಿಸಿದರುಪ್ರತಿಭಟನೆ ಮಧ್ಯೆ ಮಾತು ಮುಂದುವರೆಸಿದ ಪ್ರಧಾನಿ ಗ್ರಾಮಗಳಿಗೆ ವಿದ್ಯುತ್ ಒದಗಿಸಿದ ಬಗ್ಗೆಈಶಾನ್ಯ ಭಾರತದ ದಲಿತರು ಅಲ್ಪಸಂಖ್ಯಾತರಿಗೆ ಸವಲತ್ತುಗಳನ್ನು ಕಲ್ಪಿಸಿದ ಬಗ್ಗೆ ವಿವರಿಸಿದರುಚುನಾವಣಾ ಹಿತಾಸಕ್ತಿಗಳನ್ನು ರಕ್ಷಿಸಿಲ್ಲ ಎಂಬ ಕಾರಣಕ್ಕಾಗಿ ಅಲ್ಲಿನ ಅಭಿವೃದ್ಧಿಯನ್ನು  ಹಿಂದೆ ನಿರ್ಲಕ್ಷಿಸುತ್ತಾ ಬರಲಾಗಿದೆ ಎಂದು ಅವರು ನುಡಿದರುರೈತರ ಆದಾಯ ದುಪ್ಪಟ್ಟುಗೊಳಿಸಲು ತಮ್ಮ ಸರ್ಕಾರ ಯತ್ನಿಸುತ್ತಿರುವ ಬಗ್ಗೆ ವಿವರಿಸಿದ ಪ್ರಧಾನಿರಾಹುಲ್ ಗಾಂಧಿಯವರು ರಫೇಲ್ ವಿಷಯ ಎತ್ತಿಕೊಂಡು ಎರಡು ರಾಷ್ಟ್ರಗಳನ್ನು ಟೀಕಿಸಿದ್ದು ಬಾಲಿಶ ವರ್ತನೆ ಎಂದು ಹೇಳಿದರು.  ಇಂತಹ ರಾಜಕಾರಣ ದೇಶಕ್ಕೆ ಯಾವುದೇ ಒಳ್ಳೆಯದನ್ನೂ ಮಾಡುವುದಿಲ್ಲರಫೇಲ್ ಒಪ್ಪಂದ ಎರಡು ಜವಾಬ್ದಾರಿಯುತ ರಾಷ್ಟ್ರಗಳ ಸರ್ಕಾರಗಳ ಮಧ್ಯೆ ಆಗಿದೆಎರಡು ಪಕ್ಷಗಳ ಮಧ್ಯೆ ಅಲ್ಲ ಎಂದು ನಾನು ಜನರಿಗೆ ತಿಳಿಸಬಯಸುತ್ತೇನೆ ಎಂದು ಮೋದಿ ಚುಚ್ಚಿದರು.   ಅವಿಶ್ವಾಸ ನಿರ್ಣಯವು ಕಾಂಗ್ರೆಸ್ ಪ್ರಕೃತಿಯಾಗಿದೆರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ತರುವ ಸಲುವಾಗಿ ಅವರು  ನಿರ್ಣಯವನ್ನು ಮಂಡಿಸಿದ್ದಾರೆ ಎಂದು ನುಡಿದ ಮೋದಿತಮ್ಮ ಕಡೆಗೆ ಸಂಖ್ಯೆ ಇದೆ ಎಂದು ಹೇಳಿದ್ದಕ್ಕಾಗಿ ಸೋನಿಯಾ ಗಾಂಧಿ ಅವರನ್ನೂ ಟೀಕಿಸಿದರು.  ಪ್ರಧಾನಿಯವರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ ಎಂಬುದಾಗಿ ರಾಹುಲ್ ಗಾಂಧಿ ಮಾಡಿದ ಟೀಕೆಯನ್ನು ಪ್ರಸ್ತಾಪಿಸಿದ ಮೋದಿ, ’ನೀವು ನಾಮ್ ದಾರ್ನಾನು ಕಾಮ್ ದಾರ್ಹೇಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯಎಂದು ಚುಚ್ಚಿದರು.  ರಾಹುಲ್ ಗಾಂಧಿ ಅವರು ಕಣ್ಣು ಮಿಟುಕಿಸಿದ್ದನ್ನು ಮತ್ತು ತಮ್ಮನ್ನು ಚೌಕಿದಾರ್ ಅಲ್ಲ ಭ್ರಷ್ಟಾಚಾರದ ಭಾಗೀದಾರ್ ಎಂಬುದಾಗಿ ಟೀಕಿಸಿದ್ದನ್ನೂ ಲೇವಡಿ ಮಾಡಿದ ಮೋದಿ ತಮ್ಮ ಎದೆಯನ್ನು ತಟ್ಟಿ ಕರತಾಡನ ಹಾಗೂ ’ಮೋದಿ ಮೋದಿ’ ಮಂತ್ರದ ಮಧ್ಯೆ  ನಾನೊಬ್ಬ ಚೌಕಿದಾರನಾನು ಭಾಗೀದಾರ ಕೂಡಾಆದರೆ ನಿಮ್ಮಂತೆ ಸೌದಾಗಾರ ಅಲ್ಲ’ ಎಂದು ಹೇಳಿದರು.  ರಾಹುಲ್ ಗಾಂಧಿಯವರತ್ತ ತಿರುಗಿದ ಮೋದಿ ’ನಾವು ಜನರ ಬೇಸರಗಳ ಭಾಗೀದಾರರುನಾವು ಅಭಿವೃದ್ಧಿಯ ಭಾಗೀದಾರರು’ ಎಂದು ನುಡಿದರು.  ದೇಶವನ್ನು ಹಿಂಸೆಯತ್ತ ತಳ್ಳಲು ಸಂಚು ನಡೆದಿದೆಚುನಾವಣೆ ಗೆಲ್ಲಲು ಅವರು ಉಳ್ಳವರು ಮತ್ತು ಇಲ್ಲದವರನ್ನು ಭಾವಾವೇಶಗೊಳಿಸಿ ಬ್ಲಾಕ್ ಮೇಲ್ ಮಾಡುತ್ತಾರೆಬಾಬಾ ಅಂಬೇಡ್ಕರ್ ಅವರನ್ನು ನಗೆಪಾಟಲಿಗೆ ಈಡು ಮಾಡಿ ಈಗ ಹಾಡಿ ಹೊಗಳುತ್ತಿರುವ ಜನ ಇವರುಕಾಂಗ್ರೆಸ್ ವಾಸ್ತವ ನೆಲೆಗಟ್ಟಿನ ಸಂಪರ್ಕ ಕಡಿದುಕೊಂಡಿದೆ ಎಂದೂ ಮೋದಿ ಚುಚ್ಚಿದರು.  ‘ಆಂಧ್ರ ಪ್ರದೇಶವನ್ನು ರಾಜಕೀಯ ಲಾಭಕ್ಕಾಗಿ ವಿಭಜಿಸಲಾಯಿತುನಾಯ್ಡು ಮತ್ತು ಕೆಸಿಆರ್ ವಿಭಜನೆಗಾಗಿ ಹೋರಾಡುತ್ತಿದ್ದರುಟಿಆರ್ ಎಸ್ ಈಗ ಪ್ರಬುದ್ಧತೆ ತೋರುತ್ತಿದೆಕಾಂಗ್ರೆಸ್ ಚರಣ್ ಸಿಂಗ್ ಜಿ ಅವರಿಗೆ ಏನು ಮಾಡಿತುಚಂದ್ರಶೇಖರ್ ಜಿ ಅವರಿಗೆ ಏನು ಮಾಡಿತುದೇವೇ ಗೌಡಾಜಿ ಅವರಿಗೆ ಏನು ಮಾಡಿತುಐಕೆ ಗುಜ್ರಾಲ್ ಜಿ ಅವರಿಗೆ ಏನು ಮಾಡಿತುಎಂದು ಮೋದಿ ಪ್ರಶ್ನಿಸಿದರು.
ಎನ್ ಡಿಎ ಆಂಧ್ರದ ಜನರ ಆಶೋತ್ತರಗಳನ್ನು ಗೌರವಿಸುತ್ತದೆನಾವು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬದಲು ವಿಶೇಷ ಪ್ಯಾಕೇಜ್ ಕೊಡಲು ಒಪ್ಪಿದ್ದೇವೆಇದನ್ನು ಇದನ್ನು ಆಂಧ್ರ ಮುಖ್ಯಮಂತ್ರಿ ಪೂರ್ಣ ತಿಳುವಳಿಯೊಂದಿಗೇ ಒಪ್ಪಿದ್ದಾರೆಈಗ ವೈಎಸ್ ಆರ್ ಪ್ರಭಾವದಿಂದ ಹೊರಬರುತ್ತಿದ್ದಾರೆ ಎಂದು ಮೋದಿ ನುಡಿದರು.  ಅಟಲ್ ಜಿ ಅವರು ಉತ್ತರಾಖಂಡಛತ್ತೀಸಗಢ ಮತ್ತು ಜಾರ್ಖಂಡ್  ಮೂರು ರಾಜ್ಯಗಳನ್ನು ರಚಿಸಿದವುಅವು ಈಗ ಸಮೃದ್ಧವಾಗುತ್ತಿವೆಕಾಂಗ್ರೆಸ್ ಆಂಧ್ರ ಪ್ರದೇಶವನ್ನು ವಿಭಜಿಸಿತುಅದರ ಆಗಿನ ವರ್ತನೆ ನಾಚಿಕೆಗೇಡಿನದು ಎಂದು ಮೋದಿ ಟೀಕಿಸಿದರು.  ಸಿಪಿಎಂನ ಸೀತಾರಾಂ ಯೆಚೂರಿಕಾಂಗ್ರೆಸ್ ವಕ್ತಾರ ಸಂಜಯ್ ಝಾ ಅವರು ಪ್ರಧಾನಿ ಒಂದೇ ಒಂದು ಪ್ರಶ್ನೆಗೂ ಉತ್ತರ ನೀಡಿಲ್ಲ ಎಂದು ಆಕ್ಷೇಪಿಸಿದರು.  ಒಂದು ಹಂತದಲ್ಲಿ ವೀರಪ್ಪ ಮೊಯ್ಲಿ ಹೆಸರನ್ನು ಪ್ರಸ್ತಾಪಿಸಿದ ಮೋದಿ,ಆಂಧ್ರಪ್ರದೇಶಕ್ಕೆ ನಾವು ಸಾಧ್ಯವಿರುವಷ್ಟೂ ನೆರವು ನೀಡುತ್ತೇವೆ’ ಎಂದರು. 

2017: ನವದೆಹಲಿನಿರೀಕ್ಷೆಯಂತೆ ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ ಅವರು ಆಯ್ಕೆಯಾದರುಎನ್ ಡಿಎ ಬೆಂಬಲಿತ ಅಭ್ಯರ್ಥಿ ರಾಮನಾಥ ಕೋವಿಂದ ಅವರು 7,02,644 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದರುಯುಪಿಎ ಅಭ್ಯರ್ಥಿ ಮೀರಾಕುಮಾರ್ ಅವರು 3,67,314 ಮತಗಳನ್ನು ಪಡೆದು ಪರಾಜಯಗೊಂಡರುರಾಮನಾಥ ಕೋವಿಂದ ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರುಕೋವಿಂದ ಅವರು 3,34,730 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದಾಗಿ ಕೇಂದ್ರ ಚುನಾವಣಾ ಆಯೋಗ  ಸಂಜೆ ಪತ್ರಿಕಾಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಿಸಿತುದೇಶದ ಮೊದಲ ಪ್ರಜೆಯ ಆಯ್ಕೆಯ ಮತಎಣಿಕೆ ಗುರುವಾರ ಬೆಳಗ್ಗೆ 11ಗಂಟೆಗೆ ಆರಂಭವಾಗಿದ್ದುಸಂಜೆ ವೇಳೆ ಮುಕ್ತಾಯವಾಗಿತ್ತುಆರಂಭ ಮತಎಣಿಕೆಯಲ್ಲಿಯೇ ರಾಮನಾಥ ಕೋವಿಂದ ಭರ್ಜರಿ ಮುನ್ನಡೆ ಸಾಧಿಸಿದ್ದರುಸಂಸದರುಶಾಸಕರ ಒಟ್ಟು ಮತಗಳ ಮೌಲ್ಯ 10, 98. 903. ದೆಹಲಿಯ ಸಂಸತ್ ಭವನದಲ್ಲಿ ಮತಎಣಿಕೆ ಪ್ರಕ್ರಿಯೆ ನಡೆದಿತ್ತುನೂತನವಾಗಿ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಮನಾಥ ಕೋವಿಂದ ಅವರಿಗೆ ಪ್ರಧಾನಿ ನರೇಂದ್ರ ಮೋದಿಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರುದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ ಅವರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಗುಲಾಬಿ ಹೂವು ನೀಡಿ ಅಭಿನಂದಿಸಿರಾಮನಾಥ ಕೋವಿಂದ ಅವರಿಗೆ ಸಿಹಿಯನ್ನೂ ತಿನ್ನಿಸಿದರು.
2017: ಶಿಮ್ಲಾ: ಹಿಂದೂಸ್ತಾನಟಿಬೆಟ್ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ರಾಮ್ಪುರ ವಲಯದಲ್ಲಿ 700 ಮೀಟರ್ ಆಳದ ಕಣಿವೆಗೆ ಬಸ್ ಉರುಳಿ ಬಿದ್ದು ಸಂಭವಿಸಿದ ದುರಂತದಲ್ಲಿ 28 ಮಂದಿ ಸಾವನ್ನಪ್ಪಿಇತರ ಹಲವರು ಗಾಯಗೊಂಡರುದುರಂತದಲ್ಲಿ ಗಾಯಗೊಂಡವರನ್ನು ಖಾನೇರಿಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶಿಮ್ಲಾ ಜಿಲ್ಲಾಧಿಕಾರಿ ರೋಹನ್ ಚಂದ್ ಠಾಕೂರ್ ಹೇಳಿದರುಘಟನಾ ಸ್ಥಳಕ್ಕೆ ದೌಡಾಯಿಸಿದ ರಾಷ್ಟ್ರೀಯ ವಿಪತ್ತು  ನಿಗ್ರಹ ಪಡೆ ಮೇಲಧಿಕಾರಿಗಳ ಉಸ್ತುವಾರಿಯಲ್ಲಿ  ಉಳಿದ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ನಡೆಯಿತುದುರಂತಕ್ಕೀಡಾದ ಬಸ್ಸು ಕಿನೌರ್ ರೆಕಾಂಗ್ ಪಿಯೊದಿಂದ ಸೊಲಾನ್ ನೌನಿ ಕಡೆ ತೆರಳುತ್ತಿತ್ತುಬಸ್ಸಿನಲ್ಲಿ ಒಟ್ಟು 40 ಮಂದಿ ಪ್ರಯಾಣಿಕರಿದ್ದರುಸ್ಥಳದಲ್ಲಿಯೇ ಸಾವಿಗೀಡಾದ 15 ಮೃತದೇಹ ಪತ್ತೆಯಾಯಿತುದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದರು.
2017: ನವದೆಹಲಿ: ರಾಜ್ಯಸಭಾ ಸದಸ್ಯತ್ವಕ್ಕೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ನೀಡಿದ್ದ ರಾಜೀನಾಮೆಯನ್ನು ಸಭಾಪತಿಗಳು ಹಮೀದ್ ಅನ್ಸಾರಿ ಅಂಗೀಕರಿಸಿದರುದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಬಿಜೆಪಿ ಮತ್ತು ಸಭಾಪತಿ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಮಾಯಾವತಿ ಅವರು ರಾಜ್ಯಸಭಾ ಸದಸ್ಯತ್ವಕ್ಕೆ  19 ಮಂಗಳವಾರ ರಾಜೀನಾಮೆ ನೀಡಿದ್ದರುಉತ್ತರ ಪ್ರದೇಶದಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾಯಾವತಿ ಅವರು ರಾಜ್ಯಸಭೆಯಲ್ಲಿ 19 ಬೆಳಗ್ಗೆ ಮಾತನಾಡಿದರುಆದರೆಮಾತನ್ನು ಉತ್ತರ ಪ್ರದೇಶದ ಸಹಾರನ್ಪುರದಲ್ಲಿ ನಡೆದ ಹಿಂಸಾಚಾರಕ್ಕೆ ಸೀಮಿತಗೊಳಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿತ್ತುನನ್ನ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಅವಕಾಶ ಇಲ್ಲ ಎಂದಾದರೆ ನಾನು ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿ ರಾಜ್ಯಸಭೆಯಿಂದ ಹೊರನಡೆದಿದ್ದರುಮುಂದಿನ ಏಪ್ರಿಲ್ಗೆ ಅವರ ಸದಸ್ಯತ್ವದ ಅವಧಿ ಕೊನೆಗೊಳ್ಳುತ್ತಿತ್ತುಮೂರು ಪುಟಗಳ ರಾಜೀನಾಮೆ ಪತ್ರದಲ್ಲಿ ಕಾರಣಗಳನ್ನೂ ವಿವರಿಸಿದ್ದರಿಂದ ತಿರಸ್ಕೃತವಾಗಿತ್ತುಬಳಿಕ ಮಾಯಾವತಿ ಅವರು ನಿಯಮಕ್ಕೆ ಅನುಸಾರವಾಗಿ ಯಾವುದೇ ಕಾರಣವನ್ನು ನಮೂದಿಸದೆಯೇಒಂದು ಸಾಲಿನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.
2017: ಮುಂಬೈ: ಬಾಲಿವುಡ್ ನಟಿ ಕಂಗನಾ ರಾನೌತ್ ಅವರಿಗೆ ಶೂಟಿಂಗ್ ಸಂದರ್ಭದಲ್ಲಿ ಗಾಯವಾಗಿದ್ದುಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ವೈದ್ಯರು ಹೇಳಿದರುಹಿಂದಿನ ದಿನ ಕಂಗನಾ ಅವರು ಸಹ ನಟ ನಿಹಾರ್ ಪಾಂಡ್ಯ ಅವರ ಜೊತೆ ‘ಮಣಿಕರ್ಣಿಕಾದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾದ ಯುದ್ಧದ ದೃಶ್ಯದ ಶೂಟಿಂಗ್ನಲ್ಲಿ ತೊಡಗಿದ್ದರು ವೇಳೆ ಇಬ್ಬರ ನಡುವೆ ಕತ್ತಿ ವರಸೆ ನಡೆಯುವ ಸಂದರ್ಭದಲ್ಲಿ ಅಚನಕ್ಕಾಗಿ ಕಂಗನಾ ಅವರ ಹಣೆಯ ಭಾಗಕ್ಕೆ ಕತ್ತಿ  ತಗುಲಿ ಗಾಯವಾಯಿತುತಕ್ಷಣವೇ ಕಂಗನಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತುಗಾಯಕ್ಕೆ 15 ಹೊಲಿಗೆ ಹಾಕಲಾಯಿತುಒಂದು ವಾರದ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದರು. ‘ಯುದ್ಧದ ಸನ್ನಿವೇಶದಲ್ಲಿ ತೊಡಗಿದ್ದಾಗ ಮುಖದ ಮೇಲೆ ಅನಿರೀಕ್ಷಿತವಾಗಿ ಗಾಯವಾಗಿದೆನನ್ನ ಮುಖದ ಮೇಲೆ ರಕ್ತ ಹರಿದಾಗ ಕೊಂಚ ಮಟ್ಟಿಗೆ ಹೆದರಿದ್ದೆಆದರೆ  ವೇಳೆ ರಾಣಿಯ ನಿಜ ಜೀವನದ ಅನುಭವವಾಯಿತು’ ಎಂದು ಕಂಗನಾ ಹೇಳಿದರು.  ಕಂಗನಾ ಅವರ ಬಹುನಿರೀಕ್ಷಿತ ‘ಮಣಿಕರ್ಣಿಕಾದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾ ಶೂಟಿಂಗ್ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಒಂದು ವಾರದಿಂದ ನಡೆಯುತ್ತಿತ್ತು. 

2017: ಮುಂಬಯಿ : ಖಾಸಗಿ ರಂಗದ ದೇಶದ ಅತೀ ದೊಡ್ಡ  ಬ್ಯಾಂಕ್‌ ಆಗಿರುವ ಐಸಿಐಸಿಐ ಬ್ಯಾಂಕ್‌ ತನ ಆಯ್ದ ಮಾಸಿಕ ವೇತನದ ಗ್ರಾಹಕರಿಗೆ 15 ಲಕ್ಷ ರೂವರೆಗಿನ ವೈಯಕ್ತಿಕ ಸಾಲವನ್ನು ಎಟಿಎಂ ಮೂಲಕ ಒದಗಿಸಲು ಮುಂದಾಯಿತು..  ವರ್ಗದ ಗ್ರಾಹಕರು  ಮೊದಲು ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಹಾಕಿರದಿದ್ದರೂ ಅವರಿಗೆಎಟಿಎಂ ಮೂಲಕ ಸಾಲ ಪಡೆಯುವ ಅವಕಾಶ ಇರುತ್ತದೆ.  ಖಾಸಗಿ ಸಾಲ ಪಡೆಯಬಯಸುವವರು ಸಾಲ ಮಾಹಿತಿ ಕಂಪೆನಿಗಳ ಅಂಕಿ ಅಂಶಗಳನ್ನು ಬಳಸಿಕೊಂಡು "ಆಯ್ದ ಗ್ರಾಹಕರಅರ್ಹತೆಯನ್ನು ಪಡೆಯಬಹುದಾಗಿದೆಅಂತಹ ಗ್ರಾಹಕರು ವ್ಯವಹಾರವೊಂದನ್ನು ಪೂರ್ಣಗೊಳಿಸಿದಾಗ ಅವರಿಗೆ ಎಟಿಎಂ ಪರದೆಯಲ್ಲಿ "ನೀವು ಖಾಸಗಿ ಸಾಲದ ಅರ್ಹತೆಯನ್ನು ಪಡೆದವರಾಗಿರುತ್ತೀರಿಎಂಬ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ.  ಒಂದೊಮ್ಮೆ  ಗ್ರಾಹಕನು ಆಗ ಸಾಲ ಪಡೆಯಲು ಬಯಸಿದಲ್ಲಿ ಐದು ವರ್ಷಗಳ ಅವಧಿಗೆ 15 ಲಕ್ಷ ರೂ.ಗಳ ವೈಯಕ್ತಿಕ ಸಾಲವನ್ನು ಪಡೆಯಬಹುದು ಮತ್ತು ತತ್ಕ್ಷಣವೇ  ಮೊತ್ತ  ಗ್ರಾಹಕನ ಉಳಿತಾಯ ಖಾತೆಗೆ ಜಮೆಯಾಗುತ್ತದೆ ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿತುಸಾಲ ಮೊತ್ತ ಗ್ರಾಹಕನ ಖಾತೆಗೆ ಜಮೆಯಾಗುವ ಮುನ್ನ ಗ್ರಾಹಕನಿಗೆ ಆತನಿಗೆ ವಿವಿಧ ಸಾಲ ಮೊತ್ತಗಳ ಆಯ್ಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಮತ್ತು ಆತನಿಗೆ ಸಾಲದ ಬಡ್ಡಿ ದರಸಂಸ್ಕರಣ ಶುಲ್ಕ ಮತ್ತು ತಿಂಗಳ ಕಂತು ಇತ್ಯಾದಿ ವಿವರಗಳನ್ನು ತಿಳಿಸಲಾಗುತ್ತದೆಗ್ರಾಹಕರು ವೈಯಕ್ತಿಕ ಸಾಲವನ್ನು ಆಯ್ಕೆಮಾಡಿದಾಗ ಸುಲಭದಲ್ಲಿ ಅವರಿಗೆ ಹಣ ಸಿಗುವುದಕ್ಕೆ ಅವಕಾಶ ಉಂಟಾಗುತ್ತದೆ  ಎಂದು ಐಸಿಐಸಿಐ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಅನೂಪ್‌ ಬಗ್ಚಿ ಹೇಳಿದರು.  ಎಟಿಎಂ ಮೂಲಕ 15 ಲಕ್ಷ ರೂಸಾಲ ಪಡೆಯುವ  ಪ್ರಕ್ರಿಯೆ ಸಂಪೂರ್ಣವಾಗಿ ಕಾಗದ ರಹಿತವಾಗಿದ್ದು  ತತ್ಕ್ಷಣದ ಸೌಕರ್ಯವಾಗಿರುತ್ತದೆ ಮತ್ತು ಇದರಿಂದ ಗ್ರಾಹಕರಿಗೆ ಬಹಳ ಸುಲಭದಲ್ಲಿ ಸಾಲ ಸೌಲಭ್ಯ ಸಿಗುವಂತಾಗುತ್ತದೆ ಎಂದವರು ಹೇಳಿದರು.

2017: ತಿರುವನಂತಪುರ : ಮಹಿಳಾ ಉದ್ಯೋಗಿಗಳಿಗೆ ತಮ್ಮ ಮಾಸಿಕ ಋತುಚಕ್ರದ ಮೊದಲ ದಿನ ರಜೆ ಪಡೆಯುವಸೌಕರ್ಯವನ್ನು ಕೇರಳದ ಮಾತೃಭೂಮಿ ಟಿವಿ ಕಲ್ಪಿಸಿತುಅಂತೆಯೇ ಮಾತೃಭೂಮಿ ಟಿವಿಯಲ್ಲಿ ದುಡಿಯುತ್ತಿರುವ ಮಹಿಳಾ ಉದ್ಯೋಗಿಗಳು ಈಗಿನ್ನು ವರ್ಷಕ್ಕೆ 12 ದಿನಗಳ "ಋತುಚಕ್ರದ ಮೊದಲ ದಿನ'ವಾಗಿ ರಜೆಯನ್ನು ಪಡೆಯಲಿದ್ದಾರೆ ಮಹಿಳಾ ಉದ್ಯೋಗಿಗಳು ಈಗ ಪಡೆಯುತ್ತಿರುವ ಎಲ್ಲ ರಜಾ ಸೌಲಭ್ಯಕ್ಕೆ ಹೊರತಾದ ವಿಶೇಷ ರಜೆ ಇದು.   ಮೊದಲು ಮುಂಬಯಿಯ ಕಲ್ಚರ್‌ ಮಶೀನ್ಸ್‌ ಸಂಸ್ಥೆಯು ತನ್ನ ಮಹಿಳಾ ಉದ್ಯೋಗಿಗಳಿಗೆ ಮಾಸಿಕ ಋತು ಚಕ್ರದ ಮೊದಲ ದಿನದ ರಜೆ (ವರ್ಷಕ್ಕೆ 12 ದಿನಸೌಕರ್ಯವನ್ನು ಪ್ರಕಟಿಸಿತ್ತುಇಂಡೋನೇಶ್ಯದಕ್ಷಿಣ ಕೊರಿಯ ಮತ್ತು ತೈವಾನ್ನಲ್ಲಿ ಮಹಿಳಾ ಉದ್ಯೋಗಿಗಳಿಗೆ  ರೀತಿಯ ರಜಾ ಸೌಕರ್ಯವಿತ್ತು.
2016: ಲಖನೌ: ಬಾಬ್ರಿ ಮಸೀದಿ ಪರವಾಗಿ ಧ್ವನಿ ಎತ್ತಿದ್ದ ಹಿರಿಯ ಹೋರಾಟಗಾರ ಹಸೀಮ್ ಅನ್ಸಾರಿ (96) ದೀರ್ಘ ಕಾಲದ ಅಸ್ವಸ್ಥತೆಯಿಂದ ನಿಧರಾದರು. 1949ರಿಂದಲೇ ಬಾಬ್ರಿ ಮಸೀದಿ ಪರವಾಗಿ ಹೋರಾಟ ನಡೆಸುತ್ತಿದ್ದ ಹಸೀಮ್ ಅನ್ಸಾರಿಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರುಬಾಬ್ರಿ ಮಸೀದಿ-ರಾಮ ಜನ್ಮಭೂಮಿ ವಿವಾದದ ವಿರುದ್ಧ ಮೊದಲ ಬಾರಿಗೆ ಫೈಜಾಬಾದ್ ನ್ಯಾಯಾಲಯದ ಮೆಟ್ಟಿಲೇರಿದ್ದ ಹಸೀಮ್  ವಿಚಾರವಾಗಿ ಸಾಕಷ್ಟು ಹೋರಾಟ ನಡೆಸಿದ್ದರುಕಳೆದ ವರ್ಷ ವಿಶ್ವ ಹಿಂದು ಪರಿಷತ್ ಮುಖ್ಯಸ್ಥ ಆಶೋಕ್ ಸಿಂಘಾಲ್ ನಿಧನರಾಗಿದ್ದ ಸಮಯದಲ್ಲಿ ಸಿಂಘಾಲ್ ಅವರ ಮರಣ ರಾಮ ಜನ್ಮಭೂಮಿ ಸಂಚಲನಕ್ಕೆ ಭಾರೀ ನಷ್ಟವಾಗಿದೆ ಎಂದು ಹೇಳಿಕೆ ನೀಡಿದ್ದರು ಹಸೀಮ್ ಅನ್ಸಾರಿ. 

2008: ಆಸ್ಟ್ರೇಲಿಯಾದ ಗ್ರಾಂಟ್ ಹ್ಯಾಕೆಟ್ ಅವರು ಮೆಲ್ಬೋರ್ನಿನಲ್ಲಿ ಏಳು ವರ್ಷಗಳ ಬಳಿಕ 800 ಮೀಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದರುವಿಕ್ಟೋರಿಯಾ ಶಾರ್ಟ್ ಕೋರ್ಸ್ ಈಜು ಚಾಂಪಿಯನ್ಶಿಪ್ನ ಸ್ಪರ್ಧೆಯಲ್ಲಿ ಹ್ಯಾಕೆಟ್ ಏಳು ನಿಮಿಷ 23.42 ಸೆಕೆಂಡುಗಳಲ್ಲಿ ಗುರಿ ತಲುಪಿದರು. 2001 ಆಗಸ್ಟ್ ತಿಂಗಳಲ್ಲಿ ಪರ್ತ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಇವರು 7:25.28 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವದಾಖಲೆ ನಿರ್ಮಿಸಿದ್ದರುಇದೀಗ  ಸಮಯವನ್ನು 1.86 ಸೆಕೆಂಡುಗಳಷ್ಟು ಉತ್ತಮಪಡಿಸಿಕೊಳ್ಳಲು ಯಶಸ್ವಿಯಾದರು.

2007: 2006-07ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಏಳು ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕಪ್ರೇಕ್ಷಕರ ಅಭೂತಪೂರ್ವ ಮೆಚ್ಚುಗೆಗೆ ಪಾತ್ರವಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ `ಮುಂಗಾರು ಮಳೆರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆಯಿತುಪ್ರಸ್ತುತ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಪಟ್ಟಿಯನ್ನು ಸಮಿತಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ .ಎಂ.ವಿಠಲಮೂರ್ತಿ ಪ್ರಕಟಿಸಿದರುಅತ್ಯುತ್ತಮ ಚಿತ್ರಅತ್ಯುತ್ತಮ ನಿರ್ದೇಶನಸಂಗೀತಛಾಯಾಗ್ರಹಣಸಂಭಾಷಣೆಗೀತ ರಚನೆಧ್ವನಿ ಗ್ರಹಣ ಪ್ರಶಸ್ತಿಗಳು `ಮುಂಗಾರು ಮಳೆಪಾಲಾದವು. `ಮುಂಗಾರು ಮಳೆನಂತರ  ವರ್ಷದ ಯಶಸ್ವಿ ಚಿತ್ರಗಳಲ್ಲಿ ಎರಡನೆಯದಾದ `ದುನಿಯಾಪ್ರಶಸ್ತಿ ಪಟ್ಟಿಯಲ್ಲೂ ಎರಡನೆಯ ಸ್ಥಾನ ಪಡೆಯಿತುದ್ವಿತೀಯ ಅತ್ಯುತ್ತಮ ಚಿತ್ರ ಪುರಸ್ಕಾರದೊಂದಿಗೆ ಇನ್ನೂ ಐದು ಪ್ರಶಸ್ತಿಗಳನ್ನು `ದುನಿಯಾಬಾಚಿಕೊಂಡಿತುಮೂರನೇ ಅತ್ಯುತ್ತಮ ಚಿತ್ರವಾಗಿ `ಸೈನೈಡ್ಆಯ್ಕೆಯಾಯಿತುಡಾರಾಜ್ಕುಮಾರ್ ಪ್ರಶಸ್ತಿಗೆ ಹಿರಿಯ ಕಲಾವಿದೆ ಎಂ.ಎನ್ಲಕ್ಷ್ಮಿದೇವಿ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಅವರನ್ನು ಆಯ್ಕೆ ಮಾಡಲಾಯಿತುಜೀವಮಾನದ ವಿಶಿಷ್ಟ ಕೊಡುಗೆಗೆ ಸಲ್ಲುವ ಪುರಸ್ಕಾರ ನಟ ಮತ್ತು ನಿರ್ದೇಶಕ ದ್ವಾರಕೀಶ್ ಅವರಿಗೆ ಲಭಿಸಿತುಎರಡು ತುಳು ಚಿತ್ರಗಳೂ ಸೇರಿದಂತೆ ಒಟ್ಟೂ 37 ಚಿತ್ರಗಳು ಸ್ಪರ್ಧಾಕಣದಲ್ಲಿದ್ದವುತೀರ್ಪುಗಾರರ ವಿಶೇಷ ಪ್ರಶಸ್ತಿಗಳನ್ನು `ಸ್ನೇಹಾಂಜಲಿಚಿತ್ರದ ಅಭಿನಯಕ್ಕಾಗಿಹುಟ್ಟು ಕಿವುಡ ಹಾಗೂ ಮೂಕ ಕಲಾವಿದ ಧ್ರುವ ಹಾಗೂ `ದಾಟುಚಿತ್ರಕ್ಕೆ ನೀಡಲಾಯಿತು.

2007: 1993ರಲ್ಲಿ ಮುಂಬೈಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಇನ್ನೊಬ್ಬ ಅರೋಪಿ ಮೊಹಮದ್ ಇಕ್ಬಾಲ್ ಮೊಹಮದ್ ಯುಸೂಫ್ ಶೇಖ್ ಎಂಬಾತನಿಗೆ ಮರಣ ದಂಡನೆ ವಿಧಿಸಿತುಪಿತೂರಿಯಲ್ಲಿ ಭಾಗಿಯಾಗಿದ್ದ ಅಪರಾಧಕ್ಕಾಗಿ ಸೇವೆಯಿಂದ ವಜಾಗೊಂಡ ಕಸ್ಟಮ್ಸ್ ಕಲೆಕ್ಟರ್ ಸೋಮನಾಥ್ ಥಾಪಾ ಮತ್ತು ಬಷಿರ್ ಅಹಮದ್ ಖೈರುಲ್ಲಾಗೆ ಟಾಡಾ ನ್ಯಾಯಾಧೀಶ ಪಿಡಿಕೊಡೆ ಅವರು ಜೀವಾವಧಿ ಶಿಕ್ಷೆ ವಿಧಿಸಿದರು.
ಮೀನುಗಾರರ ವಸತಿ ಪ್ರದೇಶದ ಮೇಲೆ ಗ್ರೆನೇಡ್ ಎಸೆದ ಅಪರಾಧಿಗಳ ಗುಂಪಿನಲ್ಲಿ ಬಷಿರ್ ಅಹಮದ್ ಖೈರುಲ್ಲಾ ಭಾಗಿಯಾಗಿದ್ದ ಅಪರಾಧಕ್ಕಾಗಿ ಆತನಿಗೆ ಜೀವಾವಧಿ ಶಿಕ್ಷೆ ನೀಡಲಾಯಿತುಮೊಹಮದ್ ಇಕ್ಬಾಲ್ಗೆ ಗಲ್ಲು ಶಿಕ್ಷೆ ವಿಧಿಸುವುದರೊಂದಿಗೆ ಮುಂಬೈ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಯಾದವರ ಸಂಖ್ಯೆ ಏಳಕ್ಕೆ ಏರಿತುರಾಯಗಡ ಜಿಲ್ಲೆಯ ಸಂಧೇರಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದು ಅಲ್ಹುಸ್ಸೇನಿ ಕಟ್ಟಡದಲ್ಲಿ ಆರ್ಡಿಎಕ್ಸ್ ಅಳವಡಿಸಲು ನೆರವಾದ ಹಾಗೂ ಸಹರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿದ ಮತ್ತು ದಾದರಿನಲ್ಲಿ ಸ್ಕೂಟರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ ಕೃತ್ಯಕ್ಕಾಗಿ ಅಹಮದ್ ಇಕ್ಬಾಲ್ನನ್ನು ಕಳೆದ ಸೆಪ್ಟೆಂಬರ್ 25ರಂದು ಅಪರಾಧಿ ಎಂದು ಘೋಷಿಸಲಾಗಿತ್ತು. 1993 ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನೂರು ಜನರನ್ನು ಅಪರಾಧಿಗಳು ಎಂದು ಘೋಷಿಸಲಾಗಿತ್ತುಇದುವರೆಗೆ 87 ಮಂದಿ ಅಪರಾಧಿಗಳ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣವನ್ನು ಪ್ರಕಟಿಸಲಾಗಿದೆ. 1993 ಮಾರ್ಚ್ 12 ಸ್ಫೋಟದಲ್ಲಿ 257 ಮಂದಿ ಸತ್ತು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಡಾ ನ್ಯಾಯಾಲಯವು ಈವರೆಗೆ ಏಳು ಮಂದಿಗೆ ಮರಣದಂಡನೆ ಹಾಗೂ 16 ಮಂದಿಗೆ ಜೀವಾಧಿ ಶಿಕ್ಷೆ ವಿಧಿಸಿತು.

2007: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಮೊಹಮ್ಮದ್ ಹಮೀದ್ ಅನ್ಸಾರಿ ಅವರನ್ನು ರಾಷ್ಟ್ರೀಯ ಪ್ರಗತಿಪರ ಒಕ್ಕೂಟ (ಯುಪಿಎಮತ್ತು ಎಡಪಕ್ಷಗಳು ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದವುನವದೆಹಲಿಯಲ್ಲಿ ಈದಿನ ನಡೆದ ಯುಪಿಎ ಮತ್ತು ಎಡಪಕ್ಷಗಳ ಸಮನ್ವಯ ಸಮಿತಿಯ ಸಭೆಯ ಬಳಿಕ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಮಾಜಿ ರಾಜತಾಂತ್ರಿಕ ಅನ್ಸಾರಿ ಅವರ ಹೆಸರು ಪ್ರಕಟಿಸಿದರು.

2007: ದೇಶದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರನ್ನು ಅಮಾನತುಗೊಳಿಸಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಹೊರಡಿಸಿದ್ದ ಆದೇಶವನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿತುಇದರಿಂದಾಗಿ ಅನೇಕ ಸಮಸ್ಯೆವಿವಾದದಲ್ಲಿ ಸಿಕ್ಕಿ ತತ್ತರಿಸಿದ ಮುಷರಫ್ ಅವರಿಗೆ ಭಾರಿ ಮುಖಭಂಗವಾಯಿತುನ್ಯಾಯಮೂರ್ತಿ ಖಲೀಲುರ್ ರೆಹಮಾನ್ ರಾಮಡೆ ನೇತೃತ್ವದಲ್ಲಿ ಸುಪ್ರೀಂ ಕೋರ್ಟಿನ 13 ಸದಸ್ಯರ ಪೂರ್ಣ ಪೀಠ ಎರಡು ತಿಂಗಳು ವಿಚಾರಣೆ ನಡೆಸಿಚೌಧರಿ ವಿರುದ್ಧ ಮುಷರಫ್ ಸರ್ಕಾರ ಸಿದ್ಧಪಡಿಸಿದ್ದ ಆರೋಪಗಳ ಪಟ್ಟಿಯನ್ನು 10-3 ಮತಗಳಿಂದ ವಜಾ ಮಾಡಿತುತಮ್ಮ ಮಗನಿಗೆ ಉನ್ನತ ಪೊಲೀಸ್ ಹುದ್ದೆ ದೊರಕಿಸಲು ಹಾಗೂ ವೈಯಕ್ತಿಕ ಅನುಕೂಲ ಮಾಡಿಕೊಳ್ಳಲು ಚೌಧರಿ ಪ್ರಭಾವ ಬೀರಿದ್ದರು ಎಂಬ ಸರ್ಕಾರದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪೀಠ ಹೇಳಿತು.

2007: ದುಬೈ ನಗರದಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿರುವ `ಬುರ್ಜ್ ದುಬೈಗಗನಚುಂಬಿ ಕಟ್ಟಡ ವಿಶ್ವದಲ್ಲೇ ಅತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿ ಲಭಿಸಿತುಇದುವರೆಗೆ 507.3 ಮೀಟರ್ ಎತ್ತರದ `ತೈಪೆ ಟವರ್ಸ್ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಕೀರ್ತಿ ಪಡೆದಿತ್ತುಆದರೆ ಈಗ `ಬುಜರ್್ ದುಬೈಕಟ್ಟಡ ಅದನ್ನು ಹಿಂದಿಕ್ಕಿದೆ ಎಂದು ಬೃಹತ್ ಕಟ್ಟಡಗಳ ನಿರ್ವಹಣಾ ಮಂಡಳಿಯು ಅಧಿಕೃತವಾಗಿ ಸ್ಪಷ್ಟಪಡಿಸಿತುಹೋಟೆಲುಗಳುಶಾಪಿಂಗ್ ಮಾಲ್ಗಳುವಾಣಿಜ್ಯ ಸಂಕೀರ್ಣಗಳು ಹಾಗೂ ಫ್ಲಾಟುಗಳನ್ನು ಹೊಂದಲಿರುವ `ಬುರ್ಜ್ ದುಬೈಕಟ್ಟಡದ ಎತ್ತರ 705ರಿಂದ 950 ಮೀಟರ್ ನಡುವೆ ಇರಲಿದೆ ಎಂಬ ಅಂದಾಜಿದೆಇದು 154ರಿಂದ 180 ಅಂತಸ್ತುಗಳನ್ನು ಹೊಂದಲಿದೆದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಕಾರ್ಪೊರೇಷನ್ ಕಂಪೆನಿ  ಕಟ್ಟಡದ ನಿರ್ಮಾಣದ ಉಸ್ತುವಾರಿ ಹೊತ್ತುಕೊಂಡಿದೆ. 2005 ಫೆಬ್ರವರಿ 1ರಂದು ಕಾಮಗಾರಿ ಆರಂಭವಾಗಿದ್ದು, 2009 ಜೂನ್ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದು ಬೃಹತ್ ಕಟ್ಟಡದ ಅಂದಾಜು ವೆಚ್ಚ 7300 ಕೋಟಿ ದಿರಹಂ (ಯುಎಇ ಹಣ). ಚಿಕಾಗೋ ಮೂಲದ ಸ್ಕಿಡ್ಮೋರ್ಓವಿಂಗ್ಸ್ ಹಾಗೂ ಮೆರಿಲ್ ಕಂಪೆನಿಗಳು ಇದರ ವಿನ್ಯಾಸ ರೂಪಿಸಿವೆ.

2007: ವಿಶ್ವದಲ್ಲೇ ಅತ್ಯಂತ ಬೃಹತ್ ದೇವಾಲಯಗಳಲ್ಲಿ ಒಂದು ಎಂದು ಬಣ್ಣಿಸಲಾಗಿರುವ ಸ್ವಾಮಿನಾರಾಯಣ ದೇವಸ್ಥಾನ ಜುಲೈ 22ರಂದು ಕೆನಡಾದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಈದಿನ ಟೊರೆಂಟೋದಲ್ಲಿ ಪ್ರಕಟಿಸಲಾಯಿತುಟೊರೆಂಟೋ ನಗರದ ಈಶಾನ್ಯ ಭಾಗದಲ್ಲಿ ಹಿಮಾಚ್ಛಾದಿತ ಹಿಮಾಲಯ ಶಿಖರದಂತೆ ಕಾಣುವ ಸ್ವಾಮಿನಾರಾಯಣ ಮಂದಿರವು ಪ್ರಧಾನಿ ಸ್ಟೀಫನ್ ಹಾರ್ಪರ್ಟೋರೆಂಟೋ ಮೇಯರ್ ಡೇವಿಡ್ ಮಿಲ್ಲರ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗಲಿದೆಇಲ್ಲಿ 2 ಲಕ್ಷಕ್ಕಿಂತ ಅಧಿಕ ಹಿಂದುಗಳಿದ್ದಾರೆದೇಗುಲದ ಹೊರ ಆವರಣವನ್ನು ಸುಣ್ಣದ ಕಲ್ಲು ಹಾಗೂ ಹೊಳೆಯುವ ಇಟಲಿ ಕೆರ್ರಾರ ಶಿಲೆಯಲ್ಲಿ ಕೆತ್ತಲಾಗಿದೆಒಳ ಆವಣರದಲ್ಲಿ ಗುಲಾಬಿ ವರ್ಣದ ಕಲ್ಲುಗಳು ಶೋಭಿಸುತ್ತಿವೆಸ್ಥಳೀಯ ಹಿಂದು ಸಮುದಾಯ ಕಟ್ಟಡಕ್ಕಾಗಿ 4 ಕೋಟಿ ಅಮೆರಿಕ ಡಾಲರ್ ನೀಡಿದೆ. 400 ಸ್ವಯಂ ಸೇವಕರು ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈದಿನ ವಹಿವಾಟಿನ ಒಂದು ಹಂತದಲ್ಲಿ 15,683 ಅಂಶಗಳ ಗಡಿ ದಾಟಿ ಹೊಸ ದಾಖಲೆ ಮಾಡಿತು.

1982: ಗಾಂಧೀಜಿ ಅನುಯಾಯಿ ಮೀರಾ ಬೆಹನ್ ನಿಧನ.

1969: ವರಾಹಗಿರಿ ವೆಂಕಟಗಿರಿ ರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿದರು.

1961: ಎಚ್.ಎಲ್ಪುಷ್ಪ ಜನನ.

1958: ಮಂದಾಕಿನಿ ಪುರೋಹಿತ ಜನನ.

1955: ಬಸವರಾಜ ಸಾದರ ಜನನ.
              

No comments:

Post a Comment